ಪ್ರಚಲಿತ

ನಾಲ್ಕು ವರ್ಷಗಳಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಏರಿಕೆ! ಷೇರು ಮಾರುಕಟ್ಟೆಯಲ್ಲಿ ಗರಿಷ್ಟ ಪ್ರಮಾಣದಲ್ಲಿ ವರದಿ ಬಹಿರಂಗ ಪಡಿಸಿದ ಅಮೆರಿಕನ್ ಕ್ರೆಡಿಟ್ ಸಂಸ್ಥೆ.

ಭಾರತೀಯ ರೂಪಾಯಿ ಕಳೆದ 4 ವರ್ಷಗಳಲ್ಲಿ ಡಾಲರ್ ವಿರುದ್ಧ ಅತೀ ದೊಡ್ಡ ಏಕದಿನ ಲಾಭವನ್ನು ಪಡೆದಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 69.63ಪೈಸೆ ಅಥವಾ 1.06 ಪ್ರತಿ ಶತಕದಷ್ಟು ಏರಿಕೆ ಕಂಡು ಬರುವ ಮೂಲಕ 64.62 ರೂಪಾಯಿಗಳಿಗೆ ತಲುಪಿದೆ. ಇದರ ಪರಿಣಾಮ ಅಮೆರಿಕಾ ಮೂಲದ ಕ್ರೆಡಿಟ್ ರೇಟಿಂಗ್ ಸಂಸ್ಥೆ ಕೇಂದ್ರ ಸರಕಾರದ ಆರ್ಥಿಕ ಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.

ಪ್ರಸ್ತುತ ಈ ಬೆಳವಣಿಗೆ ಭಾರತ ಆರ್ಥಿಕ ಮತ್ತು ಸಾಂಸ್ಥಿಕ ಸುಧಾರಣೆಗಳಿಂದ ಸುಧಾರಿತ ಅಭಿವೃದ್ಧಿಯ ಭವಿಷ್ಯ ಹಿನ್ನಲೆಯಲ್ಲಿ ಸ್ಥಿರ ದೃಷ್ಟಿಕೋನವನ್ನು ಹೊಂದಿದೆ. ಸದ್ಯ ರೂಪಾಯಿ 57 ಪೈಸೆ ಏರಿಕೆಯಾಗಿ 64.75 ಡಾಲರ್‍ಗೆ ತಲುಪಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಅತಿದೊಡ್ಡ
ಏರಿಕೆಯಾಗಿದೆ.

13 ವರ್ಷಗಳ ನಂತರ ಅಮೆರಿಕಾ ಮೂಲದ ಕ್ರೆಡಿಟ್ ರೇಟಿಂಗ್ ಸಂಸ್ಥೆ ವರದಿಯನ್ನು ಪ್ರಕಟಿಸಿದ್ದು ಭಾರತದ ರೇಟಿಂಗ್ ಅನ್ನು 2004 ರಿಂದ ಇದೀಗ ಮತ್ತೆ ನವೀಕರಿಸಿದೆ. 2015 ರಲ್ಲಿ ಈ ರೇಟಿಂಗ್ ಸ್ಥಿರದಿಂದ ಸಕಾರಾತ್ಮಕ ಎಂದು ಬದಲಾಯಿಸಲಾಗಿತ್ತು. ಇದು ಮೋದಿ ಸರಕಾರ ಆಡಳಿತಕ್ಕೆ ಬಂದ ನಂತರ ಎನ್ನುವುದು ವಿಶೇಷವಾಗಿದೆ. ರೇಟಿಂಗ್ಸ್ ನವೀಕರಿಸುವ ನಿರ್ಧಾರ ಭಾರತದ ಆರ್ಥಿಕ ಮತ್ತು ಸಾಂಸ್ಥಿಕ ಸುಧಾರಣೆಗಳನ್ನು ಅವಲಂಬಿಸಿದೆ. ಭಾರತದ ಉನ್ನತ ಬೆಳವಣಿಗೆಯ ಸಾಮಥ್ರ್ಯ ಮತ್ತು ಸರಕಾರದ ಸಮರ್ಥ ಅರ್ಥಿಕ ಕ್ರಮಗಳು ದೊಡ್ಡ ಪರಿಣಾಮ ಮತ್ತು ಸ್ಥಿರವಾದ ಹಣಕಾಸು ಮೂಲವನ್ನು ಹೆಚ್ಚಿಸಲಿದೆ. ಇಂದು ಕ್ರಮೇಣ ಸರಕಾರದ ಸಾಲದ ಹೊರೆಯನ್ನು ಕಡಿಮೆಗೊಳಿಸುತ್ತದೆ ಎಂದು ಕ್ರೆಡಿಟ್ ಸಂಸ್ಥೆ ಮೂಡೀಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಏತನ್ಮಧ್ಯೆ ಮೂಡೀಸ್ ಭಾರತದ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ನವೀಕರಿಸಿದ ನಂತರ ಪ್ರಮುಖ ಇಕ್ವಿಟಿ ಸೂಚ್ಯಂಕಗಳಾದ ಸೆನೆಕ್ಸ್ ಮತ್ತು ನಿಫ್ಟಿಯೂ ಕೂಡಾ
ಭಾರೀ ಲಾಭಗಳಿಸಿವೆ.ಬಿಎಸ್‍ಇ ಸೆನೆಕ್ಸ್ 281.165 ಅಂಕಗಳು ಅಥವಾ 0.85% ನಷ್ಟು ಹೆಚ್ಚಳವಾಗಿ 33,3888.47 ಕ್ಕೆ ತಲುಪಿದೆ. ಎನ್‍ಎಸ್‍ಇ ನಿಫ್ಟಿ
109.8 ಅಂಕಗಳು ಅಥವಾ 1.07%ನಷ್ಟು ಹೆಚ್ಚಳವಾಗಿ 10,324.55ಕ್ಕೆ ತಲಿಪಿದೆ. ಆರಂಭಿಕ ಹಂತದ ಕೆಲವೇ ಸಮಯದಲ್ಲಿ ಬೆಂಚ್ಮಾರ್ಕ್ ಸೆನೆಕ್ಸ್ 414
ಪಾಯಿಂಟ್‍ಗಳಷ್ಟು ಹೆಚ್ಚಳವಾಗಿ 33,520.82ಕ್ಕೆ ತಲುಪಿದೆ. ಅದೇ ರೀತಿ ಬ್ರಾಡರ್ ನಿಫ್ಟಿ 124.4 ಪಾಯಿಂಟ್ ಗಳಿಕೆಗೆ ಏರಿಕೆಯಾಗಿ ದಿನದ ಗರಿಷ್ಟ ಮಟ್ಟ
10,339.15ಕ್ಕೆ ಏರಿಕೆಯಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ವರ್ಷ 1947ರಲ್ಲಿ ಭಾರತದ ರೂಪಾಯಿಯ ಮೌಲ್ಯ ಅಮೇರಿಕಾದ ಡಾಲರ್‍ನಷ್ಟೇ ಆಗಿದ್ದು ಎರಡೂ ಸರಿಸಮಾನವಾಗಿದ್ದವು.
ಅಂದಿನಿಂದ ಇಂದಿನವರೆಗೆ ಭಾರತದ ರೂಪಾಯಿ ಸರಿ ಸುಮಾರು 65 ರಷ್ಟು ಕಡಿಮೆಯಾಗಿರುವುದು ಗಮನಾರ್ಹ ಮಾಹಿತಿ. ಭಾರತದ ಇತಿಹಾಸದಲ್ಲೇ ನಾವು
ಕಂಡರಿಯದ ಹಾಗೆ ರೂಪಾಯಿಯ ಮೌಲ್ಯ ಒಮ್ಮೆಲೆ ಕುಸಿದಿತ್ತು. ಇದಕ್ಕಿದ್ದ ಮುಖ್ಯ ಕಾರಣ ಆಮದುದಾರರು ಡಾಲರ್ಗೋಸ್ಕರ ಬೇಡಿಕೆ ಹೆಚ್ಚಿಸುತ್ತಿದ್ದು ಭಾರತದ
ರೂಪಾಯಿಯು ಕಳೆದ ಎರಡು ವರ್ಷಗಳಲ್ಲಿ ರೂಪಾಯಿಯ ಮೌಲ್ಯದಲ್ಲಿ ಬಹಳ ವ್ಯತ್ಯಾಸವಾಗಿದ್ದು ಇದು ಭಾರತ ದೇಶದ ಬೆಳವಣಿಗೆ, ವ್ಯಾಪಾರ ಮತ್ತು ಬಂಡವಾಳ ಹೀಗೆ ಹಲವಾರು ರೀತಿಯಲ್ಲಿ ಧಕ್ಕೆ ಉಂಟು ಮಾಡಿತ್ತು. ದೇಶದೆಲ್ಲೆಡೆ ಹಣದುಬ್ಬರ ಉಂಟಾಗಿತ್ತು. ಕರೆನ್ಸಿ ಮಾರುಕಟ್ಟೆಯಲ್ಲಿ ವ್ಯವಸ್ಥಾಪಕ ಚಂಚಲತೆಯನ್ನು ಕುರಿತು ಬಹಳ ದೊಡ್ಡ ಸವಾಲು ಮೂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರ ಮಾಡಿದ ಯಾವುದೇ ನಿಯಮಗಳು ಫಲಿಸದ ಕಾರಣ ರೂಪಾಯಿಯ ಮೌಲ್ಯ ಕುಸಿಯುತ್ತಲೇ ಇತ್ತು. ಭಾರತ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ರೂಪಾಯಿಯ ಕುಸಿತ ಭಾರತದಲ್ಲಿ ಹಣದುಬ್ಬರಕ್ಕೆ ಎಡೆ ಮಾಡಿಕೊಟ್ಟಿದೆ.

ಕಳೆದ 66 ವರ್ಷಗಳಲ್ಲಿ ಬಾರತದ ರೂಪಾರಿ ಬಹಳಷ್ಟು ಏರುಪೇರುಗಳನ್ನು ಕಂಡಿದೆ. ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿ ರೂಪಾಯಿಯ ಮೌಲ್ಯವನ್ನು
ಪ್ರಭಾಸಿರುವುದು ಸತ್ಯದ ಮಾತು. ಭಾರತದ ಆಯವ್ಯಯದ ಪಟ್ಟಿಯಲ್ಲಿ ಯಾವುದೇ ವಿದೇಶಿ ಸಾಲಗಳು ಇರಲಿಲ್ಲ. ಭಾರತದ ಏಳಿಗೆಗಾಗಿ ಜಾರಿಗೆ ತಂದ 5 ವರ್ಷದ ಯೋಜನೆ ವಿದೇಶದಿಂದ ಹಣಕಾಸಿನ ಸಾಲ ಪಡೆಯುವುದಕ್ಕೂ ಪ್ರಾರಂಭಿಸಿತು. ಇದರಿಂದ ಭಾರತದ ರೂಪಾಯಿಯ ಮೌಲ್ಯ ಮತ್ತಷ್ಟು ಕಡಿಮೆಯಾಗ ಬೇಕಾಯಿತು. 1958 ರಿಂದ 1966ರವರೆಗೆ ರೂಪಾಯಿಯ ಮೌಲ್ಯ ಪ್ರತೀ ಡಾಲರ್‍ಗೆ 5.7 ರಾಪಾಯಿಯಂತೆ ವಿಶ್ವ ಮಾರುಕಟ್ಟೆಯಲ್ಲಿ ನಡೆಯುತ್ತಿತ್ತು. 1962ರಲ್ಲಿ ಚೀನಾ ದೇಶದ ವಿರುದ್ಧ ಮತ್ತು 1965ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧಗಳ ಕಾರಣ ರೂಪಾಯಿಯ ಮೌಲ್ಯವನ್ನು ಭಾರತ ಸರಕಾರ ಮತ್ತಷ್ಟು ಕಡಿಮೆ ಮಾಡಬೇಕಾಯಿತು. ಇದರಿಂದ ಭಾರತ ಬಜೆಟ್ ಮೇಲೆ ಪರಿಣಾಮ ಬೀರಿದ್ದು ಬಹಳ ಕೊರತೆ ಕಂಡುಬಂದಿತ್ತು. ಹಿಂದೆ ಭಾರತದ ರೂಪಾಯಿ ಮತ್ತು ಬ್ರಿಟಿಷರ ಮೌಲ್ಯವನ್ನು ನಿರ್ಧಾರ ಮಾಡುತ್ತಿದ್ದರು. 1971ನೇ ಇಸವಿಯ ನಂತರ ಬ್ರಿಟಿಷರ ಫೌಂಡನ್ನು ಬಿಟ್ಟು ಅಮೇರಿಕನ್ನರ ಡಾಲರ್ ಬಳಕೆಗೆ ಬಂದಿತ್ತು. 1975ರಲ್ಲಿ
ರೂಪಾಯಿ ಮತ್ತೆ 8.39ರೂಪಾಯಿಗಳಿಗೆ ಇಳಿದು ಹೋಯಿತು. 1985ರ ಹೊತ್ತಿಗೆ ಭಾರತದ ರೂಪಾಯಿಯ ಮೌಲ್ಯ ಪ್ರತೀ ಡಾಲರ್‍ಗೆ 12 ರೂಪಾಯಿಯಂತೆ
ಮತ್ತಷ್ಟು ಕಡಿಮೆಯಾಗಿದ್ದು ದೇಶದೆಲ್ಲೆಡೆ ಅಚ್ಚರಿ ಮೂಡಿಸಿತ್ತು.

1991ರಲ್ಲಿ ಭಾರತದ ಸಮತೋಲನ ಪಟ್ಟಿಯಲ್ಲಿ ಗಂಭೀರವಾದ ಕೊರತೆಯೊಂದು ಕಂಡುಬಂದಿತ್ತು. ಇದ್ದಕ್ಕಿದ್ದ ಹಾಗೆ ಭಾರತದ ರೂಪಾಯಿ ತೀವ್ರ ಬಿಕ್ಕಟ್ಟಿನ
ಪರಿಸ್ಥಿತಿಯನ್ನು ಎದುರಿಸಿ ಅದರ ಮೌಲ್ಯ ತಕ್ಷಣ ಜಾರಿತು. ಹಣದುಬ್ಬರ ತನ್ನ ದೇಶವನ್ನು ತನ್ನ ವಶ ಪಡೆಸಿಕೊಂಡಿತ್ತು. ಇಂತಹ ಸಂದರ್ಭದಲ್ಲಿ ಡಾಲರ್‍ಗೆ ಸುಮಾರು 12.90 ರೂಪಾಯಿಯಂತೆ ರೂಪಾಯಿಯ ಮೌಲ್ಯ ಮತ್ತಷ್ಟು ಇಳಿಯಿತು. 1992 ಭಾರತದ ದೇಶಕ್ಕೆ ಮತ್ತು ದೇಶದ ಬೆಳವಣಿಗೆಗೆ ಬಹಳ ಮುಖ್ಯವಾದ
ವರ್ಷವಾಯಿತು. ಭಾರತದ ಮಾರುಕಟ್ಟೆಯಲ್ಲಿ ಹಣಕಾಸು ಮತ್ತು ವ್ಯವಹಾರ ಉಚಿತವಾಯಿತು. ವಿನಿಮಯದ ದರವನ್ನು ಮಾರುಕಟ್ಟೆಯ ಶಕ್ತಿಗಳೇ ನಿರ್ಧರಿಸುವಂತೆ ಅವಕಾಶ ಮಾಡಿಕೊಡಲಾಯಿತು. ತುರ್ತು ಸಂದರ್ಭದಲ್ಲಿ ಮಾತ್ರ ರಿಸರ್ವ್ ಬ್ಯಾಂಕ್ ನಿರ್ಧಾರ ತೆಗೆದುಕೊಳ್ಳುವ0ತೆ ನಿಯಮವೊಂದನ್ನು ಜಾರಿ ತರಲಾಯಿತು.2000 ಮತ್ತು 2010ರಲ್ಲಿ ನಡುವೆ ಪ್ರತಿ ಡಾಲರ್‍ಗೆ 40 ರಿಂದ 50 ರೂಪಾಯಿಗಳ ನಡುವೆ ಬದಲಾವಣೆಗಳನ್ನು ಎದುರಿಸಿತು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ರೂಪಾಯಿಯ ಮೌಲ್ಯ ನಿಧಾನವಾಗಿ ಇಳಿಯುತ್ತಲೇ ಹೋಯಿತು. ಈ ರಿತಿ ದೇಶದಲ್ಲಿ ಹಣದುಬ್ಬರ ಪರಿಸ್ಥಿಯನ್ನು ಎದುರಿಸುತ್ತಿದ್ದ ಭಾರತಕ್ಕೆ ಇದೀಗ ನಾಲ್ಕು ವರ್ಷಗಳಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಏರಿಕೆ ಕಂಡು ಬಂದಿರುವುದು ಅಚ್ಚರಿಯ ವಿಷಯವಾಗಿದೆ. ಷೇರು ಮಾರುಕಟ್ಟೆ ಗರಿಷ್ಟ ಪ್ರಮಾಣದಲ್ಲಿ ವರದಿಯನ್ನು ಅಮೆರಿಕನ್ ಕ್ರೆಡಿಟ್ ಸಂಸ್ಥೆ ಬಹಿರಂಗ ಪಡಿಸಿದ್ದು ಎಲ್ಲಾ ಭಾರತೀಯರಿಗೂ ಹಾಗೂ ವಿದೆಶಿಯರಿಗೂ ಅಚ್ಚರಿಯ ಸಂಗತಿಯಾಗಿದೆ.

ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ರೀತಿ ಗಣನೀಯ ಏರಿಕೆ ಕಂಡು ಬಂದಿದ್ದು ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಂತು ಖಂಡಿತಾ!! ಮೋದಿ ಸರಕಾರ ಮಾಡಿದ ನೋಟು ಬ್ಯಾನ್, ಜಿಎಸ್‍ಟಿ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಕ್ಕೆ ಯಾವ ರೀತಿಯಾಗಿ ಕಾಂಗ್ರೆಸ್ ಸರಕಾರ ಬೊಬ್ಬಿಡುತ್ತಿತ್ತು ಎಂದು ಎಲ್ಲರಿಗೂ ತಿಳಿದ ವಿಷಯ. ನಾಲ್ಕು ವರ್ಷಗಳಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಏರಿಕೆಯಾಗಿರುವುದಕ್ಕೆ ಈಗ ಇದರ ಬಗ್ಗೆ ಏನು ಹೇಳುತ್ತದೆ ಕಾಂಗ್ರೆಸ್?

-ಪವಿತ್ರ

Tags

Related Articles

Close