ಅಂಕಣ

ನಾನ್ಯಾಕೇ ಅಂದು ಮುಸ್ಲಿಮರ ಟೋಪಿಯನ್ನು ಧರಿಸಲು ಒಪ್ಪಲಿಲ್ಲ ಗೊತ್ತೇ?? : ನರೇಂದ್ರ ಮೋದಿ!

ಮತಬ್ಯಾಂಕ್ ಎಂಬುದೇ ರಾಜಕೀಯದ ಪ್ರಮುಖ ಅಸ್ತ್ರವಾಗಿರುವುದು ಹೊಸದೇನಲ್ಲ! ಬಹುಷಃ ಶತಮಾನಗಳಿಂದಲೇ ಅಲ್ಪಸಂಖ್ಯಾತರ ವಿಷಯಗಳನ್ನಿಟ್ಟುಕೊಂಡು ಜಾತ್ಯಾತೀತತೆಯೆಂಬುದಕ್ಕೆ ಅಪಾರ್ಥವನ್ನು ಕೊಟ್ಟ ಕೀರ್ತಿ ಕಾಂಗ್ರೆಸ್ ಹಾಗೂ ಮಾಧ್ಯಮಗಳದ್ದೇ ಬಿಡಿ! ಕೇವಲ ಮತಕ್ಕೋಸ್ಕರ ಅಲ್ಪಸಂಖ್ಯಾತರ ಓಲೈಸುವ ಭರದಲ್ಲಿ ತಮ್ಮ ಧರ್ಮ ನಿಷ್ಠೆಯನ್ನೂ ಮರೆತ ಅದೆಷ್ಟೋ.ರಾಜಕಾರಣಿಗಳ ಮಧ್ಯೆ ನರೇಂದ್ರ ಮೋದಿ ವಿಭಿನ್ನವಾಗಿ ನಿಲ್ಲುತ್ತಾರೆಂಬುದಕ್ಕೆ ಅದೆಷ್ಟೋ ನಿದರ್ಶನಗಳಿದೆ!

ವಿರೋಧಿಸಲೆಂದೇ ಇರುವ ವಿರೋಧ ಪಕ್ಷಗಳ ಜೊತೆ ಮಾಧ್ಯಮವೆಂದ ರಣಹದ್ದು!

ಬಹುಷಃ ಮಾಧ್ಯಮ ಹಾಗೂ ವಿರೋಧ ಪಕ್ಷಗಳ ಅತೀ ಫೇವರಿಟ್ ಎನ್ನುವಂತಹ ಘಟನೆಯೊಂದು ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಡೆದಿತಷ್ಟೇ! ಇದ್ದರೆ ಮೋದಿಯಂತಹ ಮುಖ್ಯಮಂತ್ರಿಯಿರಬೇಕು ಎನ್ನುವ ಹಾರೈಕೆ ಪ್ರತಿ ರಾಜ್ಯಗಳಲ್ಲಿಯೂ ಕೇಳುತ್ತಿತ್ತು! ಮೋದಿಯ ಮುಂದಿನ ಗುರಿ ಪ್ರಧಾನಿ ಗದ್ದುಗೆ ಎಂಬ ಸುದ್ದಿ ಕೇಳಿಬರುತ್ತಲೇ ಸೆಕ್ಯುಲರ್ ಮಾಧ್ಯಮಗಳಿಗೆ, ಕಾಂಗ್ರೆಸ್ ಗೆ ಪೇಚಾಟಕ್ಕಿಟ್ಟುಕೊಂಡಿತು! ಏನಾದರೂ ಮಾಡಿ ಮೋದಿಯನ್ನು ಕೆಳಗಿಳಿಸಲೇಬೇಕೆಂಬ ಹುಚ್ಚಾಟಕ್ಕೆ ಬಿದ್ದಿದ್ದ ವಿರೋಧಿಗಳು ಗುಜರಾತಿನಲ್ಲಿಯೇ ಅಶಾಂತಿ ಸೃಷ್ಟಿಸುವ ಕೆಲಸ ಮಾಡಲು ಒಂದು ಘಟನೆ ನಡೆದುಹೋಯಿತು!

“ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಸಲ್ಮಾನ ಮೌಲ್ವಿಯೊಬ್ಬ ಧಾರ್ಮಿಕವಾಗಿ ಧರಿಸುವ ಟೋಪಿಯನ್ನು ಮೋದಿಗೆ ಹಾಕಲು ಬಂದಾಗ ನಯವಾಗಿ ತಿರಸ್ಕರಿಸಿದ್ದ ಮೋದಿ ಕೊನೆಗೂ ಟೋಪಿ ಹಾಕಿಕೊಳ್ಳಲು ಒಪ್ಪಲಿಲ್ಲ!”

ಆಗಿದ್ದು ಇಷ್ಟೇ!

ಸಾರ್ವಜನಿಕ ಕಾರ್ಯಕ್ರಮದ ಲೈವ್ ವೀಡಿಯೋ ವೈರಲ್ ಆಗಿಬಿಟ್ಟಿತು! ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಿಗಳು ಮುಗಿಬಿದ್ದರು! “ಮೋದಿ ಟೋಪಿ ಹಾಕಿಕೊಳ್ಳಲು ನಿರಾಕರಿಸಿದ್ದನ್ನು ನೋಡಿದರೆ ತಿಳಿಯುತ್ತದೆ ಅವರೊಬ್ಬ ಮುಸಲ್ಮಾನ ವಿರೋಧಿಯೆಂದು! ಮುಸಲ್ಮಾನ ಪದ್ಧತಿಗಳನ್ನು ಗೌರವಿಸದ ವಿರೋಧಿಯೆಂದು!” ಎಂದು ಟೀಕಿಸಿ ಆರೋಪ ಹೊರಿಸಿದವು!

ಎಷ್ಟರ ಮಟ್ಟಿಗೆ ಆರೋಪಗಳು ಸುತ್ತುವರೆದರೆಂದರೆ, ಮೋದಿಯೂ ಸಹ ನಿಮಿಷ ಆಲೋಚನೆ ಮಾಡಿದ್ದರು! “ತಾನಿರುವುದು ಹಿಂದೂಸ್ಥಾನದಲ್ಲಿಯೋ ಅಥವಾ
ಮುಸಲ್ಮಾನ ಸಾಮ್ರಾಜ್ಯದಲ್ಲಿಯೋ?!” ಎಂದು!

ರಜತ್ ಶರ್ಮಾ ರ ಆಪ್ ಕಿ ಅದಾಲತ್ ನಲ್ಲಿ ಮೌನ ಮುರಿದರು ಮೋದಿ!

 

ರಜತ್ ಶರ್ಮಾರ ‘ಆಪ್ ಕಿ ಅದಾಲತ್ ‘ ಕಾರ್ಯಕ್ರಮದಲ್ಲಿಯೂ ಸಹ ಮೋದಿಗೆ ಇದೇ ಪ್ರಶ್ನೆಯನ್ನೇ ಕೇಳಲಾಯ್ತು!

ಒಮರ್ ಅಬ್ದುಲ್ಲಾ ನಿಮ್ಮ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಮೋದಿಯವರೇ! ನೀವು ಸಿಖ್ಖರ ಪೇಟವನ್ನು ಧರಿಸುತ್ತೀರಂತೆ, ಅಸ್ಸಾಂ ಮತ್ತು ಅರುಣಾಚಲ್ ಗೆ ಹೋಗಿ ಅಲ್ಲಿನ ಸಂಸ್ಕೃತಿಯ ಪೇಟವನ್ನು ಧರಿಸುತ್ತೀರಂತೆ! ಆದರೆ, ಮುಸಲ್ಮಾನರ ಟೋಪಿಯನ್ನು ಧರಿಸೋಲ್ಲವಂತೆ!?!”

ಸಣ್ಣದಾಗಿ ಮುಗುಳ್ನಕ್ಕು ಮೋದಿ ಉತ್ತರಿಸಿದರು!

ನಾನು ಟೋಪಿಯನ್ನು ಧರಿಸುವುದು ಐಕ್ಯತೆಯನ್ನೇ ಬಿಂಬಿಸುತ್ತದೆಂದಾದರೆ, ಯಾಕೆ ಮಹಾತ್ಮಾ ಗಾಂಧಿ ಹಾಗೂ ನೆಹರೂ ಯಾವತ್ತೂ ಮುಸಲ್ಮಾನರ ಟೋಪಿಗಳನ್ನು ಧರಿಸಲಿಲ್ಲ?! ಸರದಾರ್ ವಲ್ಲಭ್ ರು ಕೂಡ ಮುಸಲ್ಮಾನ ಟೋಪಿಯನ್ನು ಧರಿಸಲಿಲ್ಲವೇಕೆ?! ಅದರಲ್ಲೂ, ನೆಹರೂ ಯಾಕೆ ಟೋಪಿಯನ್ನು ಹಾಕಿ ಛಾಯಾಚಿತ್ರ ತೆಗೆಸಿಕೊಳ್ಳಲಿಲ್ಲ?! “

“ನನ್ನ ಕರ್ತವ್ಯ ಪ್ರತಿ ಧರ್ಮ, ಮತ, ಪಂಗಡಗಳನ್ನು ಗೌರವಿಸುವುದರ ಜೊತೆ ನನ್ನ ಧರ್ಮವನ್ನು ಪಾಲಿಸುವುದು. ನನ್ನ ಧರ್ಮದ ಆಚರಣೆಗಳ
ಪ್ರಕಾರ, ಸಂಸ್ಕೃತಿಯ ಪ್ರಕಾರ ನಾನು ಬದುಕುವುದು. ಆದ ಕಾರಣ ನಾನು ಯಾವತ್ತಿಗೂ ಟೋಪಿಗಳನ್ನು ಧರಿಸಿ, ಛಾಯಾಚಿತ್ರ ತೆಗೆಸಿಕೊಂಡು, ತನ್ಮೂಲಕ ಜನರನ್ನು ವಂಚಿಸುವುದಿಲ್ಲ. ಆ ಇರಾದೆಯೂ ನನಗಿಲ್ಲ. ಅದೇ,.ಬೇರೆ ಯಾರಾದರೂ ಇನ್ನೊಬ್ಬರ ಧರ್ಮಗಳನ್ನು ಅಗೌರವಿಸಿದರೆ, ಕೀಳಾಗಿ ಕಂಡರೆ ನಿಜಕ್ಕೂ ಶಿಕ್ಷಿಸುತ್ತೇನೆ.

ಜೊತೆಗೆ ನರೇಂದ್ರ ಮೋದಿ ಮತ್ತೊಂದನ್ನೂ ಹೇಳಿದರು! “ಕೈಯ್ಯಲ್ಲಿ ಕುರಾನ್ ಹಿಡಿದವರಿಗೆ ಕಂಪ್ಯೂಟರ್ ನ ಬಳಕೆಗೂ ಗೊತ್ತಿರಬೇಕು” ಎಂದು!

ಗುಜರಾತ್ ನ ಮುಸಲ್ಮಾನರ ಅಭಿವೃದ್ಧಿಯನ್ನು ಮಾಡಿದ ಮೋದಿ ಸರಕಾರದಿಂದ ಅದೆಷ್ಟೋ ಬಡ ಮುಸಲ್ಮಾನ ಕುಟುಂಬಗಳು ಉನ್ನತ ಮಟ್ಟ ತಲುಪಿದವು. ವ್ಯಾಪಾರ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡ ಮುಸಲ್ಮಾನರು ಹಿಂದೂಗಳೇತರರ ಜೊತೆ ಅತ್ಯಂತ ಸೌಹಾರ್ದಯುತವಾಗಿಯೇ ಬದುಕುತ್ತಿದ್ದಾರೆಯೆಂಬ ಸತ್ಯವನ್ನು ಅರಗಿಸಿಕೊಳ್ಳಲಾಗದವರು ಗೋಧ್ರಾ ಗಲಭೆಯನ್ನು ಸೃಷ್ಟಿಸಿದರೆಂದು ಅಲ್ಲಿನ ಮುಸಲ್ಮಾನರಿಗೇ ಗೊತ್ತಿದೆ! ಯಾವ ಕಾಣದ ‘ಕೈ’ ಗೋಧ್ರಾ ಹಿಂದಿತ್ತು ಎಂಬುದು ಗೊತ್ತಿದ್ದೇ ಅಲ್ಲಿನ ಅಲ್ಪಸಂಖ್ಯಾತರು ಮೋದಿಯೆಂದರೆ ಶಿರಬಾಗುತ್ತಾರೆ!

ಅಹ್ಮದಾಬಾದ್ ನ ಮುಸಲ್ಮಾನ ಉದ್ಯಮಿಯಾದ ಝಫರ್ ಸರೇಶ್ ವಾಲಾರವರ ಭಿನ್ನವಾದ ವಿಶ್ಲೇಷಣೆ!

ಮೋದಿಯವರ ಆಡಳಿತಾವಧಿಯಲ್ಲಿ ಮುಸಲ್ಮಾನರು ಎಷ್ಟು ಉನ್ನತ ಬದುಕಿಗೆ ತಮ್ಮನ್ನು ತಾವು ತೆರೆದುಕೊಳ್ಳಲು ಸಾಧ್ಯವಿದೆ ಎಂಬುವುದನ್ನು ತೀರಾ ಭಿನ್ನವಾಗಿ ವಿಶ್ಲೇಷಿಸಿದ್ದು ಹೀಗೆ!

ಗೋಧ್ರಾ ಗಲಭೆಯ ನಂತರ ಮೋದಿ ವಿರೋಧಿಯಾಗಿದ್ದ ಝಫರ್ ಕೊನೆಗೆ ಮೋದಿಯ ಪಕ್ಕಾ ಅಭಿಮಾನಿಯಾಗಿದ್ದು ಗುಜರಾತಿನಲ್ಲಾದ ಮುಸಲ್ಮಾನರ ಅಭಿವೃದ್ಧಿಯ ವಾಸ್ತವಗಳನ್ನರಿತ ನಂತರ!

ಆಸಿಫಾ ಖಾನ್ ಎಂಬ ಮುಸಲ್ಮಾನ ಮಹಿಳೆ ಮೊದಲು ಕಾಂಗ್ರೆಸ್ ನ ವಕ್ತಾರೆ ಈ ಕೆಳಗಿನ ಕಾರಣಗಳಿಗೆ ಭಾರತೀಯ ಜನತಾ
ಪಕ್ಷವನ್ನೊಪ್ಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾದರು!

ಇವತ್ತಿಗೂ ಸಹ. . . .

ಇವತ್ತಿಗೂ ಸಹ, ಕಾಂಗ್ರೆಸ್ ಮೋದಿಯವರನ್ನು ದಲಿತ ವಿರೋಧಿಯಾಗಿ, ಮುಸಲ್ಮಾನ ವಿರೋಧಿಯಾಗಿ, ಕ್ರೈಸ್ತ ವಿರೋಧಿಯಾಗಿ, ಗೋಧ್ರಾ ಗಲಭೆಯ ಹಿಂದಿನ ರೂವಾರಿಯೆಂಬಂತೆ ಬಿಂಬಿಸಲು ಪ್ರಯತ್ನಪಟ್ಟಷ್ಟೂ ಸಹ, ಭಾರತೀಯರು ವಾಸ್ತವ ತಿಳಿಯಲು ಮೋದಿಯ ಕಾರ್ಯವನ್ನು ಕೂಲಕಂಷವಾಗಿ ಅರಿಯಲು ಪ್ರಯತ್ನ ಮಾಡುತ್ತಲೇ ಮೋದಿಯ ಅಭಿಮಾನಿಯಾಗುತ್ತಿದ್ದಾರೆಯಷ್ಟೇ!

ಎಲ್ಲಿ ವಿವಾದವಾಯಿತೋ, ಮುಸಲ್ಮಾನರೇ ಮೋದಿಯವರ ಪರ ನಿಂತರು!!!

ಅದರಲ್ಲಿಯೂ ಮುಸಲ್ಮಾನ ಧರ್ಮಗರುವೊಬ್ಬರು ಹೇಳಿದ್ದು ಇಷ್ಟನ್ನೇ!

“ನಾನು ಹೇಗೆ ತಿಲಕವನ್ನಿಡುವುದಿಲ್ಲವೋ, ಅದೇ ರೀತಿ ಮೋದಿಯವರೂ ಸಹ ಟೋಪಿಯನ್ನು ಹಾಕಬಾರದು!”

– ಅಜೇಯ ಶರ್ಮಾ

Tags

Related Articles

Close