ಅಂಕಣ

ನಾನೇ ಗೌರಿ… ನಾವೆಲ್ಲಾ ಗೌರಿ ಎನ್ನುವವರು ಭಾರತ ಮಾತೆಯನ್ನು ತುಂಡು ತುಂಡಾಗಿಸಲು ಬೆಂಬಲಿಸುವವರಾ?!!!

ನಾನೇ ಗೌರಿ!!! ಹಾ.. ನಾವೆಲ್ಲಾ ಗೌರಿ.!! ನಮಗೆ ನ್ಯಾಯ ಕೊಡಿ. ಅದು ವಿಚಾರಗಳ ಹತ್ಯೆ. ವಿಚಾರವಾಧಿಗಳ ಕೊಲೆ. ಹಿಂದುತ್ವ ಪ್ರತಿಪಾದಕರ ಕೃತ್ಯವಿದು..!!!

ಇಂತಹದ್ದೊಂದು ಫಲಕವನ್ನು ಹಿಡಿದುಕೊಂಡು ಕೆಲವೇ ದಿವಸಗಳ ಮುಂಚೆ ಅನೇಕ ದೇಶಪ್ರೇಮಿಗಳೆಂದುಕೊಂಡಿರುವವರು ಬೀದಿಗೆ ಇಳಿದಿದ್ದರು. ಅದೂ
ಪ್ರತಿಭಟನೆ. ಅವರ ಹತ್ಯೆಯ ವಿರುದ್ದ.. ಸರಿ. ಓರ್ವ ವಿಚಾರವಾದಿಯ ಹತ್ಯೆಯನ್ನು ಖಂಡಿಸುವಂತಹದ್ದೇ. ಆದರೆ ಅವರ ವಿಚಾರಧಾರೆಗಳು ರಾಷ್ಟ್ರೀಯ ವಿಚಾರಕ್ಕೆ
ಪೂರಕವಾಗಿದ್ದರಷ್ಟೇ ಅನ್ನುವುದು ನನ್ನ ಸಹಮತ. ಯಾವ ವಿಚಾರವಾದಿಯ ಹತ್ಯೆಯನ್ನು ಯಾರು ಖಂಡಿಸುತ್ತಾರೋ ಅವರು ಆ ವ್ಯಕ್ತಿಯ ಪ್ರೇರಣೆಯನ್ನು ಪಡೆದೇ
ಇರುತ್ತಾರೆಂದು ನಿಸ್ಸಂಶವಾಗಿಯೂ ಸ್ಪಷ್ಟ. ಅದು ಪ್ರತಿಭಟನೆ ಮಾತ್ರವಲ್ಲ, ಸ್ವತಃ ಆಂದೋಲನದ ವಿಚಾರದಲ್ಲಿಯೂ ಸತ್ಯ. ಇಲ್ಲವಾದರೆ ಅಣ್ಣಾ ಹಜಾರೆ ಯವರು ಕೊಟ್ಟ ಒಂದು ಕರೆಗೆ ಅಷ್ಟೊಂದು ಯುವ ಸಮೂಹ ಪಾಲ್ಗೊಳ್ಳಲು ಹೇಗೆ ಸಾಧ್ಯವಾಯಿತು? ಅಣ್ಣಾ ಹಜಾರೆಯವರು ವ್ಯಕ್ತಿತ್ವದ ಪ್ರಭಾವ ಅದು.!!

ಆದರೆ ಇವತ್ತು ನಾನೇ ಗೌರಿ ಎಂಬುದಾಗಿ ಫಲಕವನ್ನು ಹೊತ್ತು ತಿರುಗುತ್ತಿದ್ಧಾರಲ್ಲಾ?? ಅವರಿಗೆ ಸಿಕ್ಕ ಪ್ರೇರಣೆಯ ಸಿದ್ದಾಂತ ಯಾವುದು ಗೊತ್ತೇ?? “ಭಾರತ್
ತೇರೆ ತುಕುಡೇ ತುಕುಡೇ ಹೋಂಗೇ”. ಗಾಬರಿಯಾಗಬೇಡಿಯೆಂದು ನಾನು ಹೇಳಲಾರೆ. ಈ ವಿಚಾರದ ಕುರಿತಾದ ನಾವೆಲ್ಲಾ ಚಿಂತಿಸಬೇಕಾದ್ದೇ. ಇಲ್ಲವಾದ್ರೆ ಇದೇ ಸಿದ್ದಾಂತ ಬೆಳೆದು ಮುಂದೊಂದು ದಿವಸ ನಮ್ಮ ದೇಶದ ಅಸ್ಮಿತೆಗೆ ಧಕ್ಕೆಯುಂಟುಮಾಡಬಲ್ಲದು. ನಮಗೆಲ್ಲಾ ಗೊತ್ತಿದೆ. ಈ ಸಿದ್ದಾಂತವನ್ನು ಹುಟ್ಟುಹಾಕಿದ ಆ ಮಹಾನ್ ದೇಶಭಕ್ತ(?) ಕನ್ನಹ್ಯಾ.. ಇಂತಹ ವಿದ್ಯಾರ್ಥಿಗಳ ಚಿಂತನೆಯನ್ನು ವಿರೋಧಿಸಿ ಅವರ ಮನಸ್ಥಿತಿಯನ್ನು ಬದಲಾಯಿಸಬೇಕಾದ ಮಹತ್ತರವಾದ ಹೊಣೆಯನ್ನೂ ಪತ್ರಕರ್ತರೆನಿಸಿದವರು ಮಾಡಬೇಕು. ಆದರೆ ಗೌರಿ ಲಂಕೇಶರ ವಿಚಾರದಲ್ಲಿ ಮಾತ್ರ ಇದು ತದ್ವಿರುದ್ಧ. ಅಂತಹ ದೇಶದ್ರೋಹಿಗಳು ತಮ್ಮ ಮಕ್ಕಳು ಎಂಬುದಾಗಿ ಗೌರಿ ಸಮಾಜದ ಮುಂದೆ ಪ್ರತಿಪಾದಿಸಿದಳು. ಹಾಗಾದರೆ ಗೌರಕ್ಕನ ಚಿಂತನೆ ಯಾವುದಿತ್ತು?? ಅದೇ ಚಿಂತನೆಯ, ಸಿದ್ದಾಂತವನ್ನು ಬೆಂಬಲಿಸುವವರೇ ನಾನೇ ಗೌರಿ ಬೆಂಬಲಿಗರು??? ಉತ್ತರ ಸಿಗಬೇಕಿದೆ.

ಸರಿ. ಗೌರೀ ಲಂಕೇಶರ ಹತ್ಯೆಯ ವಿರುದ್ದ ಪ್ರತಿಭಟನೆಗಳಾದವು. ಎಷ್ಟಾದರೂ ಓರ್ವ ಪತ್ರಕರ್ತೆ ಹಾಗು ವಿಚಾರವಾಧಿಗಳ ಹತ್ಯೆಯಲ್ಲವೇ?? ಆದರೆ ಆ
ಪ್ರತಿಭಟನಾ ಸಭೆಯಲ್ಲಿ ಆ ಹತ್ಯೆಯನ್ನು ಮಾಡಿದ್ದು ಬಲಪಂಥೀಯರೇ ಎಂಬ ನಿರ್ಣಯವನ್ನು ಮಾಡಿದರಲ್ಲಾ?? ಅವರಿಗೆ ತನಿಖೆ ಅಧಿಕಾರಿಗಳು ಬಂದು ಹೇಳಿದ್ದರೆ?? ಹಿಂದುತ್ವದ ನೈಜ ಸ್ವರೂಪವನ್ನು ಈ ಹತ್ಯೆ ಅನಾವರಣಗೊಳಿಸಿದೆ ಎಂದೆಲ್ಲಾ ಬಿಂಬಿಸಿದ ವ್ಯಕ್ತಿಗಳ ಧರ್ಮ ಯಾವುದೆಂದು ಪ್ರಶ್ನಿಸಬೇಕಿದೆ. ಹಿಂದುತ್ವಕ್ಕೆ ಅಪ್ಪ- ಅಮ್ಮ ಇಲ್ಲವೆಂದು ಸಾರಿದ ಪತ್ರಕರ್ತರ ಬೆಂಬಲಿಗರೂ ಅಧಾರ್ಮಿಕರಾದರೆಂಬುದೇ ಬೇಸರದ ಸಂಗತಿ. ಪತ್ರಕರ್ತರಿಗೆ ಬರೆಯುವ, ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ನಿಜ. ಆದರೆ ನಮ್ಮ ದೇಶದ ಪ್ರಧಾನಿಯನ್ನು “ಸಲಿಂಗಿ” ಎಂಬುದಾಗಿ ಸಂಬೋಧಿಸುವಲ್ಲಿಯವರೆಗೆಯೇ?? ಇದು ಅಭಿವ್ಯಕ್ತಿ ಸ್ವಾತಂತ್ರ್ಯವೆಂದವರಾರು ಸ್ವಾಮೀ. ಯಾವುದೇ ಸರಕಾರದ ವಿರುದ್ಧ ಹಾಗೂ ಸಂವಿಧಾನದ ವಿರುದ್ಧ ನಿಂದಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವೆಂಬುದರ ಅರಿವು ಓರ್ವ ಪತ್ರಕರ್ತರಾಗಿ ಅವರಿಗೆ ಅರಿವಿರಲಿಲ್ಲವೇ?? ದುರ್ದೈವ.. ಇವತ್ತು ಅದೇ ಸಿದ್ದಾಂತವು ತಮ್ಮದೇ ಸಿದ್ದಾಂತವೆಂಬುದಾಗಿ ಪ್ರತಿಪಾದಿಸುತ್ತಾ ದೇಶವಿರೋಧ ಕಾಯಕಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ ನಾನೇ ಗೌರಿ ಬೆಂಬಲಿಗರು.

ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ವಿಚಾರವಾಧಿಗಳ ಹತ್ಯೆ ಖಂಡಿಸಬೇಕಾದ್ದೇ. ಆದರೆ ಖಂಡಿಸುವ ನೆಪದಲ್ಲಿ ಭಾರತದಲ್ಲಿ ರಾಷ್ಟ್ರೀಯ ಚಿಂತನೆಗಳ ವಿರುದ್ಧವಾದ
ಚಿಂತನೆಗಳನ್ನು ಅವರ ಬೆಂಬಲಿಗರು ನೀಡುತ್ತಿದ್ದಾರೆಂಬುದೂ ಅಷ್ಟೇ ಸ್ಪಷ್ಟ. ನಾನು ಗೌರಿಯಲ್ಲಯೆಂಬುದನ್ನು ಹೇಳಿಕೊಳ್ಳಬೇಕಾದ್ದ ಜನತೆ ನಾನೇ ಗೌರಿ, ನಾವೆಲ್ಲಾ ಗೌರಿ ಎಂಬರ್ಥದಲ್ಲಿ ಹೋರಾಡುತ್ತಿದ್ದಾರಲ್ಲಾ.. ಏನನ್ನೋಣ ಇವರುಗಳಿಗೆ? ಬಲಪಂಥೀಯ ವಿಚಾರಧಾರೆಗಳೇ ಪ್ರತೊಯೊಬ್ಬನಲ್ಲಿಯೂ ಇರಲಾರದು. ಒಪ್ಪಿಕೊಳ್ಳೋಣ. ಆದರೆ ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರೀಯ ಚಿಂತನೆಯನ್ನೇ ಪ್ರತಿಪಾದಿಸಬೇಕೆಂಬುದು ನನ್ನ ನಿಲುವು ಅಷ್ಟೇ. ಪ್ರತಿಯೊಂದು ಕಡೆಯಲ್ಲಿಯೂ ರಾಷ್ಟ್ರಧ್ವಜ ಹಾರಾಡಬೇಕೆಂಬುದಾಗಿ ಆದೇಶ ಬಂದಾಗ, ವಿರೋಧಿಸಿದವರು, ವಿರೋಧಿಸಿದವರಿಗೆ ಪ್ರೋತ್ಸಾಹ ಕೊಟ್ಟವರ ಬೆಂಬಲಕ್ಕೆ ನಿಂತವರ ದೇಶಪ್ರೇಮವನ್ನು ಈಗ ಪ್ರಶ್ನಿಸಬೇಕಿದೆ.

ನಿಮಗೆ ಎಷ್ಟು ಜನರಿಗೆ ಅರಿವಿದೆಯೋ ಇಲ್ಲವೋ ಅರಿಯದು. ಇದೇ ಗೌರಿ ಲಂಕೇಶ್ ಪಿಎಫ್‍ಐ ನೇತೃತ್ವದ ಸಭೆಯಲ್ಲಿ “ಹಮ್ ಹೋಂಗೇ ಕಾಮಿಯಾಬ್ ಏಕ್ ದಿನ್ ” ಎಂದಿದ್ದರು. ಅಂದರೆ ನಾವೆಲ್ಲಾ ಒಂದು ದಿನ ಸಫಲವಾಗುತ್ತೇವೆಂದು. ಪಿಎಫ್‍ಐ ಕುರಿತಾಗಿ ಹೆಚ್ಚೇನು ಹೇಳಬೇಕಿಲ್ಲ. ಗೌರಿ ಹತ್ಯೆಯ ಪ್ರತಿಭಟನಾ ಸಭೆಯಲ್ಲಿ ಗೌರಿ ಅಪ್ರತಿಮ ದೇಶಪ್ರೇಮಿಯೆಂಬುದಾಗಿ ಬೊಬ್ಬಿಟ್ಟರಲ್ಲಾ.. ಇಲ್ಲಿದೆ ನೋಡಿ ಉತ್ತರ. ಭಯೋತ್ಪಾನೆಗೆ ಪರೋಕ್ಷವಾಗಿ ಬೆಂಬಲಿಸುವ ಪಿಎಫ್‍ಐ ಸಂಘಟನಾ ಸಭೆಯಲ್ಲಿ ನಾವೆಲ್ಲಾ ಒಂದು ದಿನ ಸಾಧಿಸುತ್ತೇವೆ ಎಂದದವರ ಅಸಲಿ ಬಣ್ಣವದು. ಅವರ ಬೆಂಬಲಿಗರೂ ಅವರ ಹಾದಿಯನ್ನು ನಡೆಯುತ್ತಿದ್ದಾರೆಂದರೆ ಏನರ್ಥ? ನೀವೇ ಊಹಿಸಿ. ಗೌರಿಯವರ ರಾಷ್ಟ್ರೀಯ ಚಿಂತನೆಯನ್ನು ಅವರ ಸಾಮಾಜಿಕ ಜಾಲತಾಣದಲ್ಲೇ ಗಮನಿಸಬಹುದು.

ಇದೆಲ್ಲಾ ಚಿಂತನೆಯನ್ನು ಬೆಂಬಲಿಸುವರು ನಾನೇ ಗೌರಿ ಪ್ರತಿಪಾದಕರು. ನಂತರದ ಹತ್ಯೆ, ಅವರದ್ದೇ ಅನ್ನುವ ಚಿಂತನೆಯನ್ನೂ ಅವರೇ ಕೊಡುತ್ತಿದ್ದಾರೆ.
ಅದರರ್ಥ ದೇಶದ್ರೋಹಿ ಚಿಂತನೆಯನ್ನು ಮುಂದುವರಿಸಯೇ ತೀರುತ್ತೇವೆಂದೇ?? ಅರ್ಥವಾಗುತ್ತಿಲ್ಲ. ನಿನ್ನೆ ಕಲಬುರ್ಗಿ, ಇವತ್ತು ಗೌರಿ. ನಾಳೆ ನಾವು ಎಂಬ
ಕಲ್ಪನಾಲೋಕದಲ್ಲಿ ಬದುಕುತ್ತಿರುವ ಲದ್ಧಿಜೀವಿಗಳು ಪ್ರತಿಭಟಿಸುತ್ತಿದ್ದಾರೆ. ಹಾ.. ಮತ್ತೆ ಮತ್ತೆ ಪ್ರಶ್ನಿಸುತ್ತಿದ್ದೇನೆ. ನಾನೇ ಗೌರಿ, ನಾವೆಲ್ಲಾ ಗೌರಿ ಎಂಬುದಾಗಿ
ಬಿಂಬಿಸಿಕೊಳ್ಳುತ್ತಿರುವವರು ಭಾರತ್ ತೇರೇ ತುಕುಡೇ ತುಕುಡೇ ಹೋಂಗೇ ಸಿದ್ದಾಂತದ ಪ್ರತಿಪಾದಕರೇ?? ಉತ್ತರಿಸಬೇಕಾದರು ಎಡಬಿಡಂಗಿ ಬುದ್ಧಿಜೀವಿಗಳು ಹಾಗೂ ಲದ್ದಿಜೀವಿ ಎಡಪಂಥೀಯರು !!!

– ವಸಿಷ್ಠ

Tags

Related Articles

Close