ಪ್ರಚಲಿತ

‘ದ ವೈರ್’ ಎಂಬ ಸುದ್ದಿ ವಾಹಿನಿಯ ವಿರುದ್ಧ ಅಮಿತ್ ಷಾ ಮಗ 100,00,00,000 ರೂಗಳಷ್ಟು ಮಾನನಷ್ಟ ಮೊಕದ್ದಮೆ ಹಾಕಿದ್ಯಾಕೆ ಗೊತ್ತೇ?!

ಕೆಲವರಿಗೆ ಹಾಗೇ! ಪ್ರಸಿದ್ಧಿ ಪಡೆದ ಒಂದಷ್ಟು ಜನರ ಬಗ್ಗೆ ಬಿಟ್ಟಿ ಭಾಷಣ ನೀಡುತ್ತಾ ಚಾರಿತ್ರ್ಯ ವಧೆ ಮಾಡುವುದೇ ಕೆಲಸವಷ್ಟೇ! ಅದೂ ಸತ್ಯವನ್ನೇ ಹೇಳಿದರೆ ನಂತರ ನೋಡಬಹುದು! ಆದರೆ.. ಸುಳ್ಳುಗಳಿಂದಲೇ ಇಡೀ ದೇಶವನ್ನಾಳಿಬಿಡುವ ಕೆಲ ಮಾಧ್ಯಮಗಳಿಗೆ, ಅದರೊಳಗಿನ ಸಿಬ್ಬಂದಿಗಳಿಗೆ ಏನು ಹೇಳಬಹುದು?! ಈ ಪ್ರಸಿದ್ಧ ವ್ಯಕ್ತಿ ಅಪ್ಪಿ-ತಪ್ಪಿ ಬಲಪಂಥೀಯನಾದರೆ ಕಥೆ ಗೋವಿಂದ!

ಈ ಪರಿಸ್ಥಿತಿಯೂ ಸಹ ಅಮಿತ್ ಷಾ ಮಗನಾದ ಜೈ ಷಾ ಗೆ ಆಗಿದೆ! ಯಾವಾಗ ಅಮಿತ್ ಷಾ ನನ್ನು ವಿರೋಧಿಸಿದ್ದೂ ಅಟ್ಟರ್ ಫ್ಲಾಪ್ ಆಗಿದ್ದೇ, ವಿರೋಧ ಪಕ್ಷಕ್ಕೆ ಬೇರೇನೂ ಕಾಣದೇ ‘The Wire’ ಎನ್ನುವ ಅಂತರ್ಜಾಲ ಸುದ್ದಿ ವಾಹಿನಿಯೊಂದು ‘The Golden Touch Of Amit Shah‘ ಎನ್ನುವ ಶೀರ್ಷಿಕೆಯಡಿ ಅದೆಷ್ಟು ಸುಳ್ಳು ಸುದ್ದಿಗಳನ್ನು ಹರಡಿತೋ ಗೊತ್ತಿಲ್ಲ! ಅಮಿತ್ ಷಾ ಮಗನ ಬಗ್ಗೆ ವಿರೋಧ ಪ್ರಾರಂಭವಾಗಿಯೇ ಬಿಟ್ಟಿತು!

ಲೇಖನ ಹೇಳಿದ್ದೇನು ಗೊತ್ತೇ?!

ಬಿಡಿ! ಮೂರ್ಖರಿಗೆ ಗಣಿತ ಲೆಕ್ಕಾಚಾರವೂ ಒಮ್ಮೊಮ್ಮೆ ತಪ್ಪುತ್ತದೆ!

ಅಮಿತ್ ಷಾ ಮಗನಾದ ಜೈ ಷಾ ಕಂಪೆನಿಯೊಂದು 16,000 ಪಟ್ಟು ತನ್ನ ಆದಾಯಗಳನ್ನು ಹೆಚ್ಚಿಸಿಕೊಂಡಿದೆ! ಅದೂ ನರೇಂದ್ರ ಮೋದಿ 2014 ರಲ್ಲಿ ಚುನಾವಣೆಯನ್ನು ಗೆದ್ದ ನಂತರ ಕಂಪೆನಿ ಬಹಳ ಲಾಭ ಸಾಧಿಸಿದೆ! ಅಲ್ಲದೇ, ಜೈ ಷಾ ಕಂಪೆನಿಯ ಆದಾಯ ಒಂದೇ ವರ್ಷದಲ್ಲಿ 50,000 ರೂಪಾಯಿಗಳಿಂದ 80,00,00,000 ರೂಪಾಯಿಗಳ ತನಕ ಹೆಚ್ಚಳವಾಗಿದೆ!”

ಯಾರಿಗಾದರೂ ಇದೆಂತಹ ತಿಕ್ಕಲು ಸಮೀಕ್ಷೆ ಎನ್ನಿಸುತ್ತದೆ! ಒಂದೇ ವರ್ಷದಲ್ಲಿ 50,000 ರೂಗಳಿಂದ 80,00,00,000 ರೂಗಳವರಗೆ ತನ್ನ ವಹಿವಾಟನು ಹೆಚ್ಚಿಸಿಕೊಳ್ಳುತ್ತದೆಂದರೆ ಅರ್ಥವಿದೆಯೇ?! ಅದಕ್ಕೂ ಹೆಚ್ಚಾಗಿ 16,000 ಪಟ್ಟು ಲಾಭವನ್ನು ಪಡೆದುಕೊಂಡಿದೆ ಎಂದರೆ?! ಆದರೆ, ನಿಜವಾಗಲೂ
ಹೆಚ್ಚಳವಾಗಿರುವುದು 80 ಕೋಟಿಯಷ್ಟೇ! ಅದರಲ್ಲಿ ಯಾವ ಅತ್ಯಾಶ್ಚರ್ಯವೂ ಇಲ್ಲ!

ಆ ಲೇಖನದ ಪ್ರತಿ ಮಾಹಿತಿಯೂ ಸುಳ್ಳು!

The Wire ಎಂಬ ಪತ್ರಿಕೆಯ ಸಂಪಾದಕನ ಪ್ರಕಾರ 2014 – 15 ರಲ್ಲಿ ಜೈ ಷಾ ನ ‘Temple Enterprise Private Ltd.’ ಎಂಬ ಕಂಪೆನಿಯ ಲಾಭ 18,728 ರೂ! ಹಾಗೂ ವಹಿವಾಟು ಇದ್ದದ್ದು 50,000 ರೂ!

ಅದರ ನಂತರದ ವರ್ಷಗಳಲಿ, ಅಂದರೆ 2015 – 16 ರಲ್ಲಿ ಕಂಪೆನಿಯ ವಹಿವಾಟು 16,000 ಪಟ್ಟು ಹೆಚ್ಚಾಗಿತ್ತೆಂದು ಹೇಳಿದ ‘The Wire’ ಲಾಭದ ಎಷ್ಟಾಗಿತ್ತು ಎಂಬುದನ್ನೂ ಹೇಳಿರಲಿಲ್ಲ ಎಂಬುವದಕ್ಕಿಂತ ಯಾವುದೇ ಆಧಾರವಿರಲಿಲ್ಲ. ಲಾಭವನ್ನು ಹೇಳದ ಕಾರಣ ಆ ಕಂಪೆನಿಗಾದ ಬರೋಬ್ಬರಿ 1.48 ಕೋಟಿ ರೂಗಳಷ್ಟು ನಷ್ಟ!

ಅಕ್ಟೋಬರ್ 2016 ರಲ್ಲಿ ಜೈ ಕಂಪೆನಿ ಲಾಭ ಗಳಿಸಿಕೊಳ್ಳುವುದಕ್ಕಿಂತ ನಷ್ಟವನ್ನನುಭವಿಸಿತ್ತು. ಅದರೆಲ್ಲ ಯೋಜನೆಗಳೂ ಸಹ ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗದೇ ಕಂಪೆನಿ ನಷ್ಟ ಕಂಡಿತ್ತು. ಆದ ನಷ್ಟವನ್ನು ತನ್ನ ವರ್ಷದ Director’s Report ನಲ್ಲಿಯೂ ಸಹ ತಿಳಿಸಿತ್ತು. ಹಾಗಾದಾಗ, ಹಗರಣಗಳೆಲ್ಲಿವೆ?! ನರೇಂದ್ರ ಮೋದಿ ಗೆದ್ದ ನಂತರ ಅಮಿತ್ ಷಾ ರವರ ಮಗ ಸಾವಿರಾರು ಕೋಟಿಗಟ್ಟಲೇ ಹಗರಣ ನಡೆಸಿದ್ದಾನೆ ಎಂಬ ‘The Wire’ ಪತ್ರಿಕೆಯ ಆರೋಪಕ್ಕೆ ಸಾಕ್ಷಿಗಳೆಲ್ಲಿದೆ?! ಯಾವ ಆಧಾರವಿದೆ?!

ಲೇಖನದಲ್ಲಿ ಜೈ ಕಂಪೆನಿ ಕೋಟಿಗಟ್ಟಲೆ ಹಣವನ್ನು ಸಾಲ ತೆಗೆದುಕೊಂಡಿದೆ ಎಂದೂ ಪ್ರಕಟಿಸಿದೆ. ಅದಕ್ಕೆ ಕೊಟ್ಟ ಆಧಾರವೆಲ್ಲವೂ ಸಹ ಕಂಪೆನಿಯ ಖಾತೆ ಗಳ ದಾಖಲೆಗಳ ಮೇಲೆಯೇ ಇರುವಾಗ ಕಂಪೆನಿಯ ಒಂದೊಂದು ರೂಗಳ ಸಾಲವೂ ಸಹ ಕಾನೂನುಬದ್ಧವಾಗಿಯೇ ನ್ಯಾಯಯುತವಾಗಿ ಕಂಪೆನಿಯು ತೆಗೆದುಕೊಂಡಿದೆ!

ಲೇಖಕಿಯನ್ನು ‘The Economic Times’ ಪತ್ರಿಕೆಯಿಂದ ಅಮಾನತುಗೊಳಿಸಿದರು! ಯಾಕೆ ಗೊತ್ತೇ?!

ಮೊದಲನೆಯದಾಗಿ, ಈ ಆರೋಪ ಹೊರಿಸಿ ಲೇಖನ ಬರೆದವಳು ರೋಹಿಣಿ ಸಿಂಗ್ ಎಂಬುವವಳು! ಆಕೆ 2017 ರ ಉತ್ತರ ಪ್ರದೇಶದ ಚುನಾವಣೆಯ ಬಗ್ಗೆ ಬಿಜೆಪಿಯ ವಿರುದ್ಧ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಯಾವುದೇ ಆಧಾರವಿಲ್ಲದೇ ಲೇಖನ ಬರೆದಿದ್ದಕ್ಕೆ The Economic Times ಆಕೆಯನ್ನ ಕೆಲಸದಿಂದ ಶಾಶ್ವತವಾಗಿ ಅಮಾನತುಗೊಳಿಸಿತ್ತು. ಅಲ್ಲದೇ, ವಿವಾದಕ್ಕೊಳಗಾಗಿದ್ದ ನೀರಾ ರಾಡಿಯಾ ಟೇಪ್ ಗಳಲ್ಲಿಯೂ ಸಹ ರೋಹಿಣಿ ಸಿಂಗ್ ನ ಹೆಸರು ಕೇಳಿ ಬಂದಿತ್ತು.!

ಈ ಕೆಳಗಿನ ಟ್ವೀಟ್ ಗಳೇ ಸಾಕು ಆಕೆಯ ‘ಲದ್ಧಿಮತ್ತೆ’ಗೆ ಮನಸೋಲಲು!

100 ಕೋಟಿ ರೂಗಳ ಡಿಫಾಮೇಶನ್ನಿನ ದಾವೆ ಹಾಕಿದ್ದಾರೆ ಅಮಿತ್ ಷಾ ಮಗ!!

ಯಾವುದೇ ಮಾಧ್ಯಮವಾಗಲಿ, ಆಧಾರ ರಹಿತವಾದ, ಮಿಥ್ಯಾರೋಪವನ್ನು ಮಾಡಿ, ಒಬ್ಬರ ಚಾರಿತ್ರ್ಯ ವಧೆಯನ್ನು ಮಾಡಿದರೆ, ಅದಕ್ಕೆ ತಕ್ಕನಾದ ಶಿಕ್ಷೆಯಾಗಲೇ ಬೇಕು! ಅದೇ ರೀತಿ ಅಮಿತ್ ಷಾ ಮಗ ಕೂಡ ಒಂದೊಳ್ಳೆಯ ಕೆಲಸ ಮಾಡಿದ್ದಾರೆ! ಪ್ರಾರಂಭದಲ್ಲಿ, ಬಿಜೆಪಿಯ ರೈಲ್ವೇ ಒಕ್ಕೂಟದ ಮಂತ್ರಿ ಹಾಗೂ ನಾಯಕರಾದ ಪೀಯೂಶ್ ಗೋಯೆಲ್ ‘the wire’ ಎಂಬ ಸುಳ್ಳು ವಾಹಿನಿಯ ಆಟವನ್ನು ಬಯಲಿಗೆಳೆದಿದ್ದರಷ್ಟೇ! ಈಗ ಅಮಿತ್ ಷಾ ಮಗ ಅದ್ಭುತವಾಗಿಯೇ ಚಾಟಿ ಬೀಸಿದ್ದಾರೆ!

ಜೈ ಷಾ ಮೊದಲು The Wire ನ ಸಂಪಾದಕರು, ಲೇಖಕಿ ಹಾಗೂ ವೆಬ್ ಪೋರ್ಟಲ್ ನ ಅಧ್ಯಕ್ಷನ ಮೇಲೆ Criminal defamation ಮೊಕದ್ದಮೆ  ಹೂಡುವುದಾಗಿ ಹೇಳಿಕೆ ಕೊಟ್ಟಿದ್ದರಲ್ಲದೇ, ಇಂತಹವರಿಗೆ 100 ಕೋಟಿ ದಂಡ ತೆರುವಂತೆ ಮಾಡುತ್ತೇನೆ ಎಂದಿದ್ದರು! ಅಲ್ಲದೇ, ಮೊಕದ್ದಮೆಯನ್ನು ಅಹ್ಮದಾಬಾದಿನಲ್ಲಿ ಹಾಕುತ್ತೇನೆಂದು ತಿಳಿಸಿದ್ದರು.

ಈ ಲೇಖನವೊಂದು ನನ್ನ ಭವಿಷ್ಯದ, ನನ್ನ ಕಂಪೆನಿಯ ಯಶಸ್ಸಿನ ಹಾಗೂ ನನ್ನ ತಂದೆಯವರಾದ ಅಮಿತ್ ಷಾ ರ ಘನತೆಯ ವಿರುದ್ಧವಾಗಿ ಮಿಥ್ಯಾರೋಪ ಮಾಡೊರುವುದಲ್ಲದೇ, ಸಾಮಾಜಿಕವಾಗಿ ನನ್ನ ಕುಟುಂಬದ ಹಾಗೂ ಕಂಪೆನಿಯ ಚಾರಿತ್ರ್ಯ ವಧೆಯನ್ನೂ ಮಾಡಿರುವುದು ಸಾಬೀತಾಗಿದೆ. ಇಂತಹ ಮಾಧ್ಯಮ ಸಮಾಜದಲ್ಲಿಯೂ ಅಶಾಂತಿಯನ್ನು ಹರಡುತ್ತದೆಯಷ್ಟೇ!”

ಅಲ್ಲದೇ, “ಅಕಸ್ಮಾತ್, ಇದೇ ಲೇಖನವೊಂದನ್ನು ಆಧಾರವಾಗಿಟ್ಟುಕೊಂಡು ಬೇರ್ಯಾವ ಮಾಧ್ಯಮಗಳಲ್ಲೂ ಮಿಥ್ಯಾರೋಪ ಮಾಡಿದರೆ ‘the wire’ಗಾದ ಗತಿ ಯೇ ಎಲ್ಲವಕ್ಕೂ ಆಗುವುದು” ಎಂದೂ ಎಚ್ಚರಿಸಿದ್ದಾರೆ ಜೈ ಷಾ!

ಆದರೂ ಕೂಡ, ಗಾಂಧಿ ಕುಟುಂಬದ ಒಡೆತನದ National Herald ಪತ್ರಿಕೆ ಇದೇ ಲೇಖನವನ್ನು ಆಧಾರವಾಗಿಟ್ಟುಕೊಂಡು ಮತ್ತೊಂದು ಲೇಖನವನ್ನು ಸಿದ್ಧಪಡಿಸಿದೆ! ಅದರ ಶೀರ್ಷಿಕೆ ‘ಅಮಿತ್ ಷಾ ಮಗನ ವಿಕಾಸ : ಪಿಯೂಷ್ ಗೋಯೆಲ್ ಗೆ ಉತ್ತರಿಸುವುದು ಬಹಳಷ್ಟಿದೆ‘ !!

ಬಹುಷಃ ಕಾಂಗ್ರೆಸ್ ಪತ್ರಿಕೆಯ ಹುಚ್ಚುತನಕ್ಕೂ ಜೈ ಷಾ ಗತಿ ಕಾಣಿಸುತ್ತಾರೇನೋ ಏನೋ! ಆದರೆ, ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಈ ಅರೆಹುಚ್ಚು ದೇಶ ವಿರೋಧಿ ಪತ್ರಿಕೆಗಳಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಷಾ ಪುತ್ರ!!

Source :OutLookIndia – Original Link

– ತಪಸ್ವಿ

Tags

Related Articles

Close