ಅಂಕಣ

ಪಾಕ್‍ನಿಂದ ಸ್ಫೋಟಕ ಮಾಹಿತಿಗಳನ್ನು ಭಾರತಕ್ಕೆ ಕಳಿಸಿದ್ದ ಈ ಸೀಕ್ರೆಟ್ ಏಜೆಂಟನ್ನು ಭಾರತದ ಕಾಂಗ್ರೆಸ್ ಸರಕಾರ ಯಾವ ರೀತಿ ನಡೆಸಿಕೊಂಡಿತ್ತೆಂದರೆ ನಿಮ್ಮ ಹೊಟ್ಟೆ ಉರಿಯಬಹುದು…!!!

ಬೇಹುಗಾರಿಕಾ ಸಂಸ್ಥೆ… ಒಂದು ದೇಶದ ರಕ್ಷಣೆಯಲ್ಲಿ ಬೇಹುಗಾರಿಕಾ ಸಂಸ್ಥೆಯ ಪಾತ್ರ ತುಂಬಾ ಹಿರಿದು. ಸೈನಿಕರು ಮುಖಾಮುಖಿ ಹೋರಾಟ ನಡೆಸಿದರೆ
ಬೇಹುಗಾರಿಕಾ ಏಜೆಂಟ್ ಮುಂದಾಗುವ ಅಪಾಯದ ಸನ್ನಿವೇಶವನ್ನು ಮುಂಚೆಯೇ ಗ್ರಹಿಸಿ ದೇಶದ ಮುಂದಿಡುತ್ತಾನೆ. ಇದು ನಿಜವಾಗಿಯೂ ಒಂದು ರೀತಿಯಲ್ಲಿ
ಅಪಾಯವನ್ನು ಮೈಗೆಳೆದುಕೊಂಡು ಮಾಡುವ ಕೆಲಸ. ಸ್ವಲ್ಪ ಏಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ತನ್ನ ಗುರುತು, ಪರಿಚಯ, ಚಹರೆಯನ್ನು ಮರೆಮಾಚಿ ಎಲ್ಲೋ ಒಂದು ಕಡೆ ಯಾರೋ ಆಗಿ ಅಪಾಯವನ್ನು ಮೈಗೆಳೆದುಕೊಂಡು ಬದುಕುವುದಿದೆಯಲ್ಲಾ ಅದಕ್ಕಿಂತಲೂ ಎಲ್ಲರನ್ನೂ ದೂರದಲ್ಲಿಟ್ಟು ಮನಸ್ಸಲ್ಲಿ ಮೂಡುವ
ಏಕತಾನತೆಯಿದೆಯಲ್ಲಾ ಅದನ್ನು ನಿವಾರಿಸುವುದರಲ್ಲೇ ಜೀವನ ಕಳೆದುಹೋಗಿಬಿಡುತ್ತದೆ.

ನಿವೃತ್ತಿಯವರೆಗೂ ಅನಾಮಧೇಯರಾಗಿಯೇ ಇವರ ಬದುಕು. ಭಾರತೀಯ ಸೇನೆಯಲ್ಲಿ ತಮ್ಮ ಪಾಡಿಗೆ ಕೆಲಸ ಮಾಡುತ್ತಾ ನಿಗೂಢವಾಗಿ ಬದುಕುವ ಬೇಹುಗಾರರ ಬದುಕಿನ ಚಿತ್ರಣವನ್ನು ಕೇಳುವಾಗ ಎದೆಯಲ್ಲಿ ಒಮ್ಮೆ ಪುಳಕವಾದರೆ ಮತ್ತೊಮ್ಮೆ ಹೃದಯ ನೋವಿನಿಂದ ಚೀತ್ಕರಿಸುತ್ತದೆ. ಇವರ ಬದುಕು ಏನಿದ್ದರೂ ಶತ್ರುಗಳ ನಡುವೆ. ಪರಿಚಯಸ್ಥರಿದ್ದರೆ ಅವರಿಂದ ತಪ್ಪಿಸಿಕೊಂಡು, ತಿರುಬೋಕಿಗಳಂತೆ ನಟಿಸುತ್ತಾ ಬದುಕಬೇಕಾದ ಗಹನವಾದ ಸನ್ನಿವೇಶ. ಮಾಹಿತಿ ಕಲೆ ಹಾಕಲು ಯಾವ ವೃತ್ತಿಗೂ ಇಳಿಯಬೇಕಾಗುತ್ತದೆ. ಒಟ್ಟಾರೆ ನೋಡುವುದಾದರೆ ತನ್ನ ವ್ಯಕ್ತಿತ್ವವನ್ನು ಮರೆಮಾಚಿ, ಹೊಸತಾದ ವ್ಯಕ್ತಿತ್ವವನ್ನು ಮೈಗಂಟಿಸಿಕೊಂಡು, ಗುರುತು ಪರಿಚಯ ಇಲ್ಲದ ಊರಲ್ಲಿ, ಯಾವುದೋ ಒಂದು ಹೆಸರಲ್ಲಿ ಬದುಕುವ ಬೇಹುಗಾರರ ಜೀವನ ವೃತ್ತಾಂತವೇ ಒಂದು ವಿಚಿತ್ರ.

ಇವರಲ್ಲಿರುವ ಅಪರಿಮಿತ ದೇಶಭಕ್ತಿಯೇ ಅಪ್ರತಿಮ ಸೇವೆಯನ್ನು ಮಾಡಲು ಪ್ರೇರೇಪಿಸುತ್ತದೆ. ಒಂತರಾ ಇದರಲ್ಲಿ ಥ್ರಿಲ್ ಇದೆ ಎಂದೂ ಹೇಳಬಹುದು. ಅದಕ್ಕಿಂತಲೂ ಮುಖ್ಯವಾಗಿ ಶತ್ರುದೇಶದಲ್ಲಿ ಶತ್ರುಗಳೊಂದಿಗೆ ಅಪ್ಯಾಯಮಾನವಾಗಿ ಬದುಕಿಕೊಂಡು ಗೂಢ ವಿಚಾರಗಳನ್ನು ಅರಿತುಕೊಂಡು ದೇಶಕ್ಕೆ ಕಳಿಸುತ್ತಾ ದೇಶದ ರಕ್ಷಣೆಗೆ ತಮ್ಮನ್ನು ತಾವೇ ಸಮರ್ಪಿಸಿಕೊಳ್ಳಬೇಕಾಗುತ್ತದೆ. ಈ ನಡುವೆ ಬದುಕಿದರೆ ಪುಣ್ಯ. ಸ್ವದೇಶಕ್ಕೆ ಮರಳಿದರೆ ತಾನು ಎಲ್ಲಿದ್ದೆ, ಏನು ಕೆಲಸ ಮಾಡಿಕೊಂಡಿದ್ದೆ ಎಂಬೆಲ್ಲಾ ವಿಚಾರಗಳನ್ನು ಬಾಯ್ಬಿಡದೆ, ತನ್ನ ಕೆಲಸದ ಬಗ್ಗೆ ಇನ್ನೊಬ್ಬರಲ್ಲಿ ಷಹಬ್ಬಾಸ್‍ಗಿರಿ ಪಡೆಯಲೂ ಸಾಧ್ಯವಾಗದೆ ಮತ್ತಷ್ಟು ನಿಗೂಢವಾಗಿಯೇ ಬದುಕಬೇಕಾಗುತ್ತದೆ.

ಒಂದು ವೇಳೆ ಶತ್ರುಸೈನಿಕರ ಕೈಗೆ ಸಿಕ್ಕಿಹಾಕಿಕೊಂಡರೆ ಪಡಬಾರದ ಯಾತನೆ, ಕಿರುಕುಳ, ಚಿತ್ರಹಿಂಸೆ ಅನುಭವಿಸಿ, ಹತ್ತಾರು ವರ್ಷಗಳ ಕಾಲ ಅಲ್ಲಿನ ಜೈಲಿನಲ್ಲಿ ಇಡೀ ಜೀವ, ಜೀವನವನ್ನೇ ಸವೆಸಿ, ಸ್ವದೇಶಕ್ಕೆ ಮರಳಲೂ ಆಗದೆ ಅಲ್ಲೇ ಸಾಯುವುದಿದೆಯಲ್ಲ ಅದಕ್ಕಿಂತ ದೊಡ್ಡ ಯಮಯಾತನೆ ಬೇರೊಂದಿಲ್ಲ. ಇಂಥದ್ದೇ ಒಂದು ದುರಂತಮಯ ಕಥೆಯೊಂದಿದೆ.. ಈ ಕಥೆಯನ್ನು ಕೇಳುವಾಗ ನಿಮ್ಮ ಹೃದಯನ್ನು ಮೀಟಿದಂತೆ ನೋವಾಗಬಹುದು. ಕಣ್ಣೀರು ಧಾರಾಕಾರವಾಗಿ ಸುರಿಯಬಹುದು… ಆರನೇ ಇಂದ್ರಿಯದ ಜೊತೆ ಕೆಲಸ ಮಾಡಿಕೊಂಡು ಆರನೇ ಇಂದ್ರಿಯ ಕೈಕೊಟ್ಟರೆ ಅಥವಾ ಆರನೇ ಇಂದ್ರಿಯ ಕೆಲಸ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ… ಇಂಥದೊಂದು ಅಪಾಯಕಾರಿ ಶತ್ರುರಾಷ್ಟ್ರ ಪಾಕಿಸ್ತಾನದಲ್ಲಿ ಪಾಕಿಸ್ತಾನಿಯನಂತೆ ಬದುಕಿ ಬೇಹುಗಾರಿಕೆ ನಡೆಸಿ ಭಾರತಕ್ಕೆ ಅಮೂಲ್ಯವಾದ ಮಾಹಿತಿಗಳನ್ನು ನೀಡುತ್ತಿದ್ದ ವ್ಯಕ್ತಿ ಆತ.

ಆತ ಬೇರ್ಯಾರೂ ಅಲ್ಲ ಮೋಹನ್‍ಲಾಲ್ ಭಾಸ್ಕರ್….!!!

ಪಾಕಿಸ್ತಾನದ ಲಾಹೋರ್‍ನಲ್ಲಿ ಬೇಹುಗಾರರಾಗಿ ಕೆಲಸ ಮಾಡಿಕೊಂಡಿರುತ್ತಿದ್ದ ಮೋಹನ್‍ಲಾಲ್ ಅವರು ಪಾಕಿಸ್ತಾನ ಅನೇಕ ಸ್ಫೋಟಕ ಮಾಹಿತಿಗಳನ್ನು ಭಾರತಕ್ಕೆ ರವಾನಿಸುತ್ತಲೇ ಇದ್ದರು. ಆದರೆ ಅದೃಷ್ಟ ಕೈಕೊಟ್ಟ ಕಾರಣ 1970ರಲ್ಲಿ ಪಾಕ್ ಸೈನಿಕರಿಗೆ ಸಿಕ್ಕಿಬಿದ್ದು, 12 ವರ್ಷಗಳ ಕಾಲ ಅಲ್ಲಿನ ಜೈಲಿನಲ್ಲಿ ಕಾಲ ಕಳೆದಿದ್ದರು. ಜೈಲಿನಲ್ಲಿ ಅನುಭವಿಸಿದ ಶಿಕ್ಷೆ, ಹಿಂಸೆಯನ್ನು ಅನುಭವಿಸಿ 1984ರಲ್ಲಿ ಬಿಡುಗಡೆಗೊಂಡು ಭಾರತಕ್ಕೆ ವಾಪಸ್ ಆಗಿದ್ದಾರೆ. ಅವರ ವೃತ್ತಿ ಜೀವನದ ಅನುಭವವೇ ರೋಚಕ.

`ರಾ’ ಎನ್ನುವ ಗುಪ್ತಚರ ಸಂಸ್ಥೆಯಲ್ಲಿ ಮೋಹನ್‍ಲಾಲ್ ಭಾಸ್ಕರ್ ಅವರಿಗೆ ಪಾಕಿಸ್ತಾನದಲ್ಲಿ ಬೇಹುಗಾರನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಪಾಕಿಸ್ತಾನದ ಗಡಿದಾಟಿ ಲಾಹೋರ್‍ಗೆ ಹೋಗಬೇಕಿತ್ತು. ಆದರೆ ಗಡಿದಾಟುವುದು ಅಷ್ಟು ಸುಲಭವಾಗಿರಲಿಲ್ಲ. ಗಡಿಯಲ್ಲಿ ಪಹರೆಕಾಯುವ ಪಾಕಿ ಸೈನಿಕರ ಕೈಗೆ ಬಿದ್ದರೆ ಮಟಾಶ್ ಆಗಬಹುದು. ಅದಕ್ಕಾಗಿ ಮೋಹನ್‍ಲಾಲ್ ಭಾಸ್ಕರ್ ಮಾಡಿದ ಕೆಲಸವೇನು ಗೊತ್ತೇ? ಗುಡ್ಡದಲ್ಲಿ ಹಾವುಗಳನ್ನು ಹಿಡಿದು ಜೋಳಿಗೆಯಲ್ಲಿ ಹಾಕಿಕೊಂಡು ಬಂದಿದ್ದ ಮೋಹನ್‍ಲಾಲ್ ಅವರು ಅದನ್ನು ಯಾರಿಗೂ ಗೊತ್ತಾಗದಂತೆ ಪಾಕ್ ಸೈನಿಕರತ್ತ ಬಿಟ್ಟು ಪೊದೆಯಲ್ಲಿ ಅವಿತುಕೊಂಡರು. ಹಾವುಗಳನ್ನು ಕಂಡ ಪಾಕಿಸೈನಿಕರು ಎದ್ದೆನೋ ಬಿದ್ದೆನೋ ಎಂದು ಅಲ್ಲಿಂದ ಕಂಬಿಕಿತ್ತರು. ಇದೇ ಸುಸಂದರ್ಭವನ್ನು ಬಳಸಿಕೊಂಡ ಮೋಹನ್ ಅವರು ಪಾಕಿಸ್ತಾನದ ಗಡಿದಾಟಿ ನುಗ್ಗಿಯೇ ಬಿಟ್ಟಿದ್ದರು.

ಮೋಹನ್‍ಲಾಲ್ ಭಾಸ್ಕರ್ ಅವರಿಗೆ ಪಾಕಿಸ್ತಾನದಲ್ಲಿ ವಹಿಸಿದ್ದ ಕೆಲಸವೇನು ಗೊತ್ತೇ?

ಪಾಕಿಸ್ತಾನದ ಅಣುವಿಜ್ಞಾನಿ ಖಾದಿರ್ ಖಾನ್ ರಾಲವಲ್ಪಿಂಡಿಯ ಕಹುತಾ ಎಂಬಲ್ಲಿ ಪರಮಾಣು ಬಾಂಬ್ ತಯಾರಿಸಲು ಮುನ್ನುಡಿ ಬರೆದಿದ್ದ. ಇದನ್ನು ದೃಢೀಕರಿಸಿ ಅದರ ಸಮಗ್ರ ಮಾಹಿತಿಯನ್ನು ಪಡೆದು ಅಣುಸ್ಥಾವರವನ್ನೇ ಉಡೀಸ್ ಮಾಡಬೇಕೆನ್ನುವುದು ರಾ ದ ಪ್ಲಾನ್ ಆಗಿತ್ತು. ಅದಕ್ಕಾಗಿ ಯಾವ ರಿಸ್ಕ್ ತೆಗೆದುಕೊಳ್ಳಲೂ
ಮೋಹನ್‍ಲಾಲ್ ಭಾಸ್ಕರ್ ರೆಡಿ ಇದ್ದರು.

ಮೋಹನ್‍ಲಾಲ್ ಭಾಸ್ಕರ್ ಅವರು ಪಾಕಿಸ್ತಾನದ ಪರಮಾಣು ಯೋಜನೆಗಳನ್ನು ಪಡೆದಿದ್ದರು. ರಾವಲ್ಪಿಂಡಿಯ ಕಹುತಾ ಎಂಬಲ್ಲಿ ಈ ಸ್ಥಾವರ ನಿರ್ಮಾಣ ಕಾರ್ಯ
ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಇವರ ಜೊತೆ ಇನ್ನು ಕೆಲವು ಬೇಹುಗಾರರಿದ್ದರು. ಖಾದಿರ್‍ಖಾನ್ ಸೇರಿ ಹಲವು ವಿಜ್ಞಾನಿಗಳು ಸೆಲೂನ್‍ಗೆ ಹೋಗಿದ್ದ ಸ್ಥಳದಿಂದ ರಹಸ್ಯವಾಗಿ ಕೂದಲನ್ನು ತಂದು ಭಾರತಕ್ಕೆ ಕಳುಹಿಸಿದ್ದರು. ಅದರಲ್ಲಿ ಪಾಕಿಸ್ತಾನ ಫ್ಲುಟೋನಿಯಂ ಪರಮಾಣು ತಯಾರಿಸುವುದನ್ನು ಪತ್ತೆಹಚ್ಚಲಾಗಿತ್ತು. ಇದನ್ನು `ಆಪರೇಷನ್ ಕಹುತಾ’ ಎಂದೇ ಕರೆಯಲಾಗಿದೆ.

ಮೋಹನ್‍ಲಾಲ್ ಭಾಸ್ಕರ್ 1968ರ ಜೂನ್‍ನಲ್ಲಿ ಮೊದಲ ಬಾರಿಗೆ ಪಾಕ್ ವಿಜ್ಞಾನಿಗಳು ಅಣುವನ್ನು ಬೇಧಿಸಿರುವುದನ್ನು ಭಾರತಕ್ಕೆ ವರದಿ ಸಲ್ಲಿಸಿದ್ದರು. ಈ ಘಟನೆಯ ಎಲ್ಲ ಮಾಹಿತಿಯನ್ನು, ಖಾದಿರ್ ಖಾನ್‍ನ ವೈಯಕ್ತಿಕ ಹಿನ್ನೆಲೆಯನ್ನು ಸಂಗ್ರಹಿಸಿ ಅವನ್ನೆಲ್ಲ ಮೈಕ್ರೋ ಫಿಲ್ಮ್ ಮಾಡಿ ಅದನ್ನು ಫುಟ್‍ಬಾಲ್‍ನಲ್ಲಿ ಹಾಕಿ ಕಾಲಿನಲ್ಲಿ ಒದ್ದು, ಭಾರತೀಯ ದೂತಾವಾಸದ ಅಧಿಕಾರಿ ಮನೆಯ ಹಿತ್ತಲಿನಲ್ಲಿ ಬೀಳುವಂತೆ ಮಾಡಿ ಅವನ ಮೂಲಕ ಭಾರತಕ್ಕೆ ರವಾನಿಸಿದ್ದರು. ಇದರ ಜೊತೆಗೆ ಪಾಕಿಸ್ತಾನದ ಅಣ್ವಸ್ತ್ರ ತಯಾರಿಕೆಯ ಪ್ರಯೋಗ ಶಾಲೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡಿ ಸುಮಾರು ನಾಲ್ಕು ತಿಂಗಳು ಅಲ್ಲಿನ ಪ್ರತಿಯಾಂದು ಮಾಹಿತಿಯನ್ನೂ ಭಾರತಕ್ಕೆ ಕಳುಹಿಸುತ್ತಿದ್ದರು.

ಪಾಕಿಸ್ತಾನದಂಥಾ ಶತ್ರು ನೆಲದಲ್ಲಿ ಕುಳಿತು ಶತ್ರುಗಳಿಗೆ ತನ್ನ ಮೇಲೆ ಯಾವುದೇ ಗುಮಾನಿ ಬಾರದಂತೆ ತಾನೊಬ್ಬ ಪಾಕ್ ಪ್ರಜೆಯಂತೆ ಬದುಕುವುದಿದೆಯಲ್ಲಾ
ಅದಕ್ಕಿಂತ ದಿವ್ಯ ಸಾಹಸ ಇನ್ನೊಂದಿಲ್ಲ. ಗುಪ್ತಚರ ಮಾಹಿತಿಗಾಗಿ ಬಹುಕೃತ ವೇಷವನ್ನೂ ಧರಿಸಲು ಮೋಹನ್‍ಲಾಲ್ ತಯಾರಿದ್ದರು. ಪಾಕಿಸ್ತಾನದ ಗಡಿ ದಾಟಿ
ಭಾರತಕ್ಕೆ ಬರುವ ಸಂದರ್ಭದಲ್ಲೆಲ್ಲಾ ಅವರು ಗಡಿ ಭಾಗದಲ್ಲಿ ಮೊದಲಿನಂತೆಯೇ ಹಾವುಗಳನ್ನು ಬಿಟ್ಟು ಸೈನಿಕರನ್ನು ದಿಕ್ಕಾಪಾಲಾಗಿ ಓಡಿಸಿ ಭಾರತಕ್ಕೆ ಕಾಲಿಡುತ್ತಿದ್ದರು. ಒಮ್ಮೆ ಎಡವಟ್ಟಿನಿಂದಾಗಿ ತಾವು ಬಿಟ್ಟ ಹಾವು ತನಗೇ ಕಚ್ಚಿ ಪ್ರಜ್ಞೆ ಕಳೆದುಕೊಂಡಿದ್ದ ಮೋಹನ್‍ಲಾಲ್‍ಗೆ ಬುಡಕಟ್ಟು ಜನಾಂಗದವರು ಗಿಡಮೂಲಿಕೆ ಔಷಧ ಕೊಟ್ಟು ಬದುಕಿಸಿದ್ದರು. ಕೆಲವೊಮ್ಮೆ ದನಗಾಹಿಯಾಗಿ ಗಡಿದಾಟಿ ಬಂದಿದ್ದರು. ಪಾಕ್ ಗಡಿಯಲ್ಲಿ ಮಿಲಿಟರಿ ಕಾರ್ಯಾಚರಣೆ ತೀವ್ರವಾಗಿದ್ದ ಸಂದರ್ಭದಲ್ಲೂ ಮೋಹನ್‍ಲಾಲ್ ಧೈರ್ಯದಿಂದ ಗಡಿದಾಟಿ ಬರುತ್ತಿದ್ದರೆಂದರೆ ಅವರ ಸಾಹಸ ಎಂಥದ್ದು ಎನ್ನುವುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಶತ್ರುಗಳ ಬಲಹೀನತೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಯಶಸ್ವಿಯಾಗಿ ಪಾಕಿಸ್ತಾನದ ಬೇಹುಗಾರಿಕೆ ನಡೆಸಿದ್ದರು. ಆಪರೇಷನ್ ಕಹುತಾ ಯಶಸ್ವಿಯಾಗಿ ಇನ್ನೇನು ಪರಮಾಣು ಸ್ಥಾವರನ್ನು ಧ್ವಂಸ ಮಾಡಲು ಸಿದ್ಧರಾಗಿದ್ದರೂ ಅಂದು ಭಾರತದ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿಯವರು ಅವಕಾಶ ಕೊಡದ ಕಾರಣ ಇಂದು ಪಾಕಿಸ್ತಾನದ ಕೈಯ್ಯಲ್ಲಿ ಪರಮಾಣು ಬಾಂಬ್ ಇದ್ದು ಅದರಿಂದ ಇಡೀ ವಿಶ್ವಕ್ಕೆ ಬೆದರಿಕೆಯಾಗಿದೆ. ಅವರು ಅಡ್ಡಿಪಡಿಸದೇ ಇದ್ದಿದ್ದರೆ ಇಂದು ಪಾಕಿಸ್ತಾನದ ಕೈಯ್ಯಲ್ಲಿ ಪರಮಾಣು ಅಸ್ತ್ರವೇ ಇರುತ್ತಿರಲಿಲ್ಲ. ಕೇವಲ ಮೂರು ವರ್ಷಗಳಲ್ಲಿ 16 ಬಾರಿ ಗಡಿದಾಟಿದ್ದ ಮೋಹನ್‍ಲಾಲ್ 17ನೇ ಬಾರಿ ಪಾಕಿಸ್ತಾನದ ಗಡಿ ದಾಟುವಾಗ ಸಿಕ್ಕಿಬಿದ್ದಿದ್ದರು. ಚಿಕ್ಕದೊಂದು ಎಡವಟ್ಟಿನಿಂದಾಗಿ ಈ ರೀತಿ ಆಯಿತೇ ಹೊರತು ಇಲ್ಲವಾದರೆ ಯಶಸ್ವಿಯಾಗಿ ಗಡಿ ದಾಟಿರುತ್ತಿದ್ದರು.

ಪಾಕಿಸ್ತಾನದ ಮಿಲಿಟರಿ ಬಗೆಗಿನ ಅಮೂಲ್ಯ ಮಾಹಿತಿಗಳ ಕಾಗದ ಪತ್ರಗಳನ್ನು ಜೋಳಿಗೆಯಲ್ಲಿ ತುಂಬಿಸಿಕೊಂಡು ಭಾರತಕ್ಕೆ ಬರಲು ಸನ್ನದ್ಧರಾಗಿದ್ದರು
ಮೋಹನ್‍ಲಾಲ್. ಲಾಹೋರಿನ ಜಮೀನ್ದಾರಾ ಹೋಟೆಲ್‍ನಲ್ಲಿ ಸಾಂಬಾರು ವ್ಯಾಪಾರಿಯಾಗಿದ್ದ ಮೋಹನ್‍ಲಾಲನ ಚಲನವಲಗಳಲ್ಲಿ ವ್ಯತ್ಯಾಸವನ್ನು ಕಂಡುಕೊಂಡ ಸೈನಿಕರು ಬಂಧಿಸಿ ಜೈಲಿಗಟ್ಟಿದ್ದರು. ಈವಾಗ ಅವರಿಗೆ ಎಷ್ಟೊಂದು ಹಿಂಸೆ ಕೊಟ್ಟಿದ್ದರೆಂದರೆ ಯಮಯಾತನೆ ಅನುಭವಿಸಿದ್ದರು. ಬೆರಳುಗಳ ಉಗುರುಗಳನ್ನು ಕಿತ್ತಿದ್ದರು. ಪ್ರತೀದಿನ ಬಾಸುಂಡೆ ಬರುವಂತೆ ಹೊಡೆಯುತ್ತಿದ್ದರು. ಪ್ರತೀದಿನ ವಿಚಾರಣೆ, ಪ್ರತೀದಿನ ಶಿಕ್ಷೆ… ಇವರ ಜೊತೆ ಬಂಧಿಯಾಗಿದ್ದ ಉಳಿದ ಬೇಹುಗಾರರು ಇವರ ಕಣ್ಣಮುಂದೆಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದರು. ತಾನು ಲಾಹೋರಿನಿಂದ ಭಾರತಕ್ಕೆ ಬರಲು ಒಂದು ದಿನ ಮುಂದೂಡಿರುವುದೇ ಅವರ ಬಂಧನಕ್ಕೆ ಕಾರಣವಾಗಿತ್ತು ಎನ್ನುವುದೇ ವಿಪರ್ಯಾಸ. ಈ ಎಡವಟ್ಟಿನಿಂದಾಗಿ ಅವರು ಬರೋಬ್ಬರಿ 12 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಕತ್ತಲ ಕೋಣೆಯಲ್ಲಿ ನರಕಯಾತನೆ ಅನುಭವಿಸಬೇಕಾಯಿತು.

ಹನ್ನೆರಡು ವರ್ಷ ಶಿಕ್ಷೆ ಮುಗಿಸಿ ವಾಪಸ್ ಬಂದಾಗ ಅವರ ಮಗ ಖಾಯಿಲೆಯಿಂದ ಮೃತಪಟ್ಟಿದ್ದ. ಸಂಸಾರದ ನೊಗ ಸಾಗಿಸಲು ಅವರ ಪತ್ನಿ ಯಾರ್ಯಾರದೋ
ಮನೆಯ ಮುಸುರೆ ತೊಳೆಯಬೇಕಾಯಿತು. ಅವರ ವೃದ್ಧ ತಂದೆ ತಾಯಿ ಮಗನ ಕೊರಗಿನಿಂದ ನಿತ್ರಾಣಗೊಂಡಿದ್ದರು. ಇವರನ್ನು ಕೇಳುವ ಸ್ಥಿತಿ ಯಾರಲ್ಲೂ ಇರಲಿಲ್ಲ. ಯಾವ ದೇಶದ ರಕ್ಷಣೆಗಾಗಿ ಮೋಹನ್‍ಲಾಲ್ ಹೋರಾಡಿದ್ದರೋ ಅದೇ ದೇಶದ ಸರಕಾರದ ನಿರ್ಲಕ್ಷ್ಯದಿಂದ ಸರಕಾರ ಯಾವ ನೆರವನ್ನೂ ನೀಡದೆ ಕಣ್ಣುಮುಚ್ಚಿಕೊಂಡು ಕುಳಿತಿತ್ತು.

ಬರೋಬ್ಬರಿ 12 ವರ್ಷಗಳ ಜೈಲುಶಿಕ್ಷೆ ಅನುಭವಿಸಿ ಭಾರತಕ್ಕೆ ಆಗಮಿಸಿದ್ದ ಮೋಹನ್‍ಲಾಲ್‍ಗೆ ಮತ್ತೊಂದು ಶಾಕ್ ಕಾದಿತ್ತು.

ಯಾಕೆಂದರೆ ತಾನು ಕಾರ್ಯನಿರ್ವಹಿಸುತ್ತಿದ್ದ ಶಿಬಿರದತ್ತ ಕಾಲು ಇಟ್ಟರೆ ಅಲ್ಲಿ ಇವರನ್ನು ಯಾರು ನೀನು ಕೇಳಿದ್ದರು. ಅವರ ಗುರುತು ಹಿಡಿಯುವವರೂ ಯಾರೂ
ಇರಲಿಲ್ಲ. ಇವರ ಓರಗೆಯಲ್ಲಿ ಕೆಲಸ ಮಾಡಿಕೊಂಡಿದ್ದ ಅಧಿಕಾರಿ ನಿವೃತ್ತರಾಗಿದ್ದರು. ಬೇಹುಗಾರನಾಗಿ ಯಾವ ರೀತಿ ಅಜ್ಞಾತವಾಗಿ ಬದುಕಿದ್ದರೋ ಅದೀಗ ಅಕ್ಷರಶಃ ನಿಜವಾಗಿ ಜನರೇ ಇವರನ್ನು ಮರೆತುಬಿಟ್ಟಿದ್ದರು. ಒಂದು ವೇಳೆ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದರೆ ಕುಟುಂಬ ನಿರ್ವಹಣೆಗಾಗಿ ಐವತ್ತು ಸಾವಿರ ರೂ.ಗಳನ್ನು ನೀಡುವುದಾಗಿ ಮೇಲಧಿಕಾರಿಗಳು ನುಡಿದಿದ್ದರು. ಆದರೆ ಆ ಹಣಕ್ಕಾಗಿ ಅವರ ಪತ್ನಿ ಸಾಕಷ್ಟು ಅಲೆದಾಡಿದ್ದರೂ ಅದನ್ನು ತೆಗೆಸಿಕೊಡುವ ಇಚ್ಛಾಶಕ್ತಿಯನ್ನು ಯಾರೂ ಕೂಡಾ ತೋರಿಸಲಿಲ್ಲ.

ಕೊನೆಗೆ ಅವರ ಪತ್ನಿ ಆದದ್ದು ಆಗಲಿ ಎಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಬಳಿ ತೆರಳಿ ತನ್ನ ನೋವು ತೋಡಿಕೊಂಡರು. ಇದಾದ ಬಳಿಕ ಬರೇ ಎರಡು ಸಾವಿರ ನೀಡಿ ಕೈತೊಳೆದುಕೊಂಡು ಬಿಟ್ಟ ಕಾಂಗ್ರೆಸ್ ಸರಕಾರ ಅವರ ನೋವನ್ನು ಕೇಳಲೇ ಇಲ್ಲ. ಭಾಸ್ಕರ್ ಬದುಕಿದ್ದಾರೋ ಸತ್ತಿದ್ದಾರೋ ಎಂದು ಹೇಳುವವರೂ ಇರಲಿಲ್ಲ. ಹಣದ ಬಗ್ಗೆ ಕೇಳಿದಾಗ ಅವರನ್ನು ಗದರುತ್ತಿದ್ದರು. ದೇಶಕ್ಕಾಗಿ ಪ್ರಾಣವನ್ನೇ ಒತ್ತೆ ಇಟ್ಟಿದ್ದ ವೀರಸೈನಿಕನೊಬ್ಬನನ್ನು ಇಡೀ ದೇಶವೇ ಮರೆತುಬಿಟ್ಟಿತ್ತು. ಪಾಕಿಸ್ತಾನದಲ್ಲಿ ಸಿಗುತ್ತಿದ್ದ ಶಿಕ್ಷೆ ಕೂಡಾ ಇಷ್ಟು ನೋವನ್ನು ಕೊಡುತ್ತಿರಲಿಲ್ಲ.. ಭಾರತಕ್ಕೆ ಕಾಲಿಟ್ಟ ಬಳಿಕ ತನಗೆ ಸಿಗಬೇಕಿದ್ದ ಹಣವನ್ನೂ ಕೊಡಲು ಭಾರತ ತಯಾರಿರಲಿಲ್ಲ ಅಂದರೆ ಎಷ್ಟೊಂದು ನೋವಿನ ವಿಚಾರ…

ಕೊನೆಗೊಂದು ದಿನ ಮೋಹನ್‍ಲಾಲ್ ಅವರು ತನ್ನ ಧೈರ್ಯ ಸಾಹಸ, ಆ ಬಳಿಕ ಉಂಟಾದ ನೋವನ್ನು ಪುಸ್ತಕ ರೂಪದಲ್ಲಿ ಬರೆದರು. ಆ ಪುಸ್ತಕದ ಹೆಸರು `under the shadow of bayonets and bars, An Indian Spy in Pakistan.’ ಈ ಪುಸ್ತಕದಲ್ಲಿ ಮೋಹನ್‍ಲಾಲ್ ಅವರ ಅಮೋಘ ಧೈರ್ಯ,
ಸಾಹಸ ಇಡೀ ಜಗತ್ತಿಗೇ ಪರಿಚಯಗೊಂಡಿತು. ಈ ಪುಸ್ತಕ ಅವರಿಗೆ ಸಾಕಷ್ಟು ಹೆಸರನ್ನು ತಂದಿತ್ತಲ್ಲದೆ, ಸಾಕಷ್ಟು ಹಣವನ್ನೂ ತಂದುಕೊಟ್ಟಿತು. ಮೋಹನ್‍ಲಾಲ್‍ಗೆ ತನ್ನ ಕಾರ್ಯದ ಬಗ್ಗೆ ಇಂದಿಗೂ ಹೆಮ್ಮೆ ಇದೆ.

ಆದರೆ ಇನ್ನೊಂದು ನೋವಿನ ವಿಚಾರವೆಂದರೆ, ಮೋಹನ್‍ಲಾಲ್‍ನಂಥಹಾ ಅದೆಷ್ಟು ಮಂದಿ ಬೇಹುಗಾರರು ತನ್ನ ವೃತ್ತಿಜೀವನದಲ್ಲಿ ಎಷ್ಟು ನೋವನ್ನನುಭವಿಸಿದ್ದಾರೋ ಯಾರಿಗೆ ಗೊತ್ತು. ಯಾಕೆಂದರೆ ಅವರೆಲ್ಲಾ ಇಂದಿಗೂ ನಮ್ಮಿಂದ ಅಜ್ಞಾತವಾಗಿರಬಹುದು. ಆದರೆ ಹೆಮ್ಮೆಯ ವಿಚಾರವೆಂದರೆ ಜೇಮ್ಸ್‍ಬಾಂಡ್ ಸಿನಿಮಾವನ್ನೂ ಮೀರಿಸುವ ರೀತಿಯಲ್ಲಿ ಬೇಹುಗಾರಿಕೆ ನಡೆಸಿ ಹೆಸರು ಪಡೆದ ಅಜಿತ್‍ಧೋವಲ್ ಇಂದು ನರೇಂದ್ರ ಮೋದಿ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಮ್ಮ ದೇಶಕ್ಕೆ ಸೇವೆ ಸಲ್ಲಿಸುವ ಸೈನಿಕರು, ಬೇಹುಗಾರರು ನಮ್ಮ ದೇಶದ ಹೆಮ್ಮೆ.. ಅವರಿಗೆ ನಾವು ಗೌರವವನ್ನು ಕೊಡಲೇಬೇಕು…

-ಚೇಕಿತಾನ

Tags

Related Articles

Close