ಅಂಕಣ

ನೆಹರೂಗಿಂತ ಮೋದಿಯವರ ಆಡಳಿತದಲ್ಲಿ ಭಾರತ ಹೆಚ್ಚಿನ ಪ್ರಜಾಪ್ರಭುತ್ವ ಸಮತೋಲನವನ್ನು ಹೊಂದಿದೆ- ಪ್ರಸಿದ್ಧ ವೈದ್ಯರಿಂದ ವಿಶ್ಲೇಷಣೆ!

ನೆಹರೂ 17 ವರ್ಷಗಳ ಕಾಲ ಸಂಸತ್ತಿನ ಎರಡೂ ಸದನಗಳನ್ನು ಮತ್ತು ರಾಜ್ಯಗಳನ್ನು ಆಳ್ವಿಕೆ ನಡೆಸಿದ್ದರು. ಕೇರಳವನ್ನು ಹೊರತು ಪಡಿಸಿ ಉಳಿದೆಲ್ಲಾ ರಾಜ್ಯಗಳು ನೆಹರೂ ತಾಳಕ್ಕೆ ಕುಣಿಯುತ್ತಿತ್ತು. !! ರಾಜ್ಯಗಳು ಇವರ ಕೈ ಸನ್ನೆಯಂತಿರುವಾಗ ಪ್ರಜಾಪ್ರಭುತ್ವ ಎಂಬ ಸಂಸ್ಥೆಯ ಬಿಲ್ಡರ್ ಆಗಿದ್ದವರು ನೆಹರೂ. ತನಗೆ ಇಷ್ಟ ಬಂದ ಹಾಗೆ ಸರ್ಕಾರದ ಮಸೂದೆಗಳನ್ನು ಅಂಗೀಕಾರ ಮಾಡುತ್ತಿದ್ದರು.!!

ಇಂದು ಭಾರತವು ನೆಹರೂ ಕಾಲದ ಅಧಿಕಾರಕ್ಕಿಂತಲೂ ಹೆಚ್ಚಿನ ಸಮಾನ ಅಧಿಕಾರವು ಹೊಂದಿದೆ. ಈಗಿನ ಸರ್ಕಾರವು ನ್ಯಾಯ ಧರ್ಮ ಮತ್ತು ಸಮತೋಲನವಾದ ಪ್ರಜಾಪ್ರಭುತ್ವವನ್ನು ಹೊಂದಿದೆ. ಸುಪ್ರಿಂ ನೀಡಿದ್ದ ಐತಿಹಾಸಿಕ ತೀರ್ಪುಗಳಾದ ತ್ರಿವಳಿ ತಲಾಖ್ ರದ್ದು, ಪಟಾಕಿಗಳ ಮೇಲಿನ ನಿಷೇಧ, ಇದೆಲ್ಲಾ 1950ಕ್ಕಿಂತ ಹೆಚ್ಚು ಪರಿಣಾಮ ಬೀರಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಅಂದಿನ ಯುಗಕ್ಕೂ ಇಂದಿನ ಯುಗಕ್ಕೂ ಬಹಳ ವ್ಯತ್ಯಾಸವಿದೆ. ಇಂದು ಹಲವಾರು ವಿರೋಧ ಪಕ್ಷಗಳ ರಾಜ್ಯಗಳು ಮೋದಿಯವರಿಗೆ ಇಕ್ಕಟ್ಟನ್ನು ತಂದೊದಗಿದೆ. ಹಲವಾರು ರಾಜ್ಯ ಸರ್ಕಾರಗಳ ವಿರೋಧವು, ರಾಜ್ಯಸಭೆಯ ವಿರೋಧವು ಮೋದಿಯವರ ಮೇಲೆ ಪ್ರಹಾರವನ್ನು ನಡೆಸುತ್ತದೆ. ಯಾವುದೇ ಪ್ರಮುಖ ಮಸೂದೆಗಳಿಗೂ ರಾಜ್ಯ ಸರ್ಕಾರ ಮತ್ತು ರಾಜ್ಯಸಭೆಯ ಅಂಗೀಕಾರ ಕೆಲವೊಂದಕ್ಕೆ ಅಗತ್ಯವೆನಿಸುತ್ತದೆ.

1957ರಲ್ಲಿ ಮೊದಲ ಭಾರಿಗೆ ಚುನಾಯಿತ ಪಕ್ಷಕ್ಕೆ ವಿರೋಧ ಪಕ್ಷವನ್ನು ಎದುರಿಸಿದಾಗ ನೆಹರೂ ಪ್ರಜಾಪ್ರಭುತ್ವದ ಪರೀಕ್ಷೆಯನ್ನು ವಿಫಲಗೊಳಿಸಿದರು. ಆದರೆ ಪ್ರಸ್ತುತ ಮೋದಿ ಸರ್ಕಾರದಲ್ಲಿ ನ್ಯಾಂಗ ವ್ಯವಸ್ಥೆಯೂ ಅಚ್ಚುಕಟ್ಟಾಗಿ ಪಾಲನೆಯಾಗುತ್ತಿದೆ ಎಂಬುವುದಕ್ಕೆ ಹಲವಾರು ನಿದರ್ಶನಗಳಿವೆ.

ಕೇರಳದಲ್ಲಿ ತನ್ನ ಅಧಿಕಾರದ ಅಂಕುಶ ಗಟ್ಟಿಯಾಗಿಲ್ಲ ಎಂದು ತಿಳಿದ ತಕ್ಷಣವೇ ನೆಹರೂ ರಾಜಕೀಯ ನಾಟಕವನ್ನು ಆಡಲು ಶುರುವಿಡುತ್ತಾರೆ. ಎರಡು ವರ್ಷದಲ್ಲಿ ರಾಜಕೀಯ ಅಸಮತೋಲವನ್ನು ಸೃಷ್ಟಿಸಿ ರಾಜ್ಯಪಾಲರ ವಸಾಹತನ್ನು ಸ್ಥಾಪಿಸುತ್ತಾರೆ. ಈ ಮೂಲಕ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.

ಈ ಸಮಯದಲ್ಲಿ ಜವಹರಲಾಲ್ ನೆಹರೂರ ಪುತ್ರಿ ಇಂದಿರಾ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಈ ಮೂಲಕ ವಂಶಪಾರಂಪರ್ಯ ರಾಜಕಾರಣವನ್ನು ಆರಂಭಿಸುತ್ತಾರೆ. ಇಂದಿರಾ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದರೂ, ಅದರ ಸಂಪೂರ್ಣ ಅಧಿಕಾರವು ನೆಹರೂರವರ ಕೈಯಲ್ಲಿತ್ತು.

ಕಾಂಗ್ರೆಸ್ ಮುಖಂಡ ಮೌಲಾನ ಅಜಾದ್ ಪಕ್ಷದ ಅಧ್ಯಕ್ಷರಾಗಿದ್ದಾಗ (1940ರಿಂದ 1946) ನೆಹರೂ ವಿರುದ್ಧ ಯಾವುದೇ ಟೀಕೆ ಟಿಪ್ಪಣಿಯನ್ನು ಮಾಡುವ ಗೋಜಿಗೆ ಹೋಗಲೇ ಇಲ್ಲ. ಆದರೆ ತಮ್ಮ ಅಧಿಕಾರದ ಅವಧಿ ಮುಗಿದ ನಂತರ ಅವರು ತಮ್ಮ ಪುಸ್ತಕದಲ್ಲಿ ನೆಹರೂ ಬಗ್ಗೆ ಬರೆದಿದ್ದರು. ನೆಹರೂ ಅಧಿಕಾರದಲ್ಲಿ ಸರ್ವಾಧಿಕಾರದ ಬಗ್ಗೆ ವಿಸ್ಕøತವಾಗಿ ಬರೆದಿದ್ದರು. ಆದರೆ ಅದನ್ನೂ ಬಿಡುಗಡೆಗೊಳಿಸದ ರೀತಿಯಲ್ಲಿ ಅವರ ಸ್ಥಿತಿಯಿತ್ತೆಂದರೆ ನಂಬಲೇಬೇಕು. ಬರೋಬ್ಬರಿ ಅವರ ಸಾವಿನ 30 ವರ್ಷಗಳ ನಂತರ ಆ ಪುಸ್ತಕ ಮುಖ್ಯ ವಾಹಿನಿಗೆ ಬಂದಿತ್ತು. ನೆಹರೂರ ಆಡಳಿತದ ಸರ್ವಾಧಿಕಾರದ ವಿಜ್ರಂಭನೆ ಹೇಗಿತ್ತು ಎಂಬುವುದಕ್ಕೆ ಇದಕ್ಕಿಂತ ಹೆಚ್ಚಿನ ನಿದರ್ಶನ ಬೇಕಾ..?

ಆರ್‍ಬಿಐ ಗವರ್ನರ್ ಆಗಿದ್ದಂತಹ ರಘು ರಾಜನ್‍ರವರು ಕಳೆದ ತಿಂಗಳು ತನ್ನ ಅಧಿಕಾರದಿಂದ ಇಳಿದ ತಕ್ಷಣ ಮೋದಿ ಸರ್ಕಾರದ ಕೆಲವೊಂದು ಕಾರ್ಯವೈಖರಿಯನ್ನು ಟೀಕಿಸಿದ್ದರು. ಇದರ ಅರ್ಥ ಪ್ರತಿಯೊಬ್ಬರಿಗೂ ಸರ್ಕಾರದ ವ್ಯವಸ್ಥೆಯನ್ನು ಪ್ರಶ್ನಿಸುವಂತಹ ಹಕ್ಕಿದೆ ಎಂದು. ನೆಹರೂ ಕಾಲದಲ್ಲಿ ಈ ರೀತಿ ಟೀಕಿಸಿದ್ದರೆ ಅವರನ್ನು ತೇಜೋವದೆ ಮಾಡುವಂತಹ ವ್ಯವಸ್ಥೆ ಇತ್ತು. ಆದರೆ ಮೋದಿ ಯುಗದಲ್ಲಿ ಪ್ರತಿಯೊಬ್ಬರಿಗೂ ವ್ಯವಸ್ಥೆಯನ್ನು ಪ್ರಶ್ನಿಸುವ ಹಕ್ಕಿದೆ ಎಂದು ನಿರೂಪಿಸಿದ್ದಾರೆ.

ನೆಹರೂ ಅವರ ಬಗೆಗಿನ ಅಜಾದ್ ಅವರ ಪುಸ್ತಕ ತಡವಾಗಿ ಬೆಳಕಿಗೆ ಬಂದಿದ್ದರೂ ಕೂಡಾ ಅದರಲ್ಲಿ ಬಹಳ ಅಮೂಲ್ಯವಾದ ಮಾಹಿತಿಗಳು ಒಳಗೊಂಡಿದ್ದವು. ಜಾತ್ಯಾತೀತ ಪಕ್ಷದ, ಜಾತ್ಯಾತೀತ ನಾಯಕನೆಂದು ಬಿಂಬಿಸಿಕೊಳ್ಳುತ್ತಿದ್ದ ನೆಹರೂರ ನಿಜಬಣ್ಣ ಬಯಲಾಗಿತ್ತು.!! ನೆಹರೂ ಒಬ್ಬ ಜತ್ಯಾತೀತ ನಾಯಕನಲ್ಲ ಎಂಬುವುದನ್ನು ಸ್ವತಃ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಮೌಲಾನ ಅಜಾದ್‍ರವರೇ ಬರೆದುಕೊಂಡಿದ್ದರು. ಜಾತ್ಯಾತೀತರಂತೆ ವರ್ತಿಸುತ್ತಿದ್ದ ನೆಹರೂ 1937ರಲ್ಲಿ ನಡೆದ ಬಿಹಾರ ಮತ್ತು ಮುಂಬೈನ ಚುನಾವಣೆಗಳಲ್ಲಿ ತನಗೆ ಸಮಾನ ಜಾತಿಯವರಾದ ಮೇಲ್ಜಾತಿಯವರನ್ನು ನೇಮಿಸಿ, ಸಯ್ಯದ್ ಮಹಮ್ಮದ್ (ಮುಸ್ಲಿಂ) ಮತ್ತು ಖುರ್ಷಿದ್ ನಾರಿಮನ್(ಪಾರ್ಸೀ) ಎಂಬವರನ್ನು ನೇಮಿಸಿ ಕೆಳಜಾತಿಯವರನ್ನು ಕಡೆಗಣಿಸಿದ್ದರು.!! ಈ ಮೂಲಕ ಸ್ವತಃ ಪಕ್ಷದ ಆಂತರಿಕ ವಲಯದಲ್ಲೇ ವೈಮನಸ್ಸಿಗೆ ಕಾರಣವಾಗಿತ್ತು.

ಇದು ರಾಜಕೀಯ ಅವಮಾನಗಳನ್ನು ಎದುರಿಸುತ್ತಿದ್ದ ಮಹಮ್ಮದ್ ಜಿನ್ನಾಗೆ ಕಾಂಗ್ರೆಸ್ ಮೇಲೆ ರಾಜಕೀಯ ದಾಳಿ ಮಾಡಲು ಮತ್ತು ರಾಜಕೀಯ ಅಸ್ತಿರತೆಯನ್ನು ಸೃಷ್ಟಿಸಲು ಸುಲಭವಾಯಿತು. ಇದರಿಂದ ಭಾರತದ ರಾಜಕೀಯ ಪರಿಸ್ಥಿತಿಯೂ ಹದಗೆಡುವ ಲಕ್ಷಣಗಳು ಗೋಚರಿಸುತ್ತಿತ್ತು ಎಂದು ಹೇಳಲಾಗುತ್ತಿತ್ತು.

ನೆಹರೂ ಪಕ್ಕಾ ನಾಸ್ತಿಕರಾಗಿದ್ದರು. ನಾಸ್ತಿಕರಾಗಿದ್ದರೂ ಸಹ ತನ್ನ ಜಾತಿಯನ್ನು ಬಳಸಿ, “ಪಂಡಿತ್‍ಜೀ” ಎನ್ನುವ ಬ್ರಾಂಡ್‍ನ್ನು ಸೃಷ್ಟಿಸಿ ಮೈಲೇಜ್ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದರು. ಮಾತ್ರವಲ್ಲದೆ ತನ್ನ ಜಾತಿಯನ್ನು ಉನ್ನತ ಸ್ಥಾನಕ್ಕೇರಿಸುವಲ್ಲಿ ಗಮನ ಹರಿಸಿರುವುದು ಸ್ಪಷ್ಟವಾಗಿತ್ತು. ಅವರ ಸ್ಥಳೀಯ ಭಾಷಣದಲ್ಲಿ “ಪಂಡಿತ್ ಜವಹರಲಾಲ್” ಎಂಬ ಹೆಸರನ್ನೇ ನಮೂದಿಸುತ್ತಿದ್ದರು. ಇಂಗ್ಲಿಷ್ ಮಾಧ್ಯಮಗಳಲ್ಲಿ ಮಾತ್ರ ತಮ್ಮ ತರ್ಕಬದ್ದ ಜಾತ್ಯಾತೀತೆಯನ್ನು ವ್ಯಕ್ತಪಡಿಸುತ್ತಿದ್ದರು.

ನೆಹರೂರವರ ವರ್ತನೆ ಸರ್ವಾಧಿಕಾರ ಧೋರಣೆಯನ್ನು ಅನುಸರಿಸಿತ್ತು. ತೀವ್ರ ಕಮ್ಯುನಿಸ್ಟ್ ವಾದಿಗಳಾಗಿದ್ದ ಮಾವೋ ಮತ್ತು ಸ್ಟಾಲಿನ್ ರವರು 1930ರಲ್ಲಿ ಕೋಟ್ಯಾಂತರ ಜೀವಗಳ ಮಾರಣ ಹೋಮಕ್ಕೆ ಕಾರಣರಾಗಿದ್ದರು. ಅವರ ಅಟ್ಟಹಾಸ ಮುಗಿಲು ಮುಟ್ಟಿತ್ತು. ಆದರೆ ನೆಹರೂರ ಅಧಿಕಾರ ಅವರಿಗಿಂತ ಸ್ವಲ್ಪವೇ ಭಿನ್ನವಾಗಿತ್ತು. ನೆಹರೂಗೆ ಕೊಲೆಗಳನ್ನು ಮಾಡಿಸುವಷ್ಟು ಧೈರ್ಯ ಇಲ್ಲದಿದ್ದರೂ ತನ್ನ ಸರ್ವಾಧಿಕಾರಿ ಧೋರಣೆಗಳಿಂದಲೇ ದೇಶದ ದಾರಿಯನ್ನು ತಪ್ಪಿಸಿ ಹಿಂಸಾತ್ಮಕ ಚಟುವಟಿಕೆಗಳಿಗೆ ಕಾರಣರಾಗಿದ್ದರು.

ಭಾರತದಲ್ಲಿ ಮಾವೋ ಹಾಗೂ ಸ್ಟಾಲಿನ್‍ರಂತೆ ಕೃತ್ಯಗಳನ್ನು ಎಸೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ತುರ್ತು ಪರಿಸ್ಥಿತಿ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ತನ್ನ ಸರ್ವಾಧಿಕಾರದ ಪರಮಾವಧಿಯನ್ನು ಮೆರೆದಿದ್ದರು. ತನ್ನ ವಿರುದ್ಧ ಧ್ವನಿಯೆತ್ತಿದವರ ಹುಟ್ಟಡಗಿಸುತ್ತಿದ್ದರು. ಅಷ್ಡಿದ್ದರೂ ಮತ್ತೆ ಅವರು ಸಂಸತ್ ಪ್ರವೇಶಿಸಲು ಚುನಾವಣೆಯನ್ನು ಕರೆಯುವಂತೆ ಮಾಡಬೇಕಾಯಿತು.

ಇಂದಿರಾ ಗಾಂಧಿ ನಂತರ ಅಧಿಕಾರಕ್ಕೆ ಬಂದ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ (1980) ಜಿಡಿಪಿ ಬೆಳವಣಿಗೆಯಲ್ಲಿ 6.5%ರಷ್ಟು ಏರಿಕೆ ಕಂಡಿತ್ತು. ಇದು ಕೇವಲ 2 ವರ್ಷಗಳಲ್ಲಿ ಮಾಡಿದ ಅತಿ ದೊಡ್ಡ ಸಾಧನೆಯಾಗಿತ್ತು.

ನಂತರ ಜಾರ್ಜ್ ಫೆರ್ನಾಂಡೀಸ್ ರವರ ಸ್ವದೇಶಿ ಆಂದೋಲನವೂ ಭಾರತದ ಆರ್ಥಿಕತೆಯನ್ನು ಎತ್ತರಿಸಿತು. ಕೋಲಾ, ಥಮ್ಸ್‍ಅಪ್ ಸಹಿತ ಅನೇಕ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಭಾರತದ ಜಿಡಿಪಿ ಹೆಚ್ಚಿಸಲು ತನ್ನ ಅಸ್ತ್ರವನ್ನು ಪ್ರಯೋಗಿಸಿದರು.

ಪ್ರಸ್ತುತ ಸಮಯದಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿ ಅರುಣಾಚಲ ಪ್ರದೇಶ ಹಾಗೂ ಡೋಕ್ಲಾಂನಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಆದರೆ ಮೋದಿ ಸರ್ಕಾರದ ಕಠಿಣ ನಿರ್ಧಾರದಿಂದ ಹಾಗೂ ರಾಜತಾಂತ್ರಿಕ ನಡೆಯಿಂದ ಭಾರತಕ್ಕೆ ಗೆಲುವಾಗಿತ್ತು.

ಹಿಂದೆ ನೆಹರೂ ಕಾಲದಲ್ಲಿ ವಿದೇಶಿ ಆಕ್ರಮಣಗಳನ್ನು ಎದುರಿಸಲು ಅಶಕ್ತರಾಗಿದ್ದ ನೆಹರೂ, ಜಾಗತಿಕ ಮಟ್ಟದಲ್ಲಿ ತನ್ನ ಹೆಸರು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಬೇಕು ಎಂದು ಹಠಕ್ಕೆ ಬಿದ್ದಿದ್ದರು. ಇದಕ್ಕಾಗಿ ದೇಶೋದ್ಧಾರ ಬಿಟ್ಟು ವಿದೇಶದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.

ಮೋದಿಯವರು ಪ್ರಧಾನಿ ಪಟ್ಟ ಅಲಂಕರಿಸಿದ ನಂತರ ಅವರಿಗೂ ಅನೇಕ ಸವಾಲುಗಳು ಎದುರಾಗಿದ್ದವು. ಗಡಿ ವಿವಾದಗಳು ತೀವ್ರ ಸವಾಲನ್ನು ಉಂಟುಮಾಡಿದ್ದವು. ಆದರೂ ತನ್ನ ರಾಜತಾಂತ್ರಿಕ ನಡೆಯಿಂದ ಚೀನಾ, ಪಾಕಿಸ್ಥಾನವನ್ನು ಸುಲಭವಾಗಿ ಎದುರಿಸಿ ಜಯವನ್ನು ಭಾರತದ ಬುಟ್ಟಿಗೆ ಹಾಕಿದ್ದರು. ಇದು ನೆಹರೂ ಮತ್ತು ಮೋದಿಯವರಿಗೆ ಇರುವಂತಹ ವ್ಯತ್ಯಾಸ.

ವಿದೇಶ ಸುತ್ತುವ ಖಯಾಲಿ, ದೇಶ ಬೇಕಾದರೆ ಸಾಯಲಿ. ಇದು ನೆಹರೂ ವ್ಯಕ್ತಿತ್ವ.

ಏಕ್ ಭಾರತ್, ಶ್ರೇಷ್ಟ್ ಭಾರತ್. ಇದು ಮೋದಿ ವ್ಯಕ್ತಿತ್ವ…

-ಡಾ. ಪ್ರಗತಿ ದಾಸ್

Tags

Related Articles

Close