ಅಂಕಣದೇಶಪ್ರಚಲಿತ

ಪಾಕಿಸ್ಥಾನಕ್ಕೆ ಗ್ರೇಟ್ ವಾರ್ನಿಗ್!!! ಉಗ್ರರ ರಕ್ಷಿಸಿದರೆ ಹುಷಾರ್ ಎಂದ ಡೊನಾಲ್ಡ್ ಟ್ರಂಪ್!

ಅತ್ತ ಒಂದು ಕಡೆಯಲ್ಲಿ ಭಾರತದ ಯುದ್ಧ ನೀತಿಗಳು ಚೈನಾವನ್ನು ದೋಕ್ಲಾಮ್ ವಿಷಯದಲ್ಲಿ ಹಣ್ಣುಗಾಯಿ ಮಾಡುತ್ತಿದ್ದರೆ, ಇತ್ತ ಪಾಕಿಸ್ಥಾನಕ್ಕೂ ಉರಿ ಹತ್ತಿದೆ! ಭಾರತದ ಶಾಂತಿ ಕದಡಲು, ಕಾಶ್ಮೀರದಲ್ಲಿ ಪದೇ ಪದೇ ಆಟವಾಡುತ್ತಿರುವ ಪಾಕಿಸ್ಥಾನದ ಅಧಿಕಪ್ರಸಂಗಿತನಕ್ಕೆ ಡೊನಾಲ್ಡ್ ಟ್ರಂಪ್ ಗಂಭೀರ ಎಚ್ಚರಿಕೆ ನೀಡಿದ್ದಾರೆ!

” ಅಫ್ಘಾನಿಸ್ಥಾನದ ವಿಷಯದಲ್ಲಿ ನಮ್ಮ ಕಡೆಗಿದ್ದರೆ, ಪಾಕಿಸ್ಥಾನಕ್ಕೆ ಕ್ಷೇಮ! ಅದಿಲ್ಲದೇ, ನಮ್ಮ ವಿರುದ್ಧವಾಗಿ ಹೋಗಿ, ಉಗ್ರರನ್ನು ರಕ್ಷಿಸುವ ಕಾರ್ಯ ಮಾಡಿದರೆ ಹುಟ್ಟಡಗಿಸುತ್ತೇನೆ.” ಎಂಂದಿರುವ ಡೊನಾಲ್ಡ್ ಟ್ರಂಪ್ ಶಾಂತಿ ಸ್ಥಾಪನೆಗೆ ಭಾರತದ ನೆರವನ್ನೂ ಕೋರಿದ್ದಾರೆ!

ಅಫ್ಘನ್ ನಿಂದ ಸೇನಾ ದಳಗಳನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಕರೆಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಪಾಕಿಸ್ಥಾನಕ್ಕೆ “ಉಗ್ರರಿಗೆ ಸ್ವರ್ಗವನ್ನು ನೀವು ಕಲ್ಪಿಸುವ ಅಗತ್ಯವಿಲ್ಲ!” ಎಂದು ಖಡಕ್ ಎಚ್ಚರಿಕೆ ನೀಡಿದ್ದಲ್ಲದೇ, ಭಾರತದ ವಿರುದ್ಧ ತಿರುಗಿಬಿದ್ದ ಪಾಕಿಸ್ಥಾನವನ್ನು ಬಹುವಾಗಿ ವಿರೋಧಿಸಿದ್ದಾರೆ!

ಡೊನಾಲ್ಡ್ ಟ್ರಂಪ್, “ಅಫ್ಘನ್ನಿನ ಶಾಂತಿ ಸ್ಥಾಪನೆಗೆ ಭಾರತ ಸಹಕಾರ ನೀಡಬೇಕಿದೆ. ಯುಎಸ್ ಹಾಗೂ ಭಾರತದ ಮಧ್ಯದ ಯಶಸ್ವೀ ವಾಣಿಜ್ಯ ವಹಿವಾಟಿನಲ್ಲಿ ಹೇಗೆ ತನ್ನ ಸಾಮರ್ಥ್ಯ ತೋರಿಸಿದೆಯೋ ಅದೇ ರೀತಿ, ಅಫ್ಗನ್ ವಿಚಾರದಲ್ಲಿಯೂ ಧೃಢತೆಯನ್ನು ತರಲು ಸಹಾಯ ನೀಡಬೇಕು.” ಎಂದು ಹೇಳಿದ್ದಾರೆ!

“ಅತ್ತ ಪಾಕಿಸ್ಥಾನ ಉಗ್ರರ ಪೋಷಣೆ ಮಾಡುತ್ತಿರುವಾಗಲೇ, ನಾವು ಅವರಿಗೆ ಬಿಲಿಯನ್ಸ್ ಹಣದ ವಹಿವಾಟು ನಡೆಸುತ್ತಿದ್ದೇವೆ! ಈಗ, ನಾವು ಹೋರಾಡುತ್ತಿರುವಾಗಲೇ, ಉಗ್ರರಿಗೆ ಸ್ವರ್ಗ ಕಲ್ಪಿಸುತ್ತಿದ್ದಾರೆ.” ಎಂದು ಆರೋಪಿಸಿದ್ದಾರೆ!

ಹಫೀಜ್ ಮೊಹಮ್ಮದ್ ಸಯೀದ್, ದಾವೂದ್ ಇಬ್ರಾಹಿಂ, ಸೈಯ್ಯದ್ ಸಲಾಹುದ್ದೀನ್ ಹಾಗೂ ಮೌಲಾನಾ ಮಸೂದ್ ಅಜರ್ ಎಂಬ ಟಾಪ್ ಉಗ್ರರನ್ನು ರಕ್ಷಿಸಿದ್ದ ಪಾಕಿಸ್ಥಾನದ ವಿರುದ್ಧ ಹರಿಹಾಯ್ದಿದ್ದ ಅಮೇರಿಕಾ ಈಗ, ಮತ್ತೆ ಕಟ್ಟೆಚ್ಚರಿಕೆ ನೀಡಿದೆ! ಇನ್ನೂ, ಪಾಕಿಸ್ಥಾನ ಕೇಳದೇ ಬಂಢ ಧೈರ್ಯದಿಂದ ರಕ್ಷಣೆ ನೀಡಿದ್ದೇ ಆದರೆ, ಒಸಾಮಾ ಬಿನ್ ಲಾಡನ್ ನ ದಾಳಿಯ ಹಾಗೇ ಅಮೇರಿಕಾ ದಾಳಿ ನಡೆಸುವ ಸೂಚನೆ ತೀವ್ರವಾಗಿದೆ!

ಭಾರತದ ತೀಕ್ಷ್ಣಬುದ್ಧಿ ನೆರವು ಕೊಡುವುದೇ?

ಮುಂಚೆಯಿಂದಲೂ, ಭ್ರಷ್ಟಾಚಾರ ನಿಗ್ರಹಕ್ಕೆ ಹರಸಾಹಸ ಮಾಡುತ್ತಿರುವ ಭಾರತಕ್ಕೆ ದೇಶದೊಳಗಿನ ಪ್ರತ್ಯೇಕತಾವಾದಿಗಳು, ಎಡಪಂಥೀಯರು, ಕಾಂಗ್ರೆಸ್ ಹಾಗೂ ಸಿಪಿಎಮ್ ನಂತಹ ಉಗ್ರರ ಮೇಲೆ ಒಲವು ಹೊಂದಿರುವವರಿಂದಲೇ ದೊಡ್ಡ ಸಮಸ್ಯೆ ಎದುರಾಗುತ್ತಿರುವುದಲ್ಲದೇ, ಇನ್ನೂ ನಿದ್ರೆಯ ಕನವರಿಕೆಯಲ್ಲಿರುವ ಚೀನಾದ ಮಂಗಾಟವೂ ಸೇರಿಕೊಂಡಿದ್ದರಲ್ಲಿ ಆಶ್ಚರ್ಯವೇನಲ್ಲ ಬಿಡಿ!

ಭಾರತದ ಗುಪ್ತಚರ ಇಲಾಖೆಗೆ ಉಗ್ರತಾಣದ ಎಲ್ಲಾ ಗುಪ್ತ ಮಾಹಿತಿಗಳು ಲಭ್ಯವಿದ್ದರೂ, ಒಂದಷ್ಟು ಆಂತರಿಕ ಒತ್ತಡಗಳಿಂದ ಕೈಕಟ್ಟಿ ಕೂರುವಂತಾಗಿದ್ದ ಭಾರತ, ಯುಎಸ್ ಗೆ ನೆರವು ನೀಡಿದ್ದೇ ಆದಲ್ಲಿ, ಬಹುಷಃ ಕಾಶ್ಮೀರದ ವಿವಾದ ದಿಂದ ಹಿಡಿದು, ಡೋಕ್ಲಾಮ್ ವರೆಗೂ ಯುಎಸ್ ಭಾರತದ ನೆರವಿಗೆ ಧಾವಿಸುವುದಲ್ಲದೇ, ಭಾರತದ ತಾಕತ್ತು ‘ಅಖಂಡ’ ವಾಗುವುದರಲ್ಲಿ ಸಂಶಯವಿಲ್ಲವೆಂದಷ್ಟೇ ಹೇಳಬಹುದು!!!

– ಪೃಥ

Tags

Related Articles

Close