ಪ್ರಚಲಿತ

ಪಾಕಿಸ್ತಾನದ ಸೇನಾ ಪಡೆಯ ಮುಖ್ಯಸ್ಥನಿಗೆ ಗುಜರಾತ್‍ನಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂಬ ಆಸೆ ಯಾಕೆ? ಇಲ್ಲಿದೆ ಭಯಾನಕ ಮಾಸ್ಟರ್ ಪ್ಲಾನ್!!

ನರೇಂದ್ರ ಮೋದಿ.ಈ ವ್ಯಕ್ತಿ ಅದೆಲ್ಲೋ ಭಾರತ ದೇಶದ ಸಣ್ಣ ಕಡಲ ಕಿನಾರೆ ಗುಜರಾಥ್ ಎಂಬ ಪುಟ್ಟ ರಾಜ್ಯದಲ್ಲಿ ಬಡ ಕುಟುಂಬದಲ್ಲಿ ಬೆಳೆದು ಬಂದ ವ್ಯಕ್ತಿ ಈ ವ್ಯಕ್ತಿಯೇ ಮುಂದೊಂದು ದಿನ ಜಗತ್ತಿನ ಶಕ್ತಿಯಾಗುತ್ತೆ ಅಂತಾ ಸ್ವತಃ ಮೋದಿ ತಾಯಿಯೇ ಅಂದು ಕೊಂಡಿರಲಿಲ್ಲ.

ಇಂದು ಮೋದಿ ಕೇವಲ ಗುಜರಾತ್ ಭಾರತಕ್ಕೆ ಮಾತ್ರ ನಾಯಕನಾಗದೆ ಜಾಗತಿಕ ಮಟ್ಟದಲ್ಲಿ ನಾಯಕನಾಗಿ ಬೆಳೆದು ಇಂದು ವಿಶ್ವನಾಯಕನಾಗಿದ್ದಾರೆ. ಮೋದಿ ಅಂತ ಹೆಸರು ಕೇಳಿದೊಡನೆ ಈ ದೇಶದ ವಿರೋಧ ಪಕ್ಸಗಳು ಬೆಕ್ಕಸ ಬೆರಗಾಗಿ ನೋಡುತ್ತಿರುತ್ತದೆ. ಮೋದಿ ಮೈಕ್ ಮುಂದೆ ಬಂದು ನಿಂತರಂತೂ ವಿರೋಧಿಗಳ ಕಣ್ಣು ಅಚಲವಾಗಿ ಮೋದಿ ಮೇಲೆನೇ ದಿಟ್ಟಿಸಿರುತ್ತದೆ. 132 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್ ಎಂಬ ಪಕ್ಷವನ್ನು ಸಂಸತ್‍ನ ವಿರೋಧ ಪಕ್ಷದಲ್ಲಿ ಕೂರುವ ಯೋಗ್ಯತೆಯನ್ನೂ ಕಿತ್ತುಕೊಂಡವರು ಮೋದಿ. ಕಾಂಗ್ರೆಸ್ ಪಕ್ಷ ಮಾಡಿದ್ದ ಭ್ರಷ್ಟಾಚಾರಗಳನ್ನು ದೇಶದ ಜನತೆಯ ಮುಂದೆ ಬಿಚ್ಚಿಟ್ಟು ಅವುಗಳ ನಿಜಮುಖವನ್ನು ಅನಾವರಣಗೊಳಿಸಿದವರು ನರೇಂದ್ರ ಮೋದಿ.

ಅಂದಹಾಗೆ ಈಗ ಬಂದಿರುವ ಸ್ಪೋಟಕ ವಿಷಯವೇನೆಂದರೆ, ಪಾಕಿಸ್ಥಾನದ ಮಾಜಿ ಡಿ.ಜಿ.ಯಾಗಿದ್ದ ಅರ್ಷಾದ್ ರಫೀಕ್ ನೀಡಿರುವ ಹೇಳಿಕೆ. ಮೋದಿಯನ್ನು ಕಂಡರೆ ಪಾಕಿಸ್ಥಾನ ಎಷ್ಟು ಹೆದರುತ್ತೆ ಎಂದರೆ ಇದಕ್ಕಿಂತ ಸಾಕ್ಷಿ ಮತ್ತೊಂದು ಬೇಕಾ. ಗುಜರಾತ್‍ನಲ್ಲಿ ವಿಧಾನ ಸಭಾ ಚುನಾವಣೆಗೆ ಭರ್ಜರಿಯಾಗಿ ತಯಾರಿಗಳು ನಡೆಯುತ್ತಲೇ ಇದೆ.

ಕಾಂಗ್ರೆಸ್ ಸಹಿತ ಎಲ್ಲಾ ಪಕ್ಷಗಳು ಹಾಗೂ ಸಂಘಟನೆಗಳು ಗುಜರಾತಿನಲ್ಲಿ ಮೋದಿಯನ್ನು ಸೋಲಿಸಬೇಕೆಂದು ಟೊಂಕ ಕಟ್ಟಿ ನಿಂತಿದ್ದಾರೆ. ಯಾವ್ಯಾವ ಅಸ್ತ್ರವನ್ನು ಮೋದಿಯ ಮೇಲೆ ಪ್ರಯೋಗಿಸಬೇಕೆಂದು ಆಲೋಚಿಸಿ ಕ್ರಿಮಿನಲ್ ತಂತ್ರಗಳ ಮೂಲಕ ಮೋದಿಯ ಮೇಲೆ ಬಾಣಗಳನ್ನು ಹೂಡುತ್ತಿದ್ದಾರೆ. ಇದರ ಮಧ್ಯೆ ಪಾಕಿಸ್ಥಾನದಿಂದ ಒಂದು ವಾಣಿ ಮೊಳಗಿಬಿಡುತ್ತದೆ. “ಗುಜರಾತಿನಲ್ಲಿ ಮೋದಿಯನ್ನು ಸೋಲಿಸಿ” ಎಂದು ಕಾಂಗ್ರೆಸ್ ಪಕ್ಷಕ್ಕೆ ನೇರವಗಿ ಬೆಂಬಲ ನೀಡುತ್ತಾನೆ. ಇದರ ಹಿಂದಿರುವ ಮರ್ಮವೇನು ಎಂದು ತಿಳಿಯಲು ಹಚ್ಚೇನು ಸಮಯ ಬೇಕೆಂದೇನಿಲ್ಲ.


ಮೋದಿ ಎಂಬ ಮಹಾ ಪುರುಷ ಇಂದು ಶಕ್ತಿ ಇಂದು ವಿಶ್ವನಾಯಕ ಎಂಬುವುದು ಪಾಕಿಸ್ಥಾನಕ್ಕೂ ಗೊತ್ತಿರುವ ಸಂಗತಿ. ಮೋದಿ ಹೇಳಿದ ಮಾತನ್ನು ಜಗತ್ತಿನ ದೊಡ್ಡ ದೊಡ್ಡ ದೇಶಗಳೂ ತಲೆ ತಗ್ಗಿಸಿಕೊಂಡು ಕೇಳುತ್ತಿರುತ್ತದೆ. ಮೋದಿ ಬೆರಳು ತೋರಿಸಿ ಕೆಲಸ ಹೇಳಿದರೆ ಉಳಿದೆಲ್ಲಾ ರಾಷ್ಟ್ರಗಳೂ “ಓಕೆ ಸರ್” ಎಂದು ತಲೆಯಾಡಿಸುತ್ತಾವೆ. ಮೋದಿ ಬರೋವರೆಗೆ ತಾವು ಜಗತ್ತಿನ ನಾಯಕರು ಎಂದು ಪೋಸು ಕೊಡುತ್ತಿದ್ದ ದೊಡ್ಡ ದೇಶದ ನಾಯಕರೆಲ್ಲರೂ ಇಂದು ಮೋದಿ ಮೋಡಿಗೆ ಮೂಕವಿಸ್ಮಿತರಾಗಿ ನಿಂತಿದ್ದಾರೆ. ಇದುವೇ ಪಾಕಿಸ್ಥಾನಕ್ಕೆ ತಲೆ ನೋವಾಗಿ ಪರಿಣಮಿಸಿದೆ..!!!

ಗುಜರಾತಿನಲ್ಲಿ ಚುನಾವಣೆಯ ಕಾವು-ಪಾಕಿಸ್ಥಾನಕ್ಯಾಕೆ ತಲೆನೋವು..???

ವಿಷಯ ಇರುವುದೂ ಅಲ್ಲೇನೆ… ಮೋದಿ ಪ್ರಧಾನಿಯಾದ ನಂತರ ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನ ಅತಿ ದೊಡ್ಡ ಮಟ್ಟದಲ್ಲಿ ಬೆಲೆಯನ್ನು ತೆರುತ್ತಿದೆ. ಪಾಕ್ ನಡೆಸುವ ಕರಾಳ ದಂಧೆಯನ್ನು ಮೋದಿ ಜಗತ್ತಿನ ಮುಂದೆ ಬಿಚ್ಚಿಡುತ್ತಿದ್ದಾರೆ. ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಭಯೋತ್ಪಾದನಾ ಚಟುವಟಿಕೆಗಳಿಗೂ ಪಾಕಸ್ಥಾನವೇ ಕಾರಣ ಎಂದು ಮೋದಿ ಕಡ್ಡಿ ಮುರಿದ ಹಾಗೆ ಹೇಳುತ್ತಿದ್ದರು. ಪಾಕಿಸ್ಥಾನದ ಉಗ್ರರನ್ನು ಬೆಳೆಸುತ್ತಿರುವ ಸತ್ಯವನ್ನು ಜಾಗತಿಕ ನೆಲೆಯಲ್ಲಿ ಬೆತ್ತಲುಗೊಳಿಸಿದ್ದರು ಮೋದಿ.

ಮೋದಿ ಹೇಳುತ್ತಿದ್ದ ಪಾಕಿಸ್ಥಾನದ ಪಾಪದ ಕಥೆಗಳನ್ನು ಕಿವಿ ಕೊಟ್ಟು ಕೇಳುತ್ತಿತ್ತು ಜಗತ್ತು. ಹೀಗಾಗಿಯೇ ಜಗತ್ತಿನ ಎಲ್ಲಾ ರಾಷ್ಟ್ರಗಳೂ ಪಾಕಿಸ್ಥಾನದ ವಿರುದ್ಧ ತಿರುಗಿ ಬೀಳುತ್ತೆ. ಎಷ್ಟೆಂದರೆ, ಪಾಕಿಸ್ಥಾನದ ಮಿತ್ರರಾಷ್ಟ್ರವಾಗಿದ್ದ ಜಗತ್ತಿನ ದೊಡ್ಡಣ್ಣ ಅಮೇರಿಕಾ ಕೂಡಾ ಪಾಕಿಸ್ಥಾನದ ಕ್ರೂರತೆಯನ್ನು ಪ್ರಶ್ನಿಸಿ “ನಾವು ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ಕೈಜೋಡಿಸುತ್ತೇವೆ” ಎಂದು ಮಾರ್ಮಿಕವಾಗಿ ಹೇಳಿತ್ತು. ಇದು ಪಾಕಿಸ್ಥಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಭಾರತಕ್ಕೆ ಇಟ್ಟಿತ್ತು ಗುನ್ನಾ-ಸೋತು ಹಿಂದೆ ಸರಿದಿತ್ತು ಚೀನಾ..!!!

ಕೆಲ ತಿಂಗಳುಗಳ ಹಿಂದೆ ಇಂಡೋ ಚೀನಾ ಗಡಿಯಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಿಸಿತ್ತು. ಚೀನಾ ಭಾರತದ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿತ್ತು. ಡೋಕ್ಲಾಂ ನಮ್ಮದು ಎಂದು ಖ್ಯಾತೆ ತೆಗೆದಿತ್ತು. ಈ ಒಂದು ಜಗಳವನ್ನು ಚೀನಾ ಹಾಗೂ ಭಾರತಕ್ಕಿಂತ ಪಾಕಿಸ್ಥಾನವೇ ಹೆಎಚ್ಚು ಕುತೂಹಲದಿಂದ ನೋಡುತ್ತಿತ್ತು.

ಭಾರತ ಮತ್ತು ಚೀನಾ ಯುದ್ಧ ನಡೆದರೆ ತಾನು ಮಧ್ಯದಲ್ಲಿ ತೂರಿ ಅದರ ಲಾಭವನ್ನು ಪಡೆಯಬಹುದು ಎಂಬ ಅಂದಾಜನ್ನು ಹಾಕಿತ್ತು. ಆದರೆ ಕೇಂದ್ರದಲ್ಲಿರುವುದು ಮೋದಿ ಸರಕಾರ ಎಂಬುವುದು ಪಾಕ್‍ಗೆ ಮತ್ತೆ ಮನವರಿಕೆ ಆಗಿ ಹೋಗಿತ್ತು. ರಾಜತಾಂತ್ರಿಕ ನಡೆಯಿಂದ ಯುದ್ದನೇ ಮಾಡದೆ ಚೀನಾ ಸೇನೆ ಹಿಮ್ಮೆಟ್ಟಿಸಿದ್ದರು ಪ್ರಧಾನಿ ಮೋದಿ. ಇದನ್ನು ಕಂಡು ಪಾಕಿಸ್ಥಾನ ತಲೆ ಚಚ್ಚುವಂತೆ ಕಿರುಚಿಕೊಂಡಿತ್ತು. ಇದ್ದ ಒಂದು ಅಸ್ತ್ರವೂ ಮೋದಿ ಪಾಲಾಯಿತಲ್ಲಾ ಎಂಬ ಚಿಂತೆಯಿಂದ ಮುಳುಗಿಬಿಟ್ಟಿತ್ತು.


ಇದಕ್ಕೆಲ್ಲಾ ಕಾರಣ ಮೋದಿ ಎಂಬುವುದು ನಗ್ನ ಸತ್ಯ. ಮೊದಲು ಮೋದಿಯ ಶಕ್ತಿಯನ್ನು ಕುಂದಿಸಬೇಕು ಎಂಬ ಹಠಕ್ಕೆ ಬಿದ್ದ ಪಾಕಿಸ್ಥಾನ ಅದೇನೇನೋ ಮಾಡಿದರೂ ಜಗತ್ತು ಕೇಳಲೇ ಇಲ್ಲ. ಜಗತ್ತಿನ ಮುಂದೆ ಮೋದಿಯನ್ನು ತಲೆ ತಗ್ಗಿಸುವಂತೆ ಮಾಡಲು ನಡೆಸಿದ್ದ ಎಲ್ಲಾ ಪ್ರಯತ್ನಗಳೂ ಠುಸ್ ಪಟಾಕಿಯಾಗಿ ಹೋಗಿತ್ತು. ಜಗತ್ತು ಅದನ್ನು ಕೇಳಲೇ ಇಲ್ಲ. ಮೋದಿಗೆ ಜೈ ಅಂದು ಬಿಟ್ಟಿತ್ತು.

ಹೀಗಾಗಿಯೇ ತಮ್ಮ ಸ್ವಂತ ನೆಲದಲ್ಲಿ ಮೋದಿಯನ್ನು ಸೋಲಿಸಿ ಮೋದಿಯ ತಾಕತ್ತನ್ನು ಕಡಿಮೆ ಮಾಡಬೇಕೆಂಬ ಹಠಕ್ಕೆ ಬಿದ್ದಿದೆ ಪಾಕಿಸ್ಥಾನ. ಭಾರತದಲ್ಲಿಯೇ ಮೋದಿಯ ಶಕ್ತಿ ಕುಂದಿದರೆ ಜಗತ್ತಿನಲ್ಲಿ ಅವರ ಮಾತನ್ನು ಕೇಳೋರಿಲ್ಲಾ ಅನ್ನುವ ಮೂಢ ನಂಬಿಕೆ ಪಾಕಿಸ್ಥಾನದ್ದು.

ಇದರ ಒಂದು ಅಸ್ತ್ರವೇ ಗುಜರಾತ್ ಚುನಾಚಣೆ. ಗುಜರಾತ್ ಚುನಾವಣೆಗೆ ಪಾಕಿಸ್ಥಾನ ಬಹಿರಂಗವಾಗಿಯೇ ಭಾರತದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ. ಗುಜರಾತ್‍ನಲ್ಲಿ ಮೋದಿಯನ್ನು ಸೋಲಿಸಿ ಎಂದು ಘೋಷಿಸಿ ಬಿಟ್ಟಿದೆ. ತನ್ನ ತವರು ರಾಜ್ಯದಲ್ಲೇ ಮೋದಿ ಸೋತರೆ ಜಾಗತಿಕ ಮಟ್ಟದಲ್ಲಿ ಮೋದಿ ತಲೆ ತಗ್ಗಿಸಿದಂತೆಯೇ ಎಂಬುವುದು ಪಾಕ್ ಲೆಕ್ಕಾಚಾರ. ಹೀಗಾಗಿಯೇ ಪಾಕಿಸ್ಥಾನದ ಮಾಜಿ ಡಿಜಿ. ಅರ್ಷಾದ್ ರಫೀಕ್ ಮೋದಿಯನ್ನು ಸೋಲಿಸುವಂತೆ ಕಾಂಗ್ರೆಸ್‍ಗೆ ಕರೆ ನೀಡಿದ್ದಾನೆ.

source:https://m.facebook.com/story.php?story_fbid=1673163999406559&id=633444083378561

-ಪವಿತ್ರ

Tags

Related Articles

Close