ಪ್ರಚಲಿತ

ನನ್ನ ಪರ ನಾಯಿ ಟ್ವೀಟ್ ಮಾಡುತ್ತೆ ಎಂದ ರಾಹುಲ್ ಗಾಂಧಿಯ ವಾಖ್ಯಾನದಿಂದ ಕಾಂಗ್ರೆಸ್ಸಿಗರು ಮುಜುಗರವನ್ನನುಭವಿಸಿದ್ದು ಹೇಗೆ ಗೊತ್ತೇ?!

ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಸಕ್ರಿಯವಾಗಿರೋದರ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ತನಗಾಗಿ ನಾಯಿ ಟ್ವೀಟ್ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ್ದು ಇದೀಗ ಟ್ರೆಂಡಿಂಗ್ ಆಗಿದೆ.!!

ಟ್ವಿಟ್ಟರ್ ನಲ್ಲಿ ತಮ್ಮ ನಾಯಿ ಪಿಡಿಯ ವಿಡಿಯೋವೊಂದನ್ನು ರಾಹುಲ್ ಪೋಸ್ಟ್ ಮಾಡಿದ್ದಾರೆ.!! ರಾಹುಲ್ ಅವರು “ಪಿಡಿ” ಎಂದು ಕರೆದ ತಕ್ಷಣ ಹುಲ್ಲು ಹಾಸಿನ ಮೇಲೆ ಬಂದು ನಿಲ್ಲುತ್ತದೆ.!! ಈ ವೇಳೆ ರಾಹುಲ್ ನಮಸ್ಕಾರ ಮಾಡು ಅಂತ ಹೇಳುತ್ತಾರೆ.!! ಅಂತೆಯೇ ಪಿಡಿ ತನ್ನ ಎರಡು ಮುಂಗಾಲುಗಳನ್ನು ಮೇಲೆತ್ತಿ ನಿಲ್ಲುತ್ತದೆ. ನಂತರ ರಾಹುಲ್ ಬಿಸ್ಕೆಟ್‍ವೊಂದನ್ನು ಅದರ ಮೂಗಿನ ಮೇಲೆ ಇರಿಸುತ್ತಾರೆ. ರಾಹುಲ್ ಚಿಟಿಕೆ ಹೊಡೆದ ಕ್ಷಣ ಮಾತ್ರದಲ್ಲಿ ನಾಯಿ ತನ್ನ ಬಾಯಿಗೆ ಬಿಸ್ಕತ್ ಎಳೆದುಕೊಳ್ಳುತ್ತದೆ. ಸ್ವತಃ ರಾಹುಲ್ ಗಾಂಧಿಯೇ ನನಗಿಂತ ಈ ನನ್ನ ನಾಯಿಯೇ ತುಂಬಾ ಬುದ್ದಿವಂತ ಎಂದು ಅವರೇ ಹೇಳಿರ ಬೇಕಾದರೆ ನಾವು ಕೂಡಾ ನಂಬಲೇ ಬೇಕಾದ ಸಂಗತಿಯಾಗಿದೆ.

ರಾಹುಲ್ ರ ಟ್ವಿಟ್ಟರ್ ಖಾತೆಯನ್ನು ಯಾರು ನಿಭಾಯಿಸುತ್ತಾರೆ ಅನ್ನೋ ಪ್ರಶ್ನೆ ಯಾವಾಗಲೂ ಜನರಿಗೆ ಕಾಡುತ್ತಲೇ ಇರುತ್ತಿತ್ತು. ಅದು ಬೇರೆ ಯಾರೂ ಅಲ್ಲ ನಾನೇ ಪಿಡಿ…  ನಾನು ಆತನಿಗಿಂತ ಬಹಳ ಕೂಲ್… ನೋಡಿ ಟ್ವೀಟ್‍ನಿಂದ ನಾನೇನು ಮಾಡಬಲ್ಲೆ.. ಊಪ್ಸ್…” ಎಂದು ಟ್ವೀಟ್ ಮೂಲಕ ರಾಹುಲ್ ಗಾಂಧಿ ಹೇಳಿ ಕೊಂಡಿದ್ದಾರೆ.!!

47 ವರ್ಷದ ಇಂತಹ ಯುವಕನಾಗಿರುವಂತಹ ರಾಹುಲ್ ಗಾಂಧಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ ಎಂದರೆ ಯಾರಾದರೂ ನಂಬಲು ಸಾಧ್ಯವೇ? 2019 ರ
ಪ್ರಧಾನಿ ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದಾರೆ ಬೇರೆ!! ನಿಮ್ಮಂತಹವರಿಗೆ ಪ್ರಧಾನಿ ಹುದ್ದೆ ಕೊಡುವುದನ್ನು ಕಲ್ಪನೆ ಮಾಡಲೂ ಅಸಹ್ಯವಾಗುತ್ತದೆ!!
ರಾಹುಲ್ ಗಾಂಧಿಗಿಂತ ಆತನ ನಾಯಿ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸಬಲ್ಲದು ಎಂದು ಸ್ವತಃ ರಾಹುಲ್ ಗಾಂಧಿಯವರೇ ಒಪ್ಪಿಕೊಂಡಿದ್ದಾರೆ.!! ಈ ರೀತಿಯಾಗಿ
ರಾಹುಲ್ ಟ್ವೇಟ್ ಮಾಡಿರುವುದು ಇದು ವೈರಲ್ ಆಗಿದೆ.!! ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಅನ್ನು ಈವರೆಗೆ ಸುಮಾರು 10 ಸಾವಿರ ಜನ ರಿಟ್ವೀಟ್ ಮಾಡಿದ್ದು, 24 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗುವುದಕ್ಕೂ ರೆಡಿಯಾಗುತ್ತಿದ್ದಾರೆ.!! ಕೆಳಗಿನ ಟ್ವೀಟ್ ಅನ್ನು ಗಮನಿಸಿದಾಗ ಇಡೀ ಭಾರತದ ಜನರು ಯೋಚಿಸುವ ಹಾಗೆ ಇವರು ಕೂಡಾ ಟ್ವೀಟ್ ಮಾಡಿದ್ದಾರೆ.!!

ಯಾರಾದರೂ ನಂಬಲು ಸಾಧ್ಯವೇ? ಭಾರತದಲ್ಲಿ ಕಾಂಗ್ರೆಸ್ ಮುಖಂಡರಿಗಿಂತ ಈ “ಪಿಡಿ” ಸಾಮಥ್ರ್ಯ ಅಥವಾ ಶಕ್ತಿಶಾಲಿ ಎಂದು ನಂಬಲು ಸಾಧ್ಯವೇ? ನಾವು
ಮೊದಲು ಕಾಂಗ್ರೆಸ್ಸಿಗರ ಕ್ರಮಾನುಗತವನ್ನು ನೋಡೋಣ!! ಕಾಂಗ್ರೆಸ್ ನಾಯಕರಿಗಿಂತ ಪಿಡಿ ಯು ಮಹತ್ವದ ಸ್ಥಾನವನ್ನು ಪಡೆದಿದೆ ಎಂದು ನಮಗೆ
ಕ್ರಮಾನುಗತವನ್ನು ನೋಡಿದಾಗಲೇ ತಿಳಿಯಬಹುದು.

ರಾಹುಲ್ ಅವರ ಟ್ವೀಟ್‍ಗೆ ಅಸ್ಸಾಂನ ಬಿಜೆಪಿ ಸಚಿವ ಹಿಮಂತ್ ಬಿಸ್ವಾ ಶರ್ಮಾ ಲೇವಡಿ ಮಾಡಿದ್ದಾರೆ. ನಾವು ಅಸ್ಸಾಂನ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಬಂದಾಗಲೂ ನೀವು ನಾಯಿಗೆ ಬಿಸ್ಕೆಟ್ ತಿನ್ನಿಸಿದ್ದಿದ್ದು ನನಗೆ ಇನ್ನೂ ನೆನಪಿದೆ.!! ಅದೇ ಸಮಯದಲ್ಲಿ ನಾಯಿಯು ಪ್ಲೇಟನ್ನು ನೆಕ್ಕಿದ ಘಟನೆ ಕೂಡಾ ನಡೆದಿತ್ತು. ಆದರೆ ನಾಯಿ ಪ್ಲೇಟ್ ನೆಕ್ಕಿದ ತಪ್ಪಿಗೆ ಒಂದು “ಸಾರಿ” ಎನ್ನುವ ಪದವನ್ನು ಕೇಳಲಿಲ್ಲ ಎಂಬುವುದನ್ನು ವ್ಯಕ್ತಪಡಿಸಿದ್ದಾರೆ. ಇವರು ಮುಂಚೆ ಕಾಂಗ್ರೆಸ್ ಪಕ್ಷದಲ್ಲಿದ್ದರು.

ನಾಯಿಗೆ ಪಿಡಿ ಎಂಬ ಹೆಸರು ಹೇಗೆ ಬಂತು ಎಂಬುವುದು ಹಲವಾರು ಮಂದಿಗೆ ಅನುಮಾನ ಶುರುವಾಗಿದ್ದು, ಈ ಹೆಸರಿನ ಮೇಲೆ ತನಿಖೆ ಮಾಡಲು ರೆಡಿಯಾಗಿದ್ದಾರೆ!! ಪಿಡಿ ಎಂಬುವುದು ಕೆಲವರ ಅಭಿಪ್ರಾಯದ ಪ್ರಕಾರ ಪ್ರಿಯಾಂಕಾ ಗಾಂಧಿಯ ಶಾರ್ಟ್ ಕಟ್ ಹೆಸರು ಇಟ್ಟಿರಬಹುದೇ ಎಂದು ಹಲವಾರು ಮಂದಿ ಯೋಚಿಸುತ್ತಿದ್ದಾರೆ. ಆದರೆ ನಾವು ಪ್ರಿಯಾಂಕ ಗಾಂಧಿಯ ಹೆಸರು ಎಂದು ಹೇಳುತ್ತಿಲ್ಲ… ಕೆಲವರ ಅಭಿಪ್ರಾಯ ಅಷ್ಟೆ !!. ಅದಕ್ಕೆ ಸಮ್ಮತವಾಗುವಂತೆ ಕೆಳಗಿನ ಟ್ವೀಟ್ ಅನ್ನು ಗಮನಿಸಬಹುದು.

ಕೇವಲ ರಾಹುಲ್ ಗಾಂಧಿ ಮಾತ್ರ ಅಲ್ಲ!! ಇಡೀ ಅವರ ಪರಿವಾರವೇ ನಾಯಿಗಾಗಿ ಇತರರನ್ನು ಅವಮಾನ ಮಾಡಿರುವ ಇತಿಹಾಸವಿದೆ!! ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇಬ್ಬರ ನಾಯಿಗೆ ತಂದಿಟ್ಟ ಬಿಸ್ಕತ್ತನ್ನು ಮೇನಕಾ ಗಾಂಧಿ ತನ್ನ ನಾಯಿಗೆ ಹಾಕಿದ್ದಕ್ಕೆ ದೊಡ್ಡ ಅಪಮಾನವನ್ನೇ ಮಾಡಿದ್ದಾರೆ…!! ಇಡೀ ಕುಟುಂಬಕ್ಕೆ ನಾಯಿ ತುಂಬಾ ಹತ್ತಿರವೆಂದು ಕಾಣುತ್ತದೆ.

ಕಾಂಗ್ರೆಸ್ ಪಕ್ಷದಲ್ಲಿ ಈ ನಾಯಿ(ಪಿಡಿ) ಗಾಂಧಿ ಕುಟುಂಬವನ್ನು ಮೆಚ್ಚಿಸುವ ಮೂಲಕ ಮಾತ್ರ ಸ್ಥಾನವನ್ನು ಪಡೆಯಬಹುದು. ರಾಹುಲ್‍ಗಾಂಧಿಯ ನಾಯಿಯನ್ನು
ಶ್ಲಾಘಿಸುತ್ತಿರುವ ಟ್ವೀಟ್‍ಗಳನ್ನು ಕೆಳಗೆ ಬಹಿರಂಗ ಪಡಿಸುತ್ತಿದೆ.

ರಾಹುಲ್ ಗಾಂಧಿಯ ಪಿಡಿಯ ಬಗ್ಗೆ ಟ್ವೀಟ್ ಮಾಡುವ ಮೊದಲು ಕಾಂಗ್ರೆಸ್‍ನ ಕೆಲ ಕಾರ್ಯಕರ್ತರು ಬಿಜೆಪಿಯವರ ಮುಖಗಳಿಗೆ ನಾಯಿಯ ಮುಖವಾಡವನ್ನು ಹಾಕಿ ಟ್ವೀಟ್ ಮಾಡುತ್ತಿದ್ದರು. ಇದರ ಮೂಲಕ ರಾಹುಲ್ ಗಾಂಧಿಗೆ ಮೆಚ್ಚಿಸುತ್ತಿರಬಹುದು.

ಇದಕ್ಕೆ ಪ್ರತಿಕ್ರಿಯಿಸಿ ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಲ್ವಿಯಾ ಟ್ವಿಟರ್‍ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು ಪಿಡಿ ಲಾವೋ , ಕಾಂಗ್ರೆಸ್ ಬಚಾವೋ
ಎಂದಿದ್ದಾರೆ. ಅಕ್ಷಯ್ ಕುಮಾರ್ ಅವರ ಮುಂದಿನ ಚಿತ್ರ ಪಾಡಾಮನ್‍ನ ಪೋಸ್ಟರ್ ಫೋಟೋಶಾಪ್ ಮಾಡಿ ಪಿಡಿ ಅವರ ಮಾಸ್ಟರ್‍ಗಂತಲೂ ಹೆಚ್ಚು ಬುದ್ದಿ ಹೊಂದಿದೆ ಎಂದು ಬರೆದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.!!

ಸಾರ್ವಜನಿಕ ಶೌಚಾಲಯವೊಂದು ಬಿಟ್ಟು ಉಳಿದ ಎಲ್ಲಾ ಕಡೆಗಳಲ್ಲಿ ಗಾಂಧಿ ಕುಟುಂಬದ ಹೆಸರನ್ನು ನಾಮಕರಣ ಮಾಡುತ್ತಾ ಬಂದಿದ್ದಾರೆ… ಮುಂದೆ ಏನಾದರೂ ಪ್ರಧಾನಿ ಚುನಾವಣೆಗೆ ಸ್ಪರ್ಧಿಸಿದರೆ ಪಿಡಿಯ ಹೆಸರನ್ನು ನಾಮಕರಣ ಮಾಡುವ ಸಾಧ್ಯತೆಯೂ ಜಾಸ್ತಿ ಇದೆ!!! ಹೀಗಾಗಿ ಎಲ್ಲ ಪಿಡಿಯ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ!! ಕೆಳಗಿನ ವಿಡೀಯೋ ಗಮನಿಸಿದಾಗ ಯಾವ ರೀತಿ ನಾಯಿಗೆ ತರಬೇತಿಯನ್ನು ನೀಡುತ್ತಿದ್ದಾರೆ ಎಂದು ಗಮನಿಸಬಹುದು.

ಕಾಂಗ್ರಸ್ಸಿಗರಿಗೆ ಈಗಲಾದರೂ ಅರ್ಥವಾಗಿರಬಹುದು.. ರಾಹುಲ್ ಗಾಂಧಿಯ ಕುಟುಂಬದಲ್ಲಿ ಯಾರು ತುಂಬಾ ಪವರ್ ಫುಲ್ ಎಂದು.!!

-ಪವಿತ್ರ

 

Tags

Related Articles

Close