ಅಂಕಣಪ್ರಚಲಿತರಾಜ್ಯ

ದೇವರಾಜ ಅರಸು ಅನುಯಾಯಿಯೆಂದು ಬಡಾಯಿ ಕೊ‌ಚ್ಚಿದ ಸಿದ್ಧರಾಮಯ್ಯ ಮಾಡಿದ ಘನಕಾರ್ಯವೇನು ಗೊತ್ತೇ?

ಸಿದ್ರಾಮಯ್ಯನವರು ಆವಾಗಾವಾಗ ತನ್ನನ್ನು ತಾನು ದೇವರಾಜ ಅರಸರ ಅನುಯಾಯಿ ಅಂತ ಬಡ್ಕೊಳ್ತಾರೆ ಅದು ಇಂದಿರಾಳ ಪಕ್ಷದಲ್ಲಿದ್ದುಕೊಂಡು. ಮೊನ್ನೆ ಮೊನ್ನೆ ಇಂದಿರಾ ಕ್ಯಾಂಟಿನ್ ಬೇರೆ ತೆರೆದಿದ್ದಾರೆ. ಇಂದಿರಾ ಮತ್ತು ದೇವರಾಜ ಅರಸರು ಪರಸ್ಪರ ವಿರೋಧಿಗಳಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಹಾಗಿದ್ದ ಮೇಲೆ ಸಿದ್ದರಾಮಯ್ಯನವರೇ ಏನಿದು ದ್ವಂದ್ವ?

ಇಂದಿರಾಗಾಂಧಿಯ ರಾಜಕೀಯಕ್ಕೆ ಪುನರ್ಜನ್ಮ ನೀಡಿ ಕೊನೆ ತಾವೇ ಆ ರಾಜಕೀಯ ಪಕ್ಷದಲ್ಲಿ ಜಾಗವಿಲ್ಲದಂತರಾಗಿದ್ದರು ದೇವರಾಜ ಅರಸರು.

ಸೋತ ಇಂದಿರಾಗಾಂಧಿಗೆ ಅಧಿಕಾರ ಗದ್ದುಗೆಗೆ ಕೂರಿಸಿ ಕೊನೆಗೆ ತಾವೇ ಇಂದಿರಾಳಿಂದ ಕಡೆಗಣಿಸಲ್ಪಟ್ಟರು.ಇದೆಲ್ಲಾ ಗೊತ್ತಿದ್ದೂ ಈ ಸಿದ್ರಾಮಯ್ಯನವರು ತನ್ನನ್ನು ತಾನು ದೇವರಾಜ ಅರಸರ ಅನುಯಾಯಿ ಅಂತ ಇಂದಿರಾಳ ಪಕ್ಷದಲ್ಲಿದ್ದುಕೊಂಡೆ ಹೇಳ್ತಾರಲ್ಲ ಏನಿದು ದ್ವಂದ್ವ?

1975ರಲ್ಲಿ ಹೇರಿದ್ದ ಎಮರ್ಜೆನ್ಸಿಯಿಂದ ಜನರು ರೋಶಿ ಹೋಗಿ 1977ರ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಧೂಳಿಪಟ ಮಾಡಿದ್ದರು. ರಾಯ ಬರೇಲಿ ಪ್ರಧಾನಿಯಾಗಿದ್ದ ಇಂದಿರಾ ಸೋತರೆ,ಅಮೇಠಿಯಲ್ಲಿ ಮಗ ಸಂಜಯ್ ಸೋತಿದ್ದ. ಆ ದಿನಗಳಲ್ಲಿ ಇಂದಿರಾಳಿಗೆ ರಾಜಕೀಯ ಪುನರ್ಜನ್ಮ ನೀಡಲು ಮುಂದಾದವರು ದೇವರಾಜ ಅರಸರು.

ಇಂದಿರಾಳನ್ನು ಚಿಕ್ಕಮಗಳೂರು ಕ್ಷೇತ್ರಕ್ಕೆ ಚುನಾವಣೆಗೆ ನಿಲ್ಲಿಸಿ ಹಗಲಿರುಳ ಶ್ರಮಿಸಿ ಲೋಕಸಭೆಗೆ ಇಂದಿರಾಳನ್ನು ಮರುಪ್ರವೇಶವಾಗುವಂತೆ ಮಾಡಿ ಅಧಿಕಾರದ ಗದ್ದುಗೆಗೆ ಕೂರಿಸಿದರು.

ಗದ್ದುಗೆ ಏರಿದ ತಕ್ಷಣ ಇಂದಿರಾ ಏರಿಬಂದ ಮೆಟ್ಟಿಲುಗಳನ್ನು ಕಡೆಗಣಿಸಲು ಶುರುಮಾಡಿದಳು. ದೇವರಾಜ ಅರಸರನ್ನು ಕಾಲಕಸದಂತೆ ನೋಡಲು ಶುರು ಮಾಡಿದಳು. ಭೇಟಿಯಾಗಲು ಬಂದರೆ ನಿರಾಕರಿಸಿದಳು. ಇಂದಿರಾ ಸಂಜಯ್ ದರ್ಬಾರಿನಿಂದ ದೇವರಾಜ ಅರಸರಿಗೆ ಆ ಪಕ್ಷದಲ್ಲಿ ಉಸಿರು ಕಟ್ಟಿದಂತಾಯ್ತು. ತಾವೇ ರಾಜಕೀಯ ಪುನರ್ಜಜನ್ಮ ನೀಡಿ ಅವರಿಂದ ಕಡೆಗಣಿಸಲ್ಪಟ್ಟರು.

ಕರ್ನಾಟಕದ ಗುಂಡುರಾಯರು ಸಂಜಯ್ ಗಾಂಧಿಯೊಂದಿಗೆ ಚೆನ್ನಾಗಿದ್ದುದರಿಂದ ಗುಂಡುರಾಯರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿ ದೇವರಾಜ ಅರಸರಿಗೆ ಜಾಗವಿಲ್ಲದಂತೆ ಮಾಡಿದರು. ಇದರಿಂದ ಅರಸರು ಸಹಜವಾಗಿ ಅಸಹನೆಯಲ್ಲಿ ಕುದ್ದರು.ರಾಜಕೀಯ ಪುನರ್ಜನ್ಮ ನೀಡಿ ಕೊನೆಗೆ ತಾವೇ ರಾಜಕೀಯ ನೆಲೆ ಕಳೆದುಕೊಂಡರು.

ಇಂದಿರಾ ಮತ್ತು ಸಂಜಯರ ಈ ವರ್ತನೆಯಿಂದ ಕುದ್ದು ಹೋಗಿ ಪಕ್ಷ ಕಟ್ಟಿ ರಾಷ್ಟ್ರ ರಾಜಕಾರಣದಲ್ಲಿ ಧುಮುಕಿ ಸೋತರು. ಇಂದಿರಾಳಿಂದ ದೇವರಾಜ ಅರಸರ ರಾಜಕೀಯ ಬದುಕು ದುರಂತ ಅಂತ್ಯ ಕಂಡಿತು.

ದೇವರಾಜ್ ಅರಸ್ ಅವರಿಗೆ ಜನಸೇವೆ ಒಂದೇ ಧ್ಯೇಯವಾಗಿತ್ತು. ನಿಸ್ವಾರ್ಥ ರಾಜಕಾರಣ ಅವರದ್ದಾಗಿತ್ತು ಎಂಬುದಾಗಿ ತಮ್ಮ ಪಕ್ಷದವರೇ ಹೇಳುತ್ತಾರೆ. ಆದರೆ ಯಾವ ಅರಸರು ಇಂದಿರಾ ಗಾಂಧಿಯವರನ್ನು ಗದ್ದುಗೆ ಏರಲು ಸಹಾಯ ಮಾಡಿದರೋ ಅವರನ್ನೇ ತುಳಿಯುವ ಯತ್ನ ಮಾಡಿದರು. ತಮ್ಮ ಪಕ್ಷದ ಸ್ನೇಹಿತರೊಂದಿಗೆ ಅಲ್ಲದೇ ಇತರ ಪಕ್ಷದ ಸ್ನೇಹಿತರೊಂದಿಗೂ ಬಾಂಧವ್ಯವನ್ನು ಹೊಂದಿದ್ದರು ಅರಸರು. ಇದೇ ನೆಪವಾಗಿಟ್ಟುಕೊಂಡು ದೇವರಾಜ ಅರಸ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ತೊರೆಯುವಂತೆ ಮಾಡಲಾಯಿತು.

ಇಂದಿರಾ ಗಾಂಧಿಯವರಿಗೆ ಅರಸ್ ಅವರನ್ನು ತೆಗೆದುಹಾಕಲು ಅಷ್ಟು ಸುಲಭವೂ ಇರಲಿಲ್ಲ. ಯಾಕೆಂದರೆ 155 ಸದಸ್ಯರಲ್ಲಿ ಕನಿಷ್ಟವೆಂದರೂ 100 ಜನ ಅರಸರ ಬೆಂಬಲಿಗೆ ನಿಂತಿದ್ದರು. ಇದೇ ವಿಚಾರ ಇಂದಿರಾ ಅವರಿಗೆ ಮುಳುವಾಗಿತ್ತು.

ಆದರೂ ಕುತಂತ್ರದಿಂದ ಅರಸ್ ಅವರನ್ನು ಕಳುಹಿಸಲಾಯಿತು.
ಇಂದಿರಾ‌ ಹೆಸರಿನಲ್ಲಿ ಅಪ್ಪಟ ಅರಸಿ ಅವರ ಅಭಿಮಾನಿಯಾದ ಸಿದ್ದರಾಮಯ್ಯನವರು ಈಗ ಕ್ಯಾಂಟೀನ್ ಪ್ರಾರಂಭ ಮಾಡಿದ್ದು ಅಚ್ಚರಿಯನ್ನು‌ ಮೂಡಿಸಿದೆ. ಜನತೆಯ‌ ಅನೇಕ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕಿದೆ.

ಇದನ್ನೆಲ್ಲಾ ಅರ್ಥ ಮಾಡಿಕೊಂಡರೆ ದೇವರಾಜ ಅರಸರು ಮತ್ತು ಇಂದಿರಾ ಪರಸ್ಪರ ವಿರೋಧಿಗಳಾಗಿದ್ದರು. ಹಾಗಿದ್ದರೂ ಸಿದ್ರಾಮಯ್ಯನವರು ಇಂದಿರಾಳ ಪಕ್ಷದಲ್ಲಿದ್ದುಕೊಂಡು ದೇವರಾಜ ಅರಸರ ಅನುಯಾಯಿ ಅಂದ್ರೆ ಏನರ್ಥ? ಏನಿದು ನಿಮ್ಮ ಈ ದ್ವಂದ್ವ?

– postcard team

Tags

Related Articles

Close