ಅಂಕಣದೇಶಪ್ರಚಲಿತ

ನಿಜ! ಶಸ್ತ್ರಗಳಿಂದ ಸೋಲಿಸಲಾಗದ ಚೀನಾವನ್ನು ಕೇವಲ ಮಕ್ಕಳ ಡಯಾಪರ್ ಗಳಿಂದ ಸೋಲಿಸಬಹುದಷ್ಟೇ!!!!!

ಚೀನಾದ ಸರಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ಒಮ್ಮೆ ಭಾರತೀಯರನ್ನು ಯಾವರೀತಿ ಅಣಕಿಸಿತ್ತು ಎಂಬುವುದನ್ನು ಸ್ವಲ್ಪ ಹೊತ್ತು ಯೋಚಿಸಿ…
ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಭಾರತದ ಹಲವು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಆದರೆ ಭಾರತೀಯರಿಗೆ
ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಸಾಧ್ಯವೇ ಆಗುವುದಿಲ್ಲ. ನಮಗೆ ಭಾರತೀಯರ ಮನಸ್ಥಿತಿ ಏನೆಂದು ಚೆನ್ನಾಗಿ ಗೊತ್ತಿದೆ. ಅವರು ಕೇವಲ ಬೊಬ್ಬೆ ಹೊಡೆಯುವುದು ಮಾತ್ರ ಆದರೆ ಚೀನಾದೆದುರು ಏನೂ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ವಿವಿಧ ಕಾರಣಗಳಿಂದಾಗಿ ಚೀನಾ ಉತ್ಪನ್ನಗಳ ಜೊತೆ ಭಾರತೀಯರಿಗೆ ಸ್ಪರ್ಧೆ ಮಾಡಲು ಸಾಧ್ಯವೇ ಆಗುವುದಿಲ್ಲ…
ಚೀನಾದ ಕಂಪೆನಿಗಳು ಭಾರತದಲ್ಲಿ ಬಂಡವಾಳ ಹೂಡುತ್ತಿವೆ. ಆದರೆ ಭಾರತ ಮೂಲಭೂತ ಸೌಕರ್ಯವನ್ನೇ ಹೊಂದಿಲ್ಲ. ದೇಶದಲ್ಲಿ ಸಂಪರ್ಕ ರಸ್ತೆಯನ್ನು ನಿರ್ಮಿಸುವ ಅಗತ್ಯವಿದೆ. ಭಾರತದಲ್ಲಿ ದೀರ್ಘಕಾಲದ ಶಕ್ತಿಯ ಕೊರತೆಯಿಂದ ಬಳಲುತ್ತಿದ್ದು, ಭಾರತದ ಸ್ಥಿತಿಯು ಅತ್ಯಂತ ಕೆಟ್ಟದಾಗಿದೆ. ಸರಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಇದರಿಂದ ದೇಶವು ಮೇಲೇಳುವ ಬದಲು ಪಾತಾಳಕ್ಕಿಳಿಯುತ್ತಿದೆ. ಭಾರತದಲ್ಲಿನ ಕಾರ್ಮಿಕರು ಕಷ್ಟಪಟ್ಟು ಅಥವಾ ಪರಿಣಾಮಕಾರಿಯಾಗಿ ದುಡಿಯುವುದಿಲ್ಲ. ದೇಶದಲ್ಲಿ ಸಾಕಷ್ಟು ಕಾರ್ಮಿಕ ಸಂಘಟನೆಗಳಿದ್ದು, ಅವುಗಳಿಗೆ ಕಂಪೆನಿ ಮಾಲಿಕನಿಂದ ಹಣ ತೆಗೆದುಕೊಳ್ಳುವ ಕೆಲಸದಲ್ಲಿಯೇ ನಿರತವಾಗಿದೆ. ಚೀನೀ ಕಂಪೆನಿಗಳು ಭಾರತದಲ್ಲಿ ಹಣ ತೊಡಗಿಸಿ ಉತ್ಪಾದನ ಯೋಜನೆಗಳನ್ನು ಆರಂಭಿಸುವುದೂ ಒಂದೆ, ಆತ್ಮಹತ್ಯೆ ಮಾಡಿಕೊಳ್ಳುವುದೂ ಒಂದೇ.
ಭಾರತದಲ್ಲಿ ಸಾಕಷ್ಟು ಹಣವಿದೆ ಆದರೆ ಅದರಲ್ಲಿ ಬಹುಪಾಲು ರಾಜಕಾರಣಿಗಳ, ಅಧಿಕಾರಿಗಳ ಕೈಯ್ಯಲಿದೆ. ಅದಕ್ಕಾಗಿ ಇಲ್ಲಿನ ಪ್ರಧಾನಿ ನರೇಂದ್ರ ಮೋದಿ `ಮೇಕ್ ಇನ್ ಇಂಡಿಯಾ’ ಎಂಬ ಯೋಜನೆಯನ್ನು ಆರಂಭಿಸಿದ್ದು, ವಿದೇಶಿ ಕಂಪೆನಿಗಳು ಬಂಡವಾಳ ಹೂಡುವಂತೆ ಮಾಡಿದ್ದಾರೆ.ಭಾರತದ ವ್ಯಾಪಾರಿಗಳು ಚೀನಾದ ಹಲವು ಉತ್ಪನ್ನಗಳನ್ನು ಖರೀದಿಸಲು ಹಿಂಡುಹಿಂಡಾಗಿ ಬರುತ್ತಾರೆ. ಬಳಿಕ ಅವುಗಳನ್ನು ಭಾರತದಲ್ಲಿ ಮಾರುತ್ತಾರೆ. ಭಾರತೀಯರು ಇಷ್ಟನ್ನು ಮಾತ್ರ ಮಾಡುತ್ತಾರೆ. ನಾವು(ಚೀನಾ) ಭಾರತದಲ್ಲಿ ಹಣ ತೊಡಗಿಸಿದರೆ ನಷ್ಟ ಮಾಡುವ ತೊಂದರೆಯನ್ನು ಯಾಕೆ ತೆಗೆದುಕೊಳ್ಳಬೇಕು?
ಚೀನಾದಲ್ಲಿ ವ್ಯಾಪಾರವು ಬೆಳೆಯುತ್ತಲೇ ಸಾಗುತ್ತಿದ್ದು, ಭಾರತೀಯರು ಏನೂ ಮಾಡುವ ಸ್ಥಿತಿಯಲ್ಲಿಲ್ಲ….”

ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ…

Read the full link

ಇದನ್ನು ಓದಿದಾಗ ನೀವು ಕೋಪದಿಂದ ಕುದಿಯುತ್ತೀರಿ ಎಂದು ನನಗೆ ಚೆನ್ನಾಗಿ ಗೊತ್ತು. ನೀವು ಇಷ್ಟಕ್ಕೇ ಕೋಪಗೊಳ್ಳುವುದಾದರೆ ನೀವು ಇನ್ನಷ್ಟು ಕೋಪಗೊಳ್ಳುವ ವಿಷ್ಯವನ್ನು ನಿಮ್ಮ ಮುಂದಿಡುತ್ತೇನೆ. ಭಾರತವನ್ನು ಒಂದು ದುರ್ಬಲವೆಂದು ಚಿತ್ರಿಸಿ, ಭಾರತವನ್ನು ಕಟುವಾಗಿ ಟೀಕಿಸಿ, ವ್ಯಂಗದಿಂದ ಬರೆದ ವ್ಯಕಿ ಬೇರ್ಯಾರೂ ಅಲ್ಲ. ಭಾರತದ ಮೂಲದ ಗೌರವ್ ತ್ಯಾಗಿ.ಇಂಥವರ ಬರಹವನ್ನು ನೋಡಿಕೊಂಡೇ ಚೀನಾ ದೋಕಲಂ ವಿಷಯವನ್ನು ಮುಂದಿಟ್ಟುಕೊಂಡು ಕೀಳಂದಾಜಿಸಿ ಭಾರತದ ವಿರುದ್ಧ ಕಾಲ್ಕೆರೆದು ಯುದ್ಧಕ್ಕೆ ಬಂದಿತೇನೋ?
ಆದರೆ ಭಾರತೀಯರು ಚೀನಾ ವಸ್ತುಗಳನ್ನು ತಿರಸ್ಕರಿಸುತ್ತೇನೆ ಎಂದು ಹೇಳಿದಾಗ ಚೀನಾ ಸಣ್ಣಗೆ ನಕ್ಕಿರಬಹುದು. ಆದರೆ ಕೆಲವೇ ದಿನಗಳಲ್ಲಿ ಅದರ ವಿರಾಟ್ ರೂಪ ಗೊತ್ತಾಗಿರಬಹುದು. ಭಾರತವನ್ನು ಕೆಟ್ಟದಾಗಿ ನಿಂದಿಸುತ್ತಿದ್ದ ಚೀನಾಕ್ಕೆ ಭಾರತದಲ್ಲಿ `ಮೇಡ್ ಇನ್ ಚೀನಾ’ ಉತ್ಪನ್ನಗಳ ಮಾರಾಟ ಕುಸಿಯುತ್ತಿರುವುದನ್ನು ನೋಡಿ ನಿಜಕ್ಕೂ ಶಾಕ್ ಆಗಿರಬಹುದು.

ಚೀನಾ ವಸ್ತುಗಳ ಬಗ್ಗೆ ಭಾರತದಲ್ಲಿ ಎಷ್ಟೊಂದು ಜಾಗೃತಿ ಮೂಡಿತೆಂದರೆ ಮುಖ್ಯವಾಗಿ ಜಾಲತಾಣಗಳಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಆಂದೋಲನದಲ್ಲಿ ತೊಡಗಿತು. ಚೀನಾ ಭಾರತದ ವಿರುದ್ಧ ಎಷ್ಟು ಬಾರಿ ದ್ರೋಹ ಬಗೆಯಿತೆಂದರೆ, ಈ ಬಾರಿ ಪಾಕಿಸ್ತಾನದ ಉಗ್ರ ಮಸೂದ್ ಅಝರ್‍ನನ್ನು ಭಾರತ ಜಾಗತಿಕ ಉಗ್ರನ ಪಟ್ಟಕ್ಕೆ ಆಗ್ರಹಿಸುತ್ತಿದ್ದಾಗಲೇ ಚೀನಾ ಪಾಕ್ ಪರ ನಿಂತು ಭಾರತಕ್ಕೆ ಅಡ್ಡಗಾಲು ಹಾಕಿತು. ಇದು ಬಾರತೀಯರನ್ನು ಇನ್ನಷ್ಟು ಕೆರಳಿಸಿತು. ದೀಪಾವಳಿ ಹತ್ತಿರ ಬರುತ್ತಿದ್ದು, ಚೀನಾ ನಿರ್ಮಿತ ಪಟಾಕಿಗಳೆಲ್ಲಾ ಭಾರತವನ್ನು ವಕ್ಕರಿಸಲಿದೆ. ಈ ವಸ್ತುಗಳನ್ನೂ ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಶುರುವಾಗಿದ್ದು ಅದೀಗ ತೀವ್ರ ಸ್ವರೂಪವನ್ನು ಪಡೆಯುತ್ತಿದೆ.
ಭಾರತ ಸುಮಾರು 140 ರಾಷ್ಟ್ರಗಳಿಂದ 6000 ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದಲ್ಲಿ ಶೇ.16 ಭಾಗವನ್ನು ಭಾರತ ಚೀನಾದಿಂದ ಆಮದು
ಮಾಡಿಕೊಳ್ಳುತ್ತದೆ. ಭಾರತವು ಚೀನಾದ ಜೊತೆ ದೊಡ್ಡಮಟ್ಟದಲ್ಲಿ ವ್ಯಾಪಾರ ಪಾಲುದಾರಿಕೆಯನ್ನು ಹೊಂದಿದೆ. ಭಾರತ ಚೀನಾದಿಂದ 4,13,000 ಕೋಟಿ ರೂ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಭಾರತ ಚೀನಾಕ್ಕೆ ಕೇವಲ 60,000 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಚೀನಾಕ್ಕೆ ರಫ್ತು ಮಾಡುತ್ತದೆ. ಭಾರತಕ್ಕೆ ಇದರಿಂದ 3,53,000 ಕೋಟು ರೂ ವ್ಯಾಪಾರ ಕೊರತೆ ಉಂಟಾಗುತ್ತದೆ. ಚೀನಾ ಭಾರತದಿಂದ ಖರೀದಿಸುವುದರ 5 ಪಟ್ಟು ಭಾರತಕ್ಕೆ ಮಾರುತ್ತದೆ.

ಇನ್ನು ವಾಸ್ತವ ಸ್ಥಿತಿಗೆ ಬರೋಣ. ಪ್ರಸ್ತುತ ಮಾಹಿತಿಯಂತೆ ರಿಯಾಲಿಟಿ ಚೆಕ್ ಮಾಡೋಣ. ನಮ್ಮ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಭಾವನೆಯನ್ನು ಒಪ್ಪಿಕೊಳ್ಳೋಣ. ಆದರೆ ಚೀನಾದ ವಸ್ತುಗಳನ್ನು ನಿಜವಾಗಿಯೂ ಬಹಿಷ್ಕರಿಸಲು ಸಾಧ್ಯವೇ? ಚೀನಾ ಪತ್ರಿಕೆಯಲ್ಲಿ ಉಲ್ಲೇಖಿಸಿದಂತೆ ಕಹಿ ಸತ್ಯ ಇದೆಯೇ?

ಚೀನಾ ನಮ್ಮ ನಿತ್ಯದ ಜೀವನದಲ್ಲಿ ಹೇಗೆ ಪ್ರವೇಶ ಪಡೆಯಿತೆಂದು ನೋಡೋಣ…

-ನಾವು ಬೆಳಿಗ್ಗೆ ಏಳುವುದೇ ಚೀನಾ ನಿರ್ಮಿತ ಅಲಾರ್ಮ್ ಗಡಿಯಾರದಿಂದ.
-ಎದ್ದು ಬಾತ್ ರೂಮಿಗೆ ಹೋದಾಗ ಚೀನಾದ ಟೈಲ್ಸ್, ಟೂತ್‍ಬ್ರಷ್, ಶೇವಿಂಗ್ ಕಿಟ್‍ಗಳು ನಮ್ಮನ್ನು ಸ್ವಾಗತಿಸುತ್ತದೆ.
-ಸ್ನಾನ ಮಾಡಿದ ನಂತರ ದೇವರ ಕೋಣೆಗೆ ಹೋದಾಗ ಅಲ್ಲಿರುವುದು ಚೀನಾ ನಿರ್ಮಿತ ದೇವರ ಮೂರ್ತಿ, ಪೂಜಾ ಸಾಮಗ್ರಿಗಳು.
-ಇನ್ನು ಊಟ ಮಾಡಲು ಡೈನಿಂಗ್ ಟೇಬಲ್ ಬಳಿಗೆ ಬಂದಾಗ ಅಲ್ಲಿ ಆಹಾರ ಬಡಿಸುವುದು ಚೀನಾ ಮಾಡಿದ ಪ್ಲೇಟ್, ಲೋಟ, ತಟ್ಟೆ ಇತ್ಯಾದಿಗಳಿಂದ.
-ಆಫೀಸಿನಿಂದ ಕಾರ್‍ನಲ್ಲಿ ತೆರಳುತ್ತೇವೆಂದಿಟ್ಟುಕೊಳ್ಳೋಣ… ಕಾರ್‍ನಲ್ಲಿರುವುದು ಚೀನಾ ನಿರ್ಮಿತ ಬಿಡಿಭಾಗಗಳು.
-ಆಫೀಸಿಗೆ ಹೋಗಿ ನಮ್ಮ ಬಾಸ್‍ಗೆ ಗುಡ್ ಮಾರ್ನಿಂಗ್ ಹೇಳಿದ ಬಳಿಕ ನಮ್ಮನ್ನು ಸ್ವಾಗತಿಸಿವುದು ಚೀನಾ ನಿರ್ಮಿತ ಕಂಪ್ಯೂಟರ್‍ಗಳು, ಪೆನ್, ಇತ್ಯಾದಿ ಸಾಮಗ್ರಿಗಳು.
ಮೊಬೈಲ್, ಕ್ಯಾಮೆರಾ, ಪ್ರೋಜೆಕ್ಟರ್, ಹೆಡ್‍ಫೋನ್ ಹೀಗೆ ನಾವು ಪ್ರತಿನಿತ್ಯ ಬಳಸುವ ಸಾಮಗ್ರಿಗಳು ಅಥವಾ ಅದರ ಬಿಡಿಭಾಗಗಳು ಚೀನಾದ್ದು.
-ಸಂಜೆ ಕೆಲಸ ಮುಗಿಸಿ ಜಿಮ್‍ಗೆ ಹೋಗುವ ಅಭ್ಯಾಸವಿದ್ದರೆ ಅಲ್ಲಿನ ಫಿಟ್‍ನೆಸ್ ವಸ್ತುಗಳು, ಅದರ ಬಿಡಿಭಾಗಗಳು ಚೀನಾದ್ದು.
-ಮಗು ಆಡುವ ಆಟಿಕೆಯಿಂದ ಹಿಡಿದು ಅದು ಧರಿಸುವ ಡಯಾಪರ್ ಕೂಡಾ ಚೀನಾದ್ದು…
-ನಿಮ್ಮ ಮನೆಯಲ್ಲಿರುವ ಬೆಡ್, ಬ್ಲೋವರ್ಸ್, ಹೀಟರ್ಸ್, ಕ್ಲೀನರ್, ಡೆಕೊರೇಷನ್ ಐಟಮ್ಸ್, ಏರ್ ಕಂಡಿಷನ್, ಗಡಿಯಾರ ಇತ್ಯಾದಿಗಳೆಲ್ಲಾ ಚೀನಾ ನಿರ್ಮಿತ ವಸ್ತುಗಳು.
-ರೈತರು ಕೃಷಿ, ಗದ್ದೆಗೆ ಬಳಸುವ ವಸ್ತುಗಳು, ಕಟ್ಟಡ ನಿರ್ಮಿಸಲು ಬಳಸುವ ವಸ್ತುಗಳು, ಹೆಚ್ಚಿನ ಔಷಧಿಗಳು ಎಲ್ಲವೂ ಚೀನಾ ದಿಂದ ನಿರ್ಮಾಣವಾಗುವಂಥವುಗಳು!

ಹೀಗೆ ಒಂದು ಬೆಳಿಗ್ಗೆಯಿಂದ ರಾತ್ರಿ ತನಕ ಚೀನಾದ ವಸ್ತುಗಳನ್ನೇ ಬಳಸುತ್ತಿದ್ದೇವೆ. ಚೀನಾದ ವಸ್ತುಗಳನ್ನು ಭಾರತೀಯರಷ್ಟೇ ಅಲ್ಲ, ಪ್ರಪಂಚದ ಹಲವು ರಾಷ್ಟ್ರಗಳು ನಮ್ಮಂತೆಯೇ ಬಳಸುತ್ತವೆ. ಚೀನಾ ಶೇ. 17 ಅಮೇರಿಕಾ, ಯುರೋಪ್ 17, ಹಾಂಗ್‍ಕಾಂಗ್ ಶೇ. 16 ಹಾಗೂ ಜಪಾನ್‍ಗೆ ಶೇ. 6 ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಹೀಗೆ ಚೀನಾ ವ್ಯಾಪಾರದಲ್ಲಿ ತನ್ನ ಇಡೀ ವಿಶ್ವದಲ್ಲೇ ಕಬಂಧಬಾಹುವನ್ನು ಚಾಚಿಕೊಂಡಿದೆ.

ನಮಗೆ ಚೀನಾವನ್ನು ನಿಜವಾಗಿಯೂ ದುರ್ಬಲಗೊಳಿಸಬೇಕಿದ್ದರೆ ಅದಕ್ಕೆ ಎಲ್ಲಿ ಪೆಟ್ಟು ಕೊಡಬೇಕೋ ಅಲ್ಲಿಗೇ ಕೊಡಬೇಕು….

ಚೀನಾವನ್ನು ಈ ರೀತಿ ದುರ್ಬಲಗೊಳಿಸಬಹುದು. ಹೇಗಂತೀರಾ? ಭಾರತದ ಜನಸಂಖ್ಯೆ 132 ಕೋಟಿ. ಆದ್ದರಿಂದ ಭಾರತ ಸಹಜವಾಗಿಯೇ ವಿಶ್ವದ ಬಹುದೊಡ್ಡ
ಮಾರುಕಟ್ಟೆ. ಚೀನಾದಲ್ಲಿ ಜಾಸ್ತಿ ಜನಸಂಖ್ಯೆ ಇದ್ದರೂ ಅವರನ್ನು ವಿಶ್ವದ ಮಾರುಕಟ್ಟೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಯಾಕೆಂದರೆ ಅವರು ತನ್ನ ಉತ್ಪನ್ನಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಆದ್ದರಿಂದ ಭಾರತ ಕೂಡಾ ಭಾರತದಲ್ಲಿ ವಸ್ತುಗಳನ್ನು ತಯಾರಿಸಲು ಆರಂಭಿಸುವ ಅಗತ್ಯವಿದೆ. ಭಾರತದಲ್ಲಿ ಜನಸಂಖ್ಯೆ ಇರುವುದರಿಂದ ಭಾರತದಲ್ಲೇ ವಸ್ತುಗಳನ್ನು ತಯಾರಿಸಿ ವಿಶ್ವ ಮಾರುಕಟ್ಟೆಗೆ ಬಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಕೇಂದ್ರದ ಮೋದಿ ಸರಕಾರ ಈ ಯೋಜನೆ ಕಾರ್ಯಗೊಳಿಸುವ ನಿಟ್ಟಿನಲ್ಲಿ `ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಆರಂಭಿಸಿದೆ. ಇದು ಗೆದ್ದರೆ ನಾವು ನಿಜವಾಗಿಯೂ ಚೀನಾದ ಜೊತೆ ಸ್ಪರ್ಧಿಸಬಹುದು. ದೇಶದಲ್ಲೇ ಕಂಪನಿಗಳನ್ನು ಸ್ಫಾಪಿಸಿ ಇಲ್ಲೇ ಉತ್ಪಾದಿಸಿ ಉತ್ಪಾದಕರಿಗೆ ಸ್ಫೂರ್ತಿ ನೀಡಿ ಅವರನ್ನು ಬೆಳೆಸಿ ಭಾರತದ ಮಾರುಕಟ್ಟೆಯನ್ನು ಹೆಚ್ಚಿಸುವ ಯೋಜನೆ ಇದು. ಆದರೆ ಕೆಲವು ಕಂಪೆನಿಗಳು ಬೇರೆ ದೇಶದಿಂದ ಬಿಡಿಭಾಗಗಳನ್ನು ತಂದು ಇಲ್ಲಿ ಜೋಡಿಸಿ ಅವುಗಳನ್ನು ಭಾರತದಲ್ಲಿ ತಯಾರಿಸಿದ್ದು ಎಂದು ಮೋಸ ಮಾಡುತ್ತಿದೆ.

ಮೇಕ್ ಇನ್ ಇಂಡಿಯಾ ಯಶಸ್ವಿಯಾಗಬೇಕಾದರೆ… ಉತ್ಪಾದಕ ಕಂಪೆನಿಗಳಿಗೆ ಜಾಸ್ತಿ ಪ್ರೋತ್ಸಾಹ ನೀಡಬೇಕು… ರಸ್ತೆ ಸೇರಿ ಎಲ್ಲಾ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಬೇಕು.. ಭ್ರಷ್ಟಾಚಾರ ಕೊನೆಗೊಳ್ಳಬೇಕು!ಶ್ರಮವಹಿಸಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಬೇಕು.. ಲಾಬಿ ಮಾಡುವುದು ನಿಲ್ಲಬೇಕು. ಗುಣಮಟ್ಟದ ವಸ್ತುಗಳನ್ನು ತಯಾರಿಸಬೇಕು.. ಹಣಕಾಸು ಪೂರೈಕೆ ಜೊತೆಗೆ ಪಾರದರ್ಶಕ ಕೆಲಸ..!

ಇಂಡಿಯಾದಲ್ಲಿ ಮೇಕ್ ಇನ್ ಇಂಡಿಯಾ ಯಶಸ್ವಿಯಾಗಬೇಕಾದರೆ…
ಭಾರತದ ಆರ್ಥಿಕತ ಭರದಿಂದ ಸಾಗುತ್ತಿದ್ದು, ದೇಶದ ಬೆಳವಣಿಗೆಯ ದರ ಶೇ 7.6 ಇದೆ. ಐಎಂಎಫ್ ಪ್ರಕಾರ 2020ರ ತನಕ ಇದೇ ರೀತಿ ಮುಂದುವರಿಯಲಿದೆ.
ಹಾಂಕ್‍ಕಾಂಗ್ ಟ್ರೇಡ್ ಡೆವಲಪ್‍ಮೆಂಟ್ ಕೌನ್ಸಿಲ್ ಪ್ರಕಾರ, ಭಾರತದಲ್ಲಿ ಉತ್ಪಾದನೆಗೆ ಸೂಕ್ತ ಅವಕಾಶವಿದ್ದು, ಅದಕ್ಕೆ ತಕ್ಕ ಪರಿಸರವನ್ನು ಭಾರತ ನಿರ್ಮಿಸಬೇಕು ಎಂದು ಅಭಿಪ್ರಾಯಿಸಿದೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ವ್ಯವಹಾರ ನಡೆಸಲು ಪೂರಕ ವ್ಯವಸ್ಥೆಯನ್ನು ಕಲ್ಪಿಸುವುದು ಸರಕಾರದ ಕರ್ತವ್ಯ.ವಿದೇಶಿ ಹೂಡಿಕೆ ದೇಶದಲ್ಲಿ ಹೆಚ್ಚುತ್ತಿದೆಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಇವೆಲ್ಲಾ ಭಾರತದ ಭರವಸೆಯ ಯೋಜನೆಗಳಾಗಿವೆ.ದೇಶದಲ್ಲಿ ಶೇ. 65 ಯುವಕರೇ ಇದ್ದು, ಎಲ್ಲರನ್ನೂ ಬಳಕೆ ಮಾಡಿದರೆ ಎಲ್ಲಾ ಯೋಜನೆಗಳು ಸುಲಭವಾಗಿ ಯಶಸ್ವಿಯಾಗುತ್ತದೆ.

ಚೀನಾ ದೇಶದ ಬೆಳವಣಿಗೆಯಾಗಲು ತನ್ನ ದೇಶದ ಆರ್ಥಿಕ ನೀತಿಗಳನ್ನು ಮುಂಚಿತವಾಗಿಯೇ ಬದಲಾವಣೆ ಮಾಡಿ ಅದನ್ನು ಕಾರ್ಯಕತಗೊಳಿಸಿತು. ಅಭಿವೃದ್ಧಿಯಲ್ಲಿ ಭಾರತವನ್ನು ಹಿಂದಕ್ಕೆ ಹಾಕಿತು. ಅವರು ಕಠಿಣವಾಗಿ ಕೆಲಸ ಮಾಡಿದ ಪರಿಣಾಮ ತನ್ನ ದೇಶ ವಿಶ್ವದಲ್ಲೇ ಎರಡನೇ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಿತು. ಆದರೆ ಚೀನಾದಲ್ಲಿ ಪ್ರಜಾಪ್ರಭುತ್ವವನ್ನು ಕೊಂದು ಕಂಪೆನಿಯನ್ನು ಬೆಳೆಸಲಾಯಿತು.

ಇನ್ನೊಂದು ಮುಖ್ಯವಾದ ವಿಷಯವೇನೆಂದರೆ, ಡಬ್ಲ್ಯುಟಿಓ ನಿಯಮದ ಪ್ರಕಾರ ಭಾರತ ಚೀನಾದ ವಸ್ತುಗಳನ್ನು ಬಹಿಷ್ಕರಿಸುವಂತಿಲ್ಲ. ಆದರೆ ಆಂಟಿ ಡಂಪಿಂಗ್ ಆಕ್ಟ್ ಪ್ರಕಾರ ಚೀನಾದ ವಸ್ತುಗಳು ಗುಣಮಟ್ಟದಲ್ಲಿ ಚೆನ್ನಾಗಿಲ್ಲ ಎಂದು ತಿರಸ್ಕರಿಸಬಹುದು. ಚೀನಾ ಈಗಾಗಲೇ ದೀಪಾವಳಿಗೆ ವಸ್ತುಗಳನ್ನು ಪೂರೈಸಲು ಒಪ್ಪಂದ
ಮಾಡಿಕೊಂಡಿದೆ. ಆದರೂ ಇಂದಿನ ಆಂದೋಲನದ ಕಾರಣದಿಂದ ಚೀನಾದ ಸಗಟು ವ್ಯಾಪಾರ ಭಾರತದಲ್ಲಿ ಶೇ. 20ರಷ್ಟು ಕಡಿಮೆಯಾಗಿದೆ.
ಚೀನಾ ವಸ್ತುಗಳ ಬಹೀಷ್ಕಾರ ಮುಂದಿನ ದಿನಗಳಲ್ಲಿ ಖಂಡಿತಾ ಚೀನಾ ಆರ್ಥಿಕತೆ ಮೇಲೆ ಪ್ರಭಾವ ಬೀರುತ್ತದೆ. ಆದರೆ ಭಾರತವನ್ನು ಜಾಗತಿಕ ಉತ್ಪಾದನಾ
ಕೇಂದ್ರವನ್ನಾಗಿ ಮಾಡಿಕೊಂಡು ನಮ್ಮೆಲ್ಲರ ಕನಸನ್ನು ನನಸು ಮಾಡಬೇಕು.

ಸುಧೀರ್ ಚೌದ್ರಿಯವರು ಈ ವಿಷಯದ ಬಗ್ಗೆ ಏನು ಹೇಳಿದ್ದಾರೆಂದು ಈ ವಿಡಿಯೋದಲ್ಲಿ ನೋಡಿ.

-ಚೇಕಿತಾನ

Tags

Related Articles

Close