ದೇಶದಲ್ಲಿ ಎಲ್ಲಿ ನೋಡಿದರಲ್ಲಿ ಜಾತಿಗೊಂದು ಸಮಾವೇಶ, ಪ್ರತ್ಯೇಕತೆಯ ಕೂಗು, ಆ ಜಾತಿ ಶ್ರೇಷ್ಟ ಈ ಜಾತಿ ಕನಿಷ್ಠ ಎಂಬ ಮೇಲು ಕೀಳು!!!
ಹೀಗೇ ನಾವು ಕಚ್ಚಾಡುತ್ತ ಕೂತರೆ ಹಿಂದುಗಳು ಒಂದಾಗೋದಾದರೂ ಯಾವಾಗ?
ದೇಶಕ್ಕಾಗಿ ವೀರಮಾತೆ ರಾಣಿ ಚೆನ್ನಮ್ಮ ಭಾರತಮಾತೆಯ ಪುತ್ರಿ, ಆಕೆಯ ಜಾತಿ ಹಿಂದೂ ಭಾರತೀಯ ಜಾತಿ ಅಂದುಕೊಂಡಿದ್ದೆ.. ಆದರೆ, ಆಕೆ ಲಿಂಗಾಯತ ಪಂಚಮಸಾಲಿ ಜಾತಿಯಂತ ಮೊನ್ನೆಯಷ್ಟೇ ಗೊತ್ತಾಯ್ತು.
ಹೈದರಾಲಿಯ ಸೈನಿಕರ ರುಂಡ ಚೆಂಡಾಡಿದ್ದ ವೀರವನಿತೆ ಓಬವ್ವ ಹಿಂದೂ ಭಾರತೀಯ ಜಾತಿ ಅಂದುಕೊಂಡಿದ್ದೆ.. ಆದರೆ, ಆಕೆ ದಲಿತೆ ಅಂತ ಮೊನ್ನೆಯಷ್ಟೇ ಗೊತ್ತಾಯ್ತು!!
ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ವೀರಮರಣವನ್ನಪ್ಪಿದ ಸಂಗೊಳ್ಳಿರಾಯಣ್ಣ ಹಿಂದೂ ಭಾರತೀಯ ಜಾತಿ ಅಂದುಕೊಂಡಿದ್ದೆ.. ಆದರೆ, ಆತನ ಜಾತಿ ಕುರುಬ ಅಂತ ಕೆಲ ತಿಂಗಳ ಹಿಂದೆಯಷ್ಟೇ ಗೊತ್ತಾಯ್ತು!!
ಜೀವನವಿಡೀ ಸ್ವರಾಜ್ಯಕ್ಕಾಗಿ ಅಕ್ಬರ್ ನ ವಿರುದ್ಧ ಹೋರಾಡಿ ಆತನಿಗೆ ಮಣ್ಣುಮುಕ್ಕಿಸಿದ್ದ ಮಹಾರಾಣಾ ಪ್ರತಾಪ ಸಿಂಗ್ ಹಿಂದೂ ಭಾರತೀಯ ಅಂದುಕೊಂಡಿದ್ದೆ.. ಆದರೆ, ಆತ ಕೇವಲ ರಜಪೂತ ರಾಜನಂತ ಇತಿಹಾಸದ ಪುಸ್ತಕದಲ್ಲಿ ಓದಿ ಅರ್ಥಮಾಡಿಕೊಂಡೆ!!!
ಹಿಂದವಿ ಸ್ವರಾಜ್ಯಕ್ಕಾಗಿ ಹೋರಾಡಿದ್ದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ರಾಜನೆಂದುಕೊಂಡಿದ್ದೆ.. ಆದರೆ, ಆತನಿಗೆ ಮರಾಠ ರಾಜ ಎಂಬ ಪಟ್ಟ ಕಟ್ಟಿ ಬಿಟ್ಟದನ್ನ ನೋಡಿದೆ!!
ಮಹಾರಾಜಾ ಸೂರಜಮಲ್ ನ್ನ ಕ್ಷಾತ್ರತೇಜಸ್ಸಿನ ಹಿಂದೂ ಭಾರತೀಯನೆಂದುಕೊಂಡಿದ್ದೆ.. ಆದರೆ, ಆತ ಜಾಟ್ ಸಮುದಾಯದವನೆಂಬ ಪಟ್ಟ ಕಟ್ಟಿದ್ದನ್ನ ನೋಡಿಬಿಟ್ಟೆ!!
ದೇಶವನ್ನ ಒಗ್ಗೂಡಿಸಿದ ಲೋಹಪುರುಷ ಸರ್ದಾರ್ ವಲ್ಲಭಭಾಯಿ ಪಟೇಲರನ್ನ ಹಿಂದೂ ಭಾರತೀಯನೆಂದುಕೊಂಡಿದ್ದೆ.. ಆದರೆ, ಅವರನ್ನ ಪಟೇಲ್/ಪಾಟೀದಾರ್ ಸಮುದಾಯಕ್ಕೆ ಸೀಮಿತಗೊಳಿಸಿಬಿಟ್ಟರು!!
ಜಗದ ಅಂಬೆ ಭವಾನಿ ಮಾತೆಯನ್ನ ಹಿಂದೂ ದೇವತೆ ಅಂದುಕೊಂಡಿದ್ದೆ.. ಆಕೆಗೆ ಮರಾಠಾ ದೇವತೆ ಅನ್ನೋ ಜಾತಿ ಕಟ್ಟಿಬಿಟ್ಟದ್ದನ್ನ ನೋಡಿದೆ!!
ಕರಣಿ ಮಾತೆ ಹಿಂದೂ ದೇವತೆ ಅಂದುಕೊಂಡಿದ್ದೆ.. ಆದರೆ, ಆಕೆ ಠಾಕೂರ್ ಸಮುದಾಯದ ದೇವತೆ ಅನ್ನೋದನ್ನ ಕೇಳ್ಪಟ್ಟೆ!!
ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದ ಮಹಾನ್ ಹಿಂದೂ ಸಂತ ಅಂದುಕೊಂಡಿದ್ದೆ.. ಆದರೆ, ವಾಲ್ಮೀಕಿ ಶೂದ್ರ ಮಾತ್ರ ಅಂತ ಕೇಳ್ಪಟ್ಟೆ!!
ಶ್ರೀ ರಾಮಪ್ರಭು ಹಿಂದೂ ಅಂದುಕೊಂಡಿದ್ದೆ.. ಆದರೆ, ಆತ ಕ್ಷತ್ರಿಯ ಕುಲಕ್ಕಷ್ಟೇ ಸೇರಿದವನಂತ ಈಗೀಗ ಅರ್ಥ ಮಾಡಿಕೊಂಡೆ!!
ಜಗತ್ತಿಗೇ ಭಗವದ್ಗೀತೆಯನ್ನ ಸಾರಿದ ಶ್ರೀಕೃಷ್ಣ ಹಿಂದೂ ಅಂದುಕೊಂಡಿದ್ದೆ.. ಆದರೆ, ಆತನನ್ನ ಕೇವಲ ಯಾದವ ಕುಲಕ್ಕೆ ಸೀಮಿತಗೊಳಿಸಿದ್ದನ್ನ ಕಂಡೆ!!
ಧರ್ಮರಕ್ಷಣೆಗಾಗಿ ಹೋರಾಡಿದ್ದ ವೀರ ತೇಜಾಜಿ ಹಿಂದೂ ಭಾರತೀಯ ಅಂದುಕೊಂಡಿದ್ದೆ.. ಆದರೆ, ಆತನನ್ನ ಕೇವಲ ಜಾಟ್ ಸಮುದಾಯಕ್ಕೆ ಸೀಮಿತಗೊಳಿಸಿದ್ದನ್ನ ಕಂಡೆ!!
ಭಗವಾನ್ ದೇವನಾರಾಯಣರು ಹಿಂದೂ ಸಂತ ಅಂದುಕೊಂಡಿದ್ದೆ.. ಆದರೆ, ಅವರು ಗುರ್ಜರ್ ಸಮುದಾಯಕ್ಕೇ ಮಾತ್ರ ಸೀಮಿತ ಅನ್ನೋದನ್ನೂ ಕಂಡೆ!!
ಭೋಲೆನಾಥ ಶಿವನನ್ನ ವನವಾಸಿಗನನ್ನಾಗಿಸಿ, ಮಹಿಷಾಸುರನನ್ನ ಹೀರೋ ಮಾಡಿಬಿಟ್ಟದ್ದನ್ನ ಕಂಡೆ!!
ರಾವಣ ದೇವರಾಗಿಸಿ, ರಾಮನನ್ನ, ಸೀತಾಮಾತೆಯನ್ನ ಕಡೆಗಣಿಸಿ, ತೇಜೋವಧೆ ಮಾಡಿದಂಥವರನ್ನ ಕಂಡಿಬಿಟ್ಟೆ!!
ಲೋಕಕಲ್ಯಾಣಕ್ಕಾಗಿ ದೇಶಪರ್ಯಟನೆ ಮಾಡಿ ಜ್ಞಾನ ಹಂಚಿದ ಶಂಕರಾಚಾರ್ಯರನ್ನ ಕೊಲೆಗಡುಕ ಅಂತ ಕರೆದವರನ್ನ ನೋಡಿಬಿಟ್ಟೆ!!
ಭಗವಾನ್ ಬುದ್ಧ ಕೇವಲ ಕರ್ಮಕಾಂಡಗಳ ವಿರೋಧಿಯಂತ ಬಿಂಬಿಸುತ್ತ ಹೊರಟವರನ್ನ ಕಂಡೆ!!
ಗುರುನಾನಕರು ಕೇವಲ ಸಿಖ್ಖರಿಗಾಗಿ ಸೀಮಿತರಾದರು!!
ಮಹಾವೀರರು ಕೇವಲ ಜೈನ ಪಂಥಕ್ಕೆ ಸೀಮಿತರಾಗಿಬಿಟ್ಟರು!!
ಪರಶುರಾಮ ಸನಾತನಿಯಾಗಿರದೆ ಕೇವಲ ಬ್ರಾಹ್ಮಣನಾಗಿಬಿಟ್ಟ!!
ಹೀಗೆಲ್ಲಾ ಜಾತಿ ಮತ ಪಂಥ ಅಂತ ಮಾಡುತ್ತ ನಾವು ಹಿಂದುಗಳು ನಮ್ಮ ಪತನದಂಚಿಗೇ ತಲುಪುತ್ತಿದ್ದೇವಾ ಅನ್ನೋ ಅನುಮಾನ ಕಾಡುತ್ತಿದೆ.
ಮೇಲೆ ಉದಾಹರಿಸಿದ ವ್ಯಕ್ತಿಗಳೆಲ್ಲಾ ದೇಶಕ್ಕಾಗಿ ಧರ್ಮಕ್ಕಾಗಿ ತಮ್ಮ ಜೀವನವನ್ನೇ ಸವಿಸಿದವರು ಅನ್ನೋದನ್ನ ನಾವು ಹಿಂದುಗಳು ಇನ್ಯಾವಾಗ ಅರ್ಥ
ಮಾಡಿಕೊಳ್ಳುವೆವೋ ಆ ದೇವರೇ ಬಲ್ಲ!!
ನೆನಪಿಡಿ ಸ್ನೇಹಿತರೇ, ನಾವು ಹೀಗೆ ಜಾತಿ ಜಾತಿ ಅಂತ ಪ್ರತ್ಯೇಕರಾಗುತ್ತ ಹೋದಂತೆ ವಿರೋಧಿಗಳ ಷಡ್ಯಂತ್ರ ಒಂದೊಂದು ಪ್ರತ್ಯೇಕ ಜಾತಿ ಮತ ಪಂಥವನ್ನೂ ಸಲೀಸಾಗಿ ಮುಗಿಸಿಬಿಡುವುದರಲ್ಲಿ ಸಂಶಯವೇ ಇಲ್ಲ.
ಹಿಂದೂ ವಿರೋಧಿ ಶಕ್ತಿಗಳು ನಮ್ಮನ್ನ ಒಡೆಯಲು ನೀನು ದಲಿತ ನೀನು ಲಿಂಗಾಯತ ನೀನು ಬ್ರಾಹ್ಮಣ ನೀನು ಕೆಳಜಾತಿಯವನು ನೀನು ಮೇಲ್ವರ್ಗದವನು ನೀನು ವನವಾಸಿಗ ನೀನು ಜಾಟ್ ನೀನು ಪಟೇಲ ನೀನು ಆ ಜಾತಿ ನೀನು ಈ ಜಾತಿ ಅಂತ ಒಡೆಯೋಕೆ ಸಾಕಷ್ಟು ಹುನ್ನಾರ ಮಾಡಿ ಈಗಾಗಲೇ ಹಿಂದೂ ಧರ್ಮಕ್ಕೆ ಬಹಳ ಡ್ಯಾಮೇಜ್ ಮಾಡಿದ್ದಾರೆ, ಅದನ್ನೇ ಮುಂದುವರೆಸಲಿದ್ದಾರೆ..!!
ಹಿಂದುಗಳಲ್ಲಿ ಜಾತಿಗಣತಿ ಮಾಡಿ ಆ ಜಾತಿಯವರೆಷ್ಟಿದಾರೆ ಈ ಜಾತಿಯವರೆಷ್ಟಿದಾರೆ ಅಂತ ಮಾಡಿ ಅನ್ಯಕೋಮಿನವರು ಅಂದರೆ ಮುಸ್ಲಿಂ ಕ್ರಿಶ್ಚಿಯನ್ನರಲ್ಲಿಯೂ ಇರೋ ಜಾತಿಗಳನ್ನ ಗಣತಿಯೇ ಮಾಡದೆ ಇರೋದು ಇವರ ಸೆಕ್ಯೂಲರಗಿರಿಯ ಪರಮಾವಧಿಯಾ?
ರಾಜ್ಯದಲ್ಲಿ ಅಲ್ಪಸಂಖ್ಯಾತರಂತ ಯಾರಿಗೆ ಇವರು ಇಂದು ಕರೀತಿದಾರೋ ಅವರದ್ದೇ ಜಾತಿಗಣತಿಯಲ್ಲಿ ಬಹುಸಂಖ್ಯಾತರಾಗಿ ಬಿಟ್ಟಿದ್ದಾರೆ.
ಕೇವಲ ಹಿಂದುಗಳಲ್ಲಷ್ಟೇ ಜಾತಿ ಇವೆ ಎಂದು ಕಂಡುಬರುವ ಸರ್ಕಾರಕ್ಕೆ ಇಸ್ಲಾಂ ನಲ್ಲಿ ಕ್ರಿಶ್ಚಿಯನ್ ಮತಗಳಲ್ಲಿರೋ ಪಂಗಡಗಳು, ಜಾತಿಗಳು ಮಾತ್ರ ಕಾಣೋದೆ ಇಲ್ಲ & ಅವುಗಳ ಸುದ್ದಿಗೇ ಹೋಗದೆ ಕೇವಲ ಹಿಂದುಗಳನ್ನಷ್ಟೇ ಒಡೆದು ಆಳುವವರಿಗೆ ತಕ್ಕ ಪಾಠ ಕಲಿಸಲೇಬೇಕಾಗಿದೆ.
ಇಲ್ಲವಾದರೆ ಹಿಂದೂ ಧರ್ಮವನ್ನ ಖಂಡತುಂಡಾಗಿ ಕತ್ತರಿಸಿ ದೇಶದಲ್ಲಿರುವ ಸೋ ಕಾಲ್ಡ್ ಅಲ್ಪಸಂಖ್ಯಾತರೇ ಮುಂದೆ ನಮ್ಮೆದರು ಬಹುಸಂಖ್ಯಾತರಾಗಿ ಕಾಡುವ ದಿನಗಳು ದೂರವಿಲ್ಲ ಸ್ನೇಹಿತರೇ.
ಚಿಕ್ಕವರಿದ್ದಾಗ ಕಥೆಯೊಂದನ್ನ ಕೇಳಿದ್ದೆವು, ಒಂದು ಸಣ್ಣ ಕಟ್ಟಿಗೆಯನ್ನ ಸಲೀಸಾಗಿ ಮುರಿಯಬಹುದು ಎರಡನ್ನೂ ಮುರಿಯಬಹುದು ಮೂರನ್ನೂ ಮುರಿಯಬಹುದು ಆದರೆ ಎಲ್ಲಾ ಕಟ್ಟಿಗೆಗಳನ್ನ ಒಂದಾಗಿ ಕಟ್ಟಿದರೆ ಅದನ್ನ ಮುರಿಯೋಕೆ ಎದುರಾಳಿಗೆ ಕಠಿಣಾತಿ ಕಠಿಣ ಬಲಪ್ರಯೋಗ ಮಾಡಬೇಕಾಗುತ್ತೆ!!
ಸಂಘಟಿತರಾಗಿ, ಒಂದಾಗಿರಿ!!!
ಹೇಳಿರಿ!! ನಾವೆಲ್ಲಾ ಹಿಂದು ನಾವೆಲ್ಲಾ ಬಂಧು ನಾವೆಲ್ಲಾ ಒಂದು!!!
ಭಾರತ್ ಮಾತಾ ಕೀ ಜೈ!!!
– Vinod Hindu Nationalist