ಅಂಕಣಪ್ರಚಲಿತ

ನಿಮ್ಮ ಕ್ಷೇತ್ರದ ಜವಾಬ್ದಾರಿ ಯಾವ ಬಿಜೆಪಿ ಶಾಸಕರಿಗೆ ಹಾಗೂ ಸಂಸದರಿಗೆ ಹಂಚಿಕೆಯಾಗಿದೆ ಗೊತ್ತೇ?! ಅಮಿತ್ ಷಾ ಎಂಬ ಜಾದೂಗಾರನ ಗೇಮ್-ಪ್ಲಾನ್!!!

ಭಾರತದ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಅಮಿತ್ ಷಾ ಅವರಂತಹ ಕುಶಲ ರಾಜಕೀಯ ತಜ್ಞ ಮತ್ತೊಬ್ಬರಿರಲಾರರು. ಅವರ ಕಾರ್ಯತಂತ್ರದ ಬಗ್ಗೆ ಎಷ್ಟೇ ಟೀಕೆ ಟಿಪ್ಪಣಿಗಳೇನೇ ಇರಲಿ, ಪ್ರತಿ ಚುನಾವಣೆಯಲ್ಲಿ ಅವರು ಸಾಧಿಸಿ ತೋರುತ್ತಿರುವ ಫಲಿತಾಂಶ ಮಾತ್ರ ಎಲ್ಲರನ್ನೂ ಬೆರಗು ಮಾಡುತ್ತಿರುವುದಂತೂ ನಿಜ.!! ಹೀಗಾಗಿ ಮುಂದಿನ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಷಾ ಹಾಗೂ ಪ್ರಧಾನಿ ಮೋದಿ ಪಕ್ಕಾ ಪ್ಲಾನ್ ಮಾಡಿದ್ದಾರೆ.!!

ಕರ್ನಾಟಕದ ಹಿಂದೂಗಳ ಪಾಲಿಗೆ ಅಸಹ್ಯವನ್ನು ಮೂಡಿಸಿರುವ ಕಾಂಗ್ರೆಸ್ ಸರಕಾರಕ್ಕೀಗ ಬಿಜೆಪಿ ಸರಕಾರ ಸವಾಲೊಡ್ಡುವಂತೆ ಮಾಡಿದೆ. ಜಾತ್ಯಾತೀತ ಜನತಾದಳದ ದೇವೇಗೌಡರು ಕರ್ನಾಟಕವನ್ನು ಹಿಂದೂ ರಾಜ್ಯವಾಗಲು ಬಿಡಲ್ಲ ಅಂತಾ ಹೇಳಿದ್ದಾರೆ.. ಇಂತವರಿಗೆಲ್ಲಾ ಸವಾಲೊಡ್ಡುವಂತಹ ಯೋಜನೆಯನ್ನು ಅಮಿತ್ ಷಾ ಮಾಡಿದ್ದಾರೆ… ಒಟ್ಟಿನಲ್ಲಿ ಹಿಂದೂಗಳನ್ನು ಎಷ್ಟು ತುಳಿಯೋಕೆ ಸಾಧ್ಯವೋ ಅಷ್ಟು ಗೌಡರು ತುಳಿದಿದ್ದಾರೆ…ತಮ್ಮನ್ನು ಬಿಟ್ಟು ಬೇರಾರು ಬುದ್ಧಿವಂತರಿಲ್ಲ ಎಂದು ತಿಳಿದುಕೊಂಡಿರುವ ಗೌಡರಿಗೆ ಪಾಪ ಅರಳು ಮರಳಾಗಿದೆ ಏನೋ?

ಹಲವು ಕೃತ್ಯಗಳಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷದ ಅದರ ಸೊಕ್ಕನ್ನು ಇಳಿಸಲು ಬಿಜೆಪಿ ಸಖತ್ತಾಗೇ ಪ್ಲ್ಯಾನ್ ಮಾಡಿದೆ.!! ಈ ಬಾರಿ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ
ಅವರು ಮಾಡಿದ ಪ್ಲಾನ್ ನೋಡಿ ಕಾಂಗ್ರೆಸ್ ಪಕ್ಕಾ ದಂಗಾಗಿ ಹೋಗಿದೆ…! ಬಿಜೆಪಿಯನ್ನು ಗೆಲ್ಲಿಸಲು ಅಮಿತ್ ಶಾ ಈಗ ರಣತಂತ್ರವನ್ನೇ ರೂಪಿಸಿದ್ದಾರೆ.!! ಈ
ರಣತಂತ್ರ ಕಾಂಗ್ರೆಸ್ ಹಾಗೂ ಇತರ ಪಕ್ಷಗಳನ್ನು ಧೂಳೀಪಟ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ..

ಸಮೀಕ್ಷಾ ವರದಿಗಳನ್ನು ಗಮನಿಸಿರುವ ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರು ರಾಜ್ಯದ ಹಲವು ದಿಗ್ಗಜ ನಾಯಕರ ಕ್ಷೇತ್ರ ಬದಲಾವಣೆ ಮಾಡಲು
ಹೊರಟಿದ್ದಾರೆ. ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಕಡೆಗಳಲ್ಲಿ ರಾಜ್ಯದ ನಾಯಕರ ವರ್ಚಸ್ಸು, ಜಾತಿ ಲೆಕ್ಕಾಚಾರ ಇತ್ಯಾದಿಗಳನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಬಿಜೆಪಿ ಮುಖಂಡರು ತನ್ನ ಸ್ವಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು. ಅಲ್ಲದೆ ಸ್ವ ಕ್ಷೇತ್ರದಲ್ಲಿಯೂ ತನ್ನ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎನ್ನುವುದು ಷಾ ಗೇಮ್ ಪ್ಲಾನ್…!! ಇದರಿಂದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದರಿಂದ ರಾಜ್ಯದಲ್ಲಿ ಅನಾಯಾಸವಾಗಿ ಸರಕಾರ ರಚಿಸಬಹುದು. ಚುನಾವಣೆಯಲ್ಲಿ ಲೆಕ್ಕಾಚಾರ ಪ್ರಮುಖ ಪಾತ್ರವಹಿಸುತ್ತದೆ. ಇದೇ ಲೆಕ್ಕಾಚಾರವನ್ನಿಟ್ಟುಕೊಂಡು ಈ ಪ್ಲಾನ್ ರೂಪಿಸಲಾಗಿದೆ.!!

ಹಾಗಾದರೆ ಬಿಜೆಪಿಯ ಅಮಿತ್ ಶಾ ಮಾಡಿರುವ ಪ್ಲಾನ್ ಆದರೂ ಯಾವುದು… ಯಾವ ಹಾಲಿ ಶಾಸಕರಿಗೆ ಹಾಗೂ ಸಂಸತ್ ಸದಸ್ಯರಿಗೆ ಯಾವ ಕ್ಷೇತ್ರ
ಹಂಚಿಕೆಯಾಗಿದೆ ಹಾಗೂ ಉಸ್ತವಾರಿಯನ್ನು ನೀಡಲಾಗಿದೆ ಎಂಬ ಪೂರ್ಣ ಮಾಹಿತಿ ನಮಗೆ ದೊರೆತಿದೆ….

224 constituency Incharge Final list

ಕರ್ನಾಟಕದಲ್ಲಿ ಕ್ಷೇತ್ರವಿಂಗಡನೆ, ಜಾತಿ ಲೆಕ್ಕಾಚಾರ, ರಾಜ್ಯದ ಜನತೆಯ ದೃಷ್ಠಿಕೋನವನ್ನಿಟ್ಟುಕೊಂಡು, ಹಾಗೂ ಸಿದ್ದರಾಮಯ್ಯ ಸರಕಾರದ ದೌರ್ಬಲ್ಯದ ಬಗ್ಗೆ ಸಮೀಕ್ಷೆ ನಡೆಸಿ ಹಾಗೂ ಸಾಕಷ್ಟು ಅಧ್ಯಯನ ನಡೆಸಿ ಬಿಜೆಪಿಯನ್ನು ರಾಜ್ಯದಲ್ಲಿ ಗೆಲ್ಲಿಸಲು ಉಪಯೋಗವಾಗುವಂತಹ ಆಗುವಂತಹ ಯೋಜನೆಗಳನ್ನೇ ಮಾಡಿದ್ದಾರೆ.

ಮೋದಿ ಸರಕಾರದ ಬದಲಾವಣೆಯನ್ನು ಸಹಿಸಲಾಗದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಪದೇ ಪದೇ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲು ಅನೇಕ
ಪ್ಲಾನ್‍ಗಳನ್ನು ಮಾಡುತ್ತಾ ಬರುತ್ತಿದೆ. ಅದಕ್ಕಾಗಿಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಗಳನ್ನು ಅರ್ಹ ಅಭ್ಯರ್ಥಿಗಳಿಗೆ ನೀಡುವ
ಮೂಲಕ ಪಕ್ಷವನ್ನು ನಿಬ್ಬೆರಗಾಗಿಸುವುದು ಬಹುತೇಕ ಖಚಿತವಾಗಿದೆ.

-ಶೃಜನ್ಯಾ

Tags

Related Articles

Close