ಭಾರತದ ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರ ದೇಶದಲ್ಲಿ ಅನೇಕ ರೀತಿಯ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದ್ದು, ಇದರ ಜೊತೆಗೆ ಅನೇಕ ಬದಲಾವಣೆಗೂ ಕೂಡ ದೇಶದಲ್ಲಿ ನಡೆಯುತ್ತಿವೆ!! ಇಷ್ಟೇ ಅಲ್ಲದೇ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಭಾರತದಲ್ಲಿ ಮೋದಿ ಕೇವಲ ಭಾರತೀಯರನ್ನಲ್ಲದೇ ಈಡೀ ವಿಶ್ವವನ್ನೇ ತನ್ನೆಡೆಗೆ ಮೋಡಿ ಮಾಡಿದಂತಹ ಮಾತುಗಾರ!!
ಯಾವುದೇ ರೀತಿಯ ಹಗರಣಗಳನ್ನು ತನ್ನ ಮೈಗಂಟಿಸದೇ, ದೇಶಕ್ಕೋಸ್ಕರ ದೇಶದ ಜನತೆಗೋಸ್ಕರ ಹಲವು ವಿಧದ ಯೋಜನೆಗಳನ್ನು ಮಾಡುತ್ತಾ ಸ್ವಚ್ಛಭಾರತದ ಪರಿಕಲ್ಪನೆಯಲ್ಲಿ ಸಾಗುತ್ತಿರುವ ಇವರು ಇಡೀ ವಿಶ್ವವೇ ಗೌರವಿಸುವಂತಹ ಪ್ರಧಾನಿಯಲ್ಲೊಬ್ಬರಾಗಿದ್ದಾರೆ!! ಭ್ರಷ್ಟಚಾರ ಮುಕ್ತ ಭಾರತ ನಿರ್ಮಾಣವನ್ನು ಮಾಡಲು ಹೊರಟಿರುವ ಇವರು ಕೇವಲ ಮೂರುವರ್ಷಗಳಲ್ಲಿ ಮಾಡಿದ ಸಾಧನೆ ಬಗ್ಗೆ ಅಂಕಿ ಅಂಶಗಳ ಆಧಾರದ ಮೇಲೆ ಗಮನಿಸುತ್ತಾ ಹೋದರೆ ಒಂದು ಕ್ಷಣ ಆಶ್ಚರ್ಯವಾಗುವುದಂತೂ ಖಚಿತ….
ಹೌದು… ಅಂಕಿ ಅಂಶಗಳ ಆಧಾರದ ಮೇಲೆ ಮೋದಿ ಸರಕಾರವು ಮಾಡಿರುವ ಸಾಧನೆಗಳ ವಿವರಗಳನ್ನು ಗಮನಿಸಿದಾಗ ಮೋದಿ ಬಡವರಿಗಾಗಿ ಏನು ಮಾಡಿದ್ದಾರೆ ಎಂದು ಕೇಳುವವರು ಸ್ವಲ್ಪ ಗಮನಿಸಲೇಬೇಕು…..!! ದೇಶದ ಜನತೆಗಾಗಿ ಮೋದಿ ಸರಕಾರ ಮಾಡಿದ ಯೋಜನೆಗಳೇನು?? ಇದರಿಂದ ದೇಶಕ್ಕಾದ ಲಾಭವಾದರೂ ಏನು ಎಂಬುವುದು ತಿಳಿದುಕೊಳ್ಳಬೇಕಾದುದು ಅತೀ ಮುಖ್ಯ!!
ಅಂಕಿ ಅಂಶಗಳ ಮೇಲೆ ಮಾಡಿರುವ ವಿಶ್ಲೇಷಣೆ….!!
ನಮ್ಮ ದೇಶದಲ್ಲಿ 2014 ರಿಂದ 2017ರವರೆಗೆ ನಡೆದ ಬದಲಾವಣೆಗಳನ್ನು ನೋಡಿದಾಗ ಮೋದಿ ಸರಕಾರದಿಂದ ಆದ ಬದಲಾವಣೆಯನ್ನು ತಾಳೆ ಹಾಕಬಹುದು.
ಹೌದು.. ದೇಶದಲ್ಲಿ 2014 ರ ವೇಳೆ ಸುಮಾರು 18,452ರಷ್ಟು ಮಂದಿ ವಿದ್ಯುತ್ಚ್ಛಕ್ತಿಯಿಂದ ವಂಚಿತರಾಗಿದ್ದರೆ, 2017ರಲ್ಲಿ 3.937ಯಷ್ಟು ಮಂದಿ ಮಾತ್ರ
ವಿದ್ಯುತ್ಚ್ಛಕ್ತಿಯಿಂದ ವಂಚಿತರಾಗಿದ್ದಾರೆ!! ಇದು ಸಾಧ್ಯವಾಗಿದ್ದು, ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ಅವರ ಗ್ರಾಮೀಣ್ ವಿದ್ಯುತ್ ಕಿರಣ ಯೋಜನೆಯಡಿ!!!
ಇನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ, ಧಮೇಂದ್ರ ಪ್ರಧಾನ್ ಅವರ ನೇತೃತ್ವದಲ್ಲಿ 2014-2014ರಲ್ಲಿ 5.3ಕೋಟಿಯಷ್ಟು ಮನೆಗಳು ಎಲ್.ಪಿ.ಜಿ ಕನೆಕ್ಷನ್ ಪಡೆದುಕೊಂಡಿದ್ದರೆ, 2014 ರಿಂದ 2017ರಲ್ಲಿ 6.9 ಕೋಟಿ ಮಂದಿ ಎಲ್.ಪಿ.ಜಿ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ!
ಇನ್ನು ಮೇಕ್ ಇಂಡಿಯಾ ಯೋಜನೆಯಡಿ ಭಾರತದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ 2014ರ ವೇಳೆ 11,198 ಕೋಟಿ ರೂಪಾಯಿಗಳಿದ್ದರೆ, 2017ರಲ್ಲಿ 1,43,000 ಕೋಟಿ ರೂಪಾಯಿಗಳನ್ನು ಆರ್.ಎಸ್.ಪ್ರಸಾದ್ ಅವರ ನೇತೃತ್ವದಲ್ಲಿ ಮಾಡಲಾಗಿದೆ. ಅಷ್ಟೇ ಅಲ್ಲದೇ, ಆರ್.ಎಸ್ ಪ್ರಸಾದ್ ಹಾಗೂ ಮನೋಜ್ ಸಿನ್ಹಾ ಅವರ ನೇತೃತ್ವದ, ಡಿಜಿಟಲ್ ಇಂಡಿಯಾ ಯೋಜನೆಯಡಿ ಮೊಬೈಲ್ ಬ್ಯಾಂಕಿಂಗ್ ಸೇವೆಯು 1013-14ರಲ್ಲಿ 94.7 ಮಿಲಿಯನ್ ಇದ್ದರೆ, 2017ರಲ್ಲಿ 722.2 ಮಿಲಿಯನ್ ಆಗಿದ್ದು ದೇಶದ ಆರ್ಥಿಕ ಸ್ಥಿತಿಯನ್ನು ಉನ್ನತ ಸ್ಥಿತಿಗೆ ಏರಿಸುವಲ್ಲಿ ಕಾರಣಕರ್ತರಾಗಿದ್ದಾರೆ!!!
ಸ್ವಚ್ಛಭಾರತ ನಿರ್ಮಾಣದ ಅಡಿ 2014ರಲ್ಲಿ ಶೇಕಡಾ 43ರಷ್ಟು ನೈರ್ಮಲ್ಯ ವ್ಯಾಪ್ತಿಯನ್ನು ಹೊಂದಿದ್ದರೆ 2017ರ ವೇಳೆ ನೈರ್ಮಲ್ಯದ ವ್ಯಾಪ್ತಿಯೂ ಶೇಕಡಾ
64ರಷ್ಟು ಏರಿಕೆಯನ್ನು ಕಂಡಿದ್ದು, ಕೇಂದ್ರ ಮಂತ್ರಿಯಾದ ನರೇಂದ್ರ ತೋಮರ್ ಅವರ ನೇತೃತ್ವದಲ್ಲಿ ಈ ವಿಚಾರ ಕಂಡು ಬಂದಿದೆ !! ಇನ್ನು ಭಾರತದಲ್ಲಿನ
ವ್ಯವಹಾರಗಳ ಸ್ಥಿತಿಗತಿಯನ್ನು ಗಮನಿಸಿದಾಗ, ವಲ್ರ್ಡ್ ಬ್ಯಾಂಕ್ ನೀಡಿರುವ ಸ್ಥಾನದ ಪ್ರಕಾರ 2014-15ರವರೆಗೆ 142ರ ಸ್ಥಾನವನ್ನು ಪಡೆದಿದ್ದರೆ,
2016 ರಿಂದ 13ಂನೇ ಸ್ಥಾನವನ್ನು ಪಡೆದುಕೊಂಡಿದೆ!! ಇದರ ಪೂರ್ಣ ಪ್ರಮಾಣದ ನಿರ್ವಹಣೆಯನ್ನು ಯಾವುದೇ ಮಂತ್ರಿಗಳು ಮಾಡಿದ್ದಲ್ಲ, ಬದಲಾಗಿ
ಎನ್.ಐ.ಟಿ.ಐ ಆಯೋಗ್ನ್ನು ಮನ್ನಡೆಸುತ್ತಿರುವ ಅಮಿತಾಭ್ ಕಾಂತ್ ಅವರಿಗೆ ಈ ಕ್ರೆಡಿಟ್ ಸಲ್ಲುತ್ತದೆ!!
ಹೌದು! ಇನ್ನು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಮಹೇಶ್ ಶರ್ಮ ಅವರ ನೇತೃತ್ವದಲ್ಲಿ, ಡಬ್ಲ್ಯುಇಎಫ್ ಟ್ರಾವೆಲ್ ಮತ್ತು ಟೂರಿಸಂ ಸ್ಥಾನ ಪಟ್ಟಿಯಲ್ಲಿ 2014ರಲ್ಲಿ 65ನೇ ಸ್ಥಾನದಲ್ಲಿದ್ದರೇ 2017ರಲ್ಲಿ 40ನೇ ಸ್ಥಾನವನ್ನು ಪಡೆದುಕೊಂಡಿದೆ!! ಇಷ್ಟೇ ಅಲ್ಲದೇ, ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಸೌರ ವಿದ್ಯುತ್ ಉತ್ಪಾದನೆಯಲ್ಲಿ 2,621ಮೆಗಾವ್ಯಾಟ್ ಹಾಗೂ 2017ರಲ್ಲಿ 12,277 ಮೆಗಾವ್ಯಾಟ್ ಹೊಂದಿದ್ದರೆ, ಇನ್ನು ಆಫ್ಟಿಕಲ್ ಫೈಬರ್ ನೆಟ್ ವರ್ಕ್(ಗ್ರಾಮೀಣ ಸೇರಿದಂತೆ) 2013-14ರಲ್ಲಿ 358 ಕಿಲೋಮೀಟರ್ ಹಾಗೂ 2014-2017ರಲ್ಲಿ 2,05,404 ಕಿಲೋಮೀಟರ್ ನಷ್ಟು ಮಂತ್ರಿಗಳಾದ ಆರ್.ಎಸ್.ಪ್ರಸಾದ್ ನೇತೃತ್ವ ವಹಿಸಿದ್ದರೆ ನಂತರದಲ್ಲಿ ಮನೋಜ್ ಸಿನ್ಹಾ ಅವರ ನೇತೃತ್ವದಲ್ಲಿ ವಿಸ್ತರಿಸಲಾಗಿದೆ.
ಗ್ರಾಮೀಣ ರಸ್ತೆ ನಿರ್ಮಾಣದ ಕುರಿತ ಅಂಕಿ ಅಂಶಗಳನ್ನು ಗಮನಿಸುವುದಾದರೆ, 2011-2014ರ ವೇಳೆ 81,095 ಕಿಲೋಮೀಟರ್ ಇದ್ದರೆ, ಇನ್ನು ನಿತಿನ್ ಗಡ್ಕರಿಯವರ ನೇತೃತ್ವದಲ್ಲಿ 2014ರಿಂದ 2017ರವರೆಗೆ 1,20,233 ಕಿಲೋಮೀಟರ್ ರಸ್ತೆ ನಿರ್ಮಾಣವಾಗಿದೆ!! ಇದು ಹೊಸ ಮೈಲಿಗಲ್ಲನ್ನು ಕೂಡ ಸ್ಥಾಪಿಸಿತ್ತು!! ಇನ್ನು, ಕಲ್ಲಿದ್ದಲ್ಲಿನ ಉತ್ಪಾದನೆಯ ಬಗ್ಗೆ ಹೇಳುವುದಾದರೆ ಸೂರ್ಯನ ಕಿರಣಗಳಿಂದಾಗಿ ಕೋಲ್ ಟರ್ಮಿನಲ್ ಪ್ರಾಜೆಕ್ಟ್ ರದ್ದುಗೊಂಡಿರುವುದನ್ನು ಕೇಳಿ ಎಲ್ಲರಿಗೂ ಸಂತಸ ಆಗುವುದಂತೂ ಖಚಿತ. ಆದರೆ 2013-14ರಲ್ಲಿ 462ಮಿಲಿಯನ್ ಟನ್ಸ್ ಇದ್ದರೆ, 2016-17ರವರೆಗೆ 554 ಮಿಲಿಯನ್ ಟನ್ಸ್ ಗಳ ವರೆಗೆ ತಲುಪಿದೆ!! ಇದು ಕೂಡ ಸಾಧ್ಯವಾಗಿದ್ದು ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ಅವರ ನೇತೃತ್ವದಲ್ಲಿ!!
ಇಷ್ಟೇ ಅಲ್ಲದೇ, ಸ್ವಚ್ಛಭಾರತ ಯೋಜನೆಯಡಿ ಬರುವ ಶೌಚಾಲಯ ನಿರ್ಮಾಣದಲ್ಲಿ 2013-14ರಲ್ಲಿ 49.76ಲಕ್ಷ ಶೌಚಾಲಯಗಳು ನಿರ್ಮಾಣಗೊಂಡಿದ್ದರೆ
2016-17ರಲ್ಲಿ ಸುಮಾರು 2.09 ಕೋಟಿಗಳಷ್ಟು ಶೌಚಾಲಯ ನಿರ್ಮಾಣವಾಗಿದೆ. ಇದರ ಪೂರ್ಣ ಜವಾಬ್ದಾರಿಯನ್ನು ವಹಿಸಿರುವ ನರೇಂದ್ರ ತೋಮರ್ ಹಾಗೂ
ವೆಂಕಯ್ಯ ನಾಯ್ಡು ಅವರ ನೇತೃತ್ವದಲ್ಲಿ ನಡೆದ ಯಶಸ್ವಿ ಯೋಜನೆಯಾಗಿದೆ!! ಇನ್ನು ಎಫ್.ಡಿ.ಐ ಯ ವಿಚಾರದಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಅವರ
ನೇತೃತ್ವದಲ್ಲಿ 2014ರಲ್ಲಿ $24.2 ಮಿಲಿಯನ್ ಯುಎಸ್ ಡಾಲರ್ ಇದ್ದರೆ, 2017ರಲ್ಲಿ $56.3 ಮಿಲಿಯನ್ ಯುಎಸ್ ಡಾಲರ್ಗಳನ್ನು ಹೊಂದಿದೆ!! ಇನ್ನು ಜಿಡಿಪಿ
ಬೆಳವಣಿಗೆಯ ಬಗ್ಗೆ ಗಮನಿಸುವುದಾದರೆ 2014ರಲ್ಲಿ 6.6% ದಷ್ಟಿದ್ದರೆ, 2017ರಲ್ಲಿ 5.7% ದಷ್ಟು ಇಳಿಕೆಯಲ್ಲಿದೆ!!
ಇನ್ನು ಹಣಕಾಸಿನ ಕೊರತೆಯನ್ನು ಗಮನಿಸುವುದಾದರೆ 2014ರ ವೇಳೆ ಶೇಕಡಾ 4.6ರಷ್ಟು ಕೊರತೆಯನ್ನು ಕಂಡಿದ್ದರೆ, 2017ರಲ್ಲಿ ಶೇಕಡಾ 3.2ರಷ್ಟಕ್ಕೆ ತಲುಪಿದೆ. ಅಲ್ಲದೇ ಹಣದುಬ್ಬರದ ಸಮಸ್ಯೆಯನ್ನು ಗಮನಿಸುವುದಾದರೆ 2014ರಲ್ಲಿ ಶೇಕಡಾ 11ರಷ್ಟಿತ್ತು. ಆದರೆ 2017ರಲ್ಲಿ ಶೇಕಡಾ 4ರಷ್ಟಾಗಿ, ಒಟ್ಟು ಶೇಕಡಾ 7ರಷ್ಟು ಹಣದುಬ್ಬರದ ಸಮಸ್ಯೆ ಕಡಿಮೆಯಾಗಿದೆ!! ಇದೆಲ್ಲಾ ಸಾಧ್ಯವಾಗಿದ್ದು ಕೇಂದ್ರ ಮಂತ್ರಿಗಳಾದ ಅರುಣ್ ಜೇಟ್ಲಿ ಅವರಿಂದ!! ಇದಲ್ಲದೇ, ರೈಲಿನಲ್ಲಿಯೂ ವಿದ್ಯುಚ್ಛಕ್ತಿಯ ವೇಗವೂ ದ್ವಿಗುಣಗೊಂಡಿದ್ದು ಸೂಪರ್ ಟ್ರೈನ್ ಗಳಾದ ಮಹಾನಮ, ಗಾಟಿಮನ್, ತೇಜಸ್ ಮತ್ತು ಹಮ್ಸಾಫರ್ ಮೊದಲಾದ ರೈಲುಗಳು ಪ್ರಾರಂಭವಾಯಿತು. ಅಲ್ಲದೇ, ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿಯಲ್ಲಿ ಕೇಂದ್ರಗಳಲ್ಲಿ ಶುಚಿತ್ವವನ್ನು ಕಾಪಾಡಲು ಅಂತರ್ಜಾಲದ ವ್ಯವಸ್ಥೆಯನ್ನು ಕಲ್ಪಿಸಿ, ರೈಲ್ವೇಗಳ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಕ್ರಮವನ್ನು ಕೈಗೊಳ್ಳಲಾಯಿತು!!
ನರೇಂದ್ರ ಮೋದಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಲ್ಲಿಂದ ಆದ ಬದಲಾವಣೆಗಳನ್ನು ಗಮನಿಸಿದಾಗ, ಇಷ್ಟು ವರುಷ ಕಾಂಗ್ರೆಸ್ ಸರಕಾರ ಮಾಡದ ಸಾಧನೆಯನ್ನು ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ!! ಹಗರಣ ಮುಕ್ತ ಸರಕಾರವನ್ನು ನಡೆಸುತ್ತಿರುವ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ನಿಜಕ್ಕೂ ಮೆಚ್ಚಲೇ ಬೇಕು!!
-ಅಲೋಖಾ