ಅಂಕಣ

ಪಾಕಿಸ್ಥಾನದ ನೋಟುಗಳನ್ನೂ ಸಹ ಮುದ್ರಣ ಮಾಡುವ ಬ್ರಿಟಿಷ್ ಸಂಸ್ಥೆಗೆ ಭಾರತದ ನೋಟುಗಳನ್ನು ಮುದ್ರಣ ಮಾಡಲು ಅವಕಾಶ ಕೊಟ್ಟ ಪಿ.ಚಿದಂಬರಮ್ ಇಡೀ ದೇಶಕ್ಕೆ ಯಾವ ರೀತಿ ದ್ರೋಹ ಬಗೆದಿದ್ದರು ಗೊತ್ತೇ?

ಭಾರತದಲ್ಲಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ 9 ತಿಂಗಳು ಕಳೆದಿದೆ. ಈ ನೋಟುಗಳನ್ನು ರದ್ದು ಮಾಡಲು ಕಾರಣವೇನು? ಈ ಹಳೆಯ ನೋಟುಗಳಿಂದ ಭಾರತದ ಆರ್ಥಿಕತೆ ಮತ್ತು ಭದ್ರತೆಯ ಮೇಲೆ ಉಂಟಾಗಿದ್ದ ಅಪಾಯವೇನು ಎಂಬುವುದನ್ನು ಯಾವ ಮಾಧ್ಯಮದವರಾಗಲೀ, ಹಣಕಾಸು ತಜ್ಞರಾಗಲೀ ವಿವರಿಸುವುದಿಲ್ಲ. ಮೋದಿಯವರನ್ನು ಟೀಕಿಸುವ ಉದ್ದೇಶದಿಂದ ಅನಾಣ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ ಎಂದು ವಿರೋಧ ಪಕ್ಷಗಳು, ಕೆಲವು ಸಾಹಿತಿಗಳು, ಮೋದಿ ವಿರೋಧಿಗಳು ಇಂದಿಗೂ ಟೀಕಿಸುತ್ತಲೇ ಇದ್ದಾರೆ.

ಪಿ. ಚಿದಂಬರಂ…. ಇವನು ಭಾರತದ ಮಾಜಿ ಹಣಕಾಸು ಸಚಿವ!!! ಈತ ದೃಶ್ಯವಾಹಿನಿ, ಪತ್ರಿಕೆಗಳಲ್ಲಿ ಸಂದರ್ಶನ ನೀಡಿ, ಮೋದಿಯ ಅನಾಣ್ಯೀಕರಣದಿಂದ ಭಾರತದ ಆರ್ಥಿಕತೆಯ ಮೇಲೆ ಸಾಕಷ್ಟುಪರಿಣಾಮ ಬೀರಿದ್ದು, ಜಿಡಿಪಿ ದರ ಇಳಿಮುಖವಾಗಿದೆ ಎಂದು ಆಗಾಗ ಹೇಳಿಕೆ ನೀಡುತ್ತಾನೆ. ಆದರೆ ಇದೇ ಮನುಷ್ಯ ಮಾಡಿದ ಎಡವಟ್ಟಿನಿಂದ ಭಾರತದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಲು ಕಾರಣ ಎಂಬ ಸತ್ಯವನ್ನು ಆತನಾಗಲಿ ಕಾಂಗ್ರೆಸಿಗರಲಾಗಲೀ ಹೇಳುವುದೇ ಇಲ್ಲ. ಚಿದಂಬರಂ ಮಾಡಿದ ಎಡವಟ್ಟಿನಿಂದ ದೇಶವೇ ಒಂದು ದಿನ ದಿವಾಳಿ ಹೋಗಬಹುದಿತ್ತು, ಆದರೆ ನರೇಂದ್ರ ಮೋದಿ ಅದನ್ನು ತಪ್ಪಿಸಿ ಭಾರತವನ್ನು ಮಹಾನ್ ಗಂಡಾಂತರದಿಂದ ಪಾರು ಮಾಡಿದರು ಎಂಬ ಸತ್ಯವನ್ನು ನಾವು ಕೊನೆಗಾದರೂ ಅರ್ಥಮಾಡಿಕೊಳ್ಳಲೇ ಬೇಕಿದೆ.

ಭಾರತದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಲು ಚಿದಂಬರಂ ಹೇಗೆ ಕಾರಣನಾದ ಎಂಬ ಸತ್ಯವನ್ನು ಡಾ. ಸುಬ್ರಹ್ಮಣಿಯನ್ ಸ್ವಾಮಿ ಕಳೆದ ವರ್ಷವೇ ಬಿಚ್ಚಿಟ್ಟಿದ್ದಾರೆ. ಚಿದಂಬರಂನಿಂದಾಗಿ ಪಾಕಿಸ್ತಾನ ಭಾರತದ ನಕಲಿ ನೋಟುಗಳನ್ನು ಮುದ್ರಿಸಿ ಭಾರತದ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಿಟ್ಟಿತ್ತು!!!

ಡಾ. ಸ್ವಾಮಿಯವರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅನಾಣ್ಯೀಕರಣದ ಮೂಲಕ ಭಾರತದಲ್ಲಿ ಹಳೆಯ ನೋಟುಗಳನ್ನು ರದ್ದು ಮಾಡದೇ ಇದ್ದಿರುತ್ತಿದ್ದರೆ ಭಾರತದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗುತ್ತಿತ್ತು. ದೇಶದ ಭದ್ರತೆಯ ಮೇಲೆ ಅಪಾಯವಾಗುವುದನ್ನು ಮನಗಂಡು ನೋಟುಗಳನ್ನು ರದ್ದುಗೊಳಿಸಲಾಗಿದೆ. ನಕಲಿ ಕರೆನ್ಸಿ ಜಾಲ ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದು, ಒಂದು ವೇಳೆ ನೋಟು ರದ್ದಾಗದೇ ಇರುತ್ತಿದ್ದರೆ ನಮ್ಮ ಕೈಗಳಲ್ಲಿ ನೋಟುಗಳಷ್ಟೆ ಇದ್ದು ದೇಶ ದಿವಾಳಿಯಾಗುತ್ತಿತ್ತು. ಹಣಕ್ಕೆ ಯಾವುದೇ ಬೆಲೆಯೇ ಇರುತ್ತಿರಲಿಲ್ಲ! ಈ ಎಲ್ಲಾ ಸಮಸ್ಯೆಗೆ ಮೂಲ ಕಾರಣ ಪಿ. ಚಿದಂಬರಂ… ಈ ಮಾತುಗಳನ್ನು ಸ್ವತಃ ಡಾ. ಸ್ವಾಮಿಯೇ ಹೇಳಿದ್ದಾರೆ. ಕಾಂಗ್ರೆಸ್‍ನ ಹಲವಾರು ಹಗರಣಗಳನ್ನು ಬಯಲುಗೊಳಿಸಿರುವ ಡಾ. ಸ್ವಾಮಿ ನಕಲಿ ನೋಟು ಜಾಲದ ಬಗ್ಗೆ ಹೇಳಿರುವುದಿಷ್ಟು.

`ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದ ಸಂದರ್ಭ, ನೋಟು ಮುದ್ರಣದ ಗುತ್ತಿಗೆಯನ್ನು ಬ್ರಿಟಿಷ್ ಕಂಪೆನಿಯೊಂದಕ್ಕೆ ನೀಡಿದರು. ಆ ಕಂಪೆನಿಯ ಹೆಸರು `ಡೆ ಲಾ ರ್ಯು’. ಇದು ಲಂಡನ್‍ನಲ್ಲಿದೆ. ಇದೇ ಕಂಪೆನಿ ಪಾಕಿಸ್ತಾನದ ನೋಟುಗಳ ಮುದ್ರಣದ ಗುತ್ತಿಗೆಯನ್ನೂ ಪಡೆದಿತ್ತು. ಇದರಿಂದಾಗಿ ಪಾಕಿಸ್ತಾನಕ್ಕೆ ಭಾರತದ ನೋಟುಗಳ ಪಡಿಯಚ್ಚನ್ನು ಪಡೆಯಲು ಸುಲಭವಾಯಿತು. ಒಂದಷ್ಟು ನಕಲಿ ನೋಟುಗಳನ್ನು ಮುದ್ರಿಸಿ ಭಾರತದ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಿಟ್ಟಿತು. ಪಾಕಿಸ್ತಾನ ಕಾಶ್ಮೀರದಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಕ್ಕೂ ಇದೇ ನೋಟುಗಳನ್ನು ಬಳಸಿಕೊಂಡಿತು. ಭಾರತದಲ್ಲಿ ಎಷ್ಟೊಂದು ನಕಲಿ ನೋಟುಗಳು ತುಂಬಿಹೋಗಿತ್ತೆಂದರೆ 2010ರಲ್ಲಿ ಸಿಬಿಐ ಭಾರತದ ರಿಸರ್ವ್ ಬ್ಯಾಂಕ್‍ನ ಶಾಖೆಗಳಿಗೆ ದಾಳಿ ನಡೆಸಿ ನಕಲಿ ನೋಟುಗಳೇ ತುಂಬಿರುವುದನ್ನು ಪತ್ತೆಹಚ್ಚಿತ್ತು. ಆರ್‍ಬಿಐನ 70 ಕಚೇರಿಗಳಲ್ಲಿ ಒಂದೇ ಸೀರಿಯಲ್ ನಂಬರ್ ಹೊಂದಿರುವ ಹಲವು ನೋಟುಗಳನ್ನು ಸಿಬಿಐ ಪತ್ತೆಹಚ್ಚಿತ್ತು’ ಎಂದು ಡಾ. ಸ್ವಾಮಿ ಹೇಳಿದ್ದರು.

ಈಗ ನರೇಂದ್ರ ಮೋದಿಯವರು ಹಳೆಯ ನೋಟುಗಳನ್ನು ಯಾಕೆ ನಿಷೇಧಿಸಿದ್ದಾರೆಂದು ಸ್ಪಷ್ಟವಾಗಿ ತಿಳಿದುಬಿಡುತ್ತದೆ.

ಚಿದಂಬರಂ ಅವರು ಡಿಮೊನಿಟೈಸೇಷನ್ ವಿಚಾರದಲ್ಲಿ ಮೋದಿಯವರನ್ನು ಸಾಕಷ್ಟು ಟೀಕಿಸುತ್ತಾರೆ. ಅವರಿಗೆ ಹಣಕಾಸು ವಿಚಾರದಲ್ಲಿ ಸಾಕಷ್ಟು ಸಲಹೆ, ಸೂಚನೆಗಳನ್ನು ನೀಡುತ್ತಾರೆ. ಆದರೆ ಮೋದಿ ಅವರ ನೋಟು ರದ್ಧತಿಯ ಹಿಂದಿರುವ ಉದ್ದೇಶವನ್ನು ಮಾತ್ರ ಪಿ. ಚಿದಂಬರಂ ಆಗಲೀ, ಅಥವಾ ಇತರ ಕಾಂಗ್ರೆಸಿಗರಾಗಲಿ ಒಪ್ಪಿಕೊಳ್ಳಲು ತಯಾರಿಲ್ಲ. ವಿಪರ್ಯಾಸ ಅಂದರೆ ಇದೇ ಅಲ್ಲವೇ?

ಚೇಕಿತಾನ

Tags

Related Articles

Close