ಕರ್ನಾಟಕದ ಸಿದ್ದರಾಮಯ್ಯನ ಸರಕಾರದಲ್ಲಿ ದನಗಳಿಗೆ ರಕ್ಷಣೆ ಇಲ್ಲ ಮಾತ್ರವಲ್ಲ ಜನಗಳಿಗೂ ರಕ್ಷಣೆ ಇಲ್ಲ. ಮೊದಲು ಸಂಘಪರಿವಾರದವರನ್ನೆಲ್ಲಾ ಕೊಲ್ಲಲಾಗುತ್ತಿತ್ತು. ಇದೀಗ ಮುಂದುವರಿದು ಸಾಹಿತಿಗಳನ್ನೂ ಕೊಲ್ಲಲಾಗುತ್ತಿದೆ. ಇದಕ್ಕೆ ಮೊನ್ನೆ ನಡೆದ ಗೌರಿ ಲಂಕೇಶ್ ಹತ್ಯೆಯೇ ಸಾಕ್ಷಿ. ನಕ್ಸಲರೇ ಈಕೆಯನ್ನು ಟಾರ್ಗೆಟ್ ಮಾಡಿ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಲೆ ನಡೆಯುವ ಮುಂಚೆಯೇ ಆಕೆಗೆ ಸೂಕ್ತ ರಕ್ಷಣೆ ನೀಡುತ್ತಿದ್ದರೆ ಇಂದು ಗೌರಿ ಕೊಲೆಯಾಗ್ತಾ ಇರ್ತಿರಲಿಲ್ಲ. ಸಿದ್ದರಾಮಯ್ಯನ ಲಜ್ಜೆಗೆಟ್ಟ ಸರಕಾರ ಗೌರಿ ಕೊಲೆಹತ್ಯೆ ಆರೋಪಿಯನ್ನು ಹಿಂದೂ ಸಂಘಟನೆಗಳ ಮೇಲೆ ಕಟ್ಟಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಒಬ್ಬರು ಕೊಲೆಯಾಗುವುದನ್ನು ತಪ್ಪಿಸುವುದನ್ನು ಬಿಟ್ಟು, ಕೊಲೆಯಾದ ಬಳಿಕ ಅದರಿಂದ ರಾಜಕೀಯ ಲಾಭವನ್ನು ಪಡೆದುಕೊಳ್ಳುವುದು ಕಾಂಗ್ರೆಸ್‍ನ ಹಿಂದಿನಿಂದ ಬಂದ ಜಾಯಮಾನ. ಅದನ್ನೇ ಈಗ ಸಿದ್ದರಾಮಯ್ಯ ಸರಕಾರ ನಡೆಸಿಕೊಂಡು ಬರುತ್ತಿದೆ.
ಸಿದ್ದರಾಮಯ್ಯ ಸರಕಾರದ ಮುಂಚೆ ಬಿಜೆಪಿ ಸರಕಾರವಿತ್ತು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲೂ ಮೂವರು ಪತ್ರಕರ್ತರು ಮತ್ತು ಪತ್ರಿಕೋದ್ಯಮಿಗಳನ್ನು
ಕೊಲ್ಲಲು ಸಂಚು ರೂಪಿಸಲಾಗಿತ್ತು. ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ, ವಿಶ್ವೇಶ್ವರ ಭಟ್ ಹಾಗೂ ವಿಜಯವಾಣಿ ಸಂಸ್ಥಾಪಕ ವಿಜಯ್ ಸಂಕೇಶ್ವರ ಅವರ ಹತ್ಯೆಗೆ
ಸಂಪೂರ್ಣ ಸ್ಕೆಚ್ ಹಾಕಲಾಗಿತ್ತು. ಆದರೆ ಆಗಿನ ಗೃಹಸಚಿವರಾಗಿದ್ದ ಆರ್.ಅಶೋಕ್ ಅವರು ಗುಪ್ತಚರರಿಂದ ಈ ಬಗ್ಗೆ ಮಾಹಿತಿ ಪಡೆದು ಕೂಡಲೇ ಬಂದೋಬಸ್ತ್
ಮಾಡಿಸಿದರು. ಮೂವರನ್ನು ಒಂದು ಸ್ಥಳಕ್ಕೆ ಕರೆಸಿ ಎಲ್ಲವನ್ನೂ ವಿವರಿಸಿ ಮುಂಜಾಗ್ರತಾ ಕ್ರಮ ಕೈಗೊಂಡರು. ಬಳಿಕ ಎರಡೇ ದಿನದಲ್ಲಿ ಆರೋಪಿಗಳನ್ನು
ಹಿಡಿದುಹಾಕಿದರು.
ದುಷ್ಕರ್ಮಿಗಳು ಹತ್ಯೆಗೆ ಸಂಚು ರೂಪಿಸಿರುವ ಎಲ್ಲಾ ವಿವರವನ್ನೂ ರಾಜ್ಯದ ಪೆÇಲೀಸ್ ಇಂಟೆಲಿಜೆನ್ಸ್‍ನವರು ನಿಖರವಾಗಿ ಕಲೆಹಾಕಿದ್ದರು. ದುಷ್ಕರ್ಮಿಗಳು
ಖರೀದಿಸಿದ ಆಯುಧಗಳು, ಪಡೆದ ಹಣ, ಕೊಲೆಗೆ ನಿಗದಿಪಡಿಸಿದ ದಿನಾಂಕ, ಸ್ಥಳ ಇತ್ಯಾದಿ ಸಂಪೂರ್ಣ ವಿವರಗಳನ್ನು ಗುಪ್ತಚರರು ಸಂಗ್ರಹಿಸಿದ್ದರು. ಒಂದು ರಾಜ್ಯದ ಗೃಹಸಚಿವರಾಗಿರುವವರು ಗುಪ್ತಚರ ಇಲಾಖೆಯ ಯಾವುದೇ ಮಾಹಿತಿಯನ್ನು ನಿರ್ಲಕ್ಷಿಸುವಂತಿಲ್ಲ. ಅದನ್ನೇ ಮಾಡಿಕೊಂಡು ಬಂದಿದ್ದ ಆರ್. ಅಶೋಕ್
ಪತ್ರಿಕೋದ್ಯಮಿಗಳ ಜೀವವನ್ನು ರಕ್ಷಿಸಿದ್ದರು. ಆದರೆ ಆರ್. ಅಶೋಕ್‍ನಂತೆಯೇ ಸಿದ್ದರಾಮಯ್ಯ ಸರಕಾರ ವರ್ತಿಸಿದ್ದರೆ ಗೌರಿ ಲಂಕೇಶ್ ಜೀವ ಉಳಿದುಕೊಂಡಿರುತ್ತಿತ್ತು.
ಸಿದ್ದರಾಮಯ್ಯ ಸರಕಾರದಲ್ಲಿ ಒಬ್ಬ ಸೂಕ್ತವಾದ ಗೃಹಸಚಿವರೂ ಇರಲಿಲ್ಲ. ವರ್ಷಕ್ಕೊಬ್ಬ ಗೃಹಸಚಿವ ಬದಲಾಗ್ತಾ ಇದ್ದ. ಒಂದು ರಾಜ್ಯದ ಗೃಹಸಚಿವರು ದಕ್ಷ ಹಾಗೂ ಯೋಗ್ಯ ವ್ಯಕ್ತಿಯಾಗಿರಬೇಕು. ಆದರೆ ಕರ್ನಾಟಕಲ್ಲಿ ಆದ ಗೃಹಸಚಿವರೆಲ್ಲಾ ದುರ್ಬಲ ವ್ಯಕ್ತಿಗಳು. ಗುಪ್ತಚರ ಇಲಾಖೆಯ ಮಾಹಿತಿಯಿದ್ದರೂ ಅದನ್ನು ನಿರ್ಲಕ್ಷ್ಯವಹಿಸಿದ ಪರಿಣಾಮ ಗೌರಿ ಗುಂಡಿಗೆ ಬಲಿಯಾದಳು. ಹಾಗಾದರೆ ಗೌರಿ ಲಂಕೇಶ್ ಅವರ ಜೀವಕ್ಕೆ ಬೆದರಿಕೆಗಳಿದ್ದರೂ ಕರ್ನಾಟಕ ಸರ್ಕಾರವೇಕೆ ಅವರಿಗೆ ಸೂಕ್ತ ಭದ್ರತೆಯನ್ನು ಕೊಟ್ಟಿರಲಿಲ್ಲ ಎಂಬ ಪ್ರಶ್ನೆ ಕಾಡುವುದು ಸಹಜ. ಇದೀಗ ಅದೇ ಪ್ರಶ್ನೆಯನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರೂ ಕೇಳಿದ್ದಾರೆ. ಸದಾ ಭ್ರಷ್ಟಾಚಾರದಲ್ಲೇ ತೊಡಗಿಕೊಂಡು, ಸಂಘಪರಿವಾರ, ಬಿಜೆಪಿ ಇದನ್ನೇ ಟಾರ್ಗೆಟ್ ಮಾಡಿಕೊಂಡು ವೈಯಕ್ತಿಕ ಧ್ವೇಷರಾಜಕಾರಣದಲ್ಲಿ ತೊಡಗಿದ್ದೇ ಜಾಸ್ತಿ. ಇದರಿಂದಾಗಿಯೇ ರಾಜ್ಯದಲ್ಲಿ ಹಲವು ಅಮಾಯಕ ಜೀವಗಳು ಬಲಿಯಾದವು.
ಗೌರಿ ಹತ್ಯೆಯಲ್ಲಿ ನಕ್ಸಲ್ ಕೈವಾಡ ಇದೆ ಎಂಬ ಶಂಕೆ ಇದ್ದು, ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡನ ಹೆಸರು ಕೂಡಾ ಕೇಳಿಬರುತ್ತಿದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡನ ಮೇಲೆ 20ಕ್ಕೂ ಹೆಚ್ಚು ಆರೋಪಗಳಿವೆ. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತಿದ್ದ ಗೌರಿಲಂಕೇಶ್‍ರನ್ನು ವಿರೋಧಿಸಿದ್ದ ಈತ ಚಿಕ್ಕಮಗಳೂರು ಸುತ್ತಮುತ್ತ ಈಕೆಯ ವಿರುದ್ಧ ಬಿತ್ತಿ ಪತ್ರಗಳನ್ನು ಹಂಚಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿಯನ್ನೂ ಪಡೆದುಕೊಂಡಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇಷ್ಟೆಲ್ಲಾ ಬೆದರಿಕೆ ಇದ್ದರೂ ಸರಕಾರ ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿತ್ತು. ಆದರೆ ಇದನ್ನೆಲ್ಲಾ ಬಿಟ್ಟು ಇದೀಗ ಸಂಘಪರಿವಾರದ ಮೇಲೆ ಸುಮ್ಮನೆ ಆರೋಪ ಮಾಡಲಾಗುತ್ತಿದೆ.
ಇನ್ನೂ ಮುಂದೆ ಹೋಗಿ ಕಾಂಗ್ರೆಸ್‍ನ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಪ್ರಕರಣದ ತನಿಖೆಯಾಗಿ ಇನ್ನೂ ವರದಿ ಸಲ್ಲಿಕೆಯಾಗದಿದ್ದರೂ ಪ್ರಕರಣದಲ್ಲಿ
ಆರ್’ಎಸ್‍ಎಸ್ ಹಾಗೂ ಬಿಜೆಪಿ ಇದೆ ಎಂಬ ಆರೋಪ ಮಾಡುತ್ತಾರೆ. ಗೌರಿ ಲಂಕೇಶ್ ಅವರು ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಯತ್ನಿಸುತ್ತಿರುವುದರಿಂದ ಅವರಿಗೆ ಜೀವ ಬೆದರಿಕೆ ಇತ್ತು. ಆದರೆ ಈ ಮಾಹಿತಿ ಇದ್ದರೂ ಕ್ಯಾರ್ ಮಾಡದ ಸಿದ್ದರಾಮಯ್ಯ ಸರಕಾರ ಗೌರಿಲಂಕೇಶ್‍ಗೆ ಸೂಕ್ತ ರಕ್ಷಣೆ ಒದಗಿಸದೆ ಅವರ ಕೊಲೆಗೆ ಪರೋಕ್ಷ ಕಾರಣವಾಯಿತು ಎನ್ನುವುದು ನಿಧಾನವಾಗಿ ಬೆಳಕಿಗೆ ಬರುತ್ತಿದೆ.
ಆರ್. ಅಶೋಕ್ ಅವರು ಗೃಹಮಂತ್ರಿಯಾಗಿದ್ದ ಬಿಜೆಪಿ ಸರಕಾರ ಯಾವ ರೀತಿ ಕರ್ತವ್ಯ ಮೆರೆದಿತ್ತೋ ಅದೇ ರೀತಿ ಕಾಂಗ್ರೆಸ್ ಮಾಡಿದ್ದರೆ ಗೌರಿ ಲಂಕೇಶ್
ಹತ್ಯೆಯಾಗುತ್ತಿರಲಿಲ್ಲ.
ಚೇಕಿತಾನ