ಪ್ರಚಲಿತ

ನೋಟ್ ಬ್ಯಾನ್ ವರ್ಷಾಚರಣೆಯ ದಿನವೇ ಭರ್ಜರಿ ಬೇಟೆ! ಕಲಬುರ್ಗಿಯಲ್ಲಿ ಲಕ್ಷ ಲಕ್ಷ ಕಪ್ಪು ಹಣ ಪತ್ತೆ!

ಕೇಂದ್ರಸರಕಾರದ ನೋಟುಬ್ಯಾನ್‍ಗೆ ನವೆಂಬರ್ 8ಕ್ಕೆ ಒಂದು ವರ್ಷ ಸಲ್ಲುತ್ತದೆ. ನೋಟುಬ್ಯಾನ್‍ನಿಂದಾಗಿ ಅಕ್ರಮವಾಗಿ ಕೂಡಿಟ್ಟ ಕಪ್ಪು ಹಣ ಹೊರಗೆ ಬರುತ್ತಲೇ ಇದೆ. ನೋಟ್‍ಬ್ಯಾನ್‍ನ ವರ್ಷಾಚರಣೆಯ ದಿನವೇ ಪೊಲೀಸರ ಭರ್ಜರಿ ಬೇಟೆಗೆ ಬರೋಬ್ಬರಿ 50 ಲಕ್ಷ ರೂ. ಕಪ್ಪು ಹಣ ಪತ್ತೆಯಾಗಿದೆ. ಇದರಿಂದಾಗಿ ಮೀಟರ್ ಬಡ್ಡಿ ದಂಧೆಯೂ ಬೆಳಕಿಗೆ ಬಂದಂತಾಗಿದೆ.

ಕಲಬುರ್ಗಿಯಲ್ಲಿ ಅಕ್ರಮವಾಗಿ ಹಣದ ವಹಿವಾಟು ನಡೆಯುತ್ತಿದ್ದು, ಮೀಟರ್ ದಂಧೆಕೋರರು ಬಡ್ಡಿಯ ನೆಪದಲ್ಲಿ ಬಡವರ ರಕ್ತ ಹೀರುತ್ತಿದ್ದಾರೆ ಎಂಬ ಮಾಹಿತಿ ಮೇಲಿಂದ ಮೇಲೆ ಬರುತ್ತಲೇ ಇತ್ತು. ಈ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ನಿಖರ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 50 ಲಕ್ಷ ರೂ ಕಾಳಧನವನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಕರಣ್ ಗಾಯಕವಾಡ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತನ ಜೊತೆಗೆ ಮೂವರು ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಮೀನಾಕ್ಷಿ ಕಾಂತಾ, ನಾಗರಾಜ್ ಕಲಶೆಟ್ಟಿ ಹಾಗೂ ಶ್ರೀಕಾಂತ ಒಂಟಿ ಎಂಬವರನ್ನೂ ಬಂಧಿಸಲಾಗಿದೆ. ಬಂಧಿತರ ಬಳಿ ಇದ್ದ ಹಣವೆಲ್ಲಾ 2000, 500ರ ಹೊಸ ನೋಟುಗಳಾಗಿದ್ದು, ಇದರ ಮೌಲ್ಯವೇ ಬರೋಬ್ಬರಿ 40 ಲಕ್ಷ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ನೂರರ ಕಂತೆ ಕಂತೆ ನೋಟಗಳು, ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಕರಣ್ ಗಾಯಕವಾಡ್ ಮೀಟರ್ ಬಡ್ಡಿ ಮೂಲಕ ಜನರ ಬಳಿ ಹಣವನ್ನು ವಸೂಲಿ ಮಾಡುತ್ತಿದ್ದನು. ಈತನಿಗೆ ಉಳಿದ ಮೂವರು ಆರೋಪಿಗಳು ಸಾಥ್
ನೀಡುತ್ತಿದ್ದರು. ಈತನ ಬಗ್ಗೆ ಖಚಿತ ಮಾಹಿತಿ ಪಡೆದ ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ
ಕಾಳಧನವನ್ನು ವಶಪಡಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಣ್ ಗಾಯಕವಾಡ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೇ ಈ ಪ್ರಕರಣಕ್ಕೆ ಸೇರಿದಂತೆ ಇತರೆ ಮೂವರು ಮೀಟರ್ ಬಡ್ಡಿ ದಂಧೆಕೋರನ್ನೂ ಕೂಡ ಬಂಧಿಸಲಾಗಿದೆ. ಮೀನಾಕ್ಷಿ ಕಾಂತಾ, ನಾಗರಾಜ್ ಕಲಶೆಟ್ಟಿ ಮತ್ತು ಶ್ರೀಕಾಂತ ಒಂಟಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಕಲಬುರಗಿಯ ಆರ್.ಜೆ. ಬ್ರಹ್ಮಪೂರ್ ಠಾಣೆ ಹಾಗೂ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಬ್ಯಾಂಕಿಂಗ್ ಹೊರತುಪಡಿಸಿ ಅಕ್ರಮವಾಗಿ ಮಿತಿಮೀರಿದ ರೀತಿಯಲ್ಲಿ ನಗದು ವಹಿವಾಟು ಮಾಡುವುದು ಕಾನೂನು ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ.
ಇಂಥದುವುಗಳನ್ನು ತಡೆಯಲು ಹಲವಾರು ನಿಯಮಗಳನ್ನು ರೂಪಿಸಲಾಗಿದೆ. ಅಕ್ರಮ ಹಣವಹಿವಾಟು ಕಂಡು ಬಂದರೆ ಅವುಗಳ ಮೇಲೆ ಸೂಕ್ತ ದಂಡ ವಿಧಿಸಿ
ವಶಪಡಿಸಿಕೊಳ್ಳಬಹುದು. ಆದ್ದರಿಂದ ಕಲಬುರ್ಗಿಯಲ್ಲಿ ಪತ್ತೆಯಾದ ಬರೋಬ್ಬರಿ 50 ಲಕ್ಷ ರೂ. ಹಣ ಯಾರಿಗೆಲ್ಲಾ ಸೇರಿದೆ, ವಿನಿಯೋಗಿಸಿದರ್ಯಾರು ಎಂಬುವುದನ್ನು ಪೊಲೀಸರು ಪತ್ತೆ ಹಚ್ಚಬೇಕಾಗಿದೆ. ಅದಕ್ಕಾಗಿ ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ವಹಿಸಿಕೊಡಲು ಪೊಲೀಸರು ನಿರ್ಧರಿಸಿದ್ದಾರೆ.

ಸರಕಾರ ಅಕ್ರಮ ವಹಿವಾಟುಗಳನ್ನು ತಡೆಗಟ್ಟಲು ನೂರಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಖದೀಮರು ಇದಕ್ಕೆಲ್ಲಾ ಚಳ್ಳೆಹಣ್ಣು ತಿನ್ನಿಸಿ ಅಕ್ರಮವ ವಹಿವಾಟಿನಿಂದ ಕಾಳಧನ ಶೇಖರಿಸುತ್ತಿದ್ದಾರೆ. ಇದೇ ರೀತಿ ಹಲವಾರು ಮಂದಿ ಕಾಳಧನ ವ್ಯವಹಾರದಲ್ಲಿ ತೊಗಡಿರುವ ಸಾಧ್ಯತೆ ಇದ್ದು ಆದಾಯ ತೆರಿಗೆ ಇಲಾಖೆ ಇದನ್ನೆಲ್ಲಾ ಪತ್ತೆಹಚ್ಚಬೇಕಾಗಿದೆ. ಇಲ್ಲದೇ ಇದ್ದರೆ ಮತ್ತಷ್ಟು ಕಳ್ಳದಂಧೆ ನಡೆಯುವ ಸಾಧ್ಯತೆಯೂ ಇದೆ. ಈ ಪ್ರಕರಣದಲ್ಲಿ ಬಲುದೊಡ್ಡ ಘನವೆತ್ತ ಖದೀಮರೂ ಇರುವ ಸಾಧ್ಯತೆ ಇದ್ದು, ನಿಖರ ತನಿಖೆಯೊಂದಿಗೆ ಇಂಥವರನ್ನೆಲ್ಲಾ ಬೀದಿಗೆ ತರುವ ಕೆಲಸ ನಡೆಯಬೇಕಿದೆ.

ಬೆಳಕಿಗೆ ಬಂದಿತು ಮೀಟರ್ ಬಡ್ಡಿ ದಂಧೆ…!!!

ಇಂದು ರಾಜ್ಯಾದ್ಯಂತ ಹಲವಾರು ಮಂದಿ ಮೀಟರ್ ಬಡ್ಡಿ ದಂಧೆ ನಡೆಸಿ ಬಡವರ ರಕ್ತ ಹೀರುವ ಕೆಲಸವನ್ನು ನಡೆಸುತ್ತಿದ್ದಾರೆ. ಅಕ್ರಮವಾಗಿ ಸಾಲ ನೀಡಿ ಅದಕ್ಕೆ ಬಡ್ಡಿ, ಚಕ್ರಬಡ್ಡಿಗಳನ್ನು ವಿಧಿಸಿ ಬಡವರ ರಕ್ತ ಹೀರುತ್ತಿದ್ದಾರೆ. ಕೆಲವು ರಾಜಕಾರಣಿಗಳೇ ಕುದ್ದಾಗಿ ಇದರಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಸಾಕಷ್ಟು ಮಂದಿ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದು, ಅಧಿಕ ಬಡ್ಡಿ ಹೇರಿ ಜನರನ್ನು ವಂಚಿಸುತ್ತಿದ್ದಾರೆ. ಬ್ಯಾಂಕಿನಿಂದ ಸಾಲ ಸಿಗದಿದ್ದಾಗ ಬಡವರು ಜನರು ಬಡ್ಡಿ ನೀಡುವವರ ಮೊರೆ ಹೋಗಿ ಸುಲಭದಲ್ಲಿ ಹಣ ಪಡೆಯುತ್ತಾರೆ. ಆದರೆ ಹಣ ಪಾವತಿಸಲಾಗದೆ ಇದ್ದಾಗ ಸಾಕಷ್ಟು ಬಡ್ಡಿ ನೀಡಿ ಮನೆಮಠವನ್ನು ಕಳೆದುಕೊಂಡವರೂ ಇದ್ದಾರೆ.

ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕಲು ಸರಕಾರ ಇದುವರೆಗೂ ಸಕಾಲಿಕ ಕ್ರಮವನ್ನು ಕೈಗೊಂಡಿಲ್ಲ. ಇದರಿಂದ ಬಡ್ಡಿ ವ್ಯವಹಾರ ನಡೆಯುತ್ತಲೇ ಇದೆ. ಜನರು
ಬಡ್ಡಿಯವರ ಕೈಗೆ ಸಿಕ್ಕು ಒದ್ದಾಡುತ್ತಲೇ ಇದ್ದು, ಅವರನ್ನು ರಕ್ಷಿಸುವವರು ಯಾರೂ ಇಲ್ಲ. ಅಲ್ಲದೆ ಈ ಬಡ್ಡಿ ವ್ಯವಹಾರಿಗಳು ತಮ್ಮ ಬಳಿ ಗೂಂಡಾಗಳನ್ನು ಇಟ್ಟುಕೊಂಡು ಬೆದರಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದ್ದರೂ ಸರಕಾರ ಈ ಬಗ್ಗೆ ಸೂಕ್ತವಾಗಿ ಕಾನೂನು ರೂಪಿಸಿಲ್ಲ.

ಆದ್ದರಿಂದ ಕಲಬುರ್ಗಿಯಲ್ಲಿ ಪತ್ತೆಯಾದ ಕಾಳಧನ ಪ್ರಕರಣದ ಬೆನ್ನುಬಿದ್ದು, ಅದರ ಜೊತೆಗೆ ಮೀಟರ್ ಬಡ್ಡಿ ದಂಧೆಯನ್ನೂ ಪತ್ತೆಹಚ್ಚುವ ಕೆಲಸವನ್ನು ಸರಕಾರ
ಮಾಡಬೇಕಾಗಿದೆ. ಬಡ್ಡಿ ವ್ಯವಹಾರ ನಡೆಸುವ ಬಡ್ಡಿಮಕ್ಕಳ ಹೆಡೆಮುರಿ ಕಟ್ಟಿ ಅವರನ್ನು ಜೈಲಿಗೆ ನೂಕುವ ಕೆಲಸವೂ ತರಾತುರಿಯಲ್ಲಿ ನಡೆಯಬೇಕಾಗಿದೆ.

source:http://publictv.in/rs-50-lakh-unaccounted-money-seized-on-noteban-anniversary/

ಚೇಕಿತಾನ

Tags

Related Articles

Close