ಪ್ರಚಲಿತ

ನರೇಂದ್ರ ಮೋದಿಯಿಂದಾಗಿ ಅಮೆರಿಕವನ್ನೂ ಮೀರಿ ವಿಶ್ವದ ದೊಡ್ಡಣ್ಣನಾಗಲು ಹೊರಟ ಭಾರತ!!

ವಿದೇಶಿ ನೇರ ಬಂಡವಾಳ (ಎಫ್.ಡಿ.ಐ) ಆಕರ್ಷಣೆಯಲ್ಲಿ ಬಲಾಡ್ಯ ಎನಿಸಿಕೊಂಡಿರುವ ಚೀನ ಹಾಗೂ ಅಮೆರಿಕವನ್ನೂ ಹಿಂದಿಕ್ಕಿ ಭಾರತ 2015ರಲ್ಲಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿತ್ತು!! 2015ನೇ ಸಾಲಿನ ಮೊದಲ ಆರು ತಿಂಗಳ ಅವಧಿಯಲ್ಲಿ ಭಾರತಕ್ಕೆ ಬರೋಬ್ಬರಿ 2 ಲಕ್ಷ ಕೋಟಿ ರೂ.ನಷ್ಟು ಬಂಡವಾಳ ಹರಿದುಬಂದಿದ್ದು, ಇದೀಗ ಭಾರತ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ವಿದೇಶೀ ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದು ಸಂತಸದ ವಿಚಾರವಾಗಿದೆ!!

ಹೌದು… ಈ ಹಿಂದೆ ಚೀನಾ ಗಳಿಸಿರುವ ಒಟ್ಟು ಬಂಡವಾಳಕ್ಕಿಂತ 19 ಸಾವಿರ ಕೋಟಿ ಹಾಗೂ ಅಮೆರಿಕದ್ದಕ್ಕಿಂತ 26 ಸಾವಿರ ಕೋಟಿ ರೂ.ಗಿಂತ ಹೆಚ್ಚು ಎಂಬುವುದು ಗಮನಾರ್ಹವಾಗಿತ್ತು!! ಹದಿನಾರು ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಬರೋಬ್ಬರಿ 20 ಲಕ್ಷ ಕೋಟಿ ರೂ. (300 ಬಿಲಿಯನ್ ಅಮೆರಿಕನ್ ಡಾಲರ್)ಗೂ ಅಧಿಕ ವಿದೇಶಿ ನೇರ ಬಂಡವಾಳ (ಎಫ್.ಡಿ.ಐ) ಹರಿದುಬಂದಿದ್ದು ಇದರೊಂದಿಗೆ ವಿಶ್ವಮಟ್ಟದಲ್ಲಿ ಭಾರತ ಅತ್ಯಂತ ಸುರಕ್ಷಿತ ಹೂಡಿಕೆಯ ತಾಣವಾಗಿ ಹೊರಹೊಮ್ಮಿತ್ತು. ಇದೀಗ ವಿದೇಶಿ ನೇರ ಹೂಡಿಕೆ (ಎಫ್.ಡಿ.ಐ) ಈ ವರ್ಷದ ಏಪ್ರಿಲ್-ಸೆಪ್ಟೆಂಬರ್ ಹಣಕಾಸು ಅವಧಿಯಲ್ಲಿ 17 ಶೇಕಡ ಏರಿಕೆಯಾಗಿ 25.35 ಶತಕೋಟಿ ಡಾಲರ್ ಗೆ ತಲುಪಿದ್ದು ಭಾರತ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ವಿದೇಶೀ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ.

2017- 18 ಸೆಪ್ಟಂಬರ್ ವರೆಗಿನ ಅವಧಿಯಲ್ಲಿ ಎಫ್.ಡಿ.ಐ ಇಕ್ವಿಟಿ ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 21.62 ಬಿಲಿಯನ್ ಯುಎಸ್ ಡಾಲರ್ ನಿಂದ 25.35 ಶತಕೋಟಿ ಡಾಲರ್‍ಗಳಿಗೆ ಏರಿಕೆಯಾಗಿದೆ ಎಂದು ಡಿಐಪಿಪಿ ತನ್ನ “ಮೇಕ್ ಇನ್ ಇಂಡಿಯಾ” ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬಹಿರಂಗ ಪಡಿಸಿದೆ. ಅಷ್ಟೇ ಅಲ್ಲದೇ, ಪ್ರಧಾನಿ ಸಚಿವಾಲಯದ ಸೂಚನೆಯಂತೆ “ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ” ಕೈಗಾರಿಕಾ ನೀತಿ ಮತ್ತು ಪ್ರಚಾರದ ಇಲಾಖೆ (ಡಿಐಪಿಪಿ) ಎಫ್.ಡಿ.ಐ ಸಂಬಂಧಿತ ಸಮಸ್ಯೆಗಳನ್ನು ಪರಿಣಾಮಾತ್ಮಕವಾಗಿ ಬಗೆಹರಿಸುತ್ತಿದೆ..

2000ನೇ ಇಸ್ವಿಯ ಏಪ್ರಿಲ್‍ನಿಂದ 2016ರ ಸೆಪ್ಟೆಂಬರ್‍ವರೆಗೆ ಭಾರತಕ್ಕೆ 21 ಲಕ್ಷ ಕೋಟಿ ರೂ. ಎಫ್.ಡಿ.ಐ ಬಂದಿದ್ದು, ಈ ಪೈಕಿ ಶೇ.33ರಷ್ಟು ಮೊತ್ತ ಅಂದರೆ 7 ಲಕ್ಷ ಕೋಟಿ ರೂ. ಹೂಡಿಕೆ ಮಾರಿಷಸ್ ಮಾರ್ಗವಾಗಿ ಬಂದಿತ್ತು. ಅಷ್ಟೇ ಅಲ್ಲದೇ, ಭಾರತದ ಜೋಡಿ ತೆರಿಗೆಯನ್ನು ತಪ್ಪಿಸಲು ಹೂಡಿಕೆದಾರರು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು 2016ರಲ್ಲಿ ಹಣಕಾಸು ವರ್ಷದ ಮೊದಲ ಅರ್ಧ ಅವಧಿಯಲ್ಲಿ 1.4 ಲಕ್ಷ ಕೋಟಿ ರೂ. ಬಂಡವಾಳ ಬಂದಿದೆ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯ ದತ್ತಾಂಶಗಳು ಹೇಳುತ್ತವೆ. ಆ ಸಂದರ್ಭದಲ್ಲಿ ಸಿಂಗಾಪುರ, ಅಮೆರಿಕ, ಬ್ರಿಟನ್ ಹಾಗೂ ನೆದರ್ಲೆಂಡ್‍ನಿಂದಲೂ ಭಾರಿ ಹೂಡಿಕೆಯಾಗಿತ್ತು!!

ಇನ್ನು ಈ ಬಾರಿ, 25.35 ಶತಕೋಟಿ ಡಾಲರ್‍ಗಳಿಗೆ ಏರಿಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದ್ದು, ಇಕ್ವಿಟಿ ಒಳಹರಿವು, ಮರುಪಾವತಿಸಿದ ಗಳಿಕೆಗಳು ಮತ್ತು ಇತರ ಬಂಡವಾಳ ಸೇರಿದಂತೆ ಭಾರತಕ್ಕೆ ಒಟ್ಟು ಎಫ್.ಡಿ.ಐ ಬರೋಬ್ಬರಿ 518.10 ಶತಕೋಟಿ ಡಾಲರ್ ನಷ್ಟಾಗಿದೆ !! ಇನ್ನು ವಿದೇಶಿ ಒಳಹರಿವುಗಳನ್ನು ಆಕರ್ಷಿಸುವ ಪ್ರಮುಖ ಕ್ಷೇತ್ರಗಳಲ್ಲಿ ಸರ್ವಿಸ್, ಟೆಲಿಕಾಂ, ವ್ಯಾಪಾರ, ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ಸಾಫ್ಟ್ವೇರ್ ಹಾಗೂ ಆಟೋಮೊಬೈಲ್ ಗಳು ಅಧಿಕವಾಗಿ ಸೇರಿವೆ. ಅಷ್ಟೇ ಅಲ್ಲದೇ, ಈ ಬಾರಿ ಸಿಂಗಾಪುರ್, ಮಾರಿಷಸ್, ನೆದರ್ಲ್ಯಾಂಡ್ ಮತ್ತು ಜಪಾನ್ ದೇಶಗಳಿಂದ ಭಾರತಕ್ಕೆ ಎಫ್.ಡಿ.ಐ ಅತಿಹೆಚ್ಚಾಗಿದೆ..!

2015ರಲ್ಲಿ ವಾಣಿಜ್ಯ ಆಂಗ್ಲ ದೈನಿಕ “ಫೈನಾನ್ಷಿಯಲ್ ಟೈಮ್ಸ್’, ಅಂದಾಜು ಬಂಡವಾಳ ವೆಚ್ಚವನ್ನು ಆಧರಿಸಿ ವಿವಿಧ ದೇಶಗಳಿಗೆ ಹರಿದುಬಂದಿರುವ ಎಫ್.ಡಿ.ಐ ಬಗ್ಗೆ ಲೆಕ್ಕಾಚಾರ ಮಾಡಿದ್ದು, ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಚೀನಾ ಹಾಗೂ ಅಮೆರಿಕ ನಡುವೆ ಭಾರೀ ಪೈಪೆÇೀಟಿ ನಡೆದಿತ್ತು. ಆ ವೇಳೆ ಎರಡೂ ದೇಶಗಳು ಎಫ್.ಡಿ.ಐ ವಿಚಾರದಲ್ಲಿ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದವು. ಇನ್ನು 2014ರಲ್ಲಿ ಐದನೇ ಸ್ಥಾನದಲ್ಲಿದ್ದ ಭಾರತ 2015ಕ್ಕೆ ಮೊದಲ ಸ್ಥಾನಕ್ಕೆ ಜಿಗಿದಿತ್ತು!!

ಅಷ್ಟೇ ಅಲ್ಲದೇ, 2014ನೇ ಸಾಲಿನ ಮೊದಲ ಆರು ತಿಂಗಳ ಅವಧಿಯಲ್ಲಿ 78 ಸಾವಿರ ಕೋಟಿ ರೂ. ಬಂಡವಾಳವನ್ನು ಆಕರ್ಷಿಸುವ ಮೂಲಕ ಭಾರತವು ಚೀನಾ, ಅಮೆರಿಕ, ಬ್ರಿಟನ್ ಹಾಗೂ ಮೆಕ್ಸಿಕೋ ನಂತರದ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ವರ್ಷದ ಏಪ್ರಿಲ್-ಸೆಪ್ಟೆಂಬರ್ ಹಣಕಾಸು ಅವಧಿಯಲ್ಲಿ 17 ಶೇಕಡ ಏರಿಕೆಯಾಗಿ 25.35 ಶತಕೋಟಿ ಡಾಲರ್ ಗೆ ತಪುಪಿದ್ದು ಭಾರತ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ವಿದೇಶೀ ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ!!

ಭಾರತ ಜಗತ್ತಿನ ಅತ್ಯಂತ ಹೆಚ್ಚು ಆಕರ್ಷಕ ಹೂಡಿಕೆಯ ಸ್ಥಳವಾಗಿದೆ ಎನ್ನುತ್ತವೆ ಅಂಕಿ ಅಂಶಗಳು. ವಿದೇಶಿ ನೇರ ಬಂಡವಾಳವನ್ನು ಮೇಕ್ ಇನ್ ಇಂಡಿಯಾ ಜೊತೆ ಮಾಡಿದ ದಿನದಿಂದ ಹೂಡಿಕೆ ಎಣಿಕೆಗೆ ಮೀರಿ ಹರಿದು ಬರುತ್ತಿದೆ. 2013/14 ರಲ್ಲಿ 36 ಬಿಲಿಯನ್ ಡಾಲರ್ ಇದ್ದ ವಿದೇಶಿ ನೇರ ಬಂಡವಾಳ ಮೋದಿ ಕೇಂದ್ರ ಸರಕಾರದಲ್ಲಿ ಅಧಿಕಾರದ ಚುಕ್ಕಾಣಿ ತೆಗೆದುಕೊಂಡ ನಂತರ ಗಣನೀಯವಾಗಿ ಏರಿಕೆ ಕಾಣುತ್ತ ಬಂದಿದೆ .

2014/15 ರಲ್ಲಿ 45 ಬಿಲಿಯನ್, 2015/16 ರಲ್ಲಿ 56 ಬಿಲಿಯನ್ ಮತ್ತು ಈ ಆರ್ಥಿಕ ವರ್ಷ ಅಂದರೆ 2016/2017 ರಲ್ಲಿ 60 ಬಿಲಿಯನ್ ಡಾಲರ್ ನೇರ ವಿದೇಶಿ ಬಂಡವಾಳದ ಮೂಲಕ ಭಾರತಕ್ಕೆ ಬಂದಿದೆ. ಅಮೇರಿಕದ ಭಾರತದಲ್ಲಿನ ಹೂಡಿಕೆಯಲ್ಲಿ 500 ಪ್ರತಿಶತ ಏರಿಕೆ ಕಂಡಿದೆ. ನೇರ ಬಂಡವಾಳ ಭಾರತದ ಅರ್ಥ ವ್ಯವಸ್ಥೆಗೆ ಬಹಳಷ್ಟು ಚೇತರಿಕೆ ನೀಡಿದೆ, ನೀಡುತ್ತಿದೆ.

ಇನ್ನು ಭಾರತಕ್ಕೆ ವಿದೇಶಿ ಹೂಡಿಕೆಗಳನ್ನು ನಿರ್ಣಾಯಕವೆಂದು ಪರಿಗಣಿಸಲಾಗಿದ್ದು, ಅದರ ಮೂಲಸೌಕರ್ಯ ಕ್ಷೇತ್ರವನ್ನು ಹೆಚ್ಚಿಸಲು1 ಟ್ರಿಲಿಯನ್ ಡಾಲರ್ ಬೇಕಾಗುತ್ತದೆ. ಇದು ಬಂದರು, ವಿಮಾನ ನಿಲ್ದಾಣ ಮತ್ತು ಹೆದ್ದಾರಿಗಳ ಬೆಳವಣಿಗೆಗೆ ಕಾರಣವಾಗುತ್ತದೆಯಲ್ಲದೆ ವಿದೇಶಿ ಹೂಡಿಕೆಗಳ ಬಲವಾದ ಒಳಹರಿವು ದೇಶದ ಸಮತೋಲನದ ಪಾವತಿ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇತರ ಜಾಗತಿಕ ಕರೆನ್ಸಿಗಳ ವಿರುದ್ಧ, ವಿಶೇಷವಾಗಿ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯವನ್ನು ಬಲಪಡಿಸುತ್ತದೆ.

ಆದರೆ ಈ ಬಾರಿಯ ಏಪ್ರಿಲ್-ಸೆಪ್ಟೆಂಬರ್ ಹಣಕಾಸಿನ ವರ್ಷದಲ್ಲಿ 25.35 ಶತಕೋಟಿ ಡಾಲರ್ ಗೆ ಏರಿಕೆಯಾದ ಎಫ್.ಡಿ.ಐ ಇತಿಹಾಸದಲ್ಲೇ ಭಾರತ ದೇಶವು ಅತಿಹೆಚ್ಚು ವಿದೇಶೀ ನೇರ ಹೂಡಿಕೆ ಪಡೆದಿರುವ ದೇಶವಾಗಿ ಹೊರಹೊಮ್ಮಿರುವುದೇ ಹೆಮ್ಮೆಯ ವಿಚಾರವಾಗಿದೆ!!

ಮೂಲ:original link – read here

– ಅಲೋಖಾ

Tags

Related Articles

Close