ಅಂಕಣ

ನಮಗೂ ಹೇಳಲಿಕ್ಕಿದೆ ಎಂದು ಬೊಬ್ಬಿರಿದ ಪಿಎಫ್ ಐ ಈ ಸತ್ಯಗಳ ಬಗ್ಗೆ ಯಾಕೆ ತುಟಿ ಬಿಚ್ಚಲಿಲ್ಲ?!

“ನಮಗೂ ಹೇಳಲಿಕ್ಕಿದೆ, ನಮಗೂ ಹೇಳಲಿಕ್ಕಿದೆ” ಎಂದು ಬೊಬ್ಬೆ ಹೊಡೆಯುತ್ತೀದ್ದೀರಲ್ಲಾ… ನಮ್ಮ ಪ್ರಶ್ನೆಗೆ ಉತ್ತರಿಸುವಿರಾ…?

“ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ”… ದೇಶದಲ್ಲಿ ಪರೋಕ್ಷವಾಗಿ ಉಗ್ರ ಚಟುವಟಿಕೆಗಳನ್ನು ನಿರ್ವಹಿಸುವ ಸಂಘಟನೆ. ಹಲವಾರು ಹಿಂದೂ ಮುಖಂಡರ
ಕೊಲೆಗಳಲ್ಲಿ ನೇರ ಭಾಗಿಯಾಗಿರುವ ಈ ಉಗ್ರ ಸಂಘಟನೆ. ಗೋಹತ್ಯೆ, ಲವ್ ಜಿಹಾದ್, ಕೊಲೆ ಮುಂತಾದ ಉಗ್ರತೆಯನ್ನು ಬಿಂಬಿಸುವ ಈ ಸಂಘಟನೆಯ ವಿರುದ್ಧ ಅನೇಕ ಸಂಘಟನೆಗಳು ಬೀದಿಗಿಳಿದಿದ್ದವು. ಹಲವಾರು ಕೊಲೆಗಳಲ್ಲಿ ಪಿಎಫ್‍ಐ, ಕೆಎಫ್‍ಡಿ ಕೈವಾಡ ಸಾಭೀತಾಗಿತ್ತು. ಕೇಂದ್ರ ಸರ್ಕಾರವೇ ಈ ಸಂಘಟನೆಯನ್ನು ನಿಷೇಧಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ಹೆದರಿರುವ ಪಿಎಫ್‍ಐ, ಕೆಎಫ್‍ಡಿ ಸಂಘಟನೆ “ನಮಗೂ ಹೇಳಲಿಕ್ಕಿದೆ” ಎಂದು ಕಾರ್ಯಕ್ರಮವನ್ನು ಮಾಡಿದೆ.

ಅಷ್ಟಕ್ಕೂ “ನಮಗೂ ಹೇಳಲಿಕ್ಕಿದೆ, ನಮಗೂ ಹೇಳಲಿಕ್ಕಿದೆ” ಇದೆ ಎಂದು ಬೊಬ್ಬೆ ಬಿಟ್ಟು ಹೇಳಿದ್ದು ಮಾತ್ರ “ಪಾಕಿಸ್ಥಾನ ಜಿಂದಾಬಾದ್” ಘೋಷಣೆ.

“ನಮಗೂ ಹೇಳಲಿಕ್ಕಿದೆ” ಎಂದು ಮತ್ತೆ ಕಿರುಚಿವಿರಂತೆ… ಮೊದಲು ನಮ್ಮ ಪ್ರಶ್ನೆಗಳಿಗೆ ಉತ್ತರಿಸುವಿರಾ….?

* ತನ್ನಷ್ಟಕ್ಕೆ ತಾನೇ ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೂಡುಬಿದಿರೆಯ ಪ್ರಶಾಂತ್ ಪೂಜಾರಿ ಎಂಬ ಯುವಕ ಗೋಕಳ್ಳರಿಗೆ ಶಾಪವಾಗಿದ್ದ ಎಂಬ ಕಾರಣಕ್ಕಾಗಿ, ಬೆಳ್ಳಂಬೆಳಗ್ಗೆ ಆತನ ತಂದೆಯ ಎದುರೇ ಕೊಚ್ಚಿ ಕೊಚ್ಚಿ ಕೊಂದಿರಲ್ಲಾ… ಅದನ್ನೇಕೆ ನೀವು ಹೇಳಲೇ ಇಲ್ಲ..?

* ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿ, ಲಕ್ಷಾಂತರ ಹಿಂದೂ ಹಾಗೂ ಕ್ರೈಸ್ತರ ಅತ್ಯಾಚಾರ ಹಾಗೂ ಕೊಲೆಗಳನ್ನು ಮಾಡಿದ್ದ ಟಿಪ್ಪುವಿನ ಜಯಂತಿಯನ್ನು
ವಿರೋಧಿಸಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಮೈಸೂರಿನಲ್ಲಿ ಕುಟ್ಟಪ್ಪರನ್ನು ಕೊಂದಿದಿರಲ್ಲಾ… ಅದನ್ನೇಕೆ ನೀವು ಹೇಳಲೇ ಇಲ್ಲ..?

* ಮೀನುಗಾರಿಕೆಯನ್ನು ತನ್ನ ವೃತ್ತಿಯಾಗಿರಿಸಿ, ಅದರಲ್ಲೇ ಜೀವನವನ್ನು ಸಾಗಿಸುತ್ತಿದ್ದ ಉಳ್ಳಾಲದ ರಾಜು ಕೋಟ್ಯಾನ್‍ರನ್ನು ಕೊಂದು ಬಿಟ್ಟಿದಿರಲ್ಲಾ… ಅದನ್ನೇಕೆ ನೀವು ಹೇಳಲೇ ಇಲ್ಲ..?

* ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯನಾಗಿದ್ದು, ದೇಶಸೇವೆ ಮಾಡುತ್ತಿದ್ದ ಕಾರ್ಯಕರ್ತ ರುದ್ರೇಶ್‍ನನ್ನು ಹತ್ಯೆ ಮಾಡಿದಿರಲ್ಲಾ… ಅದನ್ನೇಕೆ ನೀವು ಹೇಳಲೇ ಇಲ್ಲ..?

* ಇತ್ತ ಮಂಗಳೂರಿನ ಬಂಟ್ವಾಳದಲ್ಲಿ, ಲಾಂಡ್ರಿ ಅಂಗಡಿಯನ್ನು ಇಟ್ಟುಕೊಂಡಿದ್ದ ಶರತ್ ಮಡಿವಾಳರನ್ನು ಕೇವಲ ಆರ್‍ಎಸ್‍ಎಸ್ ಕಾರ್ಯಕರ್ತ ಎನ್ನುವ ಕಾರಣಕ್ಕಾಗಿ ಸುಖಾ ಸುಮ್ಮನೆ ಕೊಂದುಬಿಟ್ಟಿರಲ್ಲಾ… ನಿಮಗೆ ಮನುಷ್ಯತ್ವವೇ ಇಲ್ವಾ… ಅದನ್ನೇಕೆ ನೀವು ಹೇಳಲೇ ಇಲ್ಲ..?

* ಲವ್ ಜಿಹಾದ್ ವಿರುದ್ಧ, ಗೋ ಹತ್ಯೆ ವಿರುದ್ಧ ಧ್ವನಿ ಎತ್ತಿದವರನ್ನು ಮುಗಿಸಿ ಬಿಡುತ್ತಿರುವ ನೀವು ರಕ್ತಬೀಜಾಸುರರಿಗಿಂತಲೂ ಕೀಳಾದಿರಲ್ಲಾ… ಅದನ್ನೇಕೆ ನೀವು
ಹೇಳಲೇ ಇಲ್ಲ..?

* ಕೇವಲ ಆರ್‍ಎಸ್‍ಎಸ್ ಗಣವೇಷ ಹಾಕಿ ಧರ್ಮ ಸೇವೆ, ರಾಷ್ಟ್ರ ಸೇವೆ ಮಾಡುತ್ತಿದ್ದ ಅನೇಕ ಹಿಂದೂಗಳನ್ನು ದಾರುಣವಾಗಿ ಕೊಂದುಬಿಟ್ಟಿರಲ್ಲಾ… ಅದನ್ನೇಕೆ ನೀವು ಹೇಳಲೇ ಇಲ್ಲ..?

* ಜಗತ್ತಿನ ರಕ್ತವನ್ನು ಹೀರುತ್ತಿರುವ ಭಯೋತ್ಪಾದನಾ ಸಂಘಟನೆ ಐಸಿಸ್ ಅನೇಕ ದುಷ್ಕøತ್ಯಗಳಿಗೆ ಕಾರಣವಾಗಿ ರಕ್ತ ಬಿಪಾಸುಗಳಾಗಿ ಜಾಗತಿಕ ಮಟ್ಟದಲ್ಲಿ ನಿಮ್ಮದೇ ಧರ್ಮದ ಹೆಸರು ಹೇಳಿಕೊಂಡು ಕೊಲ್ಲುತ್ತಿರುವದನ್ನು ನೀವು ಬೆಂಬಲಿಸುತ್ತಿದ್ದೀರಲ್ಲಾ… ಅದನ್ನೇಕೆ ನೀವು ಹೇಳಲೇ ಇಲ್ಲ..?

* ಪಾಕಿಸ್ಥಾನ ಅನ್ನುವ ರಾಷ್ಟ್ರ ಇಡಿ ವಿಶ್ವಕ್ಕೆ ಭಯೋತ್ಪಾದನೆಯನ್ನುಂಟುಮಾಡುವ ರಾಷ್ಟ್ರವೆಂದು ಹಣೆಪಟ್ಟಿ ಕಟ್ಟಿಕೊಂಡು, ಭಾರತದ ಪಾಲಿಗೂ ಅತಿ ದೊಡ್ಡ
ಶತ್ರುವಾಗಿರುವ ರಾಷ್ಟ್ರ ಎಂದು ಗೊತ್ತಿದ್ದರೂ ಪಾಕಿಸ್ಥಾನ್ ಜಿಂದಾಬಾದ್ ಅಂದಿದಿರಲ್ಲಾ… ಅದನ್ನೇಕೆ ನೀವು ಹೇಳಲೇ ಇಲ್ಲ..?

ಮುಗಿಯಿತನ್ನಬೇಡಿ. ನಿಮ್ಮ ಸಾಲು ಸಾಲು ಘನಘೋರ ಕೃತ್ಯಗಳನ್ನು ಹೇಳತೀರದಷ್ಟಿದೆ. ದೇಶದ್ರೋಹದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗಿಯಾಗುವ ನಿಮಗೆ
ರಾಷ್ಟ್ರಭಕ್ತಿಯಿದೆಯೆಂದು ಯಾವ ಮುಟ್ಟಾಳನಾದ್ರೂ ಹೇಳಿಯಾನ..? ಹಲವಾರು ಕಾರ್ಯಕ್ರಮಗಳಲ್ಲಿ ಭಾರತ್ ಮಾತಾಕೀ ಜೈ ಅನ್ನದೆ, ವಂದೇ ಮಾರಂ ಎನ್ನದೆ, ಜೈ ಹಿಂದ್ ಎನ್ನದೆ, ಪಾಕಿಸ್ಥಾನಕ್ಕೆ ಜೈ ಎನ್ನುವ ನಿಮಗೆ ಈ ಪುಣ್ಯ ಭರತ ಭೂಮಿಯಲ್ಲಿ ಇನ್ನೂ ಎನು ಹೇಳಲಿಕ್ಕಿದೆ.

ಪಿಎಫ್‍ಐ ಅನ್ನುವ ದೇಶದ್ರೋಹಿ ಸಂಘಟನೆ ಇಷ್ಟೆಲ್ಲಾ ದುಷ್ಕøತ್ಯಗಳನ್ನು ಎಸಗುತ್ತಿದ್ದರೂ ಇನ್ನೂ ಏನು ಸಾಕ್ಷಿ ಬೇಕು ಈ ಸಂಘಟನೆಯನ್ನು ನಿಷೇಧಿಸಲು.
ಅದ್ಯಾವಾಗ ಕೇಂದ್ರ ಸರ್ಕಾರ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಸುಳಿವು ನೀಡಿತ್ತೋ ಅಂದು ಬೆದರಿರುವ ಪಿಎಫ್‍ಐ “ನಮಗೂ ಹೇಳಲಿಕ್ಕಿದೆ” ಎಂದು ಸುಳ್ಳು ಸುಳ್ಳಿನ ಕಂತೆಗಳನ್ನು ಮುಂದಿಟ್ಟಿದ್ದವು.

ಈ ಹಿಂದೆ ಸಿಮಿ ಎನ್ನುವ ಸಂಘಟನೆ ಇದೇ ರೀತಿ ದೇಶದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ಅದನ್ನು ಆವಾಗಲೇ ಸರ್ಕಾರ ನಿಷೇಧಿಸಿತ್ತು. ಆದರೆ ಹಾವು ಸತ್ತರೂ ಅದರ ವಿಷ ಮಾತ್ರ ಇಳಿಯಲೇ ಇಲ್ಲ. ಸಿಮಿ ಉಗ್ರರು ತೆರೆಮರೆಯಲ್ಲಿ ತಮ್ಮ ರಾಷ್ಟ್ರ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದರೆ ಅದರ ಮತ್ತೊಂದು ಅವತಾರವಾಗಿರುವ ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳು ಬಹಿರಂಗವಾಗಿ ಕೆಲಸ ಮಾಡಿ ಈ ದೇಶವನ್ನು ಭಯೋತ್ಪಾದನೆಯ ಆತಂಕಕ್ಕೆ ದೂಡಿದೆ.

ಸಿಮಿ ಎನ್ನುವ ಸಂಘಟನೆ ಸಿಕ್ಕ ಸಿಕ್ಕಲ್ಲಿ ಬಾಂಬ್‍ಗಳನ್ನು ಸ್ಪೋಟಿಸಿ ಭಯದ ವಾತಾವರಣ ಸೃಷ್ಟಿಸಿ ದೇಶದಲ್ಲಿ ಕೋಲಾಹಲವೆಬ್ಬಿಸಿತ್ತು. ತಕ್ಷಣ ಆ ಉಗ್ರ
ಸಂಘಟನೆಯನ್ನು ನಿಷೇದವಾಯಿತು. ಆ ನಂತರ ಬಾಂಬ್ ಇಡುವುದೇ ವೃತ್ತಿ ಎಂದು ನಂಬಿದ್ದ ದಿಕ್ಕು ತೋರದ ಕೆಲ ದೇಶದ್ರೋಹಿಗಳು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗಳಿಗೆ ಸೇರಿದ್ದರೆ, ಮತ್ತೆ ಕೆಲವರು ದೇಶದೆಲ್ಲೆಡೆ ಪಿಎಫ್‍ಐ, ಕೆಎಫ್‍ಡಿ ಯಂತಹ ಸಂಘಟನೆಗಳನ್ನು ಅಲ್ಲಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಸಿದರು.

ಅಂತೂ ಸಿಮಿ ನಿಷೇದದ ನಂತರ ಈಗಿನ ಸಂಘಟನೆಗಳು ಸ್ವಲ್ಪ ಬದಲಾವಣೆಯ ದಾರಿಯಲ್ಲಿ ಸಾಗುತ್ತಿವೆ. ಏಕಾಏಕಿ ಬಾಂಬ್ ಇಡದೆ ಸಮಾಜ ಮುಕಿ
ಮುಖವಾಡಗಳನ್ನು ಹೊತ್ತು ನಂತರ ಒಂದೊಂದಾಗಿ ಅಹಿತಕರ ಘಟನೆಗಳನ್ನು ಸೃಷ್ಟಿಸಿ ಕೊನೆಗೆ ಹತ್ಯೆ, ಸುಲಿಗೆಗಳನ್ನು ಮಾಡಿ ಕೊನೆಗೆ ಉಗ್ರಮುಖವನ್ನು
ಪಡೆಯುತ್ತಿರುವ ಪ್ಲಾನಿಂಗ್ ಹಾಕಿಕೊಂಡಿವೆ ಈಗಿನ ಸಂಘಟನೆಗಳು.

ಭಾರತದಲ್ಲಿ ನಿರುಧ್ಯೋಗಿಗಳ, ಅಬಲೆಯರ, ಶಿಕ್ಷಣ ವಂಚಿತರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿಕೊಂಡು ಬರುತ್ತಿರುವ ಸಂಘಟನೆ ಅದನ್ನೆಲ್ಲ
ಮಾಡಿದ್ದನ್ನು ದೇಶ ಕಂಡೇ ಇಲ್ಲ. ಅದರೆ ಅದೆಷ್ಟೋ ಹಿಂದೂಗಳನ್ನು ಹತ್ಯೆ ಮಾಡಿದ್ದಲ್ಲಿ ಪಿಎಫ್‍ಐ, ಕೆಎಫ್‍ಡಿ ಸಂಘಟನೆಯ ಪಾತ್ರವನ್ನು ನೋಡಿದ್ದೇವೆ. ಅದೆಷ್ಟೋ
ಗೋಹತ್ಯಾ ಪ್ರಕರಣಗಳಲ್ಲಿ ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳ ಪಾತ್ರವನ್ನು ನೋಡಿದ್ದೇವೆ. ಭಾರತದ ನೆಲದಲ್ಲಿ ಜನಿಸಿ, ಪವಿತ್ರ ಗಂಗೆಯ ನೀರನ್ನು ಕುಡಿದು, ಭಾರತ್ ಮಾತಾ ಕೀ ಜೈ ಎನ್ನಲ್ಲ ಅನ್ನುವ ಧೋರಣೆಯನ್ನು ನೋಡಿದ್ದೇವೆ. ಪಾಕಿಸ್ಥಾನ ಎನ್ನುವ ನಾಯಿ ಬುದ್ಧಿಯ ರಾಷ್ಟ್ರ, ಭಾರತದ ಅತಿ ದೊಡ್ಡ ಶತ್ರು ರಾಷ್ಟ್ರ ಎನ್ನುವುದು ಗೊತ್ತಿದ್ದರೂ, ಪಾಕಿಸ್ಥಾನ ಜಿಂದಾಬಾದ್ ಎನ್ನುವ ಘೋಷಣೆಯನ್ನು ಕೇಳಿದ್ದೇವೆ.

ಹೀಗೆ ಎಲ್ಲೆಲ್ಲೂ ನೋಡಿದರೂ ಈ ದೇಶದ್ರೋಹಿ ಸಂಘಟನೆಗಳ ಭಯದ ಕರಿಛಾಯೆಯೇ ಕಾಣುತ್ತಿರುವುದೇ ಹೊರತು ಎಲ್ಲೂ ಕೂಡಾ ದೇಶಕ್ಕೋಸ್ಕರ,
ಭಾಷೆಗೋಸ್ಕರ, ಈ ಮಣ್ಣಿಗೋಸ್ಕರ ಕೆಲಸ ಮಾಡಿದ್ದನ್ನು ಈ ದೇಶ ಕಂಡೇ ಇಲ್ಲ. ಇಂತಹ ನರಿ ಬುದ್ಧಿಯ, ಉಗ್ರ ಮುಖದ ಮುಸಲ್ಮಾನ ಪಾತಕಿಗಳು ಈ ದೇಶವನ್ನು ಕೊಳ್ಳೆ ಹೊಡೆಯುವ ಮೊದಲೇ ಅದನ್ನು ಬುಡ ಸಮೇತ ಕಿತ್ತು ಹಾಕುವ ಕೆಲಸಗಳನ್ನು ಮಾಡಬೇಕಿದೆ. ಪಶ್ಚಿಮ ಬಂಗಾಲ, ಕೇರಳ, ಕರ್ನಾಟಕ ಸಹಿತ ಅನೇಕ ಕಡೆಗಳಲ್ಲಿ ಇನ್ನೂ ಈ ಉಗ್ರರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಅದನ್ನು ನಿಲ್ಲಿಸಬೇಕಿದೆ.

ತನ್ನ ಮತಬ್ಯಾಂಕಿಗಾಗಿ ಬಾಂಗ್ಲಾ ದೇಶದಿಂದ ಅಕ್ರಮ ಗಡಿ ಪ್ರವೇಶ ಮಾಡಿರುವ ಉಗ್ರರನ್ನೂ ತನ್ನ ಉಪಯೋಗಕ್ಕಾಗಿ ಇಟ್ಟುಕೊಂಡು ಪ್ರೋತ್ಸಾಹಿಸುತ್ತಿರುವುದು
ವಿಪರ್ಯಾಸವೇ ಸರಿ…

-ಸುನಿಲ್

Tags

Related Articles

Close