ಪ್ರಚಲಿತ

ನಾಲ್ಕು ವರ್ಷದ ಆಡಳಿತ ನಿಮಗೆ ತೃಪ್ತಿ ತಂದಿದೆಯಾ?! ಬರುವ ಚುನಾವಣೆಯಲ್ಲಿ ಯಾರಿಗೆ ಮತ ಹಾಕಲು ಇಚ್ಛಿಸುತ್ತೀರಿ?! ವೋಟ್ ಮಾಡಿ!

ಈ ನಾಲ್ಕು ವರ್ಷದ ಸಿದ್ಧರಾಮಯ್ಯನವರ ಆಡಳಿತದ ಬಗ್ಗೆ ಸಂಕ್ಷಿಪ್ತವಾಗಿಯೇ ಹೇಳುತ್ತೇನೆ! ತೀರಾ ಹೆಚ್ಚೇನೂ ವಿವರಿಸುವ ಅಗತ್ಯ ಇಲ್ಲವೆಂದುಕೊಳ್ಳುತ್ತೇನೆ! ಆದರೆ, ಚುನಾವಣೆ ಹತ್ತಿರ ಬರುತ್ತಿದೆ! ಅಧಿಕಾರ ನಡೆಸಲು ಅರ್ಹವಾದ ಪಕ್ಷವೊಂದಕ್ಕೆ ಮತ ಹಾಕಿದರೆ ಕರ್ನಾಟಕ ಕೆಂಪೇಗೌಡನ ಕರ್ನಾಟಕವಾಗುತ್ತದೆ! ಇಲ್ಲವಾದರೆ ತುಘಲಕ್ ಆಡಳಿತವೊಂದು ಮತ್ತೆ 10 ವರ್ಷ ಕರ್ನಾಟಕದ ಭವಿಷ್ಯವನ್ನೇ ಹಾಳುಗೆಡವುತ್ತದೆ!

ಮುಖ್ಯಮಂತ್ರಿಯ ಹಗರಣದ ಗಿಮಿಕ್ಕು!

ಅರ್ಕಾವತಿ ಡಿನೋಟಿಫೈ ಹಗರಣದಲ್ಲಿ 10 ಸಾವಿರ ಕೋಟಿ ಲಂಚ ಪಡೆದಿರುವ ಆರೋಪ! ಇದರ ಬಗ್ಗೆ 44 ದಾಖಲೆಗಳು ಕಾಣೆಯಾಗಿವೆ!

ಡಿವೈಎಸ್ ಪಿ ಗಣಪತಿಯ ಸಾವಿನ ಪ್ರಕರಣದಲ್ಲಿ ಸಿಧ್ದರಾಮಯ್ಯ ಆತುರಾತುರವಾಗಿ ‘ಬಿ’ ವರದಿ ತರಿಸಿಕೊಂಡಿದ್ದೇ ಸಾಕ್ಷ್ಯಾಧಾರಗಳೆಲ್ಲ ಮಂಗಮಾಯ!

ಹಣ ವರ್ಗಾವಣೆ ದಂಧೆಯಲ್ಲಿ ಈ ಮುಖ್ಯಮಂತ್ರಿಯ ಜೊತೆಗೆ ಇನ್ನೂ 28 ಸಚಿವರು ಭಾಗಿ!

ಸಿದ್ಧರಾಮಯ್ಯನ ಆಪ್ತ ಡಿಕೆ ಶಿವಕುಮಾರ್ ಆಸ್ತಿಯ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ‌ದ್ದೇ ಕೋಟಿಗಟ್ಟಲೇ ಜಪ್ತಿ ಮಾಡಿಕೊಂಡರು!

ಸಿದ್ಧರಾಮಯ್ಯನ ದುಬಾರಿ ವಾಚೊಂದು ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ! ಸ್ನೇಹಿತನ ಉಡುಗೊರೆಯೆಂದ ಮುಖ್ಯಮಂತ್ರಿ ಜಪ್ಪಯ್ಯ ಅಂದರೂ ಸ್ನೇಹಿತನ ಹೆಸರನ್ನೇ ಹೇಳದೇ ಕಾಣೆಯಾದರು!

ಕರ್ನಾಟಕದ ಅತೀ ದೊಡ್ಡ ಸಮೀಕ್ಷೆ! ವೋಟ್ ಮಾಡಲು ಇಲ್ಲಿ ಒತ್ತಿ!!

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದೇ ಪ್ರತಿವರ್ಷ ಸುಮಾರು 6,000 ಕೋಟಿಯಷ್ಟು ಮರಳು ಸಾಗಾಣಿಕೆ ದಂಧೆ ನಡೆದು ಇಡೀ ರಾಜ್ಯದ ಜನತೆ ಸೂರಿಲ್ಲದೇ ಇರುವಂತಾಯ್ತು!

ಅಬಕಾರಿ ಸಚಿವ ಎಚ್.ವೈ.ಮೇಟಿಯ ಲೈಂಗಿಕ ಪ್ರಕರಣವನ್ನೂ ಸಮರ್ಥಿಸಿಕೊಂಡ ಸಿದ್ಧರಾಮಯ್ಯ, ಸಾಕ್ಷಿ ಇದ್ದರೂ ಮೇಟಿಯನ್ನು ಜೈಲುಪಾಲಾಗಲು
ಬಿಡಲಿಲ್ಲ.!

ಆ ಕಪ್ಪ ಕಾಣಿಕೆಯ ಆರೋಪವಂತೂ ಗೋವಿಂದ ರಾಜುವಿನ ಡೈರಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾದರೂ ಸಹ ಸಿದ್ಧರಾಮಯ್ಯ ಸತ್ಯವನ್ನು ಬಾಯಿಬಿಡಲಿಲ್ಲ!
600 ಕೋಟಿ ರೂಪಾಯಿಗಳು ಮಂಗಮಾಯವಾಯಿತು!

ಇಂದಿರಾ ಕ್ಯಾಂಟೀನ್ ನ ಹತ್ತು ರೂಗಳ ಊಟ ತಯಾರಾಗುತ್ತಿದ್ದದ್ದು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ! ಇತ್ತ ಮಂಗಳೂರಿನ ಕಲ್ಲಡ್ಕ ಶಾಲೆಯ ಬಿಸಿಯೂಟದ ಅನುದಾನವನ್ನೂ ಕಿತ್ತ ಮುಖ್ಯಮಂತ್ರಿ ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಕೋಟಿ ನುಂಗಿದರು!

ದಕ್ಷ ಅಧಿಕಾರಿಗಳನ್ನೆಲ್ಲ ಎತ್ತಂಗಡಿ ಮಾಡಿಸಿದ್ದು ಕಾಂಗ್ರೆಸ್ ಸರಕಾರದ ಹೆಗ್ಗಳಿಕೆ!

ಶರತ್ ಮಡಿವಾಳನ ಸಾವನ್ನೂ ಮುಚ್ಚಿಟ್ಟಿದ್ದು ಇದೇ ಸರಕಾರ!

ಟಿಪ್ಪು ಜಯಂತಿ ಆಚರಿಸಿ ಶಿವಾಜಿ ಜಯಂತಿಯನ್ನು ಆಚರಿಸದಂತೆ ನಿರ್ಭಂಧ ಹೇರಿದ್ದೂ ಇದೇ ಸರಕಾರ!

ಗೋ ಮಾಂಸ ನಿಷೇಧದಲ್ಲಿ ಬೀದಿಗಿಳಿದು ಗೋಮಾಂಸ ತಿಂದರೆ ತಪ್ಪಿಲ್ಲ ಎಂದಿದ್ದು ಇದೇ ಸರಕಾರ!

ಲಿಂಗಾಯತ ಒಕ್ಕಲಿಗ ವೀರಶೈವ ಎಂದೆಲ್ಲ ಒಡೆದು ಆಳುವ ನೀತಿ ಶುರು ಮಾಡಿದ್ದು ಇದೇ ಸರಕಾರ!

ಈಗ ಹೇಳಿ?!

ನಿಮಗೆ ಕರ್ನಾಟಕದ ಬಗ್ಗೆಯೇನಾದರೂ ಕಾಳಜಿ ಇದ್ದರೆ ನಿಮ್ಮ ಅಮೂಲ್ಯ ಮತವನ್ನು ಅರ್ಹರಿಗೆ ನೀಡುತ್ತೀರಷ್ಟೇ! ಇಲ್ಲವಾದರೆ ಕರ್ನಾಟಕದ ಗತಿ ಅಧೋಗತಿಯಷ್ಟೇ!

ಕರ್ನಾಟಕದ ಅತೀ ದೊಡ್ಡ ಸಮೀಕ್ಷೆ! ವೋಟ್ ಮಾಡಲು ಇಲ್ಲಿ ಒತ್ತಿ!

– ಪೃಥು ಅಗ್ನಿಹೋತ್ರಿ

Tags

Related Articles

Close