ದೇಶದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಬದಲಾವಣೆ ಎಲ್ಲವನ್ನು ಒಂದು ಸಲ ಮೈನವಿರೇಳಿಸುವಂತೆ ಮಾಡುತ್ತೆ!! ಯಾಕೆಂದರೆ ಇದೀಗ ಯುದ್ದ ವಲಯವು ಸ್ನೇಹಿತ
ವಲಯವಾಗಿ ಮಾರ್ಪಟ್ಟಿದೆ!! ಅಲ್ಲದೇ ಕೋಪಗೊಂಡಿರುವ ಸೈನಿಕರು ತಮ್ಮ ಬಿಗಿಯಾದ ಅಪ್ಪುಗೆಯನ್ನು ತಮ್ಮ ಶತ್ರುಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ!! ಚೀನಿಯರು ಪ್ರಬುದ್ದರಾಗಿದ್ದಾರಲ್ಲದೇ ಶಾಂತಿ ಮಂತ್ರವನ್ನು ಜಪಿಸುತ್ತಿದ್ದಾರೆ ಎಂಬುವುದು ಇದೀಗ ಸ್ಪಷ್ಟವಾಗಿದೆ!! ಯಾವಾಗ ಚೀನಾ ದೋಕ್ಲಮ್ ಬಿಕ್ಕಟ್ಟಿನಿಂದ ಹಿಂದೆ ಸರಿಯಿತೋ, ಆಗ ಚೀನಾ ತನ್ನ ರಾಜತಾಂತ್ರಿಕತೆಯಿಂದ ವಿಜಯಶಾಲಿಯಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಆದರೆ ನಿಜಾಂಶ ಯಾವತ್ತು ಮರೆಮಾಚಲು ಸಾಧ್ಯವೇ ಇಲ್ಲ!! ಯಾಕೆಂದರೆ ಆ ಸಂದರ್ಭದಲ್ಲಿ ನಮ್ಮ ಪ್ರಧಾನಿ ಗುಂಡು ಹಾರಿಸದೆ ಯುದ್ದವನ್ನು ಗೆದ್ದಿದ್ದರು!!
ಇನ್ನೊಂದು ಆಶ್ಚರ್ಯಕರವಾದ ಸಂಗತಿ ಎಂದರೆ, ಆಕ್ರಮಣಕಾರಿಯಾದಂತಹ ಚೀನಿಯರು ಗಾಂಧಿ ತತ್ವವನ್ನು ಯಾಕೆ ಅನುಸರಿಸುತ್ತಿದ್ದಾರೆ ಎಂಬುವುದು ಯಾರಿಗೂ ತಿಳಿದಿಲ್ಲ!! ಆದರೆ ಇದಕ್ಕೆ ಉತ್ತರ ಮಾತ್ರ ಸ್ಪಷ್ಟವಾಗಿದೆ; ಅದೇನೆಂದರೆ ಭಾರತೀಯ ಭಯ!! ಹೌದು…. ಚೀನಾ ಭಾರತದೊಂದಿಗೆ ಅವ್ಯವಸ್ಥೆಯನ್ನು ಎಂದೂ ಬಯಸುವುದಿಲ್ಲ. ಆದರೆ ಚೀನಾ ಭಾರತದ ಸ್ನೇಹವನ್ನು ಬಯಸಲು ಮುಂದಾಗಿದ್ದು ಮಾತ್ರವಲ್ಲದೇ, ನೀವು ನಂಬುವಂತೆ ಮಾಡುವ ಕೆಲವು ಸತ್ಯ ಸಂಗತಿಗಳು ಇಲ್ಲಿವೆ!!
ಪ್ರಧಾನಿ ಮೋದಿಯ ನಾಯಕತ್ವದಲ್ಲಿ ಭಾರತ ಪ್ರತಿದಿನ ಹೊಸ ಜಾಗತಿಕ ಶಕ್ತಿಯೊಂದಿಗೆ ಮತ್ತು ಶಕ್ತಿಯುತವಾಗಿ ವ್ಯವಹರಿಸುತ್ತಿದ್ದಾರೆ!! ಆದ್ದರಿಂದ, ಖಂಡಿತವಾಗಿಯೂ ಈ ಎಲ್ಲಾ ರಾಷ್ಟ್ರದೊಂದಿಗೆ ಪರಸ್ಪರ ಬಂಧನ ಹೆಚ್ಚಾಗುತ್ತಿದೆ. ಯಾವಾಗ ಯುದ್ದ ಮುರಿದು ಹೋಯಿತೋ ಆಗ ಪಾಶ್ಚಾತ್ಯ ರಾಷ್ಟ್ರಗಳ ಗುಂಪುಗಳು ಭಾರತದೊಂದಿಗೆ ನಿಂತು ಹೋರಾಡಲು ಸಿದ್ದವಾಗಿದೆ. ಇವೆಲ್ಲವೂ ಮೋದಿ ಅವರ ವಿದೇಶಿ ಪ್ರಯಾಣದ ಮುಖ್ಯ ಉದ್ದೇಶವಾಗಿತ್ತು!!
ಯಾವಾಗ ಭಾರತ ಅಮೇರಿಕದೊಂದಿಗೆ ಗಾಢವಾದ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಿರುವಾಗ, ರಷ್ಯಾದೊಂದಿಗಿನ ಸಂಬಂಧವು ಮಸುಕಾಗುವ ಸಾಧ್ಯತೆ ಇದೆ ಎಂದು ಊಹಿಸಲಾಗಿತ್ತು. ಆದರೆ ಆಶ್ಚರ್ಯಕರವಾದ ಸಂಗತಿ ಏನೆಂದರೆ, ಭಾರತವು ರಷ್ಯಾ ಹಾಗೂ ಅಮೇರಿಕದೊಂದಿಗೆ ತ್ವರಿತ ವೇಗದಲ್ಲಿ ತಮ್ಮ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದು!!!
ಚೀನಾ ವೈರಿಗಳನ್ನು ಹೊಂದಿದ್ದೇವೆ ಎಂದು ಭಾವಿಸಿರಲಿಲ್ಲ, ಆದರೆ ಭಾರತವು ಶತ್ರುವಲ್ಲವೆಂದು ಯಾಕೆ ಬಯಸುವುದಿಲ್ಲ?
ಹೌದು…..ಇದೀಗ ಭಾರತ ಶತ್ರುರಾಷ್ಟ್ರಗಳ್ನು ಕಡೆಗಣಿಸುವ ಅಂದಾಜಿನಲ್ಲಿದೆ. ಈ ಬಗ್ಗೆ ಚೀನಾ ಸರಿಯಾದ ಸಮಯದಲ್ಲಿ ತಿಳಿದುಕೊಂಡಿದ್ದಲ್ಲದೇ ಮತ್ತಷ್ಟು ಹಾನಿಗಳನ್ನು ತಡೆಯಬಹುದೆಂದು ಅರಿತುಕೊಂಡಿತ್ತು. ಒಂದು ವೇಳೆ ಚೀನಾ ಯುದ್ದಕ್ಕಾಗಿ ಪ್ರಚೋದಿಸುತ್ತಿದ್ದರೇ ಖಂಡಿತಾವಾಗಿಯೂ ಒಂದು ಯುದ್ದವನ್ನು ನಿರೀಕ್ಷಿಸಬಹುದಾಗಿತ್ತು!! ಆದರೆ ಈ ಬಗ್ಗೆ ಚೆನ್ನಾಗಿ ಅಲೋಚಿಸಿದ ಚೀನಾ, ಭಾರತದ ವಿರುದ್ದ ಹೋರಾಡಿದರೆ ಪ್ರಯೋಜನೆಗಳಿಗಿಂತ ಹೆಚ್ಚು ನಷ್ಟವನ್ನೇ ಅನುಭವಿಸುತ್ತೇವೆ ಎಂಬುವುದನ್ನು ಅರಿತುಕೊಂಡಿದ್ದರು!!
ಕೆಲವೊಂದು ಅಂಕಿ ಅಂಶಗಳನ್ನು ಪರಿಗಣಿಸುವುದಾದರೆ ಚೀನಾ ಭಾರತಕ್ಕಿಂತ ಹೆಚ್ಚು ಬಲಶಾಲಿ ರಾಷ್ಟ್ರವಾಗಿದೆ. ಅಲ್ಲದೇ, ಚೀನಾ ಅತೀ ದೊಡ್ಡ ಸೇನಾ ಪಡೆಯನ್ನು ಮತ್ತು ಉತ್ತಮ ಶಸ್ತ್ರಾಸ್ತ್ರಗಳಲ್ಲಿ ಮುಂಚೂಣಿಯಲ್ಲಿದೆ!! ಇಷ್ಟೆಲ್ಲಾ ಇದ್ದರೂ ಕೂಡ, ಚೀನಾ ಭಾರತನ್ನು ಎದುರಿಸಲು ಸಾಧ್ಯವಿಲ್ಲ ಎಂದು ತಿಳಿದಿತ್ತು. ಆದರೆ ಇತ್ತೀಚೆಗೆ ಪ್ರಧಾನಿ ನರೆಂದ್ರ ಮೋದಿ ಇಸ್ರೇಲ್ ಹಾಗೂ ಅಮೇರಿಕಕ್ಕೆ ಭೇಟಿ ನೀಡಿದ್ದರಿಂದ ಶತ್ರುಗಳ ನಡುಕವನ್ನು ಶತ್ರುಗಳಿಗೆಯೇ ಕಳುಹಿಸಿಕೊಟ್ಟಂತಿತ್ತು!!!
ಚೀನಾ ಭಾರತದೊಂದಿಗೆ ಅತ್ಯಂತ ಸ್ನೇಹವನ್ನು ಏಕೆ ತೋರಿಸುತ್ತಿದೆ?
ಬ್ರಿಕ್ಸ್ ಶೃಂಗ ಸಭೆಯಲ್ಲಿ ಕೂಡ ಮುಖಾಮುಖಿಯಾಗುವ ಸಾಧ್ಯತೆ ಇತ್ತಾದರೂ ಅ ಸಂದಂರ್ಭದಲ್ಲಿ ಎಲ್ಲರಿಗೂ ಆಶ್ಚರ್ಯವಾಗುವಂತಹ ಘಟನೆ ನಡೆಯಿತು.
ಅದೇನೆಂದರೆ ಚೀನಾವು ಭಾರತದ ಭಾಗವನ್ನು ಸೇರಿತು!!! ಅಲ್ಲದೇ, ಎಲ್ಲಾ ಸಮಯದಲ್ಲಿ ಸ್ನೇಹಿತರಾಗಿದ್ದ ಪಾಕಿಸ್ತಾನವನ್ನು ಈ ಸಮಯದಲ್ಲಿ ತ್ಯಜಿಸಿ ಬಿಟ್ಟಿತು!!
ಇದಿಷ್ಟೇ ಅಲ್ಲದೇ, ಮೊದಲ ಬಾರಿಗೆ ಜಂಟಿ ಹೇಳಿಕೆಯಲ್ಲಿ ಚೀನಾ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಯನ್ನು ಖಂಡಿಸಿತು. ಆದರೆ ಇದನ್ನು ಪಾಕಿಸ್ತಾನ ಜೀರ್ಣಿಸಿಕೊಳ್ಳಲು ತುಂಬಾ ಸಮಯಗಳೇ ಬೇಕಾಗಬಹುದು!!
ಹೌದು.. ಚೀನಾದ ವ್ಯವಹಾರದ ದೊಡ್ಡ ಭಾಗವು ಭಾರತೀಯರ ಮಣ್ಣಿನಲ್ಲಿದೆ ಎಂಬುವುದು ಎಲ್ಲರಿತೆ ತಿಳಿದ ವಿಚಾರ!! ಪ್ರಸ್ತುತ ದಿನಗಳಲ್ಲಿ ಭಾರತವನ್ನು ದೇಶಭಕ್ತಿ ತುಂಬಿರುವ ನಾಯಕನಿಂದ ಆಳಲ್ಪಟ್ಟಿದೆ ಆದರೆ 1962ರ ರಾಜವಂಶದಿಂದಲ್ಲ!! ಹಾಗಾಗಿ ಚೀನಾ ಆಕ್ರಮಣವನ್ನು ಪ್ರಾರಂಭಿಸಿದರೆ ತಮ್ಮ ಸಾಮಾನುಗಳನ್ನು, ತುಂಬಿದ ಲಗೆಜುಗಳನ್ನು ಚೀನಾಗೆ ಮರಳಿ ಅಟ್ಟುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೇ ಇದು ಭಾರತೀಯ ಸಂಸ್ಥೆಗಳಿಗೆ ದೊಡ್ಡ ಅವಕಾಶಗಳನ್ನು ಸೃಷ್ಟಿಸಬಹುದು ಎಂಬುವುದು ಚೀನಾಕ್ಕೆ ಗೊತ್ತಿತ್ತು!!
ಪ್ರಸ್ತುತ ದಿನಗಳಲ್ಲಿ, ಚೀನಾವನ್ನು ಹೋಲಿಸಿದರೆ ಭಾರತದ ಆರ್ಥಿಕತೆಯು ತ್ವರಿತಗತಿಯಲ್ಲಿ ಮುಂದುವರೆಯುತ್ತಲೇ ಇದೆ. ಹಾಗಾಗಿ ಚೀನಾ ಭಾರತವನ್ನು
ಬೆಂಬಲಿಸಲು ನಾಟಕವನ್ನು ರೂಪಿಸಬೇಕಾಯಿತು. ಅಷ್ಟೇ ಅಲ್ಲದೇದೋಕ್ಲಾಮ್‍ನಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಅವಮಾನಕರ ಎಂದು ತಿಳಿದಿದ್ದರೂ ಕೂಡ ಸೈನ್ಯವನ್ನು ಹಿಂದಕ್ಕೆ ಪಡೆದುಕೊಂಡಿತು!!
ಇದನೆಲ್ಲಾ ಕೇಳಿದರೆ, ಚೀನಾ ಭಾರತದ ಸ್ನೇಹವನ್ನು ಬಯಸಿ ತಮ್ಮ ಆರ್ಥಿಕ ಸ್ಥಿತಿಯನ್ನು ವೃದ್ಧಿಸುವ ನಾಟಕವೆಂದನಿಸುತ್ತೆ. ಯಾಕೆಂದರೆ ಪಾಕಿಸ್ತಾನದ ಜೊತೆ
ಮಿತೃತ್ವವನ್ನು ಹೊಂದಿರುವ ಚೀನಾ, ಪಾಕಿಸ್ತಾನವನ್ನು ಮೊದಲ ಬಾರಿ ತೆಗಳಲು ಕಾರಣವಾದರೂ ಏನು??
– ಅಲೋಖಾ