ಇತಿಹಾಸ

ನೆಹರು ಮಾಡಿದ ಆ ಮೂರು ಘೋರ ತಪ್ಪುಗಳು ಇಂದೂ ಕೂಡ ದೇಶದ ಬುಡ ಅಲುಗಾಡಿಸುತ್ತಿದೆ ಎಂದರೆ ನಂಬುತ್ತೀರಾ?!!!

ನಮಗೆಲ್ಲ ತಿಳಿದ ಹಾಗೆ ಆತ ಸ್ವತಂತ್ರ ಭಾರತದ ಮೊದಲ ಪ್ರಧಾನಿ. ಚಿಕ್ಕ ಮಕ್ಕಳ ಪಾಲಿಗೆ “ಚಾಚಾ” ಎಂಬ ಹೆಸರಿನಿಂದಲೇ ಚಿರಪರಿಚಿತ, ಆತನ ಹುಟ್ಟುಹಬ್ಬದ ದಿನ ನವೆಂಬರ್ 14 “ಮಕ್ಕಳ ದಿನಾಚರಣೆ”

ಭಾರತದ ಇತಿಹಾಸದಲ್ಲಿ ಉಲ್ಲೇಖವಾಗಿರುವಂತೆ ಆತನ ಬಗ್ಗೆ ಭಾರತೀಯರು ಹೇಗೆಲ್ಲ ಅರ್ಥೈಸಿಕೊಂಡಿದ್ದಾರೆ ಗೊತ್ತಾ?

ನೆಹರು ಭಾರತ ಕಂಡ ಶ್ರೇಷ್ಟ ನಾಯಕ, ಭಾರತಕ್ಕೆ ಸ್ವಾತಂತ್ರ್ಯ ಸಿಗಲು ನೆಹರು ಕೊಡುಗೆ ಅಪಾರ, ಭಾರತದಲ್ಲಿ ಆತನಂಥ ಇನ್ನೊಬ್ಬ ವ್ಯಕ್ತಿ ಮತ್ತೆ ಹುಟ್ಟಲಿಲ್ಲ ಬ್ಲಾ ಬ್ಲಾ ಬ್ಲಾ ಅಂತೆಲ್ಲ ಆತನ ಕುರಿತಾಗಿ ನಮ್ಮ ಪಠ್ಯ ಪುಸ್ತಕಗಳಲ್ಲಿ ಓದುತ್ತೇವೆ.

ಆದರೆ ನೈಜತೆ ಹಾಗು ಕಾಲ್ಪನಿಕತೆ ಎರಡರ ನಡುವೆಯೂ ಸಾಕಷ್ಟು ವ್ಯತ್ಯಾಸವಿದೆ!!!!

ನಾವು ನೀವು ಓದುತ್ತಿರೋ ಇತಿಹಾಸ ತಿರುಚಿದ್ದಂತ ಸತ್ಯ. ನೆಹರು ಎಂಬ ವ್ಯಕ್ತಿ ಭಾರತಕ್ಕೆ ಏನೆಲ್ಲ “ಕೊಡುಗೆ” ನೀಡಿದ್ದಾನೆ ಅನ್ನೋದು ಬಹುಶಃ ನಮಗೆ ಗೊತ್ತಿಲ್ಲ ಅನ್ಸತ್ತೆ. ನೆಹರು ಮಾಡಿದ್ದ ಆ ಮೂರು ಘೋರ ತಪ್ಪುಗಳು ಬಹುಶಃ ನಿಮಗೆ ಗೊತ್ತಿಲ್ಲ ಅನಿಸುತ್ತೆ.

ಮೊದಲ ತಪ್ಪು –  ವಿ.ಕೆ.ಕೃಷ್ಣ ಮೆನನ್ ಎಂಬ ವ್ಯಕ್ತಿಯ ನೇಮಕ ಹಾಗು 1962 ರ ಗೊಂದಲ :

ಭಾರತಕ್ಕೆ ಸ್ವಂತ್ರವಾದ ಹೊಸ್ತಿಲಲ್ಲಿ ಹಾಗು ಗಾಂಧಿಯ ಹತ್ಯೆಯ ನಂತರ ನೆಹರು ಅನಭಿಶಕ್ತ “ನಾಯಕ”ನಾಗಿ ಹೊರಹೊಮ್ಮಿದ.

ತಾನೇ ಈ ದೇಶದ ಅನಭಿಶಕ್ತ ದೊರೆಯೆಂಬ ಅಹಂಕಾರವಿದ್ದ ನೆಹರು 1957 ರಲ್ಲಿ ಕೃಷ್ಣ ಮೆನನ್ ಎಂಬ ವ್ಯಕ್ತಿಯನ್ನ ದೇಸದ ರಕ್ಷಣಾ ಮಂತ್ರಿಯಾಗಿ ನೇಮಿಸಿ ಘೋರ ತಪ್ಪೊಂದನ್ನ ಮಾಡಿದ್ದ.

ಕೃಷ್ಣ ಮೆನನ್ ಎಂಬ “ರಾಜತಂತ್ರಜ್ಞ”, ಬ್ರಿಟೀಷ್ ಮೆಂಟಾಲಿಟಿ ಇರೋ ಈ ವ್ಯಕ್ತಿಗೆ ರಕ್ಷಣಾ ಖಾತೆಯ ಎಳ್ಳಷ್ಟೂ ಜ್ಞಾನವೂ ಇರಲಿಲ್ಲ. ನೆಹರೂವಿನ ಆಪ್ತವಲಯಲ್ಲಿ
ಗುರುತಿಸಿಕೊಂಡಿದ್ದ ಅನ್ನೋ ಒಂದೇ ಕಾರಣಕ್ಕೆ ರಕ್ಷಣಾ ಮಂತ್ರಾಲಯಕ್ಕೆ ಮಂತ್ರಿಯಾಗಿ ನಿಯುಕ್ತಿಗೊಂಡಿದ್ದ.

ಪರಿಣಾಮ: ಭಾರತದಲ್ಲಾಗುತ್ತಿದ್ದ ಶಸ್ತ್ರಾಸ್ತ್ರಗಳ ಉತ್ಪಾದನೆ ಸ್ಥಗಿತಗೊಳಿಸಿ, ಭಾರತದ ಮೇಲೆ ಚೀನಾ ಆಗಲಿ ಪಾಕಿಸ್ತಾನವಾಗಲಿ ದಾಳಿ ಮಾಡೋಕೆ ಸಾಧ್ಯವೇ ಇಲ್ಲವಂತ ಸೈನ್ಯದಲ್ಲಿದ್ದ ಹಿರಿಯ ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿಸಿ ಆರ್ಮಿ ನಮಗೆ ಬೇಕಾಗೇ ಇಲ್ಲ ಎಂಬ ಹೇಳಿಕೆ ಕೊಟ್ಟ. ನೆಹರು ಮಾತ್ರ ಇದಕ್ಕೆ ಯಾವ ಪ್ರತಿಕ್ರಿಯೆಯೂ ಕೊಡದೆ ಕೃಷ್ಣ ಮೆನನ್ ಮಾತಿಗೆ ತನ್ನ ಸಮ್ಮತಿಯಿದೆ ಎಂಬಂತೆ ಸುಮ್ಮನಿದ್ದ.

ವಿ.ಕೆ.ಕೃಷ್ಣ ಮೆನನ್ ನ ಈ ತಪ್ಪಿನಂದ ಭಾರತ 1962 ರಲ್ಲಿ ಚೀನಾದೆದುರು ಸೋಲುಣಬೇಕಾಯಿತು.

ಬೆರಳಣಿಕೆಯ ಸೈನಿಕರು ವೀರಾವೇಶದಿಂದ ಚೀನಾದ ವಿರುದ್ಧವೇನೋ ಹೋರಾಡಿದರು ಆದರೆ ನೆಹರು ಹಾಗು ಕೃಷ್ಣ ಮೆನನ್’ನ ಮೂರ್ಖತನದಿಂದ ಕಾಶ್ಮೀರದ ಭಾಗವಾಗಿದ್ದ ಕೈಲಾಶ ಮಾನಸ ಸರೋವರ ಅಥವ ಈಗಿನ ಅಕ್ಸಾಯ್ ಚೀನಾ ಎಂಬ ಪ್ರದೇಶ ಚೀನಾ ಕೈ ವಶವಾಯಿತು.

ಎರಡನೆಯ ತಪ್ಪು – ಗೋಹತ್ಯೆ ನಿಷೇಧದ ಕಾನೂನು ಹಾಗು ನೆಹರೂವಿನ “ರಾಜೀನಾಮೆ” ನಾಟಕ :

ತಾನೊಬ್ಬ ಕಾಶ್ಮೀರ ಪಂಡಿತ ಅಂತ ಸ್ವತಃ ನೆಹರೂವೇ ಹೇಳಿಕೊಳ್ಳುತ್ತಿದ್ದ ನೆಹರು ಮಾತ್ರ ಗೋಹತ್ಯೆ ನಿಷೇಧದ ಚರ್ಚೆ ಬಂದರೆ ಮಾತ್ರ ತುಂಬಾ ದುಃಖಿತನಾದವನಂತೆ ವರ್ತಿಸುತ್ತಿದ್ದ.

ಭಾರತವನ್ನ ಬ್ರಿಟಿಷರು ಆಳುತ್ತಿರುವಾಗ ಅವರಿಗೆ ಗೋಮಾಂಸ ಬೇಕಾಗಿತ್ತು ಹಾಗಾಗಿ ಅವರು ಗೋಹತ್ಯೆಯನ್ನ ಭಾರತದಲ್ಲಿ ಶುರು ಮಾಡಿದರು ಆದರೆ ಹುಟ್ಟಾ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಿದ್ದ ನೆಹರು ಮಾತ್ರ ತಾನು ಪ್ರಧಾನಿಯಾದ ನಂತರವೂ ಗೋಹತ್ಯೆ ನಿಷೇಧ ಮಾಡುವುದರ ಬಗ್ಗೆ ಎಳ್ಳಷ್ಟೂ ಯೋಚಿಸಲಿಲ್ಲ.

1954 ರಲ್ಲಿ ಲೋಕಸಭೆಯಲ್ಲಿ ಗೋಹತ್ಯೆ ನೀಷೇಧದ ಬಿಲ್ ಇನ್ನೇನು ಪಾಸ್ ಆಗಬೇಕು ಅನ್ನೋ ಕ್ಷಣದಲ್ಲಿ ಕೇವಲ 7 ಜನ ಸಂಸದರ ವಿರೋಧದಿಂದ ಬಿಲ್ ಪಾಸ್ ಆಗದೆ ಬಿದ್ದು ಹೋಯ್ತು. ಲೋಕಸಭೆಯಲ್ಲಿ ಈ ಬಿಲ್ ಪರವಾಗಿ ಬಹುಮತವಿದ್ದರೂ ನೆಹರು ಈ ಬಿಲ್ ಕುರಿತು ಹೇಳಿದ್ದೇನು ಗೊತ್ತಾ? “ಈ ಬಿಲ್ ಪಾಸ್ ಏನಾದರೂ ಆದರೆ ನಾನು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ”

ನೆಹರುವಿನ ಈ ಹೇಳಿಕೆಯಿಂದ ಗಲಿಬಿಲಿಗೊಳಗಾದ ಸಂಸದರು, ನೆಹರು ಇಲ್ಲವಾದರೆ ಈ ಪಕ್ಷವನ್ನ ಸರ್ಕಾರವನ್ನ ಮುನ್ನಡೆಸೋರ್ಯಾರು? ನಮ್ಮ ರಾಜಕೀಯ ಭವಿಷ್ಯದ ಗತಿಯೇನು ಎಂಬ ಚಿಂತೆಯಿಂದ ಗೋಹತ್ಯೆ ನಿಷೇಧದ ಬಿಲ್’ಗೆ ತಯಾರಾಗಿದ್ದ ಸಂಸದರೆಲ್ಲ ಬಿಲ್’ನ ವಿರುದ್ಧ ಮತ ಹಾಕಿ ಅದನ್ನ ಪಾಸ್ ಆಗದಂತೆ ಮಾಡಿಬಿಟ್ಟರು. ಆದರೆ ನೆಹರು ಯಾಕೆ ಹಾಗೆ ಮಾಡಿದ ಅನ್ನೋದು ಮಾತ್ರ ಇಲ್ಲೀವರೆಗೂ ರಹಸ್ಯವಾಗೇ ಉಳಿದುಬಿಟ್ಟಿದೆ.

ಮೂರನೆ ತಪ್ಪು – ಕಾಶ್ಮೀರ ಸಮಸ್ಯೆ:

ಭಾರತ ಸ್ವಾತಂತ್ರ್ಯವಾದ ನಂತರ ಭಾರತದಲ್ಲಿ 563 ರಾಜ ಸಂಸ್ಥಾನಗಳನ್ನ ಒಗ್ಗೂಡಿಸುವುದಕ್ಕೆ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಅವಿರತ ಪರಿಶ್ರಮ ಪಟ್ಟರು. 562 ಸಂಸ್ಥಾಗಳೇನೋ ಭಾರತಕ್ಕೆ ಸೇರಲೊಪ್ಪಿದವು. ಉಳಿದದ್ದು ಒಂದೇ ಸಂಸ್ಥಾನ ಅದುವೇ ಕಾಶ್ಮೀರ

ಕಾಶ್ಮೀರದ ರಾಜ ಹರಿಸಿಂಗ್ ತಾನು ಸ್ವತಂತ್ರ ರಾಜನಾಗೇ ಇರುತ್ತೇನೆ, ನಾನು ಭಾರತಕ್ಕಾಗಲಿ ಪಾಕಿಸ್ತಾನಕ್ಕಾಗಲಿ ಸೇರಲ್ಲ ಎಂಬ ಹಠವನ್ನ ಮುಂದುವರೆಸಿದ. ಆದರೆ ಪಾಕಿಸ್ತಾನ ರಾಜಾ ಹರಿಸಿಂಗನ ವಿರುದ್ಧ ತನ್ನ ಬುಡಕಟ್ಟು ಮುಸಲ್ಮಾನರ ಸೈನ್ಯವನ್ನ ಕಾಶ್ಮೀರದ ಹಳ್ಳಿ ಹಳ್ಳಿಗಳಿಗೆ ನುಗ್ಗಿಸಿ ಯುದ್ಧ ಘೋಷಿಸಿಬಿಟ್ಟಿತು. ಇದರಿಂದ ಚಕಿತಗೊಂಡ ರಾಜಾ ಹರಿಸಿಂಗ್ ಅಕ್ಟೋಬರ್ 26, 1947 ರಂದು ಕಾಶ್ಮೀರವನ್ನ ಭಾರತಕ್ಕೆ ವಿಲೀನಗೊಳಿಸಲು ಒಪ್ಪಿಗೆ ಸೂಚಿಸಿದ.

ಪಾಕಿಸ್ತಾನ ವಶಪಡಿಸಿಕೊಂಡದ್ದ ಕಾಶ್ಮೀರದ ಭೂಭಾಗಗಳನ್ನ ರಕ್ಷಿಸೋ ಕಾರ್ಯ ಈಗ ಭಾರತದ ಸೈನಿಕರದ್ದಾಗಿತ್ತು. ಭಾರತೀಯ ಸೈನ್ತ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವ ಎಲ್ಲ ಸಾಮರ್ಥವನ್ನೂ ಹೊಂದಿತ್ತು ಆದರೆ ನೆಹರು ಮಾತ್ರ ಮತ್ತೊಂದು ಘೋರ ತಪ್ಪು ಮಾಡಿಬಿಟ್ಟಿದ್ದ. ನೆಹರು ವಿಶ್ವಸಂಸ್ಥೆತೆಯೆದುರು ಮಂಡಿಯೂರಿ ಈ ಸಮಸ್ಯೆಯ ಮಧ್ಯಸ್ಥಿಕೆಗೆ ಗೋಗರೆದನು. ವಿಶ್ವಸಂಸ್ಥೆ ಮಧ್ಯಸ್ತಿಕೆ ವಹಿಸಿ ಭಾರತ ಹಾಗು ಪಾಕಿಸ್ತಾನ ಎರಡೂ ದೇಶಗಳಿಗೂ ಸೀಸ್ ಫೈರ್ ಮಾಡದಂತೆ ಆದೇಶ ನೀಡಿತು. ಇದರರ್ಥ ಪಾಕಿಸ್ತಾನ ಹಾಗು ಭಾರತೀಯ ಸೈನ್ಯ ತತ್ಕಾಲೀನವಾಗಿ ತಾವ ಜಾಗದಲ್ಲಿದಾರೋ ಆ ಜಾಗ ಬಿಟ್ಟು ಮುಂದೆ ಯುದ್ಧ ಮಾಡಬಾರದು ಎಂಬುದಾಗಿತ್ತು.

ಅದಾಗಲೇ ರಾಜಾ ಹರಿಸಿಂಗನ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನ ಕಾಶ್ಮೀರದ ಕೆಲ ಭೂಭಾಗದಲ್ಲಿ ನೆಲೆಯೂರಿತ್ತು. ಆ ಭೂಭಾಗವೇ ಇಂದಿನ ಕಾಶ್ಮೀರದ “ಪಾಕ್ ಆಕ್ರಮಿತ ಕಾಶ್ಮೀರ”. ನೆಹರು ವಿಶ್ವಸಂಸ್ಥೆಗೆ ದೂರು ನೀಡದೇ ಹೋದಲ್ಲಿ ಭಾರತೀಯ ಸೈನ್ಯ ಪಾಕಿಸ್ತಾನ ವಶಪಡಿಸಿಕೊಂಡಿದ್ದ ಭೂಭಾಗವನ್ನೂ ವಾಪಸ್ ಪಡೆದುಕೊಂಡಿರುತ್ತಿತ್ತು. ನೆಹರುವಿನ ತಪ್ಪಿನಿಂದ ಮಂದೆ ವಿಶ್ವಸಂಸ್ಥೆ ಜಮ್ಮು ಕಾಶ್ಮೀರವನ್ನ “Disputed Land” ಅಂತ ಘೋಷಿಸಿದ್ದರಿಂದ ಭಾರತೀಯ ಸೇನೆಗೆ ಭಾರಿ ಹಿನ್ನಡೆಯಾಗಿ ಪಾಕಿಸ್ತಾನ ವಶಪಡಿಸಿಕೊಂಡಿದ್ದ ಭೂಭಾಗ ಪಾಕಿಸ್ತಾನಕ್ಕೇ ಬಿಟ್ಟು ಕೊಡೋ ಹಾಗಾಯಿತು.

ಇಂದು ಕಾಶ್ಮೀರದಲ್ಲಿನ ಎಲ್ಲ ಸಮಸ್ಯೆಗಳಿಗೂ ಕಾರಣ ಅಂದು ಪಾಕಿಸ್ತಾನ ವಶಪಡಿಸಿಕೊಂಡಿದ್ದ ಪಾಕ್ ಆಕ್ರಮಿತ ಕಾಶ್ಮೀರವೇ ಆಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕವೇ ಪಾಕಿಸ್ತಾನ ತನ್ನ ಭಯೋತ್ಪಾದಕರನ್ನ ಕಾಶ್ಮಿರದೊಳಗೆ ನುಗ್ಗಿಸಿ ಇಂದು ಕಾಶ್ಮೀರವನ್ನ ಹೊತ್ತಿ ಉರಿಯುವಂತೆ ಮಾಡುತ್ತಿರೋದು.

ನೆಹರು ಮಾಡಿದ ಘೋರ ತಪ್ಪುಗಳಿಂದ ಭಾರತ ಇಂದಿಗೂ ಪಾಕಿಸ್ತಾನ ಹಾಗು ಚೀನಾ ದೇಶದ ವಿರುದ್ಧ ಹೆಣಗಬೇಕಾದ ಪರಿಸ್ಥಿತಿ ಬಂದಿದೆ.

ತಾವು 70 ವರ್ಷಗಳ ಹಿಂದೆ ಮಾಡಿದ ತಪ್ಪಿಗೆ ಇಂದು ಪ್ರಧಾನಿ ಮೋದಿ ಜೀಯವರನ್ನ ದೂಷಿಸುತ್ತಿರೋ ಕಾಂಗ್ರೆಸ್ಸಿಗರು ಸ್ವಲ್ಪ ತಮ್ಮ ಇತಿಹಾಸವನ್ನ ನೋಡಬೇಕು.

ದೇಶಕ್ಕೆ ಹೊಸ ರಕ್ಷಣಾ ಮಂತ್ರಿಯಾಗಿ ನಿರ್ಮಲಾ ಸೀತಾರಾಮನ್ ನಿಯುಕ್ತಿಗೊಂಡಿದ್ದಾರೆ. ಅಂದು 1971 ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿ, ರಕ್ಷಣಾ ಸಚಿವೆಯಾಗಿ ಪಾಕಿಸ್ತಾನವನ್ನ ತುಂಡರಿಸಿ ಪಾಕಿಸ್ತಾನ ಬಾಂಗ್ಲಾದೇಶ ಎಂಬ ಪ್ರತ್ಯೇಕ ರಾಷ್ಟ್ರಗಳನ್ನಾಗಿಸಿದ್ದರು. ಈಗ ಮತ್ತೊಬ್ಬ ಮಹಿಳೆ ನಿರ್ಮಲಾ ಸೀತಾರಾಮನ್ ಪಾಕಿಸ್ತಾನಕ್ಕೆ ಹೇಗೆ ಪಾಠ ಕಲಿಸುತ್ತಾರೋ ಕಾದು ನೋಡಬೇಕು.

ಒಟ್ಟಿನಲ್ಲಿ 70 ವರ್ಷಗಳ ಹಿಂದೆ ನೆಹರು ಮಾಡಿದ್ದ ತಪ್ಪುಗಳಿಗೆ ನಾವು ಇಂದೂ ಹೆಣಗುತ್ತಿರೋದು ಮಾತ್ರ ದೇಶಕ್ಕೆ ಕಾಂಗ್ರೆಸ್ಸಿನ ಅತಿ ದೊಡ್ಡ ಕೊಡುಗೆಯೇ ಸರಿ!!!

 

– Vinod Hindu Nationalist

Tags

Related Articles

Close