ಅಂಕಣಪ್ರಚಲಿತ

ನೆಹರೂ ಮತ್ತು ಕಾಂಗ್ರೆಸ್ ಅಂಬೇಡ್ಕರ್‍ರವರನ್ನು ಈ ರೀತಿ ಹೀನಾಯವಾಗಿ ಅವಮಾನಿಸಿ, ಇಂದು ತಾವೇ ದಲಿತ ಉದ್ಧಾರಕರು ಎಂಬ ಮುಖವಾಡ ಹಾಕಿಕೊಂಡು ರಾಜಕಾರಣ ಮಾಡುತ್ತಿದೆ!

ಭಾರತದ ಸಂವಿಧಾನ ಶಿಲ್ಪಿಯಾಗಿ ಅವರು ಈ ನೆಲದಲ್ಲಿ ಸ್ವಾತಂತ್ರ್ಯ ಸಮಾನತೆ ಹಾಗೂ ಭಾತೃತ್ವದ ತಳಹದಿ ಮೇಲೆ ಹೊಸ ಸಮಾಜವನ್ನು ಪ್ರಜಾಪ್ರಭುತ್ವದ ಮೌಲ್ಯಗಳ ಮೂಲಕ ಕಾನೂನು ಬದ್ಧವಾಗಿ ಸ್ಥಿರಗೊಳಿಸುವ ನಿರ್ಮಾಣದ ಕನಸು ಕಂಡವರು ಅಂಬೇಡ್ಕರ್. ಅದಕ್ಕಾಗಿ ಜೀವಮಾನವಿಡೀ ಶ್ರಮಿಸಿದವರು. ಆದರೆ ಕಾಂಗ್ರೆಸ್ ಸರಕಾರ ಮಾತ್ರ ಅವರಿಗೆ ಯಾವುದೇ ಬೆಂಬಲವನ್ನು ನೀಡದೆ ಪ್ರತೀ ಚುನಾವಣೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಸೋಲನ್ನು ಅನುಭವಿಸುವ ಹಾಗೆ ಮಾಡುತ್ತಾರೆ. ಅಪಹರಣದ ಕಲೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಕಲಿಯಬೇಕು. ಮೊದಲನೆಯದಾಗಿ ಅದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಎಂದು ನಿರೂಪಿಸುವಲ್ಲಿ ಯಶಸ್ವಿಯಾಗಿದೆ. ಎರಡನೆಯದು ಮತ್ತು ಮುಖ್ಯವಾದುದ್ದು ಕಾಂಗ್ರೆಸ್ ಯಾವಾಗಲೂ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಬೆಂಬಲ ನೀಡಿದೆ ಎಂದು ಹೇಳುವಲ್ಲಿ ಯಶಸ್ವಿಯಾಗಿದೆ. ಅದನ್ನು ನಾವೆಲ್ಲ ನಂಬಿಕೊಂಡು ಬರುತ್ತಲೇ ಇದ್ದೇವೆ… ಆದರೆ ಕಾಂಗ್ರೆಸ್ ಸರಕಾರ ಯಾವ ರೀತಿ ಅಂಬೇಡ್ಕರನ್ನು ದೂಷಿಸುತ್ತಾ ಬಂದಿದೆ ಎಂದು ನಾವು ಗಮನಿಸಬೇಕಾಗಿದೆ.
ನೆಹರೂ ಅಂಬೇಡ್ಕರ್ರನ್ನು ಲೋಕಸಭೆಗೆ ಪ್ರವೇಶಿಸುದನ್ನು ತಡೆದರು.

1952ರಲ್ಲಿ, ಅಂಬೇಡ್ಕರ್ ಬಾಂಬೆ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದರು ಆದರೆ ಅಂಬೇಡ್ಕರ್ ಗೆಲುವನ್ನು ಕಾಣಲು ಸಾಧ್ಯವಾಲಿಲ್ಲ. ಯಾಕೆಂದರೆ ಇದೆಲ್ಲಾ ನೆಹರೂರವರ ಪಿತೂರಿಯಿಂದನೇ ಸಾಧ್ಯವಾಗಿದ್ದು.!! ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭಿಯಾನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ನಾವು ಕಾಣಬಹುದು. ಆದರೆ ಅಂಬೇಡ್ಕರ್ ಜೀವಂತವಿದ್ದಾಗ ಅವರು ಯಾವುದೇ ಚುನಾವಣೆಯನ್ನು ಗೆಲ್ಲದಂತೆ ಮಾಡಿದ್ದು ಈ ಕಾಂಗ್ರೆಸ್ಸೆ!! . ಅಂಬೇಡ್ಕರ್‍ರವರನ್ನು ಕ್ಯಾಬಿನೇಟ್‍ಗೆ ಸೇರಿಸಿಕೊಳ್ಳಲು ನೆಹರೂಗೆ ಇಷ್ಟವಿರಲಿಲ್ಲ. ಅಂಬೇಡ್ಕರ್‍ಗೆ ಯಾವುದೇ ಚುನಾವಣೆಯಲ್ಲೂ ಗೆಲುವು ಸಾಧಿಸದಂತೆ ಮಾಡಿದ್ದರು… ಒಂದು ವೇಳೆ ದಲಿತರೊಂದಿಗೆ ಕಾಂಗ್ರೆಸ್ ಇತ್ತೆಂದರೆ ಕಾಂಗ್ರೆಸ್ ಏಕೆ ಅಂಬೇಡ್ಕರ್ ಅವರಿಗೆ ಟಿಕೆಟ್ ನೀಡಲಿಲ್ಲ?
370ನೇ ವಿಧಿಯಡಿ ಜಮ್ಮ ಕಾಶ್ಮೀರಕ್ಕೆ ವಿಷೇಶ ಸ್ಥಾನಮಾನ ನೀಡದಂತೆ ವಿರೋಧ ವ್ಯಕ್ತ

ಭಾರತದೊಂದಿಗೆ 1947 ಅಕ್ಟೋಬರ್ 25ರಂದು ಮಹಾರಾಜ ಹರಿಸಿಂಗ್ ಸಹಿ ಹಾಕುವುದರೊಂದಿಗೆ ಭಾರತದ ಒಕ್ಕೂಟದೊಳಗೆ ಸೇರ್ಪಡೆಯದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಆಗಿನ ಕಾನೂನು ಸಚಿವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಖಡಾಖಂಡಿತವಾಗಿ ವಿರೋಧಿಸಿದ್ದರು. ಎಲ್ಲಾ ರಾಜ್ಯಗಳೂ ಸಮಾನ ಹಾಗೂ ಸಮಾನ ಹಕ್ಕು ಅವಕಾಶಗಳನ್ನು ಹೊಂದಿರಬೇಕು ಎಂದು ಪ್ರತಿಪಾದಿಸಿದರು. ಹೀಗೆ ನಮಗೆ ಅಂಬೇಡ್ಕರ್ ಬಗ್ಗುವುದಿಲ್ಲ ಎಂದು ತಿಳಿದ ನೆಹರೂ ನರಿ ಉಪಾಯ ಮಾಡಿದರು. ಅನಾರೋಗ್ಯದ ಕಾರಣ ಮರುದಿನ ಅಂಬೇಡ್ಕರ್ ಸದನಕ್ಕೆ ಬರಲೇ ಇಲ್ಲ, ಅವರ ಅನುಪ ಸ್ಥಿತಿಯಲ್ಲಿ 370 ವಿಧಿಗೆ ಅನುಮೋದನೆ ದೊರೆತು ಸಂವಿಧಾನ ಸೇರಿತು. ಈ ಘಟನೆ ನಡೆದ ಮರುದಿನವೇ ಸದನಕ್ಕೆ ಆಗಮಿಸಿದ ಅಂಬೇಡ್ಕರ್ ಕಾರಣ ಕೇಳಿದಾಗ ಬರಬೇಡ ಎಂದು ನೆಹರು ಅವರೇ ಹೇಳಿದ್ದರು ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ನೆಹರೂ ಬಣ್ಣ ಬಯಲಾಗುತ್ತದೆ. ಕಾಶ್ಮೀರ ಶಾಶ್ವತವಾಗಿ ಭಾರತಕ್ಕೆ ಮುಗ್ಗಲ ಮುಳ್ಳಾಯಿತು. ದೇಶದ್ರೋಹಿಗಳ ನೆಲೆವೀಡಾಯಿತು. ಇದೆಲ್ಲವೂ ಸಂವಿಧಾನದ ಕರಡು ಸಮಿತಿಯ ಚರ್ಚೆಗಳಲ್ಲಿ ದಾಖಲಾಗಿವೆ. ಇತ್ತ ಅಂಬೇಡ್ಕರ್ ತಮ್ಮ ನಿಷ್ಠುರವಾದದಿಂದ ನೆಹರು ವೈಷಮ್ಯಕ್ಕೆ ಬಲಿಯಾಗ ಬೇಕಾಯಿತು. 1951-52ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರ್ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ನೆಹರೂರವರ ಕಾಂಗ್ರೆಸ್ಸೆ!!.
ಭಾರತದ ಅಧಿಕೃತ ಭಾಷೆಯಾಗಿ ಸಂಸ್ಕøತ ಬಾಷೆ

ಸಂಸ್ಕøತವನ್ನು ಅಧಿಕೃತ ಬಾಷೆಯನ್ನಾಗಿ ಸ್ವೀಕರಿಸುವಂತೆ 1949 ಸಪ್ಟೆಂಬರ್ 10ರಂದು ಸಂಸತ್ತಿನಲ್ಲಿ ವಿಧೇಯಕವನ್ನು ಮುಂದಿಟ್ಟಿದ್ದು ಅಂಬೇಡ್ಕರ್‍ರವರೇ. ಅಂಬೇಡ್ಕರ್ ಎಂದರೆ ಹಿಂದೂ ಧರ್ಮದ ಹುಳುಕನ್ನು ಎತ್ತಿ ತೋರಿಸಿದವರು.ಜಾತಿ ವ್ಯವಸ್ಥೆಯ ಕೆಡುಕು ಮತ್ತು ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದವರು. ಕೇವಲ ದಲಿತ ನಾಯಕರು ಮೀಸಲಾತಿಯ ಪ್ರತಿಪಾದಕರು ಎಂದು ಅಂದುಕೊಳ್ಳ ಬೇಡಿ ಅವರು ಅವರೊಬ್ಬ ಅಪ್ರತಿಮ ರಾಷ್ಟ್ರವಾದಿಯೂ ಹೌದು. ಸಂಸ್ಕøತವನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಬೇಕಾಗಿ ಡಾ. ಬಿ. ಆರ್ ಅಂಬೇಡ್ಕರ್‍ರವರು ಶ್ರಮಿಸುತ್ತಾರೆ. ದಿ ಸಂಡೇ ಹಿಂದೂಸ್ಥಾನ್ ಸ್ಟ್ಯಾಂಡರ್ಡ್ ಪತ್ರಿಕೆಯು ಭಾರತದ ಅಧಿಕೃತ ಭಾಷೆಯಾಗಿ ಸಂಸ್ಕøತವನ್ನು ಮಾಡಬೇಕು ಬಯಸಿದ್ದಾರೆ ಎಂದು 1949ರ ಸಷ್ಟೆಂಬರ್ 11 ರಂದು ವರದಿ ಮಾಡುತ್ತಾರೆ. ಈ ಕ್ರಮವನ್ನು ಪ್ರಶ್ನಿಸಿದ ಡಾ. ಅಂಬೇಡ್ಕರ್ ಸಂಸ್ಕøತದಲ್ಲಿ ಏನು ತಪ್ಪಿದೆ ಎಂದು ಅವರಿಗೆ ಪ್ರಶ್ನಿಸುತ್ತಾರೆ. ಸಂಸ್ಕøತವನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ಅಂಬೇಡ್ಕರ್‍ರವರು ಶ್ರಮಿಸಿದರೆ ಅದಕ್ಕಾಗಿ ಕಾಂಗ್ರೆಸ್ ಏನು ಮಾಡಿತ್ತು ಎಂದು ಯಾರಿಗಾದರು ತಿಳಿದಿದೆಯೇ? ಶಾಲೆಯ ಪುಸ್ತಕದಲ್ಲಿ ಸಂಸ್ಕøತದ ಪರಿಚಯವನ್ನು ಮಾಡಲು ವಿರೋಧ ವ್ಯಕ್ತಪಡಿಸುತ್ತಿದೆ.

ಭೀಮರಾವ್ ಅವರ ಎರಡನೇ ಪತ್ನಿ ಹಿಂದೂ ಬ್ರಾಹ್ಮಣರಾಗಿದ್ದರು.

ಕಾಂಗ್ರೆಸ್ ಪಕ್ಷ ಯಾವಾಗಲೂ ಅವರನ್ನು ಹಿಂದೂ ವಿರೋಧಿ ಹಿಂದೂ ಕರೆಯುತ್ತಿದ್ದರು. ಅವರು ಯಾವತ್ತೂ ಹಿಂದೂ ವಿರೋಧಿಯಾಗಿರಲಿಲ್ಲ. ಹಿಂದೂ ವಿರೋಧಿಯಾಗುತ್ತಿದ್ದರೆ ಅವರು ಬ್ರಾಹ್ಮಣ ಯುವತಿಯನ್ನು ಮದುವೆಯಾಗುತ್ತಿದ್ದರೆ? ಅವರು ಹೋರಾಡಿದ್ದು ಕೇವಲ ಅಸ್ಪøಶ್ಯತೆಯತೆ ವಿರುದ್ಧ ಮಾತ್ರ. ಯಾಕೆಂದರೆ ದಲಿತರಿಗೆ ದೇವಾಲಯ ಪ್ರವೇಶದ ಹಕ್ಕು ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಂದ ಇವರು ದೂರ ಇರಬೇಕಾಗಿತ್ತು. ಇದರಿಂದ ಬೇಸತ್ತ ಡಾ. ಬಿ.ಆರ್ ಅಂಬೇಡ್ಕರ್‍ರವರು ಇದರ ವಿರುದ್ಧ ಹೋರಾಡಿದರು. ಆದರೆ ಕಾಂಗ್ರೆಸ್ ಮಾತ್ರ ಡಾ. ಬಿ. ಆರ್ ಅಂಬೇಡ್ಕರ್‍ರವರು ಹಿಂದೂ ಧರ್ಮವನ್ನು ವಿರೋಧಿಸಿದ್ದರು ಎಂದು ಪ್ರಚಾರ ಮಾಡಿದ್ದರು. ಅಂದಿನಿಂದ ಇಂದಿನ ವೆರೆಗೂ ಕಾಂಗ್ರೆಸ್ ಓಟ್ ಬ್ಯಾಂಕ್‍ಗಾಗಿ ಹಿಂದೂಗಳಿಂದ ದಲಿತರನ್ನು ದೂರವಿಡುತ್ತಾನೇ ಬಂದಿದ್ದಾರೆ.

ಮುಸ್ಲಿಮ್ ಸಮಾಜ ಮತ್ತು ಕ್ರಿಶ್ಚಿಯನ್ ಧರ್ಮದ ಬಗ್ಗೆ ಅಂಬೇಡ್ಕರ್ ಅವರ ಬಲವಾದ ಅಭಿಪ್ರಾಯಗಳು:

ಅಂಬೇಡ್ಕರ್ ಅವರನ್ನು ಹಲವು ಕ್ರಿಶ್ಚಿಯನ್ ಮಿಷನರಿಗಳು ಮತ್ತು ಮುಸ್ಲಿಮ್ ನಾಯಕರುಗಳು ಭೇಟಿ ನೀಡಿ ಅಂಬೇಡ್ಕರ್ ಮತ್ತು ಇಡೀ ದಲಿತ ಜನಾಂಗದವರನ್ನು ಪರಿವರ್ತಿಸಲು ಹಣಕಾಸಿನ ಕೊಡುಗೆಗಳನ್ನು ನೀಡಲು ತಯಾರಾಗಿದ್ದರು. ಆದರೆ ಇಂತಹ ಹಿನಾಯ ಕೃತ್ಯಗಳಿಗೆ ಯಾವತ್ತೂ ಬಗ್ಗದ ಅಂಬೇಡ್ಕರ್ ಅವರಿಗೆ ಸರಿಯಾಗಿಯೇ ಪ್ರತ್ಯುತ್ತರವನ್ನು ನೀಡಿದ್ದರು. ನನಗೆ ಯಾವುದೇ ಜಾತಿ ಇಲ್ಲ. ನನಗೆ ಎಲ್ಲವೂ ಭಾರತ ಎಂದು ಅವರಿಗೆ ಪ್ರತ್ಯುತ್ತರ ನೀಡುತ್ತಾರೆ. ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮವು ಭಾರತಕ್ಕೆ ಏಲಿಯನ್ ಗಳು ಎಂದು ಹೇಳುತ್ತಾರೆ. ಮೊಘಲರು ಮತ್ತು ಮುಸ್ಲಿಮರು ಯಾವಾಗಲೂ ಖಸಾಯಿಖಾನೆಯಲ್ಲಿ ಮಾಂಸಗಳನ್ನು ಕೊಚ್ಚುವವರು ಎಂದು ಅವರು ನಂಬಿದ್ದರು. ಇಸ್ಲಾಮ್ ಧರ್ಮ ಮತ್ತು ಕ್ರಿಶ್ಚಿಯನ್ ಮಿಷನರಿಗಳ ಧಾರ್ಮಿಕ ಪರಿವರ್ತನೆಗಾಗಿ ಅಂಬೇಡ್ಕರ್‍ಗೆ ಒಂದು ಪ್ರಮುಖ ಸವಾಲಾಗಿತ್ತು. ಈ ಪರಿವರ್ತನೆಯನ್ನು ನಿಲ್ಲಿಸಲು ಅವರು ಎಲ್ಲಾ ದಲಿತರನ್ನು ಶಾಂತಿಯುತ ಬೌದ್ಧ ಧರ್ಮಕ್ಕೆ ತಿರುಗಿಸಲು ಪ್ರಯತ್ನಿಸಿದರು. ಇಲ್ಲದಿದ್ದರೆ ಈ ಸಮಯದಲ್ಲಿ ಎಲ್ಲಾ ದಲಿತರು ಇಸ್ಲಾಮ್ ಅಥವಾ ಕ್ರೈಸ್ತ ಧರ್ಮಕ್ಕೆ ಪರಿವರ್ತನೆಯಾಗುತ್ತಿದ್ದರು. ಅಂಬೇಡ್ಕರ್ ಅವರು ಇಸ್ಲಾಮಿಕ್ ಆಚರಣೆಯನ್ನು ದಕ್ಷಿಣ ಏಷ್ಯಾದಲ್ಲಿ ಟೀಕಿಸಿದರು. ಬಾಲ್ಯ ವಿವಾಹವನ್ನು ಮತ್ತು ಮುಸ್ಲಿಮ್ ಸಮಾಜದಲ್ಲಿ ಮಹಿಳೆಯರ ದುಷ್ಕøತ್ಯವನ್ನು ಖಂಡಿಸಿದರು. ಅಂಬೇಡ್ಕರ್‍ರವರು ಸ್ವಾಮಿ ಶ್ರದ್ದಾನಂದ ಮತ್ತು ವೀರ ಸಾವರ್ಕರ್‍ರಂತಹ ಹಿಂದೂ ನಾಯಕರ ಜೊತೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದರು.

ಐತಿಹಾಸಿಕ ಸತ್ಯವನ್ನು ತಿರುಗಿಸುವಲ್ಲಿ ಕಾಂಗ್ರೆಸ್ ಮತ್ತು ಅದರ ವಿಶೇಷತೆ

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ನೆಹರೂ ಯಾವ ರೀತಿ ಅಂಬೇಡ್ಕರ್‍ರನ್ನು ಗೌರವಿಸಿದ್ದಾರೆ ಎಂಬುವುದು ಅರ್ಥವಾಗುತ್ತದೆ. ತನ್ನ ಮೊದಲ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಲು ಕಾಂಗ್ರೆಸ್ ತನ್ನ ಎಲ್ಲಾ ಬಲವನ್ನು ಬಳಸಿಕೊಂಡಿತ್ತು. ಬಿಜೆಪಿ ಯಾವಾಗಲೂ ದಲಿತರನ್ನು ದುರ್ಬಳಕೆ ಮಾಡುವುದು ಎಂದು ಕಂಗ್ರೆಸ್ ದೂಷಿಸುತ್ತಾನೆ ಬಂದಿದೆ. ಅದರೆ ಕಾಂಗ್ರೆಸ್ ಅಂಬೇಡ್ಕರನ್ನು ಯಾವ ರೀತಿ ನಡೆಸಿಕೊಂಡರು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಎಲ್ಲಾ ವಿಷಯಗಳಲ್ಲೂ ಅಂಬೇಡ್ಕರ್ ಅವರನ್ನು ನೆಹರೂ ದ್ವೇಷಿಸುತ್ತಿದ್ದರೂ ಸಹ ಅಂಬೇಡ್ಕರ್ ಮಾತ್ರ ಯಾವುದನ್ನೂ ಮನಸ್ಸಿನಲ್ಲಿಡದೆ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಾರೆ. ಇಂತಹ ಸತ್ಯ ಎಲ್ಲರಿಗೂ ತಿಳಿದಿಲ್ಲ. ಯಾಕೆಂದರೆ ಇಂತಹ ಸತ್ಯಗಳನ್ನು ಅನೇಕ ಜನರಿಂದ ಮರೆಮಾಚಲಾಗಿದೆ. ದಲಿತರು ಮತ್ತು ಹಿಂದೂ ಸಮುದಾಯದ ನಡುವಿನ ಸೌಹಾರ್ದತೆಯು ಹೆಚ್ಚಾಗಬೇಕೆಂದರೆ ಇಂತಹ ಸತ್ಯಗಳು ಹೊರ ಬರಬೇಕು. ಅನಾವಶ್ಯಕವಾಗಿ ಅಂದಿನಿಂದ ಇಂದಿನವರೆಗೂ ದಲಿತರಿಂದ ಹಿಂದೂಗಳನ್ನು ದೂರ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ರಚಿಸಿದ ಜಾತಿ ಪೈಪೋಟಿಯನ್ನು ಅಂತ್ಯಗೊಳಿಸಬೇಕಾಗಿದೆ. ಇದಕ್ಕಾಗಿ ನಾವೆಲ್ಲಾ ಒಗ್ಗಟ್ಟಾಗಬೇಕಿದೆ.

source:http://postcard.news/every-indian-must-know-the-painful-truth-of-godhra-train-burning-which-mainstream-media-has-preferred-to-ignore/

-ಪವಿತ್ರ

Tags

Related Articles

Close