ಅಂಕಣಪ್ರಚಲಿತ

ನನ್ನ ಮತ್ತು ಇಂದಿರಾ ಗಾಂಧಿಯ ಹನ್ನೆರಡು ವರ್ಷದ ಲೈಂಗಿಕ ಸಂಬಂಧ, ಅವಳನ್ನು ನಾನು ಪರದೆಯ ಹಿಂದೆ ಪರಪುರುಷನ ಜೊತೆನೋಡಿದಾಗ ಅಂತ್ಯವಾಯಿತು – ಎಮ್.ಓ.ಮಥಾಯ್.

ಅಂದಿನ ಮಹಿಳಾ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯ ಬಗ್ಗೆ ಹೆಮ್ಮೆಯಿಂದ ‘ಉಕ್ಕಿನ ಮಹಿಳೆ’ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ನಾಯಕರು ಆಕೆಯ ಪಾಕಿಸ್ಥಾನ ವಿಭಜನೆಯ ಸರದಾರಿಣಿ ಎಂದೆಲ್ಲ ಬೀಗುವವರು ಅವಳ ಬದುಕಿನೊಳಗಿದ್ದ ಒಂದಷ್ಟು ನಿಗೂಢಗಳನ್ನು ಹೇಳುವುದೇ ಇಲ್ಲ!

ಇಸವಿ 1946 ರಿಂದ 1959 ವರೆಗಿನ ವರ್ಷಗಳಲ್ಲಿ ಮೊದಲ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರು ರವರ ಆಪ್ತ ಕಾರ್ಯದರ್ಶಿ ಎಮ್. ಒ. ಮಥಾಯ್. ನೆಹರುವರ ಬಹುತೇಕ ಕಾರ್ಯಗಳಲ್ಲಿ ಹೆಚ್ಚಿನ ನಿಗಾವಹಿಸಿಕೊಂಡಿದ್ದವರು ಇಂದಿರಾ ಗಾಂಧಿಯ ಬಗ್ಗೆಯೂ ಸಹ ಹೆಚ್ಚು ನಿಗಾ ವಹಿಸಿ, ಇಂದಿರಾವರಿಗೂ ‘ಆಪ್ತ’ವೇ ಆದರೆನ್ನಿ!! ಹೌದು! ಮಥಾಯ್ ನೆಹರೂ ಕುಟುಂಬದ ಬಗ್ಗೆ ಬಗ್ಗೆ ಸ್ವಲ್ಪ ಹೆಚ್ಚೇ ಎನಿಸುವಷ್ಡು ತಿಳಿದುಕೊಂಡಿದ್ದರು. ಅವರ ‘Reminiscences-of-Neharu’ ಎಂಬ ಪುಸ್ತಕದಲ್ಲಿ ನೆಹರೂ ಕುಟುಂಬದ ಜಾತಕ ಜಾಲಾಡಿದ ಮಥಾಯ್, ಇಂದಿರಾ ಗಾಂಧಿಯ ಬಗ್ಗೆಯೂ ‘ಅವಳು’ ಎಂಬ ಒಂದುದ್ದದ ಅಧ್ಯಾಯವನ್ನೇ ಬರೆದರು!

ಇಂದಿರಾ ಗಾಂಧಿಯ ಗುಪ್ತ ಪ್ರಣಯ ಸರದಾರ ಎಮ್. ಒ. ಮಥಾಯ್!

ಮಥಾಯ್ ನೆಹರು ರವರ ಬಗೆಗೆ ಗೌರವಯುತವಾಗಿಯೇ ಬರೆದರಾದರೂ ಕೂಡ, ನೆಹರು ಮತ್ತು ಎಡ್ವಿನ್, ಪದ್ಮಜಾ ನಾಯ್ಡು, ಮೃದುಲಾ ಸುರಭಿ ಹಾಗೂ ಇನ್ನಿತರ ಪ್ರಣಯ ಸಂಬಂಧಗಳನ್ನೂ ತೆರೆದಿಟ್ಟರು. ನೆಹರುವರ ‘ಹೆಣ್ಣುಬಾಕತನ’ವೆಂಬುದು ‘ಭಾರತ’ ದ ಹಿತಾಸಕ್ತಿಯ ಬಗ್ಗೆ ಗಮನ ಕೊಡಲಾಗದಷ್ಟು ಮುಂದುವರೆದಿತ್ತೆಂಬುದೂ ಅಷ್ಟೇ ಸತ್ಯ! ಅದರ ಪ್ರತಿಫಲ 1962 ರಲ್ಲಿ ನಡೆದ ಭಾರತ- ಚೀನಾ ಯುದ್ಧದಲ್ಲಿ ಭಾರತ ಸೋಲೊಪ್ಪಿಕೊಂಡಿತು. ಭಾರತದ ಒಂದಷ್ಟು ಭಾಗವೂ ಚೀನಾದ ಪಾಲಾಯಿತು!

ಅವರ ಪುಸ್ತಕದಲ್ಲಿ ‘ಅವಳು’ ಎಂಬ ಅಧ್ಯಾಯದ ಮೂಲಕ ಮಥಾಯ್ ಇಂದಿರಾ ಗಾಂಧಿಯೊಂದಿಗಿದ್ದ ಅನೈತಿಕ ಸಂಬಂಧವೊಂದನ್ನು ಭಾರತಕ್ಕೆ ಪರಿಚಯಿಸಿದರು!

ಮಥಾಯ್ ಹಾಗೂ ಇಂದಿರಾ ಗಾಂಧಿಯವರ ಲೈಂಗಿಕ ಸಂಬಂಧವೊಂದು ಕುಟುಂಬದಲ್ಲಿ ಗೊತ್ತಾದಾಗ ಕಲಹವಾಗಿತ್ತು. ನೆಹರುವಿಗೂ ಇಂದಿರಾಳ ಮತ್ತೊಬ್ಬ ಇನಿಯ ಫೆರೋಜ್ ಗಾಂಧಿಯೊಂದಿಗಿನ ಸಂಬಂಧ ಇಷ್ಟವಿರಲಿಲ್ಲ ಎಂಬುದು ಗೊತ್ತಿರುವ ಸಂಗತಿ. ಮಥಾಯ್ ‘ಆತ ಇಂದಿರಾಳ ಜೊತೆ ಹನ್ನೆರಡು ವರ್ಷಗಳ ಕಾಲ ಸಂಬಂಧವಿಟ್ಟುಕೊಂಡಿದ್ದ. ಒಮ್ಮೆ ಇಂದಿರಾ ಗರ್ಭಿಣಿಯಾಗಿ ಕೊನೆಗೆ ಗರ್ಭಪಾತ ಮಾಡಿಸಿಕೊಂಡಿದ್ದಳು’ ಎಂದು ಹೇಳಿದ್ದರು.

ಮಥಾಯ್ ಹೇಳುವ ಪ್ರಕಾರ ಇಂದಿರಾ ಗಾಂಧಿ ಮೊದಲ ಸಲ ಲೈಂಗಿಕ ಸಂಬಂಧಕ್ಕೆ ಆಹ್ವಾನ ನೀಡಿದಾಗ ಮಥಾಯ್ ರವರು ಲೈಂಗಿಕ ವಿಷಯದಲ್ಲಿ ತನಗಾವ ಅನುಭವವೂ ಇಲ್ಲವೆಂದು ಉತ್ತರಿಸಿದಾಗ, ಇಂದಿರಾ ಡಾ.ಅಬ್ರಹಾಂ ಸ್ಟೋನ್ ರವರ “ಲೈಂಗಿಕತೆ ಹಾಗೂ ಸ್ತ್ರೀಯ ಅಂಗರಚನೆ’ ಎಂಬೆರಡು ಪುಸ್ತಕವನ್ನು ಓದಲು ಕೊಟ್ಟಿದ್ದರಂತೆ!

ಮಥಾಯ್, ಇಂದಿರಾ ಗಾಂಧಿಯ ಜೊತೆಗಿನ ಲೈಂಗಿಕ ಸಂಪರ್ಕ ಸಿಕ್ಕಿದ ಮೇಲೆ ತನಗೆ ನಿಜವಾದ ಸುಖ ಗೊತ್ತಾಗಿದ್ದೆಂದು ಹೇಳುತ್ತಾರೆ. ಅಲ್ಲದೇ, “ಒಂದು ಸಂಜೆ ಅರಣ್ಯಪ್ರದೇಶಕ್ಕೆ ಕರೆದುಕೊಂಡು ಹೇಳಿದ ಇಂದಿರಾ ತನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳು! ‘ಆಕೆ ಯಾವಾಗಲೂ ‘ಕಳ್ಳ’ ಎಂದೇ ನನ್ನನ್ನು ಪ್ರೀತಿಯಿಂದ ಸಂಭೋಧಿಸುವಾಗ ನಾನೂ ‘ಕಳ್ಳಿ’ ಎಂದೇ ಕರೆಯುತ್ತಿದ್ದೆ.” ಎಂದಿದ್ದರು ಮಥಾಯ್!

ತನ್ನ ಸ್ತ್ರೀ ತತ್ವದ ಹಠ ಸಾಧನೆಗೋಸ್ಕರ ಎಂತಹ ಕ್ರೂರ ವಾಗಿದ್ದರೂ ಆಕೆ ‘ಪ್ರಣಯದಲ್ಲಿ ಮಾತ್ರ ದೇವತೆಯಾಗಿದ್ದಳು’ , ಆಕೆ ‘ಫ್ರೆಂಚ್ ಹಾಗೂ ಕೇರಳದ ನಾಯರ್ ಮಹಿಳೆ’ ಯರ ಹಾಗೆ ಪ್ರಣಯದಲ್ಲಿ ಕಲಾವಿದೆ! ಮಥಾಯ್ ಆಕೆಗೆ ‘ಮುತ್ತಿನ’ ಬಗೆಗಿದ್ದ ತೀರಲಾರದ ಮೋಹವನ್ನೂ ತೆರೆದಿಟ್ಟರು!

ಅಷ್ಟಿದ್ದರೂ ಮಥಾಯ್ ಇಂದಿರಾ ಜೊತೆಗಿನ ಅನೈತಿಕ ಸಂಬಂಧ ಕಡಿದುಕೊಂಡಿದ್ದೇಕೆ?!

ಇಂದಿರಾ ಜೊತೆ ಹೆಚ್ಚೇ ಎನ್ನಿಸುವಷ್ಟು ಸಂಬಂಧವಿರಿಸಿಕೊಂಡಿದ್ದ ಮಥಾಯ್ ತದನಂತರದಲ್ಲಿ ಆಕೆಯನ್ನು ತಿರಸ್ಕರಿಸಿಬಿಟ್ಟರು! ಮಥಾಯ್ ಕೊಡುವ ಕಾರಣ ಏನು ಗೊತ್ತಾ?!
” ಇಂದಿರಾಳಿಗೆ ನಾನೊಬ್ಬ ಮಾತ್ರವೇ ಇರಲಿಲ್ಲ! ಆಕೆಗೆ ಇನ್ನೊಬ್ಬ ವ್ಯಕ್ತಿಯ ಜೊತೆಗೂ ಅನೈತಿಕವಾದ ಲೈಂಗಿಕ ಸಂಬಂಧವಿತ್ತು! ಒಂದು ದಿನ ನಾನು ಇಂದಿರಾಳನ್ನು ಭೇಟಿಯಾಗಲು ಹೋದಾಗ, ಆಕೆ ಒಬ್ಬ ಪರಪುರುಷನ ಜೊತೆ ಸುಖಿಸುತ್ತಿದ್ದನ್ನು ನೋಡಿದೆ! ಆತ ಬೇರಾರೂ ಅಲ್ಲ, ಧೀರೇಂದ್ರ ಬ್ರಹ್ಮಚಾರಿ!!!!!!’ ತದನಂತರ, ಆಕೆ ಹೊರಗೆ ಬಂದಾಗ ‘ನಿನ್ನಲ್ಲಿ ಏನನ್ನೋ ಹೇಳುವುದಿತ್ತು, ಇನ್ಯಾವಾಗಲಾದರೂ ಹೇಳುತ್ತೇನೆ’ ಎಂದು ಹೊರ ನಡೆದೆ.”

ಇದೇ ಮಥಾಯ್ ಹಾಗೂ ಇಂದಿರಾ ಜೊತೆಗಿನ ಸಂಬಂಧಕ್ಕೆ ಅಂತ್ಯ ಹಾಡಿತ್ತು!

ಧೀರೇಂದ್ರ ಬ್ರಹ್ಮಚಾರಿ ‘ಯೋಗ ಗುರು’ ವಾಗಿದ್ದರೂ ಇಂದಿರಾ ಗಾಂಧಿ ಅವರನ್ನು ‘ಕಾಮ ಗುರು’ ವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದರು!

ಇಂದಿರಾ ಗಾಂಧಿ ತಾನೊಬ್ಬ ಹಿಂದೂವನ್ನು ಮದುವೆಯಾಗಲಾರೆನೆಂದಿದ್ದರೂ ಪ್ರಣಯ ಪ್ರಸಂಗಗಳಲ್ಲಿ ಆಕೆಗೆ ಬೇಕಿದ್ದದ್ದು ಹಿಂದೂವೇ ಆಗಿತ್ತು! ಅಲ್ಲದೆಯೇ, “ತಾನು ರಾಣಿ ಜೇನಿನ ಹಾಗೆ! ನಾನು ಪ್ರಣಯಗಳಲ್ಲಿ ಆಗಸದಲ್ಲಿರಲು ಇಚ್ಛಿಸುತ್ತೇನೆ.’ ಎಂದಾಗಿ ಹೇಳಿದ್ದರು!

ಅಧ್ಯಾಯದ ಕೊನೆಯಲ್ಲಿ ಮಥಾಯ್ ಬರೆಯುತ್ತಾರೆ, ” ನಾನು ಅವಳನ್ನು ತೀರ ಆಳವಾಗಿ ಪ್ರೀತಿಸುತ್ತಿದ್ದೆ.’

‘ಅವಳು’ – ಮಥಾಯ್!

“ಆಕೆಗೆ ಕ್ಲಿಯೋಪಾತ್ರಳ ಮೂಗಿತ್ತು, ಪಾಲಿನ್ ಬೊನಾಪರ್ತೆಯ ಕಣ್ಣುಗಳಿತ್ತು ಹಾಗೂ ವೀನಸ್ ನಂತಹ ಎದೆಯಿತ್ತು! ದೈಹಿಕವಾಗಿಯೂ ಹಾಗೂ ಮಾನಸಿಕವಾಗಿಯೂ ಆಕೆ ಸ್ತ್ರೀಗಿಂತಲೂ ಪುರುಷಳಾಗಿದ್ದಳು. ಆಕೆಯನ್ನು ನಾನು ‘ಪುರುಷತ್ವದ ಮಹಿಳೆ’ ಎಂದು ಕರೆಯಲಿಚ್ಛಿಸುತ್ತೇನೆ! ಅವಳನ್ನು ನಾನು ಮೊದಲು ಅವಳ ಪೂರ್ವಜರ ಮನೆಯಲ್ಲಿ 1945ರ ಚಳಿಗಾಲದಲ್ಲಿ ಭೇಟಿಯಾದೆ! ನಂತರದಲ್ಲಿ ಅವಳು ಒಂದು ಅಳುವ ಮಗುವಿನ ತಾಯಿಯಾಗಿದ್ದಳು! ಆಕೆ ಮೊಗದ ಮೇಲೆ ನೋವನ್ನು ಬಳಿದುಕೊಂಡಿದ್ದ ದುರಹಂಕಾರಿಯಾಗಿದ್ದಳು. ಆಕೆಯ ಎರಡನೇ ಮಗ 1946, ಡಿಸೆಂಬರಿನಲ್ಲಿ ಜನಿಸಿದ್ದ ‘ಬೇಡವಾದ ಮಗು’ ವಾಗಿದ್ದ. 1947 ರ ಹೊತ್ತಿಗೆ ಆಕೆ ಸಂಪೂರ್ಣವಾಗಿ ಕುಸಿದಿದ್ದಳು. ಆಕೆಯ ತಂದೆ ಅವಳಿಗೆ ಚೆಂದದ ಆಸ್ಟಿನ್ ಕಾರನ್ನು ಉಡೊಗೊರೆಯಾಗಿ ನೀಡಿದ್ದರು. ಆಕೆಗೆ ನಾನು ‘ಚಾಲನೆ’ ಮಾಡುವುದನ್ನು ಹೇಳಿಕೊಡಬೇಕಿತ್ತು. ಪ್ರಾರಂಭದಲ್ಲಿ ನಾನಾಕೆಯನ್ನು ವೈಸರಾಯ್ ಪೋಲೋ ಗ್ರೌಂಡಿಗೆ ಕರೆದೊಯ್ಯುತ್ತಿದ್ದೆ. ಆಕೆ ಬಹಳ ಬೇಗ ಕಲಿತುಬಿಟ್ಟಳು. ತದನಂತರ ಅವಳು ತುಂಬಿದ ಗರ್ಭಿಣಿಯಾದ್ದರಿಂದ ತರಬೇತಿಯನ್ನು ನಿಲ್ಲಿಸಿದೆ. ನಾನಾಕೆಗೆ ಇಲ್ಲಸಲ್ಲದ ತೊಂದರೆ ತಂದುಕೊಳ್ಳುವ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೆ. ಆಕೆಯ ಎರಡನೇ ಮಗ ಜನಿಸಿದ್ದು ಆ ಸಮಯದಲ್ಲಿಯೇ! ನಂತರದ ಫೆಬ್ರುವರಿಯಲ್ಲಿ ಆಕೆ ಮತ್ತೆ ತರಬೇತಿಗೆ ಸಿದ್ಧಳಾದಳು. ನಾವು ರಸ್ತೆಯಲ್ಲಿ ಚಾಲನೆ ಮಾಡಿ ನಂತರ ಕೊನ್ನಾಟ್ ವೃತ್ತಕ್ಕೆ ತೆರಳಿದೆವು. ನಾನಾಗ ” ನೀನು ನಿನಗೆಲ್ಲ ಗೊತ್ತಿದೆ ಎಂಬುದಾಗಿ ತಿಳಿದುಕೊಂಡಿದ್ದೀಯೆ, ಜಾಗೃತೆ ವಹಿಸು, ಏಕಾಗ್ರತೆ ವಹಿಸು, ಈ ವೃತ್ತದಲ್ಲಿ ಒಂದು ಸುತ್ತು ಹಾಕಿ ಬಾ’ ಎಂದೆಲ್ಲ ಹೇಳಿದಾಗ ಆಕೆ ನಾ ಹೇಳಿದಂತೆಯೇ ಮಾಡಿದ್ದಳು. ಅವತ್ತು ಅವಳ ಪಕ್ವತೆ ನೋಡಿ ನಾನು ತರಬೇತಿ ನಿಲ್ಲಿಸಿದೆ. ತದನಂತರದಲ್ಲಿಯೂ ಮುಂಚೆಯೂ ನಾನು ಬಿಡುವಿದ್ದಾಗ ಇಬ್ಬರೂ ಸಿನೆಮಾ ನೋಡುತ್ತಿದ್ದೆವು.

ಒಂದು ದಿನ ಆಕೆ ಸೇತುವೆಯಾಚೆಗಿದ್ದ ಅರಣ್ಯಕ್ಕೆ ಕಾರಿನಲ್ಲಿ ಕರೆದುಕೊಂಡು ಹೋದಳು. ಆಕೆಗೆ ಚಿಕ್ಕದಾಗಿರುವ ಕಾರು ಇಷ್ಟವಿರಲಿಲ್ಲವಾದ್ದರಿಂದ ನನ್ನ ಕಾರಿನಲ್ಲಿ ಹೋಗಿದ್ದೆವು. ಆಕೆ ಅರಣ್ಯದೊಳ ಪಾಳು ಬಿದ್ದ ಪ್ರದೇಶಕ್ಕೆ ಹೋಗಲು ಇಷ್ಟ ಪಡುತ್ತಿದ್ದಳು. ಕುತುಬ್ ಮಿನಾರಿನಾಚೆಗೆ ಯಾವಾಗಲೂ ಹೋಗುವ ಅಭ್ಯಾಸವಿತ್ತು. ಒಂದು ದಿನ, ತುಂಬ ಹೊತ್ತಿನ ಚಾಲನೆಯ ನಂತರ ಆಕೆ ‘ನೀ ನನ್ನ ಪ್ರೀತಿಸುವುದೇ ಇಲ್ಲ’ ಎಂದಳು. ಅದಕ್ಕೆ, ‘ ನನಗೆ ಗೊತ್ತಿಲ್ಲ, ನಾನದರ ಬಗ್ಗೆ ಯೋಚಿಸಿಲ್ಲ’ ಎಂದಷ್ಟೇ ಉತ್ತರಿಸಿದೆ. ತದನಂತರದಲ್ಲಿ ಪೂರ್ವಾಪರದ ಯೋಚನೆಯಿಲ್ಲದೇ ಆಕೆ ನನ್ನನ್ನು ಪ್ರೀತಿಸುತ್ತಿರುವುದು ನನಗೆ ತಿಳಿಯಿತು. ನನ್ನ ನೋಡಿದಾಗ ಅವಳ ಮುಖ ಅರಳುತ್ತಿತ್ತು. ಅವಳ ಬಗ್ಗೆ ನನ್ನಲ್ಲಿ ಮಾತನಾಡಲು ಪ್ರಾರಂಭಿಸಿದಳು. ಆಕೆಯ ಮದುವೆಯಾದ ಸ್ವಲ್ಪ ದಿನದ ನಂತರ ಆಕೆಯ ಪತಿ ಆಕೆಗೆ ನಿಷಠನಾಗಿರಲಿಲ್ಲವೆಂಬುದು ಅರಿವಾದದ್ದನ್ನು ಹೇಳಿದಳು. ಮನೆಯವರ ವಿರೋಧದಿಂದ ಆತನನ್ನು ವರಿಸಿದ ಆಕೆಗಿದು ದೊಡ್ಡ ಆಘಾತವಾಗಿತ್ತು. ಆಕೆ ಅವಳ ಸೀರೆ, ರವಿಕೆ, ಚಪ್ಪಲಿ ಎಲ್ಲವನ್ನೂ ಕಳೆದುಕೊಳ್ಳಲು ಪ್ರಾರಂಭಿಸಿದ್ದಳು. ಆಕೆ ಮೊದಲು ಮನೆಗೆಲಸದವರ ಬಗ್ಗೆ ಅನುಮಾನ ಪಟ್ಟಿದ್ದಳು. ಆದರೆ, ಒಂದು ದಿನ ತನ್ನ ಪತಿಯ ಸ್ನೇಹಿತೆಯರ ಬಳಿ ಅವಿದ್ದನ್ನು ನೋಡಿದಾಗ ಆಕೆಗೆಲ್ಲವೂ ಅರಿವಾಗಿತ್ತು. ಆಕೆಗೆ ನನ್ನ ಮೇಲಿರುವ ಇಂಗಿತ ನನಗರಿವಾದಾಗ ಹೇಳಿದ್ದೆ. ಒಂದು, ನಾನು ಮದುವೆಯಾದ ಹೆಣ್ಣಿನ ಹಿಂದೆ ಸುತ್ತುವುದಿಲ್ಲ. ಎರಡು, ನಾನು ಅವಳ ತಂದೆಗೆ ನಿಷ್ಠನಾಗಿರುವ ಕಾರಣ ಅವರ ಮನ ನೋಯುವಂತಹ ಕೆಲಸ ಮಾಡುವುದಿಲ್ಲ. ಆದರೆ ಇದೆಲ್ಲವನ್ನೂ ಆಕೆ ಸಮರ್ಥಿಸಿದಳು. ತನ್ನ ಪತಿಗೂ ತನಗೂ ಏನೂ ಇಲ್ಲ ವೆಂದು ಭರವಸೆ ನೀಡಿದಳು. ಅವನ ಸ್ಪರ್ಶವನ್ನು ಸಹಿಸಲಾರೆ..
ಹಾಗೂ ನನ್ನ ಮೇಲೆ ಆಕೆಗೆ ಕೋಪವಿತ್ತು, ‘ತನ್ನ ತಂದೆಗೂ ಇದಕ್ಕೂ ಸಂಬಂಧವೇನು?! ನಾನೇನು ಚಿಕ್ಕವಳೇ?!” ಎಂದು ಪ್ರಶ್ನಿಸಿದ್ದಳು.

ಅದಾದ ಮೇಲೆ ಅವಳೆಷ್ಟೇ ನನ್ನ ಹತ್ತಿರ ಬಂದರೂ ನಾನು ಸುಮ್ಮನಿದ್ದು ಬಿಡುತ್ತಿದ್ದೆ., ನಯವಾಗಿಯೇ ತಿರಸ್ಕರಿಸಿಬಿಡುತ್ತಿದ್ದೆ. ಆದರೆ, ಅದೊಂದು ನವೆಂಬರಿನಲ್ಲಿ ಆಕೆ ನನ್ನನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಮುತ್ತಿನ ಮಳೆಗರಿದಿದ್ದಳು! ‘ಆಗಲೇ ಆಕೆ ನನಗೆ ಪ್ರಣಯದ ಆಹ್ವಾನ ನೀಡಿದ್ದು. ನಾನಾಗ ಅನುಭವವಿಲ್ಲವೆಂದಾಗ ಪರವಾಗಿಲ್ಲ ಎಂದಿದ್ದಳಾಕೆ. ತದನಂತರ ನಾವು ಆಕೆಯ ಜನುಮದಿನದಂದು ಅರಣ್ಯ ಪ್ರದೇಶಕ್ಕೆ ಹೋದೆವು. ಹಿಂತಿರುವಾಗ ನಾನು ಬಾಣಂತಿಯಾಗಿದ್ದ ಆಕೆಯ ಎದೆ ಹಾಲಿನ ಬಗ್ಗೆ ದಿಗಿಲಾದದ್ದನ್ನು ಹೇಳಿದಾಗ, ಆಕೆ ಅದೇನನ್ನೋ ಮಾಡಿ ಎದೆಹಾಲು ಒಣಗುವಂತೆ ಮಾಡಿಕೊಂಡಿದ್ದಳು. ನನಗೆ ಲೈಂಗಿಕ ಕ್ರಿಯೆಯಲ್ಲಿ ಅಷ್ಟೇನೂ ಅನುಭವವಿಲ್ಲದ ಕಾರಣ ಆಕೆ ಪುಸ್ತಕ ನೀಡಿದ್ದಳು. ನಾನದನ್ನು ಓದಿದೆ! ಆದರೆ, ಆಕೆ ಪ್ರಣಯದಲ್ಲಿ ಫ್ರೆಂಚ್ ಹಾಗೂ ಕೇರಳದ ನಾಯರ್ ಹೆಣ್ಣು ಮಕ್ಕಳ ನೈಪುಣ್ಯತೆಯ ಮಿಶ್ರಣವಾಗಿದ್ದಳು. ಆಕೆ ತಾನೊಬ್ಬಳು ಕಠೋರ ಮಹಿಳೆಯೆಂದು ಗುರುತಿಸಿಕೊಂಡರೂ ಆಕೆ ಮೃದುವಾಗಿದ್ದಳು. ಆಕೆಯ ಜೊತೆಗಿನ ಹನ್ನೆರಡು ವರ್ಷಗಳ ಲೈಂಗಿಕ ಸಂಬಂಧದಲ್ಲಿ ನನಗೆ ಯಸವತ್ತು ಸಾಕೆಂದು ಅನ್ನಿಸಿರಲೇ ಇಲ್ಲ. ಆಕೆಯನ್ನು ಹೊರತು ಪಡಿಸಿ ಯಾರಾದರೂ ನನ್ನನ್ನು ಹತ್ತಿರದಲ್ಲಿರಿಸಿಕೊಂಡರೆ ಆಕೆ ಮತ್ಸರ ಹೊಂದುತ್ತಿದ್ದಳು, ಕೊನೆಗದು ದ್ವೇಷಕ್ಕೆ ತಿರುಗುತ್ತಿತ್ತು. ಯಾವಾಗಲಾದರೂ ನಾವು ಸಿನಿಮಾಕ್ಕೆ ಕುಟುಂಬ ಸ್ನೇಹಿತರ ಜೊತೆಗೂಡಿ ಹೋದರೆ ಜಾಣತನದಿಂದ ನಾನು ಆಕೆಯ ಪಕ್ಕವಿರುವಂತೆ ಮಾಡುತ್ತಿದ್ದಳು.

ಒಂದು ದಿನ ಆಕೆ ನನ್ನನ್ನು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದಾಗ ನಾನು ಯಾಕಿಷ್ಟು ಅವಸರ?! ನನಗೆ ಕೆಲಸವಿತ್ತು ಎಂದಿದ್ದಕ್ಕೆ ಆಕೆ ಉತ್ತರಿಸಿದ್ದಳು. ‘ಆ ಧಡೂತಿ ಬಂದ ಮೇಲೆ ನಿನ್ನನ್ನಾಕೆ ಮುಟ್ಟುತ್ತಾಳೆ, ಅದಾದ ಮೇಲೆ ನಾ ಮುಟ್ಟುವುದಿಲ್ಲ!” ಆಗ ಅಾ ಧಡೂತಿಯ ಬಗ್ಗೆ ನನಗೆ ಆಸಕ್ತಿಯಿಲ್ಲ ಎಂದಿದ್ದೆ! ಅದಾದ ಮೇಲೆ, ಆಕೆ ನನ್ನ ಧಡೂತಿ ಗೆಳತಿಯ ಹತ್ತಿರ ಸ್ನೇಹದಿಂದಿದ್ದಳು. ನಾನು ಆದಷ್ಟು ಅವಳ ಪತಿಯಿರುವಾಗಲೇ ಹೋಗುತ್ತಿದ್ದೆ. ಅವಳ ಮಕ್ಕಳನ್ನು ಅವಳು ತಂದೆಯ ಹತ್ತಿರ ಬಿಡುತ್ತಿರಲಿಲ್ಲ. ಕೇಳಿದರೆ, ಅವನ ತರಹ ನನ್ನ ಮಕ್ಕಳೂ ಸುಳ್ಳುಗಾರರಾಗುವುದು ಬೇಡ ಎಂದು ಉರಿದು ಬೀಳುತ್ತಿದ್ದಳು. ಕೊನೆಗೆ ಅವಳ ಪತಿ ಇನ್ನೊಂದು ಕೋಣೆಗೆ ಸ್ಥಳಾಂತರಗೊಂಡಿದ್ದ, ಆತ ಹೇಳಿದ್ದನ್ನಾವುದೂ ನಂಬಬೇಡ ಎಂದು ಹೇಳುತ್ತಿದ್ದಳಾಕೆ.

ಆಕೆ ಪತಿಯಿಂದ ವಿಚ್ಛೇದನ ತೆಗೆದುಕೊಳ್ಳುವ ಅವಳ ಆಪ್ತ ರಾದ ಎ.ಸಿ.ಎನ್ ನಂಬಿಯರ್ ಗೆ ಪತ್ರ ಬರೆದಿದ್ದಳು. ಅವಳ ವಿಚ್ಛೇದನಕ್ಕೆ ನಾನೇನೂ ಹೇಳಲಿಲ್ಲ. ಆದರೆ, ಒಂದು ದಿನ ‘ನನಗೆ ಒಬ್ಬ ಹಿಂದೂವನ್ನು ಮದುವೆಯಾಗಲು ಇಷ್ವವಿಲ್ಲವೆಂದಳು.’ ಆಗ ನನಗೆ ಬೇಸರವಾಗಿತ್ತು, ನಾನು ಯಾವತ್ತಃ ಅವಳನ್ನು ನನ್ನ ಕೋಣೆಗೆ ಕರೆದಿರಲಿಲ್ಲ. ಕೊನೆಗೊಂದಿನ ಆಕೆ ಬಂದಳು. ನಾನು ನಿದ್ದೆಯಲ್ಲಿರುವಾಗ ಮುತ್ತು ನೀಡಿ ಎಚ್ಚರಗೊಳಿಸಿದಾಗ ‘ನಾನು ಬರಲೇಬೇಕಾಯಿತು, ನೀ ನನ್ನ ಖುಷಿಯನ್ನೆಲ್ಲ ಹಿಂತಿರುಗಿಸಿದೆ’ ಎಂದು ಬೆಳಗಿನ ಜಾವದ ವರೆಗೂ ಮಾತಿಗಿಳಿದಿದ್ದೆವು. ಆಕೆಗೆ ನನ್ನ ಜೊತೆಯಿರಬೇಕಿತ್ತು, ಒಂದು ನಿಮಿಷವನ್ನೂ ಆಕೆ ಕಳೆದುಕೊಳ್ಳಲು ಸಿದ್ಧವಿರಲಿಲ್ಲ.

ಅದಾದ ಮೇಲೆ ಆಕೆ ನಾನು ಲಂಡನ್ನಿಗೆ ಹೋಗಿದ್ದಾಗಲೆಲ್ಲ ಆಕೆ ನಾನು ಸಂತಸವಿರದ ದಿನಗಳಿರಲಿಲ್ಲ. ಮುಂಚೆಗಿಂತಲೂ ಇನ್ನೂ ಹತ್ತಿರವಾಗುತ್ತಿದ್ದ ನಾವು ನಿಜಕ್ಕೂ ಯಾವುದೇ ಹಿಂಜರಿಕೆಯಿಟ್ಡುಕೊಂಡಿರಲಿಲ್ಲ. ಆಕೆಗೆ ರಾಮಾಯಣ ಮಹಾಭಾರತ ಅಷ್ಟಾಗಿ ಗೊತ್ತಿರಲಿಲ್ಲ, ಆಕೆಯ ಅಜ್ಜಿಯ ಕಥೆಯಷ್ಟನ್ನೇ ಆಕೆ ತಿಳಿದಿದ್ದಳು. ನಾನು ಆಗ ಅವಳಿಗೆ ವ್ಯಾತ್ಸಾಯನನ ಕಾಮಸೂತ್ರದ ಬಗ‌್ಗೆ ಯೂ ಅವಳಿಗೆ ಅರಿವಿಲ್ಲದಿದ್ದನ್ನು ಅರಿತೆ.

ಆಕೆಗೆ ಗರ್ಭನಿವಾರಕವನ್ನೆಲ್ಲ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಸ್ವಲ್ಪ ನಂತರದಲ್ಲಿ ಆಕೆ ನನ್ನ ಮಗುವಿಗೆ ತಾಯಿಯಾಗುವ ಹಂತದಲ್ಲಿದ್ದಳು! ಆದರೆ, ಅವಳು ಗರ್ಭಪಾತ ಮಾಡಿಸಲು ಬ್ರಿಟಿಷ್ ಹೈ ಕಮಿಷನ್ ವೈದ್ಯರಲ್ಲಿಗೆ ಹೋದಳು. ಆದರೆ, ಅವರು ಸಹಾಯ ಮಾಡಲಿಲ್ಲ. ಅದಕ್ಕಾಗಿ ಮತ್ತೆ ಅವಳು ಪೂರ್ವಜರ ಹಳೆಯ ಮನೆಗೆ ತೆರಳಿ ಅಲ್ಲಿ ಅವಳಿಗೆ ಗೊತ್ತಿದ್ದ ದಾದಿಯನ್ನು ಸಂಪರ್ಕಿಸಿದಳು. ಈ ಸಲ ಆಕೆ ತನ್ನ ಎರಡನೇ ಮಗನನ್ನು ಕರೆದುಕೊಂಡು ಹೋಗಿದ್ದಳು. ಬರುವಾಗ ಆಕೆ ಗರ್ಭಪಾತದ ಸಂತಸದಲ್ಲಿಯೂ ಹಾಗೆ ಎರಡನೇ ಮಗನ ಉಚ್ಛಾರ ದೋಷದ ಚಿಂತೆಯಲ್ಲಿ ಇದ್ದಳು. ಆಕೆಯ ಪತಿಗೆ ನನ್ನ ಅವಳ ಸಂಬಂಧದ ಬಗ್ಗೆ ಅರಿವಿತ್ತೋ ಇಲ್ಲವೋ ಎಂದು ಹೇಳುವುದು ಕಷ್ಟ. ಆದರೆ ಒಂದು ದಿನ ಆಕೆಯ ತಂದೆ ನನ್ನೆದುರಿಗೆ ಅಭ್ಯಾಸ ಮಾಡುತ್ತಿದ್ದ ಅವಳನ್ನು ಹೊರಗೆ ಕರೆದರು.

1958 ರಲ್ಲಿ ನಾನು ಅವಳಿಗೇನನ್ನೋ ಹೇಳಬೇಕಿತ್ತೆಂದು ಅವಳ ಮನೆಗೆ ಯಾವುದೇ ಮಾಹಿತಿ ಕೊಡದೇ ಹೋದೆ. ಆಕೆ ಬಾಗಿಲನ್ನದಾಗಲೇ ಮುಚ್ಚಿದ್ದಳು. ನಾನು ಬಾಗಿಲು ಬಡಿದೆ. ಸುಮಾರು ಐದು ನಿಮಿಷ ದ ನಂತರ ಆಕೆ ಅರ್ಧ ಬಾಗಿಲು ತೆರೆದು ಇಣುಕಿದಳು. ನಾನು ಅದಾಗಲೇ ಪರದೆಯ ಹಿಂದಡಿಗಿದ್ದ ಎತ್ತರದ ಕಟ್ಟುಮಸ್ತಾದ ಬ್ರಹ್ಮಚಾರಿಯನ್ನು ನೋಡಿದೆ. ನಾನು ಹೊರ ನಡೆಯುತ್ತಲೇ ಹೇಳುತ್ತ ಬಂದೆ, ‘ನಿನ್ನಲ್ಲೇನೋ ಹೇಳುವುದಿತ್ತು.. ಕೊನೆಗೆ ಹೇಳುತ್ತೇನೆ.’ ಅಂದೇ ನನ್ನ ಅವಳ ಸಂಬಂಧದ ಕೊನೆಯಾಗಿತ್ತು.
ಆಕೆ ಬಹಳಷ್ಟು ಬಾರಿ ಅದನ್ನು ಯೋಗ.. ಭಂಗಿ, ಅಭ್ಯಾಸ ಎಂದೆಲ್ಲ ಸಮರ್ಥಿಸಿ ಅಪಾರ್ಥ ಮಾಡಿಕೊಳ್ಳಬೇಡ ಎಂದೆಲ್ಲವಾದರೂ ನನಗೆ ಅವಳ ಬಗೆಗೆನ ಮೋಹವೊಂದು ತೀರಿತ್ತು. ಕೊನೆಗವಳು ನನ್ನ ವಿರುದ್ಧವಾಗಿ ನಡೆದು ಕೊಳ್ಳತೊಡಗಿದಳು. ಕೊನೆಗೆ ಅವಳ ಪ್ರೇಮ ಪತ್ರಗಳೆಲ್ಲವನ್ನೂ ಆಕೆಗೆ ಹಿಂದಿರುಗಿಸಿದೆ. ಒಂದು ವರ್ಷದ ನಂತರ ಹಳೇ ಪತ್ರಗಳು ಸಿಕ್ಕವು, ಅದನ್ನೂ ಹಿಂದಿರುಗಿಸಿದೆ. ಅವಳ ಪತಿಯ ಸಾವಿನ ಮುಂಚಿನ ಎರಡು ವರ್ಷಗಳು ಆಕೆ ಅವನ ಜೊತೆಯಿದ್ದಳೆಂದಾದರೂ ನಾನು ನಂಬಲಿಲ್ಲ. ಇಷ್ಟೆಲ್ಲ ಆಗುವಾಗ ಆಕೆ ಪೂರ್ಣವಾಗಿ ‘ರಾಜಕೀಯದ ಪ್ರಾಣಿ’ಯಾಗಿ ಬೆಳೆದಿದ್ದಳು.

Source: https://groups.google.com/forum/m/#!topic/soc.culture.indian/U9b0jJdpzrw

Banned in India: Reminiscences of Nehru Age by Mathai


http://myblogkirannaik.blogspot.in/2011/09/she-written-by-m-omathai.htmlhttp://www.thehindu.com/2001/04/29/stories/13290463.htm
https://www.outlookindia.com/magazine/story/mrs-gs-string-of-beaus/211174
http://www.ndtv.com/book-excerpts/during-indira-feroze-marriage-talk-of-her-affair-with

ಅನುವಾದ – ಪೃಥ ಅಗ್ನಿಹೋತ್ರಿ

Tags

Related Articles

Close