ಪ್ರಚಲಿತ

ಪಾಕಿಸ್ಥಾನ ಯಾವತ್ತಿಗೂ ಭಾರತವನ್ನು ಸೋಲಿಸಲು ಸಾಧ್ಯವೇ ಇಲ್ಲ! : ಇಟಾಲಿಯನ್ ಪ್ರಜೆ!!!!

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಒಬ್ಬ ಇಟಾಲಿಯನ್ “ಪಾಕಿಸ್ತಾನ ಯಾವತ್ತೂ ಕೂಡ ಭಾರತವನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು” ಹೇಳಿದ್ದರು. ಒಬ್ಬ
ಇಟಾಲಿಯನ್ ಭಾರತದ ಬಗ್ಗೆ ಇಷ್ಟೊಂದು ನಂಬಿಕೆಯನ್ನು ಇಟ್ಟುಕೊಳ್ಳಲು ಕಾರಣವೇನು ಎಂದು ಒಂದು ಕ್ಷಣ ಅನಿಸಿ ಬಿಡುತ್ತೆ ಅಲ್ವೇ? ಹೌದು.. ಇಷ್ಟೊಂದು ಬಲವಾಗಿ ಹೇಳಲು ಕಾರಣವು ಇದೆ!!

ಭಾರತದ ಸೇನಾಪಡೆಗಳಲ್ಲಿ ಸಿಖ್ ರೆಜಿಮೆಂಟ್ ಅತ್ಯಂತ ಬಲಶಾಲಿಯಾದ ದಳಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೇ ತಮ್ಮ ಶಕ್ತಿ ಸಾಮಥ್ರ್ಯಕ್ಕೆ 1652ರಲ್ಲಿ ಗೌರವ
ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಆ ಸಂದರ್ಭದಲ್ಲಿ ಬ್ರಿಟಿಷ್ ಸೇನೆಯೂ ಯುಕೆ ಸಿಖ್ ಪದಾತಿದಳವನ್ನು ಹೆಚ್ಚಿಸಲು ನಿರ್ಧರಿಸಿತಾದರೂ ಕೂಡ ಜನಾಂಗೀಯ ಸಮಾನತೆ ಸಮಿತಿಯ(ಸಿಆರ್‍ಇ) ಆಪಾದನೆಯಿಂದಾಗಿ ಇದನ್ನು ಜನಾಂಗೀಯ ಅಥವಾ ಪಂಥೀಯವೆಂದು ಪರಿಗಣಿಸಬಹುದೆಂದು ಆರೋಪಿಸಿತ್ತು. ಆಗ ಪ್ರಿನ್ಸ್ ಚಾಲ್ರ್ಸ್ ಕೂಡ ಈ ಸಿಖ್ ರೆಜಿಮೆಂಟಿನ ಬೆಂಬಲಿಗರಾಗಿದ್ದರು.

ಸಿಖ್ ರೆಜಿಮೆಂಟ್‍ನ ಶೌರ್ಯವನ್ನು ತಮ್ಮ ಕಣ್ಣುಗಳಲ್ಲಿ ತುಂಬಿಕೊಂಡಿದ್ದ ಇಟಾಲಿಯನ್!!

ಮೇ 1999ರಲ್ಲಿ ಕುಲ್ವೀರ್ ಸಿಂಗ್ ಸಮ್ರಾ ಎನ್ನುವವರು ಇಟಲಿಗೆ ಅಧಿಕೃತವಾದ ಪ್ರವಾಸವನ್ನು ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಬಿಬಿಸಿ ನ್ಯೂಸ್‍ನ್ನು ನೋಡಿದಾಗ ಭಾರತೀಯ ವಾಯುಪಡೆಯು ಕಾರ್ಗಿಲ್‍ ಶಿಖರದ ಮೇಲೆ ಆಕ್ರಮಣವನ್ನು ಶುರುಮಾಡಿತ್ತು ಹಾಗೂ ಪಾಕಿಸ್ತಾನದೊಂದಿಗೆ ಪೂರ್ಣ ಪ್ರಮಾಣದ ಯುದ್ದದ ಭಯವನ್ನು ಭಿತ್ತರಿಸಿದೆ, ಎನ್ನುವ ಮಾಹಿತಿಯನ್ನು ಈ ಮೂಲಕ ತಿಳಿದುಕೊಂಡರು. ಅಲ್ಲದೇ ಪಾಕಿಸ್ತಾನದ ಒಳನುಸುಳುವಿಕೆಯು ಪೂರ್ಣಪ್ರಮಾಣದ ಯುದ್ದಕ್ಕಾಗಿ ಸುಸಜ್ಜಿತವಾಗಿದೆ ಎನ್ನುವುದನ್ನು ಕೂಡ ತಿಳಿದುಕೊಂಡರು. ಆ ಸಂದರ್ಭದಲ್ಲಿ ಕುಲ್ವೀರ್ ಸಿಂಗ್ ಸಮ್ರಾ ಅವರು ತಮ್ಮ ಸ್ನೇಹಿತನೊಂದಿಗೆ ಪ್ರವಾಸವನ್ನು ಆರಂಭಿಸಿ ಪ್ರಮುಖ ಕಂಪನಿಗಳ ಬೂತ್ಸ್‍ಗಳಿಗೆ ಭೇಟಿಯನ್ನು ಮಾಡಿದ್ದರು.

ಅಲ್ಲಿ ಒಬ್ಬ ಇಟಲಿಯನ್‍ನ ಅಂಗಡಿ ಮಾಲೀಕನನ್ನು ಕಂಡು ನೋಡಲು ಸ್ಟೈಲಿಶ್ ಆದ ವ್ಯಕ್ತಿಯಾಗಿದ್ದು, ಕಂದು ಶೂಗಳನ್ನು ಮತ್ತು ಕೆಂಪು ಗಾಲ್ಫ್ ಕ್ಯಾಪ್‍ನ್ನು ತೊಟ್ಟಿದ್ದರು. ಇವರನ್ನು ನೋಡಿದ ಇಟಲಿಯನ್ “ಪಾಕಿಸ್ತಾನ ಭಾರತವನ್ನು ಎಂದಿಗೂ ಸೋಲಿಸಲಾಗದು” ಎಂದರು!!

ಪ್ರತ್ಯುತ್ತರವಾಗಿ ಸಮ್ರಾ” ಓಹ್, ಹೌದು, ನಾವು ಒಂದು ದೊಡ್ಡ ಸೈನ್ಯವನ್ನು ಹೊಂದಿದ್ದೇವೆ” ಎಂದು ಹೇಳಿದರು.

ಇವರು ಉತ್ತರಿಸಿದ ಮರುಕ್ಷಣವೇ ಇಟಾಲಿಯನ್ ಹೇಳಿದ, ಭಾರತೀಯ ಸೇನೆ ದೊಡ್ಡದಾಗಿದೆ ಎಂದಲ್ಲ ನನ್ನ ಮಾತಿನ ಅರ್ಥ!! ಈ ಕ್ಷಣ ಸಮ್ರಾ ಅವರಿಗೆ
ಆಶ್ಚರ್ಯವಾಯಿತಲ್ಲದೇ ಕಾರಣವನ್ನು ಕಂಡುಕೊಳ್ಳಲು ಪುನಃ ಇಟಾಲಿಯನ್ ವ್ಯಕ್ತಿಯನ್ನು ಪ್ರಶ್ನಿಸಿದರು.

ಆಗ, ನಿಮಗೆ ಸಿಖ್‍ರ ಬಗ್ಗೆ ತಿಳಿದಿದೆಯೇ ಎಂದರು; ಸಮ್ರಾ ಸಿಖ್ ಆಗಿರುವುದರಿಂದ ಅವರು ಆಚ್ಚರಿಯನ್ನು ಕೂಡ ವ್ಯಕ್ತಪಡಿಸಿದ್ದರು!!!

ಇಟಲಿಯನ್‍ನ ಮುಂದಿನ ಉತ್ತರ ಸಮ್ರಾ ಮತ್ತವರ ಸ್ನೇಹಿತನನ್ನು ದಿಗ್ರಮೆಗೊಳಿಸಿತ್ತು!! ಹೌದು.. ಯಾಕೆಂದರೆ ಇಟಲಿಯನ್ ತಾನು ಕುಳಿತಿದ್ದ ಸ್ಥಳದಿಂದ ಎದ್ದುನಿಂತು, ತನ್ನ ಕೆಂಪು ಟೋಪಿಯನ್ನು ತೆಗೆದು ಇಟಲಿಯನ್ನರ ಬಲವಾದ ಉಚ್ಚರಣೆಯಲ್ಲಿ “ಸೆಲ್ಯೂಟ್” ಎಂದು ಹೇಳಿದರು.

ಯಾಕೆಂದರೆ ಭಾರತೀಯ ಸೈನ್ಯದ ಸಿಖ್ಖ ರೆಜಿಮೆಂಟ್ ಭಾರತದ ನೆರೆಹೊರೆಯ ಶತ್ರು ರಾಷ್ಟ್ರಗಳಲ್ಲಿ ಮಾತ್ರ ಜನಪ್ರಿಯವಾದುದಲ್ಲ!! ಈ ಬಗ್ಗೆ ಇಟಾಲಿಯನ್ನರು ಕೂಡ ಬಲವಾಗಿ ನಂಬಿದ್ದರು. ಹಾಗಾಗಿ ಇಟಾಲಿಯನ್ ಈ ಬಗ್ಗೆ ವಿವರಿಸಿದಾಗ, ಈ ವಿಷಯವನ್ನು ಆಲಿಸಿದ ಸಮ್ರಾ ಮತ್ತು ಅವನ ಸ್ನೇಹಿತ ಆಶ್ಚರ್ಯಚಕಿತರಾಗಿದ್ದು ಮಾತ್ರ ನಿಜ!!!

ಇಟಾಲಿಯನ್ನ ತನ್ನ ಮಾತನ್ನು ಮುಂದುವರೆಸುತ್ತಾ, ನನ್ನ ಅಜ್ಜ ಎರಡನೇ ವಿಶ್ವಯುದ್ದದ ಸಂದರ್ಭದಲ್ಲಿ ಮುಸೊಲಿನಿಯ ಸೈನ್ಯದಲ್ಲಿದ್ದರು. ಆ ಸಂದರ್ಭದಲ್ಲಿ
ಮುಸೊಲಿನಿ ಸೇನೆ ವಿಜಯೋತ್ಸವನ್ನು ಆಚರಿಸುವ ಅಂಚಿನಲ್ಲಿದ್ದಾಗ ಆ ಯುದ್ದ ಕ್ಷೇತ್ರಕ್ಕೆ ಒಂದು ರೆಜಿಮೆಂಟ್‍ನ(ದಳ) ಆಗಮನದಿಂದ ಇಡೀ ಸನ್ನಿವೇಶವೇ
ಬದಲಾಯಿತಂತೆ!! ಇಟಾಲಿಯನ್ ಸೈನಿಕರು ಈ ಭೀಕರ ಯೋಧರನ್ನು ಕಂಡು ನಡುಗಲು ಆರಂಭಿಸಿದರಂತೆ. ಯಾಕೆಂದರೆ ಈ ಯೋಧರು ಉಗ್ರಪ್ರಾಣಿಗಳಂತೆ
ವೀರಾವೇಶದಿಂದ ಹೋರಾಡಿ ಎಲ್ಲರನ್ನು ನಡುಕ ಉಂಟುಮಾಡಿಸಿದರು! ಇವರು ಬೇರಾರು ಅಲ್ಲ ಅದು “ಸಿಖ್ ರೆಜಿಮೆಂಟ್”!!

ಹೌದು…. ಈ ಉಗ್ರ ಸೈನಿಕರ ಯುದ್ದದ ಕೂಗು ತುಂಬಾ ಭಯಾನಕವಾಗಿತ್ತು. ಇದರಿಂದ ಎಲ್ಲರೂ ಭಯಭೀತರಾಗಿ ನಡುಗಲು ಆರಂಭಿಸಿದರಂತೆ. ರೆಜಿಮೆಂಟ್
ಫಿರಂಗಿದಳದ ಮೇಲೆ ಆಕ್ರಮಣ ಮಾಡಿತ್ತಲ್ಲದೇ ಬಂದೂಕುಗಳ ಮೂಲಕ ಫಿರಂಗಿಗಳನ್ನು ದಾಳಿ ಮಾಡಿ ಸುಟ್ಟು ಬೂದಿ ಮಾಡಿದರು. ಅಷ್ಟೇ ಅಲ್ಲದೇ ತಮ್ಮ
ಬಂದೂಕಿನಲ್ಲಿದ್ದ ಗುಂಡುಗಳು ಖಾಲಿಯಾದಾಗ ಕಥಾರಿಗಳ ಮೂಲಕ ವೀರಾವೇಶದಿಂದ ಹೋರಾಡಿದರು. ಈ ಕಥಾರಿಗಳು ಸವೆದುಹೋದಾಗ ಚೂರಿಗಳನ್ನು ಹಿಡಿದು ತಮ್ಮ ಎದುರಾಳಿಯೊಂದಿಗೆ ಹೋರಾಡಿದರು. ಅಂತಿಮವಾಗಿ ಇವುಗಳು ರಕ್ತಸ್ರಾವವಾಗುತ್ತಿದ್ದಾಗ ತಮ್ಮ ಕೈಗಳ ಮೂಲಕವೇ ಹೋರಾಡಿ ಶತ್ರುಗಳ ರುಂಡವನ್ನು ಚೆಂಡಾಡಿದರು!!

ಈ ಸಿಖ್ಖರ ವೀರಾವೇಶವನ್ನು ನಿರೂಪಿಸುವಲ್ಲಿ ಈ ಇಟಾಲಿಯನ್ನ ಹೆಚ್ಚು ಉತ್ಸುಕರಾಗಿದ್ದ! ಸಿಖ್ಖರು ಹೋದಲ್ಲೆಲ್ಲಾ ಯುದ್ದದ ಸನ್ನಿವೇಶವೇ ಬದಲಾಯಿತು ಮತ್ತು
ಇಟಾಲಿಯನ್ ಸೈನಿಕರನ್ನು ಹಿಂದೇಟು ಮಾಡುವಂತೆ ಮಾಡಿತು ಸಿಖ್ಖರ ರೆಜಿಮೆಂಟ್!!

ಅಂತಿಮವಾಗಿ ಇಟಾಲಿಯನ್‍ನ ಅಜ್ಜನನ್ನು ವಶಪಡಿಸಿಕೊಂಡರಲ್ಲದೇ ಯುದ್ದದ ಸ್ಥಳದಲ್ಲಿ ಖೈದಿ ಎಂದು ಪರಿಗಣಿಸಿ ಆತನನ್ನು ಸೆರೆಹಿಡಿದರು. ಆ ಸಿಖ್ ರೆಜಿಮೆಂಟ್‍ನ ಆಕ್ರಮಣ ಈಗಾಂದತೂ ಕಂಡುಬಂದಿಲ್ಲ. ವಾಸ್ತವವಾಗಿ ಅವರ ಖೈದಿಗಳು ರಕ್ಷಕರಂತೆ ಇದ್ದರು. ಆಹಾರವು ವಿರಳವಾಗಿದ್ದಾಗ, ಸಿಕ್ಖರು ಖೈದಿಗಳನ್ನೇ ಆಹಾರವಾಗಿ ನೀಡುತ್ತಿದ್ದರೂ ಆದರೆ ಸಿಖ್ಖರು ಖಾಲಿ ಹೊಟ್ಟೆಯಲ್ಲಿ ಮಲಗುತ್ತಿದ್ದರು. ಖೈದಿಗಳು ಸಿಖ್ಖರನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಿದ್ದರು. ಹಾಗಾಗಿ ಒಬ್ಬ ವ್ಯಕ್ತಿ ಮನುಷ್ಯನಾಗಬೇಕೆಂದು ಬಯಸಿದರೆ ಸಿಖ್‍ರನ್ನು ಭೇಟಿಯಾಗು ಎಂದು ಇಟಾಲಿಯನ್ ತನ್ನ ಅಜ್ಜನಿಂದ ಸಲಹೆಯನ್ನು ಪಡೆದಿದ್ದರು.

ಹಾಗಾಗಿ ಸಿಖ್ಖರನ್ನು ಭೇಟಿಯಾಗಲೆಂದೇ ಇಟಾಲಿಯನ್ ಭಾರತಕ್ಕೆ ಬಂದಿದ್ದರು. ಹಾಗಾಗಿ ಅವರು ಪಂಜಾಬ್‍ಗೆ ಬಂದು, ಪಂಜಾಬ್‍ನಲ್ಲಿದ್ದ ದೇವಾಲಯಗಳಿಗೆ ಭೇಟಿ ನೀಡಿ ಹಲವರೊಂದಿಗೆ ಸಂವಹನ ನಡೆಸಿದ್ದರು. ಆದರೆ ಇವರು ಸಿಖ್ ರೆಜಿಮೆಂಟ್‍ನ್ನು ನೋಡಲೆಂದೇ ಬಂದಿದ್ದರಿಂದ, ಇಟಾಲಿಯನ್ ದೆಹಲಿಯ ಪರೇಡ್‍ನಲ್ಲಿ ಭಾಗವಹಿಸಿದರು. ಅಲ್ಲಿ ಹೆಮ್ಮೆಯಿಂದ ಭಾರತೀಯ ಸೈನ್ಯವನ್ನು ನೋಡಿದ್ದಲ್ಲದೇ ಹಲವಾರು ರೆಜಿಮೆಂಟ್‍ಗಳನ್ನು ನೋಡಿದರು. ಅಂತಿಮವಾಗಿ ಈ ಇಟಾಲಿಯನ್ ನೋಡಲು ಬಯಸಿದ್ದ, ಸಿಖ್ ರೆಜಿಮೆಂಟ್‍ನ್ನು ನೋಡಿ ಬಹಳ ಹೆಮ್ಮೆಪಟ್ಟುಕೊಂಡರು!

ಈ ಪರೇಡ್‍ನಲ್ಲಿ ಸಿಖ್ಖರು ರಸ್ತೆಯ ಸುತ್ತಲೂ ಚಂಡಮಾರುತದಂತೆ ಚಲಿಸಿದ್ದು, ನೋಡಲು ತುಂಬಾ ಶಿಸ್ತುಬದ್ಧವಾಗಿ ಒಂದು ಘಟಕದಂತೆ ಚಲಿಸುತ್ತಿದ್ದರು. ಅಷ್ಟೇ ಅಲ್ಲದೇ ಇಟಾಲಿಯನ್, ಸಿಖ್ ಸೈನಿಕರ ಧೈರ್ಯಶಾಲಿ ಮತ್ತು ಕೆಚ್ಚೆದೆಯನ್ನು ಕಂಡರು!!! ಈ ಇಟಾಲಿಯನ್ ಜರ್ಮನ್ನರ, ರಷ್ಯನ್ನರ ಮೆರವಣಿಗೆಯನ್ನರು ಕಂಡಿದ್ದರಂತೆ ಆದರೆ ಸಿಖ್ಖರಂತೆ ಯಾವುದೂ ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿದರು.

ಅಂತಿಮವಾಗಿ ಇಟಾಲಿಯನ್ ಹೇಳಿದ, ” ಆದ್ದರಿಂದ, ನೋಡಿ ನನ್ನ ಸ್ನೇಹಿತರೇ.. ಸಿಖ್ಖರು ಹೋರಾಡುವವರೆಗೂ ಪಾಕಿಸ್ತಾನವು ಎಂದಿಗೂ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ” ಎಂದು!!

ಸಿಖ್ಖರು ಭಾರತದಲ್ಲಿ ಕೇವಲ 2% ಕೊಡುಗೆಗಳನ್ನು ನೀಡಿದರೆ, ಭಾರತೀಯ ಸೈನ್ಯದಲ್ಲಿ ಸಿಖ್ಖರು 10% ಕೊಡುಗೆಯನ್ನು ನೀಡಿದ್ದಾರೆ. ತಾವು ಮಾಡಿದ ಸಾಧನೆಗಳಿಗೆ ಸಿಖ್ ರೆಜಿಮೆಂಟ್ 2 ಪರಮವೀರಚಕ್ರವನ್ನು, 14 ಮಹಾವೀರ ಚಕ್ರವನ್ನು ಮತ್ತು 68 ವೀರ ಚಕ್ರಗಳನ್ನು ಪಡೆದುಕೊಂಡಿದ್ದಾರೆ. ಹೌದು.. ಸಿಖ್ಖರು ಯುದ್ದದಲ್ಲಿ ವೀರಾವೇಶದಿಂದ ಹೋರಾಡುವ ಪರಿಯನ್ನು ಇಡೀ ವಿಶ್ವವೇ ಹೊಗಳುತ್ತೆ ಎಂದರೆ ಭಾರತೀಯರಾದ ನಾವೇ ಭಾಗ್ಯಶಾಲಿಗಳು!!

– ಅಲೋಖಾ

ಮೂಲ:When Roman met the Sikhs!

Tags

Related Articles

Close