ಪ್ರಚಲಿತ

ನಿಜವಾದ ಆಟ ಈಗ ಆರಂಭ!!! ಕಪ್ಪುಕುಳಗಳಿಗೆ ನರೇಂದ್ರ ಮೋದಿಯ ಅಂದಿನ ಆ ನಿರ್ಧಾರ ಇಂದು ಬಿಸಿಮುಟ್ಟಲು ಕಾರಣವೇನು ಗೊತ್ತೇ??

ಭ್ರಷ್ಟಾಚಾರ, ಭಯೋತ್ಪಾದನೆ, ನಕಲಿ ನೋಟುಗಳ ಹಾವಳಿ ವಿರುದ್ಧ ನೇರ ಸಮರಕ್ಕೆ ನಿಂತು ಶಾಕ್ ನೀಡಿದ್ದ ಕೇಂದ್ರ ಸರ್ಕಾರ, ತನ್ನ ಅಂತಿಮ ಪ್ರಯತ್ನವಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು!! ಆದರೆ ನೋಟ್ ಬ್ಯಾನ್ ಬಳಿಕ ಇದೀಗ ಮತ್ತೊಂದು ಶಾಕ್ ನೀಡಿರುವ ಕೇಂದ್ರ ಸರ್ಕಾರ ಸಿರಿವಂತರಿಗೆ ಈ ಯೋಜನೆಯಿಂದ ತಮ್ಮಲ್ಲಿರುವ ಹಣವೇ ಬಿಸಿತುಪ್ಪದಂತೆ ಪರಿಣಮಿಸಲಿದೆ.

ಹೌದು…. ಈಗಾಗಲೇ ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡುವ ಮೂಲಕ ಕಪ್ಪು ಹಣ ಹೊಂದಿರುವವರಿಗೆ ದೊಡ್ಡ ಹೊಡೆತ ನೀಡಿದ್ದರು. 500ರು ಹಾಗೂ 1000 ಮುಖ ಬೆಲೆಯ ನೋಟುಗಳ ಮೇಲೆ ಮಧ್ಯರಾತ್ರಿಯಿಂದಲೇ ನಿಷೇಧ ಹೇರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಿಜಕ್ಕೂ ಕಪ್ಪು ಹಣ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ ನೋಟುಗಳ ಹಾವಳಿ ಮೇಲೆ ನಿಜಕ್ಕೂ ಗದಾ ಪ್ರಹಾರ ಮಾಡಿದ್ದರು.

ಇನ್ನು ಜಾರಿ ಮಾಡಲಾದ ಬೇನಾಮಿ ವಹಿವಾಟು ತಡೆ ಕಾಯ್ದೆಯಡಿ ಐಟಿ ಇಲಾಖೆ ಈ ಕ್ರಮ ಕೈಗೊಂಡಿದ್ದು, ಈ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಭಾರಿ ದಂಡ ಹಾಗೂ 7 ವರ್ಷಗಳ ವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ನೋಟು ನಿಷೇಧದ ಬಳಿಕ ಸರಿಯಾದ ಲೆಕ್ಕ ಪತ್ರವಿಲ್ಲದ ಹಣವನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಿದರೆ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಐಟಿ ಇಲಾಖೆ ಸಾರ್ವಜನಿಕ ಜಾಹೀರಾತುಗಳ ಮೂಲಕ ಎಚ್ಚರಿಕೆ ನೀಡಿತ್ತು.

ಬೇನಾಮಿ ಆಸ್ತಿ ಹೊಂದಿರುವವರ ಪತ್ತೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಕಪ್ಪು ಕುಳಗಳ ಪತ್ತೆಗೆ ಯೋಜನೆ ರೂಪಿಸಿದ್ದು, ತದನಂತರದಲ್ಲಿ, ನೋಟ್ ಬ್ಯಾನ್ ಆದ ನಂತರ ಇದೀಗ ಬ್ಯಾಂಕ್ ಖಾತೆಗಳಿಗೆ 25 ಲಕ್ಷಕ್ಕಿಂತ ಹೆಚ್ಚಿನ ಹಣ ಜಮೆ ಮಾಡಿದವರಿಗೆ ನೋಟಿಸ್ ನೀಡಿದೆ.

ಹೌದು… ಕೇಂದ್ರ ಸರ್ಕಾರ ಬೇನಾಮಿ ಆಸ್ತಿ ಕಾಯ್ದೆಯಡಿಯಲ್ಲಿ 30 ಲಕ್ಷಕ್ಕೂ ಮೀರಿದ ಆಸ್ತಿ ನೋಂದಣೆ ಮಾಡಿದವರ ತೆರಿಗೆ ವಿವರಗಳನ್ನು ಪರಿಶೀಲಿಸಲು ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲದೇ, ಪರಿಶೀಲನೆಗೊಳಪಟ್ಟ ಆಸ್ತಿ ಅನುಮಾನಾಸ್ಪದವಾಗಿದ್ದರೆ ಅಥವಾ ನಿಯಮ ಬಾಹಿರವಾಗಿದ್ದರೆ ಹಾಗೂ ಕಪ್ಪು ಹಣದಿಂದ ಖರೀದಿಸಿದ್ದರೆ ಆಸ್ತಿಯ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿತ್ತು.

ಇನ್ನು ನೋಟ್ ಬ್ಯಾನ್ ಬಳಿಕ ಇದೀಗ ಮತ್ತೊಂದು ಶಾಕ್ ನೀಡಿರುವ ಕೇಂದ್ರ ಸರ್ಕಾರ ಬ್ಯಾಂಕ್ ಖಾತೆಗಳಿಗೆ 25 ಲಕ್ಷಕ್ಕಿಂತ ಹೆಚ್ಚಿನ ಹಣ ಜಮೆ ಮಾಡಿದವರಿಗೆ ನೋಟಿಸ್ ನೀಡಿದ್ದು, ಆದಾಯ ತೆರಿಗೆ ಇಲಾಖೆ ಈ ಸಂಬಂಧ 1.16 ಲಕ್ಷ ಜನರಿಗೆ ನೋಟಿಸ್ ನೀಡಿದೆ. ಇವರು ನೋಟ್ ಬ್ಯಾನ್ ನಂತರ ಬೃಹತ್ ಪ್ರಮಾಣದ ಹಣದ ವಹಿವಾಟು ನಡೆಸಿದ್ದರೂ ಸಹ ಐಟಿ ರಿಟರ್ನ್ಸ್ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಇವರಿಗೆ ನೋಟಿಸ್ ನೀಡಿದ್ದು ಒಂದು ತಿಂಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.

ನೋಟ್ ಬ್ಯಾನ್ ನಂತರ 10 ಲಕ್ಷ ರೂ. ನಿಂದ 25 ಲಕ್ಷ ರೂ.ವರೆಗೆ ಬ್ಯಾಂಕ್ ಗೆ ಹಳೆಯ ನೋಟುಗಳನ್ನು 2.4 ಲಕ್ಷ ಜನರು ಜಮೆ ಮಾಡಿದ್ದಾರೆ. ಆದರೆ ಇವರೂ ಕೂಡ ಐಟಿ ರಿಟರ್ನ್ಸ್ ಈವರೆಗೆ ಸಲ್ಲಿಸಿಲ್ಲ. ಮುಂದಿನ ಹಂತದಲ್ಲಿ ಇವರ ವಿರುದ್ಧ ಸಹ ಕ್ರಮ ತೆಗೆದುಕೊಳ್ಳಲು ಯೋಜನೆ ಸಿದ್ಧವಾಗುತ್ತಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿಯ ಮುಖ್ಯಸ್ಥ ಸುಶೀಲ್ ಚಂದ್ರ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೇ, ತೆರಿಗೆ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಸೂಕ್ತ ಶಿಕ್ಷೆಯನ್ನೂ ಸಹ ನೀಡಲಾಗುತ್ತಿದೆ. ಕಳೆದ ಏಪ್ರಿಲ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಐಟಿ ಕಾಯ್ದೆ ಸೆಕ್ಷನ್ 142 (1)ರ ಅನ್ವಯ 609 ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಇದರ ಜತೆಗೆ ಈ ಕಾಯ್ದೆಯನ್ವಯ ಕಳೆದ ವರ್ಷ 1046 ಜನರ ವಿರುದ್ಧ ದೂರು ದಾಖಲಾಗಿದೆ ಎಂದು ಸುಶೀಲ್ ಚಂದ್ರ ತಿಳಿಸಿದ್ದಾರೆ.

ಅಂತೂ ಕಪ್ಪುಹುಳಗಳಿಗೆ ಭಯ ಹುಟ್ಟಿಸಿದ್ದ ಕೇಂದ್ರ ಸರ್ಕಾರ, ತದನಂತರ ದೇಶದಲ್ಲಿರುವ ಭ್ರಷ್ಟಚಾರವನ್ನು ಮಟ್ಟಹಾಕುವ ಸಲುವಾಗಿ ರಾತ್ರೋರಾತ್ರಿ ನೋಟ್ ಬ್ಯಾನ್ ಮಾಡಿ ಅದೆಷ್ಟೋ ಕಾಳಧನಿಕರಿಗೆ ಕಪ್ಪುದಿನವಾಗಿ ಕಾಡಿದ್ದು ಮಾತ್ರ ಅಕ್ಷರಶಃ ನಿಜ!! ಆದರೆ ಇದೀಗ ಕೇಂದ್ರ ಸರ್ಕಾರದ ಇನ್ನಂದು ಮಹತ್ತರವಾದ ಹೆಜ್ಜೆ ಅದೆಷ್ಟೋ ಸಿರಿವಂತರ ಸಿರಿವಂತಿಕೆಗೆ ಕುತ್ತು ಬರಲಿರುವುದು ಮಾತ್ರ ಅಕ್ಷರಶಃ ನಿಜ!!

-ಅಲೋಖಾ

Tags

Related Articles

Close