ದೇಶಪ್ರಚಲಿತ

ದೇಶದ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯ ಕಾರ್ಯಕರ್ತರಿಗೆ ಮತ್ತು ಮೋದಿಯ ಅಭಿಮಾನಿಗಳಿಗೆ ‘ಸೊಂಟದ ಕೆಳಗಿನ ಪದವನ್ನು’ ಉಪಯೋಗಿಸಿದ, ಕರ್ನಾಟಕದ ಉಸ್ತುವಾರಿಯಾಗಿದ್ದ, ಈಗ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿರುವ ನಾಯಕ!!

ವಿವಾದಾತ್ಮಕ ಇಸ್ಲಾಂ ಧರ್ಮಪ್ರಚಾರಕ ಜಾಕಿರ್ ನಾಯಕ್ ಜೊತೆಗೆ ವೇದಿಕೆ ಹಂಚಿಕೊಂಡು ವಿವಾದಕ್ಕೆ ಕಾರಣರಾಗಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ!! ಇವರು ವಿವಾದಗಳನ್ನು ಸೃಷ್ಟಿ ಮಾಡುವುದೇ ಒಂದು ಹೊಸ ಟ್ರೆಂಡ್ ಅಂದುಕೊಂಡಿದ್ದಾರೊ ಗೊತ್ತಿಲ್ಲ!!! ಆದರೆ ವಿವಾದಗಳನ್ನು ಸೃಷ್ಟಿಸುವುದರಲ್ಲಿ ಎತ್ತಿದ ಕೈ ಎಂದೆನಿಸಿಕೊಂಡಿದ್ದಾರೆ ದಿಗ್ವಿಜಯ್ ಸಿಂಗ್!!!

ಪ್ರತೀ ಬಾರೀ ಒಂದಲ್ಲ ಒಂದು ರೀತಿಯಲ್ಲಿ ಅವಹೇಳನಕಾರಿಯಾದ ಪದಗಳನ್ನು ಉಪಯೋಗಿಸಿ ವಿವಾದದ ಅಲೆಯನ್ನು ಎಬ್ಬಿಸುತ್ತಿದ್ದಾರೆ ದಿಗ್ವಿಜಯ್ ಸಿಂಗ್. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.

ಆರ್‍ಎಸ್‍ಎಸ್ ಬಗ್ಗೆ ಅವಹೇಳಕಾರಿಯಾಗಿ ಮಾತಾನಾಡುವ ದಿಗ್ವಿಜಯ ಸಿಂಗ್, ಈಗಾಗಲೇ ಆರ್‍ಎಸ್‍ಎಸ್ ದೇಶವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದೆ, ಅಷ್ಟೇ ಅಲ್ಲದೇ ಬಿಜೆಪಿ, ಕೋಮುಗಲಭೆಯನ್ನು ಹುಟ್ಟುಹಾಕುವ ಹುನ್ನಾರ ನಡೆಸಿದೆ ಎಂದೆಲ್ಲಾ ಹೇಳಿ, ತಮ್ಮನ್ನು ತಾವೇ ಪ್ರಚಾರವನ್ನು ಕೊಟ್ಟಿರುವ ಕಾಂಗ್ರೆಸ್ ನಾಯಕ ಪೈಕಿಗಳಲ್ಲಿ ಒಬ್ಬರೆನಿಸಿದ್ದಾರೆ. ತಾವೇ ಗಲಭೆ ಮಾಡಿಸಿ ಅದನ್ನು ಬಿಜೆಪಿ ತಲೆಗೆ ಕಟ್ಟುವವ ಕುತಂತ್ರವನ್ನು ಮಾಡಿದ್ದಲ್ಲದೇ, ಪ್ರಚೋದನಕಾರಿ ಹೇಳಿಕೆ ನೀಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು.

ನಿಜವಾದ ದೇಶವಿರೋಧಿ ಚಟುವಟಿಕೆಗಳನ್ನು ಹೊಂದಿರುವವರ ಬಗ್ಗೆ ಯಾವುದೇ ರೀತಿಯ ಮಾತನ್ನು ಆಡದೇ ಅವರ ಬೆಂಬಲಕ್ಕೆ ನಿಂತಿರುವ ಇವರು,
ಪ್ರಾಮಾಣಿಕರನ್ನು ಕಾಲೆಳೆಯುವುದರಲ್ಲಿ ನಿಸ್ಸೀಮರು. ತಾವು ದೇಶವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದೇನೆ ಎನ್ನುವುದನ್ನು ಮರೆತಿದ್ದಾರೋ ಹೇಗೋ
ಗೊತ್ತಿಲ್ಲ. ಆದರೆ ಇದೀಗಾ ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹಾಕಿರುವ ಟ್ವೀಟ್ ವಿವಾದವನ್ನು ಎಬ್ಬಿಸಿದೆ. ದಿಗ್ವಿಜಯ್ ಸಿಂಗ್, ಇಂದು
ಬೆಳಗ್ಗೆ ಮೀಮ್ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಅಶ್ಲೀಲ ಪದಗಳನ್ನು ಬಳಸಲಾಗಿದೆ.

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ದ ಆಕ್ಷೇಪಣಕಾರಿ ಮಾತುಗಳಿರುವ ಪೆÇೀಸ್ಟ್ ಒಂದನ್ನು ಸಾಮಾಜಿಕ
ಜಾಲತಾಣದ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಇದೀಗ ಹೊಸ ವಿವಾದ ಅಲೆಯನ್ನು ಎಬ್ಬಿಸಲು ಶುರುಮಾಡಿದಂತಿದೆ. ಈಗಾಗಲೇ ದಿಗ್ವಿಜಯ ಸಿಂಗ್, ಪ್ರಧಾನಿ
ಮೋದಿಯವರ ಬೆಂಬಲಿಗರ ವಿರುದ್ಧ ಸಾಮಾಜಿಕ ತಾಣದಲ್ಲಿ ಅವಹೇಳನಕಾರಿ ಪದವನ್ನು ಬರೆದುಕೊಂಡು ವಿವಾದವನ್ನು ಮಾಡಿಕೊಂಡಿದ್ದಲ್ಲದೇ, ತಮ್ಮನ್ನು ತಾವು ಒಳ್ಳೆಯವರು ಎನ್ನುವ ಚಿತ್ರಣವನ್ನು ಅವರೇ ನೀಡುತ್ತಿರುವುದು ಮಾತ್ರ ಹಾಸ್ಯಸ್ಪದ!!!

ದಿಗ್ವಿಜಯ ಅವರು ಪೆÇೀಸ್ಟ್ ಮಾಡಿದ ಸಂದೇಶದಲ್ಲಿ ಪ್ರಧಾನಿ ಮೋದಿಯ ಚಿತ್ರವಿದ್ದು ಅದರ ಮುಂದೆ “ನನ್ನ ಸಾಧನೆಗಳು 1) ಭಕ್ತೋಂಕೋ ಚೂ** ಬನಾಯ
2.)ಚೂ*** ಕೊ ಭಕ್ತ್ ಬನಾಯ” ಎಂದು ಬರೆಯಲಾಗಿದೆ. ಅಷ್ಟು ಮಾತ್ರವಲ್ಲದೇ “ಇದು ನನ್ನದಲ್ಲ ಆದರೆ ಅದನ್ನು ಪೆÇೀಸ್ಟ್ ಮಾಡಿದವರಿಗೆ ಸಹಾಯ ಆಗದು,
ಸಂಬಂಧಪಟ್ಟ ವ್ಯಕ್ತಿಗೆ ನನ್ನ ಕ್ಷಮೆಯಾಚಿಸುತ್ತೇವೆ, ಅವರು ಮೂರ್ಖನಾಗುವ ಕಲೆಯಲ್ಲಿ ಪಳಗಿದ್ದಾರೆ!” ಎಂದು ಸಿಂಗ್ ಅದಕ್ಕೆ ತಲೆಬರಹ ಸೇರಿಸಿದ್ದಾರೆ. ಅಲ್ಲದೇ
ಪ್ರಧಾನಿ ಮೋದಿಯನ್ನು ಅವಹೇಳನ ಮಾಡಿರುವುದು ಮಾತ್ರ ಸ್ಪಷ್ಟವಾಗಿ ಕಂಡು ಬರುತ್ತದೆ.

ಕಾಂಗ್ರೆಸ್ಸಿಗರು ಎಷ್ಟು ನಿಸ್ಸೀಮರು ಎಂದರೆ, ಇತ್ತೀಚೆಗೆ ನಡೆದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ಪ್ರಧಾನಿ ನರೇಂದ್ರ ಮೋದಿಯನ್ನ ಹಲವಾರು ಟ್ವಿಟ್ಟರಿಗರು ಬ್ಲಾಕ್ ಮಾಡುವ ಮೂಲಕ ಬ್ಲಾಕ್ ನರೇಂದ್ರ ಮೋದಿ ಎಂಬ ಅಭಿಯಾನ ಶುರುಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಕೇಂದ್ರದಲ್ಲಿರುವ ಬಿಜೆಪಿಯನ್ನು ಕಾಲೆಳೆಯಲು ಹೋಗುತ್ತಿರುವ ಇವರನ್ನು ನಾವೇನು ಎನ್ನಬೇಕೋ ನಾ ಕಾಣೆ?

ಗೌರಿ ಲಂಕೇಶ್ ಹತ್ಯೆಯಾದ ಬಳಿಕ ನಿಖಿಲ್ ದಧೀಚ್ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಗೌರಿ ಲಂಕೇಶ್ ಬಗ್ಗೆ ಅವಹೇಳನಕಾರಿ ಪೆÇೀಸ್ಟ್ ಹಾಕಿದ್ದರು. ‘ಒಬ್ಬ
ನಾಯಿ ನಾಯಿಯಂತೆ ಸತ್ತಳು, ನಾಯಿಮರಿಗಳು ಈಗ ಒಂದೇ ಸ್ವರದಲ್ಲಿ ಅಳುತ್ತಿವೆ’ ಎಂದು ಟ್ವೀಟ್ ಮಾಡಿದ್ದರು. ಟ್ವಿಟ್ಟರ್ ಖಾತೆಯನ್ನು ಬಿಜೆಪಿಯ ಅನೇಕ
ರಾಜಕಾರಣಿಗಳು ಫಾಲೋ ಮಾಡ್ತಿದ್ದು, ಮೋದಿಯೂ ಅದರಲ್ಲಿ ಒಬ್ಬರಾಗಿದ್ದಾರೆ. ಈ ರೀತಿ ಪೆÇೀಸ್ಟ್ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಅವರನ್ನು ಮೋದಿ ಇನ್ನೂ ಯಾಕೆ ಫಾಲೋ ಮಾಡ್ತಿದ್ದಾರೆ ಎಂದು ಹಲವು ಮಂದಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಭಟನೆಯಾಗಿ ನರೇಂದ್ರ ಮೋದಿ ಅಭಿಯಾನ ಶುರುವಾಗಿದ್ದು, ಇಂದು ಟ್ರೆಂಡಿಂಗ್ ಟಾಪಿಕ್ ಆಗಿದೆ. ಈಗಾಗಲೇ #BlockNarendraModi
ಹ್ಯಾಶ್‍ಟ್ಯಾಗ್ ಟ್ವಿಟ್ಟರ್‍ನಲ್ಲಿ ಸಾಕಷ್ಟು ಟ್ವಿಟ್ಟರ್ ಬಳಕೆದಾರರು ಮೋದಿಯನ್ನ ಬ್ಲಾಕ್ ಮಾಡಿ ಅದರ ಸ್ಕ್ರೀನ್‍ಶಾಟ್ಸ್ ಹಂಚಿಕೊಳ್ಳುತ್ತಿದ್ದಾರೆ. ವಿಪರ್ಯಾಸ ಏನಂದರೆ ಈ ಬ್ಲಾಕ್‍ನಿಂದ ಪ್ರಧಾನಿಯ ಮೋದಿಯವರ ಫಾಲೋವರ್‍ಗಳ ಸಂಖ್ಯೆ ಜಾಸ್ತಿಯಾಯಿತೇ ಹೋರತು ಕಡಿಮೆಯಂತೂ ಆಗಲಿಲ್ಲ.

ಮೂಲ:

http://m.dailyhunt.in/news/india/kannada/kannada+prabha-epaper-
kprabha/pradhaani+modi+viruddha+avahelanakaari+padha+prayogisi+tvit+maadidha
+digvijaya+sing-newsid-72965479

– ಅಲೋಖಾ

Tags

Related Articles

Close