ಅಂಕಣಪ್ರಚಲಿತ

ನೇಪಾಲವು ಭಾರತೊಂದಿಗೆ ವಿಲೀನವಾಗಲು ಬಯಸಿತ್ತು. ಆ ಬೇಡಿಕೆಯನ್ನು ನೆಹರೂ ಅವರು ನಿರಾಕರಿಸಿದ್ದು ಯಾಕೆ  ಗೊತ್ತಾ? 

ವಿಶ್ವದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ ಮೂರೇ ರಾಷ್ಟ್ರಗಳಿವೆ. 2010 ರಲ್ಲಿ ಬಂದ ವರದಿಯ ಪ್ರಕಾರ ಭಾರತ, ನೇಪಾಲ ಮತ್ತು ಮಾರಿಷಿಯಸ್ ರಾಷ್ಟ್ರಗಳಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ. ಅನೇಕರು ಈ ಒಂದು ವಿಚಾರವನ್ನು ಅಷ್ಟಾಗಿ ಗಮಸಿರಲಿಕ್ಕಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ನೇಪಾಲವು ಭಾರತದೊಂದಿಗೆ ವಿಲೀನವಾಗುವ ಬಯಕೆಯನ್ನು ವ್ಯಕ್ತಪಡಿಸಿತ್ತು. ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಹಿರಿಯರಾಗಿದ್ದ ಸುದರ್ಶನ್‍ರವರು ಹೇಳುವ ಪ್ರಕಾರ ಅವರ ಬೇಡಿಕೆಯನ್ನು ಭಾರತದ ಪ್ರಧಾನಿಯಾಗಿದ್ದ ಜವಾಹರ್ಲಾಲ್ ನೆಹರೂ ಅವರು ನಿರಾಕರಿಸಿದ್ದರು. “ಸ್ವಾತಂತ್ರ್ಯ ಸಿಕ್ಕ ತಕ್ಷಣದಲ್ಲಿ ನೇಪಾಳದ ಪ್ರಧಾನಿಯಾಗಿದ್ದ ಮಾತ್ರಿಕಾ ಪ್ರಸಾದ್ ಕೊಯಿರಾಲ ಅವರು ತಮ್ಮ ರಾಷ್ಟ್ರವಾದ ನೇಪಾಳವನ್ನು ಭಾರತದೊಡನೆ ವಿಲೀನಗೊಳಿಸುವಂತೆ ನೆಹರೂ ಅವರಲ್ಲಿ ಕೇಳಿಕೊಂಡಿದ್ದರು ” ಎಂಬುದಾಗಿ 2008 ರಲ್ಲಿ ನಡೆದ ಒಂದು ಸಭೆಯಲ್ಲಿ ಉಲ್ಲೇಖಿಸಿದ್ದರು.

 

ಸ್ವಾತಂತ್ರ್ಯ ಲಭಿಸಿದ ತಕ್ಷಣ ಭಾರತ ಸಮ್ರಾಜ್ಯ ವಿಸ್ತರಣೆ ಮಾಡಿದೆ ಎಂಬ ಅಪವಾದ ವಿಶ್ವದ ಮುಂದೆ ತಮಗೆ ಬರಬಾರದೆಂಬ ಭಯದಿಂದ ಆ ಬೇಡಿಕೆಯನ್ನು ಅಂದು ನೆಹರೂ ಅವರು ನಿರಾಕರಿಸಿದ್ದರು. ಭಾರತ ಮತ್ತು ನೇಪಾಲ 1950 ರಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿ ಎರಡೂ ರಾಷ್ಟ್ರಗಳ ಬಾಂಧವ್ಯದ ಆದಿಗೆ ಮುನ್ನುಡಿಯನ್ನು ಬರೆದಿತ್ತು. 1950- ಭಾರತ ನೇಪಾಳದ ಸ್ನೇಹ ಹಾಗೂ ಶಾಂತಿ ಒಪ್ಪಂದವೆಂದೂ ಕರೆಯಲಾಗುತ್ತದೆ. ಭಾರತದಲ್ಲಿ ನೇಪಾಲ ರಾಷ್ಟ್ರದ ವ್ಯವಹಾರಗಳಿಗೆ ಅವಕಾಶ ಹಾಗೂ ಭಾರತದ ಭದ್ರತೆಯ ಕುರಿತಾಗಿ ಗೌರವವನ್ನು ನೇಪಾಲವು ವ್ಯಕ್ತಪಡಿಸುವುದು ಎಂಬಿತ್ಯಾದಿಗಳು ಒಪ್ಪಂದದಲ್ಲಿ ನಮೂದಿಸಲ್ಪಟ್ಟಿದ್ದವು. ಈ ಒಪ್ಪಂದವನ್ನು ಭಾರತದ ರಾಯಭಾರಿಯಾಗಿದ್ದ ಚಂದೇಶ್ವರ್ ನಾರಾಯಣ ಸಿಂಗ್ ಹಾಗೂ ನೇಪಾಲದ ಪ್ರಧಾನಿಯಾಗಿದ್ದ ಮೋಹನ್ ಶಂಶೇರ್ ಜಂಗ್ ಬಹದ್ದೂರ್ ರಾಣಾ ನಡುವೆ ಮಾಡಲಾಯಿತು.

 

2008 ರಲ್ಲಿ ಹೊಸ ಸರಕಾರವೊಂದು ನೇಪಾಲದಲ್ಲಿ ಚುನಾಯಿತವಾದಾಗ 6 ದಶಕಗಳ ಕಾಲ ಇದ್ದ ಒಪ್ಪಂದವನ್ನು ರದ್ದುಗೊಳಿಸುವ ಚಿಂತನೆಯನ್ನೂ ನೇಪಾಲ ಮಾಡಿತ್ತು. ನೇಪಾಲದ ಕಮುನಿಷ್ಟ್ ಪಕ್ಷದ ನೇತಾರರಾದ ಪುಶ್ಪ ಕಮಾಲ್ ದಹಾಲ್, ಭಾರತದೊಂದಿಗೆ ಒಪ್ಪಂದಾಗಿರುವ 1950 ರ ಒಪ್ಪಂದ ರದ್ದುಗೊಳಿಸಿ ನವ ಒಪ್ಪಂದವನ್ನು ಮಾಡಬೇಕೆಂದು ಹೇಳಿದ್ದರು. ಅವರ ನೇತೃತ್ವದ ಸರಕಾರ 9 ತಿಂಗಳುಗಳಲ್ಲಿ ಪತನವಾಯಿತು. ಹಾಗಾಗಿ ಈ ವಿಚಾರವನ್ನು ಮುಂದೆ ಸಾಗಿಸಲು ಅವರು ವಿಫಲರಾದರು.

 

ಚೀನಾದ ಸಾಮ್ರಾಜ್ಯ ವಿಸ್ತರಣೆಯ ಕುತಂತ್ರದ ಕುರಿತಾಗಿ ಎಚ್ಚರಿಕೆಯನ್ನೂ ನೀಡದೆ ತಿಬೆಟ್ ಅನ್ನು ಚೀನಾಕ್ಕೆ ಬಿಟ್ಟುಕೊಟ್ಟರು. ಇದಕ್ಕೆಲ್ಲಾ ನೇರವಾಗಿ ನೆಹರೂ ಅವರೇ ಹೊಣೆಗಾರರಾಗುತ್ತಾರೆ. ಸಿಕ್ಕಿಮ್ ಮತ್ತು ಅರುಣಾಚಲ ಪ್ರದೇಶ ತನ್ನದು ಎಂದು ಚೀನಾ ವಾದಿಸಿದಾಗಲೂ ನೆಹರೂ ಮರುತ್ತರ ಕೊಡದೇ ಮೌನವಾಗಿದ್ದರು. ಅವರಿಗೆ ಕಮ್ಮಿನಿಷ್ಠರ ಸಹಕಾರ ಬೇಕಿತ್ತು. ಅದಕ್ಕೋಸ್ಕರವೇ ಅವರು ಮೌನವನ್ನೇ ಉತ್ತರವನ್ನಾಗಿಸಿದರು. ಆದರ್ಶವಾದ ವನ್ನೇ ನಂಬಿದ ಆದರ್ಶವಾದಿಯಾಗಿ ವಿಶ್ವದ ಮುಂದೆ ನಟಿಸಲು ನೆಹರೂ ಅವರು ಪ್ರಯತ್ನ ಪಟ್ಟರು. ಯಾವ ವಿಶ್ವಸಂಸ್ಥೆಯ ಸದಸ್ಯರಾಗಿದ್ದ ಕೆಲವು ರಾಷ್ಟ್ರಗಳು ನೇಪಾಳವನ್ನೇ ಭೂಪಟದಿಂದ ತೆಗೆದಿತ್ತೋ ಅಂತಹ ರಾಷ್ಟ್ರದ ಓಲೈಕೆಗಾಗಿ ಸದಾ ಹಂಬಲಿಸುತ್ತಿದ್ದವರು ಜವಾಹರ್ಲಾಲ್ ನೆಹರೂ.

 

1951 ರಲ್ಲಿ ಬೇರೆ ಯಾವದೇ ಆಯ್ಕೆಗಳಿಲ್ಲದೇ ನೇಪಾಲದ ರಾಜನಾಗಿದ್ದ ತ್ರಿಭುವನ್ ಅವರು ಭಾರತಕ್ಕೆ ವಲಸೆ ಬಂದರು. ನೇಪಾಲದ ಪ್ರಜಾಪ್ರಭುತ್ವವು ಆತಂಕದಲ್ಲಿತ್ತು, ರಾಣಾರವರ ಶಕ್ತಿ, ರಾಜನ ಆಡಳಿತವನ್ನೂ ಮೀರಿಸುವಂತಿತ್ತು. ರಾಜ ರಾಣರವರ ಚಟುವಟಿಕೆಗಳನ್ನು ವಿರೋಧಿಸಿದ್ದರು. ಹಾಗಾಗಿ ನೇಪಾಲವನ್ನು ಭಾರತದೊಂದಿಗೆ ವಿಲೀನ ಮಾಡದೇ ಬೇರೆ ದಾರಿ ಅವರಿಗಿರಲಿಲ್ಲ. ಈ ಅವಕಾಶವನ್ನು ನೆಹರೂ ಅವರು ಚೆನ್ನಾಗಿಯೇ ಬಳಸಿಕೊಂಡು ವಿಶ್ವದ ಅತೀ ಹೆಚ್ಚು ಹಿಂದೂಗಳು ಜೀವಿಸುವ ರಾಷ್ಟ್ರ ಭಾರತ ಎಂದು ಹೆಮ್ಮೆಯಿಂದ ಹೇಳಬಹುದಿತ್ತು. ಆದರೆ ದುರ್ದೈವ , ಹಾಗಾಗಲಿಲ್ಲ. ನೆಹರೂ ಅವರ ಸ್ವಾರ್ಥ ರಾಜಕಾರಣ ಸ್ವತಂತ್ರ ಭಾರತದಲ್ಲಿ  ಇಲ್ಲಿಂದ ಪಾರಂಭವಾಯಿತೆನ್ನಬಹುದು.

 

ಇದುವರೆಗೆ ಯಾವೆದೇ ರಾಷ್ಟ್ರದ ಮೇಲೆ ಆಕ್ರಮಣ ಮಾಡಿದ ರಾಷ್ಟ್ರ ಭಾರತ ಅಲ್ಲ ಅನ್ನುವ ಹೆಮ್ಮೆ ನಮಗಿದೆ. ಚೀನಾದಂತೆ ಸಮ್ರಾಜ್ಯವಿಸ್ತರಣೆಯ ಚಪಲ ಭಾರತಕ್ಕಿಲ್ಲ. ಅವಶ್ಯಕತೆಯಿದ್ದರೆ 1950 ರಂದು ಮಾಡಿದ ಒಪ್ಪಂದವನ್ನು ತಿದ್ದುಪಡಿ ಮಾಡಿ ಭಾರತ-ನೇಪಾಲ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಚಿಂತನೆಯನ್ನೂ ಮಾಡಬಹುದು.

 

 

– ವಸಿಷ್ಠ

Tags

Related Articles

Close