ಪ್ರಚಲಿತ

ಪಾಪಿಸ್ತಾನದಲ್ಲಿ ಸ್ವರ್ಗವನ್ನು ಕಂಡ ರಮ್ಯಾ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳು.. ಇನ್ನಾದರೂ ನಿಮ್ಮ ಮೇಲೆ ಮೊಟ್ಟೆಗಳು ಬೀಳದಿರಲಿ… ನಿಮ್ಮ ನಾ….

ಪಾಕಿಸ್ತಾನ ನಿಜವಾಗಿಯೂ ಸ್ವರ್ಗ, ಆದರೆ ಮಂಗಳೂರು ನರಕ ಎಂದಿರುವ, ಕಾಂಗ್ರೆಸ್‍ನ ಜಾಲತಾಣದ ಮುಖ್ಯಸ್ಥೆ, ಸ್ಯಾಂಡಲ್‍ವುಡ್ ನಟಿ ರಮ್ಯಾ ಅಲಿಯಾಸ್
ದಿವ್ಯಸ್ಪಂದನ ಅವರಿಗೆ 35ನೇ ಹುಟ್ಟು ಹಬ್ಬದ ಶುಭಾಷಯಗಳು… ನಿಮ್ಮ ಅವಧಿಯಲ್ಲಿ ಭಾರತದಲ್ಲಿ ಕಾಂಗ್ರೆಸ್ ಮುಕ್ತಗೊಂಡು ಕುಟುಂಬ ರಾಜಕಾರಣಕ್ಕೆ ಅಂಕಿತ
ಬೀಳಲಿ, ಇನ್ನಾದರೂ ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಒಂದೊಳ್ಳೆ ಮಾತುಗಳು ನಿಮ್ಮ ಬಾಯಲ್ಲಿ ಬಾಯಲ್ಲಿ ಬರಲಿ ಎಂದು ನಮ್ಮ ಹಾರೈಕೆ.

ಹೆಂಗಿದ್ದಿರಿ ಮ್ಯಾಡಂ ನೀವು… ಕರ್ನಾಟಕದಲ್ಲಿ ಚಿತ್ರ ಮಾಡ್ಕೊಂಡು ಹಾಯಾಗಿದ್ರಿ. ಕರ್ನಾಟಕದ ಜನರ ಮನೆಮಾತಾಗಿದ್ದ ನಿಮ್ಮ ಚಿತ್ರಗಳನ್ನು ನೋಡಲು ಜನರು
ಮುಗಿಬೀಳುತ್ತಿದ್ದಿರಿ. ಆದರೆ ನಿಮಗೆ ಕಾಂಗ್ರೆಸ್‍ಗೆ ಸೇರಿ ಸೋನಿಯಾಗಾಂಧಿ, ರಾಹುಲ್ ಗಾಂಧಿನ ಸೇವೆ ಮಾಡ್ಕೊಳ್ಳಬೇಕೆಂಬ ತುಡಿತವುಂಟಾಯಿತು. ಅದಕ್ಕಾಗಿ ನೀವು ಮಂಡ್ಯದಲ್ಲಿ ಎಲೆಕ್ಷನ್‍ನಲ್ಲಿ ಒಮ್ಮೆ ಗೆದ್ದು ಮತ್ತೊಮ್ಮೆ ಸೋತು ಬಿಟ್ರಿ. ನಿಮ್ಮ ಸೇವಾ ಮನೋಭಾವನೆಯನ್ನು ಕಂಡು ಸೋನಿಯಾ ಗಾಂಧಿ ಆಫ್ ಕಾಂಗ್ರೆಸ್
ಪಾರ್ಟಿಯವರು ನಿಮ್ಮನ್ನು ಜಾಲತಾಣಗಳ ಮುಖ್ಯಸ್ಥೆಯನ್ನಾಗಿ ಮಾಡಿದರು. ಆಮೇಲೆ ನೀವು ಟ್ವೀಟಿಸಿದ್ದೇ ಟ್ವೀಟಿಸಿದ್ದು. ನಿಮ್ಮ ಟ್ವೀಟ್‍ನಿಂದ ಕಾಂಗ್ರೆಸ್‍ಗೆ ಸಾಕಷ್ಟು ಲಾಭವಾಯಿತಾ? ಆದ್ರೆ ಟ್ವಿಟ್ಟಿಗರು ಮಾತ್ರ ನಿಮ್ಮ ಕಾಲೆಳೆದುಕೊಂಡು ಬಿಟ್ರು. ಜನರಿಗಂತೂ ಪುಕ್ಕಟೆ ಮನೋರಂಜನೆ ಜೊತೆಗೆ ನಿಮ್ಮ ಮೇಲೆ ಸಿಟ್ಟು, ಆಕ್ರೋಶ ಉಂಟಾಯಿತು…

ರಾಹುಲನ ಕೃಪೆಯಿಂದ ರಾಷ್ಟ್ರನಾಯಕಿಯಾಗಿ ಹೊರಹೊಮ್ಮಿದ್ದ ತಾವುಗಳು ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯದತ್ತ ತಲೆ ಹಾಕಿದ್ದೀರಿ. ರಾಷ್ಟ್ರ
ರಾಜಕಾರಣದಲ್ಲಿ ತೊಡಗಿದ್ದ ತಾವುಗಳು ಇದೀಗ ರಾಜ್ಯ ರಾಜಕಾರಣಕ್ಕೆ ಬಂದಿದ್ದೀರಲ್ಲಾ… ದೊಡ್ಡ ಹುದ್ದೆಯನ್ನು ತೊರೆದುಬಿಟ್ಟಿರಾ? ನಿಮ್ಮ ರಾಜ್ಯ ಪ್ರವೇಶದಿಂದ ಅತ್ತ ಅಂಬರೀಶ್‍ಗೆ ಚಿಂತೆ ಶುರುವಾಗಿದೆಯಂತೆ ಹೌದೇ? ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡ ನಿಮ್ಮನ್ನು ಹೇಗಾದರೂ ಮಾಡಿ ರಾಜ್ಯದಲ್ಲಿ
ಗೆಲ್ಲಿಸಲೇಬೇಕೆಂಬ ಅನಿವಾರ್ಯತೆಗೆ ನಮ್ಮ ಸಿದ್ದರಾಮಯ್ಯ ಸಿಲುಕಿದ್ದಾರೆ. ಸಿದ್ದರಾಮಯ್ಯರನ್ನು ಸುಮ್ನೆ ಪೀಕಲಾಟಕ್ಕೆ ತಂದುಬಿಟ್ಟಿರಲ್ಲಾ….

ಜಾಲತಾಣದ ಮುಖ್ಯಸ್ಥೆಯಾದ ಬಳಿಕ ಏನೆಲ್ಲಾ ಸಾಧಿಸಿಬಿಟ್ಟಿರಲ್ವಾ? ಆದರೆ ನೀವು ಮಾಡಿದ್ದೇನು? ನೀವು ಇದುವರೆಗೆ ಹಲವಾರು ಟ್ವೀಟ್‍ಗಳನ್ನು ಮಾಡಿದ್ದೀರಿ. ಆದರೆ ಅದರಿಂದ ಎಷ್ಟೆಲ್ಲಾ ರಾದ್ಧಾಂತ ಸೃಷ್ಟಿಯಾಯಿತು ಗೊತ್ತೇ? ನಿಮ್ಮ ಮನಸ್ಸಿಗೆ ತೋಚಿದ್ದನ್ನು ಮೂಗಿನ ನೇರಕ್ಕೆ ಬರೆಯುವ ನೀವು ಎಷ್ಟೊಂದು ವಿವಾದಗಳನ್ನು ಮೈಗೆಳೆದುಕೊಂಡಿರಿ..

ಆರೆಸ್ಸೆಸ್ ಬಗ್ಗೆ ನೀವು ಎಷ್ಟು ತುಚ್ಛ ಮಟ್ಟದಲ್ಲಿ ವಿಡಿಯೋ ಅಪ್‍ಲೋಡ್ ಮಾಡಿದ್ದಿರಿ ಗೊತ್ತೇ? ಹೆಗೆಡೆವಾರ್ ಆರೆಸ್ಸೆಸ್ ಸೃಷ್ಟಿಸಿದರು ಅವರು ಸಾರ್ವಕರ್‍ರನ್ನು
ಸೇರಿಸಿದರು. ಸಾರ್ವಕರ್ ಹಿಂದುತ್ವನ್ನು ಸೇರಿಸಿದರು, ಸಾರ್ವಕರ್ ಸಮಾನತೆ, ತಿರಂಗ, ಸತ್ಯಾಗ್ರಹ, ಚಳುವಳಿ, ಗಾಂಧೀಜಿ, ದೇಶಭಕ್ತಿಯನ್ನು ತೆಗೆದು
ದೇಶದ್ರೋಹಿಯನ್ನು ಸೇರಿಸಿದರು. ಸಾರ್ವಕರ್ ಹಿಂದೂ ರಾಷ್ಟ್ರವನ್ನು ಸೇರಿಸಿದರು, ಸಂಘ ಬಿಜೆಪಿಯನ್ನು ಸೇರಿಸಿತು, ಬಿಜೆಪಿ ಅಡ್ವಾಣಿಯನ್ನು, ಅಡ್ವಾಣಿ,
ರಥಯಾತ್ರೆಯನ್ನು, ಅಡ್ವಾಣಿ ಗಲಭೆಯನ್ನು ಸೃಷ್ಟಿಸಿದರು, ಅಡ್ವಾಣಿ ಬಾಂಬ್ ಸ್ಫೋಟ ನಡೆಸಿದರು, ಬಾಬ್ರಿ ಮಸೀದಿ, ಜಾತ್ಯತೀತತೆಯನ್ನು ತೆಗೆದರು, ಅಡ್ವಾಣಿ
ವಾಜಪೇಯಿಯನ್ನು ಸೇರಿಸಿದರು. ಮೋದಿಯನ್ನು ಸೇರಿಸಲಾಯಿತು. ಮೋದಿ ಗಲಭೆ ಸೃಷ್ಟಿಸಿದರು, ಮೋದಿ ಅಮಿತ್ ಶಾಹನನ್ನು ಸೇರಿಸಿದರು, ಮೋದಿ ಪೈಯ್ಡ್
ಮೀಡಿಯಾ ಸೇರಿಸಿದರು, ದಲಿತರ ಮೇಲೆ ದಾಳಿ ನಡೆಸಿದರು ಎಂದೆಲ್ಲಾ ನೀವು ವಾಟ್ಸಾಪ್‍ನಲ್ಲಿ ಗ್ರೂಪ್‍ನಲ್ಲಿ ನಡೆಯುವಂತೆ ವಿಡಿಯೋ ಸೃಷ್ಟಿಸಿ ಅವಾಂತರ
ಮಾಡಿಬಿಟ್ಟಿರಿ.

ದೇಶಕಂಡ ಅಪ್ರತಿಪ ಸ್ವಾತಂತ್ರ್ಯ ಹೋರಾಟಗಾರ ಸಾರ್ವರ್ಕರ್ ಅವರನ್ನೇ ನಿಂದಿಸುವಷ್ಟು ಕೀಳುಮಟ್ಟಕ್ಕೆ ಇಳಿದುಬಿಟ್ಟಿರಿ. ಯಾಕೆ ಬೇಕಿತ್ತು ಇದೆಲ್ಲಾ? ಒಬ್ಬ ಸ್ವಾತಂತ್ರ್ಯ ಹೋರಾಟಗಾರನನ್ನೇ ಅವಮಾನಿಸುವಷ್ಟು ಮುಂದುವರಿದಿರಿ. ಛೆ ಇದೆಲ್ಲಾ ಬೇಕಿತ್ತಾ ನಿಮಗೆ?

ರಾಹುಲ್ ಗಾಂಧಿಯ ಕಾಶೀವಿಶ್ವನಾಥ ದೇವಸ್ಥಾನಕ್ಕೆ ಭೇಟಿಯನ್ನು ಯೋಗಿ ಆದಿತ್ಯನಾಥ್ ಟೀಕಿಸಿದರೆಂಬ ಕಾರಣಕ್ಕೆ ಸಿಟ್ಟಾದ ತಾವುಗಳು ಯೋಗಿ ಆದಿತ್ಯನಾಥ್ ಒಬ್ಬ ಸುಳ್ಳುಗಾರ, ದೇವರು ಎಲ್ಲಿದ್ದಾನೆ ಎಂದು ಟ್ವೀಟಿಸಿ ಇಡೀ ಭಕ್ತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದಿರಿ.

ರಾಹುಲ್ ಗಾಂಧಿಗೆ ರಿಟ್ವೀಟ್‍ಗಳನ್ನು ಹೆಚ್ಚಿಸಲು ನಕಲಿ ಖಾತೆಗಳನ್ನು ಸೃಷ್ಟಿಸಿ, ಮೋದಿಗಿಂತ ರಾಹುಲ್ ಹೆಚ್ಚು ಫೋಲೋವರ್‍ಗಳನ್ನು ಹೊಂದಿದ್ದಾರೆ ಎಂದು ನಂಬಿಸಲು ಹೋದಿರಿ. ಆದರೆ ಅದು ವರ್ಕೌಟ್ ಆಯ್ತಾ? ನಕಲಿ ಟ್ವೀಟ್‍ಗಳ ಬೆನ್ನು ಬಿದ್ದ ಜನರು ಅದರ ಬಗೆಗಿನ ಅಸಲಿ ಸತ್ಯಗಳ ಬಗ್ಗೆ ಜನ್ಮ ಜಾಲಾಡಿಬಿಟ್ಟರು.

ಸಿಪಿಐಎಂ ಆಳ್ವಿಕೆಯಲ್ಲಿ 286 ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ ಎಂದು ಸ್ಮøತಿ ಇರಾನಿ ಹೇಳಿದ್ದರು. ಆದರೆ ಈ ಬಗ್ಗೆ ಮಾನವೀಯತೆ ತೋರದೆ ಜೀವ ಕಳೆದುಕೊಂಡ ವ್ಯಕ್ತಿಗಳು ಬಿಜೆಪಿಗರು ಎಂದು ಸಾರಾಗಟವಾಗಿ ಹೇಳಿಬಿಟ್ಟಿರಿ. ನಿಮಗೆ ಮಾನವೀಯತೆಯೂ ಇಲ್ಲದೆ ಹೋಯಿತು ನಿಮಗೆ. ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ಒಮ್ಮೆ ಹೇಳಿಬಿಟ್ಟಿರಿ. ಸ್ಮøತಿ ಇರಾನಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ ಎಂದು ಅಂದು ಬಿಟ್ಟಿರಿ. ಆದರೆ ಟ್ವಿಟ್ಟಿಗರು ನಿಮ್ಮನ್ನು ಯಾವ ರೀತಿ ಕಾಲೆಳೆದುಕೊಂಡಿದ್ದಿರಿ ಎಂದು ನೆನಪಿದೆಯೇ?

ಮೋದಿಯವರು ಅಸ್ಸಾಂ, ಉಜರಾಥ್, ಬಿಹಾರ್‍ನಲ್ಲಿ ಉಂಟಾದ ಪ್ರವಾಹದ ಸ್ಥಳಗಳಲ್ಲಿ ಕಾಣಸಿಕ್ಕರೆ ನಾನು ನಿಮಗೆ 25,000 ರೂ.ಗಳನ್ನು ಕೊಡುತ್ತೇನೆ. ಆದರೆ ನೀವು ಫೋಟೋಶಾಪ್ ಮಾಡುವ ಹಾಗಿಲ್ಲ..’ ಎಂದಿದ್ದು ನೆನಪಿದೆಯೇ? ಆದರೆ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಟ್ವಿಟಿಗರು ಮೋದಿಯವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭೇಟಿಕೊಟ್ಟ ಚಿತ್ರವನ್ನು ಟ್ವಿಟರಲ್ಲಿ ಹಂಚಿ ನಿಮಗೆ ಮಂಗಳಾರತಿ ಎತ್ತಿದ್ದು ನೆನಪಿದೆಯೇ?

ಪಾಕಿಸ್ತಾನ ನರಕ ಅಲ್ಲ, ಮಂಗಳೂರಲ್ಲಿ ನರಕವಿದೆ. ಪಾಕಿಗಳೂ ಕೂಡಾ ನಮ್ಮಂತೆ ಮನುಷ್ಯರು. ಅವರನ್ನು ನಾವು ಪ್ರೀತಿಯಿಂದ ಕಾಣಬೇಕು. ಪಾಕಿಸ್ತಾನವನ್ನು
ಭಾರತ ಶತ್ರು ರಾಷ್ಟ್ರವೆಂದು ಘೋಷಿಸಿಲ್ಲ. ಅವರು ನಮ್ಮ ಭಾರತೀಯ ಸೈನಿಕರನ್ನು ಕೊಂದಿರಬಹುದು ಹಾಗೆಂದ ಮಾತ್ರಕ್ಕೆ ಅಲ್ಲಿನ ಜನರನ್ನು ತಪ್ಪಿತಸ್ಥರೆಂದು
ಹೇಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಿರಿ. ಆದರೇನಾಯಿತು? ಮಂಗಳೂರಿಗೆ ಬರುತ್ತಿದ್ದಂತೆ ನಿಮ್ಮ ಮೇಲೆ ಮೊಟ್ಟೆಗಳ ಸುರಿಮಳೆಯಾಯಿತಷ್ಟೇ ಅಲ್ಲದೆ ನಿಮ್ಮ ವಿರುದ್ಧ ಸೆಕ್ಷನ್ 124-ಎ ಪ್ರಕಾರ ಪ್ರಕರಣ ದಾಖಲಾಯಿತು.

ನಿಮ್ಮ ಹುಟ್ಟು ಹಬ್ಬ ನಿಮಿತ್ತ ನನ್ನ ಸಂದೇಶವೇನೆಂದರೆ ಇನ್ನೆಂದಿಗೂ ನೀವು ಈ ರೀತಿ ಬಾಲಿಷತನದ ಹೇಳಿಕೆಗಳನ್ನು ನೀಡಬೇಡಿ. ನಿಮ್ಮ ಮೇಲೆ ಮೊಟ್ಟೆಗಳು
ಬೀಳುವುದನ್ನು ನೋಡಲು ನನಗೆ ಇಷ್ಟವಿಲ್ಲ. ನೀವು ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬಂದಿರುವುದು ನಿಮ್ಮ ವೈಯಕ್ತಿಕ ನಿರ್ಧಾರ. ಮಂಡ್ಯದಲ್ಲಿ
ಬೇಕಾದರೂ ಸ್ಪರ್ಧಿಸಿ, ಚೆನ್ನರಾಯ ಪಟ್ಟಣದಲ್ಲಿ ಬೇಕಾದರೂ ಸ್ಪರ್ಧಿಸಿ. ನೀವು ಕರ್ನಾಟಕದ ಜನತೆ ಗೆಲ್ಲಿಸುತ್ತಾರೋ ಇಲ್ಲವೋ ಆಮೇಲೆ ನೋಡೋಣ.

ಕೊನೆಯದಾಗಿ ನಿಮಗೆ ಇನ್ನೊಮ್ಮೆ ಹುಟ್ಟುಹಬ್ಬದ ಶುಭಾಷಯಗಳು…!

-ಚೇಕಿತಾನ

Tags

Related Articles

Close