ನಿವೃತ್ತಿ ಯೋಜನೆ ಅಡಿಯಲ್ಲಿ ಹೆಚ್ಚೆಚ್ಚು ಜನರು ಒಳಗೊಳ್ಳುವಂತೆ ಮಾಡಿ ನಿವೃತ್ತಿ ಭದ್ರತೆಯನ್ನು ಒದಗಿಸುವುದಕ್ಕೋಸ್ಕರ ಮೋದಿ ಸರ್ಕಾರವು ಅಸಂಘಟಿತ ವಲಯದ ಉದ್ಯೋಗಿಗಳ ವಿಮೆ ಮತ್ತು ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು “ಅಟಲ್ ಪಿಂಚಣಿ ಯೋಜನೆ”ಯನ್ನು ಜಾರಿಗೆ ತಂದಿದ್ದಾರೆ!! ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಇಲ್ಲಿದೆ ಕೆಲ ಮಾಹಿತಿ:
ಮೋದಿ ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದಾದ ಅಟಲ್ ಪಿಂಚಣಿ ಯೋಜನೆ ಅಸಂಘಟಿತ ವಲಯದ ಉದ್ಯೋಗಿಗಳ ವಿಮೆ ಮತ್ತು ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದಾಗಿ ಜಾರಿಗೆ ತರಲಾಗಿದೆ!! ಇಂದಿನ ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬಗಳು ಮಾಯವಾಗಿ ಸಣ್ಣ ಕುಟುಂಬಗಳಾಗುತ್ತಿವೆ. ಅಷ್ಟೇ ಅಲ್ಲದೇ, ವೃದ್ಧಾಪ್ಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಸ್ವಾವಲಂಬಿ ಬದುಕು ಸಾಗಿಸಲು, ಆರ್ಥಿಕವಾಗಿ ಸದೃಢವಾಗಿರಲು ಪಿಂಚಣಿಗಾಗಿ ಉಳಿತಾಯ ಮಾಡುವುದು ಅತೀ ಅವಶ್ಯಕ!!
ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿರಿಸಿಕೊಂಡು ಈ ಯೋಜನೆಯನ್ನು ಸಿದ್ದಪಡಿಸಲಾಗಿದ್ದು, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿ.ಎಫ್.ಆರ್ ಡಿಎ) ಅಡಿಯಲ್ಲಿ ಯೋಜನೆಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿದೆ!!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹೆಣ್ಣು ಮಕ್ಕಳ ಆರ್ಥಿಕ ಭದ್ರತೆಗೆ ಜನಪ್ರಿಯ ಸುಕನ್ಯಾ ಸಮೃದ್ಧಿ ಉಳಿತಾಯ ಯೋಜನೆಯನ್ನು
ಜಾರಿಗೊಳಿಸಿದ ನಂತರ, ಇದೀಗ ಮೂರು ಮಹತ್ವದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಮೇ 9ರಂದು ಚಾಲನೆ ನೀಡಿದ್ದರು. ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆ ಎಂಬ ಈ ಮೂರು ಯೋಜನೆಗಳು ಅಸಂಘಟಿತ ವಲಯದ ಉದ್ಯೋಗಿಗಳ ವಿಮೆ ಮತ್ತು ಆರ್ಥಿಕ ಭದ್ರತೆ ಉದ್ದೇಶವನ್ನು ಒಳಗೊಂಡಿದೆ. ಮೊದಲೆರಡು ಯೋಜನೆಗಳು ಕೈಗೆಟಕುವ ದರದಲ್ಲಿ ವಿಮೆ ಸೌಲಭ್ಯ ನೀಡಿದರೆ ಅಟಲ್ ಪಿಂಚಣಿ ಯೋಜನೆ ಕನಿಷ್ಠ 1,000 ರೂ.ಗಳಿಂದ 5,000 ರೂ. ತನಕ ಖಾತರಿಯ ಪಿಂಚಣಿ ಸೌಲಭ್ಯವನ್ನು ಒದಗಿಸಲಿದೆ.
ಏನಿದು ಅಟಲ್ “ಅಟಲ್ ಪಿಂಚಣಿ ಯೋಜನೆ(ಎಪಿವೈ)”??
ಈ ಹಿಂದಿನ ಸರಕಾರ ಜಾರಿಗೊಳಿಸಿದ್ದ ಸ್ವಾವಲಂಬನ್ ಎಂಬ ಯೋಜನೆಯ ಬದಲಿಗೆ ಜಾರಿಯಾಗಿರುವ ಅಟಲ್ ಪಿಂಚಣಿ ಯೋಜನೆಯಲ್ಲಿ ಅಸಂಘಟಿತ ವಲಯದ ಉದ್ಯೋಗಿಗಳು ಮತ್ತು ಆದಾಯ ತೆರಿಗೆ ಇಲ್ಲದವರು 1 ಸಾವಿರರಿಂದ 5 ಸಾವಿರ ರೂಪಾಯಿ ತನಕ ಪಿಂಚಣಿಯನ್ನು ಇಳಿಗಾಲದಲ್ಲಿ ಪಡೆಯಬಹುದು. ಕಳೆದ ಕೇಂದ್ರ ಬಜೆಟ್‍ನಲ್ಲಿ ಘೋಷಣೆಯಾಗಿದ್ದ ಅಟಲ್ ಪಿಂಚಣಿ ಯೋಜನೆಯ ಉದ್ದೇಶ ಅಸಂಘಟಿತ ವಲಯದ ಉದ್ಯೋಗಿಗಳಿಗೆ ಮತ್ತು ಕಡಿಮೆ ಆದಾಯದ ಜನತೆಗೆ ಪಿಂಚಣಿಯನ್ನು ಒದಗಿಸುವುದು. ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಎಫ್‍ಆರ್‍ಡಿಎ) ಎನ್‍ಪಿಎಸ್ ಮಾದರಿಯಲ್ಲಿ ಈ ಪಿಂಚಣಿಯನ್ನು ಒದಗಿಸುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಕೈಗೆಟಕುವ ಚಿಲ್ಲರೆ ಹೂಡಿಕೆಯಿಂದ 1,000 ರೂಪಾಯಿಂದ 5,000 ರೂಪಾಯಿ ತನಕ ಖಾತರಿಯ ಕನಿಷ್ಠ ಪಿಂಚಣಿಯಲ್ಲಿ ಪಡೆಯಬಹುದು. ಕೇಂದ್ರ ಸರಕಾರವೇ ಇದಕ್ಕೆ ಗ್ಯಾರಂಟಿ ಕೊಡುತ್ತದೆ. ಭಿನ್ನ ಹೂಡಿಕೆಗೆ 1,000 ರೂಪಾಯಿ, 2000 ರೂಪಾಯಿ, 3,000 ರೂಪಾಯಿ, 4,000 ರೂಪಾಯಿ, ಮತ್ತು 5,000 ರೂಪಾಯಿಗಳ ಮಾಸಿಕ ಪಿಂಚಣಿಯನ್ನು 60 ವರ್ಷ ವಯಸ್ಸಾದಾಗ ಪಡೆಯಬಹುದು. ಪಿಂಚಣಿ ಚಂದಾದಾರರ ಜೀವನ ಪರ್ಯಂತ ಈ ಹಣ ಇವರ ಕೈಗೆ ಸಿಗುತ್ತದೆ. ಈಗ ಚಾಲ್ತಿಯಲ್ಲಿರುವ ಸ್ವಾವಲಂಬನ್ ಪಿಂಚಣಿ ಯೋಜನೆಯೂ ಅಟಲ್ ಯೋಜನೆಗೆ ವರ್ಗವಾಗುತ್ತದೆ!!
* ಬ್ಯಾಂಕ್ ಖಾತೆ ಹೊಂದಿದ 18 ರಿಂದ 40 ವರ್ಷದವರು ಈ ಯೋಜನೆಗೆ ಸೇರಬಹುದು.
* 60ವರ್ಷ ವಯಸ್ಸು ತುಂಬಿದ ನಂತರ ಪಿಂಚಣಿ ದೊರೆಯುತ್ತದೆ.
* 18ವರ್ಷ ತುಂಬಿದವರು 60ನೇ ವಯಸ್ಸಿಗೆ ರೂ.1000 ಪಿಂಚಣಿ ಬೇಕಾದರೆ, ರೂ.42 ಪ್ರತಿತಿಂಗಳು ಈಗಿನಿಂದಲೇ ತುಂಬಬೇಕು.
* ಹಾಗೆಯೇ ರೂ.5000ಪಿಂಚಣಿ ಬೇಕಾದರೆ ರೂ.210 ತುಂಬಬೇಕು.
* ಹೀಗೆ ಆಯಾ ವಯಸ್ಸಿಗನುಗುಣವಾಗಿ ಈ ದರವು ನಿಗದಿಯಾಗಿದೆ.
ಎಲ್ಲ ರಾಷ್ಟ್ರೀಕೃತ ಹಾಗೂ ಸರ್ಕಾರದ ನೋಂದಾಯಿತ ಬ್ಯಾಂಕ್ ಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದು!!
ಇನ್ನು ಈ ಯೋಜನೆಯನ್ನು, ಭಾರತದ ಯಾವುದೇ ನಾಗರಿಕ, 18ರಿಂದ 40 ವರ್ಷ ವಯೋಮಿತಿಯೊಳಗಿದ್ದರೆ ಅಟಲ್ ಪಿಂಚಣಿ ಯೋಜನೆಯ
ಚಂದಾದಾರನಾಗಬಹುದು. ಆದರೆ 40 ವರ್ಷ ದಾಟಿದವರಿಗೆ ಸಾಧ್ಯವಾಗುವುದಿಲ್ಲ!! ಏಕೆಂದರೆ ಇಲ್ಲಿ ಪಿಂಚಣಿ ಸಿಗಬೇಕಿದ್ದರೆ ಕನಿಷ್ಠ 20 ವರ್ಷಗಳ ಹೂಡಿಕೆ ಅಗತ್ಯ. ಜತೆಗೆ ಬ್ಯಾಂಕ್ ಉಳಿತಾಯ ಖಾತೆಯನ್ನು ತೆರೆದಿರಬೇಕು. ಖಾತೆ ತೆರೆಯುವ ಸಂದರ್ಭ ಮೊಬೈಲ್ ಸಂಖ್ಯೆಯನ್ನು ಕೊಡಬೇಕಾಗಿರುವುದು ಕಡ್ಡಾಯವಾಗಿದೆ!!
ಗಮನಿಸಬೇಕಾದ್ದೇನೆಂದರೆ, 2015ರ ಜೂನ್ 1ರಿಂದ 2015ರ ಡಿಸೆಂಬರ್ 31ರೊಳಗೆ ಈ ಯೋಜನೆಗೆ ಸೇರುವವರಿಗೆ ಮೊದಲ ಐದು ವರ್ಷ, ಅಂದರೆ
2015-16ರಿಂದ 2019-20ರ ತನಕ ಸರಕಾರ ಕೂಡ ವರ್ಷಕ್ಕೆ 1,000 ರೂ.ಗಳಂತೆ 5 ವರ್ಷಕ್ಕೆ 5,000 ರೂ. ತನ್ನ ಕೊಡುಗೆ ಜಮೆ ಮಾಡುತ್ತದೆ. ಐದು
ವರ್ಷಗಳ ನಂತರ ಕೂಡ ಯೋಜನೆ ಮುಂದುವರಿಯುತ್ತದೆ. ಆದರೆ ಸರಕಾರ ತನ್ನ ಕೊಡುಗೆ ಸೇರಿಸುವುದಿಲ್ಲ ಎನ್ನುತ್ತಾರೆ ಕೆನರಾ ಬ್ಯಾಂಕ್‍ನ ಮುಖ್ಯ ಪ್ರಧಾನ
ವ್ಯವಸ್ಥಾಪಕ ಎಸ್.ಎಸ್ ಭಟ್.!! ಈಗಾಗಲೇ ಯಾವುದೇ ಶಾಸನಾತ್ಮಕ ಸಾಮಾಜಿಕ ಭದ್ರತೆ ಯೋಜನೆಯಲ್ಲಿ ಇರುವವರಿಗೆ ಸರಕಾರದ ಐದು ವರ್ಷಗಳ ತನಕದ ಕೊಡುಗೆ ಅನ್ವಯವಾಗುವುದಿಲ್ಲ.
“ಅಟಲ್ ಪಿಂಚಣಿ ಯೋಜನೆ(ಎಪಿವೈ)” ಖಾತೆ ತೆರೆಯುವುದು ಹೇಗೆ?
ಉಳಿತಾಯ ಖಾತೆ ಇರುವ ಬ್ಯಾಂಕ್ ಶಾಖೆಗೆ ತೆರಳಿ ಸಂಬಂಧಿಸಿದ ಅರ್ಜಿ ಭರ್ತಿ ಮಾಡುವ ಮೂಲಕ ಎಪಿವೈ ಖಾತೆ ಆರಂಭಿಸಬಹುದು. ಆಧಾರ್
ಕಡ್ಡಾಯವಲ್ಲದಿದ್ದರೂ, ಆಧಾರ್ ಕೇಳುವ ಸಾಧ್ಯತೆ ಹೆಚ್ಚಾಗಿದೆ. ಯಾಕೆಂದರೆ ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ಪ್ರಕ್ರಿಯೆ ಫಲಾನುಭವಿಗಳ ಗುರುತಿಗೆ ಆಧಾರ್ ಪ್ರಮುಖ ದಾಖಲೆ ಎನ್ನುತ್ತದೆ ಸರಕಾರ. ಬ್ಯಾಂಕ್ ಖಾತೆಯಿಂದಲೇ ಪ್ರತಿ ತಿಂಗಳು ಹೂಡಿಕೆಯ ಮೊತ್ತ ಕಡಿತವಾಗುತ್ತದೆ. ಆದ್ದರಿಂದ ಪ್ರತಿ ತಿಂಗಳು ಬ್ಯಾಂಕಿಗೆ ಹೋಗಿಯೇ ಕಟ್ಟುವ ಅಗತ್ಯವಿಲ್ಲ. ಆದರೆ ಖಾತೆಯಲ್ಲಿ ಬ್ಯಾಲೆನ್ಸ್ ಇಟ್ಟುಕೊಂಡಿರಬೇಕು.
ಇನ್ನು, ಕನಿಷ್ಠ 20 ವರ್ಷಗಳ ಹೂಡಿಕೆ ಅಗತ್ಯ. 18 ವರ್ಷದವರಾಗಿದ್ದರೆ 42 ವರ್ಷಗಳ ಕಾಲ ತಿಂಗಳಿಗೆ 210 ರೂ. ಹೂಡಿಕೆ ಮಾಡಬೇಕು. 25 ವರ್ಷದವರಾಗಿದ್ದರೆ 35 ವರ್ಷ ಮಾಸಿಕ 376 ರೂ. ಕೊಡಬೇಕಾಗುತ್ತದೆ. 30 ವರ್ಷ ವಯಸ್ಸಿನವರು 30 ವರ್ಷ ಕಾಲ ತಿಂಗಳಿಗೆ 577 ರೂ. ಕಟ್ಟಬೇಕು. 40 ವರ್ಷದವರಾಗಿದ್ದರೆ 20 ವರ್ಷ ಕಾಲ ತಿಂಗಳಿಗೆ 1,454 ರೂ. ಹೂಡಿದರೆ 60ನೇ ವರ್ಷದಿಂದ ತಿಂಗಳಿಗೆ 5,000 ರೂ. ಪಿಂಚಣಿ ಪಡೆಯಬಹುದು!!
ಅಸಂಘಟಿತ ವಲಯದ ಉದ್ಯೋಗಿಗಳ ವಿಮೆ ಮತ್ತು ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ
ತಂದಿದ್ದು, 1 ಸಾವಿರದಿಂದ 5 ಸಾವಿರದವರೆಗೂ ಕನಿಷ್ಠ ನಿಶ್ಚಿತ ಪಿಂಚಣಿ ನೀಡುವ ಯೋಜನೆ ಇದಾಗಿದೆ. 18 ರಿಂದ 40 ವರ್ಷದೊಳಗಿನವರು
ನೋಂದಾಯಿಸಿಕೊಳ್ಳಬಹುದಾದ ಈ ಯೋಜನೆಯೂ 60ನೇ ವಯಸ್ಸಿನಿಂದ ಪಿಂಚಣಿ ಆರಂಭವಾಗಲಿದೆ.!! ಆದರೆ ಈ ಪಿಂಚಣಿ ಪಡೆಯಬೇಕಾದರೆ 20 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವರ್ಷ ಈ ಯೋಜನೆಯಲ್ಲಿ ಹಣ ತೊಡಗಿಸಬೇಕು ಎನ್ನುವುದು ಈ ಯೋಜನೆಯ ನಿಯಮ!!
ಈ ಮೊದಲು ಪಿಂಚಣಿ ಸೌಲಭ್ಯವು ಬರೀ ನೌಕರ ವರ್ಗದವರಿಗೆ ಮಾತ್ರ ಮೀಸಲಾಗಿತ್ತು. ಆದರೆ ಬದಲಾದ ದಿನಮಾನಗಳಲ್ಲಿ ದೇಶದ ನಾಗರಿಕರಿಗೆ ಅದರಲ್ಲೂ
ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗುವ ದೂರದರ್ಶಿತ್ವದಿಂದ ಕೇಂದ್ರ ಸರ್ಕಾರವು “ಅಟಲ್ ಪಿಂಚಣಿ ಯೋಜನೆ(ಎಪಿವೈ)” ಜಾರಿಗೆ ತಂದಿದೆ.
ಇದಲ್ಲದೇ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು(ಎನ್.ಪಿ.ಎಸ್) ಎಲ್ಲ ನಾಗರಿಕರಿಗೆ ಪಿಂಚಣಿಗಾಗಿ ಉಳಿತಾಯ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೂ ಎಲ್.ಐ.ಸಿಯ ಜೀವನ್ ನಿಧಿ ನಿಯಮಿತ ಪಿಂಚಣಿ ಯೋಜನೆಯಲ್ಲಿಯೂ ಉಳಿತಾಯ ಮಾಡಬಹುದಾಗಿದೆ.
ಪಿಂಚಣಿಗೆ ಹೂಡಿಕೆ ವಿಳಂಬವಾದರೆ ಏನಾಗುತ್ತೆ??
ಎಪಿವೈ ಯೋಜನೆಯಲ್ಲಿ ಪಿಂಚಣಿ ಕುರಿತ ಹೂಡಿಕೆಯಲ್ಲಿ ವಿಳಂಬವಾದರೆ ಬ್ಯಾಂಕ್ ಗಳು ತಿಂಗಳಿಗೆ 1ರಿಂದ 10 ರೂ. ತನಕ ಶುಲ್ಕವನ್ನು ವಿಧಿಸಲು ಅವಕಾಶವಿದೆ.
100 ರೂ. ತನಕದ ದೇಣಿಗೆಗೆ ತಿಂಗಳಿಗೆ 1 ರೂ. 1,001 ರೂ.ಗಿಂತ ಹೆಚ್ಚಿನ ಹೂಡಿಕೆಯಲ್ಲಿ ವಿಳಂಬವಾದರೆ ತಿಂಗಳಿಗೆ 10 ರೂ. ಶುಲ್ಕವನ್ನು ಬ್ಯಾಂಕ್‍ಗಳು
ವಿಧಿಸಬಹುದು!! ಅಷ್ಟೇ ಅಲ್ಲದೇ, ಎಪಿವೈ ಯೋಜನೆಯಲ್ಲಿ 60 ವರ್ಷಕ್ಕೆ ಮುನ್ನ ಹಿಂದೆ ಸರಿಯಲು ಅವಕಾಶ ಇಲ್ಲ. ಹೀಗಿದ್ದರೂ ಫಲಾನುಭವಿ ಮೃತಪಟ್ಟರೆ ಅಥವಾ ಮಾರಣಾಂತಿಕ ಕಾಯಿಲೆಗಳಿದ್ದರೆ ಪಿಂಚಣಿ ಹಣವನ್ನು ಹಿಂಪಡೆಯಬಹುದಾಗಿದೆ!!
ಅಟಲ್ ಪೆನ್ಶನ್ ಯೋಜನೆಯನ್ನು ಕೇಂದ್ರ ಸರ್ಕಾರ ಜನತೆಗೆ ನೀಡಿದ್ದು ನಿವೃತ್ತಿ ಭದ್ರತೆಯನ್ನು ಮೊದಲ ಆದ್ಯತೆಯನ್ನಾಗಿರಿಸಿದೆ. ತನ್ನ ಇಳಿವಯಸ್ಸಿನಲ್ಲಿ
ಸಹಾಯವಾಗಲಿರುವ ಈ ಯೋಜನೆಯು ಬಹು ಉಪಯುಕ್ತವಾಗಿದ್ದು, ಪ್ರತಿಯೊಬ್ಬರು ಈ ಬಗ್ಗೆ ತಿಳಿದುಕೊಳ್ಳಬೇಕಾದುದು ಅತೀ ಮುಖ್ಯ!!
– ಅಲೋಖಾ