ಪ್ರಚಲಿತ

ಪಿಎಫ್‍ಐ ಅಧ್ಯಕ್ಷೆ ಲವ್‍ಜಿಹಾದ್‍ನ ರಹಸ್ಯ ಕರಾಳ ಸತ್ಯವನ್ನು ಬಟಾಬಯಲು ಮಾಡಿದ್ದು ಹೇಗೆ ಗೊತ್ತೇ?!

ನೂರಾರು ಮಂದಿ ಹಿಂದೂಗಳ ರಕ್ತ ಕುಡಿದ, ಕೇರಳಕ್ಕೆ ಐಸಿಸ್ ಉಗ್ರರ ಜೊತೆ ನಂಟು ಬೆಸೆಯುತ್ತಿರುವ ಉಗ್ರ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ನಿಷೇಧದ ತೂಗುಗತ್ತಿ ನೇತಾಡುತ್ತಿದೆ. ಇಂಥಾ ಸಂಘಟನೆ ಲವ್ ಜಿಹಾದ್‍ನಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಾವಿರಾರು ಹಿಂದೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿದ್ದರೆ, ಹಲವಾರು ಮಂದಿ ಹಿಂದೂ ಯುವತಿಯರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಲವ್ ಜಿಹಾದ್ ವಿಷಯದಲ್ಲಿ ತನ್ನ ಆರೋಪವನ್ನು ನಿರಾಕರಿಸುತ್ತಲೇ ಬರುತ್ತಿದ್ದ ಪಿಎಫ್‍ಐ ಇದೀಗ ಅದೇ ಸಂಘಟನೆ ಮತಾಂತರ ನಡೆಸುತ್ತಿರುವ ಆಘಾತಕಾರಿ ಸಂಗತಿಯೂ ಬಟಾಬಯಲಾಗಿದೆ.

ರಾಷ್ಟ್ರೀಯ ವಾಹಿನಿಯೊಂದು ಕುಟುಕು ಕಾರ್ಯಾಚರಣೆ ನಡೆಸಿ ಪಿಎಫ್‍ಐ ಯಾವ ರೀತಿ ಹಿಂದೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದೆ ಎನ್ನುವುದನ್ನು ದಾಖಲೆ ಸಮೇತ ಜಗತ್ತಿನ ಮುಂದಿಟ್ಟಿದೆ. ಇದು ಲವ್‍ಜಿಹಾದ್‍ಗೆ ಪ್ರಬಲ ಸಾಕ್ಷಿಯಾಗಿದ್ದು, ಪಿಎಫ್‍ಐ ನಿಷೇಧಕ್ಕೆ ಮತ್ತೊಂದು ಬಲವಾದ ಅಸ್ತ್ರ ಸಿಕ್ಕಂತಾಗಿದೆ. ದೇಶದಲ್ಲಿ ನಾನಾ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವುದರ ಬಗ್ಗೆ ರಾಷ್ಟ್ರೀಯ ತನಿಖಾದಳ ಕೇಂದ್ರಕ್ಕೆ ವರದಿ ಸಲ್ಲಿಸಿದ್ದು ನಿಷೇಧದ ಹತ್ತಿರ ಬಂದು ನಿಂತಿದೆ. ಪಿಎಫ್‍ಐ ಕಾರ್ಯಕರ್ತರ ಮೇಲಿದ್ದ ಕೇಸುಗಳನ್ನು ಹಿಂತೆಗೆದುಕೊಂಡಿದ್ದ ಕಾಂಗ್ರೆಸ್ ಸರಕಾರದ ನಿರ್ಧಾರದಿಂದ ಈ ಸಂಘಟನೆ ಬೆಳೆದು ಹೆಮ್ಮರವಾಗಿದ್ದು, ಇದೀಗ ಅದೇ ಕಾಂಗ್ರೆಸ್ ಆ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಿದೆ.

ಇಂಥಾ ಸಂಘಟನೆ ಲವ್‍ಜಿಹಾದ್‍ನಲ್ಲಿ ಯಾವ ರೀತಿ ಸಕ್ರಿಯವಾಗಿ ತೊಡಗಿಕೊಂಡಿದೆ ಎನ್ನುವುದನ್ನು ರಾಷ್ಟ್ರೀಯ ಸುದ್ದಿವಾಹಿನಿ ಕುಟುಕುಕಾರ್ಯಾಚರಣೆಯ ಮೂಲಕ ಬಟಾಬಯಲು ಮಾಡಿದ್ದು, ಇಡೀ ದೇಶದಲ್ಲೇ ಸಂಚಲನಕ್ಕೆ ಕಾರಣವಾಗಿದೆ. ಕೇರಳದ ಪಿಎಫ್‍ಐ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಸೈನಬಾ ಬಾಯ್ಬಿಟ್ಟ ಕರಾಳ ಸತ್ಯ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿಷೇಧದ ತೂಗುಗತ್ತಿ ನೇತಾಡುತ್ತಿರುವ ಸಂದರ್ಭದಲ್ಲೇ ಇಂಥದೊಂದು ಸ್ಫೋಟಕ ಸತ್ಯ ಬಯಲಾಗಿರುವುದರಿಂದ ಈ ಸಂಘಟನೆಯನ್ನು ನಿಷೇಧಿಸಬೇಕೆಂಬ ಆಗ್ರಹಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.

ಕೇರಳದ ಪಿಎಫ್‍ಐ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಜೈನಬಾ ಕೆಮರಾದೆದುರು ಬಾಯ್ಬಿಟ್ಟ ಸ್ಫೋಟಕ ಸತ್ಯಗಳೇನು ಗೊತ್ತಾ? ವಿಡಿಯೋದಲ್ಲಿರುವ ಯಥಾವತ್ ಇಲ್ಲಿದೆ.

ಸೈನಬಾ: ನಾವು ಯಾವುದೇ ಕಾರಣಕ್ಕೂ ಇವುಗಳನ್ನು ಮತಾಂತರ ಕೇಂದ್ರಗಳೆಂದು ಅಧಿಕೃತವಾಗಿ ಘೋಷಿಸಲ್ಲ. ಇವು ಶಿಕ್ಷಣ ಸಂಸ್ಥೆಗಳು.

ಪತ್ರಕರ್ತ: ಸತ್ಯಸರಣಿಯಲ್ಲಿ ಮತಾಂತರ ಮಾಡುತ್ತಾರೆ ಎಂದಾದರೆ, ಅಲ್ಲಿ ಯಾರಿರುತ್ತಾರೆ..? ಯಾರಾದರೂ ಹೊರಗೆ ಎಲ್ಲವನ್ನೂ ಬಹಿರಂಗಪಡಿಸಿದರೇ?

ಸೈನಬಾ: ಅಲ್ಲಿ ಸಾಧ್ಯವೇ ಇಲ್ಲ. ಏಕೆಂದರೆ ಇಸ್ಲಾಂ ಒಪ್ಪಿಕೊಂಡ ನಂತರವಷ್ಟೇ ಅವರನ್ನು ಹೊರಗೆ ಕಳಿಸುತ್ತೇವೆ. ನಾವು ಅಲ್ಲಿಗೆ ಕಳುಹಿಸುವುದಕ್ಕೂ ಮೊದಲು ತುಂಬಾ ತಯಾರಿ ನಡೆಸುತ್ತೇವೆ. ಅದಕ್ಕೆ ಅನುಕೂಲಕರವಾದ ವ್ಯವಸ್ಥೆ ಇರಬೇಕು. ನಾವು ಮೊದಲು ಅವರಲ್ಲಿ ನಂಬಿಕೆ ಹುಟ್ಟುಹಾಕಬೇಕು. ಪ್ರಾಥಮಿಕ ಹಂತದಲ್ಲಿ 15ರಿಂದ 16 ಸದಸ್ಯರು ಟ್ರಸ್ಟ್‍ಗೆ ಬೇಕಾಗಿರುತ್ತದೆ. ಆಮೇಲೆ ಸಂಸ್ಥೆ ತೆರೆಯಲು ಒಂದು ಜಾಗವನ್ನು ಫಿಕ್ಸ್ ಮಾಡುತ್ತೇವೆ. ಅಲ್ಲಿ ಎಲ್ಲ ಸೌಲಭ್ಯಗಳಿರುತ್ತವೆ. ನಮಾಜ್ ಮಾಡಲು ಹಾಗೂ ಉಳಿಯಲು ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ.

ಪತ್ರಕರ್ತ: ಹೌದಾ…?

ಸೈನಬಾ: ನಂತರ ಸರ್ಕಾರದಿಂದ ರಿಜಿಸ್ಟರ್ ಮಾಡಿಕೊಳ್ಳುತ್ತೀವಿ. ಆಮೇಲೆ ಕೆಲವು ಮೂಲಗಳು ಶಿಕ್ಷಣಕ್ಕಾಗಿ ವ್ಯವಸ್ಥೆ ಕಲ್ಪಿಸುತ್ತವೆ. ಮತ್ತೆ ಫೀಲ್ಡ್ ಕಾರ್ಯಾಚರಣೆಗೆ ಇಳಿಯುತ್ತಾರೆ. ಇಸ್ಲಾಂ ಧರ್ಮವನ್ನು ಪೂರ್ತಿಯಾಗಿ ನಂಬಬೇಕು. ನಂತರ ಇಸ್ಲಾಂ ಅಂದರೇನು ಅಂತ ಹೇಳಿಕೊಡುತ್ತೇವೆ. ನಮಾಜ್ ಮಾಡೋದು ಆಗಿರಬಹುದು, ಹೀಗೆ ಎಲ್ಲವನ್ನೂ ಹೇಳಿಕೊಡ್ತೀವಿ. ನಂತರ ಸರ್ಟಿಫಿಕೇಟ್ ಕೊಡ್ತೀವಿ.

ಪತ್ರಕರ್ತ: ಅಂದ್ರೆ, ನಿಮ್ಮಿಂದ ಎಲ್ಲಾ ಕೌನ್ಸಲಿಂಗ್ ಮುಗಿಯಿತು ಅಂತಾನಾ..?

ಸೈನಬಾ: ಹಾ.. ಅಲ್ಲಿಗೆ ಎಲ್ಲಾ ಮುಗಿದಂತೆ.

ಪತ್ರಕರ್ತ: ಅಂದ್ರೆ, ಇಸ್ಲಾಂಗೆ ಮತಾಂತರ ಆದವರಿಗೂ ಸರ್ಟಿಫಿಕೇಟ್ ಕೊಡ್ತೀರಾ..?

ಸೈನಾಬಾ: ಖಂಡಿತ. ಪ್ರಮಾಣಪತ್ರ ಇರಲೇಬೇಕು. ಯಾಕಂದ್ರೆ, ಗೆಜೆಟ್‍ನಲ್ಲಿ ಪ್ರಕಟಿಸೋದಕ್ಕೆ ಅವರಿಗೆ ಒಂದು ಹೆಸರು ಕೊಡಬೇಕು. ಅದಕ್ಕಾಗಿ ಸರ್ಟಿಫಿಕೇಟ್
ಕೊಡಬೇಕಾದದ್ದು ಕಡ್ಡಾಯ.

ಪತ್ರಕರ್ತ: ಸರ್ಟಿಫಿಕೇಟ್ ಕೊಟ್ರೆ, ನೀವು ಮತಾಂತರ ಮಾಡಿಸುತ್ತಿದ್ದೀರಿ ಅಂತಾ ಗೊತ್ತಾಗೋದಿಲ್ವಾ..?

ಸೈನಬಾ: ಮತಾಂತರ ಪ್ರಮಾಣಪತ್ರ ನೀಡಲು ಎರಡು ರೀತಿಯಿದೆ. ಒಂದು ವ್ಯಕ್ತಿ ತಾನು ಮತಾಂತರ ಆಗಲು ಒಪ್ಪಿಕೊಂಡಿದ್ದೀನಿ ಅಂತಾ ಒಂದು ಸಂಸ್ಥೆಯ ಹೆಸರಲ್ಲಿ ಪ್ರಮಾಣ ಪತ್ರ ಪಡೆಯೋದು. ಎರಡನೆಯದ್ದು, ನೋಟರಿಯಲ್ಲಿ ಘೋಷಿತ ಅಫಿಡವಿಟ್ ಮಾಡಿಸಿ ಸಂಸ್ಥೆಗೆ ತರುವುದು.

ಪತ್ರಕರ್ತ: ಕೇರಳದಲ್ಲಿ ಕಾನೂನು ರೀತಿಯಲ್ಲಿ ಕಾರ್ಯನಿರ್ವಹಿಸೋ ಯಾವ ಎರಡು ಸಂಸ್ಥೆಗಳು ಮತಾಂತರ ಮಾಡುತ್ತವೆ..?

ಸೈನಾಬಾ: ಒಂದು ಕ್ಯಾಲಿಕಟ್ ಮತ್ತೊಂದು ಪೊನ್ನಾನಿ. ಕ್ಯಾಲಿಕಟ್‍ನಲ್ಲಿ ತರ್ಬಿಯತ್-ಉಲ್ ಇಸ್ಲಾಂ ಮತ್ತು ಪೊನ್ನಾನಿಯಲ್ಲಿ ಮೊಯಿನತ್-ಉಲ್ ಇಸ್ಲಾಂ ಇದೆ.
ಎರಡೂ ಸಂಸ್ಥೆಗಳು ಸರ್ಕಾರದ ಅನುಮತಿ ಪಡೆದಿವೆ. ನಾವು ಅವರ ಜತೆ ಸಂಪರ್ಕದಲ್ಲಿದ್ದೇವೆ. ಅವರು ನಮಗೆ ಸರ್ಟಿಫಿಕೇಟ್ ಕೊಡುತ್ತಾರೆ.

ಇದು ಕೇರಳದ ಪಿಎಫ್‍ಐ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಸೈನಬಾ ಬಾಯ್ಬಿಟ್ಟ ಸ್ಫೋಟಕ ಸತ್ಯಗಳು… ಮತಾಂತರ ಮಾಡುವುದನ್ನು ಖುದ್ದಾಗಿ ಒಪ್ಪಿಕೊಂಡ ಸೈನಾಬಾಳ ಮಾತುಗಳನ್ನು ರಾಷ್ಟ್ರೀಯ ತನಿಖಾ ದಳ ಗಂಭೀರಾಗಿ ಪರಿಗಣಿಸಬೇಕಾಗಿದೆ. ಸ್ವತಃ ಕೇರಳ ಸರಕಾರವೇ ಈ ಸಂಘಟನೆಗೆ ಬೆಂಬಲ ನೀಡುತ್ತಿರುವುದರಿಂದ ಇಂದು ಈ ಸಂಘಟನೆ ಹೆಮ್ಮವರಾಗಿ ಬೆಳೆದು ಇಂದು ಸಹಿಸಲಸಾಧ್ಯವಾಗಿದೆ. ಇಂಥದೊಂದು ಮತಾಂಧ, ಉಗ್ರ ಸಂಘಟನೆ ನಿಷೇಧಗೊಳ್ಳದೇ ಇದ್ದರೆ ಮುಂದೆ ಮತ್ತಷ್ಟು ಅಪಾಯವಿದೆ.

ಪಿಎಫ್‍ಐ ಮತಾಂತರ ಪ್ರಕ್ರಿಯೆಯ ಬಗ್ಗೆ ಸಾಕಷ್ಟು ಸಾಕ್ಷಿಗಳಿದ್ದರೂ ಅದನ್ನು ಪಿಎಫ್‍ಐ ಒಪ್ಪಲು ತಯಾರಿರಲಿಲ್ಲ. ಈ ಮುಂಚೆ ಕಾಸರಗೋಡಿನ ಉದುಮಾ ನಿವಾಸಿ ಅದಿರಾ ಮನೆಬಿಟ್ಟು ತೆರಳಿ ಇಸ್ಲಾಂಗೆ ಮತಾಂತರಗೊಂಡು ಆಯೆಷಾ ಆಗಿದ್ದಳು. ಆದರೆ ಇಸ್ಲಾಂನ ಬಗ್ಗೆ ಕಟುಸತ್ಯ ಅರಿವಾದಂತೆ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಳು. ಈಕೆ ಲವ್‍ಜಿಹಾದ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಳು. ರಾಷ್ಟ್ರೀಯ ತನಿಖಾ ಸಂಸ್ಥೆಯೂ ನೂರಾರು ಲವ್‍ಜಿಹಾದ್ ಪ್ರಕರಣವನ್ನು ಪತ್ತೆಹಚ್ಚಿದ್ದು ಅದರಲ್ಲಿ 90 ಪ್ರಕರಣದಲ್ಲಿ ಪ್ರಬಲ ಸಾಕ್ಷಿ ಸಿಕ್ಕಿದೆ. ಇದರಲ್ಲಿ ಹದಿಯಾ ಪ್ರಕರಣವೂ ಒಂದಾಗಿದೆ.

ಕ್ಯಾಲಿಕಟ್‍ನಲ್ಲಿ ತರ್ಬಿಯತ್-ಉಲ್ ಇಸ್ಲಾಂ ಮತ್ತು ಪೊನ್ನಾನಿಯಲ್ಲಿ ಮೊಯಿನತ್-ಉಲ್ ಇಸ್ಲಾಂ ಎನ್ನುವ ಮತಾಂತರ ಕೇಂದ್ರ ಪ್ರದೇಶಗಳು ಯಾವ ರೀತಿ ಇದೆ
ಎಂದರೆ ಅದು ಥೇಟ್ ತಾಲಿಬಾನನ್ನು ಹೋಲುತ್ತದೆ. ಅಲ್ಲಿ ಏನಾದರೂ ಅಕ್ರಮಗಳು ನಡೆದರೆ ಸ್ವತಃ ಪೊಲೀಸರು ದಾಳಿ ನಡೆಸಲೂ ಹೆದರುತ್ತಾರೆ. ಕೇರಳದಲ್ಲಿರುವ ಪಾಕಿಸ್ತಾನದಂತಿರುವ ಈ ಪ್ರದೇಶಗಳಿಗೆ ಹಿಂದೂಗಳು ಹೋಗುವಂತೆಯೇ ಇಲ್ಲ. ಈ ಕೇಂದ್ರದ ಸುತ್ತಲು ಬಿಗಿಪಹರೆಯಿದ್ದು, ಯಾರೂ ಈ ಪ್ರದೇಶಕ್ಕೆ ಪ್ರವೇಶಿಸುವಂತಿಲ್ಲ. ಇಲ್ಲಿ ಎಲ್ಲಿಂದೆಲ್ಲಾ ವ್ಯಕ್ತಿಗಳು ಬರುತ್ತಾರೆ, ಇಲ್ಲೇನಾಗುತ್ತಿದೆ, ಯಾರೆಲ್ಲಾ ಇದ್ದಾರೆ, ಅಲ್ಲಿನ ಚಟುವಟಿಕೆ ಹೇಗಿರುತ್ತದೆ ಎನ್ನುವುದೂ ನಿಗೂಢವಾಗಿರುತ್ತದೆ.

ಹಿಂದೂ ಹುಡುಗಿಯರನ್ನು ಅಪಹರಿಸಿ ತಂದು ಇಲ್ಲಿ ಬಿಡಲಾಗುತ್ತದೆ. ಅಲ್ಲಿ ಹುಡುಗಿಯರಿಗೆ ಇಸ್ಲಾಂನ ಪಾಠ ಹೇಳಿಕೊಟ್ಟು ಬ್ರೈನ್‍ವಾಶ್ ಮಾಡಲಾಗುತ್ತದೆ. ಅವರಿಗೆ
ಭಯಹುಟ್ಟಿಸಿ ಇಸ್ಲಾಂ ಅನ್ನು ನಂಬುವಂತೆ ಒತ್ತಡ ಹೇರಲಾಗುತ್ತದೆ. ಹುಡುಗಿಯರನ್ನು ಅಪಹರಿಸಿ ಅವರನ್ನು ಪೊನ್ನಾನಿಗೆ ತಂದು ಬಳಿಕ ಉಗ್ರಸಂಘಟನೆಗಳಾದ
ಐಸಿಸ್‍ಗೆ ಸೇರಿಸುವ ಪ್ರಕ್ರಿಯೆಯೂ ಇಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದೆ.

ಒಟ್ಟಾರೆ ಲವ್‍ಜಿಹಾದ್ ಎನ್ನುವುದು ಪಿಎಫ್‍ಐಯ ಹಿಡೆನ್ ಅಜೆಂಡಾ ಏನೆನ್ನುವುದನ್ನು ಸ್ವತಃ ಆ ಸಂಘಟನೆಯೇ ಒಪ್ಪಿಕೊಂಡಿದೆ..

source:Jainaba – PFI

-ಚೇಕಿತಾನ

Tags

Related Articles

Close