ಅಂಕಣ

ನರಿಗೆಲ್ಲವೂ ಗೊತ್ತಿದೆ! ಸಿಂಹಕ್ಕೆ ಸತ್ಯವೊಂದೇ ಗೊತ್ತಿದೆ! ಮೋದಿಗೇನು ಗೊತ್ತಿದೆ?!

ಒಂದಷ್ಟು ವಾರಗಳಿಂದಲೂ ಮೋದಿಯ ಆರ್ಥಿಕತೆ ನೀತಿಯ ಬಗ್ಗೆ ಚರ್ಚೆಗಳಾಗುತ್ತಲೇ ಇದೆ! ಅದೆಷ್ಟೋ ಉತ್ತಮ ನೀತಿಯ ಮಂಡನೆಗಳಿಗೂ ಸಾಕ್ಷಿಯಾಗಿದೆ
ಮಾಧ್ಯಮಗಳು! ಎಲ್ಲಾ ಮಾಧ್ಯಮಗಳೂ ಕೂಡ ಒಂದೇ ತೆರನಾದ ಲೆಕ್ಕಾಚಾರವನ್ನು ಮಾಡುತ್ತಾ ತನ್ಮೂಲಕ ಒಂದೇ ರೀತಿಯಾದ ಸಮೀಕ್ಷೆಯನ್ನೂ ಸಹ ಜನರಿಗೆ ತೋರಿಸಿದರು!

ಮೊದಲು ಮುಖ್ಯಾಂಶಗಳನ್ನು ತೋರಿಸುತ್ತಾ, ಕೊನೆಗೆ ನೋಟು ನಿಷೇಧ ಹಾಗೂ ಜಿಎಸ್ ಟಿ ಯ ಪರಿಧಿಗೆ ತಂದು, ಭಾರತದ ಆರ್ಥಿಕತೆಯಲ್ಲಿ ಯಾವ
ರೀತಿ ರಾಜಕೀಯವೂ ಸೇರಿದೆ ಎನ್ನುವುದರಿಂದ, ಆರ್ಥಿಕತೆಯ ಅಭಿವೃದ್ಧಿಯನ್ನು ಒಬ್ಬರ ವೈಯುಕ್ತಿಕ ಸಾಧನೆಗೆ ಹೋಲಿಸಿ, ಇಲ್ಲವೇ ವಿರೋಧ ಪಕ್ಷಗಳ
ಅಭಿಪ್ರಾಯಗಳನ್ನೇ ಎಳೆದು, 2019 ರ ಚುನಾವಣೆಗೆ ನಡೆಯುವ ತಯಾರಿಯೇ ಎಂದು ಪ್ರಶ್ನಿಸುವವರೆಗೆ ಮಾತ್ರ ಮಾಧ್ಯಮಗಳ ಶಕ್ತಿಯಿರುತ್ತದೆ ಅಷ್ಟೇ! ಅದನ್ನು
ಹೊರತು ಪಡಿಸಿ, ಭಾರತದ ಆರ್ಥಿಕತೆಯ ಶಕ್ತಿಯ ಬಗ್ಗೆ, ಆಗು ಹೋಗುಗಳ ಬಗ್ಗೆ, ಸಲಹೆ ಸೂಚನೆಗಳಾಗಲಿ ಇದಃಮಿತ್ಥಂ ಎನ್ನುವ ಯಾವ ಬುದ್ಧಿವಂತಿಕೆಯ ಚರ್ಚೆಯೂ ಅಲ್ಲಿ ನಡೆಯುವುದೇ ಇಲ್ಲ!

ನರಿಗೆ ಎಲ್ಲಾ ವಿಷಯಗಳೂ ಗೊತ್ತಿರುತ್ತದೆ! ಆದರೆ, ಸಿಂಹಕ್ಕೆ ಒಂದೇ ವಿಷಯ ಗೊತ್ತಿರುತ್ತದೆ!

1930 ರಲ್ಲಿ ಬರೆದ ಒಂದು ಪ್ರಬಂಧ ಜಗತ್ತಿನಾದ್ಯಂತ ಪ್ರಸಿದ್ಧವಾಗಿತ್ತು. ಆತ ನರಿಗಳು ಹಾಗೂ ಸಿಂಹಗಳ ಹೆಸರನ್ನಿಟ್ಟದ್ದು ಜನರ ಮನಸ್ಥಿತಿಯ ಮೇರೆಗೆ ಹಾಗೂ, ವಾಸ್ತವವನ್ನು ಯಾವೆರಡು ರೀತಿಯಾದ ಜನ ಎದುರಿಸುತ್ತಾರೆಂಬುದನ್ನು ತಿಳಿಸಲು!!! ಬರ್ಲಿನ್ ನ ಪ್ರಕಾರ, ಈ ನರಿಗಳಿಗೆ ಪ್ರತಿ ವಿಷಯವೂ ಗೊತ್ತಿರುತ್ತದೆ. ಆದರೆ, ಸುಸಂಬದ್ಧ ಜಗತ್ತು ಅವರ ಗ್ರಹಿಕೆಯಿಂದ ಹೊರಗಿರುತ್ತದೆ! ಆದರೆ, ಈ ಸಿಂಹಕ್ಕೆ ಗೊತ್ತಿರುವುದು ಒಂದೇ ಶ್ರೇಷ್ಟ ಸತ್ಯವಾದರೂ ಅದೆಷ್ಟೇ ಕಷ್ಟವಾದರೂ ಸರಿಯೇ! ಸತ್ಯಕ್ಕಂಟಿಕೊಳ್ಳುತ್ತದೆ! ಜಗತ್ತಿನ ವಿಸ್ಮಯಗಳ ಆಳಕ್ಕಿಳಿದು ವಾಸ್ತವ ಹಾಗೂ ಭವಿಷ್ಯತ್ತಿನ ಮಧ್ಯೆ ನಿಲ್ಲುತ್ತದೆ! ತನ್ನ ಸತ್ಯದ ಗಮ್ಯವನ್ನು ಮುಟ್ಟುವಗರೆಗೂ ಅದು ಕಟ್ಟುನಿಟ್ಟಾಗಿಯೇ ನಿಂತು ಬಿಡುತ್ತದೆ!

ಈ ಎರಡು ವಿಚಾರಗಳು ಭಾರತದ ಇವತ್ತಿನ ಮನಃಸ್ಥಿತಿಗೆ ತಕ್ಕದಾಗಿದೆ! ಬಹುಷಃ ಈ ವಿಚಾರವೊಂದು ನರೇಂದ್ರ ಮೋದಿ ಯಾವ ರೀತಿಯಲ್ಲಿ ಆರ್ಥಿಕತೆಯನ್ನು ಅಭಿವೃದ್ಧಪಡಿಸುತ್ತಿದ್ದಾರೆಂಬುದಲ್ಲಿಂದ ಭಾರತದ ಆರ್ಥಿಕತೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೆಂಬುದನ್ನೂ ಸಹ ಆಲೋಚಿಸಬಹುದು!! ಯೋಚಿಸಬೇಕಾದಿರುವುದಿಷ್ಟೇ! ಹೇಗೆ ಸಿಂಹಕ್ಕೆ ತಾ ಹೋಗಬೇಕಾದ ಸತ್ಯವೊಂದೇ ಗೊತ್ತಿರುತ್ತದೆಯೋ ಅದೇ ರೀತಿ ಮೋದಿಯವರಿಗೆ ಭಾರತಕ್ಕೇನು ಮಾಡಬೇಕೆಂದು ಗೊತ್ತಿದೆ! ಭಾರತಕ್ಕೇನು ಬೇಕಾಗಿದೆ ಎಂಬುದು ಗೊತ್ತಿದೆ! ಹೋಗುತ್ತಿರುವ ದಾರಿಯ ಬಗ್ಗೆ ಖಚಿತತೆಯಿದೆ!

ಸತ್ಯ!!!! ಭಾರತದ ಸಮಕಾಲೀನ ಇತಿಹಾಸದಲ್ಲಿ ಬಹುಷಃ 1990 ರಲ್ಲಿದ್ದ ನರಸಿಂಹ ರಾವ್ ರವರನ್ನು ಹೊರತುಪಡಿಸಿ ಬೇರಾವ ರಾಜಕಾರಣಿಯೂ ಭಾರತದ ವ್ಯವಸ್ಥೆಯನ್ನು ಅರ್ಥಬದ್ಧಗೊಳಿಸುವಲ್ಲಿ ಮೋದಿಯಷ್ಟು ಪ್ರಬುದ್ಧರೂ ಇರಲಿಲ್ಲ ಎನ್ನುವುದು ಒಪ್ಪಲೇಬೇಕಾಗುತ್ತದೆ.

ಈ ಸುಧಾರಣೆಯೆಂಬುದು ಸಮಾಜಕ್ಕೆ ಅಭಿನಂದನೀಯವಾಗಿರುವುದಿಲ್ಲ! ಆದರೆ ಬೆಲೆಯನ್ನು ಪ್ರಾಮಾಣಿಕವಾಗಿ ತಂದಿಡುತ್ತದೆ! ಪ್ರತಿಫಲ ನಂತರ ಸಿಗುತ್ತಾ ಹೋಗುತ್ತದೆ! ಬಿಡಿ! ಈ ಆರ್ಥಿಕತೆಯ ವಿಷಯ ಬಂದಾಗ ಅರುಣ್ ಜೇಟ್ಲಿ ಈ ಸುಧಾರಣೆಯ ಸಮಯದಲ್ಲಾದ ಪ್ರತಿ ಪರಿಸ್ಥಿತಿಯನ್ನೂ ಸಹ ಎದುರಿಸುವುಷ್ಟು, ಪರಿಹರಿಸುವಷ್ಟು ಸಧೃಢ ಯೋಧರಾಗಿದ್ದಾರೆ!

ವಿಷಯ ಇಷ್ಟೇ! ಅದೆಷ್ಟೋ ವರ್ಷಗಳ ಕಾಲ ಈ ಸುಧಾರಣೆಯೆನ್ನುವುದು ಗೈರು ಹಾಜರಿಯಲ್ಲಿತ್ತು. ಅದಲ್ಲದೆಯೇ, ನರಿಗಳೆಲ್ಲವೂ ಸಹ ಆರಾಮಕುರ್ಚಿಯಲ್ಲಿ ಕುಳಿತು ತೂಗುತ್ತಿತ್ತಲ್ಲದೇ, ದುಃಖಿಸುತ್ತಿತ್ತು ಸಹ! ಆದರೆ, ಈಗ ಆಗಬೇಕಾಗಿದ್ದಂತಹ ಪ್ರತಿ ಸುಧಾರಣೆಗಳೂ ದೇಶದೊಳಗಾಗುತ್ತಿರುವಾಗ ನರಿಗಳು ಕಾಡಿನಿಂದ ಹೊರ ಬರಲು ಪ್ರಾರಂಭಿಸಿದೆ! ಬೆಲೆ ತೆರಲು ಸಾಧ್ಯವೂ ಇಲ್ಲದಂತಾಗಿದೆ! ಮತ್ತು, ಸುಧಾರಣೆಯನ್ನೇ ದೂಷಿಸಲಾರಂಭಿಸಿವೆ! ಸಮಯಕ್ಕೆ ತಕ್ಕುದಲ್ಲದ, ಸರಿಯಾದ ನಿರೂಪಣೆಯಿಲ್ಲದ ಹಾಗೂ ಸರಿಯಾದ ಕಾರ್ಯಸೂಚಿಯಿಲ್ಲದ ಸುಧಾರಣೆಯೆಂದು ಬೊಬ್ಬಿರಿಯುವ ಕಾರ್ಯವನ್ನಷ್ಟೇ ಮಾಡುತ್ತಿದೆ!

ಮೋದಿಗೆ ಗೊತ್ತಿದೆ!

ಮೋದಿ ಸತತ 15 ವರ್ಷಗಳ ಸುಧೀರ್ಘಾವಧಿ ರಾಜ್ಯಾಡಳಿತ ನಡೆಸಿದ ಅನುಭವಿಗಳು! ನರಿಗಳಿಗೆ ಗೊತ್ತಿಲ್ಲದ ಒಂದಷ್ಟು ಮೋದಿಗೆ ಗೊತ್ತಿದೆ! ನರಿಗಳಿಗೆ ಯಾವುದು ಗೊತ್ತಿಲ್ಲವೆಂಬುದೂ ಮೋದಿಗೆ ಗೊತ್ತಿದೆ! ಮೊದಲನೆಯದಾಗಿ, ಕಠಿಣ ನಿರ್ಧಾರಗಳ ತೆಗೆದುಕೊಳ್ಳುವುದಕ್ಕೆ ತಕ್ಕ ಸಮಯವೆನ್ನುವುದು ಬರುವುದೇ ಇಲ್ಲ.! ಆ ಕ್ಷಣಕ್ಕನುಗುಣವಾಗಿ ಯೋಚಿಸಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಸಮಯದ ಒಳಿತು ಕೆಡಕುಗಳು ನಿರ್ಧಾರವಾಗುತ್ತದೆ. ಎರಡನೆಯದು, ಈ ನಿಧಾನವಾಗಿ, ನಾಳೆ, ಅಥವಾ ಮುಂಬರುವ ದಿನಗಳಲ್ಲಿ ಎಂದು ಯೋಚಿಸಿ ಆಮೆಗತಿಯಲ್ಲಿ ನಡೆಯುವ ಸುಧಾರಣೆಗಳಿಂದ ಮೂಲಭೂತವಾದ ಸೂಕ್ಷ್ಮ ಸಂಗತಿಗಳೆಲ್ಲವೂ ಕೂಡ ಅರ್ಥವಿಲ್ಲದಂತಾಗಿಬಿಡುತ್ತದೆ! ಅದೇ ರೀತಿ ನಮ್ಮ ಸ್ವಾತಂತ್ರ್ಯಾಪೂರ್ವ ಭಾರತದ ಆರ್ಥಿಕ ಸ್ಥಿತಿಯೂ ಆಗಿದ್ದು! ಇವತ್ತು, ಬಹಳ ಉತ್ಸಾಹದಿಂದ ಭಾರತ ಸರ್ಕಾರ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಲು ಕರ್ತವ್ಯ ನಿರತವಾಗಿದೆ!

ಮೋದಿಯೂ ಸಹ ಈ ಬೆಂದು ಬರಡಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವಲ್ಲಿ ನೋಡುತ್ತಿದ್ದಾರೆ! ಅರುಣ್ ಜೇಟ್ಲಿ ರಾಜ್ಯ ಸರಕಾರಗಳ
ಸಹಾಯದಿಂದ 2015 ರಿಂದಲೂ ಏಕರೂಪ ತೆರಿಗೆ ವಿಚಾರದಲ್ಲಿ, 2016 ರ ನೋಟು ನಿಷೇಧ ಪ್ರಕ್ರಿಯೆಯಲ್ಲಿ, 2017 ರ ಜಿಎಸ್ ಟಿಯಲ್ಲಿ, ಪೀಯೂಷ್
ಗೋಯೆಲ್ ರವರ ಯಾಂತ್ರಿಕ ಶಕ್ತಿಯ ಬಲದ ಮೇಲೆ, ನಿತನ್ ಗಡ್ಕರಿಯ ಸರಕು ಸಾಗಾಣಿಕೆಯ ವಿಚಾರದಲ್ಲಿ, ಅರುಣ್ ಜೇಟ್ಲಿಯ ಸಮಾಲೋಚನೆ, ಇವೆಲ್ಲವೂ ಸಹ ಭಾರತವನ್ನು ಒಂದು ಸಮತೋಲನ ಸ್ಥಿತಿಗೆ ತರುವುದಲ್ಲದೆಯೇ, ಪ್ರತಿಯೊಬ್ಬರ ಕಾರ್ಯಸೂಚಿಯೂ ಭಾರತದ ಆರ್ಥಿಕತೆಯನ್ನು ಧೃಢವಾಗಿ ಹಾಗೂ ತನ್ನಷ್ಟಕ್ಕೇ ಬೆಳೆಯುತ್ತಲೇ ಹೋಗುವ ಮಾರ್ಗವೊಂದನ್ನು ಸೃಷ್ಟಿಸುತ್ತಲೇ ಹೋಗುತ್ತಿದೆ.

ಈ ರೀತಿಯಾದ ಸ್ವಯಂಚಾಲಿತ ಆರ್ಥಿಕ ಸ್ಥಿತಿಯ ಚಿತ್ರಣವನ್ನು ಆಧುನಿಕ ಭಾರತದ ಯಾವ ರಾಜಕಾರಣಿಯೂ ಸಹ ಈ ರೀತಿಯ ಸುಧಾರಣೆಗಳನ್ನು ತರುವಲ್ಲಿ ಯೋಚಿಸಲೂ ಇಲ್ಲ ಹಾಗೂ ಕಾರಣೀಭೂತನಾಗಲೂ ಇಲ್ಲ. ಭಾರತ ಅದೆಷ್ಟೋ ವರ್ಷಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಸುಲಿಗೆಗೆ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತ ಹೋಗುತ್ತಿದೆ! ಯೋಚಿಸಿ! ಇವತ್ತು ಕಳಂಕರಹಿತವಾದ ಮೋದಿ, ಬಿಜೆಪಿ ಎಂಬ ಪಕ್ಷದ ಮೂಲಕ ಮಾಡುತ್ತಿರುವ ಸುಧಾರಣೆಗೆ ಭಾರತ ಅದೆಷ್ಟು ಕೃತಜ್ಞವಾಗಿದ್ದರೂ ಸಾಲದಷ್ಟೇ!

ಆದರೆ, . .ಮೋದಿಯ ಅತ್ಯಂತ ಕಷ್ಟದ ದಿನಗಳಿನ್ನೂ ಪ್ರಾರಂಭವಾಗುವುದರಲ್ಲಿದೆ!

ಹಾ! ಮೋದಿಯದೆಷ್ಟೇ ಆರ್ಥಿಕತೆಯ ಸಬಲೀಕರಣದ ನೊಗ ಹೊತ್ತು ಕಾರ್ಯನಿರತವಾಗಿದ್ದರೂ ಸಹ, ಅದೆಷ್ಟೇ ಸಾಂಸ್ಕೃತಿಕವಾಗಿ, ರಾಷ್ಟ್ರೀಯ ಅಸ್ತಿತ್ವದ ಘನತೆಯನ್ನು ಮರಳಿ ತರುವಲ್ಲಿ ಯಶಸ್ವಿಯಾಗಿದ್ದರೂ ಸಹ, ಇವತ್ತು ಒಂದಿಡೀ ಭಾರತದ ರೂಪವನ್ನೇ ಬದಲಾಯಿಸಿದ್ದರೂ ಸಹ, ಅಂತರಾಷ್ಟ್ರೀಯ ವಿಚಾರವಾಗಿ ‘ಮೋದಿ-ಸಿದ್ಧಾಂತ’ ಎಂಬಡಿಯಲ್ಲಿ ಇಡೀ ಜಗತ್ತನ್ನೇ ತಿರುಗಿ ನೋಡುವ ಹಾಗೆ ಮಾಡಿದರೂ ಸಹ, ಮೋದಿ ಅವಶ್ಯವಾಗಿ ಈ ನೆಹರೂ – ಇಂದಿರಾ ಗಾಂಧಿ
– ಕಾಂಗ್ರೆಸ್ ಎಂಬಷ್ಟನ್ನು ಬೆತ್ತಲೆ ಮಾಡಲೇಬೇಕಾಗಿದೆ!! ಭಾರತದ ಇತಿಹಾಸಕ್ಕಂಟಿದ ಶಾಪವದಷ್ಟೇ! ಯಾವತ್ತು, ಈ ವಂಶವಾಹಿನಿ ಆಡಳಿತದ ನಾಟಕವನ್ನು
ಬುಡಸಮೇತ ಕೀಳುವಲ್ಲಿ ಮೋದಿ ಯಶಸ್ವಿಯಾಗುತ್ತಾರೋ, ಅವತ್ತು ಭಾರತ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮೈ ಕೊಡವಿ ಎದ್ದು
ನಿಲ್ಲುತ್ತದೆಯೆಂಬುದು ನಿಶ್ಚಿತ!

ಹಾಗಾಗಬೇಕಾದರೆ, ಆರ್ಥಿಕವಾಗಿ ನೆಲೆ ನಿಂತಿರುವ ಪ್ರತಿ ಯೋಜನೆಯೂ ಸಹ ಸೈದ್ಧಾಂತಿಕವಾಗಿ ದೃಢತೆಯನ್ನೊಳಗೊಂಡಂತಹದ್ದಾಗಿರಬೇಕು. ಬರೀ ಬಾಹ್ಯಗಳ ಸುಧಾರಣೆಯಲ್ಲದೇ, ಆಂತರಿಕವಾಗಿಯೂ ಸಹ ಸುಧಾರಣೆಯಾಗಬೇಕಾಗುತ್ತದೆ! ಅಲ್ಲದೇ, ಪಾರದರ್ಶಕವಾದ ಏಕರೂಪ ಆರ್ಥಿಕ ವ್ಯವಸ್ಥೆಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲೇಬೇಕಾದ ಅವಶ್ಯಕತೆಯಿದೆ ಕೂಡ!

ಅಕಸ್ಮಾತ್, ಪ್ರತಿ ಭಾರತೀಯ ಮಾರ್ಜಿನ್ನುಗಳ ಮೇಲೆ ಏಕರೂಪವಾದ ವ್ಯವಸ್ಥೆಯನ್ನು ತಂದರೆ, ಪೃಬುದ್ಧವಾದ ಸಧೃಢ ವ್ಯವಸ್ಥೆಯೊಂದ ತನ್ನಿಂತಾನೇ ನಡೆದುಕೊಂಡು ಹೋಗುತ್ತದೆ. ಪ್ರತಿಫಲವಾಗಿ, ಚುರುಕಾಗಿ ಹಾಗೂ ಅಷ್ಟೇ ಪರಿಣಾಮಕಾರಿಯಾದ ಭವಿಷ್ಯವೊಂದು ಭಾರತ ಸಮಾಜಕ್ಕೆ ಪರಿಚಯವಾಗುತ್ತದೆ!

ಇವೆಲ್ಲವನ್ನೂ ವಿಮರ್ಶಿಸುವಾಗ, ನನಗೆ ನನ್ನ ಅಜ್ಜ ಹೇಳುತ್ತಿದ್ದ ಒಂದು ಮಾತು ಯಾವಾಗಲೂ ನೆನಪಿಗೆ ಬರುತ್ತದೆ! “ಭಾರತ 50 ಹಾಗೂ 60 ರ ಇಸವಿಗಳಲ್ಲಿ ಅಕ್ಷರಶಃ ಬಡವಾಗಿ ಹೋಗಿತ್ತು! ಆರ್ಥಿಕ ತಜ್ಞರಿದ್ದರೆಂಬುದಕ್ಕಲ್ಲ, ಬದಲಾಗಿ ತುಂಬಾ ತಜ್ಞರಿದ್ದರೆಂಬುದಕ್ಕೆ! “

ಅದಾದ ಮೇಲೆ, ಬಹಳವಾಗಿ ಆಲೋಚಿಸಿದ್ದೇನೆ. ಬಹುಷಃ ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಅದೆಷ್ಟೋ ಅವಕಾಶಗಳಿದ್ದವು ಭಾರತದ ಸರಕಾರಕ್ಕೆ! ಭ್ರಷ್ಟಾಚಾರ ಮುಕ್ತ ವಾದ ಭಾರತವನ್ನು ನಿರ್ಮಿಸುವುದಕ್ಕೆ, ಹಂತ ಹಂತವಾಗಿ ಅಭಿವೃದ್ಧಿ ನಡೆದಿದ್ದರೂ ಸಹ ಈ ಸಮಯದ ಹೊತ್ತಿಗೆ ಭಾರತ ಸಧೃಢವಾಗಿ ಎದ್ದು ನಿಲ್ಲುತ್ತಿತ್ತೇನೋ!

ಪ್ರಾಯೋಗಿಕವಾಗಿಯೇ ಹೇಳಬೇಕೆಂದರೆ ಹೆಗ್ಗಣಗಳನ್ನು ನಾಶಪಡಿಸದೇ ದೇಶವನ್ನು ಕಟ್ಟಲು ಸಾಧ್ಯವೇ ಇಲ್ಲ! ಅಲ್ಲದೆಯೇ, ಭಾರತೀಯ ಬ್ಯಾಂಕುಗಳಲ್ಲಿ ನಿರಂತರವಾಗಿ ಹಣ ಚಲಾವಣೆ ನಡೆಯದೆಯೇ, ಪ್ರತಿ ಒಂದರ ಮೇಲೂ ತೆರಿಗೆಗಳ ಲೆಕ್ಕವನ್ನಿಡದೇ ಆರ್ಥಿಕ ವ್ಯವಸ್ಥೆ ಸುಭದ್ರವಾಗುವುದು ಹೇಗೆ?

ಅದಕ್ಕೇ, ಇವತ್ತು ಮೋದಿ ಸುಧಾರಣೆ ಮಾಡದಿದ್ದರೆ ಇನ್ಯಾರು ಮಾಡಿಯಾರು?! ಮೋದಿ ಸುಧಾರಣೆಯನ್ನು ಪ್ರತಿನಿಧಿಸದೇ ಇದ್ದರೆ ಬೇರೆ ಯಾರು ಮಾಡಿಯಾರು?!

ಇವತ್ತೂ ಕೂಡ, ಭಾರತವೇನಾದರೂ ಆರ್ಥಿಕವಾದ ಸುಭಧ್ರತೆಯನ್ನು ಕಂಡುಕೊಳ್ಳದೇ ಹೋದರೆ ಭವಿಷ್ಯದಲ್ಲಿ ಇನ್ನೆಂದಿಗೂ ಭದ್ರತೆಯನ್ನು ಸಾಧಿಸಲು ಸಾಧ್ಯವೇ ಇಲ್ಲ! ಮುಂದಿನ ಅದೆಷ್ಟೋ ಪೀಳಿಗೆಗಳ ತನಕ ಹಾವು-ಏಣಿಯಾಟದ ಹಾಗಾಗುತ್ತದೆ ಭಾರತದ ಸುಧಾರಣೆ!

ಮೋದಿಯಲ್ಲದಿದ್ದರೆ ಇನ್ಯಾರು?! ಇವತ್ತಲ್ಲದೇ ಇನ್ಯಾವಾಗ?!

– ತಪಸ್ವಿ

Tags

Related Articles

Close