ಅಂಕಣಪ್ರಚಲಿತ

ಪಾರದರ್ಶಕ ಆಡಳಿತಕ್ಕಾಗಿ ಮೋದಿ ರೂಪಿಸಿದ್ದೇ “ಡಿಜಿಟಲ್ ಇಂಡಿಯಾ”!!!

ಭಾರತದ ನಾಗರಿಕರನ್ನು, ಮಹಿಳೆಯರನ್ನು ಸಬಲೀಕರಣಗೊಳಿಸಿ, ಗ್ರಾಮೀಣ ಭಾರತವನ್ನು ಸಂಪೂರ್ಣ ಡಿಜಿಟಲ್ ಭಾರತವನ್ನಾಗಿ ಮಾಡಲು ಕೇಂದ್ರ ಸರಕಾರವು “ಡಿಜಿಟಲ್ ಇಂಡಿಯಾ” ಯೋಜನೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ಪ್ರತಿಯೊಬ್ಬ ನಾಗರಿಕನೂ ಇ-ಗವರನ್ಸ್, ಆಧಾರ ಸೀಡಿಂಗ್, ಸಕಾಲ, ಗ್ರಾಮೀಣ ಡಿಜಿಟಲ್ ಸೇವೆಯ ಅರಿವು ಮೂಡಿಸುವುದೇ ಇದರ ಮುಖ್ಯ ಗುರಿಯಾಗಿದ್ದು, ಇದರ ಲಕ್ಶ್ಯವೇ ಭಾರತ ದೇಶಕ್ಕೆ ವಿಶ್ವದಲ್ಲೇ ಒಂದು ಅತ್ಯುತ್ತಮ ಸ್ಥಾನಮಾನವನ್ನು ನೀಡುವುದಾಗಿದೆ.

ಭಾರತದ ಪ್ರತಿಯೊಂದು ಗ್ರಾಮಗಳನ್ನು ಡಿಜಿಟಲೀಕರಣ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಇದರ ಅಭಿಯಾನ ಪ್ರಸಿದ್ದ ಉದ್ಯೊಗಪತಿಗಳ ಸಮ್ಮುಖದಲ್ಲಿ 1 ಜುಲೈ 2015 ರಂದು ಇಂಧೋರ್ ನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಪ್ರಾರಂಭವಾಯಿತು!! ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾಗಿರುವ ಈ ಯೋಜನೆಗಾಗಿ ಒಂದು ಲಕ್ಷ ಕೋಟಿ ರೂಪಾಯಿಯನ್ನು ಇದಕ್ಕಾಗಿ ಅನುಮೋದಿಸಿದ್ದಾರೆ. ಇದು 2019 ರ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಹೊಂದಿದ್ದು, ಇದು ಸಂಪೂರ್ಣಗೊಂಡಲ್ಲಿ ಭಾರತವು ವಿಶ್ವದಲ್ಲೇ ಸುಪ್ರಸಿದ್ಧ ರಾಷ್ಟ್ರವಾಗಲಿದೆ!! ಭಾರತೀಯ ನಾಗರಿಕರ ಡಿಜಿಟಲ್ ಸಬಲೀಕರಣ ಮಾಡುವುದು ಹಾಗೂ ಮಾಹಿತಿಯನ್ನು ಡಿಜಿಟಲೀಕರಣ ಗೊಳಿಸುವುದು ಇದರ ಪ್ರಮುಖ ಉದ್ಧೇಶವಾಗಿದ್ದು, ಕಾಗದಪತ್ರಗಳ ಕಾರ್ಯ, ಸಮಯ ಮತ್ತು ಮಾನವಶ್ರಮವನ್ನು ಉಳಿಸುವಲ್ಲಿ ಒಂದು ಪ್ರಮುಖ ಪಾತ್ರವಹಿಸಿದೆ.

ಸರ್ಕಾರ ಮತ್ತು ಖಾಸಗಿ ವಲಯಗಳ ಒಕ್ಕೂಟದಿಂದಾಗಿ ಈ ಯೋಜನೆಗೆ ಆವೇಗ ಹತ್ತಿಕೊಳ್ಳುತ್ತಿದ್ದು, ಹಳ್ಳಿಗಳನ್ನು ಹೊಂದಿರುವ ಹಿಂದುಳಿದ ಪ್ರದೇಶಗಳನ್ನು ಡಿಜಿಟಲೀಕರಣ ಗೊಳಿಸುವುದರಿಂದಾಗಿ ಆ ಹಳ್ಳಿಗಳ ಅಭಿವೃದ್ಧಿ ಸಾಧ್ಯವಾಗಲಿದೆ ಹಾಗೂ ಭಾರತದ ಎಲ್ಲಾ ನಗರ, ಪಟ್ಟಣ ಮತ್ತು ಹಳ್ಳಿ ಹೆಚ್ಚು ತಾಂತ್ರಿಕವಾಗಿ ಮುಂದುವರಿಯುತ್ತದೆ.

ಯೋಜನೆಯ ಧ್ಯೇಯ:

* ದೇಶದೆಲ್ಲೆಡೆ ಡಿಜಿಟಲ್ ಮೂಲ ಸೌಕರ್ಯ
* ಜನರ ಇಚ್ಛೆಗೆ ಅನುಗುಣವಾದ ಪಾರದರ್ಶಕ ಆಡಳಿತ
* ಡಿಜಿಟಲ್ ಉದ್ಯಮ

ಡಿಜಿಟಲ್ ಇಂಡಿಯಾ ಯೋಜನೆ ಏನೇನನ್ನು ಒಳಗೊಂಡಿದೆ?

ಅತ್ಯುತ್ತಮ ದರ್ಜೆಯ ಹೆದ್ದಾರಿಗಳನ್ನು ಒಳಗೊಂಡಿರುವ ಈ ಯೋಜನೆಯು ಅಂತಾರಾಷ್ಟ್ರೀಯ ಮಟ್ಟದ ದೂರ ಸಂಪರ್ಕ ಹಾಗೂ ಸಾರ್ವಜನಿಕ ಅಂತರ್ಜಾಲ ಸಂಪರ್ಕ ಸೇವೆಯನ್ನು ಒಳಗೊಂಡಿರುವ ಯೋಜನೆಯಾಗಿದೆ. ಅಷ್ಟೇ ಅಲ್ಲದೇ ಈ ಡಿಜಿಟಲ್ ಇಂಡಿಯಾ ಯೋಜನೆಯು ಇ-ಆಡಳಿತ, ತಂತ್ರಜ್ಞಾನದ ಮೂಲಕ ಆಡಳಿತವನ್ನು ನಡೆಸುವ ಯೋಜನೆಯನ್ನು ಹೊಂದಿದ್ದು, ಇ-ಕ್ರಾಂತಿ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಎಲ್ಲ ಬಗೆಯ ಸಂಪರ್ಕವನ್ನು ಒಳಗೊಂಡಿದೆ!! ಹಾಗೆಯೇ, ಈ ಯೋಜನೆಯು ಎಲ್ಲರಿಗೂ ಸಕಲ ಮಾಹಿತಿಯನ್ನು, ಎಲೆಕ್ಟ್ರಾನಿಕ್ ಉತ್ಪನ್ನ ತಯಾರಿಕೆಗೆ ವಿಶೇಷ ಒತ್ತು ನೀಡುವುದರ ಜೊತೆಗೆ ಮಳೆ ನೀರು ಕೊಯ್ಲು ಯೋಜನೆಗಳನ್ನು ಒಳಗೊಂಡಿರುವ ಪ್ರಮುಖ ಯೋಜನೆಯಾಗಿದೆ.

ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಸಾರ್ವಜನಿಕ ಸಂಪರ್ಕವನ್ನು ಯಶಸ್ಸಿಯಾಗಿ ಬಳಸಿಕೊಳ್ಳುವಲ್ಲಿ ಪರಿಣತಿ ಸಾಧಿಸಿರುವ ಮೋದಿಯವರ ವರ್ಚಸ್ಸೂ ಇಲ್ಲಿ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ತಯಾರಿಕಾ ಕ್ಷೇತ್ರದಲ್ಲಿ ಭಾರತ ಇನ್ನೂ ಬಹು ದೂರ ಕ್ರಮಿಸಬೇಕಾಗಿದೆ. ಆದರೆ ಡಿಜಿಟಲ್ ಪ್ರಯೋಗ, ಉದ್ಯಮಶೀಲತೆಗಳು ಸಮಕಾಲೀನ ಜಗತ್ತಿನ ಮಂತ್ರಗಳಾಗಿವೆ.

ಇಂದು ಹೆಚ್ಚಿನ ಸಾಮರ್ಥ್ಯ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಸರ್ಕಾರವನ್ನು ತರುವಲ್ಲಿ ತಂತ್ರಜ್ಞಾನದ ಬಳಕೆ ಅನಿವಾರ್ಯ. ಆಡಳಿತ ಮತ್ತು ನಿರ್ಣಯ ಪ್ರಕ್ರಿಯೆಗಳಿಗೆ ತಂತ್ರಜ್ಞಾನ ಬಳಸುವುದರಿಂದ ಸರ್ಕಾರದ ವ್ಯವಹಾರಗಳು ಪಾರದರ್ಶಕ, ಜವಾಬ್ದಾರಿಯುತ ಮತ್ತು ಪ್ರತಿ ಕ್ರಿಯಾತ್ಮಕವಾಗುತ್ತವೆ. ಇದರೊಂದಿಗೆ, ವೆಚ್ಚದ ಮೇಲೆ ನಿಯಂತ್ರಣ, ಶೀಘ್ರ ಮಾಹಿತಿ ವಿಶ್ಲೇಷಣೆ, ಮಾಹಿತಿ ಮತ್ತು ಇತರ ಆದೇಶಗಳ ಚಾಲನೆಗೆ ವೇಗ ಇತ್ಯಾದಿ ಉಪಯೋಗಗಳೂ ಸಿಗಲಿವೆ. ಇವುಗಳಿಂದ ಶೀಘ್ರ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಿ ಯಂತ್ರಕ್ಕೆ ಸಾಧ್ಯವಾಗುತ್ತದೆ. ಮಾಹಿತಿ ಮತ್ತು ವಾಸ್ತವತೆಗಳ ಕೊರತೆಯ ನಡುವೆ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಲಾಬಿಗಳ ಒತ್ತಡದಂತೆ ನಿಯಮಗಳನ್ನು ರೂಪಿಸುತ್ತಿದ್ದ ಹಿಂದಿನ ಪದ್ಧತಿಯ ದೃಷ್ಟಿಯಲ್ಲಿ ಇದು ನಿಜಕ್ಕೂ ದೊಡ್ಡ ಸಂಗತಿ.

ಡಿಜಿಟಲ್ ಇಂಡಿಯಾದ ಇನ್ನೊಂದು ವಿಶೇಷವೆಂದರೆ ನಮ್ಮ ಆರ್ಥಿಕತೆಯನ್ನು ನಗದುರಹಿತ ಆರ್ಥಿಕತೆಯಾಗಿ ಪರಿವರ್ತಿಸುವುದು. ಇದಕ್ಕೆ ಉತ್ತಮ ಉದಾಹರಣೆ ಪ್ರಧಾನಮಂತ್ರಿ ಜನಧನ ಯೋಜನೆ. ದೇಶದ ಎಲ್ಲ ಬ್ಯಾಂಕುಗಳು ಮತ್ತು ದೂರಸಂಪರ್ಕ ಆಪರೇಟರ್‍ಗಳನ್ನು ಸಂಪರ್ಕಿಸುವ ವೇದಿಕೆಯನ್ನು ಭಾರತದ ರಾಷ್ಟ್ರೀಯ ಪಾವತಿ ಕಾಪೆರ್Çರೇಷನ್ (ಎನ್‍ಪಿಸಿಐ) ಈಗಾಗಲೆ ನಿರ್ಮಿಸಿರುವ ವರದಿಗಳಿವೆ. 2014ರಲ್ಲೇ 26 ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು 3 ಖಾಸಗಿ ಬ್ಯಾಂಕುಗಳು ಈ ಸಮಾನ ವೇದಿಕೆಯ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಒಂದು ಸಾಮಾನ್ಯ ಮೊಬೈಲ್‍ನಿಂದಲೇ ಯಾವುದೇ ಬ್ಯಾಂಕಿನ ಗ್ರಾಹಕ ತನ್ನ ಎಲ್ಲ ಬ್ಯಾಂಕ್ ವ್ಯಹಾರ ನಿರ್ವಹಿಸುವಂತಾಗಿದೆ. ಇದರಿಂದ ಬ್ಯಾಂಕುಗಳಿಗೂ ಲಾಭ, ಗ್ರಾಹಕರಿಗೂ ಲಾಭ.

2019ಕ್ಕೆ ಡಿಜಿಟಲ್ ಎಫೆಕ್ಟ್:

* ಎಲ್ಲ 2.5 ಲಕ್ಷ ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ
* ವಿದೇಶಗಳಿಂದ ಎಲೆಕ್ಟ್ರಾನಿಕ್ ವಸ್ತು ಆಮದು ಇಲ್ಲ
* 4 ಲಕ್ಷ ಸಾರ್ವಜನಿಕ ಅಂತರ್ಜಾಲ ಸಂಪರ್ಕ ಘಟಕ
* ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ವೈ ಫೈ ಸಂಪರ್ಕ
* ಆರೋಗ್ಯ ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರಗಳು ಸಂಪೂರ್ಣ ಡಿಜಿಟಲೀಕರಣ

ಇವತ್ತಿನ ಭಾರತಕ್ಕೆ ಮಾಹಿತಿ ತಂತ್ರಜ್ಞಾನ ಸೇರಿದರೆ ನಾಳಿನ ಬಲಿಷ್ಠ ಭಾರತ ರೂಪುಗೊಳ್ಳುತ್ತದೆ ಎಂದು ಹೇಳುವ ಸೂತ್ರವಿದ್ದು, ಈ ಚಿಂತನೆಯಿಂದಲೇ ಹುಟ್ಟಿದ್ದು ಡಿಜಿಟಲ್ ಇಂಡಿಯಾ ಎಂಬ ಮಹತ್ವಾಕಾಂಕ್ಷಿ ಯೋಜನೆ. ಮಾಹಿತಿ ತಂತ್ರಜ್ಞಾನವನ್ನು ದಿಲ್ಲಿಯ ಸಂಸತ್ ಭವನದಿಂದ ಹಿಡಿದು ಹಳ್ಳಿಯ ಗದ್ದೆ-ತೋಟಗಳವರೆಗೆ ಹರಿಸುವ ಬಹುದೊಡ್ಡ ಕನಸು ಇದು. ಆರಂಭದಲ್ಲಿ ನರೇಂದ್ರ ಮೋದಿ “ಡಿಜಿಟಲ್ ಇಂಡಿಯಾ’ ಎಂದು ಹೇಳಿದಾಗ ಬಹಳ ಜನರಿಗೆ ಅರ್ಥವಾಗಿರಲಿಲ್ಲ. ಆದರೆ ಈಗ ಅದರ ಒಂದೊಂದೇ ಮಜಲುಗಳು ಬಿಚ್ಚಿಕೊಳ್ಳುತ್ತಿದ್ದಂತೆ ಇದರ ಅಗಾಧ ಪ್ರಯೋಜನಗಳೂ ಮನವರಿಕೆಯಾಗುತ್ತಿವೆ.

ಮೆಕ್ಕಿನ್ಸೆ ಎಂಬ ಜಾಗತಿಕ ಸಂಶೋಧನಾ ಸಂಸ್ಥೆಯ 2014ರ ಮುನ್ಸೂಚನಾ ವರದಿಯ ಪ್ರಕಾರ, “ಭಾರತದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ವೇಗ, ನೂತನ ಸಾಧ್ಯತೆಗಳು ಮತ್ತು ದೊಡ್ಡ ಅವಕಾಶಗಳು ಡಿಜಿಟಲ್ ಇಂಡಿಯಾ ಯೋಜನೆಯಿಂದ ಸಿಗಲಿದೆ.’ ಇನ್ನೂ ಅಚ್ಚರಿದಾಯಕ ಸಂಗತಿಯೆಂದರೆ, ಮುಂದಿನ ದಶಕದಲ್ಲಿ ಡಿಜಿಟಲ್ ಇಂಡಿಯಾ ಮೂಲಕ ತಂತ್ರಜ್ಞಾನದ ಬಳಕೆಯಿಂದ ಭಾರತದಲ್ಲಿ ಸುಮಾರು 30ರಿಂದ 60 ಲಕ್ಷ ಕೋಟಿ ರೂ.ನಷ್ಟು ಬಂಡವಾಳ ಹೂಡಿಕೆಯಾಗುತ್ತದೆ. ಇದು ನಮ್ಮ ಜಿಡಿಪಿಯ ಶೇ.20ರಿಂದ 30ರಷ್ಟು ಇರುತ್ತದೆ!!

ಡಿಜಿಟಲ್ ಇಂಡಿಯಾದ ಕೆಲ ಮುಖ್ಯಾಂಶಗಳು:

1) ಡಿಜಿಟಲ್ ಲಾಕರ್ ಸಿಸ್ಟಂ: ಕಾಗದ, ಕಡತಗಳಲ್ಲಿರುವ ದಾಖಲೆಗಳೆಲ್ಲವೂ ಎಲೆಕ್ಟ್ರಾನಿಕ್ ಡಾಕ್ಯುಮೆಂಟ್’ಗಳಾಗಬೇಕು. ಇಂಟರ್ನೆಟ್’ನಲ್ಲಿ, ಕಂಪ್ಯೂಟರ್’ನಲ್ಲಿ ಈ ಕಡತಗಳು ಸಿಗುವಂತಾಗಬೇಕು. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇ-ಡಾಕ್ಯುಮೆಂಟ್’ಗಳದ್ದೇ ಕಾಲ.

2) ಮೈ ಗವರ್ನೆನ್ಸ್ ವೆಬ್’ಸೈಟ್: ಸರ್ಕಾರದ ಆಡಳಿತದಲ್ಲಿ ಜನರು ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುವಂತೆ ಒಥಿಉov.iಟಿ ವೆಬ್’ಸೈಟ್ ಮೂಲಕ ಸೂಕ್ತ ಮಾಧ್ಯಮ ಒದಗಿಸಲಾಗಿದೆ. ಇಲ್ಲಿ ಜನರು ಆಡಳಿತವನ್ನು ಉತ್ತಮಗೊಳಿಸಲು ತಮ್ಮಲ್ಲಿ ಐಡಿಯಾಗಳಿದ್ದರೆ ಕೊಡಬಹುದು; ಚರ್ಚಿಸಬಹುದು; ಯಾವುದಾದರು ಕಾರ್ಯಗಳನ್ನು ವಹಿಸಿಕೊಂಡು ಮಾಡಬಹುದು. ಇದು ವೆಬ್’ಸೈಟ್ ಅಲ್ಲದೆ ಮೊಬೈಲ್ ಆಪ್ ಆಗಿಯೂ ಲಭ್ಯವಿದೆ.

3) ಸ್ವಚ್ಛ ಭಾರತ್ ಮಿಷನ್ ಆಪ್: ದೇಶದ ನೈರ್ಮಲ್ಯೀಕರಣಕ್ಕಾಗಿ ಕೇಂದ್ರ ಸರಕಾರ ಪ್ರಾರಂಭಿಸಿರುವ ಸ್ವಚ್ಛ ಭಾರತ ಯೋಜನೆಯು ಈ ಮೊಬೈಲ್ ಆಪ್ ಆಗಿ ಲಭ್ಯವಿದ್ದು; ಜನರು ಇದನ್ನು ಉಪಯೋಗಿಸಿ ಈ ಯೋಜನೆಗೆ ಕೈಜೋಡಿಸಬಹುದು.

4) ಎಲೆಕ್ಟ್ರಾನಿಕ್ ಹಸ್ತಾಕ್ಷರ: ಆನ್’ಲೈನ್’ನಲ್ಲೇ ಎಲ್ಲ ವ್ಯವಹಾರ ನಡೆಯಲು ಅನುವಾಗುವಂತೆ ಆಧಾರ್ ಕಾರ್ಡ್ ಆಧಾರದ ಮೇಲೆ ದಾಖಲೆಯೊಂದಕ್ಕೆ ಇಸಹಿ(eSigಟಿ) ಮಾಡುವ ವ್ಯವಸ್ಥೆ.

5) ಓಆರ್‍ಎಸ್: ಆಸ್ಪತ್ರೆ ವ್ಯವಸ್ಥೆ ಉತ್ತಮಗೊಳಿಸುವ ನಿಟ್ಟಿನಲ್ಲಿ ಅಂತರ್ಜಾಲ ನೊಂದಣಿ ವ್ಯವಸ್ಥೆ ಅಥವಾ ಆನ್’ಲೈನ್ ರಿಜಿಸ್ಟ್ರೇಶನ್ ಸಿಸ್ಟಮ್(ಔಖS) ಪ್ರಾರಂಭಿಸಲಾಗಿದೆ. ಆನ್’ಲೈನ್ ರಿಜಿಸ್ಟ್ರೇಶನ್, ಶುಲ್ಕ ಪಾವತಿ, ನೇಮಕಾತಿ, ತಪಾಸಣೆ ವರದಿ, ರಕ್ತ ಲಭ್ಯತೆ ಇತ್ಯಾದಿಗಳು ಆನ್’ಲೈನ್ ಮುಖಾಂತರವೇ ಸಿಗುವಂತಿರಬೇಕು.

6) ವಿದ್ಯಾರ್ಥಿವೇತನ: ವಿದ್ಯಾರ್ಥಿಗಳು ಸ್ಕಾಲರ್’ಶಿಪ್ ಪಡೆಯುವ ವಿಧಾನವನ್ನು ಸರಳಗೊಳಿಸಲಾಗಿದೆ. ಅಪ್ಲಿಕೇಶನ್ ಸಲ್ಲಿಕೆ, ವೆರಿಫಿಕೇಶನ್ ಇತ್ಯಾದಿ ಪ್ರಕ್ರಿಯೆಗಳು ಆನ್’ಲೈನ್ ಮುಖಾಂತರವೇ ನಡೆಯಲಿವೆ.

7) ಡಿಜಿಟಲ್ ಹೈವೇ: ದೇಶದಲ್ಲಿರುವ ಎಲ್ಲಾ ಎರಡೂವರೆ ಲಕ್ಷ ಗ್ರಾಮ ಪಂಚಾಯತಿಗಳಿಗೆ ಕನೆಕ್ಟ್ ಮಾಡುವ “ಭಾರತ್ ನೆಟ್” ಎಂಬ ಹೈ ಸ್ಪೀಡ್ ಡಿಜಿಟಲ್ ಹೈವೇ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆಪ್ಟಿಕಲ್ ಫೈಬರ್ ಕೇಬಲ್ ಬಳಸಿ ಎಲ್ಲ ಕಡೆಯೂ ಅತ್ಯುತ್ತಮ ವೇಗದ ಇಂಟರ್ನೆಟ್ ನೀಡಲಾಗುತ್ತದೆ. ಇದು ವಿಶ್ವದ ಅತೀ ದೊಡ್ಡ ಗ್ರಾಮೀಣ ಬ್ರಾಡ್’ಬ್ಯಾಂಡ್ ಕನೆಕ್ಟಿವಿಟಿ ಯೋಜನೆ ಎನಿಸಿದೆ.

8) ಓಪನ್ ಸೋರ್ಸ್: ಇ-ಆಡಳಿತದಲ್ಲಿ ಓಪನ್ ಸೋರ್ಸ್ ಸಾಫ್ಟ್’ವೇರ್’ಗಳ ಬಳಕೆಗೆ ಹೆಚ್ಚು ಒತ್ತುಕೊಡಲು ನಿರ್ಧರಿಸಲಾಗಿದೆ.

9) ವೈಫೈ: ಸರಕಾರಿ ಸ್ವಾಮ್ಯದ ಬಿಎಸ್‍ಎನ್ನೆಲ್ ಸಂಸ್ಥೆಯು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ವೈಫೈ ಸ್ಥಾಪಿಸುತ್ತಿದೆ. ಶಾಲೆ-ಕಾಲೇಜುಗಳಲ್ಲಿ ವೈಫೈ ಸಿಗಲಿದೆ.

10) ಬಿಪಿಓ: ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಾಗೂ ಇತರ ರಾಜ್ಯಗಳ ಸಣ್ಣಪುಟ್ಟ ಪಟ್ಟಣಗಳಲ್ಲಿ ಬಿಪಿಓ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ.

ನಾಗರಿಕರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಡಿಜಿಟಲ್ ಇಂಡಿಯಾ ಯೋಜನೆ ತರಲಿದ್ದು, ಅಂತಿಮವಾಗಿ ಅದು ದೇಶದ ಆರ್ಥಿಕತೆಯನ್ನೂ ಬಲಪಡಿಸಲಿದೆ. ಡಿಜಿಟಲ್ ಇಂಡಿಯಾ ಭಾರತ ಸರ್ಕಾರದ ಒಂದು ಬಹುಮುಖ ಮತ್ತು ಉಪಯುಕ್ತ ಉಪಕ್ರಮವು ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆಯಾಗಿದ್ದಲ್ಲದೇ ಭಾರತದ ಕೀರ್ತಿ ಪತಾಕೆಯನ್ನು ಇಡೀ ವಿಶ್ವದಲ್ಲೇ ಹಾರಡಿಸಲಿದೆ!!
-ಅಲೋಖಾ

Tags

Related Articles

Close