ಪ್ರಚಲಿತ

ಪಾಕಿಸ್ಥಾನಿ ರಾಜಕಾರಣಿ ಪುತ್ರಿಯ ವೀಡಿಯೋ ಪಾಕ್ ಸೈನ್ಯವನ್ನು ನಡುಗಿಸಿದ್ಯಾಕೆ ಗೊತ್ತೇ?!

ಕೆಲ ಸಮಯಗಳ ಹಿಂದೆಯಷ್ಟೇ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ “ನಾನು ಎಲ್.ಇ.ಟಿಯ ಅತಿದೊಡ್ಡ ಬೆಂಬಲಿಗನಾಗಿದ್ದೇನೆ. ಅವರು ನನ್ನನ್ನು
ಇಷ್ಟಪಡುತ್ತಾರೆಂದು ನನಗೆ ಗೊತ್ತು ಮತ್ತು ಜಮಾತ್-ಉದ್-ದವಾ (ಜೆಯುಡಿ) ಸಂಘಟನೆ ಸಹ ನನ್ನನ್ನು ಇಷ್ಟಪಡುತ್ತಾರೆ” ಎಂದು ಹೇಳಿಕೆ ನೀಡಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು!! ಆದರೆ ಇದೀಗ ಪಾಕ್ ಸೇನೆಯ ಕುಕೃತ್ಯದ ಬಗ್ಗೆ ಪಾಕಿಸ್ತಾನದ ಪ್ರಮುಖ ರಾಜಕಾರಣಿಯ ಪುತ್ರಿಯೊಬ್ಬರು ಕಿಡಿಕಾರಿರುವುದು ಎಲ್ಲೆಡೆ
ಸುದ್ದಿಯಾಗಿದ್ದಲ್ಲದೇ, ಈ ಬಗೆಗಿರುವ ವಿಡಿಯೋ ವೈರಲ್ ಆಗಿದೆ!!

ಹೌದು…. ಪಾಕ್ ಸೇನೆಯ ಕುಕೃತ್ಯದ ಬಗ್ಗೆ ಅಲ್ಲಿನ ತೆಹ್ರಿಕ್-ಇ-ಇನ್ಸಾಫ್’ನ ಹಿರಿಯ ನಾಯಕ ಶಿರನ್ ಮಜಾರಿಯ ಪುತ್ರಿಯಾದ ಇಮಾನ್ ಮಜಾರಿ ಪಾಕ್ ಸೇನೆಯು ದೇಶದ ಒಳಗೆ ಹಾಗೂ ಹೊರಗಡೆ ನಡೆಸುತ್ತಿರುವ ದುಷ್ಕೃತ್ಯವನ್ನು ವಿಡಿಯೋ ಮಾಡಿ ಟ್ವಿಟರ್’ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಈಕೆಯ ಹೇಳಿಕೆ ಟ್ವಿಟರ್’ನಲ್ಲಿ ರದ್ದಾಗಿದ್ದು, ಯೂಟ್ಯೂಬ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ತೆಹ್ರಿಕ್-ಇ.ಇನ್ಸಾಫ್ ಪಕ್ಷದ ಮುಖಂಡ ಶಿರಿನ್ ಮಜರಿ ಪುತ್ರಿ ಇಮಾನ್ ಮಜರಿ ಅವರು ಪೈಜಾಬಾದ್‍ನಲ್ಲಿ ನಡೆದ ಪ್ರತಿಭಟನೆ ವೇಳೆ ಪಾಕ್ ಸೇನೆಯ ಕಾರ್ಯಚರಣೆ ಹಾಗೂ ಪಾತ್ರದ ಬಗ್ಗೆ ಕಟುವಾಗಿ ಟೀಕಿಸಿರುವ ವೀಡಿಯೋವನ್ನು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಈ ವೀಡಿಯೋ ಪಾಕ್ ದೇಶಾದ್ಯಂತ ಜನರು ವೀಕ್ಷಿಸಿದ್ದಾರೆ. ಆದರೆ ಪಾಕಿಸ್ತಾನದ ಪ್ರಮುಖ ರಾಜಕಾರಣಿಯ ಮಗಳೊಬ್ಬಳು ತನ್ನದೇ ದೇಶದ ಸೈನ್ಯಕ್ಕೆ ಉಗಿದು ಟ್ವಿಟರ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಆದರೆ ಅಪ್‍ಲೋಡ್ ವಿಡಿಯೋ ಜತೆಗೆ, ಆಕೆಯ ಟ್ವಿಟರ್ ಖಾತೆಯೂ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಏಕಾಏಕಿ ಕಣ್ಮರೆಯಾಗಿದೆ, ಎಂದು ಸ್ವತಃ ಪಾಕ್ ಮಾಧ್ಯಮಗಳೇ ವರದಿ ಮಾಡಿವೆ.

‘ಪಾಕ್ ಸೇನೆ ಭಯೋತ್ಪಾದನೆಯನ್ನು ಪೋಷಿಸುತ್ತಿದೆ. ಇದರಿಂದ ಅಮಾಯಕ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರ ಪ್ರಾಣ ತ್ಯಾಗ ವ್ಯರ್ಥವಾಗುತ್ತಿದೆ. ನಾಚಿಕೆಯಾಗಬೇಕು ನಮ್ಮ ಸೇನೆಗೆ. ಭಯೋತ್ಪಾದನೆ ಪೋಷಣೆಗಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುತ್ತಿರುವ ಸೇನೆ ಇಸ್ಲಾಮಾಬಾದ್ ಹಾಗೂ ದೇಶದ ಹಲವು ಭಾಗಗಳಲ್ಲಿ ಉಗ್ರಗಾಮಿಗಳಿಗೆ ಕುಮ್ಮಕ್ಕು ಕೊಡುತ್ತಿದೆ’ ಎಂದು ಇಮಾನ್ ಮಜಾರಿ ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಸೇನೆಯ ಇಬ್ಬಗೆ ನೀತಿಯಿಂದ ಭಯೋತ್ಪಾದಕರಿಂದ ನಮ್ಮ ಸೈನಿಕರು ಯಾವುದೇ ಕಾರಣವಿಲ್ಲದೆ ಹುತಾತ್ಮರಾಗುತ್ತಿದ್ದಾರೆ. ಸಾರ್ವಜನಿಕರ ಬದುಕು ನರಕವಾಗುತ್ತಿದೆ. ಭಯೋತ್ಪಾದಕರನ್ನು ಪೋಷಣೆಯಿಂದ ದೇಶ ನಾಶವಾಗುತ್ತಿರುವ ಬಗ್ಗೆ ಸೇನೆಯು ಇನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದನ್ನು ಟ್ವಿಟರ್‍ನಲ್ಲಿ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.


ಆದರೆ ಈ ಎಲ್ಲಾ ಹೇಳಿಕೆಗಳಿಗೆ ನಿಜವಾದ ಕಾರಣವೇನು ಗೊತ್ತೇ??

ಇತ್ತೀಚಿಗಷ್ಟೆ ದೈವನಿಂದನೆ ಆರೋಪದಲ್ಲಿ ಪಾಕಿಸ್ತಾನದ ಕಾನೂನು ಸಚಿವ ಝಾಹಿದ್ ಹಮೀದ್ ರಾಜೀನಾಮೆಗೆ ಆಗ್ರಹಿಸಿ ಇಸ್ಲಾಮಿಕ್ ಮೂಲಭೂತವಾದಿಗಳು
ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ನಡುವೆ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ ಸಂದರ್ಭದಲ್ಲಿ ಸೇನೆ ಹಾಗೂ ಪ್ರತಿಭಟನಾಕಾರರ ಮಧ್ಯೆ ಗಲಭೆಗಳು ನಡೆದಿದ್ದವು. ಆದರೆ ಈ ಸಂದರ್ಭದಲ್ಲಿ ಕೆಲವರು ಮೃತಪಟ್ಟಿದ್ದಲ್ಲದೇ ನೂರಾರು ಮಂದಿ ಗಾಯಗೊಂಡಿದ್ದರು. ಈ ಕಾರಣದಿಂದಾಗಿಯೇ ಇಮಾನ್ ತನ್ನ ರಾಷ್ಟ್ರದ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದಲ್ಲದೇ, ಈಕೆಯ ಈ ಆರೋಪಕ್ಕೆ ಈ ಘಟನೆಯೇ ಮೂಲ ಕಾರಣ ಎಂದು ಹೇಳಲಾಗುತ್ತಿದೆ!!.

ಪ್ರತಿಭಟನೆ ವೇಳೆ ಪಾಕ್ ಸೇನೆ ನಡೆಸಿರುವ ಕಾರ್ಯಚರಣೆ ಅಮಾನವೀಯವಾಗಿದ್ದು, ಎಂದು ಆರೋಪಿಸಿದ ಶಿರಿನ್ ಪಾಕ್ ಸೇನೆಯನ್ನು ಕಟುವಾಗಿ ಟೀಕಿಸಿದ್ದರು.!!

ಈ ಹಿಂದೆ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಲು ಅಮೇರಿಕಾ ಸರ್ಕಾರ ನಡೆಸಿದ ಆನ್ ಲೈನ್ ಸಹಿ ಸಂಗ್ರಹಿಸುವ ಅಭಿಯಾನಕ್ಕೆ
ವಿಶ್ವದೆಲ್ಲೆಡೆಯಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದಲ್ಲದೇ ಪ್ರಾರಂಭಿಸಿದ ಕೇವಲ ಒಂದು ವಾರದೊಳಗಡೆ 1 ಲಕ್ಷ ಗಡಿದಾಟಿತ್ತು!! ಹಾಗಾಗಿ ವಿಶ್ವದೆಲ್ಲೆಡೆ
ಪಾಕ್,ಭಯೋತ್ಪಾದಕರನ್ನು ಪೋಷಿಸುವ ರಾಷ್ಟ್ರ ಎಂದು ಪ್ರಖ್ಯಾತಿ ಪಡೆದಿದ್ದು, ಇದೀಗ ಪಾಕ್ ಪ್ರಜೆಯೇ ಈ ಬಗ್ಗೆ ನಿಜಾಂಶ ಬಿಚ್ಚಿಟ್ಟಿದ್ದು ಮಾತ್ರ ಅಕ್ಷರಶಃ ನಿಜ!!

ಸ್ವತಃ ಪಾಕಿಸ್ತಾನದ ಪ್ರಮುಖ ರಾಜಕಾರಣಿಯ ಮಗಳೇ ಪಾಕಿಸ್ತಾನ ಭಯೋತ್ಪಾಕರಿಂದ ತುಂಬಿ ತುಳುಕಾಡುತ್ತಿದೆ. ಅಷ್ಟೇ ಅಲ್ಲದೇ ಪಾಕ್ ಸೇನೆ ಭಯೋತ್ಪಾದನೆಯನ್ನು ಪೋಷಿಸುತ್ತಿದೆ. ಇದರಿಂದ ಅಮಾಯಕ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರ ಪ್ರಾಣ ತ್ಯಾಗ ವ್ಯರ್ಥವಾಗುತ್ತಿದೆ ಎಂದು ಹೇಳುತ್ತಿರುವಾಗ ಪಾಕಿಸ್ತಾನದಲ್ಲಿ ಭಯೋತ್ಪಾದನೆಯೇ ಇಲ್ಲ, ಪಾಕಿಸ್ತಾನವನ್ನು ಸ್ವರ್ಗ ಎನ್ನುವಂತೆ ವೈಭೀಕರಿಸಿ ಹೇಳಿಕೆಗಳನ್ನು ನೀಡುವ, ಭಾಷಣ ಮಾಡುವ ಬುದ್ದಿಜೀವಿಗಳು ಈಕೆಯ ಈ ಮಾತನ್ನು ಕೇಳಿಯಾದರೂ ಅಥವಾ ನೋಡಿಯಾದರೂ ಅರ್ಥವಾಗುತ್ತೋ ಏನೋ ಗೊತ್ತಿಲ್ಲ!!

Source : https://vijaykarnataka.indiatimes.com/news/world/-pak-politicians-daughter-slams-pak-army/articleshow/61876645.cms

-ಅಲೋಖಾ

Tags

Related Articles

Close