ಪ್ರಚಲಿತ

ದೈನಂದಿನ ಸುದ್ದಿಗಳ ವಿಭಿನ್ನ ವಿಶ್ಲೇಷಣೆ ಹೆಸರಲ್ಲಿ ಕಾರ್ಕಳದ ಶಾಸಕರ ಬಗ್ಗೆ ಸುಳ್ಳನ್ನೇ ಬರೆದ ವೆಬ್ ಪೋರ್ಟಲ್ ಸುದ್ದಿಯ ಹಿಂದಿನ ಫ್ಯಾಕ್ಟ್ ಚೆಕ್ ಇಲ್ಲಿದೆ ನೋಡಿ! ಕಚೇರಿಯನ್ನು ಬಂಗಲೆಯಾಗಿಸಿದ ಪೀತ ಪತ್ರಿಕೋದ್ಯಮಕ್ಕೆ ಏನ್ನೆನ್ನಬೇಕು??!!

ನಮ್ಮಲ್ಲಿ ಕೆಲವು ಸೋ ಕಾಲ್ಡ್ ಮಾಧ್ಯಮಗಳಿವೆ. ಅಂದರೆ ಮಾಧ್ಯಮ ನಿರ್ವಹಿಸಬೇಕಾದ ಯಾವುದೇ ಜವಾಬ್ದಾರಿ ನಿಭಾಯಿಸದೇ ಹೋದರೂ ತಮಗೆ ತಾವೇ ಮಾಧ್ಯಮ ಎನ್ನುವ ಹೆಸರು ಕೊಟ್ಟುಕೊಂಡು ಕೇವಲ ಒಂದು ವರ್ಗದ ವಿರುದ್ಧ ತಮ್ಮ ದ್ವೇಷ, ಅಸೂಯೆ ಹಾಗೂ ದಿಕ್ಕು ತಪ್ಪಿಸುವ ತಥಾಕಥಿತ ಸುದ್ದಿಗಳನ್ನು ಬಿತ್ತರಿಸುವುದೇ ಇವರ ಕೆಲಸ.

ಅಜೆಂಡಾ ಪ್ರೇರಿತ ಎನ್ನುತ್ತೇವಲ್ಲ ಅದಕ್ಕೆ ಇವರು ಕೊಡುವ ಹೆಸರು ಸತ್ಯಾನ್ವೇಷಣೆ. ನೀವು ಗಮನಿಸಿ ಇಂತಹ ಸುದ್ದಿಗಳಲ್ಲಿ, ಯಾರೋ ಒಬ್ಬರು ಏನೋ ಸುದ್ಧಿ ನೀಡಿದರು ಎನ್ನುತ್ತಾರೆಯೇ ಹೊರತು ತಮ್ಮ ಮಾಹಿತಿ ಆಗರವನ್ನು ಎಂದಿಗೂ ಹೇಳಿಕೊಳ್ಳುವುದಿಲ್ಲ.ಇಂತಹ ಒಂದು ವೆಬ್ ಪೋರ್ಟಲ್ ಇತ್ತೀಚೆಗೆ ತಮ್ಮ ನಂಜು ಕಾರಿರುವುದು, ಕಾರ್ಕಳದ ಶಾಸಕರಾದ ಸುನಿಲ್ ಕುಮಾರ್ ಅವರ ಮೇಲೆ…

“ಕಾರ್ಕಳ ಶಾಸಕರ ಬಂಗಲೆಗೆ ಸಿಮೆಂಟ್ ಎಲ್ಲಿಯದು? ಈ ವೀಡಿಯೋವನ್ನು ಸುಳ್ಳೆನ್ನಲು ಸಾಧ್ಯವೇ?” ಎನ್ನುವ ಅತೀ ರಂಜಿತ ಶೀರ್ಷಿಕೆಯಡಿ ಪ್ರಕಟಗೊಂಡ ಸುದ್ದಿಯ ನಿಜವಾದ ಅಸಲೀಯತ್ತು ನಾವು ಹೇಳುತ್ತೇವೆ.

ಮೊದಲಿಗೆ ಅದು ಶಾಸಕರ ಬಂಗಲೆ ಅಲ್ಲವೇ ಅಲ್ಲ. ನಗರದ ಹೃದಯ ಭಾಗದಲ್ಲಿ ಜನನಿಬಿಡ ಪ್ರದೇಶದಲ್ಲಿ, ಕ್ಷೇತ್ರದ ಜನರಿಗೆ ಅನುಕೂಲವಾಗುವಂತೆ ನಿರ್ಮಾಣವಾಗುತ್ತಿರುವ ಶಾಸಕರ ಕಚೇರಿ. ಅಧಿಕಾರಿಗಳ ಸಭೆ, ವಿಡಿಯೋ ಕಾನ್ಫರೆನ್ಸ್, ಮುಂತಾದ ಕೆಲಸಕಾರ್ಯಗಳ ನೆರವಿಗೆ ಅತ್ಯಾಧುನಿಕ ತಂತ್ರಜ್ಞಾನ ಉಳ್ಳಂತಹ ವ್ಯವಸ್ಥೆ ಅಲ್ಲಿದೆ.

ಆದರೆ ವೆಬ್ ಪೋರ್ಟಲ್ ಹೇಳುತ್ತಿರುವಂತೆ ಸರಕಾರದ ಆಲ್ಟ್ರಾಟೆಕ್ ಸಿಮೆಂಟ್ ಇಡೀ ಕಟ್ಟಡಕ್ಕೆ ಬಳಸಲಾಗಿದೆ ಎಂಬ ಸುದ್ದಿ ಮಾತ್ರ ಅಕ್ಷರಶಃ ಸುಳ್ಳು. ಅಸಲಿಗೆ ಈ ಕಟ್ಟಡ ನಿರ್ಮಾಣಕ್ಕೆ ಆಲ್ಟ್ರಾಟೆಕ್ ಸಿಮೆಂಟ್ ಬಳಸಲು ಬರುವುದಿಲ್ಲ.
✓ ಈ ಕಟ್ಟಡ ಸಂಪೂರ್ಣ ಹೊಸ ಈ.ಪಿ.ಎಸ್ (EXPANDED POLYSTYRENE (EPS) CORE PANEL SYSTEM) ತಂತ್ರಜ್ಞಾನದಿಂದ ನಿರ್ಮಾಣವಾಗಿದೆ.
✓ ಈ ಕಟ್ಟಡಕ್ಕೆ ಸಾಮನ್ಯ ಸಿಮೆಂಟ್ ಬಳಸಲಾಗುವುದಿಲ್ಲ. ಫೈಬರ್ ಮಿಕ್ಸ್ ಸಿಮೆಂಟ್ ಬಳಸಲಾಗುತ್ತದೆ.

ಇನ್ನು ವಿಡಿಯೋ ವಿಷಯಕ್ಕೆ ಬರೋಣ, ಅಲ್ಲಿ ಕಾಣುತ್ತಿರುವ ಸಿಮೆಂಟ್ ಬಗ್ಗೆ

700 ಮೂಟೆ ಒಂದು ಕಂಬಕ್ಕೆ ಬಳಸಲು ಅಲ್ಲಿ ಯಾವುದೋ ಮಹಲ್ ನಿರ್ಮಾಣವಾಗುತ್ತಿಲ್ಲ. ಒಂದು ಕಂಬಕ್ಕೆ 700 ಮೂಟೆ ಸಿಮೆಂಟ್ ಲೆಕ್ಕಾಚಾರದ ಹಿಂದಿನ ಬುದ್ಧಿವಂತರು ಯಾರೋ ಒಮ್ಮೆ ನೋಡಬೇಕು!

ಇನ್ನು ಸಿಮೆಂಟ್ ನಲ್ಲಿ ಎರಡು ವಿಧ.
ಟ್ರೇಡಿಂಗ್ ಸಿಮೆಂಟ್
ನಾನ್ ಟ್ರೇಡಿಂಗ್ ಸಿಮೆಂಟ್ ಎಂದು

ಟ್ರೇಡಿಂಗ್ ಸಿಮೆಂಟ್ ಅನ್ನು ಉತ್ಪಾದಕರಿಂದ, ಡಿಸ್ಟ್ರಿಬ್ಯೂಟರ್ ಮೂಲಕ ಗ್ರಾಹಕರಿಗೆ ಮಾರಲಾಗುತ್ತದೆ. ನಾನ್ ಟ್ರೇಡಿಂಗ್ ಸಿಮೆಂಟ್ ಉತ್ಪಾದಕರಿಂದ ನೇರವಾಗಿ ಗ್ರಾಹಕರು ಖರೀದಿ ಮಾಡಬುದು. ಇದರ ವ್ಯತ್ಯಾಸ ಗೊತ್ತಿಲ್ಲದೇ ಇರುವವರು, ಬರೆಯುವ ಮೊದಲು ಸ್ವಲ್ಪ ರೀಸರ್ಚ್ ಮಾಡಿ ಬರೆದಿದ್ದರೆ ಒಳ್ಳೆಯದಿತ್ತು.ನಾನ್ ಟ್ರೇಡಿಂಗ್ ಸಿಮೆಂಟ್ ಅನ್ನು ನಾವು ಖರೀದಿಸಬಹುದು ಆದರೆ ಪುನಃ ಮಾರುವಂತಿಲ್ಲ ಹಾಗಾಗಿ ಅದರ ಮೇಲೆ ನಾಟ್ ಫಾರ್ ಸೇಲ್ ಎಂದು ಮುದ್ರಿತವಾಗಿರುತ್ತದೆ.

ಇನ್ನು ಟೆಂಡರ್ ಬಗ್ಗೆ ಹಾಗೂ ಪಕ್ಷದೊಳಗೆ ಶಾಸಕರ ಬಗ್ಗೆ ಇರುವ ಗುಸು ಗುಸು ಸುದ್ದಿಯ ಬಗ್ಗೆ ಏನನ್ನೂ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ಅದು ಅಂತೆ ಕಂತೆಗಳ ಬೊಂತೆ ಅಷ್ಟೇ! ತಮ್ಮ ಲೇಖನದ ಶೀರ್ಷಿಕೆಯನ್ನೇ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸಿ ಬರೆಯುವ ಸೋ ಕಾಲ್ಡ್ ಮಾಧ್ಯಮದ ಸುದ್ದಿಯನ್ನೂ ನಂಬುವ ವಿಘ್ನ ಸಂತೋಷಿಗಳ ಬಗ್ಗೆ ಮರುಕ ಉಂಟಾಗುತ್ತದೆ.

Tags

Related Articles

FOR DAILY ALERTS
Close