ಪ್ರಚಲಿತ

ದೇಹದಲ್ಲಿ ೫ ಗುಂಡು ಹೊಕ್ಕರೂ ದೇಶ ರಕ್ಷಣೆಗೆ ಎದೆ‌ಗುಂದಲಿಲ್ಲ! ಬದುಕಿದ್ದಾಗಲೇ ಪರಮವೀರ ಚಕ್ರ ಪಡೆದ‌‌ ಈ ವೀರ‌ ಯೋಧ…

ನಿಜಕ್ಕೂ ಯೋಧರು ಕಣ್ಣಿಗೆ ಕಾಣುವ ದೇವರು. ತಮ್ಮ ಇಡೀ ಕುಟುಂಬವನ್ನು ಬಿಟ್ಟು ಹಗಲು ರಾತ್ರಿ ಎನ್ನದೆ ದೇಶವನ್ನು ಕಾಯುತ್ತಿರುತ್ತಾರೆ. ಗಡಿಯಲ್ಲಿ ಉಗ್ರರು ಯಾವಾಗ ಭಾರತ ಪ್ರವೇಶಿಸಬಹುದು ಎಂದು ಸದಾ ಹದ್ದಿನ ಕಣ್ಣಿಟ್ಟು ಕಾಯುತ್ತಿರುತ್ತಾರೆ.. ಒಂದು ವೇಳೆ ಭಾರತದ ಗಡಿ ದಾಟಿದಲ್ಲಿ ಉಗ್ರರ ಸದೆಬಡಿಯದೆ ಬಿಡುವವರಲ್ಲ.. ಯಾವತ್ತೂ ನಮ್ಮ ಸೈನಿಕರು ತಮ್ಮ ಜೀವ ಹೋದರೂ ಪರವಾಗಿಲ್ಲ ದೇಶ ರಕ್ಷಣೆ ಮಾಡಲು ಮಾತ್ರ ಸದಾ ಸಿದ್ಧರಿರುತ್ತಾರೆ. ಒಂದೊಂದು ಸೈನಿಕನ ಕಥೆ ಕೇಳಿದರೂ ಕಣ್ಣಂಚಿನಲ್ಲಿ ನೀರು ಬರುತ್ತದೆ. ಈಗಾಗಲೇ ಅದೆಷ್ಟೋ ಸಾವಿರಾರು ಯೋಧರು ತಾಯ್ನಾಡಿಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. 1999ರ ಜುಲೈ 4ರಂದು ಇತಿಹಾಸದಲ್ಲಿ ಮಹತ್ವಪೂರ್ಣ ಘಟನೆಯೊಂದು ನಡೆದಿತ್ತು.

ರೈಫಲ್ ಮ್ಯಾನ್ ಸಂಜಯ್ ಕುಮಾರ್ ಛತ್ತೀಸ್ಗಢದ ಬಿಲಾಸ್ಪುರ್ ಜಿಲ್ಲೆಯ ಬೈಕಣ್ ಗ್ರಾಮದಲ್ಲಿ ಜನಿಸಿದರು. ಸಂಜಯ್ ಅವರ ಚಿಕ್ಕಪ್ಪ ಕೂಡ ಭಾರತೀಯ ಸೇನೆಯಲ್ಲಿದ್ದು, 1965ರ ಇಂಡೋ-ಚೀನಾ ಯುದ್ಧದಲ್ಲಿ ಭಾಗವಹಿಸಿದ್ದರು. 1996ರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪಾಸಾದ ಸಂಜಯ್ ಕುಮಾರ್, ಮುಂದೆ ಸೈನ್ಯ ಸೇರಿದರು. ಆಗ ಅವರಿಗೆ ಕೇವಲ 23 ವರ್ಷ ಮಾತ್ರ ವಯಸ್ಸಾಗಿತ್ತು. ಸೈನ್ಯ ಸೇರಿದ 13 ಜೆಕ್ ರೈಫಲ್ಸ್‍ನಲ್ಲಿ ಸಿಪಾಯಿಯಾಗಿ ನಿಯುಕ್ತಿಗೊಂಡರು. 1999 ಜುಲೈ 4 ಭಾರತೀಯ ಇತಿಹಾಸದಲ್ಲೇ ಮಹತ್ವದ ದಿನ… ಏಕೆಂದರೆ ಭಾರತೀಯ ಪಡೆಗಳು ಅಂದು ಪಾಯಿಂಟ್ 4875 ಅನ್ನು ವಶಪಡಿಸಿಕೊಳ್ಳಲು ಹೊರಟಿದ್ದವು.

1999ರಲ್ಲಿ ಕಾರ್ಗಿಲ್ ಯುದ್ಧ ಪ್ರಾರಂಭವಾದಾಗ 13 ಜೆಕ್ ರೈಫಲ್ಸ್ ಬಟಾಲಿಯನ್ಗೆ ದರಾಜ್ ಬಳಿಯ ಗುಮರಿ ಬೇಸ್ ಕ್ಯಾಂಪ್ ರಕ್ಷಿಸುವ ಹೊಣೆ ಇವರಿಗೆ ನೀಡಲಾಯ್ತು. 70 ಡಿಗ್ರಿಯಂತೆ ಬೆಟ್ಟವನ್ನು ಭಾರತೀಯ ಪಡೆಗಳು ಏರಬೇಕಿತ್ತು. ಕೊರೆಯುವ ಚಳಿ ಮತ್ತು ಹಗಲು ರಾತ್ರಿಯೆನ್ನದೆ ಅದನ್ನು ಹತ್ತಬೇಕಿತ್ತು. ಶತ್ರುಗಳೊಡನೆ ಮುಖಾಮುಖಿಯಾಗುವ ಅರಿವಿದ್ದರೂ ಸೇನಾ ಪಡೆಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದವು. ಶತ್ರು ಸಂಖ್ಯೆಯ ಬಲದ ಅರಿವಿಲ್ಲದೆನೇ ಯುದ್ಧಕ್ಕೆ ರೆಡಿಯಾಗಿತ್ತು.

ದೇಹದಲ್ಲಿ ೫ ಗುಂಡು ಹೊಕ್ಕರೂ ದೇಶ ರಕ್ಷಣೆಗೆ ಎದೆ‌ಗುಂದಲಿಲ್ಲ…

ಭಾರತೀಯ ಪಡೆಯ 13ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ಸಿನ ಚಾರ್ಲಿ ಕಂಪನಿಯ ಹತ್ತು ಜನ ಯೋಧರ ತಂಡ ಅದರ ಉಸ್ತುವಾರಿಯನ್ನು ಹೊತ್ತು ಬೆಟ್ಟ ಏರುತ್ತಿತ್ತು. ರೈಫಲ್ ಮ್ಯಾನ್‍ಗಳ ಈ ತಂಡದಲ್ಲಿದ್ದ ಸಂಜಯ್ ಕುಮಾರ್ ನಿದ್ರೆ ಮಾಡದೆ ಬರೋಬ್ಬರಿ 30 ಗಂಟೆಗಳಾಗಿತ್ತು. ಅಷ್ಟರಲ್ಲಿ ಶತ್ರುಗಳಿಂದ ಗುಂಡಿನ ದಾಳಿ, ಭಾರತೀಯ ಯೋಧರಿಂದ ಪಾಕ್ ಬಂಕರುಗಳತ್ತ ಗ್ರೆನೇಡ್ ಎಸೆತ ಶುರುವಾಯಿತು. ಅತ್ತ ಕಡೆಯಿಂದ ಪಾಕ್‍ನ ಸಾಲು ಸಾಲು ಸೈನಿಕರನ್ನು ಬಾರದ ಲೋಕಕ್ಕೆ ಕಳುಹಿಸಲಾಯಿತು. ಈ ಯುದ್ಧದಲ್ಲಿ ಸಾವಿರಾರು ಸೈನಿಕರನ್ನೂ ನಾವು ಕಳೆದುಕೊಳ್ಳಬೇಕಾಯಿತು. ಇತ್ತ ಕಡೆಲ್ಲಿ ಎಡೆಬಿಡದೆ ಗುಂಡುಹಾರಿಸುತ್ತಿದ್ದ ಸಂಜಯ್‍ಕುಮಾರ್‍ಗೆ ಸುಮಾರು ಐದು ಗುಂಡುಗಳು ಬಂದು ಆಗಾಗಲೇ ಎದೆಹೊಕ್ಕಿತ್ತು. ಆದರೂ ಸಂಜಯ್ ಕುಮಾರ್ ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ.

ಅಸಾಧಾರಣ ಪರಾಕ್ರಮದಿಂದ ಶತ್ರುಗಳಿಗೆ ಮುಖಾಮುಖಿಯಾಗಿ ಮುನ್ನುಗ್ಗಿದ ಸಂಜಯ್ ಕುಮಾರ್ ತನ್ನ ಜೀವವನ್ನು ಲೆಕ್ಕಿಸದೆ ಪಾಕ್ ಬಂಕರಿನ ಅತೀ ಸಮೀಪಕ್ಕೆ ಸಾಗಿ ಅದನ್ನು ವಶಪಡಿಸಿಕೊಂಡರು. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶವಾಗಿತ್ತು. ನೋಡ ನೋಡುತ್ತಿದ್ದಂತೆ ಶತ್ರುಗಳ ಬಂಕರ್ ಸ್ಫೋಟಗೊಂಡು ಅದರಲ್ಲಿದ್ದ ಪಾಕ್ ಸೈನಿಕರು ಹೆಣವಾದರು. ಕೊನೆಗೆ ಅಧಿಕಾರಿಗಳಿಂದ ಶತ್ರು ಸೈನಿಕರಾರೂ ಉಳಿದಿಲ್ಲ ಎಂದು ಮನವರಿಕೆ ಮಾಡುವವರೆಗೆ ಎದೆಯಲ್ಲಿ ಗುಂಡು ಹೊಕ್ಕರೂ ಸಂಜಯ್ ಕುಮಾರ್ ಗುಂಡು ಹಾರಿಸುತ್ತಲೇ ಇದ್ದರು.

ಪಾಯಿಂಟ್ 4875 ಭಾರತೀಯರ ವಶವಾಗಿತ್ತು. ತದನಂತರ ಆಸ್ಪತ್ರೆಗೆ ಸಂಜಯ್ ಕುಮಾರರನ್ನು ಸಾಗಿಸಲಾಯಿತು. ಅವರ ದೇಹದಲ್ಲಿ ಇನ್ನೂ ಐದು ಬುಲೆಟ್ ಗಳಿದ್ದವು. ಐದು ಬುಲೆಟ್ ಗಳನ್ನು ದೇಹದಲ್ಲಿಟ್ಟುಕೊಂಡೇ ಸಂಜಯ್ ಕುಮಾರ್ ಪಾಯಿಂಟ್ 4875 ಬೆಟ್ಟವನ್ನು ವಶಪಡಿಸಿಕೊಂಡಿದ್ದರು. ದೇಹದಲ್ಲಿ ಐದು ಗುಂಡು ಹೊಕ್ಕಿದ್ದರೂ ಕೂಡಾ ಆ ಸೈನಿಕ ತನ್ನ ಪ್ರಾಣ ಇರೋವರೆಗೂ ಹೋರಾಡುತ್ತೇನೆಂದು ಸಂಕಲ್ಪ ಮಾಡಿ, ಪಾಯಿಂಟ್ 4875 ಬೆಟ್ಟವನ್ನು ವಶಪಡಿಸಿಕೊಂಡಿದ್ದರು.

ಬದುಕಿದ್ದಾಗಲೇ ಪರಮವೀರ ಚಕ್ರ‌ ಪಡೆದ‌ ವೀರ ಯೋಧ!

ನಿಜವಾಗಿಯೂ ಇಂತಹ ಯೋಧರೇ ಗ್ರೇಟ್… ತನ್ನ ಎದೆಯಲ್ಲಿ 5 ಗುಂಡು ಹೊಕ್ಕರೂ ತಾಯ್ನಾಡಿಗಾಗಿ ಎದೆಗುಂದದೆ ದೇಶ ರಕ್ಷಣೆ ಮಾಡುವ ಇಂತಹ ಯೋಧರನ್ನು ನಾವು ದೇವರಂತೆ ಪೂಜಿಸಬೇಕು.. ಅಂದು ನಿಜವಾಗಿಯೂ ತನ್ನ ಪ್ರಾಣ ಉಳಿಸಿಕೊಳ್ಳುತ್ತೇನೆ ಎಂದು ವಾಪಸ್ಸು ಬರುತ್ತಿದ್ದರೆ ಇಂದು ನಾವು ಇಷ್ಟು ಆರಾಮವಾಗಿ ಜೀವನ ನಡೆಸಲು ಸಾಧ್ಯವಿರುತ್ತಿರಲಿಲ್ಲ!ವೀ ಯೋಧನಿಗೆ ಯುದ್ಧ ಭೂಮಿಯಲ್ಲಿ ತೋರಿದ ಇವರ ಶೌರ್ಯಕ್ಕಾಗಿ ಭಾರತ ಸರ್ಕಾರ ಸಂಜಯ್ ಕುಮಾರ್ ಅವರಿಗೆ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿತು!! ಬದುಕಿದ್ದಾಗಲೇ `ಪರಮವೀರ ಚಕ್ರ’ ಪುರಸ್ಕಾರ ಪಡೆದ ಮೂವರಲ್ಲಿ ಇವರೂ ಒಬ್ಬರಾಗಿದ್ದರೆ! ಭಾರತೀಯ ಯೋಧರಿಗೊಂದು ಪ್ರಣಾಮ್…..

Tags

Related Articles

FOR DAILY ALERTS
Close