ಅಂಕಣ

ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ, ಅತೀ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೊರೊನಾ ವಿರುದ್ಧ ಹೋರಾಟ ಹೇಗಿದೆ?

ದೇಶದಲ್ಲಿ ಕೊರೊನಾ ಅಟ್ಟಹಾಸ ಮೆರೆದ ಪರಿಣಾಮ ಇಡೀ ದೇಶ ಲಾಕ್‌ಡೌನ್ ಆಗಿತ್ತು. ಆದರೆ ಅದಕ್ಕಿಂತ ಮುಂಚಿತವಾಗಿಯೇ ಯೋಗಿ ಕೊರೋನವೈರಸ್ ವಿರುದ್ಧ ಹೋರಾಡಲು ಸಮಗ್ರ ಕಾರ್ಯತಂತ್ರವನ್ನು ರೂಪಿಸಿದ ಮೊದಲ ಮುಖ್ಯಮಂತ್ರಿ‌ ಆಗಿದ್ದರು. ಅದಕ್ಕಾಗಿಯೇ ದೂರದೂರಿನಿಂದ ವಲಸೆ ಕಾರ್ಮಿಕರನ್ನು ತಮ್ಮ ನಾಡಿಗೆ ಕರೆತರಲು ಸಾಕಷ್ಟು ಶ್ರಮಿಸಿದರು.

ಅಂದು ಮಾರ್ಚ್ 27. ಉತ್ತರ ಪ್ರದೇಶದ ಸನ್ಯಾಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನವರಾತ್ರಿ ಉಪವಾಸದ ಮೂರನೇ ದಿನದಲ್ಲಿದ್ದರು.
ಕಾರ್ಮಿಕರ ಬಗ್ಗೆ ಆದಿತ್ಯನಾಥ್ ಅವರ ಆತಂಕವು ಪ್ರತಿ ನಿಮಿಷಕ್ಕೂ ಏರುತ್ತಲೇ ಇತ್ತು. ಆಗ ಅವರ ಕಿವಿಗೆ ಸುದ್ದಿಯೊಂದು ಕೇಳಿಬಂತು. ಆ ಸುದ್ದಿ ಬಂದಿದ್ದು ಅದೇ ದಿನ ಮಧ್ಯರಾತ್ರಿ. ದೆಹಲಿಯಲ್ಲಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆಂಬ ಸುದ್ದಿ.

ದೆಹಲಿಯಿಂದ ಉತ್ತರ ಪ್ರದೇಶದ (ಯುಪಿ)ವರೆಗೆ ಕಾರ್ಮಿಕರು ದೂರದ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ಹೋಗುವುದು ಅವರ ಆತಂಕಕ್ಕೆ ಸಾಕಷ್ಟು ಕಾರಣವಾಯಿತಲ್ಲದೆ, ಯುಪಿ ಗಡಿಯಲ್ಲಿ ಡಿಟಿಸಿ ಬಸ್ಸುಗಳಿಂದ ಜನರನ್ನು ಎಸೆಯಲಾಗುತ್ತಿದೆ ಎಂಬ ವರದಿಗಳಿಂದ ಮತ್ತಷ್ಟು ಆತಂಕಗೊಂಡರು.

ಇದನ್ನು ಸವಾಲಾಗಿ ಸ್ವೀಕರಿಸಿದ ಯೋಗೀಜಿ ಒಂದು ಆಜ್ಞೆ ಹೊರಡಿಸಿದರು. ನೋಯ್ಡಾ, ಬುಲಂದ್‌ಶಹರ್, ಗಾಜಿಯಾಬಾದ್, ಹಾಪುರ ಮತ್ತು ಅಲಿಗರ್ ದಿಂದ 1,000 ಬಸ್‌ಗಳನ್ನು ಸಜ್ಜಾಗಿರುವಂತೆ ಸೂಚಿಸಿದರು.

ಚಾಲಕರು, ಕಂಡಕ್ಟರ್‌ಗಳು ಮತ್ತು ಸಾರಿಗೆ ಅಧಿಕಾರಿಗಳನ್ನು ಮಧ್ಯರಾತ್ರಿಯೇ ನಿದ್ರೆಯಿಂದ ಎಚ್ಚರಿಸಿದರು. ಗೌತಮ್ ಬುದ್ಧ ನಗರ ಮತ್ತು ಗಾಜಿಯಾಬಾದ್ ಅಧಿಕಾರಿಗಳ ತಂಡದ ಸಹಾಯದಿಂದ ಈ ಕಾರ್ಮಿಕರನ್ನು ಯುಪಿಯ ವಿವಿಧ ಸ್ಥಳಗಳಿಗೆ ಸಾಗಿಸಲು ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಕೆಲವು ಬಸ್ಸುಗಳು ಪ್ರಯಾಣಿಕರನ್ನು ನೆರೆಯ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬಿಹಾರಕ್ಕೆ ಇಳಿಸಿ ಬಂದವು. ಪಾಟ್ನಾದ ಗಾಂಧಿ ಮೈದಾನದಲ್ಲಿ ಅತಿ ಉದ್ದದ ಬಸ್ ಪ್ರಯಾಣ ಕೊನೆಗೊಂಡಿತು. ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಬಾರದೆ ನಿದ್ದೆ ಮಾಡಲೇ ಇಲ್ಲ ಯೋಗೀಜಿ.

ಸಾಕಷ್ಟು ಜನಸಂಖ್ಯೆ ಹೊಂದಿರುವ ಯುಪಿಯಲ್ಲಿ ಮರುದಿನ ಇನ್ನೊಂದು ಸವಾಲು ಯೋಗೀಜಿಗೆ ಎದುರಾಗಿತ್ತು. ಏಕೆಂದರೆ ಅಲ್ಲಲ್ಲಿ ಸಾವಿರರು ಜನರು ರಸ್ತೆಗಳಿಗೆ ಬಂದಿದ್ದರು. ಲಾಕ್‌ಡೌನ್‌ನ ಉದ್ದೇಶವನ್ನೇ ಅಣಕಿಸುವ ರೀತಿಯಲ್ಲಿ ಜನರು ಬೀದಿಗಿಳಿದಿದ್ದರು.

ಆಗ ಯೋಗೀಜೀ ಸಮರೋಪಾದಿಯಲ್ಲಿ ಕೆಲಸ‌ಮಾಡಿದರು. ಸ್ವತಃ ಬೀದಿಗಿಳಿದ ಯೋಗಿ ಜನರನ್ನು ನೇರವಾಗಿ ಸಂಪರ್ಕಿಸಿದರು. ಅದಕ್ಕಿಂತಲೂ ಮುಖ್ಯವಾಗಿ ಕ್ವಾರಂಟೈನ್‌ನಲ್ಲಿದ್ದ ಜನರು ಬೀದಿಗಿಳಿದಿರುವುದು ಆತಂಕಕ್ಕೆ ಕಾರಣವಾಗಿತ್ತಲ್ಲದೆ ಕೊರೊನಾ ಸಾಮೂಹಿಕವಾಗಿ ಹರಡುವ ಭೀತಿಯೂ ಇತ್ತು.

ಕ್ವಾರಂಟೈನ್‌ನಲ್ಲಿದ್ದ ಪ್ರತಿಯೊಬ್ಬರನ್ನೂ ಸಂಪರ್ಕಿಸಿ ಅವರಿಗೆ ಶಾಲೆಗಳು, ಕಾಲೇಜುಗಳು ಮತ್ತು ಚೌಲ್ಟ್ರಿಗಳಲ್ಲಿ ಉಳಿಸಲು ವ್ಯವಸ್ಥೆ ಮಾಡಿ ಉನ್ನತ ಸೌಲಭ್ಯಗಳನ್ನು ಒದಗಿಸಲಾಯಿತು. ನೆನಪಿಡಿ ಇದು ಕೇವಲ 36 ಗಂಟೆಗಳಲ್ಲಿ ನಡೆದ ಕಾರ್ಯಾಚರಣೆಯಾಗಿತ್ತು.

ನವಭಾರತ್ ಟೈಮ್ಸ್‌ನ ವರದಿಯ ಪ್ರಕಾರ, ಈ ಬಿಕ್ಕಟ್ಟಿನಲ್ಲಿ ಅಂದಾಜು 1.5 ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಮನೆಗೆ ಸಾಗಿಸಲಾಯಿತು. ಕೆಲವು ಬಸ್ಸುಗಳು ಹಲವಾರು ಪ್ರಯಾಣಗಳನ್ನು ಮಾಡಿವೆ. ಒಟ್ಟಾರೆಯಾಗಿ, ದೆಹಲಿಯಲ್ಲಿದ್ದ 3 ಲಕ್ಷ ಕಾರ್ಮಿಕರನ್ನು ಮನೆಯಿಂದ ಕರೆಸಿ‌ ಹೋಂ ಕ್ವಾರಂಟೈನ್‌ನಲ್ಲಿರಿಸಿದರೆ ಶಂಕಿತ‌ ಸೋಂಕಿತರಿಗೆ ಸರಕಾರಿ ಸೌಲಭ್ಯ ಒದಗಿಸಲಾಗಿದೆ.

ಭಾರತಕ್ಕೆ ಲಾಕ್‌ಡೌನ್ ಎನ್ನುವುದು ನಿಜಕ್ಕೂ ಅನಿರೀಕ್ಷಿತ. ಅದರಲ್ಲೂ ಯುಪಿಗಂತೂ ಅನಿರೀಕ್ಷಿತ ಬೆಳವಣಿಗೆ. ಬಹುಶಃ ದೆಹಲಿಯಲ್ಲಿನ ತಬ್ಲಿಘಿಗಳ ಕಿಡಿಗೇಡಿತನದ ಪರಿಣಾಮವಾಗಿ ಯುಪಿ ಕಾರ್ಮಿಕರ ಸಾಮೂಹಿಕ ವಲಸೆ ಯುಪಿ ಆಡಳಿತಕ್ಕೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.‌ ಇಂಥಾ ಸಂದರ್ಭ ಅಲ್ಲಿನ ಮುಖ್ಯಮಂತ್ರಿ ಯ ದಕ್ಷತೆ ನೆರವಿಗೆ ಬರುತ್ತದೆ. ಅದಕ್ಕಾಗಿಯೇ ಯೋಗಿ ವೇಗವಾಗಿ ಕಾರ್ಯತಂತ್ರ ಹೆಣೆದಿದ್ದರು.

ಬಹುಶಹ ಯೋಗಿಯವರ ಆರನೇ ಕಣ್ಣು ಕೆಲಸ. ಮಾಡುತ್ತದೋ ಏನೋ?
ಯಾಕೆಂದರೆ ಜನವರಿಯ ಕೊನೆಯ ವಾರದಲ್ಲಿ, ಚೀನೀ ವೈರಸ್ ಪ್ರಕರಣಗಳು ಕೇರಳದಲ್ಲಿ ವರದಿಯಾಗುತ್ತಿರುವಾಗ, ಯುಪಿ ಆಡಳಿತವು ವೈದ್ಯಕೀಯ ಅಧಿಕಾರಿಗಳು ಮತ್ತು ಶುಶ್ರೂಷಾ ಸಿಬ್ಬಂದಿಗೆ ತರಬೇತಿ ನೀಡಲು ವೇಳಾಪಟ್ಟಿಯನ್ನು ಸಿದ್ಧಪಡಿಸಿತು. ಫೆಬ್ರವರಿ 1 ರಂದೇ, ರಾಜ್ಯವು ತನ್ನ ಮೊದಲ ಕೊರೋನವೈರಸ್ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಿತು.

‘ಹಾಟ್‌ಸ್ಪಾಟ್‌ಗಳು’ ಎಂಬ ಪದವು ಯುಪಿ ಆಡಳಿತದ ಒಂದು ಹೊಸ ಕಲ್ಪನೆಯಾಗಿತ್ತು. ಆರು ಅಥವಾ ಹೆಚ್ಚಿನ ಪ್ರಕರಣಗಳನ್ನು ಹೊಂದಿರುವ ಯಾವುದೇ ಕ್ಲಸ್ಟರ್ ಅನ್ನು ಹಾಟ್ಸ್ಪಾಟ್ ಎಂದು ಕರೆಯಲಾಗುತ್ತದೆ. ಈ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಮತ್ತು ದೈನಂದಿನ ಅಗತ್ಯತೆಗಳು ಮತ್ತು ವೈದ್ಯಕೀಯ ಸರಬರಾಜಿಗಾಗಿ ಸರಕು ಸಾಗಾಟ ವಾಹನಗಳನ್ನು ಬಳಸಲಾಗುತ್ತದೆ‌.

ಲಾಕ್‌ಡೌನ್‌ಗೆ ಒಂದು ವಾರದ ಮೊದಲು ಮಾರ್ಚ್ 17 ರ ಹೊತ್ತಿಗೆ ಯುಪಿ ಮುಖ್ಯ ಕಾರ್ಯದರ್ಶಿ ಮಂಡಿ ಪರಿಷತ್‌ನ ಸಿಬ್ಬಂದಿಗೆ ಅಂತಿಮ ಸಿದ್ಧತೆ ನಡೆಸುವಂತೆ ಪತ್ರ ಬರೆದಿದ್ದರು. ಖಾಸಗಿ ಆಸ್ಪತ್ರೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಮಾರ್ಚ್ ಎರಡನೇ ವಾರದಲ್ಲೇ ಸನ್ನದ್ದವಾಗಿರುವಂತೆ ತಿಳಿಸಲಾಗಿತ್ತು.

ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಪರಿಹಾರ ವಿತರಿಸುವಲ್ಲಿ ಉತ್ತರ ಪ್ರದೇಶ ಮೊದಲಿನಿಂದಲೂ ಕಾರ್ಯಪ್ರವೃತ್ತವಾಗಿದೆ. ಸುಮಾರು 20.37 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು 15 ಲಕ್ಷ ಬೀದಿ ಬದಿ ವ್ಯಾಪಾರಿಗಳು, ಚಾಲಕರು, ಗುತ್ತಿಗೆ ಕಾರ್ಮಿಕರು ಮತ್ತು ಮಂಡಿಗಳ ಕೂಲಿಗಳಿಗೆ ತಲಾ 1,000 ರೂ.ನಂತೆ 611 ಕೋಟಿ ರೂ.ಗಳನ್ನು ಎಂಎನ್‌ಆರ್‌ಇಜಿಎ ಖಾತೆಗೆ ವರ್ಗಾಯಿಸಲಾಗಿದೆ. ಒಟ್ಟು 83 ಲಕ್ಷ ಮಂದಿ ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವೆ ಪಿಂಚಣಿದಾರರು ತಮ್ಮ ಏಪ್ರಿಲ್ ಮತ್ತು ಮೇ ತಿಂಗಳಿನ ಪಿಂಚಣಿಗಳನ್ನು ಮುಂಚಿತವಾಗಿ ಸ್ವೀಕರಿಸಿದ್ದಾರೆ

ರಾಜ್ಯದ 35,638,450 ಪಡಿತರ ಚೀಟಿ ಹೊಂದಿರುವವರಲ್ಲಿ 27,357,149 ಮಂದಿ ಏಪ್ರಿಲ್ 14 ರವರೆಗಿನ ಪಡಿತರವನ್ನು ಪಡೆದಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯ ಸರ್ಕಾರ ತಲಾ 2,000 ರೂ.ಗಳಂತೆ 1.85 ಕೋಟಿ ರೈತರ ಖಾತೆಗಳಲ್ಲಿ ಒಟ್ಟು 3,700 ಕೋಟಿ ರೂ. ಜಮಾ ಮಾಡಿದೆ. ಹಣಕಾಸಿನ ವರ್ಷದ ಅಂತ್ಯದ ವೇಳೆಗೆ ಬರಬೇಕಾದ ಬೆಳೆ ಸಾಲ ಮರುಪಾವತಿಯನ್ನು ಮೇ 31 ಕ್ಕೆ ಮುಂದೂಡಲಾಗಿದೆ.

ಸಾಂಕ್ರಾಮಿಕ ರೋಗವನ್ನು ಪರಿಹರಿಸಲು ನಿರ್ದಿಷ್ಟ ಅವಧಿಗೆ ‘ಟೀಂ-11’ ಅನ್ನು ರಚಿಸಿದೆ. ಉನ್ನತ ಅಧಿಕಾರಿಗಳು ನೇತೃತ್ವ ವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ದೈನಂದಿನ ಅಗತ್ಯತೆಗಳ ಪೂರೈಕೆಯನ್ನು ಖಾತರಿಪಡಿಸುವುದು, ಅಗತ್ಯ ಮಾಹಿತಿ, ಸ್ವಚ್ಛತೆ ಮತ್ತು ನೈರ್ಮಲ್ಯ, ದನಗಳಿಗೆ ಮೇವು, ಆರ್ಥಿಕ ಕಾರ್ಯಪಡೆ, ಜೈಲು, ನೈರ್ಮಲ್ಯ ಮತ್ತು ಆರೋಗ್ಯ , ಆಸ್ಪತ್ರೆಗಳು ಮತ್ತು ಕೃಷಿಯ ಮೇಲ್ವಿಚಾರಣೆ ಮಾಡುವುದು ಈ ತಂಡದ ಕೆಲಸ.

ಮೂಲಸೌಕರ್ಯ ಮತ್ತು ಕೈಗಾರಿಕೆಗಳ ಅಭಿವೃದ್ಧಿಯ ನಿರ್ದೇಶಕರ ಅಡಿಯಲ್ಲಿರುವ ಒಂದು ಪ್ರಮುಖ ತಂಡವು ಲಾಕ್‌ಡೌನ್ ಅವಧಿಯವರೆಗೆ ಕಾರ್ಮಿಕರಿಗೆ ವೇತನ ಮತ್ತು ವೇತನವನ್ನು ಸಕಾಲಿಕವಾಗಿ ಪಾವತಿಯಾಗುವಂತೆ ನೋಡಿಕೊಳ್ಳುತ್ತದೆ. ಕಾರ್ಮಿಕರ ಹಾಗೂ ಕಂಪನಿಯವರ ನಿರಂತರ ಸಂವಹನದ ಪರಿಣಾಮವಾಗಿ, ಏಪ್ರಿಲ್ 13 ರವರೆಗೆ, ರಾಜ್ಯದಾದ್ಯಂತ 29,363 ಕೈಗಾರಿಕಾ ಘಟಕಗಳಲ್ಲಿ, 26,644 ಮಂದಿ ಉದ್ಯೋಗಿಗಳಿಗೆ ವೇತನವನ್ನು ಮೊದಲೇ ಪಾವತಿಸಲಾಗಿದೆ.

ಮುಖ್ಯಮಂತ್ರಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳಲು ಆಡಳಿತಕ್ಕೆ ಪದೇ ಪದೇ ನಿರ್ದೇಶನ ನೀಡುತ್ತಿದ್ದಾರೆ. ಇದಕ್ಕಾಗಿಯೇ ಯೋಗಿ ತಮ್ಮ ದಿನದ ಹೆಚ್ಚಿನ ಸಮಯವನ್ನು ಇದಕ್ಕಾಗಿಯೇ ಮೀಸಲಿರಿಸಿದ್ದಾರೆ.

ಏಪ್ರಿಲ್ 14 ರ ಹೊತ್ತಿಗೆ, 796 ಸರ್ಕಾರಿ ಮತ್ತು 1,989 ಸ್ವಯಂಪ್ರೇರಿತವಾಗಿ ಸುಮಾರು 1,235,317 ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿವೆ. ಹಾಟ್‌ಸ್ಪಾಟ್ ಪ್ರದೇಶಗಳಿಗೆ ಅಗತ್ಯ ಸಾಮಗ್ರಿಗಳ ವಿತರಣೆಗಾಗಿ, 509 ಹಾಲಿನ ವ್ಯಾನ್‌ಗಳು ಮತ್ತು 978 ದಿನಸಿ‌ ಸಾಮಗ್ರಿ ವಾಹನಗಳನ್ನು ಬಳಸಲಾಗುತ್ತಿದೆ. ಒಟ್ಟು 1,211 ಮಂದಿ ವ್ಯಕ್ತಿಗಳು, 108 ಭಾಗಗಳ 902 ಮಳಿಗೆಗಳಿಂದ 125 ಹಾಟ್‌ಸ್ಪಾಟ್ ಪ್ರದೇಶಗಳಿಗೆ ಅಗತ್ಯ‌ ಸಾಮಗ್ರಿಗಳನ್ನು ಪೂರೈಸುತ್ತಿವೆ.

ಪ್ರತಿದಿನ ಸುಮಾರು 220 ಸಮಿತಿಗಳು ಪ್ರದೇಶವನ್ನು ಸ್ವಚ್ಚಗೊಳಿಸುತ್ತದೆ. ಸ್ಯಾನಿಟೈಸರ್, ಕೈತೊಳೆಸುವುದು ಸೇರಿ ಸ್ವಚ್ಚತೆ ಕಾಪಾಡುವುದು ಇದರ ಗುರಿ.

ಚಿಲ್ಲರೆ ಗ್ರಾಹಕರಿಗೆ ಮಂಡಿಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ದೊಡ್ಡ ನಗರಗಳಲ್ಲಿ ಕೆಲವು ಮಂಡಿಗಳ ಸಮಯವನ್ನು ಮಧ್ಯರಾತ್ರಿಯಿಂದ ಬೆಳಿಗ್ಗೆ 7 ಕ್ಕೆ ಬದಲಾಯಿಸಲಾಗಿದೆ. ರಾಜ್ಯಾದ್ಯಂತ ಸುಮಾರು 40,000 ಮಾರಾಟಗಾರರಿಗೆ ತಳ್ಳುವ ಬಂಡಿಗಳು ಮತ್ತು ಯಾಂತ್ರಿಕೃತ ಬಂಡಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಅಧಿಕಾರ ನೀಡಲಾಗಿದೆ.

ಆದಿತ್ಯನಾಥ್ ಅವರ ಆಡಳಿತದ ಪ್ರಯತ್ನದ ಫಲವಾಗಿ ಭಾರತದ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಉತ್ತಮ‌ ಕೆಲಸ ನಿರ್ವಹಿಸಲಾಗಿದೆ. ಆರೋಗ್ಯ ಸೌಲಭ್ಯಗಳನ್ನು ನಿರಂತರವಾಗಿ ನವೀಕರಿಸಲಾಗುತ್ತಿದೆ. ಕಳೆದ 10 ದಿನಗಳಲ್ಲಿ ವೆಂಟಿಲೇಟರ್‌ಗಳ ಸಂಖ್ಯೆಯನ್ನು 750 ರಿಂದ 931 ಕ್ಕೆ ಮತ್ತು ಪ್ರತ್ಯೇಕ ಹಾಸಿಗೆಗಳು 5,767 ರಿಂದ 9,442 ಕ್ಕೆ ಹೆಚ್ಚಿಸಲಾಗಿದೆ.

ದೊಡ್ಡ ನಗರಗಳು ಮತ್ತು ಪಟ್ಟಣಗಳಲ್ಲಿ ಆಸ್ಪತ್ರೆ, ಲ್ಯಾಬ್, ರಕ್ಷಣಾ ಕಿಟ್, ಪಿಪಿಇ ವ್ಯವಸ್ಥೆಗೊಳಿಸಲಾಗಿದೆ. 99 ಘಟಕಗಳು ರಾಜ್ಯದಲ್ಲಿ ಸ್ಯಾನಿಟೈಸರ್ ತಯಾರಿಸುತ್ತಿವೆ. ಸರ್ಕಾರ ಮಾರುತಿ ಸುಜುಕಿಯ‌ ಜಂಟಿ ಸಹಭಾಗಿತ್ವದಿಂದ 10,000 ವೆಂಟಿಲೇಟರ್‌ಗಳನ್ನು ತಯಾರಿಸಲಾಗಿದೆ.

ಚೀನಾದ‌ ಬಗ್ಗೆ ಇಡೀ ವಿಶ್ವವೇ ತಿರುಗಿ ಬಿದ್ದಿರುವುದರಿಂದ ಭಾರತ ಹೂಡಿಕೆ ಸ್ಥಳವಾಗುವ ದೂರದೃಷ್ಟಿಯಿಂದ ರಾಜ್ಯದಲ್ಲಿ ಹೂಡಿಕೆ‌ಮಾಡುವಂತೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮನವಿ ಮಾಡಿದೆ.

ತಲೆನೋವಾಗಿರುವ ತಬ್ಲಿಘಿಗಳನ್ನು ಪತ್ತೆಹಚ್ಚಿ ಅವರ ದುಷ್ಕೃತ್ಯಕನುಗುಣವಾಗಿ ಶಿಕ್ಷೆ ವಿಧಿಸಲು ಸೂಚಿಸಲಾಗಿದೆ. ಯುಪಿ ಪೊಲೀಸರು ನೇಪಾಳದ 10 ಆಗ್ರಾ ನಿವಾಸಿ ಜಮಾತಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರ ವಿರುದ್ಧ ದರೋಡೆಕೋರರ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಷ್ಟು ಗಂಭೀರವಾದ ಪ್ರಕರಣ ದಾಖಲಿಸಲಾಗಿದೆ.

ಈವರೆಗೆ 2,461 ಜಮಾತಿಗಳನ್ನು ಗುರುತಿಸಲಾಗಿದೆ ಮತ್ತು 2,267 ಜನರನ್ನು ಬಂಧಿಸಲಾಗಿದೆ. ನಾಪತ್ತೆಯಾದ ಜಮಾತಿಗಳನ್ನು ಪತ್ತೆ ಹಚ್ಚಲು ಪೊಲೀಸರು ಎಲೆಕ್ಟ್ರಾನಿಕ್ ಕಣ್ಗಾವಲು ಯಂತ್ರ ಬಳಸಿದ್ದಾರೆ. ಅವರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 259 ವಿದೇಶಿ ಜಮಾತಿಗಳ ಪಾಸ್‌ಪೋರ್ಟ್‌ಗಳನ್ನು ನಿರ್ಬಂಧಿಸಲಾಗಿದೆ ಮತ್ತು ಅವರ ವಿರುದ್ಧ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಒಟ್ಟಾರೆಯಾಗಿ, ಯುಪಿ ಪೊಲೀಸರು ಲಾಕ್ಡೌನ್ ಉಲ್ಲಂಘನೆಗಾಗಿ 42,359 ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು ನಿಯಮ ಉಲ್ಲಂಘಿಸಿದ ವಾಹನಗಳಿಂದ 5.87 ಕೋಟಿ ರೂ. ಸಂಗ್ರಹಿಸಿದ್ದಾರೆ.

ಸುಳ್ಳು ಸುದ್ದಿಯ ಮೂಲಕ ಯೋಗಿ ಸರಕಾರವನ್ನು ಅಣಕಿಸುವ ಕಾರ್ಯದಲ್ಲಿ ಗುಲಾಮರು ನಿರಂತರವಾಗಿ ತೊಡಗಿದ್ದಾರೆ. ಗಂಡನ ಹಿಂಸೆಯಿಂದ ಹೆಣ್ಣೊಬ್ಬಳು ಮಕ್ಕಳನ್ನು ಗಂಗಾ‌ನದಿಗೆ ಎಸೆದ ಪ್ರಕರಣವನ್ನು ಮುಂದಿಟ್ಟು ಊಟಕ್ಕಿಲ್ಲದೆ ನದಿಗೆಸೆದಳು ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಭಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಸಾಮರ್ಥ್ಯವನ್ನು ಪರೀಕ್ಷಿಸುವ ಪರೀಕ್ಷೆಯಲ್ಲಿ ಯೋಗಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ ಎನ್ನಬಹುದು.

Tags

Related Articles

FOR DAILY ALERTS
Close