ಅಂಕಣ

ದೇಶಕ್ಕಾಗಿ ತನ್ನದೆಲ್ಲವನೂ ಕೊಟ್ಟವನಿಗೆ ದೇಶವೇನು ಕೊಟ್ಟಿತು ಗೊತ್ತೇ?!!

ಸ್ವಾತಂತ್ರ್ಯ ವೀರ ಸಾವರ್ಕರ್ ಈ ಹೆಸರನ್ನು ಕೇಳಿದಾಗಲೆಲ್ಲಾ ಕಣ್ಣು ಒದ್ದೆಯಾಗಿ ಅಳು ಬರುತ್ತದೆ. ಆ ವೀರನಿಗೆ ಪ್ರೀತಿಯ ಸಾವನ್ನು ಕೊಡಲಾಗಲಿಲ್ಲ ಅಂತ. ಅಳು ಎಷ್ಟು ಬರುತ್ತೋ ಅಷ್ಟೇ ಕೋಪವೂ ಬರುತ್ತೆ ಆ ಮಹಾನ್ ನಾಯಕನ ನೋವಿಗೆ ಕಾರಣರಾದವರನ್ನು ಹಿಡಿದು ಸೀಳಿ ಬಿಡಬೇಕು ಅನಿಸುತ್ತದೆ.

ಸಾವರ್ಕರರಿಗೆ ನೆಮ್ಮದಿಯ ಸಾವನ್ನು ಕೊಡಲಿಲ್ಲ. ಭಾರತೀಯರಿಗೋಸ್ಕರ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ತೊಡೆ ತಟ್ಟಿ ತನ್ನ ಜೀವನದ ಬಹುವರ್ಷಗಳ ಕಾಲ
ಅಂಡಮಾನಿನ ಜೈಲಿನ ವಾಸ ಅನುಭವಿಸಿದ ಮಹಾನ್ ಕ್ರಾಂತಿಕಾರಿ, ಭಾರತೀಯರಿಂದಾನೆ ಆತ್ಮಾರ್ಪಣೆ ಮಾಡಿಕೊಳ್ಳಬೇಕಾಯ್ತು. ನಿಮ್ಮ ಆತ್ಮಾರ್ಪಣೆಗೆ
ಕಾರಣರಾದವರ ಎದೆ ಬಗೆಯಲು ನಮ್ಮಿಂದಾಗಲಿಲ್ಲ, ಬದಲಿಗೆ ಅವರ ಕೈಯ್ಯಲ್ಲೇ ನಮ್ಮ ಜುಟ್ಟು ಕೊಟ್ಟು ಷಂಡರಂತೆ ಕುಳಿತುಬಿಟ್ಟೆವು.

ನಮ್ಮನ್ನು ಕ್ಷಮಿಸಿಬಿಡಿ ಸಾವರ್ಕರ್!!

ಸಾವರ್ಕರ್ ಜೀ ನೀವು ಭಾರತದಲ್ಲಿ ಹುಟ್ಟಬಾರದಿತ್ತು,ಹುಟ್ಟಿದರೂ ನೆಹರೂನ ಕಾಲದಲ್ಲಿ ಹುಟ್ಟಬಾರದಿತ್ತು. ಭಾರತ ಬಿಟ್ಟು ನೀವೆಲ್ಲೋ ಬೇರೆ ದೇಶದಲ್ಲಿ ಹುಟ್ಟಿ ಆ
ದೇಶಕ್ಕಾಗಿ ಸ್ವಲ್ಪೇ ಸ್ವಲ್ಪ ಹೋರಾಡಿದ್ದರೂ ಕೂಡಾ ನಿಮಗಾಗಿ ಆ ದೇಶದ ತುಂಬಾ ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದರು. ಸಾವರ್ಕರ್ ಜೀ ನೀವು ಇದೇ ಉಧ್ಗಾರವನ್ನು ತ್ಯಾತ್ಯಾಟೋಪೆ ಕುರಿತು ಹೇಳಿದ್ರಿ. ತ್ಯಾತ್ಯಾ ನೀನು ಈ ದೇಶದಲ್ಲಿ ಬಿಟ್ಟು ಬೇರೆಲ್ಲೋ ಹುಟ್ಟಿದ್ದರೆ ನಿನಗೆ ದೊಡ್ಡ ಮಟ್ಟದ ಮೆರವಣಿಗೆ,ಮರ್ಯಾದೆ ಸಿಗುತ್ತಿತ್ತು ಅಂತ ಅಂದಿದ್ರಿ ಅಲ್ವಾ? ನಿಮ್ಮ ಹೋರಾಟಕ್ಕೆ,ನಿಮ್ಮ ತ್ಯಾಗಕ್ಕೆ ನಾವು ಬೆಲೆ ಕೊಡಲಿಲ್ಲ. ಕ್ಷಮಿಸಿಬಿಡಿ ಸಾವರ್ಕರ್ ಜಿ.

ಜೀವನದಲ್ಲಿ ಒಮ್ಮೆಯಾದರೂ ಸಾವರ್ಕರ್ ಬಗ್ಗೆ ಓದಿ. ಆ ಮಹಾನ್ ಕ್ರಾಂತಿಕಾರಿಯ ಅಭಿಮಾನಿಯಾಗಲು ಒಂದು ಯೋಗ್ಯತೆ ಇರಬೇಕು.ಕೊಳೆತು ಹೊಲಸು
ನಾರುತ್ತಿರುವ ಇತಿಹಾಸದಲ್ಲಿ ಬರೀ ಸುಳ್ಳುಗಳೇ ತುಂಬಿಕೊಂಡಿವೆ. ಪಠ್ಯಬಿಟ್ಟು ಸ್ವಲ್ಪ ನಿಜವಾದ ಇತಿಹಾಸದ ಕಡೆ ಇಣುಕಿ ನೋಡಿ ಅದರಲ್ಲಿ ಬರೀ ಕಾಂಗ್ರೆಸ್ ಮಾಡಿದ ಅನ್ಯಾಯವೇ ಕಾಣುತ್ತದೆ,ಕಾಂಗ್ರೆಸ್ ಮಾಡಿದ ದೇಶದ್ರೋಹವೇ ಕಾಣುತ್ತದೆ.

ವಸಾಹತುಶಾಹಿ ಕಾಲಘಟ್ಟದಲ್ಲಿ ಭಾರತೀಯರನ್ನು ಭೌದ್ಧಿಕ ಗುಲಾಮರನ್ನಾಗಿ ಸೃಷ್ಠಿಸಲೆಂದೇ ಆರಂಭವಾದ ಶೈಕ್ಷಣಿಕ ಪದ್ಧತಿಯನ್ನು ಸ್ವಾತಂತ್ರ್ಯ ಗಳಿಸಿಕೊಂಡ
ನಂತರವೂ ಅದನ್ನೇ ಬುದ್ಧಿಜೀವಿ ಪಡೆ ಮುಂದುವರೆಸಿಕೊಂಡು ಬಂದಿದೆ. ಅತಿ ಬುದ್ಧಿವಂತರೆನಿಸಿಕೊಂಡ ಕೆಲವು ಗಂಜಿ ಗಿರಾಕಿಗಳು ಅದನ್ನೇ ತಮ್ಮ ಬಂಡವಾಳ
ಮಾಡಿಕೊಂಡಿದಲ್ಲದೇ ಶುದ್ಧ ಇತಿಹಾಸ ತಿರುಚಿ ಹೊಟ್ಟೆ ತುಂಬಿಸಿಕೊಳ್ಳುತ್ತ ಪ್ರಜ್ಞಾವಂತರ ದಾರಿ ತಪ್ಪಿಸುತ್ತಿದ್ದಾರೆ.ಅತಿ ಕಡಿಮೆ ಬೆಲೆಯಲ್ಲಿ ಪುಸ್ತಕ ಪ್ರಕಟಿಸಿ
ಬೇರೆಯವರಿಂದ ದುಡ್ಡು ಹೊಂದಿಸಿ ಉಚಿತ ವಿತರಣೆ ಮಾಡಿ ಬೌದ್ಧಿಕ ದಾಳಿ ಮಾಡುತ್ತಿರುವುದಲ್ಲದೆ, ಅಹಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ
ಮಾಡುತ್ತಿದ್ದಾರೆ. ನಮ್ಮ ವರ್ತಮಾನದ ಯುವಕರು ಇಂದು ಮಾನಸಿಕವಾಗಿ, ವೈಚಾರಿಕವಾಗಿ, ಬೌದ್ಧಿಕವಾಗಿ ಸ್ವಂತಿಕೆಯನ್ನು ಬಿಟ್ಟು ಮಾರಕ ಸಿದ್ಧಾಂತಗಳ
ಗುಲಾಮರಾಗುತ್ತಿದ್ದಾರೆ.

ಸಾವರ್ಕರರಿಗೆ ಆ ನೆಹರೂ ಮಾಡಿದ ಅನ್ಯಾಯವನ್ನು ಯಾವತ್ತೂ ಯಾವ ಭಾರತೀಯನು ಕ್ಷಮಿಸಲ್ಲ!

1857ರ ಮಹಾ ಸ್ವಾತಂತ್ರ್ಯ ಸಂಗ್ರಾಮ ಯಶಸ್ವಿಯಾಗಿದ್ದರೆ,ಸುಭಾಷರು ಕಣ್ಮರೆಯಾಗದಿದ್ದರೆ,ಸಾವರ್ಕರರು ಅಂಡಮಾನಿನ ಕರಿನೀರಿನ ಶಿಕ್ಷೆಗೆ ಗುರಿಯಾಗದೇ
ಇದ್ದರೆ ಭಾರತದ ಇತಿಹಾಸವೇ ಬದಲಾಗಿರುತ್ತಿತ್ತು.

ನೀವು ಬಂದರೆ ನಿಮ್ಮ ಜತೆ,

ಬರದಿದ್ದರೆ ನಿಮ್ಮನ್ನು ಬಿಟ್ಟು,

ಅಡ್ಡವಾದರೆ ನಿಮ್ಮನ್ನೇ ಮೆಟ್ಟಿ,

ಸ್ವಾತಂತ್ರ್ಯ ಗಳಿಸುತ್ತೇವೆ…ಎಂದು ಗರ್ಜಸಿ ಬ್ರಿಟಿಷರ ವಿರುದ್ಧ ತೊಡೆ ತಟ್ಟಿ,ದೇಶ ಭಕ್ತಿಯ ಅಪರಾಧಕ್ಕೆ 27 ವರ್ಷಗಳ ಕಾಲ ಜೈಲಿನ ಯಾತನೆ ಅನುಭವಿಸಿದ
ಮಹಾನ್ ಕ್ರಾಂತಿಕಾರಿ ಸಾವರ್ಕರರು.

1857ರ ಬ್ರಿಟಿಷರ ವಿರುದ್ಧ ಮಾಡಿದ್ದ ಬಂಡಾಯವನ್ನು ಸಿಪಾಯಿ ದಂಗೆಯೆಂದು ಕರೆದಿದ್ದರು, ಆದರೆ ಅದು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು
ಪರಿಚಯಿಸಿದ್ದು ಸಾವರ್ಕರ್ ಜೀ.

ನಿಮಗೆಲ್ಲ ಶತ್ರು ಯಾರೆಂದು ಗೊತ್ತಿದೆ. ಈಗ ನೇರವಾಗಿ ಸೈನ್ಯಕ್ಕೆ ಸೇರಿ. ಸರಿಯಾದ ಸಮಯಕ್ಕೆ ಆಯುಧಗಳನ್ನು ಶತ್ರುವಿನಡೆಗೆ ತಿರುಗಿಸಿ ಅಷ್ಟೇ !!

ಒಪ್ಪಂದಗಳ ಬಗ್ಗೆ ಚಿಂತಿಸಬೇಡಿ. ಆ ಒಪ್ಪಂದಗಳನ್ನು ತಿರುಗಿಸಿದರೆ ಅದು ಬರಿಯ ಹಾಳೆ. ಅಲ್ಲಿ ಹೊಸದೊಂದು ಒಪ್ಪಂದ ಬರೆದರಾಯಿತು!

ಜಗತ್ತಿನಲ್ಲಿ ಎಲ್ಲೂ ಹಾಳೆಯ ಮೇಲೆ ಸ್ವತಂತ್ರ ಬಂದಿಲ್ಲ, ಬರುವುದೂ ಇಲ್ಲ. ( ಭಾರತೀಯರಿಗೆ ಸೈನ್ಯಕ್ಕೆ ಸೇರಲು ಸಾವರ್ಕರ್ ಪ್ರೇರೆಪಿಸುತ್ತಿದ್ದ ಮಾತುಗಳು ).

ದೇಶಭಕ್ತಿಯ ಅಪರಾಧಕ್ಕಾಗಿ ವಿದ್ಯಾಲಯವೊಂದರ ಹಾಸ್ಟೆಲ್ಲಿನಿಂದ ಹೊರದಬ್ಬಲ್ಪಟ್ಟ ಮೊದಲ ವಿದ್ಯಾರ್ಥಿ ಸಾವರ್ಕರ್.

ಸುಮಾರು ವರ್ಷಗಳ ಕಾಲ ಬ್ರಿಟಿಷರಿಂದ ಅಂಡಮಾನಿನ ಕರಿನೀರ ಶಿಕ್ಷೆಗೆ ಗುರಿಯಾಗಿದ್ದರು. ಸ್ವಾತಂತ್ರ್ಯಾ ನಂತರ ನೆಹರೂನಿಂದಾಗಿ ಜೈಲಿ ಶಿಕ್ಷೆಗೆ ಗುರಿಯಾಗಿದ್ದರು. ಅಂತಹ ಮಹಾನ್ ಕ್ರಾಂತಿಕಾರನನ್ನು ಜೈಲಿಗೆ ಹಾಕಲು ಹೇಗೆ ಮನಸ್ಸು ಬಂದಿರಬಹುದು ಆ ನೆಹರೂಗೆ? ಎಷ್ಟು ಕೀಳು ಮನಸ್ಥಿತಿ ಅಲ್ವಾ?

ಸಾವರ್ಕರರು ಅಂಡಮಾನಿನ ಸೆಲ್ಯುಲಾರ್ ಜೈಲಿಗೆ ಹೋಗುವ ದಿನ ಸಾವಿರಾರು ಜನ ಭಾರತೀಯರು ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. ಅವರಿಗೆ ಸ್ವಲ್ಪವೂ ನಾಚಿಕೆಯಿರಲಿಲ್ಲ. ಅವರಲ್ಲಿ ಒಬ್ಬನಾದರೂ ಮುಂದೆ ಓಡಿಬಂದು ಸಾವರ್ಕರನ್ನು ಬಿಗಿದಪ್ಪಿ ‘ ಯೋಚನೆ ಮಾಡಬೇಡ, ನೀನು ಹಿಡಿದ ವ್ರತವನ್ನು ನಾವು
ಪೂರ್ಣಗೊಳಿಸುತ್ತೇವೆ’ ಎಂದಿದ್ದರೆ ಸಾವರ್ಕರರ ಮುಖ ಊರಗಲವಾಗುತ್ತಿತ್ತು. ಅಂಡಮಾನಿನ ಅಷ್ಟೂ ಕಷ್ಟಗಳನ್ನು ಸಲೀಸಾಗಿ ಸಹಿಸಿಬಿಡುತ್ತಿದ್ದರು. ಹಾಗಾಗಲಿಲ್ಲ. ಬ್ರಿಟಿಷ್ ಸಾಮ್ರಾಜ್ಯದಡಿಯಲ್ಲಿ ಎಲ್ಲರೂ ಷಂಡರಂತಾಗಿದ್ದರು.

ಸಾವರ್ಕರರ ವಿರುದ್ಧ ಖಟ್ಲೆ ಹೂಡಿದಾಗ. ದೇಶಭಕ್ತರು ಅವರ ಪರವಾಗಿ ಮೊಕದ್ದಮೆಗೆ ಚಂದಾ ಬೇಡಲು ನೆಹರೂ ಬಳಿ ಹೋದರೆ,ಆ ಪಾಪಿ ನೆಹರು ಚಂದಾ ಕೊಡದೇ ಆ ಹಾಳೆಯನ್ನು ಹರಿದು ಬಿಸಾಡಿದ್ದ. ಗಾಂಧೀಜಿ ಕೂಡಾ ಸಾವರ್ಕರರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದ ಅಭಿಯಾನಕ್ಕೆ ಸಹಿ ಮಾಡಿರಲಿಲ್ಲ.

ಗಾಂಧಿ ಹತ್ಯೆಯಲ್ಲಿ ಸಾವರ್ಕರರನ್ನು ಆರೋಪಿಯಾಗಿಸಲು ಯಾವುದೇ ಆಧಾರವಿಲ್ಲವೆಂದು ಆಗಿನ ಕಾನೂನು ಮಂತ್ರಿಯಾಗಿದ್ದ ಡಾ.ಅಂಬೇಡ್ಕರರು ಒತ್ತಿ ಹೇಳಿದರೂ ನೆಹರೂ ಛಲದಿಂದ ಸಾವರ್ಕರರಿಗೆ ದೋಷಿಯ ಪಟ್ಟ ಕಟ್ಟಿದರು. ಇದನ್ನು ತಿಳಿದ ಡಾ.ಅಂಬೇಡ್ಕರರು ನೆಹರೂನ ಸಂಚನ್ನು ಸಾವರ್ಕರರ ಪರ ವಕೀಲರಿಗೆ ಖುದ್ದಾಗಿ ಭೇಟಿಯಾಗಿ ತಿಳಿಸಿದ್ದರು.

ಭಾರತೀಯರಾದ ನಾವೇ ನೆಹರೂನ ವಿರುದ್ಧ ನಿಂತು,ಸಾವರ್ಕರರ ಬೆಂಬಲಕ್ಕೆ ನಿಂತಿದ್ದರೆ ಸಾವರ್ಕರರು ಆತ್ಮಾರ್ಪಣೆ ಮಾಡಿಕೊಳ್ಳುವ ಸ್ಥಿತಿಯೇ ಬರುತ್ತಿರಲಿಲ್ಲ.
ನಾವೆಲ್ಲಾ ನೆಹರೂನ ಕೈಯ್ಯಲ್ಲಿ ನಮ್ಮ ಜುಟ್ಟನ್ನು ಕೊಟ್ಟು ಷಂಡರಂತೆ ಕುಳಿತುಬಿಟ್ಟಿದ್ದೆವು. ಒಂದರ್ಥದಲ್ಲಿ ಸಾವರ್ಕರರ ಆತ್ಮಾರ್ಪಣೆಗೆ ನಾವು ಕೂಡಾ ಕಾರಣರಾದೆವು.

ಸಾವರ್ಕರರನ್ನು ಸ್ವತಂತ್ರ ಭಾರತದಲ್ಲಿ ಬಂಧಿಸಿದಾಗ ಸುಮ್ಮನಿದ್ದೆವು. ಬ್ರಿಟಿಷರು ಕೇಳದಂತಹ ನೀಚ ಪ್ರಶ್ನೆಗಳನ್ನು ಸಾವರ್ಕರಿಗೆ ಸ್ವತಂತ್ರ ಭಾರತದಲ್ಲಿ
ಕೇಳಿದಾಗಲೂ ಸುಮ್ಮನಿದ್ದೆವು,ಜೈಲಿನಲ್ಲಿರುವಷ್ಟು ದಿನ ಹೆಂಡತಿ ಮಕ್ಕಳೊಂದಿಗೆ ಮಾತನಾಡಲು ಬಿಡಲ್ಲವೆಂದು ನೆಹರು ಸರ್ಕಾರ ಅಂದಾಗಲೂ ಸುಮನಿದ್ದೆವು. ಗಾಂಧಿ ಹತ್ಯೆಯಲ್ಲಿ ಸಾವರ್ಕರ ಪಾತ್ರ ಇಲ್ಲ ಅಂತ ಅಂಬೇಡ್ಕರರು ಒತ್ತಿ ಹೇಳಿದರು ಕೂಡಾ ಸಾವರ್ಕರರನ್ನು ನೆಹರು ಸರ್ಕಾರ ಬಂಧಿಸಿತು ಆವಾಗಲೂ ಸುಮ್ಮನಿದ್ದೆವು. ಒಟ್ಟಿನಲ್ಲಿ ನೆಹರೂನ ಕೈಲಿ ಜುಟ್ಟು ಕೊಟ್ಟು ಏನು ಬೇಕಾದರೂ ಮಾಡೆಂದು ಹೇಳಿ ಸುಮ್ಮನೆ ಕುಳಿತು ಬಿಟ್ಟಿದ್ದೆವು. ಇವಾಗಲೂ ಸಾವರ್ಕರರ ಬಗ್ಗೆ ಒಂದಷ್ಟು ದೇಶದ್ರೋಹಿಗಳು ಕೆಟ್ಟದಾಗಿ ಮಾತನಾಡುತ್ತಿವೆ. ಇವಾಗಲೂ ಸುಮ್ಮನಿದ್ದೇವೆ ಅಲ್ವಾ? ಇದೇ ಅಲ್ಲವೇ ಷಂಡತನದ ಪರಮಾವಧಿ?

ಗಾಂಧಿ ಹತ್ಯೆಯ ನೆಪದಲ್ಲಿ ಸಾವರ್ಕರ ಮನೆ ಮೇಲೆ ಕಾಂಗ್ರೆಸ್ಸಿಗರು ದಾಳಿ ಮಾಡಿ,ಸಾವರ್ಕರರ ತಮ್ಮ ಬಾಳಾನನ್ನು ಕೊಂದರು.

ಈ ನೆಹರೂಗೆ ಯಾವಾಗಲೂ ಅಷ್ಟೇ ದೇಶಪ್ರೇಮಿಗಳೆಂದರೆ ಅಲರ್ಜಿ. ಇವನು ಮಾಡಿದ ಪಾಪಗಳಿಗೆ ಲೆಕ್ಕವೇ ಇಲ್ಲ. ಇವನು ಎಷ್ಟು ಕ್ರಾಂತಿಕಾರಿಗಳನ್ನು
ತುಳಿದಿದ್ದಾನೋ ಲೆಕ್ಕವೇ ಇಲ್ಲ. ಸುಬಾಷರನ್ನು,ಸಾವರ್ಕರನ್ನು,ಭಗತ್ ಸಿಂಗನನ್ನು,ಚಂದ್ರ ಶೇಖರ್ ಅಜಾದರನ್ನು,ರಾಜಗರುವನ್ನು,ಸುಖದೇವನನ್ನು,ಸ್ವಾಮಿ
ಶ್ರದ್ಧಾನಂದರನ್ನು,ವಲ್ಲಭಭಾಯಿ ಪಟೇಲರದನ್ನು ಇತ್ಯಾದಿ ಇತ್ಯಾದಿ.

ಸ್ವಾತಂತ್ರ್ಯಾ ನಂತರ ಬ್ರಿಟಿಷರು ಮುಟ್ಟುಗೋಲು ಹಾಕಿದ್ದ ಸಾವರ್ಕರರ ಮನೆಯನ್ನು ಸಾವರ್ಕರರಿಗೆ ನೆಹರು ಕೊಡಲು ನಿರಾಕರಿಸಿದ. ಈ ನೆಹರೂನ ಪಾಪಕ್ಕೆ ಖಂಡಿತ ಪ್ರಾಯಶ್ಚಿತ ಸಿಗಲ್ಲ.

1950ರಲ್ಲಿ ಲಿಯಾಖತ್ ಅಲಿ ಭಾರತಕ್ಕೆ ಬರುತ್ತಾನೆಂಬ ನೆಪವೊಡ್ಡಿ 67 ವಯಸ್ಸಿನ ವೃದ್ಧ ಸಾವರ್ಕರರನ್ನು ನೆಹರು ಆದೇಶ ಕೊಟ್ಟು ಬಂಧಿಸಿದ್ದ.

ಸಾವರ್ಕರ್ ನಿಧನರಾದಾಗ ಲೋಕಸಭೆ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ ಅದನ್ನು ಆಗಿನ ದೇಶದ್ರೋಹಿ ನೆಹರು ಪೋಷಿತ ಸಭಾಧ್ಯಕ್ಷರು ತಿರಸ್ಕರಿಸಿದರು. ಸಾವರ್ಕರ್ ಈ ಸಂಸತ್ತಿನ ಸದಸ್ಯರಾಗಿತಲಿಲ್ಲ ಎಂಬ ಕಾರಣ ನೀಡಿ. ಆದರೇ ಅದೇ ಸಂಸತ್ತು ಸದಸ್ಯರಲ್ಲದ ಗಾಂಧೀಜಿಗು, ಈ ದೇಶದವನೇ ಅಲ್ಲದ ಸ್ಟಾಲಿನ್ನನಿಗೂ ಗೌರವಾರ್ಪಣೆ ಮಾಡಿತ್ತು. ಯಾವುದೇ ಸರ್ಕಾರ ಇದಕ್ಕಿಂತ ಕ್ಷುದ್ರ ವರ್ತನೆಯಲ್ಲಿ ತೊಡಗೀತೆಂದು ಕಲ್ಪಿಸಿಕೊಳ್ಳುವುದು ಕಷ್ಟ.

ಸಾವರ್ಕರರು 50 ವರ್ಷಗಳ ಕರಿನೀರ ಶಿಕ್ಷೆಗೆ ಗುರಿಯಾಗಿದ್ದರು. ದೇಶಭಕ್ತರ ಒತ್ತಾಯದ ಮೇರೆಗೆ 11 ವರ್ಷಗಳಲ್ಲಿ ಅವರನ್ನು ಬಿಡುಗಡೆ ಮಾಡಿದ್ದರು. 50 ವರ್ಷಗಳ ನೆನಪಿಗಾಗಿ 1961ರಲ್ಲಿ ದೇಶದ ಪ್ರಮುಖ ಪಟ್ಟಣಗಳಲ್ಲಿ ಮೃತ್ಯುಂಜಯ ದಿನವನ್ನು ದೇಶಭಕ್ತರು ಆಚರಿಸಿದ್ದರು. ನೆಹರು ಪಾಳೆಗಾರಿಕೆಯಿಂದ ಆಕಾಶವಾಣಿ ಆ ಸುದ್ದಿಯನ್ನು ಪೂರ್ತಿ ಬ್ಲ್ಯಾಕ್ ಔಟ್ ಮಾಡಲಾಗಿತ್ತು.

ವಾಜಪೇಯಿ ಸರ್ಕಾರ ಸಾವರ್ಕರರ ನೆನಪಿಗಾಗಿ ಅಂಡಮಾನಿನಲ್ಲಿ ಸಾವರ್ಕರರ ಹೇಳಿಕೆ ಫಲಕ ಹಾಕಿತ್ತು. 2004ರಲ್ಲಿ ಸೋನಿಯಾ ಸರ್ಕಾರ ಮಣಿಶಂಕರ್
ಅಯ್ಯರ್ ನೇತೃತ್ವದಲ್ಲಿ ಆ ಫಲಕವನ್ನು ಕಿತ್ತು ಹಾಕಿತ್ತು. ಇದು ಬೇರೆ ದೇಶದಲ್ಲಿ ಆಗಿದ್ದರೆ ಆವತ್ತೆ ಮಣಿಶಂಕರ್ ಅಯ್ಯರ್ ಕೊಲೆಯಾಗಿರುತ್ತಿದ್ದ. ಆದರೆ
ಭಾರತದಲ್ಲಿರೋದಕ್ಕೆ ಬಚಾವ್ ಆಗಿದ್ದಾನೆ. ಅಂದ ಹಾಗೆ ಮಣಿಶಂಕರ್ ಅಯ್ಯರ್ ಕೊನೆಯ ಬಾರಿ ಚುನಾವಣೆಯಲ್ಲಿ ಮೋದಿಜಿಯವರನ್ನು ಸೋಲಿಸಲು ಪಾಕಿಸ್ತಾನದ ನೆರವು ಕೇಳಿದ್ದ ಅಂದಮೇಲೆ ಇವನು ದೇಶದ್ರೋಹಿ ಅಲ್ವಾ?

ಭಾರತದ ಸ್ವಾತಂತ್ರ್ಯಕ್ಕಾಗಿ ಸುಮಾರು ವರ್ಷಗಳ ಕಾಲ ಅಂಡಮಾನಿನ ಕರಿನೀರ ಶಿಕ್ಷೆ ಅನುಭವಿಸಿದ ಸ್ವಾತಂತ್ರ್ಯ ವೀರ ಸಾವರ್ಕರರ ಬಗ್ಗೆ ನಮ್ಮ ಪಠ್ಯದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಬಂದು ಹೋಗುತ್ತದೆ.

ಸ್ವಾತಂತ್ರ್ಯ ವೀರ ಅಂತ ಸಾವರ್ಕರರಿಗೆ ಬಿರುದು ಕೊಟ್ಟಿದ್ದು ಬ್ರಿಟಿಷರು. ಅಂದ್ರೆ ಸಾವರ್ಕರ ತಾಕತ್ತಿನ ಬಗ್ಗೆ ಅವರಿಗೆ ಪರಿಚಯವಿತ್ತು. ವೀರನಿಗೆ ಮಾತ್ರ ವೀರ ಅನ್ನಬೇಕೆ ಹೊರತು ರಣಹೇಡಿ ನೆಹರೂನನ್ನ ವೀರ ಅನ್ನೋಕಾಗಲ್ಲ.

ಜೀವನದಲ್ಲಿ ಎಂದೂ ಕಠಿಣ ಜೈಲುವಾಸ ಅನುಭವಿಸದ,ಕಠಿಣ ಶಿಕ್ಷೆಗೂ ಒಳಗಾಗದ, ಫೈವ್ ಸ್ಟಾರ್ ಜೈಲುವಾಸ ಅನುಭವಿಸಿಯೇ ಸುಸ್ತಾದ, ಬ್ರಿಟಿಷರ ವಿರುದ್ಧ ಚಳುವಳಿ ಮಾಡುತ್ತ ಹಿಂದುಗಡೆಯಿಂದ ದೋಸ್ತಿ ಜಾರಿಯಲ್ಲಿರಿಸಿಕೊಂಡ, ಲಾರ್ಡ್ ಮೌಂಟನ್ ಬ್ಯಾಟನ್ ನ ಹೆಂಡತಿಯ ಜೊತೆ ಪಸಂದಾದ ಪ್ರೇಮವನ್ನು ತೆರೆದುಕೊಂಡಿದ್ದ ಜವಾಹರಲಾಲ ನೆಹರು ಎಂಬುವವನು ಕಾಂಗ್ರೆಸ್ಸಿಗರಿಗೆ ದೇಶಭಕ್ತನಂತೆ, ಸ್ವಾತಂತ್ರ್ಯ ಸೇನಾನಿಯಂತೆ ಕಾಣುತ್ತಾನೆ.
ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಾವೇ ತಂದುಕೊಟ್ಟಿದ್ದೇವೆಂದು ನಂಬಿಸುತ್ತಿರುವ ನಾಯಕರಿಗೆ ಬೇರೆಯವರನ್ನು ದೇಶಭಕ್ತ ಎಂದು ಕರೆದರೆ ಚೇಳು ಕಡಿದಂತಾಗುತ್ತದೆ.

ಸದಾ ಷೋಕಿಲಾಲನಾಗಿ ಮೆರೆದ ನೆಹರು ಕಾಂಗ್ರೆಸ್ಸಿಗರಿಗೆ ಆದರ್ಶ. ನೆಹರುನೇ ಕಾಂಗ್ರೆಸ್ಸಿನ ಆತ್ಮ. ತಪ್ಪಿಲ್ಲ ಬಿಡಿ. ಅದು ಕಾಂಗ್ರೆಸ್ಸಿನ ಹಣೆಬರಹ,ಅದು ಅವರ
ಜಾಯಮಾನ. ಆದರೆ ಅವರಿಗೆ ಸಾವರ್ಕರರನ್ನು ಅವಮಾನಿಸಲು ಯಾವುದೇ ಅಧಿಕಾರವಿಲ್ಲ. 27 ವರ್ಷಗಳ ಕಾಲ ಕರಿನೀರ ಶಿಕ್ಷೆಯನ್ನು ಅನುಭವಿಸಿದ,ಭಾರತದ
ಮುಕ್ತಿಗೋಸ್ಕರ ಜೀವನವನ್ನೇ ಸಮರ್ಪಿಸಿದ ಸಾವರ್ಕರರನ್ನು ಅವಮಾನಿಸಿದರೆ ನಮ್ಮಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ.

ಸಾವರ್ಕರರು ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಗನ್-ಕ್ಯಾರೇಜ್ ಸಿಗದಂತೆ ನೆಹರೂ ಪೋಷಿತ ಸರಕಾರ ನೋಡಿಕೊಂಡಿತು.
ಸಂಸತ್ತಿನಲ್ಲಿ ಶ್ರದ್ಧಾಂಜಲಿಗೂ ಒಪ್ಪಲಿಲ್ಲ.ಇದಕ್ಕಿಂತ ಕೀಳು ಮನಸು ಇರಲು ಸಾಧ್ಯವೇ?

ಕ್ಷಮಿಸಿಬಿಡಿ ಸಾವರ್ಕರ ನಮ್ಮದೇ ತಪ್ಪು. ನಿಮ್ಮನ್ನು ಅವಮಾನಿಸಿದಾಗಲೇ,ನಾವು ಆ ದೇಶದ್ರೋಹಿಯ ಎದೆಯನ್ನು ಬಗೆದು ತೋರಣ ಕಟ್ಟಬೇಕಿತ್ತು ಆದರೆ ಷಂಡತನದ ಗುಲಾಮರಾಗಿ ಅದನ್ನು ಮಾಡಲಾಗಲಿಲ್ಲ.

ಪುಣ್ಯಪುರುಷನೊಬ್ಬನಿಗೆ ಸಹಜ ಸಾವನ್ನಾದರೂ ಕೊಡಲಾಗದ ಹತಾಶೆ ಭಾರತೀಯರನ್ನು ಬದುಕಿನುದ್ದಕ್ಕೂ ಕಾಡದೇ ಬಿಡದು!

-ಮಹೇಶ್

Tags

Related Articles

Close