ಸಿದ್ದರಾಮಯ್ಯನ ಕಾಂಗ್ರೆಸ್ ಸರಕಾರದಲ್ಲಿ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವಂತಾಗಿದೆ. ಬಡವರು ಸಮಸ್ಯೆ ಪರಿಹಾರಗೊಳಿಸುವಂತೆ ಕೇಳಿದರೆ ಕಾಂಗ್ರೆಸ್ ಸರಕಾರಕ್ಕೆ ಕಿವಿಯೂ ಕೇಳಿಸುವುದಿಲ್ಲ, ಕಣ್ಣೂ ಕಾಣಿಸುವುದಿಲ್ಲ. ಬಡವರ ಕುರಿತು ಎಳ್ಳಷ್ಟೂ ಕಾಳಜಿ ವಸಹಿದ ಕಾಂಗ್ರೆಸ್‍ನ ಮಂತ್ರಿಗಳು ಶ್ರೀಮಂತರಿಗೆ ಸಮಸ್ಯೆಯಾದ್ರೆ ಎದ್ದೆನೋ ಬಿದ್ದೆನೋ ಎಂದು ಓಡೋಡಿ ಬಂದು ಸಮಸ್ಯೆ ಪರಿಹಾರ ಮಾಡ್ತಾರೆ. ಒಟ್ಟಾರೆ ಈ ಕಾಂಗ್ರೆಸಿಗರು ತಾನು ಬಂಡವಾಳ ಶಾಹಿಗಳ ಪರ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಬೆಂಗಳೂರಿನ ಮಾನ್ಯತಾಟೆಕ್‍ಪಾರ್ಕ್ ಸಮಸ್ಯೆ ಇಂದಿನದ್ದೋ… ಅಥವಾ ಮುಂಚೆದ್ದೋ… ಬಹಳ ಹಿಂದಿನಿಂದಲೂ ಇಲ್ಲಿ ವಾಹನದಟ್ಟನೆ ಜಾಸ್ತಿ ಇದ್ದು ಅಲ್ಲಿನ
ನಿವಾಸಿಗಳು ಎಲ್ಲಿಲ್ಲದ ಸಮಸ್ಯೆಯನ್ನು ಅನುಭವಿಸುತ್ತಿದ್ದರು. ಯಾಕೆಂದರೆ ಇಲ್ಲಿಂದ ಮಾನ್ಯತಾ ಟೆಕ್‍ಪಾರ್ಕ್‍ಗೆ ಹೊಗುವ ವಾಹನಗಳ ಸಂಖ್ಯೆ ಅಧಿಕ. ಟೆಕ್‍ಪಾರ್ಕ್ ನಿರ್ಮಾಣದ ಸಮಯದಲ್ಲಿ ಟೆಕ್‍ಪಾರ್ಕ್‍ಗೆ ಹೋಗುವ ವಾಹನಗಳಿಗೆ ಇಲ್ಲಿಂದ ರಸ್ತೆಯನ್ನೇ ಕಲ್ಪಿಸಿರಲಿಲ್ಲ. ಆದ್ದರಿಂದ ಇದೀಗ ಇದೇ ರಸ್ತೆಯಿಂದ ಮಾನ್ಯತಾ ಟೆಕ್‍ಪಾರ್ಕ್‍ಗೆ ಟೆಕ್‍ಪಾರ್ಕ್ ಸಿಬ್ಬಂದಿ ಹೋಗುತ್ತಿದ್ದಾರೆ. ಬರೋಬ್ಬರಿ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮಂದಿ ಮಂದಿ ಕೆಲಸ ಮಾಡುತ್ತಾರೆ. ಇಷ್ಟು ಮಂದಿ ವಾಹನದಲ್ಲೇ ಬರುವುದರಿಂದ ಇಲ್ಲಿನ ನಿವಾಸಗಳು ಟ್ರಾಫಿಕ್ ಜಾಂ, ಶಬ್ದಮಾಲಿನ್ಯ ಸೇರಿ ತುಂಬಾ ಸಮಸ್ಯೆ ಅನುಭವಿಸುತ್ತಿದ್ದರು. ಸರಾಸರಿ 5000ಕ್ಕೂ ಅಧಿಕ ವಾಹನಗಳು ಟೆಕ್‍ಪಾರ್ಕ್ ಮುಖಾಂತರ ಸಂಚರಿಸುತ್ತದೆ. ಈ ಸಮಸ್ಯೆನ್ನು ನಿವಾರಿಸುವಂತೆ ಅಲ್ಲಿನ ಜನರು ಸರಕಾರಕ್ಕೆ ನೂರಾರು ಬಾರಿ ಮನವಿ ಸಲ್ಲಿಸಿದ್ದರು. ಸ್ವತಃ ಗೃಹ ಸಚಿವ ರಾಮಲಿಂಗ ರೆಡ್ಡಿಗೂ ಈ ಬಗ್ಗೆ ಸ್ಥಳೀಯರು ಮನವಿ ಮಾಡಿದ್ದಲ್ಲದೆ ಹಲವಾರು ಬಾರಿ ಪ್ರತಿಭಟನೆಯನ್ನೂ ಸಲ್ಲಿಸಿದ್ದರು. ಕಳೆದ ಅಕ್ಟೋಬರ್ 31ರಂದು ಸ್ಥಳೀಯರು ಪ್ರತಿಭಟನೆಯನ್ನೂ ಸಲ್ಲಿಸಿದ್ದರು. ಆದರೆ ಇಷ್ಟೆಲ್ಲಾ ಆಗಿದ್ದರೂ ಸರಕಾರ ಮಾತ್ರ ಕಿವಿಗೆ ಹತ್ತಿ ಇಟ್ಟು ತನಗೂ, ಈ ಸಮಸ್ಯೆಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿತ್ತು.
ಆದರೆ ನವೆಂಬರ್ 7ರಂದು ಏನು ನಡೆಯಿತೆಂದರೆ ಈ ಸಮಸ್ಯೆಯಿಂದ ಬವಣೆ ಅನುಭವಿಸುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತನ್ನ ಪತ್ನಿ ಗೀತಾ ಶಿವರಾಜ್‍ಕುಮಾರ್ ಜೊತೆ ವಿಧಾನ ಸೌಧಕ್ಕೆ ಆಗಮಿಸಿ ಟೆಕ್‍ಪಾರ್ಕ್ ಸಮಸ್ಯೆಯನ್ನು ನಿವಾರಿಸುವಂತೆ ಗೃಹಸಚಿವ ರಾಮಲಿಂಗ ರೆಡ್ಡಿಗೆ ಮನವಿ ಸಲ್ಲಿಸಿದ್ದರು. ಜೊತೆಗೆ ಶಿವರಾಜ್‍ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದರು. ಮಾನ್ಯತಾ ಟೆಕ್‍ಪಾರ್ಕಗೆ ಹೊಗುವ ವಾಹನಗಳಿಂದ ಟೆಕ್‍ಪಾರ್ಕ್ ಸುತ್ತಮುತ್ತಲಿನ ನಿವಾಸಿಗಳಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಟೆಕ್‍ಪಾರ್ಕ್ ನಿರ್ಮಾಣದ ಸಮಯದಲ್ಲಿ ಟೆಕ್‍ಪಾರ್ಕ್‍ಗೆ ಹೋಗುವ ವಾಹನಗಳಿಗೆ ಇಲ್ಲಿಂದ ರಸ್ತೆ ಕಲ್ಪಿಸುವುದಿಲ್ಲ ಎಂದು ಹೇಳಿದ್ದರೂ ಇಲ್ಲಿಂದಲೇ ವಾಹನಗಳನ್ನು ಕಳಿಸಲಾಗುತ್ತಿದೆ. ಆದ್ರೆ ಈಗ ಇದೆ ರಸ್ತೆಯಿಂದ ಮಾನ್ಯತಾ ಟೆಕ್‍ಪಾರ್ಕ್‍ಗೆ ಟೆಕ್‍ಪಾರ್ಕ್ ಸಿಬ್ಬಂದಿ ಹೊಗುತ್ತಿರುವುದರಿಂದ ತೊಂದರೆಯಾಗುತ್ತಿದೆ. 30,000 ಸಿಬ್ಬಂದಿ ಬರುತ್ತಾರೆ ಎಂದು ಅನುಮತಿ ಪಡೆಯಲಾಗಿತ್ತು. ಆದ್ರೆ 1 ಲಕ್ಷ 50 ಸಾವಿರ ಸಿಬ್ಬಂದಿ ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನಕ್ಕೆ 5000 ಕ್ಕೂ ಹೆಚ್ಚು ವಾಹನಗಳು ಟೆಕ್‍ಪಾರ್ಕ್‍ಗೆ ಬರುತ್ತವೆ. ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದರು.
ಮನವಿ ಸಲ್ಲಿಸಿ ಎರಡೇ ದಿನಗಳಲ್ಲಿ ಸ್ಥಳಕ್ಕಾಗಮಿಸಿದ ಗೃಹಸಚಿವ ರಾಮಲಿಂಗ ರೆಡ್ಡಿಯವರು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಇಲ್ಲಿನವರ ಜೊತೆ ಮಾತುಕತೆ ನಡೆಸಿ ಎರಡು ದಿನಗಳಲ್ಲಿ ಸಮಸ್ಯೆ ನಿವಾರಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಟೆಕ್‍ಪಾರ್ಕ್ ಸಮಸ್ಯೆಗೆ ಪರಿಹಾರ ಸಿಗಲಿದೆ.
ಆದರೆ ಅಸಲಿ ವಿಷಯವೇನೆಂದರೆ ಟೆಕ್‍ಪಾರ್ಕ್ ವಿಷಯಕ್ಕೆ ಸಂಬಂಧಿಸಿ ಇಲ್ಲಿನ ನಿವಾಸಿಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದು, ಮನವಿಯನ್ನೂ ಸಲ್ಲಿಸಿದ್ದರು. ಆದರೆ ಜನಸಾಮಾನ್ಯರ ಮನವಿಗೆ ಸ್ಪಂದಿಸದಿದ್ದ ರಾಜ್ಯದ ಕಾಂಗ್ರೆಸ್ ಸರಕಾರ ಗಣ್ಯ ವ್ಯಕ್ತಿಗಳು ಮನವಿ ಸಲ್ಲಿಸಿದರೆ ತಕ್ಷಣ ಸ್ಪಂದಿಸಿದೆ. ಕಾಂಗ್ರೆಸ್ ಸರಕಾರದಲ್ಲಿ
ಜನಸಾಮಾನ್ಯರ ಸಮಸ್ಯೆಗೆ ಪರಿಹಾರವೇ ಇಲ್ಲವೇ? ಕಾಂಗ್ರೆಸ್ ಸರಕಾರದಲ್ಲಿ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂಡು ನ್ಯಾಯ ಎನ್ನುವುದನ್ನು
ಸಾಬೀತುಪಡಿಸಿದೆ. ಬಡವರು ದೂರು ಕೊಟ್ಟರೆ ತಕ್ಷಣ ಕ್ರಮ ಕೈಗೊಳ್ಳದ ಸರಕಾರ ಗಣ್ಯ ವ್ಯಕ್ತಿಗಳು ದೂರು ಕೊಟ್ಟರೆ ಮಾತ್ರ ತಕ್ಷಣ ಕ್ರಮ ಕೈಗೊಳ್ಳುತ್ತದೆ, ಬಡವರ ಹೋರಾಟಕ್ಕೆ ಬೆಲೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇದೊಂದು ಸಮಸ್ಯೆ ಮಾತ್ರವಲ್ಲ, ತ್ಯಾಜ್ಯದ ಸಮಸ್ಯೆ, ವಾಹನ ದಟ್ಟನೆ ಸಮಸ್ಯೆ, ರಸ್ತೆ ಮಧ್ಯೆ ಗುಂಡಿಗಳ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳಿಂದ ಬೆಂಗಳೂರು ಬಳಲುತ್ತಿದೆ.ಜನಸಾಮಾನ್ಯರು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ. ಆದರೆ ಜನಸಾಮಾನ್ಯರ ಹೋರಾಟಕ್ಕೆ ಬೆಲೆಯನ್ನೇ ಸರಕಾರ ಕೊಟ್ಟಿಲ್ಲ. ಬಡವರಿಗೊಂದು ಶ್ರೀಮಂತರಿಗೊಂದು ನ್ಯಾಯ ಎನ್ನುವ ಕಾಂಗ್ರೆಸ್‍ನ ಅಸಲಿ ಮುಖ ಬಯಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
-ಚೇಕಿತಾನ