ಅಂಕಣ

ಪಾಕಿಸ್ತಾನದಿಂದ ಬಂದ ಭಯೋತ್ಪಾದಕರನ್ನು ಹಿಂದೆ ಕಳುಹಿಸಿ ಹಿಂದುಗಳನ್ನು ಉಗ್ರರೆಂದು ಬಿಂಬಿಸಿತ್ತಾ ಕಾಂಗ್ರೆಸ್?!!

2007ರಲ್ಲಿ ನಡೆದ ಸಂಜೋತ್ ಎಕ್ಸಪ್ರೆಸ್ ಸ್ಪೋಟ ಹಿಂದುಗಳಿಂದಾದ್ದಲ್ಲ, ಇಸ್ಲಾಮಿಕ್ ಭಯೋತ್ಪಾದಕರೇ ಆ ಸ್ಪೋಟಕ್ಕೆ ಕಾರಣವೆಂದು ಅನೇಕ ವರದಿಗಳು
ಬಂದಿದ್ದವು. ಆದರೆ ಮಾಧ್ಯಮಗಳು ಸತ್ಯವನ್ನು ಕಂಡುಹಿಡಿಯುವ ಸ್ಥಿತಿಯಲ್ಲಿ ಇರಲಿಲ್ಲ. ಕಾಂಗ್ರೆಸ್ ತನ್ನ ಇಸ್ಲಾಂ ಭಯೋತ್ಪಾದಕ ಸ್ನೇಹಿತರನ್ನು ಉಳಿಸಲು ಹಿಂದುಗಳ ಮೇಲೆ ಹಿಂದು ಭಯೋತ್ಪಾದನೆ ಎಂಬ ಹಣೆಪಟ್ಟಿ ಕಟ್ಟಲು ಪ್ರಯತ್ನಿಸಿದ್ದರು.

ಆದರೆ ಈ ಟೈಮ್ಸ್ ನೌ(Times now) ಸಂಜೋತಾ ಎಕ್ಸ್‌ಪ್ರೆಸ್‌ ಸ್ಪೋಟದ ನೈಜಸತ್ಯವನ್ನು ಬಹಿರಂಗ ಪಡಿಸಿದೆ. ಈ ನೈಜ ಸತ್ಯದಿಂದ ಕಾಂಗ್ರೆಸ್ಸಿನ ನೈಜ
ಬಣ್ಣವನ್ನು ತೋರಿಸುತ್ತದೆ. ಸಂಜೋತಾ ಸ್ಪೋಟ ನಡೆದದ್ದು 18 ಫೆಬ್ರವರಿ 2007ರಂದು. ಬಾಂಬ್ ಗಳನ್ನು ಎರಡು ಬೋಗಿಗಳಲ್ಲಿ ಸೆಟ್ ಮಾಡಿದ್ದರು. ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಪಾಣಿಪತ್ತಿನ ದಿವಾನ ನಿಲ್ದಾಣ ಬಿಟ್ಟ ತಕ್ಷಣ ಆ ಬಾಂಬ್ ಗಳು ಸ್ಪೋಟಗೊಂಡವು ಅದರಿಂದ ಸುಮಾರು 68 ಜನ ಸ್ಥಳದಲ್ಲೇ ಸಾವನ್ನಪ್ಪಿದರು, 100 ಜನ ಗಾಯಗೊಂಡರು.

ಪ್ರತ್ಯಕ್ಷ ದರ್ಶಿಗಳ ಆಧಾರದ ಮೇಲೆ ಪೋಲಿಸರು ಇಬ್ಬರು ಶಂಕಿತರ ಭಯೋತ್ಪಾದಕರ ರೇಖಾಚಿತ್ರಗಳನ್ನು ಸಿದ್ಧಪಡಿಸಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಆ ಇಬ್ಬರು ಭಯೋತ್ಪಾದಕರು ಆ ರೈಲು ಬಿಡುವ 15 ನಿಮಿಷ ಮುಂಚೆ ರೈಲಿನಿಂದ ಇಳಿದು ಹೋಗಿದ್ದರು.

ಆ ಭಯೋತ್ಪಾದಕರಲ್ಲೊಬ್ಬ ಪಾಕಿಸ್ತಾನದವನಾಗಿದ್ದ. ಪೋಲಿಸರಿಗೆ ಸಿಕ್ಕಾಗ ಅವನು ಬಾಂಬ್ ಇರುವ ಸೂಟ್ ಕೇಸನ್ನು ರೈಲಿನಲ್ಲಿ ಎಸೆದು ಹೋಗಿದ್ದಾಗಿ ಒಪ್ಪಿಕೊಂಡಿದ್ದ.

ಕಾಂಗ್ರೆಸ್ ಆ ಭಯೋತ್ಪಾದಕ ಸ್ನೇಹಿತರನ್ನು ಬಿಡಿಸಲು ಆಟ ಶುರುಮಾಡಿದವು.

ಅವರ ಬಗ್ಗೆ ಯಾವುದೇ ತನಿಖೆ ನಡಸದೆ 15 ದಿನಗಳಲ್ಲಿ ಅವರು ಬಿಡುಗಡೆ ಮಾಡಿದರು. ಆ ಭಯೋತ್ಪಾದಕರು ನೀಡಿದ ಹೇಳಿಕೆಗಳು ಅಸಮಂಜಸವಲ್ಲ ಎಂದು
ಪೊಲೀಸರು ಹೇಳಿದರು. ಭಯೋತ್ಪಾದಕರು ಹೇಳಿದ್ದು ಅಸಮಂಜಸ (ಸುಳ್ಳು) ಎಂದು ಪೋಲಿಸರಿಗೆ ಅನಿಸಿದ್ದರೆ ನಾರ್ಕೊ ವಿಶ್ಲೇಷಣೆಗೆ ಏಕೆ ಒಳಪಡಿಸುವುದಿಲ್ಲ ?!

ಸಂಜೋತಾ ಎಕ್ಸ್‌ಪ್ರೆಸ್‌ ಸ್ಪೋಟದ ಸಂಶಯಾಸ್ಪದ ವ್ಯಕ್ತಿಗಳನ್ನು ತನಿಖೆ ಮಾಡಬಾರದು ಮತ್ತು ಹೆಚ್ಚಿನ ಪ್ರಶ್ನೆಗಳನ್ನು ಕೇಳದೆ ಅವರಿಗೆ ಹೋಗಲು ಅವಕಾಶ
ಮಾಡಿಕೊಡಬೇಕೆಂದು ಕಾಂಗ್ರೆಸ್ಸಿನ ಶಕ್ತಿಯುತ ಅಧಿಕಾರಿಗಳು ಆ ಸ್ಪೋಟದ ಮುಖ್ಯ ತನಿಖಾಧಿಕಾರಿಗೆ ಆದೇಶ ಮಾಡಿದ್ದರೆಂಬ ವಿಸ್ಮಯಕಾರಿ ಸುದ್ದಿಯನ್ನು ಆ ಮುಖ್ಯ ತನಿಖಾದಿಕಾರಿ ಬಹಿರಂಗ ಪಡಿಸಿದ್ದಾರೆ.

ಆ ಇಬ್ಬರು ಶಂಕಿತ ಭಯೋತ್ಪಾದಕರ ಹೆಸರು ಅಜ್ಮತ್ ಅಲಿ ಮತ್ತು ಉಸ್ಮಾನ್. ಆ ಇಬ್ಬರು ಶಂಕಿತ ಉಗ್ರರೇ ಸಂಜೋತಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್ ಸೂಟ್ ಕೇಸ್ ಇಟ್ಟು ಹೋಗಿದ್ದಾರೆ ಮತ್ತು ಆ ಇಬ್ಬರು ಭಾರತದಲ್ಲಿ ಅನೇಕ ಸ್ಥಳಗಳಲ್ಲಿ ಬಾಂಬ್ ಇಡುವ ಯೋಜನೆ ಹಾಕಿದ್ದರು. ನಕಲಿ ಐಡಿ ಮಾಡಿಕೊಂಡು ಹೋಟೆಲ್ ನಲ್ಲಿದ್ದರು ಎಂಬ ವರದಿಯನ್ನು ಮುಖ್ಯ ತನಿಖಾದಿಕಾರಿಗಳು ಸಲ್ಲಿಸಿದ್ದರು. ಆದರೆ ಯಾವುದೇ ತನಿಖೆ ನಡೆಸದೆ ಅವರನ್ನು 14 ದಿನಗಳಲ್ಲಿ ಬಿಡುಗಡೆ ಮಾಡಲಾಯಿತು.

ಲಷ್ಕರ್ ಎ ತೋಯ್ಬಾ ಭಯೋತ್ಪಾದಕ ಸಂಘಟನೆಯ ಸಂಯೋಜಕನಾದ ಖಸ್ಮನಿ ಆರೀಫ್ ಭಾರತದಲ್ಲಿ ದಾಳಿ ಮಾಡಲು ಅನುಕೂಲವಾಗುವಂತೆ ಪಾಕಿಸ್ತಾನದ
ಭಯೋತ್ಪಾದಕ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾನೆಂಬ ವಿಶ್ವಸಂಸ್ಥೆಯ ತನಿಖಾ ವರದಿ ಬಹಿರಂಗ ಪಡಿಸಿದೆ.

2006ರ ರೈಲಿನಲ್ಲಿ ಬಾಂಬ್ ಸ್ಪೋಟವಾದದ್ದು ಮತ್ತು ಸಂಜೋತಾ ಎಕ್ಸ್‌ಪ್ರೆಸ್‌ ರೈಲಿನ ಸ್ಪೋಟದಲ್ಲಿ ಖಸ್ಮನಿ ಭಾಗಿಯಾಗಿರೋದನ್ನ ದಾಖಲೆ ತೋರಿಸಿದೆ. ಈ
ಸ್ಪೋಟಕ್ಕೆ ದಾವುದ್ ಇಬ್ರಾಹಿಂ ಬೃಹತ್ ಹಣವನ್ನು ಆ ಉಗ್ರರಿಗೆ ಕೊಟ್ಟಿದ್ದ.

ಈ ಎಲ್ಲಾ ವರದಿಗಳು ಕಾಂಗ್ರೆಸ್ ಸರಕಾರಕ್ಕೆ ಮತ್ತು ತನಿಖಾ ಸಂಸ್ಥೆಗಳಿಗೆ ಲಭ್ಯವಿದ್ದವು. ಆದರೆ ಅವರು ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟಕ್ಕೆ ಕಾರಣರಾದ
ಭಯೋತ್ಪಾದಕರನ್ನು ಉಳಿಸಲು ನಿರ್ಧರಿಸಿದ್ದವು.

ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಭಯೋತ್ಪಾದಕರನ್ನು ಕಾಪಾಡಿಕೊಳ್ಳಲು ಮತ್ತು ಹಿಂದೂ ಭಯೋತ್ಪಾದನೆ ಎಂಬ ನಕಲಿ ಕಥೆಯನ್ನು ಜೋಡಿಸಲು ಬಯಸಿತ್ತು. ಸ್ಫೋಟಕ್ಕೆ ಸಂಬಂಧಿಸಿದಂತೆ ಸ್ವಾಮಿ ಅಸೀಮಾನಂದ ಮತ್ತು ಲೋಕೇಶ್ ಶರ್ಮಾರನ್ನು ಬಂಧಿಸಲಾಯಿತು. ನಂತರ ಕಾಂಗ್ರೆಸ್ ಆ ಸ್ಪೋಟವನ್ನು ಅಭಿನವ ಭಾರತ ಎಂಬ ಹಿಂದು ಸಂಘಟನೆಯ ಸ್ಥಾಪಿತರಾದ ಇಬ್ಬರು ಭಾರತೀಯ ಸೇನಾಧಿಕಾರಿಗಳಾದ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರ ಮೇಲೆ ಹೊರೆಸಿದರು.

2008 ಸೆಪ್ಟೆಂಬರ್ ತಿಂಗಳಿನಲ್ಲಿ ಮಾಲೆಗಾವ್ ಸ್ಪೋಟಕ್ಕೆ ಸಂಭಂದಿಸಿದಂತೆ ಶ್ರೀಕಾಂತ್ ಪುರೋಹಿತ್ ಮತ್ತು ಸಾಧ್ವಿ ಪ್ರಗ್ಯಾ ಸಿಂಗರನ್ನು ಬಂಧಿಸಿಲಾಯಿತು. ಅವರ ವಿರುದ್ಧ ಯಾವುದೇ ಸಾಕ್ಷಿಗಳು ಇರದೇ ಇದ್ದರೂ ಅವರನ್ನು ಬಂಧಿಸಿದರು. ರಾಜಕೀಯ ಪಿತೂರಿಯಿಂದ ಅವರ ಬಂಧನವಾಯಿತು.

ಆದರೆ ಪುರೋಹಿತರನ್ನು ಬಂಧಿಸಿರುವುದರ ಹಿಂದೆ ದೊಡ್ಡ ಪಿತೂರಿಯೇ ಇತ್ತು. ಅವರು ಗುಪ್ತಚಾರರಾಗಿ ಕೆಲಸ ಮಾಡುತ್ತಿದ್ದರು. ಮತ್ತು 26/11 ಮುಂಬೈ ದಾಳಿಗೆ
ಸಂಬಂಧಿಸಿದ ಸ್ಫೋಟಕ ಮಾಹಿತಿಯನ್ನು ಸಂಗ್ರಹಿಸಿದರು.

ಮುಂಬೈಯಲ್ಲಿ ದಾಳಿ ನಡೆಸಲು ಪಾಕಿಸ್ತಾನಿ ಐಎಸ್ಐ ಭಾರಿ ಯೋಜನೆಯನ್ನು ಮಾಡಿಕೊಂಡಿದೆ ಎಂದು ಅವರು ತಮ್ಮ ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದರು.ಆದರೆ ಅದನ್ನು ಕಡೆಗಣಿಸಿ ಎಫ್ಐಆರ್ ಇಲ್ಲದೆ ಹಿಂದೂ ಭಯೋತ್ಪಾದನೆ ಎಂಬ ಹೆಸರಿನಲ್ಲಿ 26/11 ಮುಂಬಯಿ ದಾಳಿಗೆ ಕೇವಲ 15 ದಿನಗಳ ಮುಂಚಿತವಾಗಿ ಅವರನ್ನು ಬಂಧಿಸಲಾಯಿತು ಮತ್ತು ಅವರು ಸಂಗ್ರಹಿಸಿದ್ದ ಮಾಹಿತಿಯನ್ನು ಮೌನವಾಗಿಸಿಬಿಟ್ಟರು.

ಪಾಕಿಸ್ತಾನದ ಭಯೋತ್ಪಾದಕರನ್ನು ಉಳಿಸುವಲ್ಲಿ ಕಾಂಗ್ರೆಸ್ ನೇರವಾಗಿ ಹಿಂದು ಭಯೋತ್ಪಾದನೆ ಎಂಬ ಕಲ್ಪನೆಯನ್ನು ಜನರೆದುರಿಗಿಟ್ಟಿದ್ದು ಈಗ ಸ್ಪಷ್ಟವಾಗಿದೆ.

ರಾಷ್ಟ್ರೀಯ ಭದ್ರತೆಯ ಬಗ್ಗೆ ಜವಬ್ದಾರಿನೇ ಇಲ್ಲದಂತೆ ದೇಶದ್ರೋಹಿ ಕಾಂಗ್ರೆಸ್ಸಿನ ಕೆಲವರು ಪಾಕಿಸ್ತಾನದ ಭಯೋತ್ಪಾದಕ ಕಂಪನಿಗೆ ದೇಶವನ್ನು ಮಾರಿದರು!

ಪುರೋಹಿತರಂತಹ ಮುಗ್ಧ ಮತ್ತು ಪ್ರಾಮಾಣಿಕ ಅಧಿಕಾರಿಗಳು ದೇಶದ ಸೇವೆಗಾಗಿ ದುಡಿದವರು,ಹಿಂದು ಭಯೋತ್ಪಾದನೆ ಎಂಬ ಹುಸಿ ಆಪಾದನೆ ಮೇಲೆ ಜೈಲಿಗೆ ಹೋಗುವಂತಾಯ್ತು!

ಪಾಕಿಸ್ತಾನದ ಭಯೋತ್ಪಾದಕರನ್ನು ಕಾಪಾಡಿದ ಕಾಂಗ್ರೆಸ್ಸಿನ ಶಕ್ತಿಯುತರು ಯಾರೆಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಉತ್ತರಿಸುತ್ತಾರಾ?

ಕಾಂಗ್ರೆಸ್ ಮಾಡಿದ ಈ ಅಪರಾಧಕ್ಕೆ ಯಾವುದೇ ಭಾರತೀಯನು ಕ್ಷಮಿಸಲ್ಲ!!

-ಮಹೇಶ್

Tags

Related Articles

Close