ಪ್ರಚಲಿತ

ನೋಟು ರದ್ದತಿಯ ವರ್ಷಾಚರಣೆಯ ದಿನವೇ, ರಾಹುಲ್ ಗಾಂಧಿ ಪಪ್ಪುವಾಗಿ ಕಾಂಗ್ರೆಸ್ ನನ್ನು ಮುಜುಗರಕ್ಕೀಡಾಗುವಂತೆ ಮಾಡಿದ್ದು ಹೇಗೆ ಗೊತ್ತೇ?!

ನೋಟು ರದ್ದತಿಯಾದಾಗಿನಿಂದಲೂ ಸಹ ಕಾಂಗ್ರೆಸ್ ಗೆ ತೀರಾ ಎನ್ನುವಷ್ಟು ಕಾಳಜಿ ಹೆಚ್ಚಾಗಿ ಹೋಗಿದೆ ಬಿಡಿ! ಅದರಲ್ಲಿಯೂ, ಕಾಂಗ್ರೆಸ್ ಉಪಾಧ್ಯಕ್ಷ, ಮುಂದಿನ
ಅಧ್ಯಕ್ಷನಾಗಲಿರುವ ಶ್ರೀ ಶ್ರೀ ರಾಹುಲ್ ಗಾಂಧಿಯವರು ಒಂದು ಟ್ವೀಟ್ ಮಾಡಿದ್ದೇ ಮಾಡಿದ್ದು! ಕಾಂಗ್ರೆಸ್ ಮತ್ತೆ ನೋಟು ರದ್ದತಿ ದೇಶದ ಕರಾಳ ನಿರ್ಧಾರವೆಂದು ಕ್ಯಾತೆ ತೆಗೆದಿದೆಯಷ್ಟೇ!

ರಾಹುಲ್ ಗಾಂಧಿಯ ಪ್ರಕಾರ, ಈ ಕೆಳಗಿನ ಚಿತ್ರದಲ್ಲಿ ಬ್ಯಾಂಕಿನ ಹೊರಗೆ ಅಳುತ್ತಿರುವ ವೃದ್ಧಪ್ರಜೆಯ ಸಂಕಟಕ್ಕೆ ಮೋದಿಯ ನೋಟು ರದ್ದತಿಯೇ
ಕಾರಣವೆಂದು ಟ್ವೀಟ್ ಮಾಡಿದ್ದಾರೆ!

ಇದನ್ನು ನೋಡಿದಾಕ್ಷಣ, ಯಾರಿಗಾದರೂ ಮೋದಿಗೊಂದಿಷ್ಟು ಹಿಡಿ ಶಾಪ ಹಾಕಬೇಕೆಂದೆನ್ನಿಸದೇ ಇರದು! ಅದರಲ್ಲೂ, ನೋಟು ಬ್ಯಾನ್ ನಿಂದಾದ ಈ ಸಂಕಟವನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆಂದು ಅನ್ಯಾಯವಾಗಿ ರಾಹುಲ್ ಅಭಿಮಾನಿಯಾಗಿಬಿಡುವವರೆಗೂ ಎನ್ನಿಸುತ್ತದೆ! ಆದರೆ, ವಾಸ್ತವದಲ್ಲಿ ಆ ವೃದ್ಧ ಪ್ರಜೆ ಪ್ರಧಾನಿ ಮೋದಿಯವರ ಅಭಿಮಾನಿ!!!

ಚಿತ್ರದಲ್ಲಿರುವವರ ವೃದ್ಧನ ಹೆಸರು ನಂದಲಾಲ್! ಮುಂಚೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದವರು! ವೈಯುಕ್ತಿಕವಾಗಿ ನಂದಲಾಲ್ ಹಾಗೂ ಮೋದಿಯವರ ದೇಶದ ಬಗೆಗಿನ ಆಲೋಚನೆಗಳು ಸ್ವಲ್ಪ ಒಂದೇ ಆದರೂ ಸಹ, ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿರುವ ನಂದಲಾಲ್ ಪ್ರಧಾನಿ ಮೋದಿಯವರ ನೋಟು ರದ್ದತಿಯನ್ನು ಸ್ವಾಗತಿಸಿ ಅಭಿನಂದಿಸಿದ್ದವರೇ! ಅಲ್ಲದೇ, ‘ನಾನು ನೋಟು ರದ್ದತಿ ಮಾಡಿದ್ದಕ್ಕೆ ಅತ್ತಿದ್ದಲ್ಲ, ಬೇರೆ ಕಾರಣಗಳಿಗಾಗಿ’ ಎಂದು ಸ್ಪಷ್ಟೀಕರಣೆಯನ್ನೂ ನೀಡಿದ್ದಾರೆ!

ಪ್ರಧಾನಿ ಮೋದಿಯ ನೋಟು ಬ್ಯಾನ್ ನಿಂದ ಭಾರತಕ್ಕೆ ಅದೆಷ್ಟೋ ಉಪಯೋಗಗಳಾಗಿದೆ! ಅಲ್ಲದೇ, ಭಾರತಕ್ಕೆ ತೊಂದರೆ ಕೊಡುತ್ತಿದ್ದ ಉಗ್ರರಿಗೆ ಒಳ್ಳೆಯ ಉತ್ತರವನ್ನೇ ನೀಡಿದ್ದಾರೆ ಮೋದಿ.!” ಎಂಬ ಪ್ರಶಂಸನೀಯ ಮಾತುಗಳನ್ನೂ ಹೇಳಿದ್ದಾರೆ!

ಎಲ್ಲಿ, ನಂದಲಾಲ್ ಸ್ಪಷ್ಟೀಕರಣ ನೀಡಿದ್ದೇ, ಮಾಮೂಲಾಗಿ ಗಾಂಧಿ ಕುಟುಂಬ ಎಷ್ಟು ಹಣ ಕಳೆದುಕೊಳ್ಳುವ ಹಾಗಾಯಿತು ನೋಟು ರದ್ದತಿಯಿಂದ ಎಂದು ವಾಚಾಮಗೋಚರ ಉಗಿದು ಉಪ್ಪಿನಕಾಯಿ ಹಾಕಿಬಿಟ್ಟಿದ್ದಾರೆ ಟ್ವಿಟ್ಟಿಗರು!

ಅಮಿತ್ ಷಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ!

ಯಾಕೆ ಭ್ರಷ್ಟಾಚಾರದ ಬೆನ್ನುಲುಬನ್ನೇ ಮುರಿದ ‘Demonetisation’ ಎಂಬ ಐತಿಹಾಸಿಕ ನಿರ್ಧಾರವನ್ನು ರಾಹುಲ್ ಗಾಂಧಿ ದ್ವೇಷಿಸುತ್ತಾರೆ?! ಯಾಕೆ
ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ನಿಂತಿದ್ದರ ಬಗ್ಗೆ ರಾಹುಲ್ ಗಾಂಧಿಗೆ ತೀರಾ ಎನ್ನುವಷ್ಟು ಅಸಹನೆಯಿದೆ?!”

ಚಾರ್ಟೆ್ಡ್ ಅಕೌಂಟ್ಯಾಂಟ್ ಒಬ್ಬರು “ರಾಹುಲ್ ಗಾಂಧಿ ನಿಜಕ್ಕೂ ಬಿಜೆಪಿಯ Star Campaigner! ದಿನೇ ದಿನೇ ಇಂತಹ ಹುಚ್ಚಾಟಗಳನ್ನು ಮಾಡುತ್ತಿರುವ ರಾಹುಲ್ ಗಾಂಧಿಯಿಂದ ಬಿಜೆಪಿ ತನ್ನ ಮತಬ್ಯಾಂಕ್ ನನ್ನು ಹೆಚ್ಚಿಸಿಕೊಳ್ಳುತ್ತಿದೆ” ಯೆಂದು ವ್ಯಂಗ್ಯವಾಡಿದ್ದಾರೆ!

 

ನವೆಂಬರ್ 8, 2016 ರರಿಂದಲೂ ಸಹ ಕಾಂಗ್ರೆಸ್ ಸುಳ್ಳುಗಳನ್ನೇ ಹಬ್ಬಿಸುವಲ್ಲಿ ನಿರತವಾಗಿದೆ!

ಕಾಂಗ್ರೆಸ್ ನ ರಾಜಕೀಯ ಕಾರ್ಯಕರ್ತ ಈ ಹಿಂದೆ, “ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಕೇಶವ್ ಮೌರ್ಯರ ಮಗಳಾದ ನಳಿನಿ ಮೌರ್ಯರಿಗೆ ಬ್ಯಾಂಕ್ ರಹಸ್ಯವಾಗಿ 20 ಲಕ್ಷದ 2000 ನೋಟುಗಳನ್ನು ನೀಡಿದೆ. ಇದಕ್ಕಾಗಿ, ದಿನಕ್ಕೆ 4 ಸಾವಿರವನ್ನು ಬದಲಾಯಿಸಿಕೊಳ್ಳಲು ಹಾಗೂ ವಾರಕ್ಕೆ 10 ಸಾವಿರವನ್ನಷ್ಟೇ ಪಡೆಯಲು ಮಾತ್ರ ಸಾಧ್ಯವಾಗುತ್ತಿದೆ” ಎಂದು ಸುಳ್ಳು ಆರೋಪವನ್ನು ಮಾಡಿದ್ದರು!

ಆದರೆ, ಈ ಕೆಳಗಿನ ಟ್ವೀಟ್ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುವಲ್ಲಿ ನಿಪುಣ ಎಂದು ಸಾಬೀತು ಮಾಡಿತ್ತು!

ಸಂಜಯ್ ಝಾ ಹಾಗೂ ಕಾಂಗ್ರೆಸ್ ನ ಟ್ವಿಟ್ಟರ್ ಖಾತೆಯ ನಿರ್ವಾಹಕರು ಇನ್ನೂ ಮುಂದೆ ಹೋಗಿ ನೋಟು ರದ್ದತಿಗೆ ಜನರಿಂದ ಹೇಗೆ ವಿರೋಧ ವ್ಯಕ್ತವಾಗುತ್ತಿದೆ
ನೋಡಿ ಎಂದು 2013 ರ ಕೀನ್ಯಾದೇಶದ ಫೋಟೋಗಳನ್ನು ಪ್ರಕಟಿಸಿತ್ತು!

ಕರ್ನಾಟಕ ಕಾಂಗ್ರೆಸ್ ನ ಕಾನೂನು ಸಲಹೆಗಾರ ಬ್ರಿಜೇಜ್ ಕಾಳಪ್ಪ, 2015 ರ ಫೋಟೋವನ್ನು ಪ್ರಕಟಿಸಿ ತಮ್ಮ ಕ್ರಿಯೇಟಿವಿಟಿಯನ್ನು ಜನತೆಗೆ ತೋರಿಸಿದ್ದರು! ಹಾ! 2015 ರಲ್ಲಿಯೇ, ಬ್ರಿಜೇಶ್ ಕಾಳಪ್ಪನವರ ಪ್ರಕಾರ 2015 ರಲ್ಲಿಯೇ ಜನತೆ ಡಿಮಾನಿಟೈಸೇಷನ್ ನ ವಿರುದ್ಧ ಪ್ರತಿಭಟಿಸಿತ್ತು! whatta Joke Yaar!

ರಾಜಕೀಯ ನಾಯಕರು, ತುಕ್ಕು ವಿಚಾರವಾದಿಗಳು ಮೋದಿಯ ನಡೆಯನ್ನು ವಿರೋಧಿಸುತ್ತಿದ್ದಾರೆ! ಆದರೆ, ದೇಶದಲ್ಲಿಯೇ ಪ್ರಸಿದ್ಧ ಆರ್ಥಿಕ ತಜ್ಞರಾದವರು ಶ್ಲಾಘಿಸುತ್ತಿದ್ದಾರೆ!

1. ಸುರ್ಜಿತ್ ಭಳ್ಳ! (Economist professor at Delhi School of Economics, World Bank ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ)
2. ಬಿಬೇಕ್ ಡೆಬ್ರಾಯ್! (Member of Niti Ayog, leading Economist and a Think Tank)
3. ಅರವಿಂದ್ ವಿರ್ಮಾನಿ! (Former India’S representative at IMF, former CEA)
4.ಅರುಣ್ ಜೇಟ್ಲಿ! (ಪ್ರಸ್ತುತ ಹಣಕಾಸು ಸಚಿವರು)
5.ಉರ್ಜಿತ್ ಪಟೇಲ್! (World’s leading economist in inflation, Current RBI chief)
6.ಶ್ರೀ ಎಸ್ ಗುರುಮೂರ್ತಿ! (Leading economist in South India)
7.ರಾಣಾ ಕಪೂರ್! (MD and CEO, Yes Bank)
8. ಶಮಿಕಾ ರವಿ! (Senior member of Brooking India)
9.ಡಿ.ಸುಬ್ಬರಾವ್! (former RBI Governor of India)
10. ಕೆನ್ನೆತ್ ರಾಗೋಫ್! (Former IMF Chief)
11.ವೈವಿ ರೆಡ್ಡಿ! (Former RBI Governor)
12.ಬುದ್ಧಾಡೆಬ್ ದಾಸಗುಪ್ತ! (Former Professor Shyama Sundar College)
13.ಬಿಮಾಲ್ ಜಲನ್ (Former RBI Governor)
14.ನಂದನ್ ನೀಲೇಕಣಿ (President of NCAER)

– ಪೃಥು ಅಗ್ನಿಹೋತ್ರಿ

Tags

Related Articles

Close