ಅಂಕಣಇತಿಹಾಸ

“ಪಾಕಿಸ್ತಾನ ಮತ್ತು ಹಿಂದುಸ್ಥಾನ” ಎಂಬ ಮಾತು ಬರೀ ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾಯಿತು ಯಾಕೆ? ಭಾರತ ಹಿಂದುಸ್ಥಾನವಾಗದೆ ಇಂಡಿಯ ಆಗಿ ಬದಲಾಗುವ ಹಿಂದಿರುವ ಗೇಮ್ ಪ್ಲಾನ್ ಏನು ಗೊತ್ತಾ?!

ಅದು 1906, ಭಾರತದಲ್ಲಿರೋ ಮುಸಲ್ಮಾನರು ಒಂದಾಗಬೇಕು ಎಂಬ ಕಾರಣಕ್ಕೆ ಮುಸ್ಲಿಂ ಲೀಗ್ ಎನ್ನುವ ಮುಸ್ಲಿಂ ಪಕ್ಷದ ಉದಯವಾಯಿತು.

ಯಾಕೆ ಮುಸಲ್ಮಾನರು ಒಂದಾಗಬೇಕು ಅನ್ನೋದು ಮಾತ್ರ ಭಾರತಿಯರಿಗೆ ಅರ್ಥವಾಗಲಿಲ್ಲ, ಆದರೆ ಮುಸಲ್ಮಾನರು ಯಾಕೆ ಒಗ್ಗಟ್ಟಾಗಬೇಕು ಎನ್ನುವುದು
ಮುಸಲ್ಮಾನರಿಗೆ ಮಾತ್ರ ಚೆನ್ನಾಗೇ ತಿಳಿದಿತ್ತು.

ಯಾಕೆ ಅಂತೀರಾ? ಬರೀ ಭಾರತದಲ್ಲಷ್ಟೇ ಮುಸಲ್ಮಾನರು ಒಗ್ಗಟ್ಟಾಗಿರೋಕೆ ಪ್ರಯತ್ನಪಡಲ್ಲ, ಇಡೀ ಜಗತ್ತಿನ ಯಾವುದೇ ರಾಷ್ಟ್ರದಲ್ಲಿದ್ದರೂ ಮುಸಲ್ಮಾನರು
ಒಗ್ಗಟ್ಟಾಗಿರಬೇಕು, ತಮ್ಮ ಜನಾಂಗದ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು, ಇಸ್ಲಾಮೇತರ(Non Muslims) ರನ್ನ ಕೊಲ್ಲಬೇಕು ಅಥವ ಅವರನ್ನೂ ಇಸ್ಲಾಂಗೆ
ಮತಾಂತರಿಸಬೇಕು, ಇಡೀ ಜಗತ್ತನ್ನು ಇಸ್ಲಾಮೀಕರಣಗೊಳಿಸಬೇಕು ಅನ್ನೋಕೆ ಅವರು ಈಗಿನಿಂದಲ್ಲ ಅದು ಇಸ್ಲಾಂ ಹುಟ್ಟಿನ 7 ನೆ ಶತಮಾದಿಂದಲೂ ಜಗತ್ತಿನಲ್ಲಿ ನಡೆಸಿಕೊಂಡು ಬಂದ ರಕ್ತಸಿಕ್ತ ಅಧ್ಯಾಯಾನೇ.

ಅದಿರಲಿ, ಮುಸ್ಲಿಂ ಲೀಗ್ ಎಂಬ ಮುಸ್ಲಿಂ ಪಕ್ಷ ಭಾರತದಲ್ಲಿ ಜನ್ಮತಾಳಿದ ನಂತರ ಮೊದಮೊದಲು ತಾವು ಬ್ರಿಟಿಷರ ವಿರುದ್ಧವಿದೀವಿ ಅಂತ ಹೇಳಿಕೊಂಡು ನಂತರ
ಭಾರತದಲ್ಲೇ ಇರೋ ಬಹುಸಂಖ್ಯಾತ ಹಿಂದುಗಳ ಬುಡಕ್ಕೆ ಕೊಡಲಿ ಇಡೋಕೆ ಶುರು ಮಾಡಿದರು.

ಇದಕ್ಕೆ ಕಾರಣ ಆಗ ಕಾಂಗ್ರೆಸ್ ಎಂಬ ಪಕ್ಷ ಅವರ ಕಣ್ಣಿಗೆ “ಹಿಂದೂ ಪಕ್ಷ”ವಾಗಿ ಕಂಡಿದ್ದು , ಕಾಂಗ್ರೆಸ್ ಈ ದೇಶದ ಚುಕ್ಕಾಣಿ ಹಿಡಿದರೆ ಅವರು ಮುಸಲ್ಮಾನರನ್ನ
ಬೆಳೆಯೋಕೆ ಬಿಡಲ್ಲ, ಭಾರತವನ್ನ ಇಸ್ಲಾಮೀಕರಣ ಮಾಡುವ ನಮ್ಮ ಪೂರ್ವಜರ ಕನಸು ಕನಸಾಗಿಯೇ ಉಳಿಯುತ್ತೆಯಂತ ಅವರ ತಳಮಳವಾಗಿತ್ತು.

ಮುಸ್ಲಿಂ ಲೀಗ್ ಪಕ್ಷ ಮೊದ ಮೊದಲು ಕಾಂಗ್ರೆಸ್ ಜೊತೆಯೇ ಗುರುತಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿತು, ಆದರೆ ನಂತರದ ದಿನಗಳಲ್ಲಿ ಕಾಂಗ್ರೆಸ್ ಜೊತೆಯೇ ಇದ್ದು ನಾವು ಹೋರಾಡಿ ಭಾರತವನ್ನ ಬ್ರಿಟಿಷ್ ಮುಕ್ತ ಮಾಡಿದರೆ ಮತ್ತೆ ಹಿಂದುಗಳು ತಮ್ಮ ಸಾರ್ವಭೌಮತ್ವ ಮೆರೆಯುತ್ತಾರೆ ಎಂಬ ಭಯ ಮುಸ್ಲಿಂ ಲೀಗ್ ಪಕ್ಷಕ್ಕೆ ಕಾಡಲಾರಂಭಿಸಿತ್ತು.

ಇದರ ಮಧ್ಯೆ ಬಾಲಗಂಗಾಧರನಾಥ್ ತಿಲಕ್, ಲಾಲಾ ಲಜಪತರಾಯ್, ಬಿಪಿನ್ ಚಂದ್ರ ಪಾಲ್ ರಂಥವರು ಬ್ರಿಟಿಷರ ವಿರುದ್ಧ ಕಾಂಗ್ರೆಸ್ ನಲ್ಲಿದ್ದು
ರಣಕಹಳೆ ಮೊಳಗಿಸಿ ಭಾರತೀಯರನ್ನ ಬ್ರಿಟಿಷರ ವಿರುದ್ಧ ಜಾಗೃತಗೊಳಿಸುತ್ತಿದ್ದರು.

ಇಂಥ ಕ್ರಾಂತಿಕಾರಿಗಳ ಪ್ರಭಾವಕ್ಕೊಳಗಾಗಿ ಲಕ್ಷಾಂತರ ಯುವಕರೂ ಇವರ ಜೊತೆಗೂಡಿ ಭಾರತ ಸ್ವಾತಂತ್ರ್ಯಕ್ಕಾಗಿ ಪಣ ತೊಟ್ಟು ನಿಂತಿದ್ದರು.

ಆದರೆ ಯಾವಾಗ 1916 ರಲ್ಲಿ ಆಫ್ರಿಕಾದಿಂದ ಗಾಂಧಿ ಭಾರತಕ್ಕೆ ಬಂದು ತನ್ನ ಸೋ ಕಾಲ್ಡ್ “ಅಹಿಂಸಾತ್ಮಕ ಮಾರ್ಗ” ಹಿಡಿದರೋ ಆಗ ಕ್ರಾಂತಿಕಾರಿಗಳಾಗಿದ್ದ “ಲಾಲ ಬಾಲ ಪಾಲ” ರ ಪ್ರಭಾವ ತಮ್ಮ ವಿರುದ್ಧ ಕುಗ್ಗಿಸಲು ಬ್ರಿಟಿಷರು ಗಾಂಧಿಯ ಅಹಿಂಸಾತ್ಮಕ ಮಾರ್ಗಕ್ಕೆ ಸೊಪ್ಪು ಹಾಕಿದ ರೀತಿಯಲ್ಲಿ ಗಾಂಧಿಯ ಮಾತುಗಳಿಗೆ ಹೋರಾಟಗಳಿಗೆ ಮನ್ನಣೆ ನೀಡುತ್ತ ಹೋದರು. ಇದನ್ನ ಗಾಂಧಿ ತನ್ನ ಅಹಿಂಸಾತ್ಮಕ ಹೋರಾಟದ ಫಲ, ನಾವು ಅಹಿಂಸೆಯ ಮೂಲಕವೇ ಸ್ವಾತಂತ್ರ್ಯ ಪಡೆದುಕೊಳ್ಳಬೇಕೇ ಹೊರತು ಹಿಂಸೆಯ ಮಾರ್ಗ ಹಿಡಿಯಬಾರದೆಂದು ಉದ್ರಿ ಬೋಧನೆ ನೀಡಿ ಭಾರತೀಯರನ್ನ ಷಂಡರನ್ನಾಗಿ ಮಾಡಿ 1920-25 ರಲ್ಲಿ ಸಿಗುವ ಸ್ವಾತಂತ್ರ್ಯವನ್ನ 1947 ರ ವರೆಗೆ ನೂಕುವ ಹಾಗೆ ಮಾಡಿದರು.

ಈತನ ಮಾತುಗಳನ್ನು ಕೇಳಲಾರಂಭಿಸಿದ ಜನ ಕ್ರಾಂತಿಕಾರಿಗಳಿಗೆ ಬೆಂಬಲಿಸದೆ ಅಹಿಂಸೆಯ ಮಾರ್ಗ ಹಿಡಿದರು.

ಹಿಂದುತ್ವದ, ರಾಷ್ಟ್ರೀಯತೆಯ ಪ್ರತಿಪಾದಕರಾಗಿದ್ದ ಬಾಲಗಂಗಾಧರನಾಥ ತಿಲಕರಂಥವರ ಶಿಷ್ಯನಾಗಿದ್ದ ಮೊಹಮ್ಮದ್ ಅಲಿ ಜಿನ್ನಾ ತಾನೊಬ್ಬ ಭಾರತೀಯ ಎಂದು ಮೊದಮೊದಲು ಎದೆ ತಟ್ಟಿ ಹೇಳಿಕೊಳ್ಳುತ್ತಿದ್ದ, ಆದರೆ ಯಾವಾಗ ಗಾಂಧಿಯ ಅಹಿಂಸಾತ್ಮಕ “ಹೋರಾಟ”, “ಪ್ರಭಾವ” ಜಾಸ್ತಿಯಾಗಲು ಶುರುವಾಯಿತೋ, ಯಾವಾಗ ಗಾಂಧಿ ಚಿನ್ನದ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ನೆಹರೂವನ್ನ ಅಟ್ಟಕ್ಕೇರಿಸಲು ಪ್ರಯತ್ನಪಟ್ಟನೋ ಆಗ ಮೊಹಮ್ಮದ್ ಅಲಿ ಜಿನ್ನಾಗೆ “ತಾನು ಕೂಡ ಬ್ಯಾರಿಸ್ಟರ್ ಪದವಿ ಮುಗಿಸಿದೀನಿ, ತಾನೂ ಲಂಡನ್ನಿನಲ್ಲಿದ್ದು ಬಂದಿದೀನಿ, ನೆಹರುಗೆ ಇರಬೇಕಾದ ಎಲ್ಲ ಸಾಮರ್ಥ್ಯವೂ ತನ್ನಲ್ಲಿದೆ, ನಾನ್ಯಾಕೆ ರಾಜಕೀಯದಲ್ಲಿ ಬೆಳೆಯಬಾರದು, ನಾನ್ಯಾಕೆ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೆ ಮೊದಲ ಪ್ರಧಾನಿಯಾಗಬಾರದು?” ಎಂಬ ವಿಷವನ್ನ ದೇಹಕ್ಕೆ ತುಂಬಿದ ಮುಸ್ಲೀಂ ಲೀಗ್ ಮೊಹಮ್ಮದ್ ಅಲಿ ಜಿನ್ನಾರನ್ನು ಕಾಂಗ್ರೆಸ್ ನಿಂದ ಮುಸ್ಲಿಂ ಲೀಗ್ ಗೆ ಸೇರಿಕೊಳ್ಳುವ ಹಾಗೆ ಮಾಡಿತು.

ಮೊದಮೊದಲು ಅಷ್ಟು ನಟೋರಿಯಸ್ ಆಗಿರದಿದ್ದ ಮೊಹಮ್ಮದ್ ಅಲಿ ಜಿನ್ನಾ ನಂತರದ ದಿನಗಳಲ್ಲಿ ಹಿಂದೂ ವಿರೋಧಿಯಾಗಿ ಬದಲಾಗಿದ್ದ. 1940 ರ ಹೊತ್ತಿಗೆ
ಭಾರತದಲ್ಲಿ ಎರಡು ಪಕ್ಷಗಳು ಬಲಾಢ್ಯವಾಗಿ ನಿಂತಿದ್ದವು, ಅವುಗಳು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹಾಗು ಮುಸ್ಲಿಂ ಲೀಗ್ ಪಕ್ಷಗಳು. ಗಾಂಧಿಯ
ನೆಹರುವಿನೆಡಗಿನ ಪ್ರೀತಿಯಿಂದ ಬೇಸರಿಸಿಕೊಂಡಿದ್ದ ಜಿನ್ನಾ ಮುಸ್ಲಿಂ ಲೀಗಿನ ಹಿಂದೂ ವಿರೋಧಿ ದ್ವೇಷದ ಪಾಯಿಸನ್ ಗೆ ಬಲಿಯಾಗಿ ತಾನೂ ಹಿಂದೂ ವಿರೋಧಿಯಾಗಿ ಬದಲಾಗಿದ್ದ.

1940 ರ ನಂತರದ ದಿನಗಳಲ್ಲಿ ಮೊಹಮ್ಮದ್ ಅಲಿ ಜಿನ್ನಾ ಹಿಂದುಗಳಿಗಾಗಿ ಹಿಂದೂಸ್ತಾನ ಹಾಗು ಮುಸಲ್ಮಾನರಿಗಾಗಿ ಪಾಕಿಸ್ತಾನ ಎಂಬ ಪ್ರೊಪೋಸಲ್ ಬ್ರಿಟಿಷರ ಮುಂದಿಟ್ಟ, ಆದರೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಈ ಪ್ರಸ್ತಾವನೆಯನ್ನ ತಿರಸ್ಕರಿಸಿತ್ತು.

ಅದು ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಮಯ, ಮೊಹಮ್ಮದ್ ಅಲಿ ಜಿನ್ನಾ ಭಾರತದ ಪ್ರಧಾನಿಯಾಗಲು ಸಾಧ್ಯವೇ ಇಲ್ಲ ಎಂದು ಗೊತ್ತಾದಾಗ ರೊಚ್ಚಿಗೆದ್ದ ಜಿನ್ನಾ ಆಗಷ್ಟ್ 16, 1946 ಕ್ಕೆ ಮುಂಬೈನ ತನ್ನ ಮನೆಯಲ್ಲಿ ಪ್ರೆಸ್ ಕಾನ್ಫರೆನ್ಸ್ ಮಾಡಿ ಮುಸಲ್ಮಾನರು ತಮ್ಮ ಶಕ್ತಿಯನ್ನ, ಒಗ್ಗಟ್ಟನ್ನ ಬ್ರಿಟಿಷರಿಗೆ ಹಾಗು ಕಾಂಗ್ರೆಸ್ಸಿಗರಿಗೆ ತೋರಿಸಬೇಕೆಂದು ಕರೆ ನೀಡುತ್ತಾನೆ.

ಅದಕ್ಕೆ ಆತ ಕೊಟ್ಟ ಹೆಸರೇ ಡೈರೆಕ್ಟ್ ಆ್ಯಕ್ಷನ್ ಡೇ…
ಆತನ ಮಾತುಗಳಿಂದ ಉತ್ಸುಕರಾದ ಮುಸಲ್ಮಾನರು ಕಲ್ಕತ್ತಾದಲ್ಲಿ(ಆಗಿನ ಬ್ರಿಟಿಷ್ ಬೆಂಗಾಲ್ ಪ್ರಾಂತ್ಯ) ದಂಗೆಯೆಬ್ಬಿಸಿಯೇ ಬಿಟ್ಟರು. ಏನಾಗುತ್ತಿದೆ ಎಂದು ನೋಡು ನೋಡೋಷ್ಟರೊತ್ತಿಗೆ ಸಾವಿರಾರು ಹಿಂದುಗಳ ಮಾರಣಹಣೋಮ ನಡೆದೇ ಹೋಗಿತ್ತು.

ಕಲ್ಕತ್ತಾದ ಈ ಮಾರಣಹೋಮದಲ್ಲಿ ನಾಲ್ಕು ಸಾವಿರ ಹೆಣಗಳು ಉರುಳಿ, ಲಕ್ಷಾಂತರ ಜನ ಮನೆ ಮಠ ಬಿಟ್ಟು ನಿರ್ಗತಿಕರಾದರು, ಡೈರೆಕ್ಟ್ ಆ್ಯಕ್ಷನ್ ಡೇ ನ ಎಫೆಕ್ಟ್ ಕೇವಲ ಬೆಂಗಾಲ್ ಮೇಲಾಗದೆ ಅದು ಬೆಂಗಾಲ್ ಸುತ್ತಮುತ್ತಲಿದ್ದ ನೋಕಾಲಿ, ಬಿಹಾರ್, ಉತ್ತರಪ್ರದೇಶ ಹಾಗು ಪಂಜಾಬಿನ ನಾರ್ತ್‌ವೆಸ್ಟ್ ಪ್ರಾಂತ್ಯಕ್ಕೂ ಹಬ್ಬಿ ಹಿಂದುಗಳ ಮಾರಣಹೋಮಕ್ಕೆ ಕಾರಣವಾಗಿತ್ತು.

ಉದ್ದೇಶವೊಂದೇ ಆಗಿತ್ತು, ಹಿಂದುಗಳಿಗಾಗಿ ಹಿಂದುಸ್ಥಾನ, ಮುಸಲ್ಮಾನರಿಗಾಗಿ ಪಾಕಿಸ್ತಾನ.

ಈ ಹತ್ಯಾಕಾಂಡವನ್ನ ಇತಿಹಾಸದಲ್ಲಿ ‘ಗ್ರೇಟ್ ಕಲ್ಕತ್ತಾ ಕಿಲ್ಲಿಂಗ್ಸ್’ ಎಂದೂ ಕರೀತಾರೆ.

ಮತ್ತೇನು, ಮುಸಲ್ಮಾನರ ಬೇಡಿಕೆಗೆ ಸೊಪ್ಪು ಹಾಕಿ ಮುಸಲ್ಮಾನರಿಗಾಗಿ ಪಾಕಿಸ್ತಾನ ಎಂಬ ಘೋಷಣೆ ಬ್ರಿಟಿಷರಿಂದ ಆಗೇ ಬಿಟ್ಟಿತು. 1931 ರಲ್ಲಿ “ಭಾರತ
ಧರ್ಮಾದಾರಿತವಾಗಿ ವಿಭಜಿಸೋದಾದರೆ ಅದು ನನ್ನ ಹೆಣದ ಮೇಲೆಯೇ” ಎಂಬ ಹೇಳಿಕೆ ಕೊಟ್ಟಿದ್ದ ಗಾಂಧಿ 1946 ರ ಹಿಂದುಗಳ ಮಾರಣಹೋಮದ ಬಗ್ಗೆ ತುಟಿಕ್ ಪಿಟಿಕ್ ಎನ್ನದೆ 1947 ರಲ್ಲಿ ಭಾರತ ಪಾಕಿಸ್ತಾನ ಎಂಬ ಧರ್ಮಾಧಾರಿತ ರಾಷ್ಟ್ರಗಳ ಸ್ಥಾಪನೆಗೆ ಒಪ್ಪಿ ಸಹಿ ಹಾಕಿದ್ದ.

ಭಾರತ ವಿಭಜನೆಯಾಯಿತು, ಪಾಕಿಸ್ತಾನದ ಹಿಂದುಗಳು ಭಾರತಕ್ಕೆ ವಲಸೆ ಬಂದರು, ಇಲ್ಲಿನ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋದರು.

ಆದರೆ ಗಾಂಧಿ ಇಲ್ಲಿಯೂ ಒಂದು ತಪ್ಪನ್ನ ಮಾಡಿದ್ದರು, “ಭಾರತದಲ್ಲಿರಲು ಇಚ್ಛಿಸೋ ಮುಸಲ್ಮಾನರು ಭಾರತದಲ್ಲಿರಲಿ, ಪಾಕಿಸ್ತಾನಕ್ಕೆ ಹೋಗಲಿಚ್ಛಿಸೋ ಮುಸಲ್ಮಾನರು ಅಲ್ಲಿಗೆ ಹೋಗಲಿ” ಎಂದು ಹೇಳಿ ಹಲವಾರು ಮುಸಲ್ಮಾನರು ಭಾರತದಲ್ಲಿಯೇ ಉಳಿಯುವಂತೆ ಮಾಡಿದ್ದ ಗಾಂಧಿ ಅಂದು ಮಾಡಿದ ತಪ್ಪಿಗೆ ನಾವು ಇಂದು ಆಂತರಿಕ ಭಯೋತ್ಪಾದನೆಗೆ, ಭಾರತದಲ್ಲಿದ್ದೂ ಪಾಕಿಸ್ತಾನ್ ಜಿಂದಾಬಾದ್ ಅನ್ನೋ ದೇಶದ್ರೋಹಿಗಳ ವಿರುದ್ಧ ನಾವು ಹೆಣಗಬೇಕಾಗಿದೆ.

1947 ರಲ್ಲಿ ಮುಸಲ್ಮಾನರಿಗಾಗಿ ಪಾಕಿಸ್ತಾನಹಿಂದೂಗಳಿಗಾಗಿ ಹಿಂದೂಸ್ತಾನ ಅನ್ನೋದಾಗಿತ್ತು ತಾನೆ

ಮುಸಲ್ಮಾನರು ಅಂದುಕೊಂಡಂತೆ ಅವರಿಗಾಗಿ ಪಾಕಿಸ್ತಾನ ಎಂಬ ರಾಷ್ಟ್ರ ಸಿಕ್ಕಿತು ಆದರೆ 84% ಇದ್ದ ಹಿಂದೂಗಳಿಗೇನು ಸಿಕ್ತು? “ಸೆಕ್ಯೂಲರ್ ರಾಷ್ಟ್ರ”

ಭಾರತವನ್ನ ಸೆಕ್ಯೂಲರ್ ರಾಷ್ಟ್ರ ಅಂತ ಯಾವ ದೊಣ್ಣೆನಾಯಕನೂ ಸಂವಿಧಾನದಲ್ಲಿ ಉಲ್ಲೇಖಿಸೋ ಅಗತ್ಯವೇ ಇರಲಿಲ್ಲ. ಆದರೆ ಬಾಬಾಸಾಹೇಬ್ ಅಂಬೇಡ್ಕರರೂ ಉಲ್ಲೇಖಿಸದ ‘ಸೆಕ್ಯೂಲರ್’ ಶಬ್ದವನ್ನ ಇಂದಿರಾ ಗಾಂಧಿ ಸಂವಿಧಾನದಲ್ಲಿ ಸೇರಿಸಿ ಭಾರತಕ್ಕೆ ಸೆಕ್ಯೂಲರಿಸಂನ ವಿಷ ಇಂಜೆಕ್ಟ್ ಮಾಡಿಬಿಟ್ಟಳು.

10 ಸಾವಿರ ವರ್ಷಗಳ ಇತಿಹಾಸವಿರೋ ಭಾರತ ಎಂದಿಗೂ ಅನ್ಯಮತೀಯರನ್ನ “ಹೊರಗಿನವರು”, “ಅವರಿಗಿಲ್ಲಿ ಜಾಗವಿಲ್ಲ”, “ನಮ್ಮ ದೇವರನ್ನ ಪೂಜಿಸಲಿಲ್ಲವೆಂದರೆ ನಿಮ್ಮನ್ನ ಕೊಲ್ತೀವಿ” ಅಂತ ಅನ್ಯಮತೀಯರು ಅವರವರ ಮುಸ್ಲಿಂ ಹಾಗು ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿರೋ ಅನ್ಯಧರ್ಮೀಯರಿಗೆ ಹೇಳಿ ಕೊಂದ ಹಾಗೆ ಹಿಂದುಗಳು ಹಿಂದೂಸ್ತಾನದಲ್ಲಿ ಯಾವತ್ತು ಮಾಡಲಿಲ್ಲ, ಈಗಲೂ ಮಾಡಲ್ಲ ಮುಂದೆಯೂ ಮಾಡಲ್ಲ.

ಮೊದಲಿನಿಂದಲೂ “ಸರ್ವೇಜನ ಸುಖಿನೋ ಭವಂತು” ಎಂಬ ತತ್ವವನ್ನು ಪಾಲಿಸುತ್ತಿರೋ ಭಾರತವೆಂಬ ರಾಷ್ಟ್ರಕ್ಕೆ ಸೆಕ್ಯೂಲರ್ ಎಂಬ ಹಣೆಪಟ್ಟಿ ಕಟ್ಟಿ
ಮುಸಲ್ಮಾನರಿಗಾಗಿ ಧರ್ಮದ ಆಧಾರದ ಮೇಲೆ ಬೇರೆಯ ರಾಷ್ಟ್ರವನ್ನೇ ಕೊಟ್ಟು ಹಿಂದುಗಳಿಗೆ ಮಾತ್ರ ಹಿಂದುಸ್ಥಾನ ಕೊಡದೆ ಸೆಕ್ಯುಲರಸ್ಥಾನ ನೀಡಿದ ಶ್ರೇಯ
ಕಾಂಗ್ರೆಸ್ ಗೆ ಸಲ್ಲಲೇಬೇಕು.

ಒಂದು ಕಾಲದಲ್ಲಿ ಹಿಂದೂ ಪಕ್ಷ ಎಂದು ಕರೆಸಿಕೊಳ್ಳುತ್ತಿದ್ದ ಕಾಂಗ್ರೆಸ್ ಇಂದು ತಮ್ಮ ಮುಸ್ಲಿಂ ತುಷ್ಟೀಕರಣ ಹಾಗು ಮುಸಲ್ಮಾನ ವೋಟ್ ಬ್ಯಾಂಕ್ ನೀತಿಯಿಂದ
ಬಹುಸಂಖ್ಯಾತರಾಗಿರೋ ಹಿಂದುಗಳಿಗೆ ಅಸ್ಪೃಶ್ಯರನ್ನಾಗಿ ಮಾಡಿ ಸ್ವಾತಂತ್ರ್ಯ ಸಿಗೋ ಸಮಯಕ್ಕೆ ಭಾರತದಲ್ಲಿ ಬೆರಳಣಿಕೆಯಷ್ಟಿದ್ದ ಮುಸಲ್ಮಾನರು ನೋಡು
ನೋಡುತ್ತಿದ್ದಂತೆ ಇಂದು ಭಾರತದಲ್ಲಿ 25% ಬೆಳೆದು ನಿಲ್ಲೋ ಹಾಗೆ ಮಾಡಿ ಭಾರತವನ್ನ ಹಿಂದೂರಾಷ್ಟ್ರ ಮಾಡದೆ ಸೆಕ್ಯುಲರ್ ರಾಷ್ಟ್ರ ವನ್ನಾಗಿ ಮಾಡಿ ಇಂದು
ಹಿಂದುಗಳ ಹೆಣದ ಮೇಲೆ ರಾಜಕೀಯ ಮಾಡುತ್ತಿದೆ.

“ಪಾಕಿಸ್ತಾನ ಮತ್ತು ಹಿಂದೂಸ್ತಾನ” ಎಂಬ ಮಾತು ಬರೀ ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾಯಿತು ಹೊರತು ಭಾರತ ಹಿಂದೂಸ್ತಾನವೂ ಆಗದೆ ಭಾರತವಾಗಿಯೂ ಉಳಿಯದೆ India ಆಗಿ ಬದಲಾಯಿತು.

ಅಂದು ಮುಸಲ್ಮಾನರೆಲ್ಲರನ್ನೂ ಪಾಕಿಸ್ತಾನಕ್ಕೆ ಕಳಿಸಿದ್ದಿದ್ದರೆ ಇಂದು ಕಾಂಗ್ರೆಸ್ ನವರು ಯಾರ ತುಷ್ಟೀಕರಣ ಮಾಡುತ್ತಿದ್ದರು?

ಕಾಂಗ್ರೆಸ್ ನ ಹಿಂದೂ ದ್ವೇಷಿ ನೀತಿಯ ಕಾರಣ ಕರ್ನಾಟಕದಂಥ ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ, ಕೇರಳ ಮಿನಿ ಪಾಕಿಸ್ತಾನವಾಗುತ್ತಿದೆ, ಪಶ್ಚಿಮ ಬಂಗಾಳವಂತೂ ಜಿಹಾದಿ ಮಾನಸಿಕತೆ ಹೊಂದಿರುವ ಮಮತಾ ಬ್ಯಾನರ್ಜಿಯ ಕೈಯಲ್ಲಿ ನಲುಗಿ ಅಕ್ಷರಶಃ ಬಾಂಗ್ಲಾದೇಶವಾಗಿ ಪರಿವರ್ತಿತವಾಗಿದೆ, ಒಂದು ಕಾಲದಲ್ಲಿ ಭೂಲೋಕದ ಸ್ವರ್ಗವಾಗಿದ್ದ ಕಾಶ್ಮೀರವಂತೂ ಅಕ್ಷರಶಃ ನರಕವಾಗಿ ಹೋಗಿದೆ.

ಇದಕ್ಕೆಲ್ಲ ಪರಿಹಾರವೇನು?

ಹಿಂದುಗಳ ಮಾರಣಹೋಮವೊಂದೇ ಇದಕ್ಕೆ ಪರಿಹಾರ, ಶರತ್, ಕುಟ್ಟಪ್ಪ, ರಾಜು ನಂಥವರ ಹಿಂದೂ ಕಾರ್ಯಕರ್ತರ ನರಬಲಿಯೇ ಇದಕ್ಕೆಲ್ಲ ಪರಿಹಾರ,

ಪಂಡಿತರನ್ನ ಕಾಶ್ಮೀರ ಕಣಿವೆಯಿಂದ ಹೇಗೆ ತಮ್ಮ ಸ್ವಂತ ಭೂಮಿಯಿಂದ ಓಡಿಸಿದರೊ ಹಾಗೆ ಹಿಂದುಗಳನ್ನ ಭಾರತದಿಂದ ಓಡಿಸುವುದೊಂದೇ ಪರಿಹಾರ!!

ಭಾರತ ಎಂದು ಮುಸ್ಲಿಂ ರಾಷ್ಟ್ರವಾಗುತ್ತೋ ಗೊತ್ತಿಲ್ಲ ಆದರೆ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಕಾಶ್ಮೀರವಂತೂ ಮುಸ್ಲಿಂ ಡಾಮಿನೇಟೆಡ್ ಸ್ಟೇಟ್ ಗಳಾಗಿ ಮಾತ್ರ ಬದಲಾಗಿವೆ ಎಂಬುದು ಮಾತ್ರ ಸುಳ್ಳಲ್ಲ.

ಎಲ್ಲಿಯವರೆಗೆ ಹಿಂದುಗಳು ಜಾತಿಯೆಂಬ ವಿಷದ ಬಾಣಕ್ಕೆ ತುತ್ತಾಗುತ್ತಿರುತ್ತಾರೋ ಅಲ್ಲಿಯವರೆಗೆ ಮೊಹಮ್ಮದ್ ಅಲಿ ಜಿನ್ನಾನಂಥವರು ಕಾಂಗ್ರೆಸ್, ಕಮ್ಯುನಿಸ್ಟ್,
ಸೆಕ್ಯೂಲರ್, ಪ್ರಗತಿಪರರು, ವಿಚಾರವಾದಿಗಳ ರೂಪದಲ್ಲಿ ಭಾರತವನ್ನ ತುಂಡು ತುಂಡಾಗಿ ವಿಭಜಿಸೋಕೆ ರಣಹದ್ದುಗಳಂತೆ ಕಾದು ಕುಳಿತಿರುತ್ತಾರೆ.

INDIA ಭಾರತವಾಗಿ ಬದಲಾಗಬೇಕಾದರೆ, ಭಾರತ ಹಿಂದೂಸ್ಥಾನವಾಗಿ ಬದಲಾಗಬೇಕಾದರೆ ಹಿಂದುಗಳು ಬದಲಾಗಬೇಕು.

ಬದಲಾಗುತ್ತಾ ಇಂಡಿಯಾ?

– Vinod Hindu Nationalist

Tags

Related Articles

Close