ಪ್ರಚಲಿತ

ಪಾಕಿಸ್ತಾನಿ ಉಗ್ರರು ಭಾರತದ ಮೇಲೆ ಎಷ್ಟೇ ದಾಳಿ ನಡೆಸಿದರೂ ಪರವಾಗಿಲ್ಲ, ನೀವು ಮಾತ್ರ ಸರ್ಜಿಕಲ್ ದಾಳಿ ನಡೆಸಬೇಡಿ: ಸೈನಿಕರಿಗೆ ಯುಪಿಎ ಸರಕಾರ….

ಯುಪಿಎ ಸರಕಾರ ದೇಶದ ಭದ್ರತೆಯ ಬಗ್ಗೆ ಎಷ್ಟೊಂದು ನಿರ್ಲಕ್ಷ್ಯವಹಿಸಿತ್ತು ಎನ್ನುವುದನ್ನು ವಾಯುಪಡೆಯ ನಿವೃತ್ತ ಮುಖ್ಯಸ್ಥ ಫಾಲಿ ಹೋಮಿ ಮೇಜರ್ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್‍ಗೆ ಇದು ಖಂಡಿತಾ ಕಪ್ಪುಚುಕ್ಕೆ. ಒಂದು ದೇಶದ ಭದ್ರತೆಯ ವಿಷಯದಲ್ಲಿ ಸೈನಿಕರನ್ನೇ ಕಟ್ಟಿಹಾಕಿ ದ್ರೋಹ ಬಗೆದ ಕಾಂಗ್ರೆಸ್‍ಗೆ ಒಂದು ವೇಳೆ ದೇಶವನ್ನು ಮತ್ತೊಮ್ಮೆ ಕೊಟ್ಟರೆ ಏನಾಗಬಹುದು ಕೊಂಚ ಆಲೋಚಿಸಿ.

ಇದನ್ನೆಲ್ಲಾ ಬಿಟ್ಟು ದೇಶದ ಜನತೆಯ ಮುಂದೆ ಸುಳ್ಳು ಹೇಳಿ ಜನರ ಮುಂದೆ ಶಬಾಷ್‍ಗಿರಿ ಪಡೆದುಕೊಳ್ಳಲು ಯತ್ನಿಸುತ್ತಿರುವುದನ್ನು ನೋಡಿದಾಗ ಅಯ್ಯೋ ಎನಿಸುತ್ತದೆ. ನೀವೆಷ್ಟು ಸುಳ್ಳು ಹೇಳಿದರೂ ಎಲ್ಲವನ್ನೂ ನಂಬಿಕೊಂಡು ಬರಲು ಜನತೆಯನ್ನು ಕಾಂಗ್ರೆಸಿಗರು ಮೂರ್ಖರೆಂದು ತಿಳಿದುಕೊಂಡಿದ್ದಾರೆಯೇ? ಕಣ್ಣುಮುಚ್ಚಿ ಎಲ್ಲವನ್ನೂ ನಂಬುವ ಸ್ಥಿತಿ ಎಂದೋ ಹೋಗಿದೆ ಎನ್ನುವುದನ್ನು ಈ ಕಾಂಗ್ರೆಸಿಗರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

ಯಾಕೆಂದರೆ ಒಂಭತ್ತು ವರ್ಷಗಳ ಹಿಂದೆ ಮುಂಬೈ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ (ಪಿಒಕೆ) ಉಗ್ರರ ತರಬೇತಿ ಶಿಬಿರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಸೇಡು ತೀರಿಸಿಕೊಳ್ಳಲು ಭಾರತೀಯ ವಾಯುಪಡೆ ನಿರ್ಧರಿಸಿತ್ತು. ಆದರೆ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಅದಕ್ಕೆ ಅನುಮತಿ ನೀಡಿರಲಿಲ್ಲ ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಫಾಲಿ ಹೋಮಿ ಮೇಜರ್ ತಿಳಿಸಿ ಕಾಂಗ್ರೆಸ್‍ನ ಅಸಲಿ ಮುಖವನ್ನು ಬಯಲು ಮಾಡಿದ್ದಾರೆ.

2008ರಲ್ಲಿ ಮುಂಬೈಯ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದ ಪಾಕಿಸ್ತಾನದ ಉಗ್ರರು 166 ಜನರನ್ನು ಹತ್ಯೆ ಮಾಡಿದ್ದರು. ಆ ಬಳಿಕ ಕಾಂಗ್ರೆಸ್ ಯಾವ ರೀತಿ ನಡೆದುಕೊಂಡಿತ್ತು ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಅಷ್ಟೊಂದು ದೊಡ್ಡ ಮಟ್ಟದ ದಾಳಿ ನಡೆದಿದ್ದರೂ, ಕೈಗೆ ಬಳೆ ತೊಟ್ಟುಕೊಂಡಂತೆ ವರ್ತಿಸಿ ಸೋನಿಯಾ ಗಾಂಧಿಯ ತಾಳಕ್ಕೆ ತಕ್ಕಂತೆ ಕುಣಿದ ಅಂದಿನ ಪ್ರಧಾನಿ ಪಾಕಿಸ್ತಾನಿ ಉಗ್ರರ ಮೇಲೆ ದಾಳಿ ನಡೆಸದಂತೆ ನೋಡಿಕೊಂಡು ಉಗ್ರರ ಮೇಲೆ ಕೃಪಾದೃಷ್ಟಿ ಬೀರಿದ್ದರು.

ಇವರ ಮೃದು ಧೋರಣೆಯಿಂದ ಆ ಬಳಿಕವೂ ದೇಶದ ಮೇಲೆ ಭಯೋತ್ಪಾದಕರ ದಾಳಿ ನಡೆಯುತ್ತಾ ಅನೇಕ ಮಂದಿ ಅಮಾಯಕರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಒಂದು ವೇಳೆ ಭಾರತೀಯ ಸೈನಿಕರಿಗೆ ಪರಮಾಧಿಕಾರ ಕೊಟ್ಟಿದ್ದೇ ಆಗಿದ್ದರೆ ಜಿಹಾದಿ ಭಯೋತ್ಪಾದಕರು ಎಂದೂ ನಿರ್ಣಾಮಗೊಳ್ಳುತ್ತಿದ್ದರು.

ವಾಯುಪಡೆಯ ನಿವೃತ್ತ ಮುಖ್ಯಸ್ಥ ಫಾಲಿ ಹೋಮಿ ಮೇಜರ್ ಅವರು ತಿಳಿಸಿದ ಸ್ಫೋಟಕ ಸತ್ಯ ಕಾಂಗ್ರೆಸ್ ಸರಕಾರಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದು, ಯುಪಿಎ ಸರಕಾರ ಹೇಳಿದ್ದ ಸುಳ್ಳೊಂದು ಬಟಾಬಯಲಾಗಿದೆ. ಅಷ್ಟಕ್ಕೂ ಮೇಜರ್ ಹೇಳಿದ್ದೇನು ಗೊತ್ತೇ?

ಮುಂಬೈ ಮೇಲಿನ ದಾಳಿಯ ಎರಡು ದಿನಗಳ ಬಳಿಕ ಮೂರು ಭದ್ರತಾ ಪಡೆಗಳ ಮುಖ್ಯಸ್ಥರು ಅಂದಿನ ಪ್ರಧಾನಿ ಮನ ಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದೆವು. ರಕ್ಷಣಾ ಸಚಿವ ಎ.ಕೆ. ಆಂಟನಿ ಹಾಗೂ ರಕ್ಷಣಾ ಕಾರ್ಯದರ್ಶಿಯೂ ಸಭೆಯಲ್ಲಿದ್ದರು. ಇದಕ್ಕೂ ಮುನ್ನ ಸರ್ಕಾರಕ್ಕೆ ಏನೆಲ್ಲ ಸಲಹೆ ನೀಡಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಮೂರೂ ಸೇನಾ ಪಡೆಗಳ ಮುಖ್ಯಸ್ಥರು ರ್ಚಚಿಸಿದ್ದೆವು. ಸಭೆಯಲ್ಲಿ ಸರ್ಜಿಕಲ್ ದಾಳಿ ನಡೆಸುವ ಬಗ್ಗೆ ಪ್ರಸ್ತಾಪಿಸಿದ್ದು, ಅದಕ್ಕೆ ಅಗತ್ಯವಾದ ಶಸ್ತ್ರಾಸ್ತ್ರ ಸೇರಿದಂತೆ ಎಲ್ಲ ಸೌಲಭ್ಯ ವಾಯುಪಡೆಯ ಬಳಿ ಇದೆ ಎಂದು ಸರ್ಕಾರಕ್ಕೆ ವಿವರಿಸಲಾಗಿತ್ತು. ಆದರೆ, ಸರ್ಕಾರ ಮಾತ್ರ ಸೈನಿಕರಿಗೆ ಸರ್ಜಿಕಲ್ ದಾಳಿ ನಡೆಸದಂತೆ ತಡೆದಿದ್ದರು..

ಕಾಂಗ್ರೆಸಿಗರೆ ನಿಮಗೆ ನಾಚಿಕೆಯಾಗುವುದಿಲ್ಲವೇ? ಉಗ್ರರ ಮೇಲಿನ ಪ್ರೀತಿಯಿಂದ ಒಂದು ದೇಶದ ಹಿತಾಸಕ್ತಿಯನ್ನೇ ಬಲಿಕೊಟ್ಟುಬಿಟ್ಟರಲ್ಲಾ? ನಿಮ್ಮ ಮುಸ್ಲಿಂ ಪ್ರೀತಿ ವರ್ಕೌಟ್ ಆಯ್ತಾ? ಇಲ್ಲವಾದರೆ ನೀವಿಂದು ಈ ಮಟ್ಟದಲ್ಲಿ ಹೀನಾಯವಾಗಿ ಸೋಲುತ್ತಿದ್ದಿರೇ?

ಖಾಸಗಿ ಚಾನೆಲ್ ಒಂದರ ಸಂದರ್ಶನವೊಂದರಲ್ಲಿ ಸ್ಫೋಟಕ ಸತ್ಯವನ್ನು ಹೊರಹಾಕಿದ ವಾಯುಪಡೆಯ ನಿವೃತ್ತ ಮುಖ್ಯಸ್ಥ ಫಾಲಿ ಹೋಮಿ ಮೇಜರ್ ಆ ಸಂದರ್ಭದಲ್ಲಿ ವಾಯುಪಡೆ ನಡೆಸಬಹುದಾಗಿದ್ದ ಸಣ್ಣ ಕಾರ್ಯತಂತ್ರಕ್ಕೂ ಭಾರಿ ಪ್ರಾಮುಖ್ಯತೆ ಬರುವ ಸಾಧ್ಯತೆ ಇತ್ತು. ಸರ್ಜಿಕಲ್ ಸ್ಟ್ರೈಕ್‍ನಂಥ ಅತ್ಯುತ್ತಮ ಅವಕಾಶವನ್ನು ನಾವು ಆ ಸಂದರ್ಭದಲ್ಲಿ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಅವರು ಹೇಳಿದ್ದಾರೆ.

ಉಗ್ರರ ಮೇಲಿನ ಪ್ರೀತಿಯೋ ಅಥವಾ ಷಂಡತನವೋ ಉತ್ತರಿಸಿ ಕಾಂಗ್ರೆಸಿಗರೇ?

ನರೇಂದ್ರ ಮೋದಿ ಸರಕಾರ ನಡೆಸಿದ ಸರ್ಜಿಕಲ್ ದಾಳಿಯ ಬಗ್ಗೆ ಟೀಕೆ ಮಾಡುತ್ತಿರುವ ಕಾಂಗ್ರೆಸಿಗರೇ ನಿಮ್ಮ ಅವಧಿಯಲ್ಲಿ ಸರ್ಜಿಕಲ್ ದಾಳಿ ನಡೆಸಲು ಅವಕಾಶವಿದ್ದರೂ ಯಾಕೆ ಉಗ್ರರ ಮೇಲೆ ದಾಳಿ ನಡೆಸಲಿಲ್ಲ? ನಿಮಗೆ ಉಗ್ರರ ಮೇಲಿನ ಪ್ರೀತಿಯೇ ಅಥವಾ ಷಂಡತನವೋ? ನಿಮಗೆ ಪಾಕಿಸ್ತಾನಿಗಳ ಮೇಲೆ ದಾಳಿ ನಡೆಸಲು ಧೈರ್ಯವಿರಲಿಲ್ಲವೇ? ಪರಿಣಾಮಕಾರಿಯಾಗಿ ದಾಳಿ ನಡೆಸಿ ಪಾಕಿಸ್ತಾನಕ್ಕೆ ಬಿಸಿಹುಟ್ಟಿಸುವ ಬದಲು ಪಾಕ್ ಉಗ್ರರಿಗೆ ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸಲು ಅವಕಾಶ ಕೊಟ್ಟಿರಲ್ಲವೇ ಕಾಂಗ್ರೆಸಿಗರೆ ಇದಕ್ಕಿಂತ ದೊಡ್ಡ ದ್ರೋಹ ಇನ್ನೊಂದಿದೆಯೇ? ಇಷ್ಟೆಲ್ಲಾ ಆದರೂ ಯಾವ ಮುಖಹೊತ್ತುಕೊಂಡು ಜನರ ಮುಂದೆ ಓಟು ಕೇಳುತ್ತೀರಿ ಸ್ವಾಮಿ? ಇಷ್ಟಾದರೂ ನಿಮಗೆ ಓಟು ಕೊಡಲು ಜನರೇನು ಮೂರ್ಖರೇ? ನೀವು ದೇಶದ ಜನರಿಗೆ ಮೋಸ ಮಾಡಿದ್ದು ಸಾಕು. ಅದಕ್ಕಾಗಿ ನಿಮ್ಮನ್ನು ಪರ್ಮನೆಂಟಾಗಿ ಮನೆಗೆ ಕಳಿಸುವ ಕೆಲಸವನ್ನು ಜನರು ಮಾಡುತ್ತಾರೆ.

ಸರ್ಜಿಕಲ್ ದಾಳಿ ನಡೆಸಿದ್ದೇವೆ ಎಂದು ಸುಳ್ಳು ಹೇಳಿದ್ದು ಯಾಕೆ ಕಾಂಗ್ರೆಸಿಗರೇ?

ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದಿದೆಯೇ? ಉರಿ ಸೇನಾ ನೆಲೆಯ ಮೇಲಿನ ದಾಳಿಯ ನಂತರ ನರೇಂದ್ರ ಮೋದಿ ಸರಕಾರದ ನಿರ್ದೇಶನದಂತೆ ಭಾರತೀಯ ಸೈನಿಕರು ಪ್ರತ್ಯುತ್ತರವಾಗಿ ಭಾರತ ಉಗ್ರರ ಸೇನಾ ನೆಲೆಗಳನ್ನು ಗುರಿಯಾಗಿಸಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ನೂರಾರು ಮಂದಿ ಉಗ್ರರನ್ನು ಕೊಂದು ಹಾಕಿದ್ದರು.

ಯುಪಿಎ ಸರಕಾರದ ಅವಧಿಯಲ್ಲಿ ಭಾರತದ ಮೇಲೆ ಎಷ್ಟೇ ದಾಳಿ ನಡೆಸಿದರೂ ಏನನ್ನೂ ಮಾಡದೆ ಸುಮ್ಮನಿದ್ದರು. ಆದರೆ ನರೇಂದ್ರ ಮೋದಿ ಸರಕಾರ ನಡೆಸಿದ ಸರ್ಜಿಕಲ್ ದಾಳಿಯಿಂದ ಉಗ್ರರು ಹಾಗೂ ಪಾಕಿಸ್ತಾನಕ್ಕೆ ಶಾಕ್‍ಗೆ ಒಳಗಾಗಿತ್ತು. ಆದರೆ ಈ ವೇಳೆ ಬಡಾಯಿ ಕೊಚ್ಚಿದ್ದ ಕಾಂಗ್ರೆಸ್ ತಮ್ಮ ಕಾಲದಲ್ಲೂ ಸರ್ಜಿಕಲ್ ದಾಳಿ ನಡೆಸಲಾಗಿತ್ತು.

ಆದರೆ ಅದನ್ನು ಬಹಿರಂಗ ಗೊಳಿಸಿರಲಿಲ್ಲ. ಆದರೆ, ಮೋದಿ ಸರ್ಕಾರ ಚುನಾವಣಾ ಯಶಸ್ಸಿಗೆ ಸರ್ಜಿಕಲ್ ದಾಳಿಯನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿತ್ತು. ಆದರೆ ಈ ರೀತಿ ದಾಳಿ ನಡೆದಿದ್ದೇ ಇಲ್ಲ ಎಂದು ನಿವೃತ್ತ ಮುಖ್ಯಸ್ಥ ಫಾಲಿ ಹೋಮಿ ಮೇಜರ್ ಸತ್ಯವನ್ನು ಬಟಾಬಯಲುಗೊಳಿಸಿರುವುದರಿಂದ ಕಾಂಗ್ರೆಸ್‍ನ ಅಸಲಿ ಮುಖವನ್ನು ಬಯಲು ಮಾಡಿದ್ದಾರೆ

ಸರ್ಜಿಕಲ್ ದಾಳಿ ನಡೆಸಿದ್ದಕ್ಕೆ ಸಾಕ್ಷ್ಯವಿದೆಯೇ ಎಂದು ಕೇಳಿದ್ದೀರಲ್ಲಾ ಕಾಂಗ್ರೆಸಿಗರೇ ನಿಮಗೆ ನಾಚಿಕೆಯಾಗುವುದಿಲ್ಲವೇ? ಸೈನಿಕರೇನು ಪಾಕಿಸ್ತಾನಕ್ಕೆ ಚಿತ್ರೀಕರಣಕ್ಕೆ ಹೋಗಿದ್ದರೆಂದು ಭಾವಿಸಿದ್ದೀರಾ? ನೀವೆಂಥವರೆಂದು ನಿಮ್ಮ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರೇ ಬಯಲು ಮಾಡಿದ್ದಾರೆ.

ಇತ್ತ ಭಾರತದ ಯೋಧರು ದೋಕ್ಲಾಮ್‍ನಲ್ಲಿ ಚೀನಾ ಯೋಧರ ಜೊತೆ ದೃಷ್ಠಿಯುದ್ಧ ನಡೆಸುತ್ತಿದ್ದಾಗ ರಾಹುಲ್ ಗಾಂಧಿ ಚೀನಾಕ್ಕೆ ಹೋಗಿ ಏನು ಮಾಡಿದ್ದಾರೆ ಎಂದು ಬಟಾಬಯಲಾಗಿದೆ. ಅಲ್ಲೇನು ಗುಡ್ಡ ಅಗೆದಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ತಾಖತ್ ಇದ್ದರೆ ಅದನ್ನು ಬಯಲುಗೊಳಿಸಿ.

ಕಾಂಗ್ರೆಸಿಗರೇ ನೀವು ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ಸುಳ್ಳುಹೇಳುವ ಕೆಲಸವನ್ನು ಖಂಡಿತಾ ಮಾಡಬೇಡಿ. ನಿಮ್ಮ ಸುಳ್ಳನ್ನೇ ಸತ್ಯವೆಂದು ನಂಬುವ ಕಾಲ ಎಂದೋ ಹೋಗಿದೆ ಎನ್ನುವುದನ್ನು ಈಗಲಾದರೂ ಅರ್ಥ ಮಾಡಿಕೊಳ್ಳಿ. ಜನತೆಯ ಮುಂದೆ ಸಣ್ಣವರಾಗುವ ಕೆಲಸಕ್ಕೆ ಕೈಹಾಕಬೇಡಿ. ಎಚ್ಚರ..

source: https://goo.gl/jttusV

ಚೇಕಿತಾನ

Related Articles

Close