ಅಂಕಣ

IAS ಅಧಿಕಾರಿಗೆ ರಾತ್ರಿ 10 ಗಂಟೆಗೆ ನರೇಂದ್ರ ಮೋದಿಯರಿಂದ ಕರೆ ಬಂತು , ಮುಂದೇನಾಯ್ತು ಇಲ್ಲಿದೆ ಓದಿ

37K Shares

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿ ವ್ಯಕ್ತಿ ಎಂದು ಕರೆಸಿಕೊಂಡವರೇ ಪ್ರಧಾನಿ ನರೇಂದ್ರ ಮೋದಿ. ತಮ್ಮ ಕೆಲಸದ ಬಗ್ಗೆ ತಾವು ತೋರುವ ಕಾಳಜಿ, ದೇಶದ ಬಗೆಗೆ ತೋರುವ ಕಾಳಜಿಯನ್ನು ಎಲ್ಲರೂ ಮೆಚ್ಚಲೇಬೇಕು. ತನ್ನ ಕೆಲಸದ ವಿಚಾರದಲ್ಲಿ ಮೋದಿಯ ದಿಟ್ಟ ನಿಲುವು ಎಲ್ಲವೂ ಗೊತ್ತಿರುವಂತಹದೇ. ಅಂತಹದ್ರಲ್ಲಿ ತಮ್ಮ ಕಾರ್ಯ ದಕ್ಷತೆ ಒಂದು ಸುದ್ದಿ ಇದೀಗಾ ವೈರಲ್ ಆಗಿದೆ.
ಕೇವಲ 6 ದಿನಗಳಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯಿತು ಎಂದರೆ ನೀವು ನಂಬ್ತೀರಾ?. ಆದರೆ ನೀವು ನಂಬಲೇ ಬೇಕಾದಂತಹ ಸ್ಟೋರಿ ಇದು. ತ್ರಿಪುರದಲ್ಲಿ
ನಡೆದಿರುವಂಹ ಘಟನೆ ಇದಾಗಿದ್ದು, ಕ್ಯುರಾದಲ್ಲಿ ವೈರಲ್ ಆಗಿದೆ.ಹೌದು ಪುಷ್ಪಕ್ ಚಕ್ರಬೊರ್ತಿ ಎನ್ನುವವರು ತ್ರಿಪುರದಲ್ಲಿ ನಡೆದ ರಸ್ತೆ ದುರಸ್ಥೀಕರಣದ ಬಗ್ಗೆ ಬರೆದಿದ್ದಲ್ಲದೇ ಕ್ಯುರಾದಲ್ಲಿ ಶೇರ್ ಮಾಡಿದ್ದಾರೆ. ತ್ರಿಪುರದಲ್ಲಿನ ಎನ್‍ಹೆಚ್208ಎ ಅನ್ನು ಕೇವಲ 6 ದಿನಗಳಲ್ಲಿ ದುರಸ್ತಿ ಮಾಡಲು ಕಾರಣವಾಯಿತು ಎಂಬುವುದರ ಬಗ್ಗೆ ವಿವರಿಸಿದ್ದಾರೆ.

ಪುಷ್ಪಕ್ ಚಕ್ರಬೊರ್ತಿಯವರ ತಂದೆಗೆ ಚಿರಪರಿಚಿತರಾದ ಒಬ್ಬ ಐಎಎಸ್ ಅಧಿಕಾರಿ ಇದೀಗಾ ಉತ್ತರ ತ್ರಿಪುರದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇವರಿಗೆ ಜುಲೈ 21ರಂದು ಸುಮಾರು 10 ಗಂಟೆಯ ಹೊತ್ತಿಗೆ ಒಂದು ಅನೀರಿಕ್ಷಿತ ಕರೆ ಬಂತು. ಅಲ್ಲದೇ ತಡರಾತ್ರಿಯಲ್ಲಿ ಬಂದಿದ್ದ ಈ ಕರೆಯೊಂದರ ಬಗ್ಗೆ ಬಹಳಷ್ಟು ಆಶ್ಚರ್ಯವು ಆಗಿತ್ತು. ತನಗೆ ಬಂದ ಕರೆಯನ್ನು ಸ್ವೀಕರಿಸಿದಾಗ ಒಬ್ಬ ಅಪರಿಚಿತ ವ್ಯಕ್ತಿಯ ಕರೆ ಆದಾಗಿತ್ತು. ಕರೆ ಮಾಡಿದ ವ್ಯಕ್ತಿ ತನ್ನ ಯುವ ಧ್ವನಿಯಲ್ಲಿ ತಡರಾತ್ರಿ ಕರೆಯನ್ನು ಮಾಡಿದ್ದಕ್ಕಾಗಿ ಕ್ಷಮೆಯನ್ನು ಯಾಚಿಸಿ, ನೀವು ಐದು ನಿಮಿಷ ಬಿಡುವಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಳಿ ಮಾತಾನಾಡಲು ಇಚ್ಚಿಸಿದ್ದಾರೆ ಎಂದರು.

ಪ್ರಧಾನಿ ಮೋದಿಯವರ ಕರೆ ಎಂದಾಗ ಆ ಕ್ಷಣಕ್ಕೆ ಇವರ ಮೆದುಳು ಕೆಲವು ಸೆಕೆಂಡುಗಳ ಕಾಲ ಸ್ಥಬ್ಧಗೊಂಡಿತ್ತು. ಅಲ್ಲದೇ ಇವರ ಕಾಲು ನಡುಗಲು ಶುರು ಮಾಡಿತು. ಅಲ್ಲದೇ ಮರುತ್ತರವನ್ನು ಕೊಡಲು ತಡವರೆಸಿದ ಇವರು ಸೌಮ್ಯವಾಗಿ ಹೌದು ಎಂದು ಪಿಸುಗುಟ್ಟಿದರು. ಆಗ ಕರೆ ಮೋದಿಯವರಿಗೆ ವರ್ಗಾವಣೆಗೊಂಡಾಗ ಇದು ಪ್ರಧಾನಿ ನರೇಂದ್ರ ಮೋದಿಯವರ ಕರೆ ಎಂದು ತಿಳಿಯಿತು. ಪ್ರಧಾನಿ ನರೇಂದ್ರ ಮೋದಿ ಇವರಲ್ಲಿ ಮಾತಾನಾಡಿ ತಡ ರಾತ್ರಿಯಲ್ಲಿ ಕರೆಯನ್ನು ಮಾಡಿದ್ದಕ್ಕಾಗಿ ಕ್ಷಮೆಯನ್ನು ಯಾಚಿಸಿ, ನಾನು ಇದೀಗ ನಿತಿನ್ ಗಡ್ಕರಿಯ ಜೊತೆ ಮೀಟಿಂಗ್‍ನ್ನು ಮುಗಿಸಿದ್ದು, ರಾಷ್ಟ್ರೀಯ ಹೆದ್ದಾರಿ 208-ಎ ತ್ರಿಪುರದಿಂದ ದೇಶದ ಉಳಿದ ಭಾಗಗಳಿಗೆ ಸಂಪರ್ಕವನ್ನು ಹೊಂದಿದೆ. ಈ ಕಾರಣಕ್ಕಾಗಿ ಇದರ ದುರಸ್ಥಿಕಾರ್ಯವನ್ನು ಕೈಗೊಳ್ಳಲು ನಿತಿನ್ ಗಡ್ಕರಿಯವರಿಗೆ ನಿಮ್ಮಿಂದ ಸಹಾಯ ಬೇಕಾಗಿದೆ ಎಂದಾಗ ಇವರಿಗೆ ಅರೆಕ್ಷಣ ಯಾವ ರೀತಿ ಪ್ರತಿಕ್ರಿಯಿಸುವುದು ಎಂದು ನೆನಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ತದನಂತರದಲ್ಲಿ ಮೋದಿ ಜಿಒಐ ಬಗ್ಗೆ ಮಾತಾನಾಡಿ ಅಸ್ಸಾಂ ಮತ್ತು ತ್ರಿಪುರ ಸರ್ಕಾರಗಳ ಜೊತೆ ಮಾತುಕತೆ ನಡೆಸಲಾಗುವುದು ಮತ್ತು ಈ ಯೋಜನೆಯ ಮೇಲ್ವಿಚಾರಣೆಯ ಬಗ್ಗೆ ಸಹಾಯ ಮಾಡಲಾಗುವುದು ಎಂದರು.

ಈ ಕುರಿತಂತೆ ಐಎಎಸ್ ಅಧಿಕಾರಿಯವರಿಗೆ ನಿದ್ದೆಯೇ ಸುಳಿಯಲಿಲ್ಲವಂತೆ. ಇವರಿಗೆ ದೂರವಾಣಿ ಕರೆಯಲ್ಲಿ ಮಾತಾನಾಡಿದ ಮೋದಿ ಧ್ವನಿ ಮನಸ್ಸಿನಲ್ಲಿ
ಪ್ರತಿಧ್ವನಿಸುತ್ತಲೇ ಇತ್ತು. ಅದಲ್ಲದೇ ರಾತ್ರಿ ಈಡೀ ಮೋದಿ ತನ್ನಲ್ಲಿ ಮಾತಾನಾಡಿರುವುದು ನಿಜವೂ ಭ್ರಮೆಯೂ ಎಂಬುದರಲ್ಲಿ ಇದ್ದುದಲ್ಲದೇ ಮೋದಿ ಹೇಳಿದ್ದನ್ನೇಲ್ಲ
ಮರುಯೋಚನೆ ಮಾಡಲು ಶುರು ಮಾಡಿದ್ದರು.

ಮಾರನೇಯ ದಿನದಂದು ತನ್ನ ಕಛೇರಿಗೆ ತಲುವ ಹೊತ್ತಿನಲ್ಲಿ ತ್ರಿಪುರದಿಂದ, ಅಸ್ಸಾಂ ಸರ್ಕಾರ ಮತ್ತು ಜಿಒಐ ಹೀಗೆ ಕೆಲವು ಮಾತುಗಳು ಕೇಳಿ ಬಂದವು. ನಂತರದಲ್ಲಿ ತ್ರಿಪುರದ 15 ಕಿ.ಮೀ ರಸ್ತೆಯ ದುರಸ್ಥಿಕರಣಕ್ಕೆ ನಿಧಿ ಬಿಡುಗಡೆ ಮಾಡಿದ್ದಲ್ಲದೇ ತನ್ನ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆ ಜಾಗದಲ್ಲಿ ಅಸ್ಸಾಂ ಸರಕಾರ ಒದಗಿಸಿದ 6 ಜೆಸಿಬುಗಳು ಅಲ್ಲಿ ನಿಂತಿದ್ದವು.

ತ್ರಿಪುರದ ಜನತೆಗೆ ಹೆದ್ದಾರಿಯ ಅವಶ್ಯಕತೆಗಳು ಇದ್ದುದರಿಂದ ನಂತರದ 4 ದಿನಗಳಲ್ಲಿ 300ಕ್ಕೂ ಹೆಚ್ಚು ಟ್ರಕ್‍ಗಳಲ್ಲಿ ತುಂಬಿದ ಸರಕು ಸಾಮಾಗ್ರಿಗಳ ಜೊತೆ
ಸ್ಥಳಿಯ ಕಾರ್ಮಿಕರು ಬಂದಿದ್ದರು. ಅಸ್ಸಾಂ ಮತ್ತು ತ್ರಿಪುರದಿಂದ ಬಂದ ಪಿಡಬ್ಲ್ಯುಡಿ ಅಧಿಕಾರಿಗಳು ಈ ಒಂದು ಸ್ಥಳಕ್ಕೆ ಆಗಮಿಸಿದ್ದರು.

ಇತ್ತೀಚೆಗೆ ನಿತಿನ್ ಗಡ್ಕರಿ ಇವರನ್ನು ಕರೆದು ,ಇವರ ಗಮನಾರ್ಹ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದ್ದರು. ಅಲ್ಲದೇ ಎನ್‍ಹೆಚ್-44ನ ದುರಸ್ಥಿ ಅತೀ ಶೀಘ್ರದಲ್ಲಿ ಯುದ್ಧದ ರೀತಿಯಲ್ಲಿ ಆಗಲಿದೆ ಹಾಗೂ ದೆಹಲಿಯಲ್ಲಿ ಪಿಎಂಒ ಕಛೇರಿಗೆ ನಾನು ಇರುವಾಗ ಭೇಟಿ ನೀಡಿ ಎಂದಿದ್ದಾರೆ.

“ಶೌರ್ಯ ಹಾಗೂ ಮಹತ್ವದ ಕಥೆಗಳನ್ನು ನಮ್ಮ ಭಾರತ ಒಳಗೊಂಡಿದೆ. ಅದಕ್ಕಾಗಿ ನಾನು ಅದರ ಬಗ್ಗೆ ಹೆಮ್ಮೆ ಪಡುತ್ತೇನೆ. ಕೇಂದ್ರ ಸರ್ಕಾರ ತನ್ನ ಜನರ ಬಗ್ಗೆ
ಎಷ್ಟೊಂದು ಕಾಳಜಿಯನ್ನು ವಹಿಸುತ್ತೇ ಅನ್ನೊದನ್ನು ಸೂಚಿಸುತ್ತದೆ ಈ ಒಂದು ನಿದರ್ಶನ. ದೇಶಾದಂತ್ಯ ಇರುವ ಇಂತಹ ನಿದರ್ಶನಗಳನ್ನು ಪುನರಾವತಿಸಲು
ನಾನುಇಚ್ಚೆ ಪಡುತ್ತೇನೆ” ಎಂದು ಪುಷ್ಪಕ್ ಚಕ್ರಬೊರ್ತಿ ಕ್ಯುರಾದಲ್ಲಿ ಹೇಳಿದ್ದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನರೇಂದ್ರ ಮೋದಿಯವರು ತಮ್ಮ ಆಡಳಿತ್ಮಾಕ ವಿಷಯದಲ್ಲಿ ತಾವು ತೋರುವ ಶ್ರದ್ಧೆಯನ್ನು ಮೆಚ್ಚಲೇಬೇಕು. ಕರ್ತವ್ಯದ ಮೇಲೆ ತಾವು ತೋರುವ ಅಪಾರವಾದ ಕಾಳಜಿ ಇನ್ನೊಬ್ಬರಿಗೆ ಸ್ಫೂರ್ತಿಯಾಗುವುದಂತೂ ಖಂಡಿತ….

ಮೂಲ : Read the original link!

-ಸರಿತಾ

37K Shares
Tags

Related Articles

Close