ಅಂಕಣದೇಶಪ್ರಚಲಿತ

ದೇವರ ಹೆಸರಲ್ಲಿ ದೆವ್ವದಂತೆ ವರ್ತಿಸಿ ಜೈಲುಪಾಲಾದ ಗುರ್ಮಿತ್ ರಾಮ್ ರಹೀಂ ಸಿಂಗ್‍ನ ಇತಿಹಾಸ ಇಲ್ಲಿದೆ!!!

ಹುಜೂರು ಮಹಾರಾಜ್ ಗುರ್ಮೀತ್ ರಾಂ ರಹೀಂ ಸಿಂಗ್….. ಸ್ವಘೋಷಿತ ದೇವ ಮಾನವ ಇಂದು ಅತ್ಯಚಾರ ಪ್ರಕರಣದಿಂದಾಗಿ ಇಂದು ರೊಹ್‍ತಾಕ್ ಸುನಿಯಾರಾ ಜೈಲ್‍ನಲ್ಲಿ ಕಂಬಿ ಎಣಿಸುವಂತಾಗಿದೆ. ಎರಡು ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್‍ಗೆ ಸಿಬಿಐ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬರೇ ಗುರ್ಮಿತ್ ಸಿಂಗ್ ಆಗಿದ್ದ ಈತನಿಗೆ 23 ವರ್ಷವಾದ ಬಳಿಕ ಹುಜೂರು ಮಹಾರಾಜ್ ಗುರ್ಮೀತ್ ರಾಂ ರಹೀಂ ಸಿಂಗ್ ಆಗಿದ್ದೇ ವಿಶೇಷ. ಸನ್ಯಾಸಿಯಾಗುವ ಮುನ್ನ ತನ್ನ ಕುಟುಂಬದ ಜೊತೆ ವಾಸಿಸುತ್ತಿದ್ದ ಗುರ್ಮಿತ್ ಆ ಬಳಿಕವೂ ತನ್ನ ಕುಟುಂಬವನ್ನು ಜೊತೆಯಲ್ಲಿಟ್ಟುಕೊಂಡು ಸನ್ಯಾಸಿಯಾಗಿದ್ದೇ ವಿಶೇಷ. ಈತನ ಬದುಕು ದ್ವಂದ್ವಗಳಿಂದಲೇ ಕೂಡಿದೆ. ಈತನ ಜೀವನ ವೃತ್ತಾಂತ ಸಿನಿಮಾದಂತೆ ವರ್ಣಮಯವಾಗಿದೆ. ಈತ ಆರಂಭದಲ್ಲೇ ಶ್ರೀಮಂತನಾಗಿದ್ದನು. ಯಾಕೆಂದರೆ ಈತನ ತಂದೆ ಮಘರ್ ಸಿಂಗ್ ರಾಜಸ್ತಾನದ ಶ್ರೀ ಗಂಗಾನಗರ್ ಜಿಲ್ಲೆಯ ಭೂಮಾಲಿಕರಾಗಿದ್ದವರು. ತಾಯಿ ನಸೀಬ್ ಕೌರ್ ಭಯಭಕ್ತಿಯುಳ್ಳ ಮಹಿಳೆಯಾಗಿದ್ದು, ಗೃಹಿಣಿಯಾಗಿದ್ದರು.ಮಘರ್ ಸಿಂಗ್ ಅವರು ಮುಂಚೆಯೇ ಡೇರಾ ಸಚ್ಚಾ ಸೌದಾ ಜೊತೆ ಸಂಪರ್ಕ ಹೊಂದಿದ್ದರು. ಡೇರಾವನ್ನು ಸ್ಥಾಪಿಸಿದವರೇ ಬಾಬಾ ಬಲೊಚಿಸ್ತಾನಿ ಬೇಪರ್ವಾ ಮಸ್ತನಾ ಜಿ. ಈ ಸಂಘಟನೆ ದಲಿತರು ಮತ್ತು ಹಿಂದುಳಿದವರನ್ನು ಆಕರ್ಷಿಸಿತ್ತು. ಹಿಂದೆ ಸಿಖ್ ಮತ್ತು ಹಿಂದುಳಿದ ವರ್ಗದ ಜೊತೆ ಸಮಾನತೆ ಹೊಂದಿರಲಿಲ್ಲ. ಜಾಟ್ ಸಮುದಾಯ ಮತ್ತು ಸಿಖ್ ಸಮುದಾಯದ ಮಧ್ಯೆ ಸಮಾನತೆಯೂ ಇರಲಿಲ್ಲ.

ಮಘರ್ ಸಿಂಗ್ ಒಬ್ಬ ಜಾಟ್ ಸಿಖ್ ಆಗಿದ್ದಾರೆ. ಡೇರಾದ ಮುಖ್ಯಸ್ಥ ಶಾಹ್ ಸತ್ನಮ್ ಖತ್ರಿ ಸಿಖ್ ಅವರು ಮುಂಚೆ ಮಸ್ತಾನದ ಮುಖ್ಯಸ್ಥರಾಗಿದ್ದರು. ಮಘರ್ ಸಿಂಗ್ ಅವರು ಸತ್ನಂ ಶಾ ಅವರ ಅನುಯಾಯಿಯಾಗಿದ್ದರು. ಸತ್ನಂ ಶಾ ಆಧ್ಯಾತ್ಮಿಕ ಗುರುವಾಗಿದ್ದು, ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮಘರ್ ಸಿಂಗ್‍ನ ಪುತ್ರ ಗುರ್ಮೀತ್ ಸಿಂಗ್ ಆಧ್ಯಾತ್ಮದ ಬಗ್ಗೆ ಆಕರ್ಷಣೆ ಇರಲಿಲ್ಲ. ಆದರೆ ತನ್ನ ತಂದೆಯ ಜೊತೆ ಡೇರಾಗೆ ಸೇರಿದ.

ಗುರ್ಮಿತ್ ಸಿಂಗ್‍ನ ಗೆಳೆಯ ಗುರ್ಜಂತ್ ಸಿಂಗ್ ಎಂಬಾತ ತನ್ನ ಚಿಕ್ಕಪ್ಪನ ಕೊಲೆಗೆ ಪ್ರತೀಕಾರ ತೀರಿಸಿದ್ದಕ್ಕಾಗಿ ಜೈಲು ಸೇರಿದ. ಜೈಲಿನಲ್ಲಿ ಪ್ರತ್ಯೇಕವಾದಿ ಖಲಿಸ್ತಾನಿ ಉಗ್ರರ ಜೊತೆ ಸೇರಿಕೊಂಡು ತೀವ್ರಗಾಮಿ ಮನೋಸ್ಥಿತಿಯನ್ನು ಬೆಳೆಸಿಕೊಂಡನು.ಗುರ್ಜಂತ್ ಸಿಂಗ್ ಜೈಲಿನಿಂದ ಹೊರ ಬಂದ ನಂತರ ಖಲಿಸ್ತಾನಿ ತೀವ್ರಗಾಮಿಯಾಗಿ ಬದಲಾದ. ಇದರಿಂದ ಖಲಿಸ್ತಾನಿ ಚಳುವಳಿಯೂ ಜಾಸ್ತಿಯಾಯಿತು. ಆದರೆ ಗುರ್ಮಿತ್ ಸಿಂಗ್ ಮಾತ್ರ ಡೇರಾದ ಜೊತೆ ಪೂರ್ಣಾವಧಿ ಕೆಲಸ ಮಾಡಿದ. ಈ ವೇಳೆ ಆತ ಸಾಮಾನ್ಯವಾಗಿ ಎಲ್ಲಾ ಕೆಲಸವನ್ನು ಮಾಡುತ್ತಿದ್ದನು. ಟ್ರ್ಯಾಕ್ಟರ್ ಓಡಿಸುವ ಕೆಲಸವನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದನು. ತನ್ನ ತಂದೆಗೆ ಸಹಾಯ ಮಾಡುತ್ತಲೇ ಕಾಲ ಕಳೆದನು.ಈ ವೇಳೆ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಡೇರಾ ಮುಖ್ಯಸ್ಥ ಶಾಹ್ ಸಂತಾನಂ ಅವರು ಮುಖ್ಯಸ್ಥ ಸ್ಥಾನದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದರು. ಅಲ್ಲದೆ ತನ್ನ ಸ್ಥಾನದ ನಾಯಕತ್ವವನ್ನು ನೀಡುವುದಕ್ಕಾಗಿ ಸೂಕ್ತ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿದರು. ಇದಕ್ಕಾಗಿ ಅವರು ಮೂವರನ್ನು ಆಯ್ಕೆ ಮಾಡಿದರು. ವಿಚಿತ್ರವೆಂದರೆ ಗುರ್ಮಿತ್ ಸಿಂಗ್ ಅವರ ಆಯ್ಕೆಯೇ ಆಗಿರಲಿಲ್ಲ. ಆದರೆ ನಾಟಕೀಯ ಬೆಳವಣಿಗೆಯೊಂದರಲ್ಲಿ ಗುರ್ಮಿತ್ ಸಿಂಗ್‍ನನ್ನೇ ಡೇರಾ ಮುಖ್ಯಸ್ಥನನ್ನಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಲಾಯಿತು. ಈ ವೇಳೆ ತನ್ನ ಹೆಸರನ್ನು ಆತ ಹುಜೂರು ಮಹರಾಝ್ ಗುರ್ಮೀತ್ ರಾಂ ರಹೀಂ ಎಂದಯ ಬದಲಿಸಿದ.

ಸಿರ್ಸಾ ಎಂಬಲ್ಲಿನ ಜನರ ಪ್ರಕಾರ ಗುರ್ಮಿತ್ ಗೆಳೆಯ ಗುರ್ಜಂತ್ ಸಿಂಗ್ ರಿವಾಲ್ವರ್ ತಯಾರು ಮಾಡುವ ಕೆಲಸದಲ್ಲಿ ತೊಡಗಿದ್ದ ಎಂದು ಹೇಳುತ್ತಾರೆ. ಆದರೆ ಈತ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಬಗ್ಗೆ ಯಾವುದೇ ದಾಖಲೆಯಾಗಲೀ ಸಾಕ್ಷಿಯಾಗಲೀ ಇರಲಿಲ್ಲ. ಆದರೆ ಗುರ್ಜಂತ್‍ನ ಕುಖ್ಯಾತಿಯನ್ನು ಗುರ್ಮಿತ್ ತನಗಾಗಿ ಬಳಸಿದ ಎಂದು ಹೇಳುವವರಿದ್ದಾರೆ. ಇದಾದ ಕೆಲವರ್ಷಗಳ ನಂತರ ಗುರ್ಜಂತ್ ಸಿಂಗ್ ಮೊಹಾಲಿಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ.ಡೇರಾದ ಹೊಸ ಮುಖ್ಯಸ್ಥನಾಗಿ ಆಯ್ಕೆಯಾದ ಗುರ್ಮೀತ್ ಹಿಂದಿನವರಂತೆ ಸರಳ ಜೀವನ ನಡೆಸಲಿಲ್ಲ. ಬದಲಿಗೆ ಐಷಾರಾಮಿಯಾಗಿ ಬದುಕಲಾರಂಭಿಸಿದ. ಈತ ಕೆಲವೊಂದು ಹೊಳೆಯುವ ವಸ್ತುಗಳನ್ನು ತನ್ನ ಉಡುಗೆಯಲ್ಲಿ ಬಳಸಿಕೊಳ್ಳಲಾರಂಭಿಸಿದ. ಇದೆಲ್ಲಾ ಆತನಿಗೆ ಗೀಳಾಗಿ ಪರಿಣಮಿಸಿತು.

ಈತ ಬ್ರಹ್ಮಚರ್ಯ ಪಾಲಿಸುವ ಮುನ್ನ ಮದುವೆಯಾಗಿದ್ದು, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಹೊಂದಿದ್ದಾನೆ. ತನ್ನ ಕುಟುಂಬವನ್ನು ತ್ಯಜಿಸಬೇಕಾಗಿ ಬಂದಾಗ ತನ್ನ ಹೆಂಡತಿ ಮಕ್ಕಳನ್ನು ಡೇರಾ ಮನೆಗಳಲ್ಲಿ ಇರುವಂತೆ ನೋಡಿಕೊಂಡನು. ಅಲ್ಲದೆ ತನ್ನ ಆಶ್ರಮದಲ್ಲಿ ಬಾಲ ಸಾಧ್ವಿಗಳನ್ನು ನಿಯೋಜಿಸಿದ್ದು, ತನ್ನ ಸುತ್ತಲೂ ತಿರುಗಾಡುವಂತೆ ನೋಡಿಕೊಂಡನು. ಈ ವೇಳೆ ಈತ ಚಿಕ್ಕ ಬಾಲಕಿಯನ್ನು ದತ್ತು ಪಡೆದು ಆಕೆಗೆ ಹನಿಪ್ರೀತ್ ಎಂದು ನಾಮಕರಣ ಮಾಡಿದ. ಈಕೆಯನ್ನು ಆತ ತನ್ನ ಮೂರನೇ ಪುತ್ರಿಯಾಗಿ ಸ್ವೀಕರಿಸಿಕೊಂಡ. ಆ ಮೂವರು ಮಕ್ಕಳು ಕೂಡಾ ತಮ್ಮನ್ನು ತಾವು ದೇವಕನ್ಯೆಯರು ಎಂದು ಕರೆಸಿಕೊಂಡರು.

ರಾಮ್ ರಹೀಂನನ್ನು ಇತರ ಭಕ್ತರೆಲ್ಲಾ ಪಿತಾಜಿ ಅಥವಾ ಪಾಪಾಜೀ ಎಂದು ಕರೆಯುತ್ತಾರೆ. ರಾಂ ರಹೀಮ ಹನಿಪ್ರೀತ್‍ಳನ್ನು ಹೆಚ್ಚಾಗಿ ತನ್ನ ಜೊತೆ ಕರೆದುಕೊಂಡು ಹೋಗುತ್ತಿದ್ದ. ಪಂಚಕುಲದಲ್ಲಿ ತನ್ನ ಮಗಳ ಜೊತೆ ಹೆಲಿಕಾಪ್ಟರ್‍ನಲ್ಲಿ ಇಳಿಯುವುದನ್ನು ಹಲವಾರು ಮಂದಿ ನೋಡುತ್ತಿದ್ದರು. ಇನ್ನುಳಿದಿಬ್ಬರು ಮಕ್ಕಳಾದ ಚರನ್‍ಪ್ರೀತ್ ಮತ್ತು ಅಮರ್‍ಪ್ರೀತ್ ಇಬ್ಬರಿಗೂ ಮದುವೆಯಾಗಿದೆ. ಇಬ್ಬರ ಹೆಸರುಗಳೂ ವಿಚಿತ್ರವಾಗಿದ್ದು, ರಾಂ ರಹೀಂ ಸ್ವತಃ ಇಟ್ಟುಕೊಂಡ ಹೆಸರುಗಳಾಗಿತ್ತು.

ಚರನ್‍ಪ್ರೀತ್‍ಗೆ ಇಬ್ಬರು ಮಕ್ಕಳು ಅವರ ಹೆಸರು ಕೂಡಾ ವಿಚಿತ್ರವಾಗಿದೆ. ಸ್ವೀಟ್‍ಲಕ್ ಸಿಂಗ್ ಮತ್ತು ಸುಬಾ ಇ ದಿಲ್ ಅವರ ಹೆಸರು. ಈತನ ಪುತ್ರಿಯರು ಎಂಎಸ್‍ಜಿ ಸೀರೀಸ್‍ನ ಸಿನಿಮಾದಲ್ಲಿ ನಟಿಸಿದ್ದಾರೆ. ಈತನ ಅಳಿಯಂದಿರು ದೇರ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈತನ ಪುತ್ರ ಜಸ್ಮೀತ್ ಇನ್ಸಾನ್ ಪಂಜಾಬ್‍ನ ಕಾಂಗ್ರೆಸ್ ಶಾಸಕನ ಪುತ್ರಿ ಹುಸಾನ್ ಮೀತ್‍ಳನ್ನು ಮದುವೆಯಾದನು.

ರಾಂ ರಹೀಂ ಗುಹೆಯಂಥಾ ನೆಲಮಾಳಿಗೆಯನ್ನು ಹೊಂದಿರುವ ಭವ್ಯವಾದ ಮನೆಯನ್ನು ನಿರ್ಮಿಸಿ ಅಲ್ಲಿ ವೈಭೋಗದ ಜೀವನವನ್ನು ನಡೆಸಲಾರಂಭಿಸಿದ. ಅಲ್ಲಿ ಸಾಧ್ವಿಗಳನ್ನು ಜೊತೆಯಲ್ಲಿರುವಂತೆ ನೋಡಿಕೊಂಡನು. ಸಾಧ್ವಿಗಳಿಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದನಂತೆ. ಆತ ಸಾಧ್ವಿಗಳನ್ನು ಲೈಂಗಿಕ ಕೃತ್ಯಕ್ಕೆ ಬಳಸಿಕೊಳ್ಳಲು ಹೊಸತಾದ ವಿಧಾನವನ್ನು ಅಳವಡಿಸಿಕೊಂಡನು. ತಾನು ಬಳಸಿಕೊಳ್ಳಲು ಸಾಧ್ವಿಗಳ ಪೈಕಿ ಒಬ್ಬಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ. ಅವರನ್ನು ತನಗೆ ಶರಣಾಗುವಂತೆ ನೋಡಿಕೊಂಡು ಅವರನ್ನು ಡೇರಾದಲ್ಲಿ ಉಳಿಯುವಂತೆ ಮಾಡುತ್ತಿದ್ದ. ಇಂಥಾ ಮಹಿಳೆಯರಿಗೆ ಮದುವೆಯಾಗಲು ಅವಕಾಶವಿರಲಿಲ್ಲ. ಅಲ್ಲದೆ ತನ್ನ ಸೇವೆಗಳನ್ನು ಮಾಡಿಕೊಳ್ಳಲು ಪುರುಷ ಭಕ್ತರನ್ನು ನೇಮಿಸಿದ್ದ. ಇವರಿಗೂ ಮದುವೆಯಾಗಲು ಅವಕಾಶವಿರಲಿಲ್ಲ. ಈ ಪುರುಷರು ಅಲ್ಲಿ ಗುಲಾಮರಂತೆ ಇರಬೇಕಾಗಿತ್ತು. ಈ ಪುರುಷರು ಗೃಹದಲ್ಲಿರುವ ಸಾಧ್ವಿಗಳು ಮನೆಬಿಟ್ಟು ತೆರಳದಂತೆ ನೋಡಿಕೊಳ್ಳಬೇಕಾಗಿತ್ತು. ಇಂಥಾ ಪುರುಷರನ್ನು ನಪುಂಸಕರನ್ನಾಗಿ ಮಾಡಲಾಗುತ್ತಿತ್ತು ಎಂಬ ಗಂಭೀರ ಆಪಾದನೆ ರಾಂ ರಹೀಮನ ಮೇಲೆ ಇದೆ.

ಇದೆಲ್ಲಾ ಗುಟ್ಟಾಗಿ ನಡೆಯದೆ ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿತ್ತು. ತನ್ನ ಖಾಸಗಿ ನಿವಾಸಕ್ಕೆ ಯಾರೂ ತೆರಳದಂತೆ ತನ್ನ ನಂಬಿಕೆಯ ಹುಡುಗಿಯರನ್ನು

ನೇಮಿಸುತ್ತಿದ್ದ. ಹುಡುಗಿಯರನ್ನು ಅತ್ಯಾಚಾರ ಮಾಡುವುದನ್ನು ದೇವರ ಕಾರ್ಯ ಎಂದು ಕರೆಯಲಾಗುತ್ತಿತ್ತು. ಕೆಲವರು ಇದನ್ನು ದೇವರ ಆಶೀರ್ವಾದ ಎಂದು ಕರೆಯುತ್ತಿದ್ದರು. ಹೀಗೆ ಅನೇಕ ಹುಡುಗಿಯರನ್ನು ಬಳಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.ರಾಂ ರಹೀಂನ ಈ ಕೃತ್ಯ ಹೊರಬರಲು ಇಬ್ಬರು ಮಹಿಳೆಯರು ಕಾರಣರಾದರು.

ರಾಂ ರಹೀಂನ ಕೃತ್ಯದ ಬಗ್ಗೆ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಒಂದು ಅನಾಮಧೇಯ ಪತ್ರವೊಂದು ಬಂದಿತು. ಅವರು ಈ ಪ್ರಕರಣದ ತನಿಖೆ ನಡೆಸಲು ಅವರದಿದನ್ನು ಸಿಬಿಐಗೆ ವರ್ಗಾಯಿಸಿದರು. ಇದರ ಆಧಾರದಲ್ಲಿ 2012ರಲ್ಲಿ ಸಿಬಿಐ ವಿಶೇಷ ಕೋರ್ಟ್ ಎಫ್‍ಐಆರ್ ದಾಖಲಿಸಿತು. ಈ ಘಟನೆ ನಡೆದಿರುವುದು ಆಗಸ್ಟ್ 28 ಮತ್ತು 39, 1999ರಂದು.ಪತ್ರದಲ್ಲಿ ಬಂದ ಒಕ್ಕಣೆ ಹೀಗಿತ್ತು… ಪಿತಾಜಿ(ರಾಂ ರಹೀಂನನ್ನು ಕರೆಯುವು ಹಾಗೆ) ಈ ದಿನ ರಾತ್ರಿ ಕ್ಷಮೆ ನೀಡುವುದಾಗಿ ತಿಳಿಸಿ, ಆಕೆಯ ಜೊತೆ ಅತ್ಯಾಚಾರ ನಡೆಸಲಾಯಿತು. ಇದಕ್ಕೆ ಸಹಕರಿಸದಿದ್ದರೆ ಕೊಲ್ಲುವುದಾಗಿ ಬೆದರಿಸಲಾಯಿತು. ಇದರಿಂದ ನೊಂದ ಮಹಿಳೆ ತನ್ನ ಸಹೋದರನಿಗೆ ದೂರು ನೀಡಿದ್ದಳು. ಆದರೆ ಕೆಲ ದಿನಗಳ ನಂತರ ಆಕೆಯ ಸೋದರ ಕೊಲೆಯಾಗಿ ಹೋಗಿದ್ದ.

ಎರಡನೇ ದೂರು ದಾಖಲಾಗಿರುವುದು ಹುಡುಗಿಯೊಬ್ಬಳ ಪೋಷಕರಿಂದ. ಬಾಲಕಿಯೊಬ್ಬಳ ಪೋಷಕರು ರಾಂ ರಹೀಂನ ಗುಹೆಯನ್ನು ಕಾಯುವ ಕೆಲಸ ಮಾಡಿದ್ದರು. ಈ ವೇಳೆ ಬಾಲಕಿಯನ್ನು ಈತ ಒಳಗಡೆ ಕರೆದುಕೊಂಡು ಹೋಗಿದ್ದ. ಪಿತಾಜಿ ಮತ್ತು ಬಾಲಕಿ ಬೆಡ್ ಮೇಲೆ ಮಲಗಿದ್ದರು. ಇಲ್ಲಿ ಬಾಲಕಿ ಬೆತ್ತಲಾಗಿದ್ದಳು. ಹೆದರಿದ ಬಾಲಕಿ ಅಲ್ಲಿಂದ ಓಡಿಕೊಂಡು ಹೋದಳು. ಆದರೆ ಅಲ್ಲಿ ಅವರಿಗೆ ಯಾರೂ ಸಹಾರ ಮಾಡಲು ಬಂದಿರಲಿಲ್ಲ. ಈಕೆಗೂ ಬಾಬಾ ಅತ್ಯಾಚಾರ ನಡೆಸಿದ್ದ. ಈ ಬಗ್ಗೆಯೂ ಪತ್ರ ಬಂದ ಆಧಾರದಲ್ಲಿ ಸಿಬಿಐ ಕೋರ್ಟಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ರೀತಿ ರಾಂ ರಹೀಂ ಅನೇಕ ಹುಡುಗಿಯರನ್ನು ಅತ್ಯಾಚಾರಕ್ಕೆ ಬಳಸಿಕೊಂಡಿದ್ದ. ಆದರೆ ಈ ಬಗ್ಗೆ ಅವರು ಮೌನವಾಗಿ ಸಹಿಸಿಕೊಂಡ ಕಾರಣ ಇಂಥಾ ಅನೇಕ ಪ್ರಕರಣಗಳು ಹೊರಬಂದಿಲ್ಲ.

ತನ್ನ ಮಕ್ಕಳಿಗೆ ಐಷಾರಾಮಿ ಬದುಕು ಕಲ್ಪಿಸಿದ ರಾಂ ರಹೀಂ ಇತರರ ಮಕ್ಕಳ ಜೊತೆ ನಿರ್ದಯವಾಗಿ ವರ್ತಿಸಿದ. ತನ್ನ ಆಶ್ರಮದಲ್ಲಿ ಸಾಧ್ವಿಯರನ್ನು ನಿಯೋಜಿಸಿ ಅವರ ಅತ್ಯಾಚಾರ ನಡೆಸಿದ. ತನ್ನ ಆಶ್ರಮದಲ್ಲಿದ್ದ ಪುರುಷ ಭಕ್ತರನ್ನು ನಪುಂಸಕರನ್ನಾಗಿಸಿ ಅವರಿಗೆ ಮದುವೆಯಾಗುವ ಭಾಗ್ಯವನ್ನೇ ಕಳೆದುಕೊಳ್ಳುವಂತೆ ಮಾಡಿಕೊಂಡನು.ಸಮೂಹಸನ್ನಿಗೊಳಪಡಿಸಿ ಜನರನ್ನು ಆಕರ್ಷಿಸುವ ಗುಣ ಹೊಂದಿದ್ದ ರಾಂ ರಹೀಂಗೆ ಅನೇಕ ಅನುಯಾಯಿಗಳಿದ್ದಾರೆ. ಆದರೆ ಇಂದು ಅತ್ಯಾಚಾರ ಪ್ರಕರಣ ದಾಖಲಾಗಿ ಸಾಬೀತಾಗಿರುವುದರಿಂದ ಇಂದು ತನ್ನ ಜೀವನವನ್ನು ಜೈಲಲ್ಲಿ ಕಳೆಯುವಂತಾಗಿದೆ.

-ಚೇಕಿತಾನ

Tags

Related Articles

Close