ಅಂಕಣ

ದೋಕ್ಲಾಮ್ ವಿಚಾರದಲ್ಲಿ ಚೀನಾ ಯುದ್ದ ಮಾಡುತ್ತಿದ್ದರೆ ಯಾವೊಬ್ಬ ಚೀನೀ ಸೈನಿಕನೂ ಕೂಡ ಜೀವಂತವಾಗಿ ಉಳಿಯುತ್ತಿರಲಿಲ್ಲ!!

ಸಿಕ್ಕಿಂ ಬಳಿಯ ದೋಕ್ಲಾಮ್ ಪ್ರದೇಶದ ಮೇಲಿನ ಹಕ್ಕು ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಚೀನಾ, ಭಾರತ ಮತ್ತು ಭೂತಾನ್ ರಾಷ್ಟ್ರಗಳ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು!! ಆ ಸಂದರ್ಭದಲ್ಲಿ ವಿವಾದ ಬಗೆಹರಿಸಲು ಯಾವ ಮಾರ್ಗ ಅನುಸರಿಸಬೇಕು ಎಂಬುದನ್ನು ಭಾರತವೇ ನಿರ್ಧರಿಸಬೇಕು ಎಂದು ಚೀನಾವೂ ಎಚ್ಚರಿಕೆಯ ಕರೆಯನ್ನು ನೀಡಿತ್ತು. ಆದರೆ ಅಂತಿಮವಾಗಿ ದೋಕ್ಲಾಮ್ ವಿಚಾರದಲ್ಲಿ ಭಾರತದೆದುರು ಚೀನಾಕ್ಕೆ ಸೋಲಾಗಿದ್ದು, ಇಡೀ ವಿಶ್ವ ಸಮುದಾಯದ ಮುಂದೆ ಚೀನಾ ತನ್ನ ಮರ್ಯಾದೆಯನ್ನು ಕಳೆದುಕೊಂಡಿತ್ತು!! ಅಷ್ಟಕ್ಕೂ ಚೀನಾ ಯುದ್ದದಿಂದ ಹಿಂದೆ ಸರಿಯದೇ ಇದ್ದಿದ್ದರೇ ಚೀನಾ ಸೈನಿಕರ ಸ್ಥಿತಿ ಏನಾಗುತ್ತಿತ್ತು ಗೊತ್ತೇ??

ದೋಕ್ಲಾಮ್ ವಿಚಾರದಲ್ಲಿ ಸಮಸ್ಯೆಗಳು ಉಲ್ಬಣಗೊಂಡಾಗ, ಭಾರತದಲ್ಲಿನ ಚೀನಾ ರಾಯಭಾರಿ ಲುವೋ ಜವೋಹ್ವಿ ಈ ವಿವಾದ ಕುರಿತಂತೆ ಮಾತನಾಡಿದ್ದು,
“ದೋಕ್ಲಾಮ್ ವಿಷಯದಲ್ಲಿ ಚೀನಾ ನಿಲುವು ಸ್ಪಷ್ಟವಾಗಿದೆ. ವಿವಾದ ಶಾಂತಿಯುತವಾಗಿ ಇತ್ಯರ್ಥವಾಗಬೇಕು ಎನ್ನುವುದಾದರೆ ಯಾವುದೇ ಷರತ್ತಿಲ್ಲದೇ ಭಾರತ
ಡೋಕ್ಲಾಮ್ ಪ್ರದೇಶದಿಂದ ಹಿಂದಕ್ಕೆ ಸರಿಯಬೇಕು. ಇಲ್ಲವಾದರೆ ಶಾಂತಿ ಬೇಕೋ, ಯುದ್ಧ ಬೇಕೋ ಎಂಬುದನ್ನು ನಿರ್ಧರಿಸಬೇಕು” ಎಂದು ಖಡಕ್ ಆಗಿ ಭಾರತಕ್ಕೆ ಲುವೋ ಎಚ್ಚರಿಕೆ ನೀಡಿದ್ದರು. ಅಲ್ಲದೇ, ಪರ್ವತವನ್ನು ಅಲ್ಲಾಡಿಸುವುದು ತುಂಬಾ ಕಷ್ಟ, ಚೀನಾ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ ಅಲುಗಾಡಿಸುವುದು ಇನ್ನಷ್ಟು ಕಷ್ಟ.” ಎಂದು ಚೀನಾ ರಕ್ಷಣಾ ಇಲಾಖೆಯ ವಕ್ತಾರ ಸೀನಿಯರ್ ಕಲೋನಿಯಲ್ ವೂ ಕಿಯಾನ್ ಬೆದರಿಸಿದ್ದರು. ಈ ರೀತಿಯಾಗಿ ಚೀನಾ ಬೆದರಿಕೆ ಕರೆಗಳನ್ನು ನೀಡುತ್ತಿದ್ದರು ಕೂಡ ಕೊನೆಗೆ ಸೋಲನ್ನು ಅನುಭವಿಸಿದ್ದು ಮಾತ್ರ ಚೀನಾ!!

ಇನ್ನು, ಚೀನಾ ಮತ್ತು ಭಾರತ ದಶಕಗಳಲ್ಲಿಯೇ ಭಯಾನಕ ಮಿಲಿಟರಿ ಮುಖಾಮುಖಿಯನ್ನು ಕೊನೆಗೊಳಿಸಿದ ಒಂದು ದಿನದ ನಂತರ ಸರ್ಕಾರವು ಭಾರತೀಯ ಸೇನೆ ಸಂಪೂರ್ಣ ಪ್ರದೇಶವನ್ನು ಹತೋಟಿಯಲ್ಲಿ ಇಟ್ಟಿತ್ತು. ಆದ್ದರಿಂದ ಸೈನ್ಯವು ಇಡೀ ಪ್ರದೇಶವನ್ನು ಸುತ್ತುವರೆದಿತ್ತು ಮತ್ತು ಚೀನೀ ಪಡೆಗಳನ್ನು ತಟಸ್ಥಗೊಳಿಸಲು ಸಾಕಷ್ಟು ನಿಬಂಧನೆಗಳನ್ನು ಕೈಗೊಂಡಿತ್ತು. ಇದರಿಂದ ಚೀನಾ ರಾಜತಾಂತ್ರಿಕವಾಗಿ ಬಿಕ್ಕಟ್ಟು ಪರಿಹರಿಸಲು ಕಾರಣವಾಯಿತು ಎಂದು ಮೂಲಗಳು ಸ್ಪಷ್ಟ ಪಡಿಸಿದೆ.

ಏಕೆಂದರೆ ವಿವಾದಿತ ದೊಕ್ಲಾಮ್ ಸ್ಥಳವು ಭಾರತಕ್ಕೆ ಅತ್ಯಂತ ಪ್ರಯೋಜನಕಾರಿ ಪ್ರದೇಶವಾದ ಕಾರಣ ಚೀನಾಕ್ಕಿಂತ ಸಿಕ್ಕಿಂನ ಹತ್ತಿರದ ಗಡಿಯು ಭಾರತೀಯ
ಸೈನಿಕರನ್ನು ವೇಗವಾಗಿ ಚಲಿಸುವಂತೆ ಮಾಡಲು ಸಹಕಾರಿಯಾಗುತ್ತದೆ. ಆದರೆ ಚೀನಾ ಮತ್ತು ಭಾರತ, ವಿವಾದಿತ ರಿಮೋಟ್ ಡೊಕ್ಲಾಮ್ ಪ್ರಸ್ಥಭೂಮಿಯಿಂದ
ಪಡೆಗಳನ್ನು ಹಿಂತೆಗೆದುಕೊಂಡಿತು. ಭಾರತವು ಭೂತಾನ್ ನಿಲುವನ್ನು ಬೆಂಬಲಿಸಿದ ನಂತರ ಭಾರತೀಯ ಸೈನಿಕರು ಸಿಕ್ಕಿಂನ ಗಡಿಯನ್ನು ದಾಟಿ ಚೀನಾದ ರಸ್ತೆ
ನಿರ್ಮಾಣವನ್ನು ನಿಲ್ಲಿಸಿದ್ದರು, ವಿವಾದಿತ ದೊಕ್ಲಾಮ್ ಪ್ರದೇಶದಲ್ಲಿ ಚೀನಾದ ಯಾವುದೇ ರಸ್ತೆ ನಿರ್ಮಾಣ ಭಾರತದ ಈಶಾನ್ಯ ರಾಜ್ಯಗಳ ಭದ್ರತೆಗೆ ಗಂಭೀರ
ಸವಾಲನ್ನು ಒಡ್ಡಿದ್ದು ಮಾತ್ರ ನಿಜ!!

ದೋಕ್ಲಾಮ್ ಪ್ರದೇಶದಲ್ಲಿ ಚೀನಾ ಸೇನೆ ರಸ್ತೆ ನಿರ್ಮಿಸುವ ಪ್ರಯತ್ನ ಮಾಡಿದಾಗ ಭಾರತದ ಸೇನೆ ಆ ಪ್ರಯತ್ನವನ್ನು ತಡೆದಿದೆ. “ದೋಕ್ಲಾಮ್ ಪ್ರದೇಶದಲ್ಲಿ
ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಚೀನಾ ತನ್ನ ನೆಲದಲ್ಲಿ ನಡೆಸುತ್ತಿದೆ. ಇದು ಚೀನಾ- ಭೂತಾನ್ ನಡುವಿನ ವ್ಯವಹಾರವೇ ಹೊರತು ಭಾರತಕ್ಕೆ
ಸಂಬಂಧಿಸಿದ್ದಲ್ಲ” ಎನ್ನುವುದು ಚೀನಾದ ವಾದ. ಮುಂದುವರಿದು, ಭಾರತದ ಸೇನೆ ಗಡಿ ದಾಟಿ ಬಂದು ತನ್ನ ರಸ್ತೆ ಕಾಮಗಾರಿಯನ್ನು ತಡೆಯುವ ಪ್ರಯತ್ನ ಮಾಡಿದೆ ಎಂದು ಆರೋಪಿಸುತ್ತಿದೆ. ಆದರೆ ಅಸಲಿ ಕಥೆ ಬೇರೆಯೇ ಇದೆ. ತನ್ನ ಗಡಿಯಲ್ಲಿ ಚೀನಾದ ಚಟುವಟಿಕೆ ತೀವ್ರಗೊಂಡಂತೆ, ಭೂತಾನ್ ಸೇನೆ (ರಾಯಲ್ ಭೂತಾನ್ ಆರ್ಮಿ) ಚೀನಾವನ್ನು ಮೊದಲು ತಡೆಯುವ ಪ್ರಯತ್ನ ಮಾಡಿದೆ. ಜೊತೆಗೆ ಭಾರತದ ಸೇನೆಯ ಸಹಕಾರವನ್ನು ಕೋರಿದೆ. ಬಹುಶಃ ಭಾರತ ಮಧ್ಯಪ್ರವೇಶಿಸುವುದನ್ನು ಚೀನಾ ಊಹಿಸಿರಲಿಲ್ಲ. ಎಚ್ಚರಿಕೆಯ ನಂತರವೂ ರಸ್ತೆ ಕಾಮಗಾರಿಯನ್ನು ಚೀನಾ ಮುಂದುವರೆಸಿದಾಗ ಭಾರತದ ಸೈನಿಕರು ಮಾನವ ಗೋಡೆ ನಿರ್ಮಿಸಿ ಜಗ್ಗದೆ ನಿಂತಿದ್ದಾರೆ. ನೀವು ಹಿಂದೆ ಹೋಗುವವರೆಗೆ ನಾವೂ ಹೋಗೆವು ಎಂದು ಡೇರೆ ಜಡಿದು ಮೊಕ್ಕಾಂ ಹೂಡಿದ್ದರು ಎನ್ನುವ ವಿಚಾರ ತಿಳಿದೆ ಇದೆ!!

ಆದರೆ ಚೀನಾದ ರಸ್ತೆ ನಿರ್ಮಾಣವು ಭಾರತದ ಈಶಾನ್ಯ ರಾಜ್ಯಗಳ ಭದ್ರತೆಗೆ ಗಂಭೀರ ಸವಾಲನ್ನು ಒಡ್ಡಿದ್ದು, ಈ ಬಗ್ಗೆ ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು “ಗರಿಷ್ಠ ಹಾನಿ ಉಂಟುಮಾಡುವ ಭರವಸೆ ನೀಡಿದ್ದರು”! ಇದು ರಾಜತಾಂತ್ರಿಕ ಮಾತುಕತೆಗಳ ಮೂಲಕ “ಚೀನಾ ಒಪ್ಪಂದಕ್ಕೆ” ನೆರವಾಯಿತು. ಇನ್ನು ಚೀನಾ ಪ್ರತಿದಿನ ಭಾರತದ ವಿರುದ್ಧ ಯುದ್ದದ ಎಚ್ಚರಿಕೆ ನೀಡುತಿತ್ತು. ಆದರೆ ಭಾರತ ಸರ್ಕಾರವು ತನ್ನ ಪ್ರಶಾಂತತೆಯನ್ನು ಉಳಿಸಿಕೊಂಡಿತು.
ಅಲ್ಲದೇ, ಎರಡೂ ಪಕ್ಷಗಳು ತಮ್ಮ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಭಾರತ ರಾಜತಾಂತ್ರಿಕ ಸಂಭಾಷಣೆಯಲ್ಲಿ ವಿಶ್ವಾಸ ಹೊಂದಿದೆಯೆಂದು ಭಾರತ ಸ್ಪಷ್ಟ ಪಡಿಸಿತು. ಅಂತಿಮವಾಗಿ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ದಕಿಣ ಆಫ್ರಿಕಾ) ಸಮ್ಮೇಳನಕ್ಕಾಗಿ ಚೀನಾಕ್ಕೆ ನರೇಂದ್ರ ಮೋದಿಯವರು ಪ್ರಯಾಣದ ಮುಂಚೆಯೇ ಡೊಕ್ಲಾಮ್ ಬಿಕ್ಕಟ್ಟನ್ನು ಕೊನೆಗೊಳಿಸಿದರು.

ಒಂದು ವೇಳೆ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದ್ದರೇ ಚೀನಾದ ಯಾವೊಬ್ಬ ಸೈನಿಕ ಮಾತ್ರ ಜೀವಂತವಾಗಿ ಇರುತ್ತಿರಲಿಲ್ಲ!! ಅಲ್ಲದೇ, ಸೇನಾ ಹಸ್ತಕ್ಷೇಪ ನಡೆಸುವ ಚೀನಾದ ವರ್ತನೆಗೆ ಕಡಿವಾಣ ಹಾಕಲು ಭಾರತ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಿದ್ದರೂ, ಜಾಗತಿಕವಾಗಿ ರಾಜತಾಂತ್ರಿಕವಾಗಿ ಒತ್ತಡ ಹೇರಿ ತನ್ನ ಕಾರ್ಯದಲ್ಲಿ ಯಶಸ್ವಿಯಾಗಿದೆ!! ಆದರೆ ಚೀನಾ ಎಷ್ಟೇ ಶಕ್ತಿಶಾಲಿ ರಾಷ್ಟ್ರವಾದರೂ ಬೇರೆ ಶಕ್ತಿಶಾಲಿ ರಾಷ್ಟ್ರಗಳು ಚೀನಾಕ್ಕೆ ಕೈಕೊಟ್ಟು ಭಾರತಕ್ಕೆ ಬೆಂಬಲ ನೀಡಿದರೆ ಭಾರತ ಅನಾಯಾಸವಾಗಿ ಚೀನಾವನ್ನು ಗೆದ್ದು ಬಿಡುತ್ತದೆ. ಒಂದುವೇಳೆ ಯುದ್ದ ನಡೆದಿದ್ದೇ ಆದರೆ ಯಾವ ರಾಷ್ಟ್ರಗಳೂ ಚೀನಾ ಪರ ನಿಲ್ಲದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು ಭಾರತದ ಪ್ರಧಾನಿ ನರೇಂದ್ರ ಮೋದಿ! ಇಷ್ಟೇ ಅಲ್ಲದೇ ಚೀನಾ ಮಾಡುವ ತಪ್ಪುಗಳನ್ನು ಇಡೀ ಜಗತ್ತಿಗೆ ತೋರಿಸುವಲ್ಲಿ ಮೋದಿ ಯಶಸ್ವಿಯಾಗಿದ್ದರು ಎನ್ನುವುದು ಚೀನಾಕ್ಕೆ ತಿಳಿದಿರುವ ಸಂಗತಿ!!

70 ದಿನಗಳ ಬಿಕ್ಕಟ್ಟು ಅಂತ್ಯಗೊಂಡ ಬಳಿಕ ಚೀನಾವು ತನ್ನ ಬುಲ್ಡೋಜರ್‍ಗಳನ್ನು ಮತ್ತು ರಸ್ತೆ ನಿರ್ಮಾಣ ಉಪಕರಣಗಳನ್ನು ಹಿಂದಕ್ಕೆ ಪಡೆದುಕೊಂಡಿದೆ ಎಂದು
ಭಾರತದ ಅಧಿಕಾರಿಗಳು ಹೇಳಿದ್ದರು. ಆದರೆ, ವಾತಾವರಣ ಸೂಕ್ತವಾಗಿ ಇಲ್ಲದ ಕಾರಣಕ್ಕಾಗಿ ಕಾಮಗಾರಿ ನಿಲ್ಲಿಸಿದ್ದಾಗಿ ಚೀನಾ ಹೇಳಿಕೊಂಡಿತ್ತು. ಆದರೆ, ಇದೀಗ
ದೋಕ್ಲಾಮ್ ಬಿಕ್ಕಟ್ಟು ಸೃಷ್ಟಿಯಾದ ಪ್ರದೇಶದಿಂದ 10 ಕಿ.ಮೀ. ದೂರದಲ್ಲಿ, ಹಾಲಿ ಇರುವ ರಸ್ತೆಯನ್ನು ವಿಸ್ತರಿಸುವ ಕಾರ್ಯಕ್ಕೆ ಚೀನಾ ಚಾಲನೆ ನೀಡಿದೆ. ಈ ಮೂಲಕ
ವಿವಾದಿತ ದೋಕ್ಲಾಮ್‍ ಪ್ರಸ್ಥಭೂಮಿ ತನಗೆ ಸೇರಿದ್ದೆಂದು ಪ್ರತಿಪಾದಿಸುವ ಕೆಲಸಕ್ಕೆ ಮತ್ತೆ ಕೈ ಹಾಕಿದೆ. ಈ ಹಿಂದೆ ರಸ್ತೆ ನಿರ್ಮಾಣಕ್ಕೆ ಬಳಸಿದ್ದ ಸಾಮಗ್ರಿಗಳನ್ನು ದೋಕ್ಲಾಮ್‍ನಿಂದ ಉತ್ತರ ಮತ್ತು ಪಶ್ಚಿಮಕ್ಕೆ ಸಾಗಿಸಿದೆ. ಅಲ್ಲಿಗೆ ರಸ್ತೆ ನಿರ್ಮಾಣ ಕೆಲಸಗಾರರನ್ನು ಕರೆಸಿಕೊಳ್ಳಲಾಗಿದ್ದು, ಕಾಮಗಾರಿಯ ಮೇಲುಸ್ತುವಾರಿಗೆ ಸುಮಾರು 500 ಸೈನಿಕರನ್ನು ನಿಯೋಜಿಸಲಾಗಿದೆ. ಆದರೆ, ಈ ಯೋಧರು ಶಾಶ್ವತವಾಗಿ ನಿಯೋಜಿಸಲ್ಪಟ್ಟವರೇ ಎಂಬ ಬಗ್ಗೆ ಸುಳಿವು ಮಾತ್ರ ಈ
ವರೆಗೆ ಲಭ್ಯವಾಗಿಲ್ಲ!! ಅಂತೂ ಭಾರತದ ಮೇಲೆ ಸದಾ ಕೆಂಗಣ್ಣಿರಿಸಿರುವ ಚೀನಾ, ಇದೀಗ ಹಲ್ಲುಕಿತ್ತ ಹಾವಿನಂತಿರುವುದು ಮಾತ್ರ ನಿಜ!!!

– ಅಲೋಖಾ

Tags

Related Articles

Close