ಅಂಕಣದೇಶಪ್ರಚಲಿತ

ನೂಡಲ್ಸ್ ಮಾರುವ ಚೀನಾದ ಪರಾಕ್ರಮ ಇಷ್ಟೇ ಸ್ವಾಮಿ!!!

ಇದು ಭಾರತೀಯರಿಗಿದೊಂದು ವೇಕ್-ಅಪ್ ಕಾಲ್!!! ಅತ್ತ ಚೀನಾ ಒಂದು ಕಡೆ ಗಡಿಯಲ್ಲಿ ವಿವಾದ ಸೃಷ್ಟಿಸುತ್ತಿದ್ದರೆ, ಇನ್ನೊಂದು ಕಡೆ ಚೀನಾದ ಜನರು ‘ಜನಾಂಗೀಯ’ ನಿಂದನೆ ಮಾಡುವಲ್ಲಿ ನಿರತರಾಗಿದ್ದಾರೆ!

ಕೇವಲ ‘ನೂಡಲ್ಸ್’ ಬೇಯಿಸಲಿಕ್ಕೆಂದೇ ಪ್ರಸಿದ್ಧವಾದ ಚೀನಾ ಒಂದೇ ದೃಶ್ಯಾವಳಿಯಲ್ಲಿ ಭಾರತದ ಮೇಲಿನ ಅಸಹನೆಯನ್ನು ಕಾರಿಕೊಂಡಿದೆ! ದೋಕ್ಲಾಮ್ ಗಡಿಯಿಂದ ಒಂದಿಂಚೂ ಕೂಡ ಹಿಂದೆ ಭಾರತದ ಯೋಧರನ್ನು ಹಿಂದೆ ಸರಿಸಲಾಗದಿದ್ದರೂ, ಇನ್ನಾವ ಗತಿಯಿದೆ ನಮಗೆಂದು ‘ಜನಾಂಗೀಯ ಆಟ’ ಶುರು ಮಾಡಿರುವ ಚೀನಾವನ್ನ ಅವರ ‘ಮಾವೋ’ ಸಿದ್ಧಾಂತಗಳೇ ಒಪ್ಪಲಾರವು!

ಕ್ಸಿನ್ ಹ್ಯಾ ಎಂಬ ಚೀನಾದ ಅಧಿಕೃತ ಸುದ್ದಿ ವಾಹಿನಿಯೊಂದು ಈ ವೀಡಿಯೋವನ್ನು ಬಿಡುಗಡೆ ಮಾಡಿದೆ. ಹಾಗೆಯೇ, ಗಡಿಯೊಳಗೆ ನುಸುಳುವುದುರಲ್ಲಿಯೂ, ಸಭ್ಯತೆ ಮೀರುವುದರಲ್ಲಿಯೂ ತಾನು ನಿಪುಣ ಎಂದು ಚೀನಾ ಸಾಕ್ಷಿಸಮೇತ ತೋರಿಸುವುದರಲ್ಲಿ ಅಚ್ಚರಿಯೇನಿಲ್ಲ!

ಅಸಹನೆಯಿಂದ ಮತಿಭ್ರಮಣೆಗೊಳಗಾದ ನಿರೂಪಕಿಯೊಬ್ಬಳು ಸಿಖ್ ವೇಷವನ್ನು ಧರಿಸಿ ಭಾರತವನ್ನು ‘ದೋಚುವ’ ದೇಶ ಎಂದೆಲ್ಲ ಹೀಯಾಳಿಸಿ, ತದನಂತರ ‘ಜನಾಂಗೀಯ ನಿಂದನೆ’ ಯನ್ನೂ ಮಾಡಿದ್ದು, ಸಿಖ್ ಪದೋಚ್ಛಾರವನ್ನೂ ಸಹ ಚೆನ್ನಾಗಿಯೇ ಅಭ್ಯಾಸಿಸಿ ತನ್ನ ದೇಶದ ಮರ್ಯಾದೆಯನ್ನು ತಾನೇ ತೆಗೆದಿದ್ದಾಳೆ ಬಿಡಿ!

ಭಾರತ ಮಾಡುವ ಏಳು ತಪ್ಪುಗಳು ಎಂಬ ಶೀರ್ಷಿಕೆಯಡಿ ಶುರುವಾಗುವ ಮತಿಗೆಟ್ಟ ವೀಡಿಯೋವೊಂದು ಮೊದಲು ಪ್ರಶ್ನೆ ಕೇಳುತ್ತದೆ! ಭಾರತೀಯರಿಗೆ ಒಬ್ಬರ ಮನೆಯ ಕದವ ತಟ್ಟುವ ಸಭ್ಯತೆಯಿಲ್ಲ, ಹೆತ್ತವರು ಮಕ್ಕಳಿಗೆ ಸಭ್ಯತೆಯನ್ನು ಕಲಿಸುವುದಿಲ್ಲವೇ ಎಂಬ ಪ್ರಶ್ನೆಯೊಂದನ್ನೂ ಕೇಳಿರುವುದು ದೋಕ್ಲಾಮ್ ಗಡಿಯ ಬಗೆಗಿನ ಟಾಂಗ್!

ಈ ಕೀಳು ನಿಂದನೆಗಳನ್ನು ಮಾಡುವ ಚೀನಾವೊಂದು ‘ಕಡಿಮೆ’ ಬೆಲೆಯ ಗುಣಮಟ್ಟವಿಲ್ಲದ ವಸ್ತುಗಳನ್ನು ಹೊರ ದೇಶಗಳಿಗೆ ಪೂರೈಸುವಾಗ ‘ಕೀಳು ಮಟ್ಟದ ಗುಣಮಟ್ಟವಿಲ್ಲದ’ ಪ್ರಜೆಗಳನ್ನೂ ಸೃಷ್ಟಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ!

ನಿರೂಪಕಿಯ ಅವಿವೇಕತನ ಇನ್ನೂ ಮುಂದುವರೆದು ಹೇಳುತ್ತದೆ! ” ಭೂತಾನ್ ಜನರು ಭಾರತದ ಸೇನೆಯನ್ನು ನೋಡಿ ಆಘಾತಕ್ಕೀಡಾದರು’ ಎಂದು! ಆದರೆ, ಇದೇ ಭೂತಾನ್ ಭಾರತೀಯ ಸೇನೆಯ ಸಹಾಯ ಕೇಳಿದೆ! ಅದೂ, ಚೀನಾದ ವಿರುದ್ಧವೇ!

ಈ ವೀಡಿಯೋ ಇತ್ತೀಚೆಗೆ ಬಿಡುಗಡೆಯಾದ ‘ದ ಸ್ಪಾರ್ಕ್’ ಎನ್ನುವ ಸರಣಿಯ ಭಾಗಗಳು! ಇದನ್ನು, ವಿದೇಶೀ ವೀಕ್ಷಕರನ್ನು ಗುರಿಯಿಡಲು ಮಾಡುವ ‘ಗುಣಮಟ್ಟವೇ ಇಲ್ಲದ ಕೀಳು’ ದೃಶ್ಯಾವಳಿಗಳಷ್ಟೇ!

ಪಾಪ! ಬೇರೆ ದೇಶದ ಸಾಮಾಜಿಕ ಜಾಲ ತಾಣಗಳನ್ನು ನೋಡಿ 100 ಮೈಲಿ ಓಡುವ ಚೈನಾ, ಭಾರತವನ್ನು ಅಪಮಾನಗೊಳಿಸುವುದಕ್ಕಾಗಿಯೋ ಎಂಬಂತೆ, ಟ್ವಿಟ್ಟರ್, ಫೇಸ್ ಬುಕ್ ಹಾಗೂ ಯೂ-ಟ್ಯೂಬ್ ಗಳ ಮೂಲಕ ‘ವರ್ಚ್ಯುಲ್ ಪ್ರೈವೇಟ್ ನೆಟ್ ವರ್ಕ್’ ನೂ ಗಳಿಸಿ ಪ್ರಚುರಪಡಿಸಿರುವುದು ನಿಜಕ್ಕೂ ಆ ಮಹಾಗೋಡೆಯಷ್ಟೇ ಸತ್ಯ ಸ್ವಾಮಿ!

ಅದೂ ಬಿಡಿ! ಕಾಶ್ಮೀರದ ಪಾಕಿ ಒಲವಿನ ಪ್ರಜೆಗಳು ಸೈನಿಕರ ಮೇಲೆ ಕಲ್ಲೆಸೆದದ್ದನ್ನೇ ಸ್ಫೂರ್ಥಿಯಾಗಿಸಿಕೊಂಡು ಚೈನಾದವರೂ ಕೂಡ ಭಾರತೀಯ ಸೈನಿಕರ ಮೇಲೆ ಕಲ್ಲೆಸೆದಿದ್ದಾರೆ!

ಯುಕೆ ಯಲ್ಲಿರುವ ಸಿಖ್ ಪ್ರೆಸ್ ಅಸೋಸಿಯೇಶನ್ ಇದಕ್ಕೆ ಪ್ರತಿಕ್ರಿಯಿಸಿದ್ದು, ‘ಭಾರತವನ್ನು ನಿಂದಿಸಲು ಅವರದೇ ದೇಶದಲ್ಲಿ ಸಿಖ್ ವೇಷಧಾರಿಯಾಗಿ ಚೀನಾದ ಮಾಧ್ಯಮವನ್ನು ಕೆಳಗಿಳಿಸಿದ ಈ ಘಟನೆ ನಿಜಕ್ಕೂ ದುರಂತ” ಎಂದು ವ್ಯಂಗ್ಯವಾಡಿದೆ.

ಬಾಬಾ ರಾಮದೇವ್ ಜೀಯ ಪ್ರತಿಕ್ರಿಯೆ!

ಇನ್ನಾದರೂ, ಭಾರತದ ಚೀನಾ ತಲೆಗಳು ಸ್ವಲ್ಪ ಅರ್ಥಮಾಡಿಕೊಳ್ಳಬೇಕಿದೆ!

– ಪೃಥು

Tags

Related Articles

Close