ಇತಿಹಾಸ

ನೆಹರೂ-ಗಾಂಧಿ ಕುಟುಂಬ ಹೇಗೆ ತಮಗೆ ತಾವೇ ಭಾರತ ರತ್ನ ಘೋಷಿಸಿಕೊಂಡರು ಗೊತ್ತೇ?! ಅತ್ಯದ್ಭುತವಾದ ದುರಂತ ಕಥೆ!

ಯಾವ ಯಾವ ರೀತಿಯ ಮನುಷ್ಯರು ಭೂಮಿ ಮೇಲೆ ಇದ್ದರೋ ಗೊತ್ತಿಲ್ಲ. ಆದರೆ ಮನುಷ್ಯನ ಆಸೆ ದುಡ್ಡು, ಅಧಿಕಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು
ತಿಳಿದುಕೊಂಡರೆ ಅದು ದೊಡ್ಡ ತಪ್ಪಾಗುತ್ತೆ ಎಂದು ಅನಿಸುತ್ತೇ!! ಯಾಕೆಂದರೆ ನನಗೆ ಪ್ರಶಸ್ತಿ ಬೇಕು ಎಂದು ನಾನೇ ಶಿಫಾರಸು ಮಾಡಿಸಿಕೊಂಡು, ಅದನ್ನು
ಸನ್ಮಾಸಿಕೊಂಡರೆ ಅದು ಒಂದು ರೀತಿಯ ವಿಚಿತ್ರ ಅಲ್ವೇ? ಇತರೊಂದಿಗೆ ನನಗೆ ಈ ಪ್ರಶಸ್ತಿಯನ್ನು ನಾನೇ ಕೊಡಿಸುತ್ತೇನೆ ಎಂದು ಹೇಳುವುದು ಅನೈತಿಕ ಎಂದು
ಅನಿಸುವುದಿಲ್ಲವೇ? ನಾನು ಈ ದೇಶದಲ್ಲಿ ಎಲ್ಲರಿಗಿಂತಲೂ ಶ್ರೇಷ್ಠನೆಂದು ಹೇಳಿಕೊಳ್ಳುವುದು ಮೂರ್ಖತನದ ಪರಮಾವಧಿ ಎಂದು ಹೇಳಿದರೂ ತಪ್ಪಿಲ್ಲ ಅಲ್ವೇ?

ಹೌದು, ಪ್ರಶಸ್ತಿಗೂ ಮನುಷ್ಯನ ಕಣ್ಣು ಬಿದ್ದಿದೆ ಎಂದರೆ ನಂಬ್ತೀರಾ? ಹಾಗಾದರೆ, ದಯವಿಟ್ಟು ಪಂಡಿತ್ ಜವಾಹರಲಾಲ್ ನೆಹರು ಮತ್ತು ಅವರ ಪ್ರೀತಿಯ ಮಗಳು
ಶ್ರೀಮತಿ ಇಂದಿರಾ ಗಾಂಧಿಯನ್ನು ನಾವು ಹೇಗೆ ಕರೆಯಬೇಕು ಎಂಬುವುದನ್ನು ನಿರ್ಧರಿಸಿ!! ಯಾಕೆಂದರೆ ಈ ಲೇಖನದ ಆರಂಭದಲ್ಲಿ ಹೇಳಲಾದ ಈ ಎಲ್ಲಾ ಮೂರು ವಿಷಯಗಳನ್ನು ಮಾಡಿದವರು, ಮಾಡಿಸಿಕೊಂಡವರು ಬೇರಾರು ಅಲ್ಲ ನಮ್ಮ ದೇಶದ ‘ಶ್ರೇಷ್ಠ ವ್ಯಕ್ತಿಗಳು’ ಎಂದು ಕರೆಸಿಕೊಂಡ ಜವಾಹರಲಾಲ್ ನೆಹರು ಮತ್ತು ಅವರ ಮುದ್ದಿನ ಮಗಳು ಇಂದಿರಾ ಗಾಂಧಿ!!!

ಈ ಅತ್ಯುತ್ತಮ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಭಾರತ ರತ್ನ ,ಭಾರತದ ನಾಗರಿಕರಿಗೆ ದೊರೆಯಬಹುದಾದ ಶ್ರೇಷ್ಠ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ,
ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಭಾರತದ
ಪ್ರಧಾನಮಂತ್ರಿಗಳು, ಪ್ರತಿ ವರ್ಷಕ್ಕೆ ಗರಿಷ್ಠ ಮೂರು ನಾಮನಿರ್ದೇಶನಗಳನ್ನು ಅಧ್ಯಕ್ಷರಿಗೆ ಶಿಫಾರಸು ಮಾಡಲು ನೀಡುತ್ತಾರೆ.

ನಮ್ಮ ದೇಶದಲ್ಲಿ ಭಾರತರತ್ನ ಪ್ರಶಸ್ತಿಗಳ ಪಟ್ಟಿಯನ್ನು ಗಮನಿಸಿದಾಗ ನೆಹರು-ಗಾಂಧಿ ಕುಟುಂಬದ ಮೂವರು ಸದಸ್ಯರು ಭಾರತರತ್ನವನ್ನು ಪಡೆದಿದ್ದಾರೆ ಎಂದು
ಗಮನಿಸಬಹುದಾಗಿದೆ. 1955ರಲ್ಲಿ ಪಂಡಿತ್ ಜವಾಹರಲಾಲ್ ನೆಹರು, 1971ರಲ್ಲಿ ಶ್ರೀಮತಿ ಇಂದಿರಾ ಗಾಂಧಿ ಮತ್ತು 1991ರಲ್ಲಿ ರಾಜೀವ್ ಗಾಂಧಿ ಈ ಅತ್ಯುನ್ನತ
ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಇದೀಗ ಮೂಡಿ ಪ್ರಶ್ನೆ ಏನಂದರೆ ಅತ್ಯುತ್ತಮ ನಾಗರಿಕ ಪ್ರಶಸ್ತಿಗೆ ಅರ್ಹತೆ ಪಡೆದುಕೊಳ್ಳಲು ಇವರು ಮಾಡಿರುವ
ಕೊಡುಗೆಗಳೇನು ಮತ್ತು ಇವರಿಗೆ ಶಿಫಾರಸು ನೀಡಿದವರಾದರು ಯಾರು ಎನ್ನುವುದು!!!

ಪಂಡಿತ್ ಜವಾಹರಲಾಲ್ ನೆಹರು ಅವರು ನಮ್ಮ ದೇಶಕ್ಕೆ ದ್ರೋಹ ಮಾಡಿದ್ದಲ್ಲದೇ ಎಲ್ಲವನ್ನೂ ತಮ್ಮರಾಜಕೀಯ ಲಾಭಕ್ಕಾಗಿ ಬಳಸಿಕೊಂಡಂತಹ ವ್ಯಕ್ತಿ. ಇವರ
ತರ್ಕಬದ್ಧ ನೀತಿಗಳಿಂದ ಭಾರತವನ್ನು ದೊಡ್ಡ ತೊಂದರೆಗೆ ಸಿಲುಕಿಕೊಂಡಿರುವಂತೆ ಮಾಡಿದೆ. ಇದರ ಪರಿಣಾಮವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 70
ವರ್ಷಗಳಾದರೂ ಕೂಡ ನಾವು ಇಂದಿಗೂ ಇವರೂ ಮಾಡಿದ ತಪ್ಪಿಗೆ ನರಳುತ್ತಿದ್ದೇವೆ!! ನೆಹರು, ಸುಭಾಷ್‍ಚಂದ್ರ ಬೋಸ್ ಅವರಿಗೆ ಮಾಡಿದ ದ್ರೋಹ ಯಾರೂ
ಕ್ಷಮಿಸಲಾರರು ಯಾಕೆಂದರೆ ಸುಭಾಷ್‍ಚಂದ್ರ ಬೋಸ್ ಅವರನ್ನು ಯುದ್ದದ ಅಪರಾಧಿ ಎಂದು ಅವರನ್ನು ಬ್ರಿಟಿಷರಿಗೆ ಒಪ್ಪಿಸಿದಂತಹ ವ್ಯಕ್ತಿ. ಇಷ್ಟು ಮಾತ್ರವಲ್ಲದೇ
ಕಾಶ್ಮೀರ ವಿವಾದಕ್ಕೆ ಮೂಲ ಕಾರಣಕರ್ತರಾಗಿ, ಭಾರತದ ಪರಮಾಣು ಕಾರ್ಯಕ್ರಮವನ್ನು ವಿರೋಧಿಸಿದವರು ನೆಹರು!! ಅಲ್ಲದೇ, ಭಾರತದಲ್ಲಿ ರಾಜವಂಶದ
ರಾಜಕೀಯವನ್ನು ಪರಿಚಯಿಸಿದ್ದು,ಈ ರಾಜವಂಶದ ರೋಗ ಇಂದಿಗೂ ಮಾರ್ಪಟ್ಟಿದೆ ಎಂದರೆ ಈ ವ್ಯಕ್ತಿ ನಿಜವಾಗಿಯೂ ಭಾರತರತ್ನಕ್ಕೆ ಅರ್ಹರಾಗಿದ್ದಾರೆಯೇ?

ಹಾಗಾದರೆ, ಶ್ರೀಮತಿ ಇಂದಿರಾ ಗಾಂಧಿಯವರ ಸಾಧನೆಗಳು ಅಥವಾ ಕೊಡುಗೆಗಳಾವುವು? ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ತಂದಿರುವುದು ಇವರ ಸಾಧನೆಯೇ? ಇವರು ಪ್ರಧಾನಮಂತ್ರಿಯ ಅಧಿಕಾರದಲ್ಲಿದ್ದಾಗ ದೇಶವು ತುರ್ತುಪರಿಸ್ಥಿತಿಯಿಂದ ಮತ್ತು ಅಧಿಕಾರಶಾಯಿಯಲ್ಲಿ ಅತಿರೇಕವಾದ ಭ್ರಷ್ಟಚಾರದ ಕಾರಣದಿಂದ ದೇಶವು ಕೆಟ್ಟ ಸಮಯನ್ನು ಕಂಡಿತ್ತು!!!ಪರಮಾಧಿಕಾರವು ಆ ಸಮಯದಲ್ಲಿ ಉತ್ತುಂಗವನ್ನೇರಿತ್ತು!! ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಅರ್ಹತೆಗಿಂತ ತಮ್ಮ ವೈಯಕ್ತಿಕ ಸಂಬಂಧಿಗಳನ್ನು ಆಧರಿಸಿಕೊಂಡು ಆಯ್ಕೆ ಮಾಡಲಾಗಿತ್ತು! ಅಂದರೆ ನ್ಯಾಯಾಂಗದ ಅಧಿಕಾರ ಮತ್ತು ಶುದ್ಧತೆ ಎಲ್ಲವೂ ಅವರಿಂದಲೇ ಮಾಲಿನ್ಯಗೊಂಡಿತ್ತು!!! 42ನೇ ಸಂವಿಧಾನಾತ್ಮಕ ತಿದ್ದುಪಡಿ ಕಾಯ್ದೆ ಅಡಿ ಸರಕಾರವನ್ನು ಕಾರ್ಯನಿರ್ವಾಹಕರ ಕೈಯಲ್ಲಿ ಎಲ್ಲಾ ಅಧಿಕಾರಿಗಳನ್ನು ಕೇಂದ್ರೀಕರಿಸಲು ಉದ್ದೇಶಿಸಿದ್ದು, ಮಾತ್ರವಲ್ಲದೇ ಆ ಸಂದರ್ಭದಲ್ಲಿ ಅಕ್ಷರಶಃ ಅವರು ದೇಶದ ಸರ್ವಾಧಿಕಾರಿಯಾಗಿದ್ದರು. ಈ ಎಲ್ಲಾ ಸಾಧನೆಗಳೂ ಭಾರತ ರತ್ನವನ್ನು ಪಡೆಯಲು ಅರ್ಹತೆಯನ್ನು ಪಡೆದಿವೆಯೇ?

ಅಷ್ಟೇ ಅಲ್ಲದೇ, ರಾಜೀವ್ ಗಾಂಧಿಯವರ ಅರ್ಹತೆಗಳಾದರೂ ಯಾವುದು!! ಯಾಕೆಂದರೆ ಇವರ ಸಾಧನೆಗಳೂ ಕೂಡಾ ಭಾರತರತ್ನವನ್ನು ಪಡೆಯವಲ್ಲಿ
ಪ್ರಶ್ನಾರ್ಹವಾಗಿದೆ? ಭಾರತದ ಪ್ರಧಾನಿಗಳು ದೇಶದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದಾರೆ ಮತ್ತು ಅವರ ಆ ಸುಧಾರಣೆಗಳಿಗೆ ಪ್ರಶಸ್ತಿ ನೀಡಿದರೆ, ನಂತರ
ಭಾರತದ ಪ್ರತಿಯೊಂದು ಪ್ರಧಾನ ಮಂತ್ರಿಗಳೂ ಕೂಡ ಭಾರತರತ್ನವನ್ನು ಪಡೆಯಲು ಅರ್ಹತೆಯನ್ನು ಹೊಂದಿದ್ದಾರೆಯೇ!!

2013ರಲ್ಲಿ ಜವಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರಿಗೆ ಭಾರತ ರತ್ನವನ್ನು ಶಿಫಾರಸು ಹೇಗೆ ಮಾಡಲಾಯಿತು ಎಂದು ಆರ್‍ಟಿಐಗೆ ಅಶೋಕ್  ಅರ್ಜಿ ಸಲ್ಲಿಸಿದ್ದರು. ಅದಲ್ಲದೇ ಆರ್‍ಟಿಐನ ಉತ್ತರಕ್ಕಾಗಿ ಎರಡು ತಿಂಗಳುಗಳ ಕಾಲ ಉತ್ತರವನ್ನು ಕೇಳಿದ್ದರು. ಇವರ ಆ ಅರ್ಜಿಯಲ್ಲಿ ಎರಡು ಪ್ರಶ್ನೆಗಳು ಬಹಳ ನಿರ್ದಿಷ್ಟವಾಗಿದ್ದವು: ನೆಹರು ಮತ್ತು ಇಂದಿರಾ ಗಾಂಧಿ ಅವರಿಗೆ ಭಾರತರತ್ನವನ್ನು ಶಿಫಾರಸು ಮಾಡಿದವರು ಯಾರು? ಮತ್ತು ಯಾವ ಅರ್ಹತೆಗಳಿಗೆ
ಅಥವಾ ಕೊಡುಗೆಗಳಿಗೆ ಈ ಪ್ರಶಸ್ತಿಯನ್ನುನೀಡಲಾಯಿತು ಎಂದು ಪ್ರಶ್ನೆಗಳನ್ನು ಕೇಳಿದ್ದರು!!! ಇದಕ್ಕೆ, ಪ್ರಧಾನ ಮಂತ್ರಿ ಮಂಡಳಿಯು ಉತ್ತರ ನೀಡಿತ್ತು, ಅದೇನೆಂದರೆ: ಪ್ರಧಾನಮಂತ್ರಿಗಳಿಂದಲೇ ಈ ಪ್ರಶಸ್ತಿಗೆ ಶಿಫಾರಸ್ಸನ್ನು ಮಾಡಿದ್ದಾರೆ. ಆದರೆ, ಯಾವ ಆಧಾರ ಹಾಗೂ ಅರ್ಹತೆಗಳನ್ನು ನೀಡಿದ್ದಾರೆ ಎಂಬುವುದರ ಬಗ್ಗೆ ಯಾವುದೇ ವಿವರಗಳನ್ನು ನೀಡಲಿಲ್ಲ ಎಂದು!!

ಕಥೆಯ ಎರಡನೇ ಭಾಗವೆಂದರೆ, ಈ ಪ್ರಶಸ್ತಿಗಾಗಿ ತಂದೆ-ಮಗಳು ಜೋಡಿಯನ್ನು ಶಿಫಾರಸು ಮಾಡಿದವರು ಯಾರು? ಜವಹರಲಾಲ್ ನೆಹರೂ 1955ರಲ್ಲಿ ಭಾರತ ದೇಶದಲ್ಲಿ ಮೊದಲ ಪ್ರಧಾನ ಮಂತ್ರಿಯಾಗಿದ್ದರು. ಈಗಾಗಲೇ ನಾವು ನೋಡಿರುವಂತೆ ಈ ಪ್ರಶಸ್ತಿಗಾಗಿ ನಾಮನಿರ್ದೇಶನವನ್ನು ಶಿಫಾರಸು ಮಾಡುವವರು ಪ್ರಧಾನಿಯೇ ಆಗಿರುತ್ತಾರೆ ಎಂಬುವುದನ್ನು ತಿಳಿದಿದ್ದೇವೆ. ಅಂದರೆ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರಾಷ್ಟ್ರಪತಿಗಳಾದ ಡಾ.ರಾಜೇಂದ್ರಪ್ರಸಾದ್ ಅವರಿಂದ ಶಿಫಾರಸು ಮಾಡಿ, ಈ ದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಭಾರತರತ್ನದೊಂದಿಗೆ ಸಮ್ಮಾನಿಸಲಾಯಿತು ಎಂದು ಹೇಳಳಾಗಿದೆ.

ಆದರೆ ಆ ಕಥೆ ಇಲ್ಲಿಗೆ ಕೊನೆಗೊಂಡಿಲ್ಲ!! ಯಾಕೆಂದರೆ ಮಗಳು ಕೂಡ ತನ್ನ ತಂದೆಯ ಹಾದಿಯ ಹೆಜ್ಜೆಯನ್ನು ಅನುಸರಿಸಿದರು!! ದೇನೆಂದರೆ 1971ರಲ್ಲಿ ಶ್ರೀಮತಿ
ಇಂದಿರಾ ಗಾಂಧಿ ಭಾರತದ ಅಂದಿನ ಅಧ್ಯಕ್ಷರಾಗಿದ್ದ ವಿ.ವಿ ಗಿರಿಯವರಿಂದ ಶಿಫಾರಸು ಮಾಡಿಸಿ ಅವರನ್ನು ಭಾರತರತ್ನದೊಂದಿಗೆ ಸನ್ಮಾನಿಸಲಾಯಿತು(ಅವರು
ಮಾಡಿದ ಸಾಧನೆಗಳಿಗೆ)!! ಎಂದು ಹೇಳಲಾಗಿದೆ.

ಯಾವುದೇ ಪ್ರಶಸ್ತಿಗಳಾಗಲಿ ಅಥವಾ ಯಾವುದೇ ಬಹುಮಾನವಾಗಲಿ ಅದು ತನ್ನಲ್ಲಿಗೆ ಹರಸಿಕೊಂಡು ಬಂದರೆ ಆ ಪ್ರಶಸ್ತಿಗೆ ನಿಜವಾದ ಅರ್ಥ ಸಿಗುತ್ತದೆ!! ಭಾರತ ರತ್ನ ಎಂದರೆ ನಮ್ಮ ದೇಶದ ಬಹಳ ಅತ್ಯದ್ಭುತ ಪ್ರಶಸ್ತಿಗಳಲ್ಲೊಂದು, ಹಾಗಾಗಿ ಈ ಪ್ರಶಸ್ತಿಗೆ ತಮ್ಮದೇ ಆದ ಪವಿತ್ರತೆ ಇದೆ. ಆದರೆ ತಮ್ಮ ಸ್ವಾರ್ಥ ಉದ್ದೇಶಗಳಿಗೆ ಬಳಸಿಕೊಂಡರೆ ಅದಕ್ಕಿರುವ ಗಣತೆ ಕಡಿಮೆಯಾಗುವುದಲ್ಲವೇ? ಅಧಿಕಾರದ ಆಸೆ, ಪದವಿಯ ಆಸೆ, ಕೊನೆಗೆ ಪ್ರಶಸ್ತಿಯ ಆಸೆ ಎಲ್ಲವೂ ತಮ್ಮ ಮನೆಯಲ್ಲಿ ಬೆಳೆದ ಸ್ವತ್ತುಗಳೋ ಏನೋ ಗೊತ್ತಿಲ್ಲ!!

ಮೂಲ:Original : India facts – The secret story

– ಅಲೋಖಾ

Tags

Related Articles

Close