ಅಂಕಣಇತಿಹಾಸದೇಶಪ್ರಚಲಿತ

ನೀವು ಗಾಂಧಿ ಕುಟುಂಬಕ್ಕೆ ಸೇರಿದವರಲ್ಲ; ಜನರನ್ನು ಮೋಸಗೊಳಿಸಬೇಡಿ : ರಾಹುಲ್ ಗೆ ಮಹಾತ್ಮ ರ ಮೊಮ್ಮಗನಿಂದ ಪತ್ರ!!!

ಮಹಾತ್ಮಾ ಗಾಂಧಿಯವರ ಮಹಾನ್ ಮೊಮ್ಮಗ ಶ್ರೀಕೃಷ್ಣ ಕುಲಕರ್ಣಿ ಪ್ರಥಮ ಬಾರಿಗೆ ಮಹಾತ್ಮನ ಹತ್ಯೆಯ‌ ಕುರಿತಾಗಿ ಹೇಳಿಯನ್ನು ಕೊಟ್ಟಿದ್ದಾರೆ. ರಾಷ್ಟ್ರದ ಪಿತಾಮಹನ ಹತ್ಯೆಯನ್ವು ಆರ್ಎಸ್ಎಸ್ ಮಾಡಿದೆಯೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಗಾಂಧಿ ಕುಟುಂಬಕ್ಕೆ ಸೇರದವನಾಗಿರುವ ಕಾರಣ ಮಹಾತ್ಮ ಎಂಬ ಹೆಸರಿನಲ್ಲಿ ಜನರು ಮೂರ್ಖನನ್ನಾಗಿ ಮಾಡಬಾರದು ಎಂದು ರಾಹುಲ್ ಗಾಂಧಿಯವರನ್ನು ಮೊಮ್ಮಗ ಕೇಳಿದ್ದಾರೆ.

ಒಂದು ಬಹಿರಂಗ ಪತ್ರದಲ್ಲಿ ಕುಲಕರ್ಣಿಯವರು, ಈ ಹಿಂದೆ ನಡೆದ ಘಟನೆಯಿಂದ ಕುಟುಂಬವು ಮುಂದೆ ಸಾಗಿದೆ ಎಂದು ಹೇಳಿದರು. ಅವರು ಗಂಭೀರ ಭಾಷೆಯನ್ನು ಬಳಸಿ ಈ ವಿಚಾರದ ಕುರಿತಾಗಿ ಸ್ಪಷ್ಟೀಕರಣವನ್ನು ಕೊಟ್ಟರು. ಗಾಂಧಿಯವರ ಹತ್ಯೆಯನ್ನು ಆರ್ ಎಸ್ಎಸ್ ಮಾಡಿಸಿದೆಯೆಂಬ ಹೇಳಿಕೆಯು “ತಮಿಳರು ನಿಮ್ಮ (ರಾಹುಲ್ ಗಾಂಧಿ) ತಂದೆಯನ್ನು ಕೊಂದಿದ್ದಾರೆ” ಎಂಬ ಹೇಳಿಕೆಯಂತೆ ಆಗಿದೆಯೆಂದು ಮಾರ್ಮಿಕವಾದ ಉತ್ತರವನ್ನಿತ್ತರು.

ಒಂದೆರಡು ವ್ಯಕ್ತಿಗಳು ಒಂದು ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಕುಲಕರ್ಣಿ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ನಾಥೂರಾಮ್ ಗೋಡ್ಸೆ ಆರ್ ಎಸ್ಎಸ್ ಗೆ ಸೇರಿದಿದ್ದರೂ ಸಹ, ಈ ಸಮುದಾಯವು ಮಹಾತ್ಮನನ್ನು ಕೊಂದಿದೆ ಎಂದು ಅರ್ಥವಲ್ಲ ಎಂದೂ ಹೇಳಿದರು‌.

“ಆದ್ದರಿಂದ ದಯವಿಟ್ಟು ಈ ರೀತಿಯಾದ ಚೇಷ್ಟೆಯನ್ನು ನಿಲ್ಲಿಸಿರಿ. ಗಾಂಧಿ ಹೆಸರನ್ನು ಅವಕಾಶವಾದಕ್ಕೆ ಬಳಸುವುದನ್ನು ನಿಲ್ಲಿಸಿ. ನೀವು ಗಾಂಧಿ ಕುಟುಂಬದಿಂದ ಬಂದವರಾಗಿಲ್ಲ. ನೀವು ಭಾರತದಲ್ಲಿ ತುಂಬಾ ಹೆಚ್ಚು ಜನರನ್ನು ಮೋಸಗೊಳಿಸಿದ್ದೀರಿ. ಈಗ ಅದನ್ನು ನಿಲ್ಲಿಸಿ, ” ಎಂದು ಅವರು ಬಹಿರಂಗ ಪತ್ರದಲಿ ಬರೆದಿದ್ದಾರೆ.

ನೆಹರೂ ಕುಟುಂಬದಿಂದ‌ ಬಂದವರು ಗಾಂಧಿಯಾಗಿದ್ದೇ ಒಂದು ವಿಪರ್ಯಾಸ. ನೆಹರೂ ಅನ್ನುವ ಹೆಸರೇ ಕಳಂಕವೆನ್ನುವುದು ಬಹುಶ: ಅವರಿಗೆ ಮೊದಲೇ ಅರಿವತ್ತೇನೋ!! ಅದಕ್ಕೇ ಬಹುಶ: ನೆಹರೂ ಬದಲಿಗೆ ಗಾಂಧಿಯನ್ನು ಸೇರಿಸಿದ್ದು!! ಆದರೆ ಭಾರತೀಯರದೆಷ್ಚು‌ ಮೂಢರಾದರು ನೋಡಿ.. ಅನೇಕ ವರ್ಷಗಳ ಕಾಲ ಅವರನ್ನೇ ಶ್ರೇಷ್ಠಪ್ರಧಾನಿಗಳೆಂದು ಬೆನ್ನುತಟ್ಟಿದೆವು. ಅದಕ್ಕೆ ಪ್ರತಿಫಲವಾಗಿ ಅವರು ಇಡೀ ದೇಶವನ್ನೇ ಲೂಟಿ ಮಾಡಿದರು.

ಪ್ರತೀ ಬಾರಿಯೂ ಮಹಾತ್ಮನನ್ನು ಹತ್ಯೆ ಮಾಡಿದವರು ಸಂಘದವರೆಂದು ಬೊಬ್ಬಿಡುವ ಇದೇ ನಾಯಕರು, ಅದೇ ಸಂಘ ಮಾಡುವ ,ಮಾಡಿದ‌ಸಾಮಾಜಿಕ ಕಾರ್ಯವನ್ನೆಲ್ಲೂ‌ ಉಲ್ಲೇಖಿಸುವುದಿಲ್ಲ. ಹೋಗಲಿ ಬಿಡಿ. ತಮ್ಮ ಕುಟುಂಬದ ಶ್ರೇಷ್ಠ ಭ್ರಷ್ಟಾಚಾರಿಯಾಗಿದ್ದ ನೆಹರೂ ಅವರು 1962ರಲ್ಲಿ ಸಂಘ ಮಾಡಿದ ಕಾರ್ಯವನ್ನು ಪ್ರಶಂಸಿಸಿ 1963 ರ ರಿಪಬ್ಲಿಕ್ ಪರೇಡ್ ನಲ್ಲಿ ಭಾಗವಹಿಸಲು ಆಮಂತ್ರಿಸಿದ್ದರ ಕುರಿತೂ ಮಾತನಾಡುವುದಿಲ್ಲ.

ಒಟ್ಟಾರೆಯಾಗಿ ಭಾರತದ ಮುಂದಿನ ಪ್ರಧಾನಿ ನಾನೇ ಎಂದು ಊರಿಡೀ ಹೇಳಿಕೊಂಡು ಓಡಾಡುತ್ತಿರುವ ಮಿಸ್ಟರ್ ರಾಹುಲ್ ಗಾಂಧಿಯವರಿಗೆ ಮುಖಭಂಗವಾದಂತಾಗಿದೆ. ಅವರು

ಪದೇ ಪದೇ ಹೇಳುವ ಹೇಳಿಕೆಗೆ ಸರಿಯಾದ ಪ್ರತ್ಯುತ್ತರವನ್ನು ಗಾಂಧಿ ಕುಟುಂಬದವರೇ ನೀಡಿದ್ದಾರೆ. ಇನ್ನಾದರು ತಮ್ಮ ಅಮ್ಮನ ಪ್ರತೀ ಮಾತನ್ನು ಆಲಿಸದೇ ಸ್ವಂತ ಚಿಂತನೆಯನ್ನು ಬಳಸಿ ಮಾತನಾಡುತ್ತಾರೋ ಕಾದು ನೋಡಬೇಕಿದೆ.

– ವಸಿಷ್ಠ

Tags

Related Articles

Close