ಅಂಕಣಇತಿಹಾಸದೇಶಪ್ರಚಲಿತ

ನಾವು ಕಲಿತ ಭಾರತದ ಇತಿಹಾಸವು ಸರಿಯಾದುದೇ?? ದೇಶವನ್ನು ದೋಚುವುದರ ಜೊತೆಯಲ್ಲಿಯೇ,⁠⁠⁠⁠ ಯುವಮನಸ್ಸಿನೊಂದಿಗೆ ಕಾಂಗ್ರೆಸ್ ಆಡಿದ ದೊಡ್ಡ ಚೆಲ್ಲಾಟ ಯಾವುದು ಗೊತ್ತಾ??

ಭಾರತೀಯ ಶಿಕ್ಷಣ ವ್ಯವಸ್ಥೆಯು ಅವ್ಯವಸ್ಥಿತ, ಪಕ್ಷಪಾತ ಹಾಗೂ ಅವೈಜ್ಞಕತೆಯಿಂದ ಕೂಡಿದೆ ಎಂಬ ವಾದವನ್ನು ಪದೆ ಪದೇ ನಾವು ಆಲಿಸುತ್ತಿದ್ದೇವೆ. ಆದರೆ
ವಾಸ್ತವವಾಗಿಯೂ ಇತಿಹಾಸವನ್ನು ಅಧ್ಯಯನ ಮಾಡಿದಾಗ ಗಣಿತ, ವಿಜ್ಞಾನ ಕ್ಷೇತ್ರಗಳಲ್ಲಿ ಅಪೂರ್ವವಾದ ಕೊಡುಗೆಯನ್ನು ಇಟ್ಟವರು ಬುದ್ಧಿವಂತರಾದ
ಭಾರತೀಯರೆಂಬುದು ಸ್ಪಷ್ಟವಾಗುತ್ತದೆ. ಔಷದೀಯ, ಗಣಿತ, ವಿಜ್ಞಾನ ಹಾಗೂ ಜ್ಯೋತಿಷ್ಯ ಕ್ಷೇತ್ರಗಳಿಗೆ ಭಾರತೀಯರು ಕೊಟ್ಟ ಕೊಡುಗೆಗಳು ಇವತ್ತು ನಿನ್ನೆಯದ್ದಲ್ಲ, ಅದು ಕ್ರಿಸ್ತಪೂರ್ವದ್ದು ಎಂಬುದೇ ಸೋಜಿಗದ ವಿಚಾರ. ಈ ಉನ್ನತ ದರ್ಜೆಯು 1950 ರ ವರೆಗೂ ನಡೆದಿದೆ. ವಿದ್ಯಾರ್ಥಿಗಳು ಪ್ರತಿಯೊಂದು ವಿಚಾರದ ಕಡೆಗೂ ಗಮನಹರಿಸುತ್ತಿದ್ದ, ದೇಶಭಕ್ತಿಯು ತಮ್ಮ ಧಮನಿ ಧಮನಿಯಲ್ಲಿ ಹರಿದಾಡುತ್ತಿದ್ದ ಪರ್ವ ಕಾಲ ಅದಾಗಿತ್ತು. ಹಾಗಾದರೆ ಆಗಿನ ಶಿಕ್ಷಣ ವ್ಯವಸ್ಥೆಯು ಈಗಿನದ್ದಕ್ಕಿಂತ ಬದಲಾಗಿತ್ತೇ?? ಪ್ರಸ್ತುತ ಸನ್ನಿವೇಶಗಳನ್ನು ಗಮನಿಸುವಾಗ ಆ ಚಿಂತನೆ ನಮಲ್ಲಿ ಮೂಡಬಹುದು. ಈಗಿನ ಯುವ ಜನಾಂಗಗಳಲ್ಲಿ ವೈಜ್ಞಾನಿಕ ಸ್ವಭಾವ, ವೈಚಾರಿಕ ದೃಷ್ಟಿಕೋನ, ದೇಶಭಕ್ತಿಯೆಂಬ ಮೌಲ್ಯ, ಸಾಧಿಸಬೇಕೆಂಬ ಛಲ ಎಲ್ಲವೂ ಕಡಿಮೆಯಾದಂತೆ ಭಾಸವಾಗುತ್ತಿವೆ. ಸಮಾಜ ವಿಜ್ಞಾನ ಪಠ್ಯವನ್ನು ಕಲಿಸಬೇಕಾದರೆ ಶಿಕ್ಷಕರು ಉನ್ನತ ಶಿಖರಕ್ಕೇರಿದ ಮಹಾನ್ ವ್ಯಕ್ತಿತ್ವಗಳ ಕಥನವನ್ನು ಹೇಳಿ, ನಮಗೆ ಪ್ರೇರೇಪಣೆ ನೀಡುತ್ತಿದ್ದ ಸಂದರ್ಭ ನನಗೆ ಈಗಲೂ ನೆನಪಿದೆ. ಆದರೆ ಪ್ರಸ್ತುತ ಆ ರೀತಿಯಾದ ವಿದ್ಯಾಭ್ಯಾಸ ನಡೆಯುತ್ತಿದೆಯಾ ಎಂದು ಕೇಳಿದರೆ ಸ್ಪಷ್ಟವಾದ ಉತ್ತ ಅದಕ್ಕೆ ಸಿಗುವುದಕ್ಕೆ ಸಾಧ್ಯವಿಲ್ಲ.

ಐಸಿಎಸ್‍ಇ ಪಠ್ಯಕ್ರಮದಲ್ಲಿ ಇತಿಹಾಸ ಪಠ್ಯದದ ಉದಾಹರಣೆಯನ್ನೇ ನೋಡೋಣ. ಒಂದು ಪಠ್ಯ. ಆದರೆ ಅನೇಕ ಪ್ರಕಾಶನ ಸಂಸ್ಥೆಗಳು. ಬೇರೆ ಬೇರೆ ಶಾಲೆಗಳು ಅವರದ್ದೇ ಆದ ಅಥವಾ ವಿಭಿನ್ನವಾದ ಪ್ರಕಾಶನಗಳಿಂದ ಪ್ರಕಟನೆಗೊಂಡ ಪಠ್ಯವನ್ನು ಭೋಧಿಸುತ್ತವೆ. ಅವುಗಳಲ್ಲಿ ಒಂದು ಪ್ರಕಾಶನವಂತೂ ಆಂಗ್ಲ-ಭಾರತೀಯ ಶಿಕ್ಷಣ ವ್ಯವಸ್ಥೆಯಂತೆ ಪ್ರಕಟನೆ ಮಾಡುತ್ತಿದೆ. ಅಕ್ಷರಶಃ ಬ್ರಿಟಿಷ್ ವಿದ್ಯಾರ್ಥಿಗೆ ಪಠ್ಯ ತಯಾರಿಸುವಂತೆ.!! ಅನೇಕ ಬಾರಿ ಆ ಪಠ್ಯಕ್ರಮವನ್ನು ರಚಿಸಿದ ಲೇಖಕರ ಹೆಸರೂ ಪ್ರಕಟವಾಗುವುದಿಲ್ಲ. ಪಠ್ಯದಲ್ಲಿ ಏನಾದರು ತಪ್ಪು ಮಾಹಿತಿಗಳಿದ್ದರೆ ಅಥವಾ ತಪ್ಪು ಸಂದೇಶಗಳನ್ನು ಅವು ರವಾನಿಸುತ್ತಿದ್ದರೂ ಯಾರ ಮೇಲೂ ನಾವು ದೂರು ದಾಖಲಿಸಲಾಗುವುದಿಲ್ಲ..!!

ಸಂಸತ್ತಿನ ವೇದಿಕೆಯಲ್ಲಿ ಸ್ಮೃತಿ ಇರಾನಿಯವರು ಈ ಪಠ್ಯಕ್ರಮದ ಕುರಿತಾಗಿ ಧ್ವನಿ ಎತ್ತಿದ್ದರು. ನಾಲ್ಕನೇ ತರಗತಿಯ ಇತಿಹಾಸ ಪಠ್ಯದಲ್ಲಿ ಕೋಮು ಗಲಭೆ,
ಹಿಂದೂ-ಮುಸ್ಲಿಮ್ ಗಲಭೆ, ಕಾಶ್ಮೀರವನ್ನು ಭಾರತ ಬಲವಂತವಾಗಿ ಆಕ್ರಮಿಸಿತ್ತು ಎಂಬುದಾಗಿಯೆಲ್ಲಾ ಪ್ರಕಟನೆಗೊಂಡಿದ್ದವು. ಹುತಾತ್ಮ ಭಗತ್ ಸಿಂಗ್ ರನ್ನು ಐದನೆಯ ತರಗತಿಯ ಪಠ್ಯದಲ್ಲಿ ಕ್ರಾಂತಿಕಾರಿ ಭಯೋತ್ಪಾದಕ ಎಂಬುದಾಗಿ ಸಂಬೋಧಿಸಿದರು. ಎಂತಹ ಚಿಂತನೆಗಳು ಮುಗ್ಧ ಮಕ್ಕಳ ಮೇಲೆ ಬೀರಬಹುದೆಂಬುದನ್ನು ಅವಲೋಕಿಸಿ. ಖಂಡಿತವಾಗಿಯೂ ನಕರಾತ್ಮಕ ಯೋಚನೆಗಳೇ..!!

ಈ ರೀತಿಯ ಅಗಾಧ ವಿಚಾರಗಳನ್ನು ಪಠ್ಯದಲ್ಲಿ ಬರೆದವರು ಯಾರು ಗೊತ್ತೇ?? ಟೀಸ್ಟಾ ಸೆಟಲ್ವಾಡ್ ..ಗುಜರಾತಿಗೆ ನೆರವು ನೀಡುವ ಹೆಸರಿನಲ್ಲಿ ದೇಶದ್ರೋಹ
ಚಟುವಟಿಕೆಗಳನ್ನು ನಡೆಸುತ್ತಿರುವ ಅದೇ ವ್ಯಕ್ತಿ ಈಕೆ. ಕೋಟ್ಯಾಂತರ ಹಣವನ್ನು, ಅದರಲ್ಲಿಯೂ ವಿದೇಶದಿಂದ ಬರುವ ಹೂಡಿಕೆಯನ್ನು ದುರಪಯೋಗಪಡಿಸಿದ್ದು ಹಾಗೂ ಎಫ್ ಸಿ ಆರ್ ಎ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಅವರ ಸರ್ಕಾರೇತರ ಸಂಸ್ಥೆಗಳ ಪರವಾನಿಗೆಯನ್ನೂ ರದ್ದು ಮಾಡಲಾಗಿತ್ತು. ಸಾಮಾನ್ಯವಾಗಿ ಶಾಲಾ ಪಠ್ಯವನ್ನು ಆಯಾ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದ ತಜ್ಞರಿಂದ ಬರೆಸಬೇಕಾಗಿತ್ತು. ಆದರೆ ಈಕೆ ಪಠ್ಯವನ್ನು ಬರೆಯುವುದಕ್ಕೆ ಅನುಮತಿಯನ್ನು ಕೊಟ್ಟವರಾರು ??

ಮೂಲಗಳ ಪ್ರಕಾರ ಈ ಪಠ್ಯಗಳಿಗೆ ಅನುಮತಿಯನ್ನು ಕೊಟ್ಟದ್ದು ಯುಪಿಎ ನೇತೃತ್ವದ ಕಾಂಗ್ರೆಸ್ ಸರಕಾರ. ಯುವ ಮನಸ್ಸುಗಳಲ್ಲಿ ದ್ವೇಷವನ್ನೇ ತುಂಬಿಸಿವ
ಪ್ರಯತ್ನವನ್ನು ಹಾಗಾದರೆ ರಾಜಕೀಯ ನೇತಾರರು ಮಾಡಿದ್ದರಾ ಅನ್ನುವ ಪ್ರಶ್ನೆ ಈಗ ಕಾಡುತ್ತಿರುವುದು ಮಾತ್ರ ಸತ್ಯ.

ಪಠ್ಯಪುಸ್ತಕಗಳು ಭಾರತವನ್ನು ಆರ್ಯರು ಆಕ್ರಮಿಸಿಕೊಂಡುದ್ದಾರೆ ಮತ್ತು ವೈದಿಕ ನಾಗರೀಕತೆ ವಿದೇಶೀಯರದ್ದು ಎಂದು ಹೇಳುವ ಮಟ್ಟಿಗೆ ಭಾರತದ ಇತಿಹಾಸದ ಉಲ್ಲೇಖಗಳು ಲಜ್ಜೆಗೆಟ್ಟಿದೆ ಎಂದೇ‌ ಹೇಳಬಹುದು. ಲಭ್ಯವಾದ ಪುರಾವೆಗಳ ಆಧಾರದ ಮೇಲೆ ಭಾರತದ ಇತಿಹಾಸಕಾರರು ಮತ್ತು ಪುರಾತತ್ತ್ವಶಾಸ್ತ್ರದ ಸಮೀಕ್ಷೆಯಿಂದ ಈ ಹೇಳಿಕೆಯನ್ನು ದೀರ್ಘಕಾಲ ತಿರಸ್ಕರಿಸಲಾಗಿದೆ. ಪಠ್ಯಪುಸ್ತಕಗಳು ಭಾರತದ ಶ್ರೇಷ್ಠ ಆಡಳಿತಗಾರರ ಬಗ್ಗೆ ಸೂಕ್ತವಾದ ಮಾಹಿತಿಯನ್ನು ಇದುವರೆಗೆ ನೀಡಿಲ್ಲ. ಆದರೆ ನೆಪೋಲಿಯನ್, ಜೂಲಿಯಸ್ ಸೀಸರ್, ಅಲೆಕ್ಸೆಂಡರ್, ಮತ್ತು ಈಜಿಪ್ಟ್, ಗ್ರೀಕ್, ರೋಮನ್ ಮತ್ತು ಚೀನೀ ನಾಗರೀಕತೆಗಳ ಮೇಲೆ ಕೇಂದ್ರೀಕೃತವಾಗಿದ್ದವು ಎನ್ನುವುದೇ ಹೆಚ್ಚು ಆಘಾತಕಾರಿ ಸಂಗತಿ. ವಿಜಯನಗರ ವೈಭವಯುತ ಸಾಮ್ರಾಜ್ಯ ಮತ್ತು ಶಿವಾಜಿಯ ಚಿಕ್ಕ ಅಧ್ಯಾಯಕ್ಕೆ ಮೀಸಲಾಗಿರುವ ಸಣ್ಣ ಪ್ಯಾರಾಗ್ರಾಫ್ ಮಾತ್ರ ಇದೆ. 10 ಪ್ರಕಟಣೆಗಳಲ್ಲಿ ಕೇವಲ 2-3 ರಲ್ಲಿ ಮಾತ್ರ ಮೌರ್ಯ, ಚೋಳರು, ಹೊಯ್ಸಳರು ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಬಗ್ಗೆ ಉಲ್ಲೇಖಗಳಿವೆ. ಭಾರತೀಯರನ್ನು ಹೇಡಿಗಳಂತೆ ಮತ್ತು ಬ್ರಿಟಿಷರ ಅಡಿಯಲ್ಲಿ ಗುಲಾಮತನದಿಂದ ಬದುಕಿದ ವೀರರೆಂದು ಚಿತ್ರಿಸಲಾದುದು ಎಂತಹ ವಿಪರ್ಯಾಸ??

ಲಲಿತಾದಿತ್ಯ ಯಾರು? ಅವರು ಈ ಹೆಸರನ್ನು ಕೂಡ ಕೇಳಿರಲಕ್ಕಿಲ್ಲ … ಇತಿಹಾಸ ಪುಸ್ತಕಗಳು ಅವನ ಬಗ್ಗೆ ಮಾತನಾಡುತ್ತವೆಯೇ … ??

” ಭಾರತದ ‌ಅಲೆಕ್ಸಾಂಡರ್” ಎಂಬುದೇ ಆತನ‌ ಖ್ಯಾತಿ. ಯಾವುದೇ ಇತಿಹಾಸ ಪುಸ್ತಕಗಳು ಈ‌ ಮಹಾನ್ ಹಿಂದೂ ನಾಯಕನ ಬಗ್ಗೆ ಹೇಳಿಲ್ಲ!!

ಮುಘಲರನ್ನು ವೀರರು ಹಾಗೂ ಆಕ್ರಮಣಕಾರಿ ಸ್ವಭಾವದವರೆಂದು ಚಿತ್ರಿಸುವ ಪಠ್ಯಗಳು ಅಖ್ಬಾರ್, ಜಹಾಂಗೀರ್, ಷಹ ಜಹಾನ್ ಮತ್ತು ಔರಂಗಜೇಬ್ ಮುಂತಾದ ಮೊಘಲ್ ದೊರೆಗಳು ಮೊಘಲ್ ದೊರೆಗಳು ಕ್ರೂರ ಕೊಲೆಗಾರರಾಗಿದ್ದರು ಮತ್ತು ಅವರು ದೇವಾಲಯಗಳನ್ನು ಕೆಡಹಿ ದೊಡ್ಡ ಪ್ರಮಾಣದಲ್ಲಿ ಮಸೀದಿಗಳನ್ನು‌ ನಿರ್ಮಾಣ‌ ಮಾಡಿ ದೇವಾಲಯದ ವಿನಾಶಕ್ಕೆ ಜವಾಬ್ದಾರರಾದರು ಎಂಬ ವಿಚಾರಗಳನ್ನು ಅವರು ಏಕೆ ಮರೆಮಾಚಿದರು?? ಧರ್ಮದ ಹೆಸರಿನಲ್ಲಿ ಹಿಂದೂ ಕುಟುಂಬಗಳ ಮೇಲೆ ನಡೆದ ಸಾಮೂಹಿಕ ಹತ್ಯೆಗಳಿಗೆ ಔರಂಗಜೇಬ್ ಜವಾಬ್ದಾರರಾಗಿದ್ದಾನೆ ಎಂಬ ಅಂಶವನ್ನು ಏಕೆ ಮರೆಮಾಚಿದ್ದಾರೆ?? ಇದು ಭಾರತದ ಜಾತ್ಯತೀತತೆಯೆಂದೆನಿಸುತ್ತದೆಯೇ??

ಬ್ರಿಟಿಷ್ ಸಾಮ್ರಾಜ್ಯ, ಮೊಘಲರು ಮತ್ತು ಫ್ರೆಂಚ್ ಸಾಮ್ರಾಜ್ಯದ ಉದಯದ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಅವರೇ ಸಮಾಜಕ್ಕೆ ಅಭಿವೃದ್ಧಿ ಮತ್ತು
ಆಧುನೀಕರಣವನ್ನು ತಂದಿದ್ದಾರೆ ಯೆಂಬುದಾಗಿಯೇ ಭೋದಿಸಲಾಗುತ್ತಿದೆ. ನಳಂದ ಮತ್ತು ಟ್ಯಾಕ್ಸಿಲಾ ಎಂಬ ಹಳೆಯ ಮತ್ತು ಅತ್ಯುತ್ತಮ ಶಿಕ್ಷಣ ವ್ಯವಸ್ಥೆಗಳಿತ್ತಲ್ಲಾ??ಈ ಸಂಗತಿ ನಮಗೆ ಮರೆತು‌ ಹೋಯಿತಲ್ಲವೇ? ಈ ವಿಶ್ವವಿದ್ಯಾನಿಲಯಗಳನ್ನು ವಿಶ್ವದಲ್ಲೇ ಅತ್ಯುತ್ತಮವೆಂದು ಈಗಲೂ ಪರಿಗಣಿಸಲಾಗುತ್ತಿದೆ. ದುರ್ದೈವ ಆ ಪ್ರಶಂಸೆಗಳನ್ನು ನೋಡುವ ಸೌಭಾಗ್ಯ‌ ಮಾತ್ರ ಆ ವಿಶ್ವವಿದ್ಯಾಲಯಗಳಿಗೆ ಇಲ್ಲ!!! ಮೊಘಲರು ಆ ವಿಶ್ವವಿದ್ಯಾನಿಲಯಗಳನ್ನು ನಾಶಪಡಿಸಿದರು, ವಿಶ್ವವಿದ್ಯಾನಿಲಯದಲ್ಲಿ ಕ್ರೂರವಾಗಿ ಕೊಲೆಯಾದರು ಗುರುಗಳು!!ನಳಂದವು ದೊಡ್ಡ ಸಾಹಿತ್ಯ ಮತ್ತು ಪ್ರಾಚೀನ ಗ್ರಂಥಗಳ ಸಂಗ್ರಹವನ್ನು ಹೊಂದಿತ್ತೆಂದು ಹೇಳಲಾಗುತ್ತಿದೆ. ಯಾವ ಮಟ್ಟಿಗೆಂದರೆ ಸತತ ಆರು ಸುದೀರ್ಘ ತಿಂಗಳುಗಳ ಕಾಲ ಬೆಂಕಿಗೆ ಆಹುತಿಯಾಗಿದೆ ಗ್ರಂಥಾಲಯ. ಸಿಂಧೂ ಕಣಿವೆ ನಾಗರೀಕತೆಯು ಎಲ್ಲ ನಾಗರೀಕತೆಗಿಂತಲೂ ಆಧುನಿಕ ನಾಗರೀಕತೆಯಾಗಿದೆ ಎಂದು ಅವರು ತಿಳಿದಿದ್ದಾರಾ?? ನನಗಂತೂ‌ ಸಂಶಯವೇ.. ಅವರಿಗೆ ಪ್ರತಿ ಮನೆಗೆ ನೀರಿನ ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಇತ್ತು. ಹಾಗಾದರೆ ನಮ್ಮ ಇತಿಹಾಸವು ವಿಶ್ವ ಇತಿಹಾಸಕ್ಕಿಂತ ಕಡಿಮೆ ಮುಖ್ಯವಾದುದಾಗಿದೆಯೇ??? ಉತ್ತರ ಸಿಗಬಹುದೆಂಬುದೇ ಸಂಶಯ..ಯಾಕೆಂದರೆ ಬುದ್ಧಿಯಿದೆಯೆಂದು ಆಲೋಚಿಸುತ್ತಿರುವ ಲದ್ಧಿಜೀವಿಗಳಾಗಿಬಿಟ್ಟಿದ್ದಾರೆ ಭಾರತದ ಇತಿಹಾಸಕಾರರು.!!

ಭಾರತೀಯ ಸ್ವಾತಂತ್ರ್ಯ ಹೋರಾಟದ ಅಧ್ಯಾಯಗಳಲ್ಲಿ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್ ಅಥವಾ ರಾಜ್ ಗುರುಗಳಿಗೆ ಯಾವುದೇ ಸ್ಥಾನವನ್ನು ಕಲ್ಪಿಸಲಾಗಿಲ್ಲ. ಇಡೀ ಕಥನವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸುತ್ತ ಸುತ್ತುತ್ತದೆ. ಭಾರತ ಚಳುವಳಿಗಳು, ಬಲಿದಾನಗಳನ್ನು ಬಿಟ್ಟು ಸತ್ಯಾಗ್ರಹವೇ ನಮಗೆ ಸ್ವಾತಂತ್ರ್ಯ ತಂದಿತೆಂಬುದಾಗಿ ಚಿತ್ರಿಸುತ್ತಿವೆ ನಮ್ಮ ಪಠ್ಯಗಳು.. ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ, ಆಜಾದ್ ಅಥವಾ ಭಗತ್ ಸಿಂಗ್ ಅವರ ಪಾತ್ರಗಳು ಏನೂ ಅಲ್ಲವೇ ಹಾಗಾದರೇ??? ಪಠ್ಯಕಾರರೇ ಏನಿದು ನಿಮ್ಮ ಮರ್ಮ!!

ಸೋಜಿದ ‌ಸಂಗತಿಯನ್ನು ನಿಮ್ಮೊಂದಿಗೆ ಹಂಚಬೇಕು. ಸ್ವಾತಂತ್ರ್ಯದ ನಂತರ ನೆಹರೂ-ಗಾಂಧಿ ಕುಟುಂಬವನ್ನೇ ಹೆಚ್ಚು ವೈಭವೀಕರಿಸುತ್ತಿದೆ ಪಠ್ಯಗಳು. ಆ ಗೌರವವನ್ನು ಕನಿಷ್ಠ‌ ಪಕ್ಷ‌ ಸ್ವೀಕರಿಸಲೂ ಅವರುಗಲು ಯೋಗ್ಯರೋ ಅಲ್ಲವೋ ಎಂಬುದು ಒಂದು ಪ್ರಶ್ನೆಯಾಗಿಯೇ ಉಳಿದಿದೆ. ಗಾಂಧಿ ಕುಟುಂಬದ ನಾಲ್ಕನೇ ಪೀಳಿಗೆಯೂ ಸಹ ಪಠ್ಯ ಪುಸ್ತಕಗಳಲ್ಲಿ ಪ್ರವೇಶಿಸಿರುವುದು ಹೆಚ್ಚು ವಿಲಕ್ಷಣವಾಗಿದೆ. ಐದನೆಯ ತರಗತಿಯ ಇಂಗ್ಲಿಷ್ ಪಠ್ಯ ಪುಸ್ತಕವು ರಾಹುಲ್ ಗಾಂಧಿಯು ಯುವಕರ, ಶಕ್ತಿಯುತ ಮತ್ತು ವರ್ಚಸ್ವಿ ನಾಯಕನಾಗಿ ವರ್ಣಿಸುವ ಪ್ಯಾರಾವನ್ನು ಹೊಂದಿದೆ. ಮುಂದುವರೆಸಿ ತಮ್ಮ ಅಗಾಧ ವಿಶ್ವಾಸ ಮತ್ತು ನಾಯಕತ್ವವನ್ನು ಹೊಂದಿ ರಾಷ್ಟ್ರವನ್ನೇ ಚಕಿತವಾಗಿಸಿದ್ದಾರೆಯೆಂದೆಲ್ಲಾ ಉಲ್ಲೇಖವಾಗಿದೆ. ಒಟ್ಟಾರೆಯಾಗಿ ಪಠ್ಯದ ‌ಪ್ರಕಾರ ಮುಗ್ಧ ಮಗು ಮಿಸ್ಟರ್ ರಾಹುಲ್ ದೇಶದ ಯುವ ನಾಯಕ!!

ರಾಹುಲ್ ಗಾಂಧಿಯವರು ಪ್ರೌಢರಾದರು ಮತ್ತು ಆತ್ಮವಿಶ್ವಾಸವನ್ನು ಹೊಂದಿದ್ದಾರೆ ಎಂದು ಯಾವ ದೃಷ್ಟಿಕೋನದಿಂದ ಲೇಖಕರು ಯೋಚಿಸಿದ್ದಾರೆ? ಗುಜರಾತ್
ಯುರೋಪ್ಗಿಂತಲೂ ದೊಡ್ಡದಾಗಿದೆ ಎಂದು ಭಾವಿಸುವ ವ್ಯಕ್ತಿಯು ಬೆಳೆದಿದ್ದಾನೆಂದೆನಿಸುತ್ತದಾ??ಅವರ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯು ಅವರ ಕರುಣಾಜನಕ ಭಾಷಣಗಳಿಂದಲೇ ನಾವು ತಿಳಿಯಬಹುದು!! ರಾಹುಲ್ ಗಾಂಧಿ ಮತ್ತು ಅವರ ಹೆಣ್ಣು ಸ್ನೇಹಿತೆ ವೆರೋನಿಕ್ ಅವರನ್ನು 2001 ರಲ್ಲಿ ಎಫ್ಬಿಐಯವರು ಬಾಸ್ಟನ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಅವರು ದೊಡ್ಡ ಪ್ರಮಾಣದಲ್ಲಿ ಬಹಿರಂಗಪಡಿಸದ ಹಣ ಮತ್ತು ಮಾದಕ ಪದಾರ್ಥವನ್ನು ಹಿಡಿದಿಟ್ಟುಕೊಂಡಿದ್ದರು. ನಮ್ಮ ಮಕ್ಕಳು ಅವರನ್ನು ರೋಲ್ ಮಾಡೆಲ್ ಎಂದು ಪರಿಗಣಿಸಬೇಕೇ? ನಮ್ಮ ಮಕ್ಕಳು ಭವಿಷ್ಯದಲ್ಲಿ, ಕಳ್ಳಸಾಗಾಣಿಕೆದಾರರು, ಮಾದಕವಸ್ತು ವ್ಯಸನಿಗಳಾಗಿರಬೇಕೆಂದು ನಾವು ನಿರೀಕ್ಷಿಸಬೇಕೇ???

ದುರಂತವೆಂದರೆ ಪಠ್ಯ ಪುಸ್ತಕಗಳಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೂ ಜಾಗವಿದೆ. ಲೇಖಕರ ಪ್ರಕಾರ ಪ್ರಿಯಾಂಕಾ ಗಾಂಧಿ ವಿಶಾಲ ಹೃದಯದವಳಾಗಿದ್ದು, ಆಕೆಯ
ತಂದೆ ರಾಜೀವ್ ಗಾಂಧಿಯವರ ಕೊಲೆಗಾರರನ್ನು ಕ್ಷಮಿಸಿದ್ದಾನೆ. (ಬಹುಶಃ ರಾಜೀವ್ ಗಾಂಧಿಯವರ ಕೊಲೆಯ ಹಿಂದೆ ನಿಗೂಢತೆಯ ಬಗ್ಗೆ ಲೇಖಕರಿಗೆ ಯಾವುದೇ ಕಲ್ಪನೆಯಿಲ್ಲ). ಪ್ರಿಯಾಂಕಾ ಗಾಂಧಿಯವರ ಮಗ ಅಥವಾ ಮಗಳು ನೆಹರು ಅಥವಾ ಇಂದಿರಾ ಗಾಂಧಿ ಅವತಾರವೆಂದು ಕರೆದರೆ ದೇವರನ್ನು ನಿಷೇಧಿಸಲಿ!!! ಓಹ್ ದೇವರೇ, ಅವರನ್ನು ಕ್ಷಮಿಸಬೇಕೆಂದು ಕೋರಲೇ???ಅರ್ಥವಾಗುತ್ತಿಲ್ಲ.

ದೇಶದ ಹಿತಕ್ಕಾಗಿ ತಮ್ಮ ಜೀವನ,ಸುಖ- ಸಂತೋಷಗಳನ್ನು ತ್ಯಾಗ ಮಾಡಿದ ಭಾರತದ ಕೆಲವು ಮಹಾನ್ ವ್ಯಕ್ತಿಗಳನ್ನು ಪಾಪಿಗಳು ಮರೆತೇ ಬಿಟ್ಟರಲ್ಲಾ?? ನಮ್ಮ ದೇಶದ ವೈಭವವನ್ನು ಉತ್ತುಂಗ ‌ಶಿಖರಕ್ಕೇರಿಸಲು ಬೆವರು, ರಕ್ತವನ್ನು ಚೆಲ್ಲಿದವರನ್ನು ಮಾತಿನ ಮೂಲಕ, ಲೇಖನಿಯ ಮೂಲಕ ಕೊಲೆ ಮಾಡಲಾಗಿದೆಯೆಂಬುದೇ ಕಟು‌ಸತ್ಯ.

ನಿಮ್ಮ ಮಕ್ಕಳು ಈ ಅಸಂಬದ್ಧತೆಯನ್ನು ಓದುವ ಮೂಲಕ “ಭಾರತ ರತ್ನ” ಆಗುತ್ತಾರೆಂದು ನೀವು ನಿರೀಕ್ಷಿಸುತ್ತೀರಾ?? ಅಗಾಧ ದೇಶಭಕ್ತಿಯನ್ನು ಬೆಳೆಸಿ ರಾಷ್ಟ್ರಕ್ಕೆ
ಅದ್ಭುತವಾದ ಏನನ್ನಾದರೂ ಮಾಡುತ್ತಾರೆಂದು ನೀವು ನಿರೀಕ್ಷಿಸುತ್ತೀರಾ? ಖಂಡಿತ ಇಲ್ಲ!!!

ಯುವ ಮನಸ್ಸುಗಳು ನವಿರಾದ ಮತ್ತು ಸೂಕ್ಷ್ಮಗ್ರಾಹಿಗಳಾಗಿದ್ದು, ಅವು ಸರಿಯಾದ ವಿಷಯಗಳು ಮತ್ತು ಉತ್ತಮ ಮೌಲ್ಯಗಳೊಂದಿಗೆ ಪೋಷಿಸಲ್ಪಡಬೇಕು. ಇಲ್ಲದಿದ್ದರೆ ಅವರು ಭಯೋತ್ಪಾದಕರ ಬೆಂಬಲಕ್ಕಾಗಿ ತಮ್ಮದೇ ದೇಶದ ವಿರುದ್ಧ ಮಾತನಾಡಬಲ್ಲ ಬುದ್ದಿಹೀನ ರಾಹುಲ್ ಗಾಂಧಿ ಅಥವಾ ಕನ್ಹೈಯ ಕುಮಾರ್ ಆಗಬಹುದು!!!

-ವಸಿಷ್ಠ

Tags

Related Articles

Close